Thursday, April 24, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) – 23

ಚಿದಂಬರಂ(Chidambaram)

ತಮಿಳುನಾಡಿನ ದಕ್ಷಿಣ ಆರ್ಕಾಟ್ ಜಿಲ್ಲೆಯಲ್ಲಿರುವ ಶ್ರೀ ಕ್ಷೇತ್ರ ಚಿದಂಬರಂನ ಶ್ರೀ ನಟರಾಜ ಸ್ವಾಮಿ ದೇವಾಲಯವು ಸಂಪ್ರದಾಯ, ಕಲೆ, ಇತಿಹಾಸ ಹೂಗೂ ಭಕ್ತಿ ಭಾವಗಳ ಸಂಗಮ ಸ್ಥಳವೆನಿಸಿದೆ. ಭಾರತದ ಹಿಂದೂಗಳು ಮಾತ್ರವಲ್ಲದೆ ಶ್ರೀ ಲಂಕಾದಲ್ಲಿನ ಹಿಂದೂಗಳು ಸಹ ಶ್ರೀ ನಟರಾಜಸ್ವಾಮಿಯನ್ನು ಆರಾಧಿಸುತ್ತಾರೆ. ಅತ್ಯಂತ ಪುರಾತನ ವೈಭವಯುತ ಇತಿಹಾಸವನ್ನು ಹೊಂದಿರುವ ದೇವಾಲಯವು ಅಷ್ಟೇ ಕುತೂಹಲಕರ ಐತಿಹ್ಯವನ್ನೂ ಹೊಂದಿದೆ. ಚಿನ್ನದ ಮೇಲ್ಛಾವಣಿಯನ್ನು ಹೊಂದಿರುವ ವೇದಿಕೆಯು ಚಿದಂಬರಂ ದೇವಾಲಯದ ಪವಿತ್ರ ಗರ್ಭಗುಡಿಯಾಗಿದೆ. ಇದರಲ್ಲಿ ಭಗವಂತನ ಮೂರು ಸ್ವರೂಪಗಳಿವೆ. ಅವತಾರ-ಸಕಲ ತಿರುಮೆನಿ ಎಂಬ ಹೆಸರಿನ ಮಾನವಾತಾರದಲ್ಲಿ ಭಗವಂತನಾದ ನಟರಾಜನು ಕಾಣಿಸಿಕೊಂಡಿದ್ದಾನೆ. "ಅರೆ-ರೂಪ" – ಚಂದ್ರ ಮೌಳೇಶ್ವರನ ಸ್ಪಟಿಕ ಲಿಂಗ, ಸಕಲ ನಿಶ್ಕಲ ತಿರುಮೇನಿ . "ರೂಪವಿಲ್ಲದ" – ಚಿದಂಬರ ರಹಸ್ಯಂನಲ್ಲಿರುವ ಸ್ಥಳದಂತೆ ದೇವಾಲಯದ ಗರ್ಭಗುಡಿಯ ಆವರಣದಲ್ಲಿರುವ ಖಾಲಿ ಸ್ಥಳ, ನಿಶ್ಕಲ ತಿರುಮೇನಿ
ಪರಮೇಶ್ವರನ ಐದು ಮುಖಗಳನ್ನು ಪಂಚಭೂತಗಳಿಗೆ ಹೋಲಿಸಿ ಸುಮಾರು ಚೋಳರ ಕಾಲದಲ್ಲಿ ನಿರ್ಮಿತವಾದ ಪ್ರಸಿದ್ಧ ಐದು ದೇವಾಲಯಗಳಲ್ಲಿ ಇದೂ ಒಂದು. ದೇಗುಲದ ಅಂಶವಾದ 'ಆಕಾಶತತ್ವ'ವನ್ನು ಆರಾಧಿಸಲೆಂದು ದೇಗುಲದ ಗರ್ಭಗುಡಿಯಲ್ಲಿ ಯಾವ ಪ್ರತಿಮೆಯೂ ಇಡಲ್ಪಟ್ಟಿಲ್ಲವೆನ್ನುತ್ತಾರೆ. 'ನಿರಾಕಾರ ಬ್ರಹ್ಮ'ವನ್ನು ಸಾಕಾರ ಪರಮಶಿವನೆಂದು ಕಾಣುವ ಬಗೆಯೇ ಇಲ್ಲಿನ 'ರಹಸ್ಯ'! ಅರ್ಥಾತ್ ಇಲ್ಲದ್ದನ್ನು ಇದೆಯೆಂದೂ, ಇರುವುದೆಲ್ಲವೂ ಇಲ್ಲವೆಂದೂ ತಿಳಿಯಲೆತ್ನಿಸಿದಾಗ ಹೇಗಾಗುವುದೆಂದು ಕಾಣುವ ನಿಗೂಢತೆಯೇ 'ಚಿದಂಬರ ರಹಸ್ಯ'.
 
Sri Natarajaswami, Chidambaram


ಯುಗ ಯುಗಗಳಷ್ಟು ಹಿಂದೆ ಭಗವಂತನಾದ ಪರಮೇಶ್ವರನು ತಾನು ತಿಲೈ ವನ ಪ್ರದೇಶದಲ್ಲಿ ವಿಹಾರದಲ್ಲಿದ್ದನು. ತನ್ನ ತೇಜೋಮಯ ಪ್ರಕಾಶದಿಂದೊಡಗೂಡಿ ಸರಳ ಭಿಕ್ಷುಕನಂತೆ ವೇಷ ಧರಿಸಿದ್ದ ಪರಮೇಶ್ವರನು ತಾನು ಭಿಕ್ಷಾಟನೆಯನ್ನು ಮಾಡಿಕೊಳ್ಳುತ್ತಾ ಕಾಲ ಕಳೆಯುತ್ತಿದ್ದನು. ಶ್ರೀ ಮಹಾವಿಷ್ಣುವು ತಾನು ಮೋಹಿಬಿ ಸ್ವರೂಪವನ್ನು ತಾಳಿ ಅವನೊಂದಿಗೆ ಅವನ ಹೆಂಡತಿಯಂತಿದ್ದನು.
ಹೀಗಿರಲಾಗಿ ಅದೇ ಅರಣ್ಯದಲ್ಲಿ ಮಂತ್ರ-ತಂತ್ರಗಳ ಬಗ್ಗೆ ಅತೀವವಾದ ನಂಬಿಕೆಯಿದ್ದ ಸಂತರ ಅಥವಾ 'ಋಷಿಗಳ' ಗುಂಪು ಒಂದು ಇತ್ತು. ಇವರು ತಮ್ಮ ಪದ್ದತಿಗಳ ಮತ್ತು ಮಂತ್ರಗಳ ಅಥವಾ ಯಕ್ಷಿಣಿ ವಿದ್ಯೆಯ ಮೂಲಕ ದೇವರನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಬಹುದು ಎಂಬ ನಂಬಿಕೆಯನ್ನು ಹೊಂದಿದ್ದರು. ಅದಾಗಿ ಋಷಿಗಳು ಮತ್ತು ಅವರ ಪತ್ನಿಯರು ಅದಾಗ ವನದಲ್ಲಿ ವಿಹರಿಸುತ್ತಿದ್ದ ಪರಮೇಶ್ವರನ ಸುರದ್ರೂಪಿಯಾದ ಬಿಕ್ಷುಕ ಮತ್ತು ಆತನ ಹೆಂಡತಿಯ ರೂಪ ಮತ್ತು ತೇಜಸ್ಸಿಗೆ ಮರುಳಾಗುತ್ತಾರೆ
ತಮ್ಮ ಹೆಂಡತಿಯರು ಮರುಳುಗೊಂಡದ್ದನ್ನು ಕಂಡ ಋಷಿಗಳು ರೋಷಗೊಂಡು ತಮ್ಮ ಯಕ್ಷಿಣಿ ವಿದ್ಯೆಗಳ ಮೂಲಕ ಸರ್ಪಗಳನ್ನು ಆವಾಹನ ಮಾಡುತ್ತಾರೆ. ಆದರೆ ಬಿಕ್ಷುಕನ ವೇಶದಲ್ಲಿದ್ದ ಶಿವನು ಸರ್ಪಗಳನ್ನು ಎತ್ತಿ ತನ್ನ ಜಡೆ , ಕುತ್ತಿಗೆ ಮತ್ತು ಸೊಂಟದ ಸುತ್ತ ಆಭರಣಗಳನ್ನಾಗಿ ಧರಿಸುತ್ತಾನೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಋಷಿಗಳು ಒಂದು ಭಯಂಕರವಾದ ಹುಲಿಯನ್ನು ಆವಾಹನ ಮಾಡುತ್ತಾರೆ. ಶಿವನು ಅದರ ಚರ್ಮವನ್ನು ಸುಲಿದು ತನ್ನ ಸೊಂಟಕ್ಕೆ ಹೊದಿಕೆಯಾಗಿ ಧರಿಸುತ್ತಾನೆ. ಇದರಿಂದ ಹತಾಶೆಗೊಂಡ ಋಷಿಗಳು ತಮ್ಮ ಎಲ್ಲಾ ಪಾರಮಾರ್ಥಿಕ ಶಕ್ತಿಯನ್ನು ಒಗ್ಗೂಡಿಸಿ ಮುಯಾಲಕನ್ ಎಂಬ ಅಹಂಕಾರದ ಮತ್ತು ಅಜ್ಞಾನದ ಸಂಕೇತವಾದ ಅತ್ಯಂತ ಬಲಿಷ್ಟವಾದ ಭೂತವೊಂದನ್ನು ಆವಾಹನ ಮಾಡುತ್ತಾರೆ. ಮುಗುಳ್ನಗೆ ನಕ್ಕ ಭಗವಂತನು , ಭೂತದ ಬೆನ್ನಮೇಲೆ ಏರಿ ಅವನನ್ನು ಅಚಲವಾಗಿರಿಸಿ ಆನಂದ ತಾಂಡವ (ನಿತ್ಯಾನಂದವನ್ನು ಕೊಡುವ ನಾಟ್ಯ)ವನ್ನಾಡುವುದರ ಮೂಲಕ ತನ್ನ ನಿಜ ಸ್ವರೂಪವನ್ನು ತೋರುತ್ತಾನೆ. ಭಗವಂತನು ತಮ್ಮ ಎಲ್ಲಾ ಯಕ್ಷಿಣಿ ಮತ್ತು ಮಂತ್ರಗಳಿಗಿಂತ ಮಿಗಿಲಾದವನು ಎಂಬುದನ್ನು ಅರಿತ ಋಷಿಗಳು ಶಿವನಿಗೆ ಶರಣಾಗುತ್ತಾರೆ.
***

ಬಹುಕಾಲದ ಹಿಂದೆ ಮುನಿಕುಲೋತ್ತಮರೋರ್ವರ ಪುತ್ರರಾದ ವ್ಯಾಘ್ರಪಾದರು ತಮ್ಮ ವೇದ ಶಾಸ್ತ್ರ ಅಧ್ಯಯನದ ಬಳಿಕ ತಪಸ್ಸಿಗಾಗಿ ತಿಲೈ ಪ್ರಾಂತಕ್ಕೆ ಬಂದಿದಿಳಿದಾಗ ಸರೋವರದ ಬಳಿಯ ಅಶ್ವತ್ಥ ವೃಕ್ಷದ ಬಳಿ ಶಿವಲಿಂಗವೊಂದನ್ನು ಕಂಡರು. ಮತ್ತೆ ಅಲ್ಲೇ ಸನಿಹದ ಇನ್ನೊಂದು ಸರೋವರದ ಬಳಿಯಲ್ಲಿ ತಾವುಗಳು ಆಶ್ರಮವನ್ನು ಕಟ್ಟಿಕೊಂಡು ಶಿವಲಿಂಗವೊಂದನ್ನು ಸ್ಥಾಪಿಸಿ ಪೂಜಿಸತೊಡಗಿದರು.
ಒಮ್ಮೆ ತಾವು ಪೂಜೆಗೆಂದು ಸಂಗ್ರಹಿಸಿಟ್ಟಿದ್ದ ಹೂವಿನ ಮೇಲೆ ಜೇನುನೊಣ್ಗಳು ಕುಳಿತು ಮಕರಂದವನ್ನು ಹೀರುತ್ತಿರುವುದನ್ನು ಕಂಡ ಮುನಿಗಳಿಗೆ ಕೋಪವು ಉಕ್ಕಿತು. ಅವುಗಳನ್ನಲ್ಲಿಂದ ಓಡಿಸುವ ಸಲುವಾಗಿ ತನಗೆ ಹುಲಿಯಂತಹಾ ಕಣ್ಣು, ಕಾಲುಗಳು ಹಾಗೂ ಉಗುರನ್ನು ದಯಪಾಲಿಸುವಂತೆ ಭಗವಂತನಲ್ಲಿ ಬೇಡಿಕೆಯಿಟ್ತರು. ಅವ್ರ ಕೋರಿಕೆಯು ಈಡೇರಲ್ಗಿ ಹುಲಿಯಂತಹಾ ಪಾದಗಳಾನ್ನು ಹೊಂದಿದ ಅವರಿಗೆವ್ಯಾಘ್ರಪಾದಎಂಬ ಹೆಸರು ಪ್ರಾಪ್ತಿಯಾಯಿತು.
Sri Natarajaswami Temple, Chidambaram
ಅದಾಗಿ ಕೆಲದಿನ ಕಳೆಯಲು ವ್ಯಾಘ್ರಪಾದರು ತಪಸ್ಸಿನಲಿ ನಿರತರಾಗಿದ್ದಾಗ ಪರಮೇಶ್ವರನು ಕಾಡೊಂದರ ನಡುವೆ ನತಿಸುತ್ತಿರುವುದನ್ನು ಕಂಡರು. ಅವರಿಗೆ ತಾವದನ್ನು ಮತ್ತೊಮ್ಮೆ ವಿವರವಾಗಿ ಕಾಣಬೇಕೆನ್ನುವ ಹಂಬಲವುಂಟಾಯಿತು. ಕ್ಶಹಣಕ್ಕಾಗಿ ಸತತವಾಗಿ ಕಾಯತೊಡಗಿದರು. ಅದಾಗ ಅತ್ರಿ ಮಹರ್ಷಿ ಹಾಗೂ ಅನಸೂಯಾದೇವಿಯವರ ಗರ್ಭದಲ್ಲಿ ಹಾವಿನ ಸ್ವರೂಪ ಹೊಂದಿ ಜನ್ಮಿಸಿದ ಪತಂಜಲಿ ಮಹಾಮುನಿಗಳು (ಭಗವಂತನು ಶ್ರೀ ಮಹಾವಿಷ್ಣು ವಿನ ಅವತಾರದಲ್ಲಿರುವಾಗ ಹಾಸಿಗೆಯಾಗಿರುವ ಸರ್ಪವಾದ ಆದಿಶೇಷನು ಆನಂದ ತಾಂಡವದ ಬಗ್ಗೆ ಕೇಳಿ , ತಾನೂ ಸಹ ನೋಡಿ ಆನಂದಿಸಲು ಹಂಬಲಿಸಿದನು. ಭಗವಂತನು ಅವನನ್ನು ಆಶೀರ್ವದಿಸಿ ಪತಾಂಜಲಿ ಎಂಬ ಸಂತನ ರೂಪವನ್ನು ಧರಿಸುವಂತೆ ಹೇಳುತ್ತಾನೆ. ಪತಾಂಜಲಿಯನ್ನು ತಿಲೈ ಅರಣ್ಯಕ್ಕೆ ತೆರಳುವಂತೆ ಹೇಳಿ, ಅಲ್ಲಿ ತಾನು ತಕ್ಕ ಸಮಯದಲ್ಲಿ ನೃತ್ಯವನ್ನು ಪ್ರದರ್ಶಿಸುವೆನೆಂದು ತಿಳಿಸಿರುತ್ತಾನೆ.) ತಾವುಗಳು ಸಹ ತಿಲೈ ಪ್ರದೇಶದ ವ್ಯಾಘ್ರನಖರಿದ್ದ ಜಾಗಕ್ಕೆ ಬಂದು ಅವರೊಡನೆ ವಾಸಿಸತೊಡಗಿದರು. ಅದಾಗಿ ಹಲವು ವರ್ಷಗಳಾ ಬಳಿಕ ಅದೊಂದು ದಿನ ಪರಮೇಶ್ವರನು ಅವರಿಬ್ಬರೆದುರಿಗೆ ಪ್ರತ್ಯಕ್ಷನಾಗಿ ನರ್ತನ ಮಾಡತೊಡಗಿದಾಗ ವ್ಯಾಘ್ರಪಾದರುಶಿವನ ನರ್ತನ ಭಂಗಿ ಸಕಲ ಭಕ್ತಾದಿಗಳಿಗೆ ಸದಾಕಾಲ ಕಾಣುವಂತಾಗಲಿಎಂದು ಪ್ರಾರ್ಥಿಸಿಕೊಂಡರು. ಕೋರಿಕೆಯನ್ನು ಮನ್ನಿಸಿದ ಪರಮೇಶ್ವರನುತಥಾಸ್ತುಎಂದನು.
***


ಒಮ್ಮೆ ಪರಮೇಶ್ವರನಿಗೂ, ಕಾಳಿ ಮಾತೆಗೂ ನೃತ್ಯಸ್ಪರ್ಧೆಯು ಏರ್ಪಟ್ಟಿತು. ಸ್ಪರ್ಧೆಯಲ್ಲಿ ಪರಮೇಶ್ವರನು ತಾನು ಕಾಳಿ ಮಾತೆಯನ್ನು ಸೋಲಿಸಿದನು. ಸಮಯದಲ್ಲಿ ಪರಮೇಶ್ವರನು ಊರ್ಧ್ವ ತಾಂಡವ ನೃತ್ಯವನ್ನು ಪ್ರದರ್ಶಿಸಿದ್ದನು. ಸ್ಪರ್ಧೆಯಲ್ಲಿ ಮಾತೆಯು ಸೋತರೂ ಸಹ ತನ್ನೊಂದಿಗೆ ಸ್ಪರ್ಧೆ ಮಾಡಿದಳೆನ್ನುವ ಕಾರಣದಿಂದ ಕಾಳಿ ಮಾತೆಗೆ ಚಿದಂಬರಂನ ಉತ್ತರ ಭಾಗದಲ್ಲಿ ನೆಲೆಸುವಂತೆ ಪರಮೇಶ್ವರನು ಆದೇಶಿಸಿದನು. ಹೀಗೆ ನೆಲೆಗೊಂಡಿರುವ ಮಾತೆಯನ್ನು ನಾವಿಂದಿಗೂ ಕಾಣಬಹುದು