ಕಾಶ್ಮೀರದಲ್ಲಿ ನಾಗಾ ಸಂಸ್ಕೃತಿ
ನಾಗಾರಾಧನೆ
ಇತಿಹಾಸ ಪೂರ್ವದ ಕಾಲದಿಂದ ಕಾಶ್ಮೀರ ಕಣಿವೆಯ ಒಂದು ಭಾಗವಾಗಿದೆ. ಸ್ಪಷ್ಟವಾಗಿ, ಹೇಳುವುದಾದರೆ ನಾಗಾರಾಧನೆ ಕಾಶ್ಮೀರಿ
ಮಾತನಾಡುವ ಜನರ ಪ್ರಧಾನ ಧರ್ಮವಾಗಿತ್ತು! . ಈ ಪ್ರದೇಶದ ವಿವಿಧ
ಸ್ಥಳಗಳ ಮೂಲಗಳು ಈ
ಆರಾಧನೆಯ ಬಗ್ಗೆ ಮಹಾವಂಶದಂತಹ ಪ್ರಮುಖ ಧರ್ಮ ಎಂದು ಉಲ್ಲೇಖಿಸಿದೆ. ,
Unexplored Bhaderwah !!
— Kashmiri Pandit कश्मीरी पण्डित (@KashmiriPandit7) March 30, 2020
Vasuki Nag Temple, Bhaderwah, J&K
1000s of yrs old Idols of Nagraj Vasuki & Jimut Vahan, are made of black stone, standing at angle of 87° without any support from either sides
Wonder how many know about Jimut Vahan - Saviour of Nagas#TeamLostTemples pic.twitter.com/otjIQoZaTj
ಕಾಶ್ಮೀರದಲ್ಲಿ ಮುಖ್ಯವಾಗಿ ನಾಗಕುಲದ ವಾಸುಕಿ ಆರಾಧಕರು ವಾಸವಿದ್ದರು. ಕಶ್ಯಪ ಹಾಗೂ ಕದ್ರುವುನ ಮಗನಾದ ವಾಸುಕಿಯ ದೇವಾಲಯ ಇಂದಿನ ಕಾಶ್ಮೀರದ ಭದರ್ವ ಪ್ರದೇಶದಲ್ಲಿದ್ದು ಈ ಸುತ್ತ್ಮುತ್ತಲ ಪ್ರದೇಶಕ್ಕೆ ಪ್ರಾಚೀನ ಕಾಲದಲ್ಲಿ ‘ನಾಗೋನ್ ಕಿ ಭೂಮಿ’ (ನಾಗಗಳ ಭೂಮಿ) ಎಂದು ಕಲೆಯಲಾಗುತ್ತಿತ್ತು.
ಮೌರ್ಯ
ಚಕ್ರವರ್ತಿ ಅಶೋಕನ ಆಪ್ತ ಮೊಗ್ಗಲಿಪುಟ್ಟ ಟಿಸ್ಸಾ ಕಾಶ್ಮೀರದಲ್ಲಿ ಬೌದ್ಧ ಧರ್ಮವನ್ನು ಬೋಧಿಸಲುಮಜ್ಜಾಂತಿಕಾ ಎಂಬುವವನನ್ನು ಕಳುಹಿಸಿದ್ದನು. ಆಗ
ಕಾಶ್ಮೀರದಲ್ಲಿ ನಾಗರ ರಾಜ ಅರಾವಳ ಮತ್ತು ಅವನ ಅನುಯಾಯಿಗಳೊಂದಿಗೆ ಸನ್ಯಾಸಿಗಳು ಸಂಬಾಷಣೆ ನಡೆಸಿರುವ ಉಲ್ಲೇಖವಿದೆ. ಹಾಗೂ ಅವರೆಲ್ಲರೂ ಬೌದ್ಧಧರ್ಮವನ್ನು
ಸ್ವೀಕರಿಸಿದ್ದರು!! ಇದರ
ನಂತರ ಹೆಚ್ಚಿನ ಸಂಖ್ಯೆಯ ನಾಗಾರಾಧಕರನ್ನು ಬೌದ್ಧ
ಧರ್ಮಕ್ಕೆ ಮತಾಂತರಗೊಳಿಸಲಾಯಿತು.
ಅದೇ
ರೀತಿ ಕ್ರಿ.ಶ ಏಳನೇ ಶತಮಾನದಲ್ಲಿ
ಕಾಶ್ಮೀರ ಕಣಿವೆಗೆ ಭೇಟಿ ನೀಡಿದ ಹ್ಯುಯೆನ್ ತ್ಸಾಂಗ್, ಅರ್ಹಂತ ಮಜ್ಜಾಂತಿಕಾ
ಕಣಿವೆಯನ್ನು ನಾಗಾ ಕುಲದವರಿಂದ ಹೇಗೆ ರಕ್ಷಿಸಿದ್ದರು ಮತ್ತು
ಈ ಪ್ರದೇಶದಲ್ಲಿ ಬೌದ್ಧ ಧರ್ಮವನ್ನು ಹೇಗೆ
ಸ್ಥಾಪಿಸಿದರು ಎಂಬುದರ ಬಗ್ಗೆ ವಿವರವಾಗಿ ಉಲ್ಲೇಖಿಸಿದ್ದಾರೆ
ನೀಲಮತ
ಪುರಾಣವು ಕಣಿವೆಯಲ್ಲಿನ
ಬೆಟ್ಟದ ಕಾವಲುಗಾರರ
ಹೆಸರನ್ನು ದಾಖಲಿಸುತ್ತದೆ: ಪೂರ್ವದಲ್ಲಿ ನಾಗ ಬಿಂದುಸಾರ, ಪಶ್ಚಿಮದಲ್ಲಿ ನಾಗ ಎಲೆಪತ್ರ, ದಕ್ಷಿಣದಲ್ಲಿ ನಾಗ ಶ್ರೀಮದಕ ಮತ್ತು ಉತ್ತರದಲ್ಲಿ ನಾಗ ಉತ್ತರಮಾನಸ ಎನ್ನುವವರು ಕಣಿವೆಯ ಕಾವಲುಗಾರರಾಗಿದ್ದರು. ಅವರೆಲ್ಲರೂ ನಾಗಕುಲಕ್ಕೆ ಸೇರಿದವರಿದ್ದರು!!!
ಕ್ರಿ.ಶ ಹನ್ನೊಂದನೇ ಶತಮಾನದಲ್ಲಿ
ಕಾಶ್ಮೀರಿ ಜನರ ಜೀವನದಲ್ಲಿನಾಗಾರಾಧನೆಯ ಮಹತ್ವವನ್ನು
ಕಲ್ಹಣ ದಾಖಲಿಸಿದ್ದಾರೆ.
ಅವರು ನಾಗಾರಾಧನೆ ಬಗ್ಗೆ ನಂಬಿಕೆ ಹೊಂದಿದ್ದ ರಾಜರ
ಕುರಿತಾದ ಕಥೆಗಳನ್ನು ವಿವರಿಸುತ್ತಾರೆ ಮತ್ತು ನಂಬಿಕೆಯನ್ನು ಜೀವಂತವಾಗಿಡಲು ಅವರ ವೈಯಕ್ತಿಕ ಕೊಡುಗೆಗಳನ್ನು ವಿವರಿಸುತ್ತಾರೆ; ಸುಸ್ರವ ನಾಗನ ವಿವರಣೆ ಮತ್ತು ಬ್ರಾಹ್ಮಣನೊಂದಿಗಿನ ಅವನ ಮೈತ್ರಿ; ರಾಜ ದುರ್ಲಭವರ್ಧನನ ನಾಗ ವಂಶ; ವು;ಆರ ಸರೋವರದಲ್ಲಿನ
ಟ್ಯುಟಲರಿ ದೇವತೆಯು ನಾಗ ಮಹಾಪದ್ಮನ ಶಾಖೆಯಾಗಿದೆ ಎಂದು ಹೇಳುತ್ತಾರೆ.
ಕ್ರಿ.ಶ 16 ನೇ ಶತಮಾನದಲ್ಲಿ ಕಾಶ್ಮೀರಕ್ಕೆ
ಬಂದ ಅಬುಲ್ ಫಝಲ್ ವಿವಿಧ ದೇವತೆಗಳಿಗೆ ಮೀಸಲಾಗಿರುವ ದೇವಾಲಯಗಳು ಮತ್ತು ಸ್ಥಳಗಳ ಸಂಖ್ಯೆಯನ್ನು ದಾಖಲಿಸಿದ್ದಾರೆ. ಅವರ ಪ್ರಕಾರ 45 ಸ್ಥಳಗಳು ಶಿವನ ಆರಾಧನೆಗೆ ಮೀಸಲಾಗಿವೆ, 64 ವಿಷ್ಣುವಿಗೆ, 3 ಬ್ರಹ್ಮಕ್ಕೆ, 22 ದುರ್ಗೆಗೆ ಹಾಗೂ ಕಣಿವೆಯ ಸುಮಾರು 700 ಸ್ಥಳಗಳಲ್ಲಿ, ನಾಗನ ಚಿತ್ರ ಕೆತ್ತಲಾಗಿದೆ!! ಇವುಗಳನ್ನು ನಿವಾಸಿಗಳು ಪೂಜಿಸುತ್ತಿದ್ದರು!!
ಸೂರ್ಯ ಮಾರ್ತಾಂಡ ಮಂದಿರ ಅನಂತ್ ನಾಗ್ |
ಈ
ಎಲ್ಲಾ ದಾಖಲೆಗಳು ನಾಗಾರಾಧನೆಯು ಕಾಶ್ಮೀರದ
ಜನರೊಂದಿಗೆ ಬಹಳ ಹಳೆಯ ಧಾರ್ಮಿಕ ಸಂಪರ್ಕವನ್ನು ಹೊಂದಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಬೌದ್ಧಧರ್ಮವನ್ನು ಈ ಪ್ರದೇಶದ ಪ್ರಧಾನ
ಧರ್ಮವನ್ನಾಗಿ ಮಾಡಲು ಅಶೋಕನು ಮಾಡಿದ ಪ್ರಯತ್ನಗಳ ಹೊರತಾಗಿಯೂ, ನಾಗಾ ಆರಾಧನೆಯು ಎಷ್ಟು ಪ್ರಬಲವಾಗಿತ್ತು ಮತ್ತು ಜನರ ಜೀವನದಲ್ಲಿ ಸಂಯೋಜಿಸಲ್ಪಟ್ಟಿತು ಎಂದರೆ, 9-10 ನೇ ಶತಮಾನದ ಹೊತ್ತಿಗೆ,
ಹೆಚ್ಚಿನ ಕಾಶ್ಮೀರಿ ಕಣಿವೆ ಜನರು ಮತ್ತೆ ಸರ್ಪಾರಾಧನೆಗೆ ಮರಳಿದ್ದರು!.
ಇದಕ್ಕೆ
ಕಾರಣ ಕಾಶ್ಮೀರ ಕಣಿವೆಯ ಮೂಲ ನಿವಾಸಿಗಳು ನಾಗಾ ಜನಾಂಗದವರಾಗಿದ್ದರು, ಜನಪ್ರಿಯ ಸಿದ್ಧಾಂತಗಳ ಪ್ರಕಾರ, ಲಕ್ಷಾಂತರ ವರ್ಷಗಳು, ನಾವು ಈಗ ಕಾಶ್ಮೀರ ಕಣಿವೆ
ಎಂದು ತಿಳಿದಿರುವ ಭೂಮಿ ಒಂದು ಬೃಹತ್ ಸರೋವರವಾಗಿತ್ತು. ದಂತಕಥೆಯ ಪ್ರಕಾರ, ಅರೆ ದೈವಿಕ ಜೀವಿಗಳಾದ ನಾಗರು ವಾಸಿಸುವ ಸ್ಥಳವಾಗಿತ್ತು!! ಇದೇ ನಾಗಕುಲದವರು - ಮೂಲನಿವಾಸಿ ಕಾಶ್ಮೀರಿಗಳಾಗಿದ್ದರು.
ನಾಗಕುಲವನ್ನು
ರಕ್ಷಿಸಿದ ಕಶ್ಯಪ ಋಷಿಯ
ಕಥೆ!
ಪೌರಾಣಿಕ
ಕಥೆಯ ಒಂದು ಆವೃತ್ತಿಯ ಪ್ರಕಾರ, ನಾಗಕುಲದ ರಾಜನಾದ ನೀಲನ ತಂದೆಯಾದ ಕಶ್ಯಪ ಋಷಿ ಬೃಹತ್ ಸರೋವರವನ್ನು ಬರಿದಾಗಿಸಿ ನಾಗರು ಮತ್ತು ಮಾನವರು ಇಬ್ಬರೂ ಒಟ್ಟಾಗಿ ವಾಸಿಸುವ ಸ್ಥಳವನ್ನು
ನಿರ್ಮಿಸಿದರು.
ಕುತೂಹಲಕಾರಿಯಾಗಿ,
ಜಾನಪದದ ವಿಭಿನ್ನ ಆವೃತ್ತಿಗಳು ಈ ಕಥೆಯ ನಾನಾ
ಸ್ವರೂಒಅವನ್ನು ಹೇಳುತ್ತದೆ. ಪುರಾತನ ಪಠ್ಯವಾದ 'ನೀಲಮತ ಪುರಾಣ ' ಪ್ರಕಾರ 'ಸತಿಸಾರ್' ಎಂದು ಕರೆಯಲ್ಪಡುವ ಬೃಹತ್ ಸರೋವರವನ್ನು ಒಮ್ಮೆ 'ಜಲೋಧರ' ಎಂಬರಾಕ್ಷಸನು ತನ್ನ ವಾಸಸ್ಥಳವಾಗಿಸಿಕೊಂಡಿದ್ದನು. ಅವನು ಜನರನ್ನು ಭೀತಿಗೊಳಿಸುತ್ತಿದ್ದನು. ಸರೋವರದ
ಬಳಿ ಇರುವ ಪರ್ವತ ಇಳಿಜಾರುಗಳಲ್ಲಿ ಆತ
ವಾಸಿಸುತ್ತಿದ್ದ ನಾಗಜನರಿಗೆ ಈತ ಕಿರುಕುಳ ನೀಡುತ್ತಿದ್ದ,
ಆಗ ಮರೀಚಿಯ ಪುತ್ರನಾದ ಕಶ್ಯಪ ನಾಗಾ ಜನಸಂಖ್ಯೆಯನ್ನು ರಾಕ್ಷಸನಿಂದ ರಕ್ಷಿಸಬೇಕೆಂದು ನಾಗಕುಲದ ಮುಖ್ಯ ರಾಜನಿಂದ ವಿನಂತಿ ಬಂದಿತು. ಆಗ
ಕಶ್ಯಪನು ಆ ರಾಕ್ಷಸನನ್ನು ಕೊಂದನು.
ಕಶ್ಯಪ |
ಹಾಗಾಗಿ
ಕಾಶ್ಮೀರ ಕಣಿವೆಯನ್ನು ಪ್ರಾಚೀನ ಕಾಲದಲ್ಲಿ ಕಶ್ಯಪ ಋಷಿಯ ಹೆಸರಲ್ಲಿ ಕರೆಯಲಾಗುತ್ತದೆ. ‘ಕಶ್ಯಪ್-ಮಾರ್’ ಅಥವಾ ‘ಕಶ್ಯಪ್-ಪುರ ಎಂದು ಗುರುತಿಸಲಾಗುತ್ತಿತ್ತು!!
ಇದಲ್ಲದೆ
ಇಂದಿನ ಅನಂತ್ ನಾಗ್, ಉರಿಯಂತಹಾ ಪ್ರದೇಶದ ಹೆಸರುಗಳು ಸಹ ಪ್ರಾಚೀನ ಕಾಶ್ಮೀರದಲ್ಲಿ
ನಾಗಲುಲದವರ ವಾಸಸ್ಥಳಗಳಿದ್ದದ್ದಕ್ಕೆ ಸಾಕ್ಷಿಯಾಗಿದೆ. ಒಟ್ಟಾರೆ
ಕಾಶ್ಮೀರದಲ್ಲಿ ನಾಗಾರಾಧನೆ ಹಾಗೂ ನಾಗಕುಲದ ಜನರು ಸಾಕಷ್ಟು ಸಂಖ್ಯೆಯಲ್ಲಿದ್ದು ಕಾಲಕ್ರಮೇಣ ಬೇರೆಡೆಗೆ ಸ್ಥಳಾಂತರಗಿಂಡು ಇಲ್ಲವೆ ಮತಾಂತರಗೊಂಡಿದ್ದರೆಂದು
ತಿಳಿಯಬಹುದು
ಕೇರಳದ
ನಾಯರ್ ಗಳೇ ಪ್ರಾಚೀನ ಭಾರತದ ನಾಗರು?!!
ಹೌದು
ಇಂತಹಾ ಒಂದು ಪ್ರಶ್ನೆ ಉದ್ಭವಿಸಲು ಕಾರಣವಿದೆ. ಕೇರಳದ ನಾಯರ್ ಜನ ಸಮುದಾಯದ ಮೂಲದ
ಬಗೆಗಿನ ನಾನಾ ರೀತಿಯ ಕಥೆಗಳೇ ಇದಕ್ಕೆ ಕಾರಣ. ನಾಯರ್ ಸಮುದಾಯದ ಉಗಮದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದು ನಾಯರ್ ಗಳು ಒಂದು ಕಾಲದಲ್ಲಿ ಭಾರತದ
ಪ್ರಬಲ ಗುಂಪಾಗಿದ್ದ ನಾಗರ ವಂಶಸ್ಥರು ಎಂದೂ ಒಂದು ವಾದವಿದೆ. ಆರ್ಯರು ಪ್ರಾಬಲ್ಯ ಸಾಧಿಸುವ ಮುನ್ನ ಭಾರತದಲ್ಲಿ
ವಾಸಿಸುತ್ತಿದ್ದ ಅತ್ಯಂತ ಹಳೆಯ ಮತ್ತು ಪ್ರಬಲ ಗುಂಪು ನಾಗಾ ಸಮುದಾಯದ್ದಾಗಿತ್ತು!
ರಾಮಾಯಣದ
ಕಾಲಕ್ಕೂ ಮುನ್ನ ಅವರು
ಭಾರತದಲ್ಲಿದ್ದರು. ಅವರು ಮಹಾಭಾರತ ಯುದ್ಧದಲ್ಲಿ ಯೋಧರಾಗಿದ್ದರು ಮತ್ತು ಹರಿವಂಶ ಮತ್ತು ವಿಷ್ಣು ಮಾರ್ಕಂಡೇಯ ಪುರಾಣಗಳಲ್ಲಿ ಈ ವಿಷಯದ ಉಲ್ಲೇಖವಿದೆ,.
ಸೂರ್ಯವಂಶ ಹಾಗೂ ಚಂದ್ರ(ಸೋಮವಂಶ)ವಂಶದ ರಾಜರುಗಳಿಗೆ, ನಾಗಾ ಸಮುದಾಯಕ್ಕೂ ಸಂಬಂಧವಿತ್ತು!!ರಾಮಾಯಣದಲ್ಲಿ ನಾಗರು ಹನುಮಂತ ಸಮುದ್ರ ಲಂಘನ ಮಾಡಿದ್ದ ಘಟನೆಗೆ ಸಾಕ್ಷಿಯಾಗಿದ್ದರು!!
ನಾಗಾ
ಮಹಿಳೆಯರು ತಮ್ಮ ಸೌಂದರ್ಯಕ್ಕೆ ಹೆಸರಾಗಿದ್ದರು. ಮಹಾಭಾರತದಲ್ಲಿ ಅರ್ಜುನನು ತನ್ನ ತೀರ್ಥಯಾತ್ರೆ ಸಮಯದಲಿ ಸುಂದರಿಯಾದ ನಾಗಾ ಮಹಿಳೆ ಉಲೂಚಿಯನ್ನು ಸಂಧಿಸಿ ವಿವಾಹವಾಗಿದ್ದ. ಮಹಾಭಾರತ
ಯುದ್ಧದ ನಂತರ ನಾಗರು ಹೆಚ್ಚು ಶಕ್ತಿಶಾಲಿಯಾದರು. ಅರ್ಜುನನ ಮೊಮ್ಮಗ ಪರೀಶ್ಖಿತನನ್ನು ನಾಗಾಗಳು ಹತ್ಯೆ ಮಾಡಿದ್ದರು! ನಾಗರು. ಅನಾದಿ ಕಾಲದಿಂದಲೂ ಭಾರತದ ನಾನಾ ಕಡೆ ವಾಸಿಸುತ್ತಿದ್ದುದಕ್ಕೆ ಐತಿಹಾಸಿಕ ಪುರಾವೆ ಇದೆ, ತಕ್ಷಶಿಲಾ ಅವರ ರಾಜಧಾನಿಯಾಗಿತ್ತು. ಅಲ್ಲಿಂದ ಅಸ್ಸಾಂ ಗಡಿಯವರೆಗಿನ ನಾಗಾ ಸಾಮ್ರಾಜ್ಯ ಒಂದೆಡೆಯಾಗಿದ್ದರೆ ಇನ್ನೊಂದು ದಕ್ಷಿಣ ಬಾರತದಿಂದ ಶ್ರೀಲಂಕಾದವರೆಗೆ ವ್ಯಾಪಿಸಿತ್ತು. ಹೀಗೆ ದಕ್ಷಿಣದಲ್ಲಿ ಕೇರಳ ಭಾಗಕ್ಕೆ ಬಂದ ನಾಗ ಜನಾಂಗ "ನಾಯಕರು" ಎನಿಸಿದ್ದರು!!!
ರಾಮಸ್ವಾಮಿ ನಾಯ್ಡು ಅವರಿಂದ ರಚಿತವಾದ ತಿರುವಾಂಕೂರಿನ ಮೂರು ನಾಯರ್ ಹುಡುಗಿಯರ ಚಿತ್ರ (1872) |
ಸರ್ಪ
ಅಥವಾ ಹಾವಿನ ಆರಾಧನೆ ನಾಯರ್ ಗಳ ಮೂಲ ಸಂಪ್ರದಾಯವಾಗಿದೆ.
ಹುತೇಕ ಎಲ್ಲಾ ನಾಯರ್ ತಾರವಾಡಗಳಲ್ಲಿ ಸರ್ಪಕವಾಸ್ (ಹಾವಿನ ಉದ್ಯಾನವನಗಳು) ಇದ್ದವು.
ನಾಯರ್
ಮಹಿಳೆಯರು ಮತ್ತು ಪುರುಷರು ತಮ್ಮ ಕೂದಲನ್ನು ಸರ್ಪದ ತಲೆಯಂತೆ ಬಾಚಿಕೊಳ್ಳುವ ಮತ್ತು ಕಟ್ಟಿಕೊಳ್ಳುವ ಅಭ್ಯಾಸವನ್ನು ಹೊಂದಿದ್ದರು. ನಾಯರ್ಗಳು ಮಾತೃಕುಟುಂಬ ಪದ್ದತಿಯನ್ನು ಅನುಸರಿಸುತ್ತಾರೆ.
ನಂಬೂದರಿ
ಸಮುದಾಯ ಆಗಮನಕ್ಕೆ ಮುನ್ನ ಯುದ್ಧ ನಡೆಸಬಲ್ಲ, ಹೋರಾಡಬಲ್ಲ ಸಂಘಟಿತ ಜನರ ಗುಂಪು ಕೇರಳ ಭಾಗದಲ್ಲಿ ಪ್ರಾಬಲ್ಯ ಸಾಧಿಸಿತ್ತು. ಆದರೆ
ಅವರ ಮೂಲ ತಿಳಿದಿಲ್ಲ. ನಾಗ (ಹಾವು) ನ ಆರಾಧನೆಯಿಂದಾಗಿ, ಈ
ಜನರ ಗುಂಪನ್ನು ನಾಗರು ಎಂದು ಕರೆಯಲಾಯಿತು. ಅವರು
ಆದಿವಾಸಿಗಳ (ಮೂಲನಿವಾಸಿಗಳ) ಮೇಲೆ ಹಿಡಿತ ಸಾಧಿಸಿದರು, ಅವರನ್ನು ಕಠಿಣ ಕೆಲಸಗಳಿಗೆ ನೇಮಿಸಿದ್ದರು ಮತ್ತು ಅವರನ್ನು ಗುಲಾಮರನ್ನಾಗಿ ಮಾಡಿದರು ಎಂದು ಇತಿಹಾಸಕಾರ ಕೆ.ಎಂ. ಫಣಿಕ್ಕರ್
ಹೇಳುತ್ತಾರೆ.
ವಿಲಿಯಂ
ಲೋಗನ್ ವಿರಚಿತ ಮಲಬಾರ್ ಮ್ಯಾನುವಲ್ ನಲ್ಲಿ ಮಲಬಾರ್ ಅನ್ನು ವಶಪಡಿಸಿಕೊಂಡ ಮತ್ತು ಭೂಮಾಲೀಕರಾದ ದ್ರಾವಿಡ ವಸಾಹತುಗಾರರು ಎಂದು ನಾಯರ್ ಗಳನ್ನು ದಾಖಲ್ಲಿಸಿದ್ದಾನೆ.
ಕೊಡುಂಗಲ್ಲೂರ್
ಕುಂಜಿಕುಟ್ಟನ್ ತಾಂಪುರಾನ್ ತಮ್ಮ
‘ಕೇರಳಾತಿಲ್’ ಪುಸ್ತಕದಲ್ಲಿ
ನಾಯರ್ಗಳು ನಾಗರ ಹಾಗೆಯೇ ಇದ್ದಾರೆ ಎಂದು ದೃಢಪಡಿಸಿದ್ದಾರೆ!!! (ಕೊಡುಂಗಲ್ಲೂರ್ ಕುಂಜಿಕುಟ್ಟನ್ ತಾಂಪುರಾನ್(1868 -
1914) ಮಲಯಾಳಂ
ಕವಿ ಮತ್ತು ಸಂಸ್ಕೃತ ವಿದ್ವಾಂಸರು ಭಾರತದ ಕೇರಳದಲ್ಲಿ ವಾಸಿಸುತ್ತಿದ್ದರು. ಅವರ ಜನ್ಮ ಹೆಸರು ರಾಮವರ್ಮ, 874 ದಿನಗಳಲ್ಲಿ ಇಡೀ ಮಹಾಭಾರತವನ್ನು ಪದ-ಪದದ ಅನುವಾದ
ಮಾಡಿದ್ದಕ್ಕಾಗಿ ಇವರು ಪ್ರಸಿದ್ದರಾಗಿದಾರೆ. ಇವರನ್ನು
"ಕೇರಳದ ವ್ಯಾಸ" ಎಂದು ಕರೆಯಲಾಗುತ್ತದೆ.)
ಚೇರ ಸಾಮ್ರಾಜ್ಯ ಅದು ನಾಗರ ಸಾಮ್ರಾಜ್ಯ!!
ಇನ್ನು
ಆರ್ಯರಲ್ಲಿ ಆಡಳಿತ ನಡೆಸುವವರನ್ನು ಕ್ಷತ್ರಿಯರೆಂದು ವರ್ಗೀಕರಿಸಲಾಗಿದೆ. ಆದರೆ
ಮಹತ್ವದ ವಿಚಾರವೆಂದರೆ ಕ್ರಿ.ಶ 130 ರಿಂದ ಕ್ರಿ.ಶ 1100 ರವರೆಗೆ ಕೇರಳವನ್ನು ಆಳಿದ ಚೇರ ದೊರೆಗಳು ಕ್ಷತ್ರಿಯರಲ್ಲ!! ಆದರೆ ಇವರು ಇದೇ ಭಾಗಕ್ಕೆ ಸೇರಿದ್ದವರು. ಆದ್ದರಿಂದ ಅವರು ನಾಯರ್ ಗಳು! ಇದರಿಂದ ನಾಯರ್ ಗಳು ಕೇರಳವನ್ನು, ದಕ್ಷಿಣ ಭಾರತವನ್ನು ಆಳಿದ್ದರೆಂದು ಊಹೆ ಸಮಂಜಸವಾಗಿದೆ!! ಚಂದ್ರಗುಪ್ತ ಅವರ ಆಸ್ಥಾನಕ್ಕೆ ಬಂದಿದ್ದ ಗ್ರೀಕ್
ರಾಯಭಾರಿ, ಮೆಗಾಸ್ಟೆನಿಸ್ ಕ್ರಿ.ಪೂ 300 ರಲ್ಲಿ ನಾಯರ್ ಮತ್ತು ಚೇರ ಸಾಮ್ರಾಜ್ಯದ ಬಗ್ಗೆ ಉಲ್ಲೇಖಿಸುತ್ತಾನೆ, ಅಲ್ಲಿ ಸ್ತ್ರೀ ಅಥವಾ ಮಹಿಳೆಯರು ಸಾರ್ವಭೌಮರಾಗಿದ್ದರು ಎಂದು ಬಣ್ಣಿಸಿದ್ದಾನೆ.
ಚೇರ ಸಾಮ್ರಾಜ್ಯ |
ನಾಯರ್’ ಎಂಬ
ಪದವನ್ನು ವಿಜಯ ದೇವರ 9 ನೇ ಶತಮಾನದ ತಿರುಕೋದಿಥ್ಥಾನ್
(ತ್ರಿಕೋಡಿಷ್ಠಾನಂ) ಶಾಸನದಲ್ಲಿ
ಧಿಕೃತವಾಗಿ ದಾಖಲಿಸಲಾಗಿದೆ. ಭಾಸ್ಕರರವಿ ವರ್ಮನ ತಿರುನೆಲ್ಲಿ ಪಟ್ಟಾಯಂನಲ್ಲಿ ನಾಯರ್ ಬಗ್ಗೆ ಉಲ್ಲೇಖವಿದೆ. ನೆಡುಂಪುರಂ ಥಾಲಿಯ ಎರಡು ಕಲ್ಲಿನ ಕೆತ್ತನೆಗಳಲ್ಲಿ ‘ಪಡನೈರ್ಸ್’
(ಯೋಧರು) ಬಗ್ಗೆ ಉಲ್ಲೇಖವಿದೆ. ಕ್ರಿ.ಶ 400 ಕ್ಕೆ ಸೇರಿದ ಸುಚೀಂದ್ರಂ ದ್ವಾರಕ
ದೇವಸ್ಥಾನದ ಕಲ್ಲಿನ ಗೋಡೆಯಲ್ಲಿ ‘ಪಲ್ಲಿಕ್ಕನ್ ನಾಯರ್’ ದೇವಾಲಯದ ಯುರಾಳನ್ ಎಂದು
ದಾಖಲಿಸಲಾಗಿದೆ. 19 ನೇ ಶತಮಾನದ ಆರಂಭದಲ್ಲಿ
ನಾಯರ್ ವೈನಾಡ್ ನಲ್ಲಿ ಜಾತಿಯ ಹೆಸರಾಗಿ ಮಾರ್ಪಟ್ಟಿತು!!ಅದಕ್ಕೂ ಮೊದಲು, ಈ ಪದವನ್ನು “ಯೋಧ” ಎಂದು
ಅರ್ಥೈಸಲು ಬಳಸಲಾಗುತ್ತಿತ್ತು. ಎರಡನೇ ಚೇರ ರಾಜವಂಶದ ರಾಜ ರಾಮವರ್ಮ ಕುಲಶೇಖರ (1020-1102) ಆಳ್ವಿಕೆಯಲ್ಲಿ ಚೋಳರು ಚೇರ ಸಾಮ್ರಾಜ್ಯದ ಮೇಲೆ ದಾಳಿ ಮಾಡಿದಾಗ ನಾಯರ್ನ ಉಲ್ಲೇಖವನ್ನು ಕಾಣಬಹುದು.
ಆಕ್ರಮಣಕಾರಿ ಶಕ್ತಿಯ ವಿರುದ್ಧ ಆತ್ಮಹತ್ಯಾ ದಳಗಳನ್ನು (ಚೇವರ್ಸ್) ರಚಿಸುವ ಮೂಲಕ ನಾಯರ್ ಹೋರಾಡಿದರು.
ಇತಿಹಾಸ
ಪೂರ್ವಕಾಲದಲ್ಲಿ ಉತ್ತರ ಭಾರತದಿಂದ ದಕ್ಷಿಣಕ್ಕೆ ತೆರಳಿದ ಜನರ ಗುಂಪು ನಾಗರು ಎಂದು ಪಿ.ದಾಮೋದರನ್ ಪಿಳ್ಳೆ
ಹೇಳಿದ್ದಾರೆ. ವರು ಇಂದಿನ ನಾಯರ್ ಗಳು ಆದರು.
ವಾಯುವ್ಯ ಗಡಿಯ ಮೂಲಕ ಭಾರತಕ್ಕೆ ಬಂದು ದೇಶದ ವಿವಿಧ ಭಾಗಗಳಲ್ಲಿ ನೆಲೆಸಿದ ಸಿಥಿಯನ್ನರನ್ನು ಹಾವು ಪೂಜಿಸುವ ವಂಶಸ್ಥರು ನಾಯರ್ಗಳು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಚೇರರ ಕಾಲದ ನಾಣ್ಯಗಳು |
ಶ್ರೀ
ವಿದ್ಯಾಧಿರಾಜ ಚಟ್ಟಂಪಿ ಸ್ವಾಮಿಕಲ್ (ಚಟ್ಟಂಪಿ ಸ್ವಾಮಿಕಲ್
(25 ಆಗಸ್ಟ್ 1853 - 5 ಮೇ 1924) ಹಿಂದೂ ಋಷಿ ಆದ್ಯಾತ್ಮ ಚಿಂತಕರಾಗಿದ್ದು ಸಾಮಾಜಿಕ ಸುಧಾರಕರಾಗಿದ್ದರು. ಅವರ ಆಲೋಚನೆಗಳು ಮತ್ತು ಕಾರ್ಯಗಳು ಕೇರಳದಲ್ಲಿ ಅನೇಕ ಸಾಮಾಜಿಕ,
ಧಾರ್ಮಿಕ, ಸಾಹಿತ್ಯಿಕ ಮತ್ತು ರಾಜಕೀಯ ಸಂಘಟನೆಗಳು ಮತ್ತು ಚಳುವಳಿಗಳ ಮೇಲೆ ಪ್ರಭಾವ ಬೀರಿತು ಮತ್ತು ಮೊದಲ ಬಾರಿಗೆ ತಳಮಟ್ಟದ ಸಮುದಾಯಗಳಿಗೆ
ಧ್ವನಿ ನೀಡಿತ್ತು. ವೇದಗಳ ಮೂಲಗಳನ್ನು ಉಲ್ಲೇಖಿಸಿ ಹಿಂದೂ ಗ್ರಂಥಗಳ ಸಾಂಪ್ರದಾಯಿಕ ವ್ಯಾಖ್ಯಾನವನ್ನು
ಖಂಡಿಸಿದ ಇವರು ತಮ್ಮ ಸಮಕಾಲೀನ ನಾರಾಯಣ ಗುರು ಅವರೊಂದಿಗೆ 19 ನೇ ಶತಮಾನದ ಉತ್ತರಾರ್ಧದ ಕೇರಳದ ಭಾರಿ
ವಿಧಿವಿಧಾನ ಮತ್ತು ಜಾತಿ ಪೀಡಿತ ಹಿಂದೂ ಸಮಾಜವನ್ನು ಸುಧಾರಿಸಲು ಶ್ರಮಿಸಿದರು. ಇವರು ಆಧ್ಯಾತ್ಮಿಕತೆ,
ಇತಿಹಾಸ ಮತ್ತು ಭಾಷೆಯ ಕುರಿತು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.)
ನಾಯರ್
ಹಾಗೂ ನಾಗರು ಎಂದು ಕರೆಯುವ ಕೆಲವು ಹಳೆಯ ದಾಖಲೆಗಳನ್ನು ತಮ್ಮ ‘ಪ್ರಚೀನ ಕೇರಳ’ ಪುಸ್ತಕದಲ್ಲಿ ಪುನರುಚ್ಚರಿಸಿದ್ದಾರೆ. ಅವರು ತಮ್ಮ ಕೃತಿ ‘ಪ್ರಾಚೀನ ಮಲಯಾಳಂ’ ನಲ್ಲಿ
ಹಳೆಯ ವಟ್ಟೇಳುತು ದಾಖಲೆಗಳಲ್ಲಿ ಕಂಡುಬರುವ ನಾಗರ ಬಗ್ಗೆ ವಿವರ ಒದಗಿಸಿದ್ದಾರೆ.
ಪ್ರಾಚೀನ
"ಕೇರಳೋಪತಿ"
ಕಾವ್ಯದ ಭಾಗದ ಗದ್ಯಾನುವಾದ
ಹೀಗಿದೆ- "ಸಮುದ್ರವು ನಾಗರಿಗೆ ಸೇರಿದೆ. ಪೌರಾಣಿಕ ಕಾಲದಲ್ಲಿ ವರುಣ ಅವರಿಗೆ 108- ಕಥಮ್ ಭೂಮಿಯನ್ನು ನೀಡಿದರು (ಒಂದು ಕಥಮ್ ಸರಿಸುಮಾರು 5 ಮೈಲಿಗಳು). ನಾಗರು ಬಲವಾದ ಮೈಕಟ್ಟು ಮತ್ತು ಸುಂದರವಾದ ದೇಹವನ್ನು ಹೊಂದಿದ್ದರು. ಕಳ್ಳರು ಅವರಿಗೆ ಭಯಪಡುತ್ತಿದ್ದರು. ಅವರ ಕೀರ್ತಿ ಎಲ್ಲೆಡೆ ಹರಡಿತ್ತು. ಬಿಲ್ಲು ಮತ್ತು ಬಾಣವನ್ನು ಬಳಸುವಲ್ಲಿ ಅವರು ಪರಿಣತರಾಗಿದ್ದರು. ಯುದ್ಧದಲ್ಲಿ ಭಾಗವಹಿಸುವುದು ಅವರ ಆರಾಧನೆಯ ವಿಶಿಷ್ಟ ಲಕ್ಷಣವಾಗಿದೆ. ಅವರು ದಣಿವರಿಯದ ಕೆಲಸಗಾರರು, ಧೈರ್ಯಶಾಲಿಗಳು ಆದ ನಿರ್ಭೀತ ಜನರ
ಗುಂಪು"
ಕೆಪಿ
ಪದ್ಮನಾಭ ಮೆನನ್ ಅವರ ವಾದದಂತೆ ಶತಮಾನಗಳ
ಹಿಂದೆ ಕೇರಳವನ್ನು ಆಳಿದ ಕೇರಳನ್ ಅಥವಾ ಚೇರಳನ್ ರಾಜರು ನಾಗಕುಲದ ಜನರನ್ನು ಇಲ್ಲಿಗೆ ಬರಮಾಡಿಕೊಂಡು ನೆಲೆಸಲು ಅನುಮತಿ ಕೊಟ್ಟರು. ಈ ನಾಗರನ್ನು ನಂತರ
ನಾಯರ್ ಮತ್ತು
ಅಂಬಲವಾಸಿಸ್ ಎಂದು ಕರೆಯಲಾಯಿತು
ನಾಗರಿಗೆ ಯುರೋಪಿಯನ್ ಮೂಲ?
ಇದಲ್ಲದೆ
ನಾಯರ್ ಗಳು ಯುರೋಪಿನ ಭಾಗದಿಂದ ಬಂದವರೆಂದು ಇನ್ನೊಂದು ವಾದವಿದೆ. ಯೂಫ್ರಟಿಸ್ ಮತ್ತು ಟೈಗ್ರಿಸ್ ನದಿಗಳ ತೀರದಲ್ಲಿ ವಾಸಿಸುತ್ತಿದ್ದ ನಾಯರಿ ಜನರು ನಾಯರ್ ಆಗಿ ಪರಿವರ್ತನೆಗೊಂಡಿದ್ದಾರೆ ಎಂದು ಕೆಲವರು ನಂಬುತ್ತಾರೆ. ಕ್ರಿ.ಪೂ 3000 ರ ಹೊತ್ತಿಗೆ ಹುರಿಯನ್
ಬುಡಕಟ್ಟಿನ ಉರಾಥಿಯರ್ ನಾಯೇರಿಗಳು ನಡೆಸಿದ್ದ ಯುದ್ಧ ಬಹುವರ್ಷಗಳ ಕಾಲ ನಡೆದು ಕಡೆಗೆ ಸರ್ಹನ್-ಐ ಕ್ರಿ.ಪೂ
2018 ರ ಹೊತ್ತಿಗೆ ನಾಯಿರಿಗಳ ಭೂಪ್ರದೇಶವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡರು. ಆಗ ನಾಯಿರಿಗಳು ವಿವಿಧ
ಗುಂಪುಗಳಾಗಿ ವಿವಿಧ ಭಾಗಗಳಿಗೆ ಓಡಿಹೋದರು. ಅದರಲ್ಲಿ
ಕೆಲವರು ಭಾರತವನ್ನು ತಲುಪಿ ಲೋಥಾಲ್, ಗೋವಾ, ಕಣ್ಣೂರು,
ತಕ್ಷಶಿಲಾ, ಕಾಟ್ಮಂಡು, ಉತ್ತರ
ಬಿಹಾರ, ಬಂಗಾಳ ಮತ್ತು ಮದ್ರಾಸ್ (ಚೆನ್ನೈ)ಬಳಿಯ ಕೆಲವು ಸ್ಥಳಗಳಲ್ಲಿ ಕರ್ನಾಟಕದ ತುಳುನಾಡು ಎಂದು ಕರೆಯುವ ಕರಾವಳಿಯಲ್ಲಿ ಬಂದು ನೆಲೆಸಿದ್ದರು. ಮತ್ತೊಂದು
ಗುಂಪು ಸಹ್ಯಾದ್ರಿ ಪರ್ವತ ದಾಟಿ ಕೇರಳ ತಲುಪಿತು. ಈ ನಾಯರಿ ವಸಾಹತುಗಾರರು
ನಂತರ ನಾಯರ್ ಆಗುತ್ತಾರೆ.
ಹೀಗೆ
ಒಟ್ತಾರೆಯಾಗಿ ಕೇರಳದ ನಾಯರ್ ಸಮುದಾಯ ಪ್ರಾಚೀನ ಬಾರತದ ನಾಗಕುಲ ಅಥವಾ ನಾಗಾ ಜನಸಮುದಾಯವಾಗಿದೆ ಎಂದು ಭಾವಿಸಲು ನಾನಾ ಪುರಾವೆಗಳಿದೆ.
ತಿರುವನಂತಪುರಂ ಎಂದರೆ ಅನಂತನ ಕಾಡು!!!
ಇನ್ನು
ಕೇರಳ ರಾಜಧಾನಿ ತಿರುವನಂತಪುರಂ ಹಾಗೂ ಕೇರಳದ ಉತ್ತರದ ಗಡಿ ಕಾಸರಗೋಡಿನಲ್ಲಿರುವ ಅನಂತಪುರ ಎಂಬ ಗ್ರಾಮವೂ ಸಹ ನಾಗಾಗಳ ಇರುವಿಕೆಗೆ
ಸಾಕ್ಷಿ ಹೇಳುತ್ತದೆ!!! ಪ್ರಸಿದ್ಧ ದಂತಕಥೆಯ ಪ್ರಕಾರ ತಿರುವನಂತಪುರಂ ಇದ್ದ ಪ್ರದೇಶ ಒಂದು
ಕಾಲದಲ್ಲಿ "ಅನಂತನ ಕಾಡು" ಎಂದೆನಿಸಿತ್ತು. ಇಲ್ಲಿ "ಅನಂತ" ಎಂದರೆ ಸರ್ಪ ಕುಲದ ಆದಿಪುರುಷನಾದ ಶೇಷ ಅಥವಾ ಅನಂತನೆಂದು ಊಹಿಸಬಹುದು. ಹಾಗಾಗಿ ಅನಂತನ ಕಾಡು ಎಂದರೆ ಸರ್ಪಗಳಿಗೆ ಅಥವಾ ನಾಗಕುಲಕ್ಕೆ ಸೇರಿದ್ದ ಕಾಡು ಎಂದಾಗುತ್ತದೆ!! ಹೀಗಾಗಿ ತಿರುವನಂತಪುರಂ ಸೇರಿ ಇಡೀ ಕೇರಳ ರಾಜ್ಯ, ಕರ್ನಾಟಕದ ಕರಾವಳಿಯು ಇತಿಹಾಸಪೂರ್ವ ಕಾಲದಲ್ಲಿ ನಾಗರ ಆಡಳಿತ ಕ್ಷೇತ್ರವಾಗಿತ್ತು ಎನ್ನಲು ಅಡ್ಡಿಯಿಲ್ಲ!
No comments:
Post a Comment