Saturday, November 21, 2020

ಪಾಕಿಸ್ತಾನದಲ್ಲಿ ಭಗವಾನ್ ವಿಷ್ಣುವಿನ 1,300 ವರ್ಷಗಳ ಪುರಾತನ ದೇವಾಲಯ ಪತ್ತೆ!

 1,300 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎನ್ನಲಾದ  ಶ್ರೀವಿಷ್ಣುವಿಗೆ ಸೇರಿದ ಹಿಂದೂ ದೇವಾಲಯವು ವಾಯುವ್ಯ ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಪರ್ವತ ಪ್ರಾಂತ್ಯದಲ್ಲಿ ಪತ್ತೆಯಾಗಿದೆ. ಪಾಕಿಸ್ತಾನ ಹಾಗೂ ಇಟಾಲಿಯನ್ ಪುರಾತತ್ವ ತಜ್ಞರು ಈ ದೇವಾಲಯವನ್ನು ಪತ್ತೆ ಹಚ್ಚಿದ್ದಾರೆ.

ಬ್ಯಾರಿಕೋಟ್ ಘುಂಡೈನಲ್ಲಿ ಉತ್ಖನನ ನಡೆಸಿದಾಗ ಈ ದೇವಾಲಯ ಪತ್ತೆಯಾಗಿದೆ.

ಇದೊಂದು ವಿಷ್ಣುವಿನ ದೇವಾಲಯವಾಗಿದ್ದು ಇದನ್ನು ಹಿಂದೂಶಾಹಿ ಅವಧಿಯಲ್ಲಿ1,300 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದಾಗಿ ಖೈಬರ್ ಪಖ್ತುನ್ಖ್ವಾ ಪುರಾತತ್ವ ವಿಭಾಗದ ಫಜಲ್ ಖಲೀಕ್ ಹೇಳಿದ್ದಾರೆ.

ಹಿಂದೂ ಶಾಹಿಸ್ ಅಥವಾ ಕಾಬೂಲ್ ಶಾಹಿಸ್ (ಕ್ರಿ.ಶ. 850 1026) ಕಾಬೂಲ್ ಕಣಿವೆ (ಪೂರ್ವ ಅಫ್ಘಾನಿಸ್ತಾನ), ಗಾಂಧಾರ (ಆಧುನಿಕ ಕಾಲದ ಪಾಕಿಸ್ತಾನ, ಅಫ್ಘಾನಿಸ್ತಾನ) ಮತ್ತು ಇಂದಿನ ವಾಯುವ್ಯ ಭಾರತವನ್ನು ಆಳಿದ ಹಿಂದೂ ರಾಜವಂಶ.

ತಮ್ಮ ಉತ್ಖನನದ ಸಮಯದಲ್ಲಿ, ಪುರಾತತ್ತ್ವಜ್ಞರು ದೇವಾಲಯದ ಸಮೀಪ ಕಂಟೋನ್ಮೆಂಟ್ ಮತ್ತು ವಾಚ್‌ಟವರ್‌ಗಳ ಕುರುಹುಗಳನ್ನು ಸಹ ಕಂಡುಕೊಂಡಿದ್ದಾರೆ. ದೇವಾಲಯದ ಸ್ಥಳದ ಬಳಿ ನೀರಿನ ಬಾವಿಯನ್ನು ತಜ್ಞರು ಕಂಡುಕೊಂಡರು, ಅದನ್ನು ದೇವಾಲಯದಲ್ಲಿ ದೇವರ ಪೂಜೆಗೆ ಮುನ್ನ ಸ್ನಾನಕ್ಕಾಗಿ ಬಳಸಲಾಗುತ್ತಿತ್ತು.

ಸ್ವಾತ್ ಜಿಲ್ಲೆಯು ಸಾವಿರ ವರ್ಷಗಳಷ್ಟು ಹಳೆಯದಾದ ಪುರಾತತ್ವ ಸ್ಥಳಗಳಿಗೆ ನೆಲೆಯಾಗಿದೆ ಮತ್ತು ಹಿಂದೂ ಶಾಹಿ ಕಾಲದ ಕುರುಹುಗಳು ಈ ಪ್ರದೇಶದಲ್ಲಿ ಮೊದಲ ಬಾರಿಗೆ ಕಂಡುಬಂದಿವೆ ಎಂದು ಫಜಲ್ ಖಲೀಕ್ ಹೇಳಿದ್ದಾರೆ. ಸ್ವಾತ್ ಜಿಲ್ಲೆಯಲ್ಲಿ ಪತ್ತೆಯಾದ ಗಾಂಧಾರ ನಾಗರಿಕತೆಯ ಮೊದಲ ದೇವಾಲಯ ಇದಾಗಿದೆ ಎಂದು ಇಟಾಲಿಯನ್ ಪುರಾತತ್ವ ಕಾರ್ಯಾಚರಣೆಯ ಮುಖ್ಯಸ್ಥರಾದ ಡಾ. ಲೂಕ ಹೇಳಿದರು

ಬೌದ್ಧಧರ್ಮದ ಹಲವಾರು ಪೂಜಾ ಸ್ಥಳಗಳು ಸ್ವಾತ್ ಜಿಲ್ಲೆಯಲ್ಲಿವೆ. ತಾಲಿಬಾನ್ ಬಂಡುಕೋರರ ಅಂತ್ಯದ ನಂತರ , "ಪುರಾತತ್ವ, ಸಮುದಾಯ, ಪ್ರವಾಸೋದ್ಯಮ-ಕ್ಷೇತ್ರ ಶಾಲೆ" (ಎಸಿಟಿ) ಎಂಬ ಜಂಟಿ ಇಟಾಲಿಯನ್-ಪಾಕಿಸ್ತಾನಿ ಯೋಜನೆಯು 2011 ರಲ್ಲಿ ಸುಮಾರು 300 ಕಾರ್ಮಿಕರ ಸ್ಥಳೀಯ ಸಿಬ್ಬಂದಿಯನ್ನು ನೇಮಿಸಿ ತರಬೇತಿ ನೀಡುವ ಮೂಲಕ ಉತ್ಖನನ ಕಾರ್ಯವನ್ನು ಪುನರಾರಂಭಿಸಿತು.

ಯೋಜನೆ ಪ್ರಾರಂಭವಾದ ಐದು ವರ್ಷಗಳ ನಂತರ, ಈ ತಾಣಗಳನ್ನು ISMEO / ACTನ ವ್ಯಾಪ್ತಿಯಡಿ ತರಲಾಯಿತು ಮತ್ತು ಈಗ ಪ್ರತಿವರ್ಷ ಇಲ್ಲಿಗೆ 30,000 ಪ್ರವಾಸಿಗರು ಭೇಟಿ ನೀಡುತ್ತಾರೆ(ಹೆಚ್ಚಾಗಿ ಪಾಕಿಸ್ತಾನಿಗಳು ಮಾತ್ರ)

ಬ್ಯಾರಿಕೋಟ್ ಘುಂಡೈ ವ್ಯಾಪ್ತಿಯಲ್ಲಿ ಹಿಂದೂ ದೇವಾಲಯ ಉತ್ಖನನ ಹಲವಾರು ವರ್ಷಗಳಿಂದ ಸಾಗಿದೆ. ಈಗ ಖೈಬರ್-ಪಖುನ್ಖ್ವಾ ಸರ್ಕಾರದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ನಿರ್ದೇಶನಾಲಯವು ಸುಮಾರು 3 ಮಿಲಿಯನ್ ಯುರೋಗಳ ಆರ್ಥಿಕ ನೆರವಿನೊಂದಿಗೆ ಈ ಪ್ರದೇಶದ ಉತ್ಖನನದ ಜವಾಬ್ದಾರಿ ಹೊತ್ತಿದೆ.

ವಾಸ್ತುಶಿಲ್ಪಿಗಳಾದ ಇವಾನೋ ಮರಾಟಿ ಮತ್ತು ಕ್ಯಾಂಡಿಡಾ ವಾಸಲ್ಲೊ ಅವರು ರಚಿಸಿದ ಹೊಸ ಸ್ವಾತ್ ಮ್ಯೂಸಿಯಂ ಇಡೀ ಯೋಜನೆಯ ಹೃದಯಭಾಗವಾಗಿದೆ.ಎಂಜಿನಿಯರ್ ಕ್ಲಾಡಿಯೊ ಕ್ರಿಸ್ಟಿಲ್ಲಿ (ಐರಿಸ್-ಫೆಡೆರಿಕೊ II ನೇಪಲ್ಸ್ ವಿಶ್ವವಿದ್ಯಾಲಯ) ಮತ್ತು ಪೇಶಾವರ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಎಂಜಿನಿಯರ್‌ಗಳ ಸಹಯೋಗದೊಂದಿಗೆ.

ಫೆಬ್ರವರಿ 2008 ರ ಸಮಯದಲ್ಲಿ, ಕಟ್ಟಡದ ಒಂದು ಭಾಗವನ್ನು ನೆಲಸಮ ಮಾಡಲಾಗಿ ಅದನ್ನು ಮತ್ತೆ ಪುನರುಜ್ಜೀವನಗೊಳಿಸಿ ಹೊಸ ಕಟ್ಟಡದಲ್ಲಿ ಸೇರಿಸಲಾಗಿತ್ತು.

ನೂತನ ವಸ್ತುಸಂಗ್ರಹಾಲಯವನ್ನುಭೂಕಂಪನ ವಿರೋಧಿ ಪರಿಕಲ್ಪನೆಯ ಪ್ರಕಾರ ವಿನ್ಯಾಸಗೊಳಿಸಲಾಗಿದೆ, ಇದು ರಚನಾತ್ಮಕ ದೃಷ್ಟಿಕೋನದಿಂದ ಕೂಡಿದೆ. ಪಾಕಿಸ್ತಾನದಲ್ಲಿ ಈ ರೀತಿಯ ಅತ್ಯಾಧುನಿಕ ಕಟ್ಟಡವಿದಾಗಿದೆ. 

ಸ್ವಾಟ್ ಮ್ಯೂಸಿಯಂ, ಇದನ್ನು ನವೆಂಬರ್ 10, 1963 ರಂದು ಗೈಸೆಪೆ ಟುಸಿ ಅವರು ಗಣರಾಜ್ಯದ ಅಧ್ಯಕ್ಷ ಆಂಟೋನಿಯೊ ಸೆಗ್ನಿಯ ಸಂದೇಶವನ್ನು ಓದುವುದರೊಂದಿಗೆ ಉದ್ಘಾಟಿಸಿದರು. 11 ನವೆಂಬರ್ 2013 ರಂದು, ನಿಖರವಾಗಿ 50 ವರ್ಷಗಳ ನಂತರ ಅಧ್ಯಕ್ಷ ನ್ಯಾಪೊಲಿಟಾನೊ ಅವರ ಸಂದೇಶವನ್ನು ಓದುವುದರೊಂದಿಗೆ ನೂತನ ಸ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಲಾಯಿತು.

Thursday, November 19, 2020

'ನರಕಾಸುರ' : ಭೂದೇವಿ-ವಹಾರಸ್ವಾಮಿಯ ಪುತ್ರ, ಪ್ರಾಗ್ಜೋತಿಷಪುರದ ಸ್ಥಾಪಕ,ಈಗಿನ ಅಸೋಮ್ ಪ್ರಾಂತ್ಯದ ಪ್ರಾಗೈತಿಹಾಸಿಕ ದೊರೆ?!

ವಿಷ್ಣು ಪುರಾಣ ಮತ್ತು ಭಾಗವತ ನರಕಾಸುರ ಅಥವಾ ನರಕನನ್ನು ಭೂ ದೇವತೆ ಭೂದೇವಿ (ಭೂಮಿ) ಮತ್ತು ವರಾಹ (ವಿಷ್ಣುವಿನ ಮೂರನೇ ಅವತಾರ)ನ ಪುತ್ರ ಎಂದು ದು ಉಲ್ಲೇಖಿಸುತ್ತದೆ.

ದಾನವ ರಾಜ ಘಟಕಾಸುರನ ಕೊನೆಯ ಪುತ್ರನ ಅಳಿವಿನ ನಂತರ ಆತ ಪ್ರಾಗ್ಜೋತಿಷಪುರ(ಆಧುನಿಕ ಅಸೋಮ್)ರಾಜ್ಯವನ್ನು ಸ್ಥಾಪಿಸಿದನು.

ನರಕನನ್ನು ವಿಷ್ಣು ಸಂಹಾರ ಮಾಡಿದ್ದನು.

ಬ್ರಹ್ಮಪುತ್ರ ನದಿ ಭಾರತದ ಅತಿ ಉದ್ದದ ನದಿಯಾಗಿದೆ. ಇದು ಹಿಮಾಲಯದಲ್ಲಿ ಹುಟ್ಟಿ ಸುದೀರ್ಘ ದೂರ ಪ್ರಯಾಣಿಸಿ ಬಂಗಳ ಕೊಲ್ಲಿಯನ್ನು ಸೇರುತ್ತದೆ. ಈ ನದಿದಂಡೆಯಲ್ಲಿ ಬರುವ ಪ್ರಮುಖ ಪ್ರಾಂತ್ಯಗಳು ಅಸೋಮ್, ಕಾಮರೂಪ ಹಾಗೂ ಮಣಿಪುರ.

ಅಸೋಮ್ ಎನ್ನುವುದು ಇತ್ತೀಚಿನ ಹೆಸರಾಗಿದ್ದು ಕಾಮರೂಪಾ ಮತ್ತು ಮಣಿಪುರಗಳು ಸಾಕಷ್ಟು ಪ್ರಾಚೀನ ಹೆಸರುಗಳಾಗಿದೆ, ಈ ಎರಡೂ ಹೆಸರುಗಳು ಮಹಾಭಾರತದಲ್ಲಿ ಉಲ್ಲೇಖಿಸಲ್ಪಟ್ಟಿದೆ,

ಶ್ರೀರಾಮನ ಪುತ್ರರಾದ ಲವ ಹಾಗೂ ಕುಶಮಣಿಪುರದ (ಆಧುನಿಕ ಮಣಿಪುರ) ರಾಜಕುಮಾರಿಯರೊಂದಿಗೆ ವಿವಾಹವಾಗಿದ್ದಾಗಿ ಆ ಸನ್ನಿವೇಶದಲ್ಲಿ ಮಣಿಪುರ ರಾಮಾಯಣದಲ್ಲಿಯೂ ಉಲ್ಲೇಖವಾಗಿದೆ.

ಬ್ರಹ್ಮಪುತ್ರ ನದಿಯನ್ನು ‘ಲೌಹಿತ್ಯ’ ಹೆಸರಿನಲ್ಲಿ ವಿವರಿಸಲಾಗಿದೆ, ಏಕೆಂದರೆ ಇದು ಲೋಹಿತಾ ಎಂಬ ಸರೋವರದಿಂದ ಹುಟ್ಟಿದೆ!

ಕಾಮರೂಪನನ್ನು ಹಿಂದೆ ಪ್ರಾಗ್ಜೋತಿಷಪುರ ಎಂದು ಕರೆಯಲಾಗುತ್ತಿತ್ತು. ಇದು ಭಾರತದ ಪೂರ್ವ ಭಾಗದಲ್ಲಿನ ಒಂದು ಪ್ರದೇಶವಾಗಿತ್ತು ಮತ್ತು ಸಮುದ್ರ ಮಟ್ಟಕ್ಕಿಂತ ಸಾಕಷ್ಟು ಎತ್ತರದಲ್ಲಿದೆ ಎನ್ನುವುದನ್ನು ಸೂಚಿಸಿದೆ. ಪ್ರಾಗ್ (ಪ್ರಾಕ್) ಎಂದರೆ ಪೂರ್ವ. ಜ್ಯೋತಿಶ್ ಎಂದರೆ ನಕ್ಷತ್ರಗಳಿಗೆ ಸಂಬಂಧಿಸಿದ ಹೆಸರು ಹಾಗಾಗಿ ಈ ಹೆಸರಾಗಿದೆ.

ಪ್ರಾಗ್ಜೋತಿಷಪುರ ನರಕಾಸುರ ಹಾಗೂ ಅವನ ಮಗ ಭಗದತ್ತರಿಂದ ಪ್ರಸಿದ್ಧವಾಗಿತ್ತು. ಇಬ್ಬರೂ ತುಂಬಾ ಧೈರ್ಯಶಾಲಿಗಳಾಗಿದ್ದರು. ಭಗದತ್ತಮಹಾಭಾರತ ಯುದ್ಧದಲ್ಲಿ ಕೌರವರ ಪಡೆಯಲ್ಲಿದ್ದ.

ಹರಿವಂಶ ಭಾಗ 1, ಅಧ್ಯಾಯ 63, ಕೃಷ್ಣನು ನರಕಾಸುರನನ್ನು ಕೊಂದನೆಂದು ಹೇಳುತ್ತದೆ. ಶ್ರೀಮದ್ ಭಾಗವತ ಇದೇ ಕಥೆಯನ್ನು ಸ್ಕಂಧ 10, ಅಧ್ಯಾಯ 59 ರಲ್ಲಿ ನಿರೂಪಿಸುತ್ತದೆ.ಅಲ್ಲಿ ನರಕಾಸುರನನ್ನು ಭೌಮಾಸುರ ಎಂದು ಹೆಸರಿಸಲಾಗಿದೆ, ಏಕೆಂದರೆ ಅವನು ಭೂದೇವಿಯ ಪುತ್ರ! ಅಲ್ಲದೆ ಅವನು ಅಸುರನೇ ಆಗಿದ್ದರೂ ಸಹ ಮಹಿಳೆಯರ ಬಗ್ಗೆ ಗೌರವವಿದ್ದವನಾಗಿದ್ದ. ಅವನು ಹದಿನಾರು ಸಾವಿರ ಮತ್ತು ನೂರು ಹುಡುಗಿಯರನ್ನು ಸೆರೆಹಿಡಿದನು, ಆದರೆ ಎಂದಿಗೂ ಅವರ ಮೇಲೆ ಅತ್ಯಾಚಾರ ಮಾಡಲಿಲ್ಲ!! ಇದು ಅವನ ಸಂಸ್ಕೃತಿಯ ಹಿನ್ನೆಲೆಯನ್ನು ಹೇಳುತ್ತದೆ. ಧೈರ್ಯದಿಂದ ಅವನು ಪ್ರಪಂಚದಾದ್ಯಂತದ ಅನೇಕ ಅಮೂಲ್ಯ ರತ್ನಗಳನ್ನು ಮತ್ತು ದುಬಾರಿ ವಸ್ತುಗಳನ್ನು ಸಂಗ್ರಹಿಸಿದ್ದರು. ಹೀಗೆ ಅವನು ಪ್ರಪಂಚದ ಚಕ್ರವರ್ತಿಯಾಗಿದ್ದ.  ಆತ ದೇವತೆಗಳನ್ನೂ ಸೋಲಿಸಿದ ಮತ್ತು ಅವರ ತಾಯಿ ಅದಿತಿಯ ಕಿವಿಯೋಲೆಗಳನ್ನು ತೆಗೆದುಕೊಂಡ. ಆ ದೋಷಕ್ಕಾಗಿ, ಕೃಷ್ಣನು ಅವನನ್ನು ಯುದ್ಧದಲ್ಲಿ ಕೊಂದನು. ನಂತರ ಕೃಷ್ಣ ‘ಪತಿ’ ಅಂದರೆ ಆ 16100 ಮಹಿಳೆಯರ ರಕ್ಷಕನಾದ!

ಮತ್ತೊಂದು ಆವೃತ್ತಿಯಲ್ಲಿ, ಕೃಷ್ಣನು ನರಕಾಸುರನೊಂದಿಗಿನ ಯುದ್ಧದ ಸಮಯದಲ್ಲಿ ಮೂರ್ಛೆಹೋದನೆಂದು ಮತ್ತು ಕೃಷ್ಣನ ಹೆಂಡತಿ ಸತ್ಯಭಾಮೆ  ನರಕಾಸುರನೊಂದಿಗೆ ಯುದ್ಧವನ್ನು ಮುಂದುವರಿಸಿದಳೆಂದಿದೆ. 

ಮಹಾಭಾರತದಲ್ಲಿ ನರಕಾಸುರನ ಉಲ್ಲೇಖ

ಮಹಾಭಾರತ, ವನ ಪರ್ವ, ಅಧ್ಯಾಯ 142, ನರಕಾಸುರನನ್ನು ವಿಷ್ಣುವಿನಿಂದ ಕೊಲ್ಲಲಾಯಿತು ಎಂದಿದೆ. ಅಲ್ಲಿ ಕೃಷ್ಣ ನರಕಾಸುರನನ್ನು ಕೊಂದನೆಂದು ಹೇಳಿಲ್ಲ!ಕೈಲಾಸ ಮತ್ತು ಗಂಧಮಾನ ಪರ್ವತಗಳನ್ನು ಏರಲು ಪಾಂಡವರು ಈಗಿನ ಅಸೋಮ್ ಪ್ರದೇಶವನ್ನು ಪ್ರವೇಶಿಸಿದಾಗ ಲೋಮಾಶ ಋಷಿ ಯುಧಿಷ್ಠಿರನಿಗೆ ಈ ಮಾಹಿತಿ ನೀಡಿದ್ದ. ಲೋಮಾಶ ನರಕಾಸುರನ ಎಲುಬಿನ ಅಸ್ಥಿಪಂಜರದ ರಾಶಿಯನ್ನು ತೋರಿಸಿದ. ಕುಬೇರ ಆ ಭೂಮಿಯ ಆಡಳಿತ ಅಧಿಕಾರ ಹೊಂದಿದ್ದಾಗಿಯೂ ಅವನು ಹೇಳಿದ. 

ಭೀಮಸೇನನು ಹನುಮನನ್ನು ಭೇಟಿಯಾದಾಗ ಪರಿಮಳಯುಕ್ತ ಚಿನ್ನದ ಕಮಲವನ್ನು ಪಡೆಯಲು ಈ ಪ್ರದೇಶವನ್ನು ಪ್ರವೇಶಿಸಿದನು. ನಂತರ ಭೀಮನು ಕುಬೇರನನ್ನು ಸೋಲಿಸಿದನು, ಮತ್ತು ಅನೇಕ ಕಮಲಗಳನ್ನು ತೆಗೆದುಕೊಂಡನು. ಅಂದರೆ ನರಕಾಸುರ ಕ್ರಿ.ಪೂ 3100 ರ ಮಹಾಭಾರತ ಯುಗಕ್ಕಿಂತಲೂ ಹಿಂದೆ ಜೀವಿಸಿದ್ದವನು!

ಭಗದತ್ತ ನರಕನ ಪುತ್ರನಲ್ಲ ಅವನ ವಂಶಜ

ಭಗದತ್ತ ನರಕಾಸುರನ ಮಗನಲ್ಲ ಆದರೆ ಆತನ ವಂಶದವನಾಗಿದ್ದಿರಬೇಕು. 

ಮಹಾಭಾರತ ಮಹಾಕಾವ್ಯದ ವನ ಪರ್ವ ಎ .142 ರಲ್ಲಿ ಹೇಳುತ್ತದೆ, ನರಕನು ಇಂದ್ರಪದವಿಯನ್ನು ಹೊಂದಲು ಒಂದು ಸಾವಿರ ವರ್ಷಗಳ ಕಾಲ ತಪಸ್ಯವನ್ನು ಮಾಡಿದನು, ಆದರೆ ಕೃಷ್ಣನು ಅವನನ್ನು ಕೊಂದನು.

ಕೃಷ್ಣನು ನರಕನನ್ನು ಕೊಂದು ಅದಿತಿಯ ಕಿವಿಯೋಲೆಗಳನ್ನು ಮರಳಿ ತಂದನು ಎಂದು ಉದೋಗ ಪರ್ವ 48 ಹೇಳುತ್ತದೆ. ನರಕನನ್ನು ಕೊಂದು ಕೃಷ್ಣ ಹದಿನಾರು ಸಾವಿರದ ನೂರು ಹುಡುಗಿಯರನ್ನು ಬಿಡುಗಡೆ ಮಾಡಿದ್ದಾಗಿ ಉದ್ಯೋಗ ಪರ್ವ 130 ಹೇಳುತ್ತದೆ. ತಾಯಿಯ ಕೋರಿಕೆಯ ಮೇರೆಗೆ ಕೃಷ್ಣನು ನರಕನಿಗೆ ವೈಷ್ಣವ್ಯಾಸ್ತ್ರವನ್ನು ಕೊಟ್ಟನು ಎಂದು ದ್ರೋಣ ಪರ್ವ 28 ಹೇಳುತ್ತದೆ, ನರಕನ ಮರಣದ ನಂತರ ಅಸ್ತ್ರ ಭಗದತ್ತನ ಕೈಸೇರಿತ್ತು.  ಈ ಎಲ್ಲ ವ್ಯತ್ಯಾಸಗಳು ನರಕ ಅಥವಾ ನರಕಾಸುರ ಮಹಾಭಾರತ ಕಾಲಕ್ಕಿಂತ ಬಹಳ ಪ್ರಾಚೀನ ಕಾಲದವನೆಂದು ಸೂಚಿಸುತ್ತದೆ.

ರಾಮಾಯಣದಲ್ಲಿ ನರಕಾಸುರ ಹಾಗೂ ಪ್ರಾಗ್ಜೋತಿಷಪುರ ಮತ್ತು ಮಣಿಪುರ

ವಾಲ್ಮೀಕಿ ರಾಮಾಯಣವು ಮಹಾಭಾರತಕ್ಕಿಂತ ಮೊದಲು ರಚಿಸಲ್ಪಟ್ಟಿದೆ. ಇದರಲ್ಲಿ ಕಿಷ್ಕಿಂದಾ ಕಾಂಡ ಎಸ್ .42 ರಲ್ಲಿ ಪ್ರಾಗ್ಜೋತಿಷಪುರವನ್ನು ಉಲ್ಲೇಖಿಸಿದೆ. , ನರಕನ ಪ್ರಾಗ್ಜೋತಿಷಪುರದಲ್ಲಿ ಸೀತೆಯನ್ನು ಹುಡುಕಲು ಸುಗ್ರೀವ ವಾನರರಿಗೆ ಹೇಳಿದ್ದಾನೆ. ಪ್ರಾಗ್ಜೋತಿಷಪುರದ ಗುರುತನ್ನು ಹುಡುಕಲು ಅದು ನರಕಾಸುರನಿಗೆ ಸೇರಿದ್ದೆಂದು ಉಲ್ಲೇಖಿಸಲಾಗಿದೆ. ಆಗ ನರಕ ಜೀವಂತವಾಗಿದ್ದನೆಂದು ಇದರ ಅರ್ಥವಲ್ಲ, ಏಕೆಂದರೆ ಯುದ್ಧಕಾಂಡ ಎಸ್ .69 / 7 ರಲ್ಲಿ, ನರಕನ ಸಾವು ರಾವಣನ ಮಾತಿನಲ್ಲಿ ವರ್ಣಿತವಾಗಿದೆ. "ಶಂಬರನು ಇಂದ್ರನ ಕೈಯಲ್ಲಿ ಮರಣಹೊಂದಿದಂತೆ, ನರಕನು ವಿಷ್ಣುವಿನ ಕೈಯಲ್ಲಿ ಮರಣಹೊಂದಿದಂತೆ ರಾಮನನ್ನು ನಾನು (ರಾವಣ) ಕೊಲ್ಲುತ್ತೇನೆ"

ಈ ನರಕವನ್ನು ಸಿಂಹಿಕಾ (ಹಿರಣ್ಯಕಶಿಪು ಸಹೋದರಿ) ಮತ್ತು ವಿಪ್ರಚಿಟ್ಟಿಯ ಸಂಯೋಗದಿಂದ ಜನಿಸಿದವನೆನ್ನಲಾಗಿದೆ. . ಅವನ ಆರು ಸೋದರರು ವಾತಾಪಿ, ನಮೂಚಿ, ಇಲ್ವಲ, ಶ್ರೀಮಾರ, ಅಂಧಕ ಹಾಗೂ ಕಲನಾಭ.

ಹರಿವಂಶ 63/64 ಹೇಳಿದಂತೆ  ಭೌಮ ಎಂದರೆ ನರಕ, ಏಕೆಂದರೆ ಅವನು ಭೂದೇವಿಯ ಪ್ಪುತ್ರ. ಆದರೆ ಅವನ ತಂದೆ ಯಾರೆಂದು ಉಲ್ಲೇಖಿಸಲಾಗಿಲ್ಲ.

ವಿಷ್ಣು ಪುರಾಣ, ಭಾಗ 5, ಎ .29 / 23-24,ವಿಷ್ಣುವಿನ ವರಾಹ ಅವತಾರ ನರಕನ ತಂದೆ ಎಂದು ಹೇಳುತ್ತದೆ. ಶ್ರೀಮದ್ ಭಾಗವತ (59) ಕೂಡ ಇದೇ ವಿಷಯವನ್ನು ಹೇಳುತ್ತದೆ,

ಹರ್ಷ ಚರಿತ್ರದಲ್ಲಿ ಬಾಣಭಟ್ಟನು ಭಗದತ್ತನು ನರಕನ ವಂಶಸ್ಥನೇ ಹೊರತು ಮಗನಲ್ಲ ಎಂದು ಸೂಚಿಸಿದ್ದಾನೆ. 

ಕ್ರಿ.ಶ 7 ರಿಂದ 12 ನೇ ಶತಮಾನದ ಕಾಮರೂಪಾದ ಆರಂಭಿಕ ಹಿಂದೂ ರಾಜರ ತಾಮ್ರ ಫಲಕಗಳು, ನರಕನನ್ನು ವಿಷ್ಣುವಿನ ಮಗ ಮತ್ತು ಭಗದತ್ತನ ತಂದೆ ಎಂದು ಹೇಳಿವೆ. ಕ್ರಿ.ಶ 7 ನೇ ಶತಮಾನದ ಭಾಸ್ಕರ ವರ್ಮ ಹೊರತುಪಡಿಸಿ, ಎಲ್ಲಾ ರಾಜರು ಶಲಸ್ತಂಭ ಮತ್ತು ಪಾಲ ರಾಜವಂಶವು ನರಕಾಸುರ ತಮ್ಮ ಪೂರ್ವಜನೆಂದು ಹೇಳಿದ್ದಾರೆ.

Saturday, November 07, 2020

ರಾಜ್ಯೋತ್ಸವ ವಿಶೇಷ: ತಾಯಿ ಭಾರತಿಗಾಗಿ ಪ್ರಾಣಪಣಕ್ಕಿಟ್ಟ ಕೆಚ್ಚೆದೆಯ ಕರುನಾಡ ಕಲಿಗಳು!!

ಕರ್ನಾಟಕ ರಾಜ್ಯೋತ್ಸವ ಆಚರಣೆ ಹಿನ್ನೆಲೆ ನವೆಂಬರ್ ತಿಂಗಳನ್ನು ಕನ್ನಡ ಮಾಸ ಎಂದು ಆಚರಿಸಿ ಸಂಭ್ರಮಿಸುವುದು ವಾಡಿಕೆ. ಈ ಹಿನ್ನೆಲೆ ಭಾರತೀಯ ಸೇನಾಪಡೆಗಳಲ್ಲಿ ಸೇವೆ ಸಲ್ಲಿಸಿ ದೇಶರಕ್ಷಣೆಗಾಗಿ ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿದ ಕೆಲ ಮಹಾನ್ ಕನ್ನಡಿಗರನ್ನು ಪರಿಚಯಿಸುವ ಚಿಕ್ಕ ಪ್ರಯತ್ನವಿದು-

ಸ್ಕ್ವಾಡ್ರನ್ ಲೀಡರ್ ಅಜ್ಜಮದ ಬೊಪ್ಪಯ್ಯ ದೇವಯ್ಯ
ಕೊಡಗಿನ ವೀರ ಸ್ಕ್ವಾಡ್ರನ್ ಲೀಡರ್ ಅಜ್ಜಮದ ಬೊಪ್ಪಯ್ಯ ದೇವಯ್ಯ ಮರಣೋತ್ತರವಾಗಿ ಮಹಾ ವೀರ್ ಚಕ್ರ(ಎಂವಿಸಿ) ಪ್ರಶಸ್ತಿ ಪಡೆದ ಏಕೈಕ ಭಾರತೀಯ ವಾಯುಪಡೆಯ ಅಧಿಕಾರಿ. 'ವಿಂಗ್ಸ್ ಆಫ್ ಫೈರ್' ಎಂದು ಕರೆಸಿಕೊಳ್ಳುತ್ತಿದ್ದ ಇವರು, 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ತೋರಿದ ಅಪ್ರತಿಮ ಶೌರ್ಯಕ್ಕೆ 1988ರಲ್ಲಿ ಮರಣೋತ್ತರವಾಗಿ ಎಂವಿಸಿ ನೀಡಲಾಯಿತು
ಮಹಾವೀರ ಚಕ್ರ ಯುದ್ಧ ಕಾಲದ ಶೌರ್ಯ ಪುರಸ್ಕಾರದಲ್ಲಿ ಎರಡನೇ ಅತ್ಯುನ್ನತ ಪ್ರಶಸ್ತಿಯಾಗಿದೆ. . 1965 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ, ದೇವಯ್ಯಅವರು ಶತ್ರು ವಿಮಾನ್ ಮೇಲೆ ದಾಳಿ ಮಾಡಿದ್ದ ವೇಳೆ ನಡೆದ ಸ್ಟ್ರೈಕ್ ಮಿಷನ್ ನ ಬಾಗವಾಗಿದ್ದರು. ಅವರು ಶತ್ರುಗಳ ವಿಮಾನ ಹೊಡೆದುರುಳಿಸಿದ್ದರು, ಆ ವೇಳೆ ಅವರಿದ್ದ ವಿಮಾನಕ್ಕೂ ಹಾನಿಯಾಗಿತ್ತು.ಜತೆಗೆ ಅವರು ಸಹ ನಾಪತ್ತೆಯಾಗಿದ್ದರು. ಬಹುಶಃ ಅವರು ಪಾಕಿಸ್ತಾನದ ಭಾಗದಲ್ಲಿ ಬಿದ್ದು ಸಾವನ್ನಪ್ಪಿದ್ದರು. 23 ವರ್ಷಗಳ ನಂತರ, 1988 ರಲ್ಲಿ, 1965ರ ಈ "ಹೀರೋ"ಗೆ ಮರಣೋತ್ತರವಾಗಿ ಮವೀರಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದೇವಯ್ಯ ಅವರು ಡಿಸೆಂಬರ್ 24, 1932 ರಂದು ಕರ್ನಾಟಕದ ಕೊಡಗಿನಲ್ಲಿ ಜನಿಸಿದರು. ಅವರು ಡಾ. ಬೋಪಯ್ಯ ಅವರ ಮಗ. 1954 ರಲ್ಲಿ ಅವರನ್ನು ಭಾರತೀಯ ವಾಯುಪಡೆಗೆ ಪೈಲಟ್ ಆಗಿ ನಿಯೋಜಿಸಲಾಯಿತು 1965 ರ ಯುದ್ಧ ಪ್ರಾರಂಭವಾದಾಗ, ಅವರು ವಾಯುಪಡೆಯ ಫ್ಲೈಯಿಂಗ್ ಕಾಲೇಜಿನಲ್ಲಿ ಬೋಧಕರಾಗಿದ್ದರು. ಅವರನ್ನು ನಂ .1 "ಟೈಗರ್ಸ್" ಸ್ಕ್ವಾಡ್ರನ್‌ಗೆ ನೇಮಿಸಲಾಯಿತು. ಈ ವೇಳೆ ಅವರು  Mystere IVa ಫೈಟರ್ ಬಾಂಬರ್ ಆಗಿದ್ದರು.
ಹಿರಿಯ ವೈಮಾನಿಕ ಕ್ಷೇತ್ರದ ಬೋಧಕರಾಗಿ, ಸ್ಕ್ವಾಡ್ರನ್ ಲೀಡರ್ ದೇವಯ್ಯ ಅವರು ಏರ್ಕ್ರಾಫ್ಟ್ ಸ್ಟ್ರೈಕ್ಕಾರ್ಯಾಚರಣೆಯ ಭಾಗವಾಗಿದ್ದರು, ಅದು ಪಾಕಿಸ್ತಾನದ ಸರ್ಗೋಧಾ ವಾಯುನೆಲೆಯತ್ತ ಸಾಗಿತ್ತು.. ಮೊದಲ 12 ವಿಮಾನಗಳಲ್ಲಿ ಒಂದನ್ನು ಕೈಬಿಟ್ಟರೆ ನಿಜವಾಗಿ ಸ್ಟ್ಯಾಂಡ್‌ಬೈ ಆಗಿದ್ದವರು ದೇವಯ್ಯ ಮಾತ್ರ. ಈ ವೇಳೆ . ಪಾಕಿಸ್ತಾನದ ಪೈಲಟ್  ಹಾರಿಸಿದ ಪಿಎಎಫ್ ಎಫ್ -104 ಸ್ಟಾರ್‌ಫೈಟರ್‌ನಿಂದ ದೇವಯ್ಯ ಯಶಸ್ವಿಯಾಗಿ ಪಾರಾದರು. ಆದರೆ ವೇಗದ ವಿಮಾನವು ಅವರ ವಿಮಾನವನ್ನು ಹಾನಿಗೊಳಿಸಿತ್ತು.ಆದರೂ ದೇವಯ್ಯ ಸ್ಟಾರ್‌ಫೈಟರ್ ಮೇಲೆ ದಾಳಿ ಂಆಡಿ ಹೊಡೆದುರುಳಿಸಿದ್ದರು ಆದರೆ ಈ ದಾಳಿಯ ವೇಳೆ ದೇವಯ್ಯನವರಿಗೇನಾಗಿತ್ತು ತಿಳೀಯಲಿಲ್ಲ, ಬಹುಶಃ ದೇವಯ್ಯ ಪಾಕಿಸ್ತಾನ ಭಾಗದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ಕೆ.ಎಂ.ಕಾರಿಯಪ್ಪ
ಫೀಲ್ಡ್ ಮಾರ್ಷಲ್ ಕೊಡಂದೆರ ಮಾದಪ್ಪ ಕಾರಿಯಪ್ಪ ನಾಡಿನ ಹೆಮ್ಮೆಯ ಕೊಡಗಿನ ವೀರ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ (ಕೊಡಂದೆರ ಮಾದಪ್ಪ ಕಾರಿಯಪ್ಪ)! ಭಾರತದ ಸೇನೆಯ ಪ್ರಥಮ ದಂಡನಾಯಕರಾಗಿದ್ದರು ಮತ್ತು ಫೀಲ್ಡ್ ಮಾರ್ಷಲ್ (ಮಹಾದಂಡನಾಯಕ) ಪದವಿಯನ್ನು ಪಡೆದ ಮೊದಲಿಗರು!
ಕೊಡಂದೆರ ಮಾದಪ್ಪ ಕಾರಿಯಪ್ಪ ೨೮ನೆಯ ಜನವರಿ, ೧೮೯೯ರಂದು ಕೊಡಗಿನ ಶನಿವಾರಸಂತೆಯಲ್ಲಿ ಜನಿಸಿದರು. (ಆದರೆ ಸೈನ್ಯದ ದಾಖಲೆಗಳ ಪ್ರಕಾರ ಅವರು ಹುಟ್ಟಿದ ವರ್ಷ ೧೯೦೦ ಎಂದಿದೆ.)[೪].ಇವರು ಕೊಡವ ಜನಾಂಗದವರಾಗಿದ್ದು, ಕೊಡಂದೆರ ಮನೆತನಕ್ಕೆ ಸೇರಿದವರು.
ತಂದೆ ಮಾದಪ್ಪನವರು ಕಂದಾಯ ಇಲಾಖೆ ಯಲ್ಲಿದ್ದರು. ಕಟ್ಟುನಿಟ್ಟಾಗಿ ಶಿಸ್ತನ್ನು ಪಾಲಿಸುವವರು. ತಾಯಿ ಕಾವೇರಿ. ಕಾರ್ಯಪ್ಪನವರು ತಮ್ಮ ಕೊನೆಯುಸಿರಿನವರೆಗೂ ಇವರಿಬ್ಬರನ್ನೂ ದೇವರಂತೆ ಪೂಜಿಸಿದರು. ಸಂಬಂಧಿಗಳಿಗೆಲ್ಲ 'ಚಿಮ್ಮ'ನಾಗಿದ್ದ ಕಾರಿಯಪ್ಪನವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಡಿಕೇರಿಯ ಕೇಂದ್ರಿಯ ಪ್ರೌಢ ಶಾಲೆಯಲ್ಲಾಯಿತು. ನಂತರ ಮದ್ರಾಸಿನ ಪ್ರೆಸಿಡೆನ್ಸಿ ಕಾಲೆಜಿನಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದರು.
ಕಾಲೆಜಿನಲ್ಲಿ ಪುಸ್ತಕಗಳು ಮತ್ತು ಖ್ಯಾತ ಶಿಕ್ಷಣ ತಜ್ಞರ ನೇತೃತ್ವದಲ್ಲಿ ನಡೆಯುತ್ತಿದ್ದ ನಾಟಕಗಳು ಕಾರಿಯಪ್ಪನವರನ್ನು ಒಂದೇ ರೀತಿಯಿಂದ ಆಕರ್ಷಿಸಿದವು. ಇವರು ಸಕ್ರಿಯ ಕ್ರೀಡಾಪಟುವಾಗಿದ್ದು, ಹಾಕಿ ಮತ್ತು ಟೆನ್ನಿಸ್‌ನಂಥ ಆಟಗಳನ್ನು ಹುರುಪಿನಿಂದ ಮತ್ತು ಜಾಣತನದಿಂದ ಆಡುತ್ತಿದ್ದರು. ಇದರ ಜೊತೆಗೆ ಸಂಗೀತವನ್ನು ಮೆಚ್ಚುತ್ತಿದ್ದರು ಮತ್ತು ಕೈ ಚಳಕ ತೋರಿಸುವ ಜಾದುವಿನ ಬಗ್ಗೆಯೂ ಇವರಿಗೆ ಒಲವಿತ್ತು.
೧೯೧೮ರಲ್ಲಿ ಮೊದಲನೆಯ ವಿಶ್ವಯುದ್ಧ ಮುಗಿದಾಗ ಭಾರತದ ರಾಜಕೀಯ ನಾಯಕರು ಭಾರತೀಯರನ್ನೂ ರಾಜನ ಸೈನ್ಯದಲ್ಲಿ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸತೊಡಗಿದರು. ಇದರ ನಂತರ ನಡೆದ ಕಠಿಣ ಪರೀಕ್ಷೆಗಳ ನಂತರ ಆಯ್ಕೆಯಾದ ಕೆಲವೇ ಭಾಗ್ಯಶಾಲಿಗಳಲ್ಲಿ ಕಾರಿಯಪ್ಪನವರೂ ಕೂಡ ಒಬ್ಬರಾಗಿದ್ದರು, ನಂತರ ಸೇನೆಯ ನಿಯುಕ್ತಿಯ ಮುಂಚಿನ ಕಠಿಣತರವಾದ ತರಬೇತಿಯನ್ನು ಪಡೆದರು.
ಇಂದೂರಿನ ಡ್ಯಾಲಿ ಕೆಡೆಟ್ ಕಾಲೇಜ್‌(The Daly College)ನಲ್ಲಿ ಬ್ರಿಟಿಶ್ ರಾಜನ ಸೈನ್ಯಕ್ಕೆ ನಿಯುಕ್ತರಾದ ಭಾರತೀಯ ಅಧಿಕಾರಿಗಳ [KCIOs (King's Commissioned Indian Officers)] ಮೊದಲ ವರ್ಗಕ್ಕೆ ಸೇರಿಕೊಂಡರು. ನಂತರ ೧ನೇ ಡಿಸೆಂಬರ್ ೧೯೧೯ರಲ್ಲಿ ಮುಂಬಯಿಯಲ್ಲಿದ್ದ ೨ನೇ ಬೆಟ್ಯಾಲಿಯನ್ ೮೮ನೇ ಕಾರ್ನಾಟಿಕ್ (ಕೊಡಗು) ಪದಾತಿ ದಳಕ್ಕೆ ನಿಯುಕ್ತರಾದರು.
ಮೂರು ತಿಂಗಳ ನಂತರ ೨/೧೨೫ನೇಪಿಯರ್ ರೈಫ್‌ಲ್ಸ್ (ಸ್ವಾತಂತ್ರ್ಯಾನಂತರ ೫ನೇ ರಜಪುತಾನ ರೈಫ್‌ಲ್ಸ್)ಗೆ ವರ್ಗಾವಣೆಯಾಗಿ, ಮೆಸೊಪೊಟಾಮಿಯಾ (ಈಗಿನ ಇರಾಕ್)ದಲ್ಲಿ ನೇಮಕಗೊಂಡರು. ಅಲ್ಲಿ ಇದ್ದ ಎರಡು ವರ್ಷಗಳಲ್ಲಿ ಬಂಡುಗೋರರನ್ನು ಹತೋಟಿಗೆ ತರುವುದರಲ್ಲಿ ಸಫಲರಾದರು.
ತದ ನಂತರ ಭಾರತಕ್ಕೆ ಮರಳಿ ಬಂದು, ವಾಯವ್ಯ ಗಡಿ ಪ್ರದೇಶ(North-west Frontier Province)ದ ಅಫಘಾನಿಸ್ಥಾನದ ಸರಹದ್ದಿನ ವಜೀರಿಸ್ತಾನದಲ್ಲಿದ್ದ (ಈಗ ಪಾಕಿಸ್ತಾನದಲ್ಲಿದೆ) ವೇಲ್ಸ್ ರಾಜಕುಮಾರನ ಸ್ವಂತ ೭ನೇ ಡೊಗ್ರಾ ದಳದಲ್ಲಿ ಸೈನ್ಯದ ಸಕ್ರಿಯ ಸೇವೆಯನ್ನು ಮುಂದುವರೆಸಿದರು.
ಮರುಭೂಮಿಯಂಥ ವಿಪರೀತ ಹವಾಮಾನವಿರುವ ಆ ಪ್ರದೇಶದಲ್ಲಿ ಲೆಫ್ಟಿನೆಂಟ್ ಕಾರ್ಯಪ್ಪನವರು, ದೂರದರ್ಶಕ ಯಂತ್ರವಿಲ್ಲದಿರುವ ಕೋವಿ(non-telescopic rifles)ಗಳಿಂದ ಶತ್ರುವಿನ ಎರಡೂ ಕಣ್ಣುಗಳ ಮಧ್ಯಕ್ಕೆ ಗುಂಡು ಹೊಡೆಯುವ ನೈಪುಣ್ಯವಿರುವ ಪಠಾಣರ ವಿರುದ್ಧ ಹೋರಾಡಿ ಜಯಶೀಲರಾದರು. ಅತೀವ ಪ್ರತಿಕೂಲ ಪರಿಸ್ಥಿತಿಗಳಲ್ಲಿ, ಅನಾಗರಿಕ ಬಂಡುಕೋರರ ಗೆರಿಲ್ಲಾ ಆಕ್ರಮಣಗಳನ್ನು ಎದುರಿಸಿ ಕಾರ್ಯಪ್ಪನವರು ಗಳಿಸಿದ ವಿಜಯಶ್ರೀ ಬ್ರಿಟಿಶ್ ಸೈನ್ಯದ ಮೇಲಧಿಕಾರಿಗಳ ಮೆಚ್ಚುಗೆಯನ್ನು ಪಡೆಯಿತು.
ಇದು ಸೈನ್ಯದಲ್ಲಿ ಅವರ ಏಳಿಗೆಗೆ ಪ್ರೋತ್ಸಾಹದಾಯಕವಾಯಿತು. ಅಲ್ಲಿಂದ ಇವರನ್ನು ೧/೭ನೇ ರಜಪೂತ ರೆಜಿಮೆಂಟ್‌ಗೆ (ವಿಕ್ಟೊರಿಯಾ ರಾಣಿಯ ಸ್ವಂತ ಲಘು ಪದಾತಿದಳಕ್ಕೆ) ವರ್ಗಾಯಿಸಲಾಯಿತು. ಈ ದಳವೇ ಇವರು ಸೈನ್ಯದಿಂದ ನಿವೃತ್ತಿಯಾಗುವವರೆಗೆ ಇವರ ಮೂಲ ನೆಲೆಯಾಯಿತು. ಇರಾಕ್ ಮತ್ತು ವಜೀರಿಸ್ತಾನದಲ್ಲಿ ನಡೆಸಿದ ಸೈನ್ಯ ಕಾರ್ಯಾಚರಣೆಯ ಅನುಭವವು ಇವರ ಮುಂದಿನ ಜೀವನದ ಶೌರ್ಯ-ಸಾಹಸಗಳಿಗೆ ಅಡಿಪಾಯವನ್ನು ರಚಿಸಿತು.
ವಝಿರಿಸ್ತಾನದಲ್ಲಿ ತಮ್ಮ ಸೈನಿಕ ಜೀವನದ ಅನೇಕ ವರ್ಷಗಳನ್ನು ಕಳೆದರು. ೧೯೩೩ರಲ್ಲಿ ಕ್ವೆಟ್ಟಾದಲ್ಲಿದ್ದ ಸಿಬ್ಬಂದಿ ಮಹಾವಿದ್ಯಾಲಯಕ್ಕೆ ತರಬೇತಿ ಪಡೆಯಲು ಸೇರಿದ ಮೊದಲ ಭಾರತೀಯ ಅಧಿಕಾರಿಯಾಗಿದ್ದರು. ಮುಂದೆ ೧೯೪೬ರಲ್ಲಿ ಇವರಿಗೆ ಫ್ರಂಟೀಯರ ಬ್ರಿಗೆಡ್ ಗುಂಪಿನ ಬ್ರಿಗೆಡಿಯರರಾಗಿ ಬಡ್ತಿ ಕೊಡಲಾಯಿತು. ಇದೇ ಅವಧಿಯಲ್ಲಿ ಕರ್ನಲ್ ಅಯೂಬ್ ಖಾನ್ (ಮುಂದೆ ಇವರು ಪಾಕಿಸ್ತಾನದ ಸೈನ್ಯದ ಫೀಲ್ಡ ಮಾರ್ಷಲ್ ಮತ್ತು ೧೯೬೨ರಿಂದ ೧೯೬೯ರವರೆಗೆ ರಾಷ್ಟ್ರಪತಿಯಾಗಿದ್ದರು) ಕಾರ್ಯಪ್ಪನವರ ಅಧೀನ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.
೧೯೪೧-೪೨ರ ಅವಧಿಯಲ್ಲಿ ಕಾರಿಯಪ್ಪನವರು ಇರಾಕ್, ಸಿರಿಯಾ ಮತ್ತು ಇರಾನ್ ದೇಶಗಳಲ್ಲಿ ಮತ್ತು ೧೯೪೩-೪೪ರಲ್ಲಿ ಬರ್ಮಾದಲ್ಲಿ ಸೇವೆ ಸಲ್ಲಿಸಿದರು. ವಝಿರಿಸ್ತಾನದಲ್ಲಿ ತಮ್ಮ ಸೈನಿಕ ಜೀವನದ ಅನೇಕ ವರ್ಷಗಳನ್ನು ಕಳೆದರು. ೧೯೪೨ರಲ್ಲಿ ಒಂದು ತುಕಡಿಯನ್ನು ಇವರ ಸ್ವಾಧೀನಕ್ಕೆ ಒಪ್ಪಿಸಲಾಯಿತು, ಅಂತಹ ಅಧಿಕಾರ ದೊರಕಿದ ಮೊದಲ ಭಾರತೀಯ ಅಧಿಕಾರಿ ಇವರಾಗಿದ್ದರು.
ಸ್ವಲ್ಪ ಸಮಯದ ನಂತರ ಬರ್ಮಾದಿಂದ ಜಪಾನೀಯರನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದ ೨೬ನೆಯ ಡಿವಿಜನ್ನಿನಲ್ಲಿ ಕೆಲಸ ನಿರ್ವಹಿಸುವ ಸ್ವಯಂ ಇಚ್ಛೆ ವ್ಯಕ್ತಪಡಿಸಿ ಆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದಾಗ ಅವರಿಗೆ ಆರ್ಡರ್ ಆಫ್ ಬ್ರಿಟಿಷ್ ಎಂಪೈರ (Order of the British Empire (OBE)) ಪ್ರಶಸ್ತಿಯನ್ನು ೧೯೪೪ರಲ್ಲಿ ಕೊಡಲಾಯಿತು.
೧೯೪೬ರಲ್ಲಿ ಕಾರ್ಯಪ್ಪನವರಿಗೆ ಬ್ರಿಗೇಡಿಯರನ್ನಾಗಿ ಬಡ್ತಿಯನ್ನು ನೀಡಿ, ನಾಲ್ಕನೆಯ ಬಾರಿಗೆ ವಾಯವ್ಯ ಗಡಿ ಪ್ರದೇಶದಲ್ಲಿ ನೇಮಿಸಲಾಯಿತು. ಈ ಬಾರಿಗೆ ಬನ್ನು ಬ್ರಿಗೇಡಿನ ನಾಯಕತ್ವವನ್ನು ಕೊಡಲಾಯಿತು.
೧೯೪೭ರಲ್ಲಿ ಯುನೈಟೆಡ್ ಕಿಂಗಡಮ್‌‌ನ ಕಿಂಬೆರ್ಲಿಯಲ್ಲಿರುವ ಇಂಪೆರಿಯಲ್ ಡಿಫೆನ್ಸ್ ಕಾಲೇಜಿನಲ್ಲಿ ಯುದ್ಧದ ಉನ್ನತ ಮಟ್ಟದ ತಂತ್ರಗಳ ಬಗ್ಗೆ ತರಬೇತಿಯನ್ನು ಪಡೆದರು, ಇಂತಹ ತರಬೇತಿಯನ್ನು ಪಡೆದ ಮೊದಲ ಭಾರತೀಯರು ಕಾರಿಯಪ್ಪನವರು.ಹೃದಯವಿದ್ರಾವಕವಾದ ವಿಭಜನೆಯ ಸಮಯದಲ್ಲಿ ಕಾರಿಯಪ್ಪನವರು ಭಾರತದ ಸೈನ್ಯ ವಿಭಜನೆಯನ್ನು, ಮತ್ತು ಸೈನ್ಯದ ಆಸ್ತಿಯ ವಿಭಜನೆಯನ್ನು ಸಂಯಮತೆಯಿಂದ ಮತ್ತೂ ಎರಡೂ ಪಕ್ಷಗಳಿಗೂ ಒಪ್ಪುವ ರೀತಿಯಲ್ಲಿ ನೆರವೇರಿಸಿದರು. ಇವರು ಈ ನಿರ್ಗಮನದ ಕಾರ್ಯದ ಭಾರತದ ಮುಖ್ಯ ನಿರ್ವಹಣಾಧಿಕಾರಿಯಾಗಿದ್ದರು.
ಸ್ವಾತಂತ್ರ್ಯಾನಂತರ ಕಾರ್ಯಪ್ಪನವರಿಗೆ ಮೇಜರ್ ಜನರಲ್ ಪದವಿಯನ್ನಿತ್ತು ಭಾರತೀಯ ಸೈನ್ಯದ ಉಪದಂಡನಾಯಕರನ್ನಾಗಿ ಮಾಡಲಾಯಿತು. ಬಳಿಕ ಲೆಫ್ಟಿನೆಂಟ್ ಜನರಲ್ ಎಂದು ಪದೋನ್ನತಿ ಮಾಡಿದಾಗ ಇವರು ಪೂರ್ವ ಸೈನ್ಯದ ಕಮಾಂಡರ್(Eastern Army Commander) ಆದರು.
೧೯೪೭ರಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ಪ್ರಾರಂಭವಾದಾಗ ಇವರನ್ನು ಪಶ್ಚಿಮ ಸೈನ್ಯದ ಮುಖ್ಯ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಝಿಲಾ, ದ್ರಾಸ್ ಮತ್ತು ಕಾರ್ಗಿಲನ್ನು ಹಿಂತಿರುಗಿ ಪಡೆಯುವದಕ್ಕೆ ಸೈನ್ಯಕ್ಕೆ ಕಾರ್ಯಪ್ಪನವರು ಮಾರ್ಗದರ್ಶನ ಮಾಡಿದರು. ಅಲ್ಲದೆ, ಲೆಹ್‌ಗೆ ಕಡಿದು ಹೋಗಿದ್ದ ಸಂಪರ್ಕವನ್ನು ಮಾಡಿಕೊಟ್ಟರು.
೧೯೪೯ರ ಜನವರಿ ೧೫ರಂದು ಜನರಲ್ ಆಗಿ ಬಡ್ತಿಯನ್ನು ಪಡೆದ ಕಾರ್ಯಪ್ಪನವರು ಭಾರತೀಯ ಸೈನ್ಯದ ಅತಿ ವರಿಷ್ಠ ನಾಯಕ(Commander-in-Chief)ರಾದರು.
ಭಾರತೀಯ ಸೈನ್ಯದಲ್ಲಿ ಕಾರ್ಯಪ್ಪನವರ ಸೇವೆ ಅಖಂಡವಾಗಿ ೨೯ವರ್ಷಗಳವರೆಗೆ ನಡೆಯಿತು. ೧೯೫೩ನೇ ಇಸವಿಯಲ್ಲಿ ಅವರು ಸೈನ್ಯದಿಂದ ನಿವೃತ್ತರಾದರು. ಆ ಬಳಿಕ ೧೯೫೬ರವರೆಗೆ ಆಸ್ಟ್ರೇಲಿಯಾ ಮತ್ತು ನ್ಯೂ ಜೀಲ್ಯಾಂಡ್‌ ದೇಶಗಳ ಹೈ ಕಮಿಶನರ್ ಆಗಿದ್ದರು. ಅವರು ಬಹಳ ದೇಶಗಳ ಸೈನ್ಯಗಳ ಪುನಾರಚನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದವರು. ಪ್ರಪಂಚವನ್ನೆಲ್ಲಾ ಸುತ್ತಿ ಬಂದ ಅನುಭವಿ. ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಹ್ಯಾರಿ ಟ್ರುಮನ್ ಇವರಿಗೆ 'Order of the Chief Commander of the Legion of Merit' ಬಿರುದನ್ನಿತ್ತರು. ನಮ್ಮ ಭಾರತ ಸರ್ಕಾರ ೧೯೮೬ನೇ ಇಸವಿ ಜನವರಿ ೧೪ರಂದು ಫೀಲ್ಡ್ ಮಾರ್ಶಲ್ ಪದವಿಯನ್ನು ಕೊಟ್ಟಾಗ ಅವರಿಗೆ ೮೭ ವರ್ಷ ಪ್ರಾಯವಾಗಿತ್ತು.
ಕಾರ್ಯಪ್ಪನವರು ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿಗೆ ಬಹಳಷ್ಟು ದುಡಿದರು. ೧೯೬೪ರಲ್ಲಿ ‘ಭಾರತೀಯ ಭೂತಪೂರ್ವ ಸೈನಿಕ ಸಂಘ’ವನ್ನು (Indian Ex-services League) ಜನರಲ್ ತಿಮ್ಮಯ್ಯನವರೊಡನೆ ಸ್ಥಾಪಿಸಿದರು. "ರಕ್ಷಣಾಬಲಗಳ ಸ್ಥೈರ್ಯ ಉಳಿದು ಬರಬೇಕಾದರೆ, ನಿವೃತ್ತ ಯೋಧರ ಸ್ಥೈರ್ಯವನ್ನು ಮರೆಯಬೇಡಿರಿ," ಎಂಬ ಕಾರ್ಯಪ್ಪನವರ ಮಾತು ಎಷ್ಟೊಂದು ಅರ್ಥಗರ್ಭಿತ!
‘ದೇಶಕ್ಕಾಗಿ ತಾನು ಸತ್ತರೆ, ತನ್ನ ಸಂಸಾರವನ್ನು ದೇಶವು ಚೆನ್ನಾಗಿ ನೋಡಿಕೊಳ್ಳುತ್ತದೆ. ತಾನು ನಿವೃತ್ತನಾದ ನಂತರವೂ ಸರ್ಕಾರವು ತನ್ನನ್ನು ಕಡೆಗಣಿಸುವದಿಲ್ಲ’ ಎಂಬ ಭರವಸೆ ಸೈನಿಕನಿಗೆ ಬರಬೇಕು. ಆಸ್ಟ್ರೇಲಿಯಾದಲ್ಲಿ ನಿವೃತ್ತ ಸೈನಿಕರಿಗೆ ಅಲ್ಲಿನ ಸರ್ಕಾರವು ರೂಪಿಸಿದ್ದ ಯಶಸ್ವೀ ಯೋಜನೆಯನ್ನು ನಮ್ಮ ದೇಶವು ಅನುಸರಿಸುವಂತೆ ಕಾರ್ಯಪ್ಪನವರು ಸರ್ಕಾರದ ಮನವೊಲಿಸಲು ಯತ್ನಿಸಿದರು.
ತಮ್ಮ ಸ್ನೇಹಿತರ ನೆರವಿನಿಂದ ಧನಸಂಗ್ರಹಿಸಿದರು. ಪಾಟಿಯಾಲದ ಮಹಾರಾಜರು ದಾನವಿತ್ತ ಅರಮನೆಯನ್ನು ವೃದ್ಧ ಯೋಧರ ನಿವಾಸವನ್ನಾಗಿ ಪರಿವರ್ತಿಸಿದರು. ಸಿಯೆಟ್ ಕಂಪೆನಿಯವರು ಬೆಂಗಳೂರಿನಲ್ಲಿ ‘ಜನರಲ್ ಕಾರ್ಯಪ್ಪ ಭವನ’ವೆಂಬ ದೊಡ್ಡ ಕಟ್ಟಡವನ್ನು ಕಟ್ಟಿಸಿಕೊಟ್ಟರು.
ಸಾರ್ವಜನಿಕ ಸೇವೆಯಿಂದ ನಿವೃತ್ತರಾದ ಮೇಲೆ ಕಾರ್ಯಪ್ಪನವರು ಮಡಿಕೇರಿಯಲ್ಲಿ ತಮ್ಮ ಸ್ವಂತ ಮನೆ ‘ರೋಶನಾರಾ’ದಲ್ಲಿ ಇದ್ದರು. ಆರೋಗ್ಯ ಕಮ್ಮಿಯಾದಾಗ ಚಿಕಿತ್ಸೆಗೆಂದು ಬೆಂಗಳೂರಿನಲ್ಲಿ ಕಮಾಂಡೋ ಆಸ್ಪತ್ರೆಗೆ ಹೋಗುತ್ತಿದ್ದರು. ಕೊನೆಗೆ ಬೆಂಗಳೂರಿನಲ್ಲಿಯೇ ಉಳಿದರು. 1993ನೇ ಇಸವಿ ಮೇ ೧೫ನೇ ದಿನಾಂಕ ಬೆಳಿಗ್ಗೆ ಫೀಲ್ಡ್ ಮಾರ್ಶಲ್ ಕಾರ್ಯಪ್ಪನವರು ಸ್ವರ್ಗಸ್ಥರಾದರು.
ವ್ಯಕ್ತಿತ್ವ
ಮೊದಲ ವಿಶ್ವ ಯುದ್ಧದ ನಂತರದ ದಿನಗಳಲ್ಲಿ ಸೈನ್ಯವನ್ನೂ ಸೇರಿಸಿ, ದೇಶದ ಎಷ್ಟೆಲ್ಲೋ ಸಂಸ್ಥೆಗಳಿಗೆ ಭಾರತೀಯರಿಗೆ ಪ್ರವೇಶವಿರುತ್ತಿರಲಿಲ್ಲ. ಅಂತಹ ಕಡೆಗಳಲೆಲ್ಲಾ ಛಲದಿಂದ ಮತ್ತು ದೃಢ ಪ್ರಯತ್ನದಿಂದ ಕಾರ್ಯಪ್ಪನವರು ಪ್ರವೇಶವನ್ನು ಪಡೆದ ಮೊದಲ ಭಾರತೀಯರಾಗಿದ್ದರು. ಹೀಗೆ ಭಾರತೀಯ ಬ್ರಿಟಿಶ್ ಸೈನ್ಯವನ್ನು ಸೇರಿದ ಬಳಿಕ ಕಾರ್ಯಪ್ಪನವರು ಆಂಗ್ಲ ಸೈನ್ಯಾಧಿಕಾರಿಗಳು ಮತ್ತವರ ಕುಟುಂಬಗಳೊಡನೆಯೂ ಬಹು ಆಪ್ತರಾಗಿದ್ದು, ಆ ವಲಯಗಳಲ್ಲಿ "ಕಿಪ್ಪರ್" (Kipper) ಎಂಬ ಹೆಸರಿನಲ್ಲಿ ಜನಪ್ರಿಯರಾಗಿದ್ದರು.
ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹ್ರೂ, ಅವರ ಸೋದರಿ ವಿಜಯಲಕ್ಷ್ಮಿ ಪಂಡಿತ್ ಹಾಗೂ ಪುತ್ರಿ ಪ್ರಧಾನಿ ಇಂದಿರಾ ಗಾಂಧಿಯವರೂ ಕಾರ್ಯಪ್ಪನವರನ್ನು ಕಿಪ್ಪರ್ ಎಂದೇ ಕರೆಯುವಷ್ಟು ಆತ್ಮೀಯರಾಗಿದ್ದರು. ತಮ್ಮ ಕುಟುಂಬದವರಿಗೆ ಚಿಮ್ಮನಾಗಿದ್ದ ಇವರು ಗೆಳೆಯರಿಗೆ "ಕ್ಯಾರಿ" (Cary) ಆಗಿದ್ದರು. ಅತ್ಯಂತ ಮಾನವೀಯ ಹೃದಯದ ಮತ್ತು ಸರಳತೆಯ ಪ್ರತೀಕವಾಗಿದ್ದ ಇವರು ಕೊಡಗಿನವರಿಗೆ ಪ್ರೀತಿಯ "ಕಾರ್ಯಪ್ಪಜ್ಜ" ಆಗಿದ್ದರು.
ಕಾರ್ಯಪ್ಪನವರು ತಮ್ಮನ್ನು ಸೈನಿಕನೆಂದೇ ಗುರುತಿಸಿಕೊಳ್ಳುತ್ತಿದ್ದರು. ಅವರ ಮನೆಯಲ್ಲಿ ಭಾರತೀಯ ಸೈನಿಕನೊಬ್ಬನ ಸಣ್ಣ ಮೂರ್ತಿಯೊಂದಿತ್ತು. ನಿವೃತ್ತರಾದ ನಂತರವೂ ೧೯೬೫ ಮತ್ತು ೧೯೭೧ರ ಪಾಕಿಸ್ತಾನದ ವಿರುದ್ಧ ಯುದ್ಧವಾದ ಸಮಯದಲ್ಲಿ ಗಡಿ ಪ್ರದೇಶಗಳಿಗೆ ಹೋಗಿ ಸೈನಿಕರೊಂದಿಗೆ ಮಾತುಕತೆ ನಡೆಸಿ,ಅವರ ಮನಃಸ್ಥೈರ್ಯವನ್ನು ಉತ್ತುಂಗಕ್ಕೆ ತರಲು ಸಹಾಯ ಮಾಡಿದರು.
ಕಾರ್ಯಪ್ಪನವರು ಯುದ್ಧ ನಿಪುಣರಾಗಿದ್ದರು. ಹಾಗಿದ್ದರೂ ಶತ್ರುಗಳಲ್ಲೂ ಮಾನವೀಯತೆಯನ್ನು ತೋರಿಸುತ್ತಿದ್ದರು. ೧೯೪೬ರಲ್ಲಿ ಪಠಾಣ್ - ಅಫ್‌ಘನ್ ಬುಡಕಟ್ಟು ಜನಾಂಗದವರ ನಿರಂತರ ಗೆರಿಲ್ಲಾ ದಾಳಿಯು ಬನ್ನು ಎಂಬ ಪ್ರದೇಶಕ್ಕೆ "ಬ್ರಿಟಿಶರ ಶ್ಮಶಾನ" ಎಂಬ ಅನ್ವರ್ಥ ನಾಮ ವನ್ನಿತ್ತಿತ್ತು. ಹಾಜಿ ಮಿರ್ಜಾ ಖಾನ್ ಎಂಬ ಫಕೀರನು ಬ್ರಿಟಿಶ್ ಕಾಫಿರರ ವಿರುದ್ಧ ಜಿಹಾದನ್ನು ಘೋಷಿಸಿದ್ದನು. ಗೆರಿಲ್ಲಾ ದಾಳಿಗೆ ತತ್ತರಿಸಿದ ಭಾರತೀಯ-ಬ್ರಿಟಿಶ್ ಸೈನ್ಯವು ಅಪಾರ ಸಾವು-ನೋವನ್ನುಂಡರೂ ಸೋಲೊಪ್ಪಲಿಲ್ಲ.
ಬ್ರಿಗೆಡಿಯರಾಗಿದ್ದ ಕಾರ್ಯಪ್ಪನವರಿಗೆ ಈ ಯುದ್ಧದ ನೇತೃತ್ವ ದೊರಕಿದಾಗ ಇಬ್ಬಗೆಯ ಸೂತ್ರವನ್ನು ಬಳಸಿದರು. ಹಗಲು-ರಾತ್ರಿಗಳೆರಡರಲ್ಲೂ ಅವರ ಸೈನ್ಯವೂ ಗೆರಿಲ್ಲಾ ದಾಳಿಯಿಂದ ಸೇರಿಗೆ ಸವ್ವಾಸೇರಿನ ಉತ್ತರವೀಯಲಾರಂಭಿಸಿತು. ಜತೆಗೆ ಕಾರ್ಯಪ್ಪನವರು ಮಿರ್ಜಾ ಖಾನನೊಡನೆ ಸಮರಸ ಸಂಬಂಧವನ್ನು ಬೆಳೆಸಿದರು. ಈ ನಡುವೆ ಕಾರ್ಯಪ್ಪನವರಿಗೊಂದು ಸುವರ್ಣಾವಕಾಶ ತಾನಾಗಿಯೇ ಎದುರಾಯಿತು. ಅವಕಾಶಗಳನ್ನೇ ನಿರ್ಮಿಸಿಕೊಳ್ಳುವ ಚಾತುರ್ಯ ಮತ್ತು ನೈಪುಣ್ಯವಿದ್ದ ಅವರು ತಾನಾಗಿಯೇ ಬಂದದನ್ನು ಬಿಟ್ಟಾರೆಯೆ?
ಒಮ್ಮೆ ಅವರಿಗೆ ತಾವು ಹೋಗುತ್ತಿದ್ದ ಮಾರ್ಗದ ಬದಿಯಲ್ಲಿ ಉದ್ದಕ್ಕೂ ಪಠಾಣ ಹೆಂಗುಸರು ನೀರಿನ ಬಿಂದಿಗೆಗಳನ್ನಿರಿಸಿಕೊಂಡು ನಿಂತಿರುವದು ಕಾಣಿಸಿತು. ಏನೆಂದು ವಿಚಾರಿಸಿದಾಗ, ಹತ್ತಾರು ಮೈಲುಗಟ್ಟಲೆ ದೂರದಿಂದ ಆ ಸ್ತ್ರೀಯರು ತಮ್ಮ ಮನೆಗಳಿಗೆ ನೀರು ತರುತ್ತಿದ್ದಾರೆಂದು ಗೊತ್ತಾಯಿತು. ಮನಕರಗಿದ ಕಾರ್ಯಪ್ಪನವರು ತಮ್ಮ ಠಾಣ್ಯಕ್ಕೆ ಮರಳಿ, ತಮ್ಮ ಸೈನಿಕರನ್ನೊಪ್ಪಿಸಿ, ಆ ಬುಡಕಟ್ಟು ಜನರ ಊರಿನ ಸಮೀಪದಲ್ಲೇ ಬಾವಿಯೊಂದನ್ನು ಸಂಜೆಯಾಗುವದರೊಳಗೆ ತೋಡಿಸಿಕೊಟ್ಟರು.
ಕೆಲವೇ ದಿನಗಳಲ್ಲಿ ಆ ಫಕೀರನಿಗೆ ಈ ಸುದ್ಧಿ ಗೊತ್ತಾಗಿ, ತನ್ನ ಸಶಸ್ತ್ರ ಗುಂಪಿನೊಡನೆ ಕಾರ್ಯಪ್ಪನವರ ಬಳಿ ಬಂದು, ಅವರನ್ನು ಗಟ್ಟಿಯಾಗಿ ತಬ್ಬಿಕೊಂಡು, "ಖಲೀಫಾ!" ಎಂದು ಉದ್ಘೋಷಿಸಿದ!
ಯುದ್ಧದ ಸಮಯದಲ್ಲಿ ಮುಂಚೂಣಿಯಲ್ಲಿ ತಾವೂ ಇದ್ದು ಸೈನಿಕರಲ್ಲಿ ಮನಃಸ್ಥೈರ್ಯವನ್ನು ತುಂಬಿಸುತ್ತಿದ್ದರು. ಯುದ್ಧವೆಂದರೆ ಏನೆಂದು ಸೈನಿಕರು ತಿಳಿದಿರುತ್ತಾರೆಯೇ ಹೊರತು ಯುದ್ಧವನ್ನು ನಿರ್ಮಿಸುವ ರಾಜಕಾರಿಣಿಗಳಲ್ಲ, ಎಂದೆನ್ನುತ್ತಿದ್ದರು, ಕಾರ್ಯಪ್ಪನವರು. "ಆಧುನಿಕ ಯುದ್ಧನೀತಿಯಲ್ಲಿ ದೊಡ್ಡ ಸೈನ್ಯಬಲವಲ್ಲ; ಔದ್ಯೋಗಿಕ ಶಕ್ತಿಯ ಬೆಂಬಲ ಮುಖ್ಯವಾದದ್ದು. ಮುಂಚೂಣಿಯಲ್ಲಿ ಸೈನ್ಯ ಇದ್ದಾಗ, ಅದರ ಬೆನ್ನಲ್ಲೇ ಕೈಗಾರಿಕೋದ್ಯಮದ ಆಧಾರ ಅತ್ಯವಶ್ಯ"ಎಂದು ಕಾರ್ಯಪ್ಪನವರ ಪ್ರತಿಪಾದನೆ. "ನಮ್ಮ ಸೈನ್ಯಕ್ಕೆ ಯುದ್ಧಕಾಲದಲ್ಲಿದ್ದ ಶಾಂತಿಯು ಶಾಂತಿಸಮಯದಲ್ಲಿ ಇಲ್ಲವಾಗಿರುವದಕ್ಕೆ ನಮಗೆ ನಾಚಿಕೆಯಾಗಬೇಕು", ಎನ್ನುವದು ಅವರ ಕಳಕಳಿ ತುಂಬಿದ ವಿಡಂಬನೆ! ಪ್ರಾಣವನ್ನು ಮುಡಿಪಾಗಿಟ್ಟು ದೇಶ ಸೇವೆ ಮಾಡುವ ಸೈನಿಕರ ಸೇವೆಯನ್ನು ಸರಕಾರ ಮಾಡಬೇಕು. ಅದಾಗದಿರುವದು ನಮ್ಮ ರಾಜಕೀಯ ದುರಂತ.

ಜನರಲ್ ಕೆ. ಎಸ್. ತಿಮ್ಮಯ್ಯ
ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯನವರೂ ಪ್ರಮುಖರು.  ಜನರಲ್ ತಿಮ್ಮಯ್ಯನವರು  1957ರಿಂದ 1961ರವರೆಗೆ ಭಾರತದ ಭೂಸೇನಾ  ದಂಡನಾಯಕರಾಗಿದ್ದರು. ಕೊರಿಯಾ ದೇಶದ ಯುದ್ಧಾನಂತರ ಸಂಯುಕ್ತ ರಾಷ್ಟ್ರಗಳ ಒಂದು ದಳಕ್ಕೆ ಅಧಿಪತಿಯಾಗಿದ್ದ ತಿಮ್ಮಯ್ಯನವರು ಯುದ್ಧ ಖೈದಿಗಳ ಸ್ವದೇಶದಲ್ಲಿ, ಅವರುಗಳಿಗೆ ಪುನರ್ವಸತಿಯನ್ನು ಸ್ಥಾಪಿಸುವದರ ಹೊಣೆ ಹೊತ್ತಿದ್ದರು. ಭಾರತೀಯ ಸೇನೆಯಿಂದ ನಿವೃತ್ತರಾದ ಬಳಿಕ ಸಂಯುಕ್ತ ರಾಷ್ಟ್ರಗಳ ಶಾಂತಿ-ಸ್ಥಾಪಕ ಸೈನ್ಯದ ಮುಖ್ಯಸ್ಥರಾಗಿ ಸೈಪ್ರಸ್‌ನಲ್ಲಿದ್ದರು. 
ತಿಮ್ಮಯ್ಯನವರು 30 ಮಾರ್ಚ್ 1906ರಲ್ಲಿ ಕೊಡಗಿನ ಮಡಿಕೇರಿಯಲ್ಲಿ ಜನಿಸಿದರು. ಅವರ ತಂದೆಯ ಹೆಸರು ತಿಮ್ಮಯ್ಯ ಹಾಗೂ ತಾಯಿಯ ಹೆಸರು ಸೀತವ್ವ. ಅವರ ನಾಮಕರಣದ ಮುಹೂರ್ತದಲ್ಲಿಟ್ಟ ಹೆಸರು ಸುಬ್ಬಯ್ಯ. ಆದರೆ ಆಂಗ್ಲರ ಕಾಲದ ಆಂಗ್ಲೀಯ ಶಾಲೆಯಲ್ಲಿ ಅವರ ಪೂರ್ಣ ಹೆಸರು ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ ಎಂದಾದ್ದರಿಂದ ಕೆ ಎಸ್ ತಿಮ್ಮಯ್ಯ ಎಂದು ಪ್ರಸಿದ್ಧರಾದರು. ಕೊಡಂದೆರ ಎನ್ನುವದು ಅವರ ಮನೆತನದ ಹೆಸರು.ಅವರ ತಂದೆ ಆಗರ್ಭ ಶ್ರೀಮಂತ ಪ್ಲಾಂಟರ್ ಆಗಿದ್ದರು.
ಉತ್ತಮ ಶಿಕ್ಷಣವನ್ನು ಕೊಡಿಸಬೇಕೆಂಬ ಉದ್ದೇಶದಿಂದ ಅವರ ಮಾತಾಪಿತರು ಅವರನ್ನು ಕೂನೂರಿನ ಸೈಂಟ್ ಜೋಸೆಫ್’ಸ್ ಕಾನ್ವೆಂಟ್‌ನಲ್ಲಿ ಸೇರಿಸಿದರು. ಆಗ ಅವರ ವಯಸ್ಸು ಎಂಟು. ಈ ಶಾಲೆಯನ್ನು ಅಯರ್ಲೆಂಡಿನ ಇಬ್ಬರು ಸೋದರರು ನಡೆಸುತ್ತಿದ್ದರು. ಬಳಿಕ ಅವರು ಬೆಂಗಳೂರಿನ ಬಿಶಪ್ ಕಾಟನ್ ಬಾಲಕರ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಶಾಲಾ ವಿದ್ಯಾರ್ಜನೆಯ ನಂತರ ಈಗಿನ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು ಎನಿಸಿರುವ ಡೆಹ್ರಾಡೂನಿನಲ್ಲಿರುವ  ‘ಪ್ರಿನ್ಸ್ ಆಫ್ ವೇಲ್ಸ್ ರಾಯಲ್ ಇಂಡಿಯನ್ ಮಿಲಿಟ್ರಿ ಕಾಲೆಜ್’ನ್ನು ಸೇರಿದರು. ಈ ಕಾಲೇಜಿನಿಂದ ಪದವೀಧರರಾದ ಬಳಿಕ ಬ್ರಿಟನ್ನಿನ ರಾಯಲ್ ಮಿಲಿಟ್ರಿ ಅಕ್ಯಾಡೆಮಿ ಅಭ್ಯರ್ಥಿಗಳಾಗಿ  ಆಯ್ಕೆಯಾದ ಕೇವಲ ಆರು ಮಂದಿ ಭಾರತೀಯರಲ್ಲಿ ಒಬ್ಬರಾಗಿ ತರಬೇತಿಯನ್ನು ಪಡೆದರು. 1935ರಲ್ಲಿ ತಿಮ್ಮಯ್ಯನವರು ನೈನಾ ಕಾರ್ಯಪ್ಪನವರನ್ನು ವಿವಾಹವಾದರು. ಆ ಸಮಯದಲ್ಲಿ ಈಗ ಪಾಕಿಸ್ಥಾನದ ಭಾಗವಾಗಿರುವ  ಕ್ವೆಟ್ಟಾ ತಿಮ್ಮಯ್ಯನವರ ಕಾರ್ಯಕ್ಷೇತ್ರವಾಗಿತ್ತು.   ಅದೇ ವರ್ಷ ಅಲ್ಲಿ ನಡೆದ ಭೂಕಂಪದ ಮರುದಿನಗಳಲ್ಲಿ ಈ ನವದಂಪತಿಗಳು ಮಾಡಿದ ಸೇವೆ ಸ್ಮರಣೀಯವೆನಿಸಿವೆ.
ಬ್ರಿಟಿಷರ ಆಳ್ವಿಕೆಯಲ್ಲಿ ಲೆಫ್ಟಿನೆಂಟ್ ಗೌರವದೊಂದಿಗೆ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ತಿಮ್ಮಯ್ಯನವರು ಹಲವಾರು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದರು.  ಇವುಗಳಲ್ಲಿ ಅಂದಿನ ಭಾರತದ ಭಾಗವಾಗಿದ್ದ ಪಾಕಿಸ್ಥಾನದ ಪ್ರದೇಶಗಳಲ್ಲಿ ಬಂಡುಕೋರ ಪಠಾಣ್ ಪಂಗಡಗಳ ವಿರುದ್ಧದ ಕಾರ್ಯಾಚರಣೆ ಪ್ರಮುಖವಾದದ್ದು.   ಫೆಬ್ರವರಿ 1935ರಲ್ಲಿ ಅವರು ಕ್ಯಾಪ್ಟನ್ ಎನಿಸಿದ್ದರು.  ಚನ್ನೈನಲ್ಲಿರುವ ಸೇನಾ ತರಬೇತಿ ಕೇಂದ್ರದಲ್ಲಿ ನವತರುಣರಿಗೆ ಬೋಧಕರಾಗಿಯೂ ಕೆಲಸ ಮಾಡಿದರು.  
1947ರಲ್ಲಿ ಭಾರತವು ಸ್ವತಂತ್ರಗೊಳ್ಳುವ ಸನ್ನಾಹದಲ್ಲಿದ್ದುದರಿಂದ ತಿಮ್ಮಯ್ಯನವರನ್ನು ಫಿಲಿಪೈನ್ಸ್‌ನಿಂದ ವಾಪಸ್ ಕರೆದುಕೊಳ್ಳಲಾಯಿತು. ಭಾರತದ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದೊಂದಿಗೆ ಸೈನ್ಯದ ಮತ್ತು ಆಯುಧಗಳ ವಿಲೇವಾರಿಯನ್ನು ಕುರಿತು ರಚಿಸಿದ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಯಿತು. ಈ ಕರ್ತವ್ಯದ ಬಳಿಕ ಸೆಪ್ಟೆಂಬರ್ 1947ರಲ್ಲಿ ಅವರಿಗೆ ಮೇಜರ್-ಜನರಲ್ ಆಗಿ ಬಡ್ತಿ ನೀಡಲಾಯಿತು. 4ನೇ ಇನ್ಫಂಟ್ರಿ ವಿಭಾಗದ ದಳಪತಿಗಳಾಗಿ ಅವರಿಗೆ  ಹೆಚ್ಚುವರಿ ಅಧಿಕಾರವಿತ್ತು, ಭಾರತ ಮತ್ತು ಪಾಕಿಸ್ತಾನಗಳ ನಡುವೆ ಪರಸ್ಪರ ವಲಸೆ ಹೋಗುವದನ್ನು ನಿಯಂತ್ರಿಸಲು ಪಂಜಾಬ್ ಗಡಿ ಸೇನೆಯ ಮುಖ್ಯಾಧಿಕಾರವನ್ನು ವಹಿಸಿಕೊಳ್ಳುವ ಆದೇಶ ನೀಡಲಾಯಿತು. ಮತೀಯ ಗಲಭೆಗಳಿಂದ ಹೊತ್ತಿ ಉರಿಯುತ್ತಿದ್ದ ಭಾರತ-ಪಾಕಿಸ್ತಾನದ ಗಡಿಯ ಸುತ್ತುಮುತ್ತಲ ಪ್ರದೇಶಗಳಲ್ಲಿ ಸುಮಾರು ಒಂದು ಕೋಟಿ ಜನರ ರಕ್ಷಣೆಯ ಭಾರ ಅವರ ಮೇಲಿತ್ತು. ಆ ರಣರಂಗದಲ್ಲಿ ಅವರ ವೈಯಕ್ತಿಕ ಪ್ರವೇಶದಿಂದ ಸಾವಿರಾರು ಮಂದಿ ಹಿಂದೂಗಳನ್ನೂ ಸಿಖ್ಖರನ್ನೂ ಕಾಪಾಡಿ ಅವರೆಲ್ಲರ ನೆಚ್ಚಿನ ಧೀರೋದಾತ್ತ ನಾಯಕನೆನ್ನಿಸಿಕೊಂಡರು.
ಇದಾದ ನಂತರ ಜಮ್ಮು-ಕಾಶ್ಮೀರದಲ್ಲಿದ್ದ 19ನೇ ಇನ್ಫಂಟ್ರಿ ವಿಭಾಗದ ಆಧಿಪತ್ಯದಲ್ಲಿ ಅವರು ಕಾಶ್ಮೀರವನ್ನು ಆಕ್ರಮಿಸಲೆತ್ನಿಸುತ್ತಿದ್ದ ಪಾಕಿಸ್ತಾನದ ಸೇನೆಯನ್ನು ತಡೆಹಿಡಿದು ಹಿಮ್ಮೆಟ್ಟಿಸುವದರಲ್ಲಿ ಜಯಶೀಲರಾದರು. 1948ರ ನವೆಂಬರ್‌ನಲ್ಲಿ ತಾವೇ ಮುಂಚೂಣಿಯಲ್ಲಿದ್ದು 12000 ಅಡಿ ಎತ್ತರದಲ್ಲಿರುವ ಜೊಜಿಲಾ ಕಣಿವೆಯ ಮೇಲೆ ಹಠಾತ್ ಧಾಳಿ ನಡೆಸಿ ಪಾಕಿಸ್ತಾನಿ ಸೈನ್ಯವನ್ನು ಅಲ್ಲಿಂದ ಕಾಲ್ತೆಗೆಯುವಂತೆ ಮಾಡಿ ದ್ರಾಸ್, ಕಾರ್ಗಿಲ್ ಮತ್ತು ಲೇಹ್ ಪ್ರದೇಶಗಳನ್ನು ಕೈವಶಮಾಡಿಕೊಂಡರು. 10000 ಅಡಿಗಿಂತಲೂ ಎತ್ತರದ ಪ್ರದೇಶದಲ್ಲಿ ಜಗತ್ತಿನ ಯಾವದೇ ಸೈನ್ಯವು ಟ್ಯಾಂಕನ್ನು ಯುದ್ಧ ಕಾರ್ಯಾಚರಣೆಯಲ್ಲಿ ಬಳಸಿದುದು ಅದೇ ಪ್ರಪ್ರಥಮವೆಂದು ದಾಖಲಾಗಿದೆ. ತಿಮ್ಮಯ್ಯನವರು ಅಂದಿನ ಪ್ರಧಾನಿ ನೆಹ್ರೂರವರನ್ನು ಮೂರು ತಿಂಗಳ ಅವಧಿಯಿತ್ತರೆ ಅತಿಕ್ರಮಣಕಾರರನ್ನು ಮುಜಾಫರಬಾದ್‌ವರೆಗೆ ಅಟ್ಟುವುದಾಗಿ ಕೇಳಿಕೊಂಡರೂ, ಒಪ್ಪದೇ ಹೋಗಿ ಅಕಾಲಿಕ ಶಾಂತಿಸಂಧಾನ ಉಂಟಾದುದರಿಂದಾಗಿ ಕಾಶ್ಮೀರ ಸಮಸ್ಯೆಯನ್ನು ಇಂದಿನವರೆವಿಗೂ ಬಗೆಹರಿಸದೇ ಉಳಿಸಿರುವದು ಇತಿಹಾಸವೆನಿಸಿದೆ.
1953ರಲ್ಲಿ ಕೊರಿಯಾದಲ್ಲಿ ತಟಸ್ಥ ರಾಷ್ಟ್ರಗಳ ಸ್ವದೇಶ-ಪುನರ್ವಸತಿ ಸಮಿತಿಯ (Neutral Nations Repatriation Commission) ಸಭಾಧ್ಯಕ್ಷರನ್ನಾಗಿ ಸಂಯುಕ್ತ ರಾಷ್ಟ್ರಗಳು ಜನರಲ್ ಕೆ ಎಸ್ ತಿಮ್ಮಯ್ಯನವರನ್ನು ಆಯ್ಕೆ ಮಾಡಿದವು. ಕಮ್ಯುನಿಸ್ಟ್ ಮತ್ತು ಪಶ್ಚಿಮ ದೇಶಗಳೊಡನೆ ನಿಷ್ಪಕ್ಷಪಾತದಿಂದ ವ್ಯವಹರಿಸಿ ತಿಮ್ಮಯ್ಯನವರು ಎಲ್ಲರ ಮೆಚ್ಚುಗೆಯನ್ನು ಪಡೆದರು. ಈ ಸಂದರ್ಭದಲ್ಲಿ ಅವರಿಗೆ ಲೆಫ್ಟಿನಂಟ್-ಜನರಲ್ ಪದವಿಯನ್ನೀಯಲಾಯಿತು. ಭಾರತ ಸರಕಾರವು ಅವರನ್ನು ಪದ್ಮವಿಭೂಷಣವನ್ನಿತ್ತು ಗೌರವಿಸಿತು.
7ನೇ ಮೇ 1957ರಂದು ತಿಮ್ಮಯ್ಯನವರು ಭಾರತೀಯ ಭೂಸೈನ್ಯದ 6ನೇ ಮುಖ್ಯಸ್ಥರಾಗಿ ಅಧಿಕಾರವನ್ನು ವಹಿಸಿಕೊಂಡರು. 1959ರಲ್ಲೇ ಭಾರತ-ಚೀನಾ ಯುದ್ಧದ ಮುನ್ಸೂಚನೆಯಿದ್ದು, ಅದಕ್ಕೆ ಭಾರತೀಯ ಸೈನ್ಯವನ್ನು ಸಜ್ಜುಗೊಳಿಸಬೇಕೆಂಬ ತಿಮ್ಮಯ್ಯನವರ ಸಲಹೆಯನ್ನು ಆಗಿನ ರಕ್ಷಣಾ ಮಂತ್ರಿ ವಿ ಕೆ ಕೃಷ್ಣ ಮೆನೊನ್ ತಳ್ಳಿಹಾಕಿದ್ದರಿಂದ ಅದನ್ನು ಪ್ರತಿಭಟಿಸಿ ತಿಮ್ಮಯ್ಯನವರು ತಮ್ಮ ರಾಜೀನಾಮೆಯನ್ನು ಪ್ರಧಾನಿಗಿತ್ತರು. ನೆಹರೂ ಅವರು  ತಿಮ್ಮಯ್ಯನವರ ಮನವೊಲಿಸಿ ರಾಜೀನಾಮೆಯನ್ನು ಹಿಂತೆಗೆಕೊಳ್ಳುವಂತೆ ಮಾಡಿದರು. ಆದರೆ ಅವರ ಸಲಹೆ-ಸೂಚನೆಗಳನ್ನು ಕಾರ್ಯಗತ ಮಾಡಲು ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. 7ನೇ ಮೇ 1961ರಲ್ಲಿ ತಿಮ್ಮಯ್ಯನವರು ನಿವೃತ್ತರಾದರು. 35ವರ್ಷಗಳ ಅವರ ಸೈನ್ಯದ ಸೇವೆ ಅಲ್ಲಿಗೆ ಮುಗಿಯಿತು.
ಭಾರತೀಯ ಸೈನ್ಯದಿಂದ ನಿವೃತ್ತರಾದ ಮೇಲೆ, ಸಂಯುಕ್ತ ರಾಷ್ಟ್ರಗಳು ಅವರ ಸೇವೆಯನ್ನು ಬಯಸಿ ಸೈಪ್ರಸ್‌ನಲ್ಲಿ ಸಂಯುಕ್ತ ರಾಷ್ಟ್ರಗಳ ಸೇನೆಯ ಆಧಿಪತ್ಯವನ್ನು ಜುಲೈ 1964ರಲ್ಲಿ ನೀಡಿದರು. ಅಲ್ಲಿನ ಅತ್ಯಂತ ವಿಸ್ಪೋಟಕ ಪರಿಸ್ಥಿತಿಯನ್ನು ಸೂಕ್ತವಾಗಿ ಬಗೆಹರಿಸಿದ್ದಕ್ಕೆ ತುರ್ಕಿಯ ವಿದೇಶಾಂಗ ಸಚಿವರು, ‘ಅವರ ಬೌದ್ಧಿಕ ಪ್ರಾಮಾಣಿಕತೆ ಮತ್ತು ಅಚಲ ನಿಷ್ಪಕ್ಷಪಾತದಿಂದ ಶಾಂತಿಯನ್ನು ಸ್ಥಾಪಿಸಿದ ಶ್ರೇಷ್ಠ ಪ್ರಯತ್ನ’ವನ್ನು ಹೃತ್ಪೂರ್ವಕವಾಗಿ ಶ್ಲಾಘಿಸಿದ್ದರು. ಗ್ರೀಕ್ ಸರ್ಕಾರವು ಅವರ ‘ಚಾರಿತ್ರ್ಯ ಬಲ, ವಾಸ್ತವವಾದಿತ್ವ ಮತ್ತು ನ್ಯಾಯಪ್ರಜ್ಞೆ’ಯನ್ನು ಕೊಂಡಾಡಿ ಗೌರವಿಸಿತ್ತು..
ಸೈಪ್ರಸ್ನಲ್ಲಿ ಸೇವೆಯಲ್ಲಿರುವಾಗಲೇ ಅಲ್ಲಿ ಅವರು 18ನೇ ಡಿಸೆಂಬರ್ 1965ರಂದು ನಿಧನರಾದರು. ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತಂದು, ಬೆಂಗಳೂರಿನಲ್ಲಿ  ಸಂಸ್ಕಾರ ಮಾಡಲಾಯಿತು.  ಸೈಪ್ರಸ್ ದೇಶವು ತನ್ನ ನೆಲದಲ್ಲಿ ಶಾಂತಿ ನೆಲೆಸುವಂತೆ ಮಾಡಿದ ವೀರನ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತಲ್ಲದೆ, ಅವರು ವಾಸಿಸುತ್ತಿದ್ದ ನಿಕೋಸಿಯಾದ ಒಂದು ಮಾರ್ಗಕ್ಕೆ ಅವರ ಹೆಸರನ್ನಿಟ್ಟಿತು.
ಆಗ್ರಾ ಪಟ್ಟಣವು ತನ್ನ ಒಂದು ಮುಖ್ಯ ರಸ್ತೆಗೆ ಜನರಲ್ ಕೆ ಎಸ್ ತಿಮ್ಮಯ್ಯನವರ  ಹೆಸರನ್ನು  70ರ ದಶಕದ ಆರಂಭದಲ್ಲೇ ಇಟ್ಟು ಗೌರವಿಸಿತು.
ಬೆಂಗಳೂರಿನ ಶಿವಾಜಿನಗರದ ದಂಡು ಪ್ರದೇಶದಲ್ಲಿ ಒಂದು ರಸ್ತೆಗೆ ಅವರ ಹೆಸರನ್ನಿಟ್ಟಿದ್ದು, ಇತ್ತೀಚೆಗೆ ರಿಚ್ಮಂಡ್ ವೃತ್ತದಿಂದ ಹಳೆಯ ವಿಮಾನ ನಿಲ್ದಾಣದವರೆಗಿರುವ ರಿಚ್ಮಂಡ್ ರಸ್ತೆಯನ್ನು ಜನರಲ್ ತಿಮ್ಮಯ್ಯ ರಸ್ತೆಯೆಂದು ಮರುಹೆಸರನ್ನಿಡಲಾಗಿದೆ. ಅವರ ಹುಟ್ಟೂರಾದ ಮಡಿಕೇರಿಯಲ್ಲಿ ಮಂಗಳೂರಿನಿಂದ ಮತ್ತು ವಿರಾಜಪೇಟೆಯಿಂದ ಬಂದು ಮಡಿಕೇರಿಯನ್ನು ಸೇರುವಲ್ಲಿ ಆಳೆತ್ತರದ ವಿಗ್ರಹವನ್ನು ಸ್ಥಾಪಿಸಲಾಗಿದೆ. 
 
ಲೆಫ್ಟಿನಂಟ್ ಜನರಲ್ ಅಪ್ಪಾರಂಡ ಸಿ ಅಯ್ಯಪ್ಪ
ಅಪ್ಪಾರಂಡ ಸಿ ಅಯ್ಯಪ್ಪ (ಎ ಸಿ ಅಯ್ಯಪ್ಪ) ನವರು ೧೯೧೪ರಲ್ಲಿ ಕೊಡಗಿನ ಕೊಡವ ಜನಾಂಗದ ಅಪ್ಪಾರಂಡ ಮನೆತನದಲ್ಲಿ ಜನಿಸಿದರು. ಈ ಮನೆತನದವರು ಲಿಂಗಾಯತ ರಾಜರ ಕಾಲದಿಂದಲೂ ಉಚ್ಚ ಅಧಿಕಾರಿಗಳಾಗಿದ್ದು, ಆ ಕಾಲದಲ್ಲಿಯೇ ಅಲ್ಲದೆ ಆಂಗ್ಲರ ಆಡಳಿತದಲ್ಲೂ ದಿವಾನ ಪದವಿಯಲ್ಲಿದ್ದರು.
ಶ್ರೀಮಂತ ಕುಟುಂಬದಲ್ಲಿ ಜನಿಸಿದ ಅಯ್ಯಪ್ಪನವರು ಬೆಂಗಳೂರಿನ ಬಿಶಪ್ ಕಾಟನ್ ಶಾಲೆಯ ವಿದ್ಯಾಭ್ಯಾಸ ಮುಗಿಸಿ, ಇಂಗ್ಲೆಂಡಿನ ಲಿಂಕನ್ ಶೈರಿನಲ್ಲಿರುವ ಸ್ಟ್ಯಾನ್‍ಫರ್ಡ್ ಶಾಲೆಯಲ್ಲಿ ಪದವೀಧರರಾಗಿ ಭಾರತಕ್ಕೆ ಮರಳಿದರು.
ಭಾರತೀಯ ಸೈನ್ಯವನ್ನು ಸೇರಿ, ಮೆಂಬರ್ ಆಫ್ ದಿ ಆರ್ಡರ್ ಆಫ್ ದ ಬ್ರಿಟಿಶ್ ಎಂಪೈರ್ (MBE) ಪದವಿಯನ್ನು ಪಡೆದರು
ಭಾರತದ ಸೈನ್ಯದ ಕೋರ್ ಆಫ್ ಸಿಗ್ನಲ್ಸ್ (Corps of Signals)ನಲ್ಲಿ ಸೆಪ್ಟೆಂಬರ್ ೧೯೩೫ರಲ್ಲಿ ಅಯ್ಯಪ್ಪನವರು ಸೆಕೆಂಡ್ ಲೆಫ್ಟ್‍ನಂಟ್ ಆಗಿ ಕಮಿಶನ್ ಪಡೆದ ಮೊದಲ ಭಾರತೀಯ ಅಧಿಕಾರಿ. ದ್ವಿತೀಯ ಜಾಗತಿಕ ಯುದ್ಧದಲ್ಲಿ ೧೯೪೨ರಲ್ಲಿ ಜಪಾನೀಯರ ವಿರುದ್ಧದ ಮಲಯನ್ ಕಾರ್ಯಾಚರಣೆಯಲ್ಲಿ ಕ್ಯಾಪ್ಟನ್ ಆಗಿದ್ದರು. ದುರದೃಷ್ಟವಶಾತ್ ಅವರು ಸೆರೆ ಸಿಕ್ಕಿ ೧೯೪೫ರಲ್ಲಿ ಯುದ್ಧ ಕೊನೆಗೊಳ್ಳುವವರೆಗೂ ಯುದ್ಧಖೈದಿಯಾಗಿದ್ದರು. ಭಾರತಕ್ಕೆ ಮರಳಿದ ಬಳಿಕ ವೃತ್ತಿಯಲ್ಲಿ ಉತ್ತಮ ಮುನ್ನಡೆಯನ್ನು ಪಡೆದು,ಭಾರತೀಯ ಸೇನೆಯ ಪ್ರಥಮ ಪ್ರಧಾನ ಸಿಗ್ನಲ್ ಅಧಿಕಾರಿಯಾದರು. ಬಳಿಕ ಲೆಫ್ಟಿನಂಟ್ ಜನರಲ್ ಹುದ್ದೆಗೆ ಬಡ್ತಿ ಹೊಂದಿ, ಮಾಸ್ಟರ್ ಜನರಲ್ ಆಫ್ ಆರ್ಡ್‌ನನ್ಸ್ ಆದರು. ಇದು ಚೀಫ್ ಆಫ್ ಆರ್ಮಿ ಸ್ಟಾಫ್‌ನ ನಾಲ್ಕು ಪ್ರಿನ್ಸಿಪಲ್ ಸ್ಟಾಫ್ ಆಫಿಸರ್‌ಗಳಲ್ಲಿನ ಒಂದು ಹುದ್ದೆ. ಅವರು ಕೋರ್ ಆಫ್ ಸಿಗ್ನಲ್ಸ್‌ನ ಕರ್ನಲ್ ಕಮಾಂಡಂಟ್ ಆದ ಭಾರತೀಯರಲ್ಲಿ ಪ್ರಪ್ರಥಮರು. 
ನಂತರ ಅವರು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಯ ಚೇರ್ಮನ್ ಆಗಿ ನೇಮಕಗೊಂಡು ೧೯೭೨ರಲ್ಲಿ ನಿವೃತ್ತರಾದರು .
ಬೆಂಗಳೂರಿನ ಬಿ ಇ ಎಲ್ ವೃತ್ತದ ಬಳಿಯ ಉದ್ಯಾನವನಕ್ಕೆ ಜನರಲ್ ಅಯ್ಯಪ್ಪ ಉದ್ಯಾನವನವೆಂದು ಹೆಸರಿಸಲಾಗಿದೆ

ರಮೇಶ್ ಹಲಗಲಿ
ಲೆಫ್ಟಿನೆಂಟ್ ಜನರಲ್ ರಮೇಶ್ ಹಲಗಲಿ ಪರಮ ವಿಶಿಷ್ಠ ಸೇವಾ ಪದಕ ಪಿವಿಎಸ್ಎಂವಿಜೇತ  ಭಾರತೀಯ ಸೇನೆಯ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿದ್ದಾರೆ. 
ಹಲಗಲಿ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಹಲಗಲಿ ಗ್ರಾಮದವರು.
ಬಾಗಲಕೋಟೆ ಜಿಲ್ಲೆ ಮುಧೋಳದ ಲೆಫ್ಟಿನೆಂಟ್ ಜನರಲ್ ರಮೇಶ್ ಹಲಗಲಿ ಅವರಿಗೆ ಸೇನೆಯ ಉಪ ಮುಖ್ಯಸ್ಥರ ಹುದ್ದೆಗೆ ಬಡ್ತಿ ನೀಡಿ ನೇಮಕ ಮಾಡಲಾಗಿದೆ. ಸೇನೆಯ ಅತ್ಯಂತ ಹಿರಿಯ ಅಧಿಕಾರಿಗಳಲ್ಲಿ ಹಲಗಲಿ ಒಬ್ಬರಾಗಿದ್ದಾರೆ.
ಅವರು ಕರ್ನಾಟಕದ ಬಿಜಾಪುರ ಜಿಲ್ಲೆಯ ಸೈನಿಕ ಶಾಲೆಯಲ್ಲಿ ಅಧ್ಯಯನ ಮಾಡಿದರು. 1972 ರ ಡಿಸೆಂಬರ್‌ನಲ್ಲಿ ಹಲಗಲಿಯವರನ್ನು ಸಿಖ್ ಲೈಟ್ ಕಾಲಾಳುಪಡೆಗೆ ನಿಯೋಜಿಸಲಾಯಿತು ಮತ್ತು 11 ಫೆಬ್ರವರಿ 2012 ರಂದು ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ನೇಮಕಗೊಳ್ಳುವವರೆಗೂ ಮಿಲಿಟರಿ ತರಬೇತಿಯ ಮಹಾನಿರ್ದೇಶಕರಾಗಿದ್ದರು.
`ಸುಖ್ನಾ ಭೂ ಹಗರಣ`ದಲ್ಲಿ ಆರೋಪಿತರಾಗಿದ್ದ ಹಲಗಲಿ ಅವರಿಗೆ ಸೇನೆ `ಕ್ಲೀನ್ ಚಿಟ್` ನೀಡಿದ ಬಳಿಕ ಸಂಪುಟ ನೇಮಕಾತಿ ಸಮಿತಿ ಉಪ ಮುಖ್ಯಸ್ಥರ ಹುದ್ದೆಗೆ ಅವರ ಹೆಸರು ಪರಿಗಣಿಸಿ ನೇಮಕ ಮಾಡಿದೆ. ಮಾಹಿತಿ ವ್ಯವಸ್ಥೆ ಹಾಗೂ ತರಬೇತಿ ವಿಭಾಗದ ಹೊಣೆ ಹೊತ್ತಿರುವ ಇವರು ಸೇನೆಯ ಇಬ್ಬರು ಉಪ ಮುಖ್ಯಸ್ಥರ ಪೈಕಿ ಒಬ್ಬರು. ಇದುವರೆಗೆ ಅವರು ಮಿಲಿಟರಿಕೇಂದ್ರ ಕಚೇರಿಯಲ್ಲಿ ತರಬೇತಿ ಮುಖ್ಯಸ್ಥರಾಗಿದ್ದರು.

ಮಂಗೇರಿರಾ ಚೆನ್ನಪ್ಪ ಮುತ್ತಣ್ನ
ಮೇಜರ್ ಮಂಗೇರಿರಾ ಚಿನ್ನಪ್ಪ ಮುತ್ತಣ್ಣ ಭಾರತದ ವೀರ ಯೋಧ.
ಅವರು ಏಪ್ರಿಲ್ 21, 1964 ರಂದು ಕೊಡಗು ಜಿಲ್ಲೆಯಚೆಟ್ಟಿಮಣಿ ಗ್ರಾಮದಲ್ಲಿ (ಭಾಗಮಂಡಲ ಬಳಿ) ಜನಿಸಿದರು.
ಅಕ್ಟೋಬರ್ 1984 ರಲ್ಲಿ ಚೆನ್ನೈನ ಒಟಿಎಗೆ ಸೇರಿದರು ಮತ್ತು 1985 ರ ಅಕ್ಟೋಬರ್ 24 ರಂದು 5 ನೇ ಬೆಟಾಲಿಯನ್ ಸಿಖ್ ಲೈಟ್ ಕಾಲಾಳುಪಡೆಗೆ ನಿಯೋಜಿಸಲ್ಪಟ್ಟರು. ಅವರು 5 ಸಿಖ್ ಲೈಟ್ ಕಾಲಾಳುಪಡೆ 1 ಸೆಕ್ಟರ್ ರಾಷ್ಟ್ರೀಯ ರೈಫಲ್ಸ್ಗೆ ಸೇವೆ ಸಲ್ಲಿಸಿದರು. ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಲಷ್ಕರ್-ಎ-ತೋಯಿಬಾ (ಎಲ್‌ಇಟಿ) ಭಯೋತ್ಪಾದಕರೊಂದಿಗೆ ಹೋರಾಡುತ್ತಿರುವಾಗ, ಅವರು ಜನವರಿ 12, 2000 ರಂದು ಹುತಾತ್ಮರಾದರು, ಆಗ ಅವರಿಗೆ 36 ವರ್ಷ
ಮರಣೋತ್ತರವಾಗಿ ಅವರಿಗೆ ಶೌರ್ಯ ಚಕ್ರವನ್ನು ನೀಡಲಾಯಿತು. ಅವರ ನೆನಪಿಗಾಗಿ, ಮಡಿಕೇರಿ ನಗರ ಮುನ್ಸಿಪಲ್ ಕೌನ್ಸಿಲ್ (ಸಿಎಮ್ಸಿ) ಸಭಾಂಗಣದ ಮುಂದೆ ಪ್ರತಿಮೆ ಅನಾವರಣ ಮಾಡಲಾಗಿದೆ. ಡಿಸೆಂಬರ್ 9, 2000 ರಂದು ಗುರುವಾರ ಕಾವೇರಿ ಕಲಾಕ್ಷೇತ್ರ (ಟೌನ್ ಹಾಲ್) ಎದುರು ಪುರಸಭೆಯ ವೃತ್ತಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

ಮೇಜರ್ ಸಂದೀಪ್ ಉನ್ನಿಕೃಷ್ಣನ್
೨೦೦೮ ರ ನವೆಂಬರ್ ೨೬ ರಂದು ಪಾಕೀಸ್ತಾನದ ೧೦ ಭಯೋತ್ಪಾದಕರು ಸಮುದ್ರದ ಮೂಲಕ ಭಾರತದ ಮುಂಬೈನಲ್ಲಿ ನುಸುಳಿ ೧೬೬ ಜನ ಅಮಾಯಕರನ್ನು ಹತ್ಯೆಗೈದಿದ್ದರು. ಮುಂಬೈನ ಪ್ರತಿಷ್ಠಿತ ತಾಜ್ ಪ್ಯಾಲೇಸ್ ಹೋಟೆಲ್ ಒಳಗೆ ಸಿಕ್ಕಿಹಾಕಿಕೊಂಡಿದ್ದ ಜನರನ್ನು ಪಾರುಮಾಡಲು ನ್ಯಾಷನಲ್ ಸೆಕ್ಯೂರಿಟೀ ಗಾರ್ಡ್ ಕಮಾಂಡೋ ಆಗಿದ್ದ ಸಂದೀಪ್ ಹೋರಾಡುತ್ತಲೇ ಮಡಿದಿದ್ದರು. ಗುಂಡು ಅವರ ಎದೆಗೆ ನಾಟಿದಾಗಲೂ, " ದಯವಿಟ್ಟು ಮೇಲೆಹತ್ತಿಬರಬೇಡಿ; ನಾನೊಬ್ಬನೇ ಅವರನ್ನು ಎದುರಿಸುತ್ತೇನೆ", ಎಂದು ಹೇಳಿ ನುಗ್ಗಿದ ವೀರ ಯೋಧ ಸಂದೀಪ್ ನನ್ನು, ಎನ್.ಎಸ್.ಜಿ.ಅಧಿಕಾರಿಗಳು ನೆನೆಯುತ್ತಾರೆ.
ಮೇಜರ್ ಅವರ ತಂದೆ, ಉನ್ನಿಕೃಷ್ಣನ್, ನಿವೃತ್ತ ಇಸ್ರೋ ಅಧಿಕಾರಿ, ತಾಯಿ ಧನಲಕ್ಷ್ಮಿ,.
ಅಪ್ರತಿಮದೇಶಭಕ್ತ ಹಾಗೂ ಕೊಡುಗೈ ದಾನಿ. ಉನ್ನತ ಹುದ್ದೆಯಲ್ಲಿಅ ೨ ವರ್ಷಗಳಕಾಲದಲ್ಲಿ ತನ್ನ ವೇತನದ ಬಹುಭಾಗವನ್ನು ದೀನದಲಿತರಿಗೆ ಹಂಚಿಬಿಡುತ್ತಿದ್ದ.
ಸನ್. ೨೦೦೮ ರ ನವೆಂಬರ್, ೨೬ ರಂದು, ಮುಂಬೈನ ಮೇಲೆ ಭಯೋತ್ಪಾದಕ ದಾಳಿ ನಡೆದ ಕರಾಳ ನೆನಪಿಗೆ ಬೆಂಗಳೂರು ಮೂಲದ ಭಾರತದ ಹೆಮ್ಮೆಯ ಪುತ್ರರಲ್ಲೊಬ್ಬ ವೀರಯೋಧ ಮೇಜರ್ ಸಂದೀಪ್ ಉನ್ನಿಕೃಷಣನ್ ಹುತಾತ್ಮರಾದ ದಿನ. 'ಯತೀಶ್ ಪ್ರಸಾದ್ ಚಾರಿಟಬಲ್ ಟ್ರಸ್ಟ್ ,' ಬೆಂಗಳೂರು ನಗರದ ಹೊರವರ್ತುಲ ರಸ್ತೆಗೆ ಹೊಂದಿಕೊಂಡ 'ರಾಮಮೂರ್ತಿನಗರದ ಸಿಗ್ನಲ್ ಸಮೀಪ' ೨೬/೧೧ ರಂದು, ಎನ್.ಎಸ್.ಜಿ. ಕಮಾಂಡೋ ಪ್ರತಿಮೆ ಸ್ಥಾಪಿಸಲಾಗಿದೆ. 'ಮೇಜರ್ ಸಂದೀಪ್ ಉನ್ನಿಕೃಷ್ಣನ್', ತಾಜ್ ಮಹಲ್ ಹೋಟೆಲ್ ಬಳಿ ಉಗ್ರರು ನಡೆಸಿದ್ದ ದಾಳಿಯನ್ನು ಹತ್ತಿಕ್ಕಲು ತನ್ನ ಜೀವದ ಹಂಗನ್ನೂ ತೊರೆದು ಪ್ರಯತ್ನಿಸಿ ಹೋರಾಡಿ ಮಡಿದಿದ್ದರು.
ನ.26: 2008ರ ನವೆಂಬರ್ 26ರಂದು ಮುಂಬೈ ಮೇಲೆ ಭಯೋತ್ಪಾದಕ ದಾಳಿ ನಡೆದ ಕರಾಳ ನೆನಪಿಗೆ ಇಂದು ನಾಲ್ಕನೇ ವರ್ಷ. ಜೊತೆಗೆ ಬೆಂಗಳೂರು ಮೂಲದ ಭಾರತದ ಹೆಮ್ಮೆಯ ಪುತ್ರ ವೀರಯೋಧ ಸಂದೀಪ್ ಉನ್ನಿಕೃಷ್ಣನ್ ಹುತಾತ್ಮರಾದ ದಿನವೂ ಹೌದು. ಜೀವದ ಹಂಗುತೊರೆದು ತಾಜ್ ಹೋಟೆಲ್ ಬಳಿ ಉಗ್ರರು ನಡೆಸಿದ್ದ ದಾಳಿಯನ್ನು ಹತ್ತಿಕ್ಕಲು ಯತ್ನಿಸಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ನೆನಪು ಸದಾ ಇರುವಂತೆ ಮಾಡಲು ಯತೀಶ್ ಪ್ರಸಾದ್ ಚಾರಿಟಬಲ್ ಟ್ರಸ್ಟ್ ಅವರು ಬೆಂಗಳೂರಿನಲ್ಲಿ 26/11ರಂದೇ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ನಗರದ ಹೊರವರ್ತುಲ ರಸ್ತೆಗೆ ಹೊಂದಿಕೊಂಡಿರುವ ರಾಮಮೂರ್ತಿ ನಗರದ ಸಿಗ್ನಲ್ ಸಮೀಪ ಎನ್ ಎಸ್ ಜಿ ಕಮಾಂಡೋ ಸಂದೀಪ್ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ರಣರಂಗದ ಹೊರಗಡೆ ಯೋಧನೊಬ್ಬ ತೋರುವ ಅಪ್ರತಿಮ ಸಾಹಸ, ಶೌರ್ಯ, ತ್ಯಾಗಕ್ಕಾಗಿ ನೀಡುವ 'ಅಶೋಕ ಚಕ್ರ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಜನವರಿ 26,2009ರಲ್ಲಿ ಸಂದೀಪ್ ಅವರಿಗೆ ಮರಣೋತ್ತರವಾಗಿ ಅಶೋಕ್ ಚಕ್ರ ನೀಡಲಾಗಿದೆ. ಸಂದೀಪ್ ಅವರ ಜೊತೆಗೆ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಅಶೋಕ್ ಕಾಮ್ಟೆ, ವಿಜಯ್ ಸಲಾಸ್ಕರ್, ತುಕಾರಾಂ ಒಂಬಳೆ, ಗಜೇಂದರ್ ಸಿಂಗ್ ಅವರಿಗೂ ಮರಣೋತ್ತರ ಪ್ರಶಸ್ತಿ ಸಿಕ್ಕಿದೆ. ಮುಂಬೈ ದಾಳಿಗೆ ಕಾರಣರಾದ ಎಲ್ಲಾ ಉಗ್ರರು ಅಂದೇ ಮೃತಪಟ್ಟಿದ್ದರು. ಸಿಕ್ಕಿ ಬಿದ್ದಿದ್ದ ಏಕೈಕ ಉಗ್ರ ಅಜ್ಮಲ್ ಕಸಬ್ ನನ್ನು ಬಂಧಿಸಲಾಗಿತ್ತು. ಕಸಬ್ ಗೆ ನ.21 ಪುಣೆಯ ಯರವಾಡ ಜೈಲಿನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಕರಾಳ ನೆನಪು:2008ರ ನವೆಂಬರ್ 26ರಂದು ಪಾಕಿಸ್ತಾನದ ಹತ್ತು ಉಗ್ರರು ಭಾರತದೊಳಗೆ ಸಮುದ್ರದ ಮುಖಾಂತರ ನುಸುಳಿ 166 ಜನರನ್ನು ಹತ್ಯೆಗೈದಿದ್ದರು. ಮುಂಬೈನ ಪ್ರತಿಷ್ಠಿತ ತಾಜ್ ಮಹಲ್ ಪ್ಯಾಲೇಸ್ ಹೋಟೆಲಿನಲ್ಲಿ ಇದ್ದರ ಜನರನ್ನು ಪಾರು ಮಾಡಲು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ ಕಮಾಂಡೋ ಆಗಿದ್ದ ಸಂದೀಪ್ ಉನ್ನಿಕೃಷ್ಣನ್ ಅವರು ಹೋದಾಗ ಉಗ್ರರ ಜೊತೆ ಹೋರಾಡುತ್ತಲೇ ಮಡಿದಿದ್ದರು. ಭಯೋತ್ಪಾದಕ ಸಿಡಿಸಿದ ಗುಂಡು ಸಂದೀಪ್ ಗುಂಡಿಗೆಯನ್ನು ಹೊಕ್ಕಿದ್ದಾಗ, "ದಯವಿಟ್ಟು ಮೇಲೆ ಯಾರೂ ಬರಬೇಡಿ, ನಾನೊಬ್ಬನೇ ಅವರನ್ನು ಎದುರಿಸುತ್ತೇನೆ" ಎಂಬ ಸಂದೇಶ ರವಾನಿಸಿದ್ದಾಗಿ ಎನ್ಎಸ್‌ಜಿ ಅಧಿಕಾರಿಗಳು ಸಂದೀಪ್ ಅವರನ್ನು ನೆನೆಸಿಕೊಳ್ಳುತ್ತಾರೆ. ತಾಜ್ ಮಹಲ್ ಪ್ಯಾಲೇಸಿನಲ್ಲಿ ಏಕಾಂಗಿಯಾಗಿ ಉಗ್ರರ ಹಿಡಿತಕ್ಕೆ ಸಿಕ್ಕು ಸಂದೀಪ್ ಹೋರಾಡುತ್ತಲೇ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರು. ಮುಂಬೈ ದಾಳಿಯಲ್ಲಿ ಮೃತಪಟ್ಟ ಹುತಾತ್ಮರಿಗೆ ನವೆಂಬರ್ 26, 2012ರಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್, ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೇ ಸೇರಿದಂತೆ ಅನೇಕ ಗಣ್ಯರು ಮುಂಬೈನ ನಾರಿಮನ್ ಹೌಸ್ ನಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 2008ರ ಮುಂಬಯಿ ದಾಳಿಯಲ್ಲಿ ಉಗ್ರರ ಗುಂಡೇಟಿಗೆ ವೀರಮರಣವಪ್ಪಿದ್ದ ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಅಪ್ರತೀಮ ದೇಶಭಕ್ತ ಮಾತ್ರವಲ್ಲ ಕೊಡುಗೈ ದಾನಿಯಾಗಿದ್ದ. ಸೇನೆಯಲ್ಲಿ 9 ವರ್ಷ ಉನ್ನತ ಹುದ್ದೆ ಅಲಂಕರಿಸಿದ್ದರೂ ಬಂದ ಸಂಬಳವನ್ನೆಲ್ಲ ದೀನ ದಲಿತರಿಗೆ ಹಂಚಿಬಿಡುತ್ತಿದ್ದ ಎಂದು ಸಂದೀಪ್ ಕುಟುಂಬದ ಮೂಲಗಳು ಹೇಳಿದೆ. ಸಂದೀಪ್ ರನ್ನು ತುಂಬಾ ಪ್ರೀತಿಸುತ್ತಿದ್ದ ಆತನ ಚಿಕ್ಕಪ್ಪ ಮೋಹನನ್ ಅವರು ತೀವ್ರವಾಗಿ ನೊಂದು ಕೊಂಡಿದ್ದರು. ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡು ದುರಂತ ಸಾವನ್ನಪ್ಪಿದ್ದರು
ಸನ್ ೨೦೦೯ ರ ಜನವರಿ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಿಗೆ, 'ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ', ನೀಡಿ ಗೌರವಿಸಲಾಯಿತು. ಇದು ವೀರಯೋಧರ ಸಾಹಸ, ಶೌರ್ಯ, ತ್ಯಾಗಕ್ಕೆ ಸಲ್ಲುವ ಪ್ರಶಸ್ತಿ.

ಶೌರ್ಯ ಚಕ್ರ ಪ್ರಶಸ್ತಿ ವಿಜೇತ ನಿರಂಜನ್ ಕುಮಾರ್
೨೦೧೬ರ ಪಂಜಾಬಿನ ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಯಲ್ಲಿ ಹುತಾತ್ಮನಾದ ಕನ್ನಡಿಗ ಯೋಧ ಲೆ. ಕರ್ನಲ್ ನಿರಂಜನ್ ಕುಮಾರ್ ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರ ಶೌರ್ಯ ಚಲ್ರ ಪುರಸ್ಕಾರ ನೀಡಿ ಗೌರವಿಸಿದೆ.
ರಾಷ್ಟ್ರೀಯ ಭದ್ರತಾ ಪಡೆ -ಎನ್.ಎಸ್.ಜಿ. ಕಮಾಂಡೋ ಪಡೆಯ ಬಾಂಬ್ ನಿಷ್ಕ್ರಿಯ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದ ನಿರಂಜನ್ ಪಠಾಣ್ ಕೋಟ್ ವಾಯುನೆಲೆಯಲ್ಲಿ ಉಗ್ರರು ಅಡಗಿಸಿಟ್ಟ ಗ್ರೆನೇಡ್ ಸ್ಫೋಟಗೊಂಡು ಮೃತಪಟ್ಟಿದ್ದರು.’

ಹನುಮಂತಪ್ಪ ಕೊಪ್ಪದ್
2016ರ ಫೆಬ್ರವರಿ ತಿಂಗಳಲ್ಲಿ ಸಿಯಾಚಿನ್​ನಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾದ ಹಿನ್ನೆಲೆ ಯೋಧ ಹನುಮಂತಪ್ಪ ಕೊಪ್ಪದ್​ ಹಿಮದಲ್ಲಿ ಸಿಲುಕಿ 6 ದಿನಗಳ ಕಾಲ ಹಿಮದ ನಡುವೆಯೇ ಜೀವನ್ಮರಣ ಹೋರಾಟ ನಡೆಸಿದ್ದ ಕನ್ನಡಿಗನ ಕಥೆ ಎಂಥವರ ಮನ ಕರಗಿಸುತ್ತದೆ. 
ಹನುಮಂತಪ್ಪ ಕೊಪ್ಪದ್​ ಧಾರವಾಡ ಜಿಲ್ಲೆಯ ಕುಂದಗೋಳದ ಬೆಟದೂರು ಗ್ರಾಮದವರಾಗಿದ್ದು ದೆಹಲಿ ಸೇನಾ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು, ಅವರ ಸೇವೆ ಹಾಗೂ ಸಾಹಸವನ್ನು ಗುರುತಿಸಿದ್ದ ಭಾರತೀಯ ಸೇನೆ ಯೋಧನಿಗೆ  ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಿ ಗೌರವಿದೆ.
ಹುತಾತ್ಮ ಕನ್ನಡ, ಕೊಡವ ಕಲಿಗಳ ಪಟ್ಟಿ
ಇವರಷ್ಟೇ ಮಂದಿಯಲ್ಲದೆ ಕೊಡಗಿನ ಕಲಿಗಳಾದ  ಸಿಪಾಯಿ ಮಾದಪ್ಪ (ಇಂಡೋ-ಪಾಕ್) 1948, ಜನರಲ್ ಎಂ.ಬಿ.ದೇವಯ್ಯ (ಇಂಡೋ-ಪಾಕ್) 1962, ಸ್ವಾ.ಲಿ. ಎ.ಬಿ.ದೇವಯ್ಯ (ಇಂಡೋ-ಪಾಕ್) 1965, ಸಿ.ಎನ್.ಐಯ್ಯಣ್ಣ (ಇಂಡೋ-ಪಾಕ್) 1965, ದಫೇದಾರ್ ಎಂ.ಎಂ.ಪೂವಯ್ಯ (ಇಂಡೋ-ಪಾಕ್) 1965, ಶಾವರ್ ಎನ್.ಎಸ್. ಕಾರ್ಯಪ್ಪ (ಇಂಡೋ-ಪಾಕ್) 1965, ನಾಯಕ್ ಕೆ.ಎನ್. ಪೊನ್ನಪ್ಪ, (ಇಂಡೋ-ಪಾಕ್) 1965, ಸುಬೇದಾರ್ ಬಿ.ಎಂ. ಕಾವೇರಪ್ಪ, (ಕ್ಯಾಕ್‍ಟಸ್ ಲೈಲಿ) 1971, ಸಿಪಾಯಿ ಎಂ.ಎಸ್. ಮುತ್ತಣ್ಣ (ಕ್ಯಾಕ್‍ಟಸ್ ಲೈಲಿ) 1971, ಸಿ.ಎಫ್.ಎನ್. ಎಂ.ಎಸ್. ಪೊನ್ನಣ್ಣ (ಕ್ಯಾಕ್‍ಟಸ್ ಲೈಲಿ) 1971, ಸಿಪಾಯಿ ಎನ್.ಎಂ.ಅಪ್ಪಚ್ಚು (ಕ್ಯಾಕ್‍ಟಸ್ ಲೈಲಿ) 1971,
ಗನ್ನರ್ ಎಸ್.ಆರ್. ಪಳಂಗಪ್ಪ (ಕ್ಯಾಕ್‍ಟಸ್ ಲೈಲಿ) 1971, ಗನ್ನರ್ ಪಿ.ಎಸ್.ರಾಮು (ಆಪರೇಷನ್ ಮೇಘದೂತ್) 1984, ಮೇಜರ್ ಪಿ.ಎ. ದೇವಯ್ಯ (ಆಪರೇಷನ್ ಮೇಘದೂತ್) 1987, ಮೇಜರ್ ಕೆ.ಎ.ಸೋಮಯ್ಯ, (ಆಪರೇಷನ್ ಪವನ್) 1987, ಗನ್ನರ್ ಎಂ.ಬಿ.ಕುಶಾಲಪ್ಪ, (ಆಪರೇಷನ್ ಮೇಘದೂತ್) 1987, ಗನ್ನರ್ ಎಂ.ಪಿ.ಬೋಪಯ್ಯ (ಆಪರೇಷನ್ ಪವನ್) 1987, ಮೇಜರ್ ರಂಜಿತ್ ಮುತ್ತಣ್ಣ (ಆಪರೇಷನ್ ಪವನ್) 1987, ಸಿಪಾಯಿ ಎಚ್.ವೈ.ವೆಂಕಟೇಶ್, (ಆಪರೇಷನ್ ಪವನ್) 1988, ಸಿಪಾಯಿ ಕೆ.ಎ.ರಾಮಕೃಷ್ಣ (ಆಪರೇಷನ್ ಪವನ್) 1988, ನಾಯಕ್ ಪಿ.ಎ. ಶಂಭು (ಆಪರೇಷನ್ ರಕ್ಷಕ್)1991,[ಸಂದೀಪ್ ಉನ್ನಿಕೃಷ್ಣನ್ ಸ್ಮರಣೆ ಪ್ರತಿದಿನದ ಕೆಲಸವಾಗಲಿ]
ಹವಾಲ್ದಾರ್ ಪಿ.ಬಿ.ಕುಟ್ಟಪ್ಪ (ಆಪರೇಷನ್ ರಿನೋ) 1993, ಎಲ್. ನಾಯಕ್ ಸಿ.ಎಂ. ಸೋಮಯ್ಯ (ಆಪರೇಷನ್ ರಕ್ಷಕ್) 1994, ಲೆ.ಕ. ಕೆ.ಬಿ.ಪೂಣಚ್ಚ (ಆಪರೇಷನ್ ಆರ್ಚಿಡ್) 1994, ಮೇಜರ್ ಗಣೇಶ್ ಮಾದಪ್ಪ (ಆಪರೇಷನ್ ರಕ್ಷಕ್) 1995, ಎಲ್.ನಾಯಕ್ ಸಿ.ಆರ್.ಚಂದ್ರ (ಆಪರೇಷನ್ ರಕ್ಷಕ್) 1995, ಎನ್.ಬಿ. ಸಬ್. ಜಿ. ಇ. ಉತ್ತಯ್ಯ (ಆಪರೇಷನ್ ಆರ್ಚಿಡ್) 1996, ಸಬ್. ಎಸ್. ಕೆ. ಮೇದಪ್ಪ, (ಆಪರೇಷನ್ ವಿಜಯ್) 1999, ನಾಯಕ್ ಪಿ.ಡಿ. ಕಾವೇರಪ್ಪ (ಆಪರೇಷನ್ ವಿಜಯ್) 1999, ಮೇಜರ್ ಎಂ.ಸಿ.ಮುತ್ತಣ್ಣ (ಆಪರೇಷನ್ ರಕ್ಷಕ್) 2000, ಎನ್.ಬಿ.ಸಬ್. ಎಸ್.ಎಸ್. ಈರಪ್ಪ (ಆಪರೇಷನ್ ಫಾಲ್ಕಾನ್) 2000,
ಎಲ್. ನಾಯಕ್. ಕೆ.ಎ ಸವೀನ (ಆಪರೇಷನ್ ರಕ್ಷಕ್) 2000, ಸಿಪಾಯಿ ಬಿ.ಎಂ ದೇವಪ್ಪ (ಆಪರೇಷನ್ ರಕ್ಷಕ್) 2001, ಸಬ್. ಕೆ.ಪಿ. ಬೆಳ್ಯಪ್ಪ (ಆಪರೇಷನ್ ಫಾಲ್ಕಾನ್) 2002, ಹವಾಲ್ದಾರ್ ಬಿ.ಎಸ್. ದೇವಯ್ಯ (ಆಪರೇಷನ್ ಪರಾಕ್ರಮ್, 2002, ಸಿಪಾಯಿ ಸಿ.ಪಿ. ಅರುಣ್ (ಆಪರೇಷನ್ ಆಫ್ ಜಮ್ಮು ಕಾಶ್ಮೀರ್) 2003, ಎಲ್. ನಾಯಕ್. ಎ,ಯು. ಬಿದ್ದಪ್ಪ, (ಆಪರೇಷನ್ ಮೇಘದೂತ್) 2003, ನಾಯಕ್. ಎಚ್,ಜಿ ಸುಂದರೇಶ್, (ಆಪರೇಷನ್ ಪರಾಕ್ರಮ್) 2003, ಸಿಪಾಯಿ ಎ.ಪಿ.ಪ್ರಶಾಂತ್ (ಆಪರೇಷನ್ ರಕ್ಷಕ್) 2003
ನಾಯಕ್ ಕೆ.ಕೆ.ತಿಮ್ಮಯ್ಯ (ಆಪರೇಷನ್ ರಕ್ಷಕ್) 2007, ಎಲ್. ನಾಯಕ್. ಕೆ.ಸಿ.ತಿಲಕ್ (ಆಪರೇಷನ್ ರಕ್ಷಕ್) 2008, ಮೇಜರ್ ಸುನೀಲ್ ಗಣಪತಿ (ಆಪರೇಷನ್ ರಕ್ಷಕ್) 2008, ನಾಯಕ್ ಎ. ತಂಗಪ್ಪ, ರಾಧಾಕೃಷ್ಣ (ಆಪರೇಷನ್ ರಕ್ಷಕ್) 2009, ಸಿಪಾಯಿ ಕೆ.ಎಸ್.ರವೀಂದ್ರ (ಆಪರೇಷನ್ ರಕ್ಷಕ್) 2009, ಲೆ.ಕ ಸಿ.ಎನ್. ನಂಜಪ್ಪ (ಆಪರೇಷನ್ ಫಾಲ್ಕಾನ್) 2011 ಗಳು ಕನ್ನಡ ನಾಡಿನ ವೀರಪುತ್ರರೆಂಬ ಹೆಮ್ಮೆ ನಮ್ಮದಾಗಿದೆ.

Wednesday, November 04, 2020

ಆಫ್ರಿಕಾ ಕಗ್ಗತ್ತಲೆಯ ಖಂಡವಲ್ಲ ಕುಶನ ನಾಡು!!

 ಪ್ರಾಚೀನ ವೈದಿಕ ಕಥೆಯಲ್ಲಿ, ಆಫ್ರಿಕಾವನ್ನು ಕುಶದೀಪ್ ಅಥವಾ ಕುಶದ್ವೀಪ ಎಂದು ಕರೆಯಲಾಗುತ್ತಿತ್ತು.ಇದಕ್ಕೆ ಎರಡು ಕಾರಣಗಳಿದೆ., ಸಂಸ್ಕೃತದಲ್ಲಿ ಕುಶ ಎಂದರೆ ಹುಲ್ಲು ಎಂದರ್ಥ-ಎತ್ತರವಾದ ಹುಲ್ಲುಗಳಿಂದ ದೊಡ್ಡ ಪ್ರಮಾಣದ ಭೂಮಿಯನ್ನು ಆವರಿಸಲ್ಪಟ್ಟ ಭೂಮಿ ಎಂದು ಇದರ ಒಂದು ಅರ್ಥ. ಇನ್ನೊಂದೆಂದರೆ ರಾಮ ಮತ್ತು ರಾವಣನ ನಡುವಿನ ಯುದ್ಧದ ನಂತರ, ಆಫ್ರಿಕಾ ಖಂಡವಿರುವ ಪ್ರದೇಶಕುಶ್ ಅಥವಾ ಕುಶನ ಆಡಳಿತದಲ್ಲಿತ್ತು. ಆಫ್ರಿಕನ್ ಶಾಲಾ ಪಠ್ಯ ಪುಸ್ತಕಗಳು ಆಫ್ರಿಕನ್ನರನ್ನು ಕುಶೈಟ್ಸ್ ಎಂದು ವಿವರಿಸುತ್ತವೆ, ಇದು ಮೇಲಿನ ಮಾತಿಗೆ ಸಾಕ್ಷಿ!!

ಸ್ವಾಮಿ ಕೃಷ್ಣಾನಂದ್ ಒಮ್ಮೆ ಅಬಿಸ್ಸಿನಿಯನ್ ಸಾಮ್ರಾಜ್ಯದ  ದೊರೆ ಹೈಲೆ ಸೆಲಾಸ್ಸಿಗೆ ಭೇಟಿ ನೀಡಿ ರಾಮಾಯಣದ ಪ್ರತಿ ನೀಡಿದರು. ಕ್ರಿಶ್ಚಿಯನ್ ಆಡಳಿತಗಾರರು ರಾಮಾಯಣದ ಪ್ರತಿ ಕೇಳಿರುವ ಸಾಧ್ಯತೆ ಇರುವುದಿಲ್ಲಎಂದು ಅವರು ಭಾವಿಸಿದ್ದರು, ಆದರೆ ರಾಜನ ಹೇಳಿಕೆಯನ್ನು ಕೇಳಿ ಅಚ್ಚರಿಯಾಗಿತ್ತು ದೊರೆ ಹೇಳಿದ್ದಂತೆ "“ಇದು(ರಾಮಾಯಣ) ನಮಗೆ ಹೊಸತೇನಲ್ಲ. ನಾವು ಆಫ್ರಿಕನ್ನರು ಕುಶೈಟ್‌ಗಳು. ”" ಇದು ಕೃಷ್ಣಾನಂದ್ ಆಫ್ರಿಕನ್ ಶಾಲಾ ಪಠ್ಯ ಪುಸ್ತಕಗಳನ್ನು ಹುಡುಕಿ ಕುಶೈಟ್‌ಗಳು ಎಂದು ಗೊತ್ತುಪಡಿಸಿದ ಆಫ್ರಿಕನ್ನರ ಉಲ್ಲೇಖಗಳನ್ನು ಶೋಧಿಸಲು ಅವರಿಗೆ ಪ್ರೇರಣೆಯಾಗಿತ್ತು.ಮತ್ತು ಆಫ್ರಿಕನ್ ಪಠ್ಯಗಳಲ್ಲಿ ಈ ಕುಶನ ಬಗ್ಗೆ ಮಾಹಿತಿ ಕಲೆ ಹಾಕಿದರು.

ಪಠ್ಯದಲ್ಲಿ ಕುಶನ ತಂದೆಯನ್ನು ರಾಮ ಎನ್ನುವ ಬದಲು ಹ್ಯಾಮ್ ಎಂದು ತಪ್ಪಾಗಿ ಉಲ್ಲೇಖಿದೆ!ಈ ಹಿಂದೆ ವಿವರಿಸಿದಂತೆ, ರಾಮನನ್ನು ಪಶ್ಚಿಮ ಪ್ರದೇಶಗಳಲ್ಲಿ ರಾಮ್ ಎಂದು ಉಚ್ಚರಿಸಲಾಗಿತ್ತು. ಕಾಲಕ್ರಮೇಣ “ಆರ್” ಅಕ್ಷರ ಬಿಟ್ಟು ಉಚ್ಚರಿಸಲು ಮೊದಲಾಗಿತ್ತು.ಆಗ ಉಳಿಯುವುದೇ ಹ್ಯಾಮ್!

ದಕ್ಷಿಣ ಆಫ್ರಿಕಾದ ಪೂರ್ವ ಕರಾವಳಿಯ ಮಾರಿಷಸ್ ದ್ವೀಪ ರಾಮಾಯಣ ಕಾಲದ ಬಲವಾದ ಪುರಾವೆಯನ್ನು ಹೊಂದಿದೆ.ಈ ದ್ವೀಪಕ್ಕೆ "ಮಾರೀಚಾಸ್" ಎಂದು ಹೇಳಲಾಗುತ್ತಿತ್ತು. ಅಂದರೆ ರಾವಣನ ಸೇನಾಧಿಕಾರಿಯಾಗಿದ್ದ ಮಾರೀಚನ ದ್ವೀಪವಿದಾಗಿತ್ತು!! ಮಾರೀಚ ಎನ್ನುವುದು ಅಸುರನ ಹೆಸರೂ ಆಗಿರುವಂತೆ ಸೂರ್ಯನ ಹೆಸರೂ ಸಹ ಹೌದು!ಆದಾಗ್ಯೂ, ರಾಮನು ರಾವಣನೊಂದಿಗಿನ ಯುದ್ಧದ ಸಮಯದಲ್ಲಿ ಎಲ್ಲಾ ರಾಕ್ಷಸರನ್ನು ಆ ಪ್ರದೇಶದಿಂದ ಹೊರದಬ್ಬಿದ್ದನು ಮತ್ತು ಮಾರೀಚನನ್ನು ರಾಕ್ಷಸರ ಭದ್ರಕೋಟೆಗೆ ಪಲಾಯನ ಮಾಡುವಂತೆ ಮಾಡಿದ್ದನು.

ಪ್ರಾಚೀನ ಕುಶೈಟ್ ಸಾಮ್ರಾಜ್ಯದ ಅದ್ಭುತ ಇಥಿಯೋಪಿಯನ್ಸ್ (ಮೂರು ಸಂಪುಟಗಳಲ್ಲಿ) (The Wonderful Ethiopians of the Ancient Kushite Empir- three volumes written by Drusilla Dunjee Houston)ಎಂಬ ಶೀರ್ಷಿಕೆಯ ಡ್ರುಸಿಲ್ಲಾ ಡಂಜಿ ಹೂಸ್ಟನ್ ಅವರ ಪುಸ್ತಕದಲ್ಲಿ, ಆಫ್ರಿಕಾದ ಭೂಪ್ರದೇಶಕ್ಕೆ ಪ್ರಾಚೀನ ಹೆಸರು ಕುಶದ್ವೀಪಎಂದು ಅವರು ಸೂಚಿಸುತ್ತಾರೆ. ಇದು ಭಾಗವತ ಪುರಾಣದಲ್ಲಿ ಉಲ್ಲೇಖಿತ ಹೆಸರು.

ಶ್ರೀರಾಮನಿಗೆ ಲವ ಹಾಗೂ ಕುಶ ಎಂಬಿಬ್ಬರು ಮಕ್ಕಳಿದ್ದರಷ್ಟೆ ರಾಮ-ರಾವಣರ ಯುದ್ಧದ ನಂತರ ರಾಮನು ಪ್ರತಿಯೊಬ್ಬ ಮಗನಿಗೆ ಭೂಮಿಯ ಅರ್ಧದಷ್ಟು ಭಾಗವನ್ನು ನೀಡಿದ್ದನು.  ಆ ವೇಳೆ ಇಂದಿನ ಫ್ರಿಕಾವು ಭಗವಾನ್ ರಾಮನ ಮಗ ಕುಶನ ಆಡಳಿತಕ್ಕೆ ಬಂದಿತ್ತು.ಅದಕ್ಕಾಗಿ ಇದನ್ನು ಕುಶದ್ವೀಪಎಂದು ಕರೆಯಲಾಯಿತು. ಈ ಕಾರಣಕ್ಕಾಗಿ ಆಫ್ರಿಕನ್ ಜನರನ್ನು ಕುಶೈಟ್ಸ್ ಎಂದೂ ಕರೆಯಲಾಗುತ್ತದೆ. ಇದರಿಂದ ಕುಶ ಆಫ್ರಿಕನ್ನರಿಗೆ ಅತ್ಯಂತ ಮೆಚ್ಚಿನ ಹೆಸರು. ಹಾಗೂ ಆಫ್ರಿಕಾದೊಂದಿಗಿನ ವೈದಿಕ ಸಂಸ್ಕೃತಿಯ ಸಂಪರ್ಕ ರಾಮಾಯಣ ಕಾಲದಷ್ಟು ಹಿಂದಿನಿದಾಗಿದೆ.

ವಿಶೇಷವೆಂದರೆ ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್ ನ ಅಧ್ಯಾಯ 12, ಒಂದನೇ ಪದ್ಯದಲ್ಲಿ "ಮಿರಿಯಮ್ ಮತ್ತು ಆರೋನನು ಮೋಶೆಯ ವಿರುದ್ಧ ತಾನು ತೆಗೆದುಕೊಂಡ ಕುಶೈಟ್ ಹೆಂಡತಿಯ ಕಾರಣದಿಂದ ಮಾತನಾಡಿದ್ದನು" ಇದರರ್ಥವೆಂದರೆ ಕುಶೈಟ್‌ಗಳು ಒಂದು ವಿಶಿಷ್ಟ ಮತ್ತು ಮಾನ್ಯತೆ ಪಡೆದ ಸಮುದಾಯವಾಗಿದ್ದು ಈ ಸಮುದಾಯವು ಮೋಶೆಯ ಕಾಲಕ್ಕಿಂತಲೂ ಮೊದಲಿನಿಂದಲೂ ಆಫ್ರಿಕಾದಲ್ಲಿತ್ತು.ಮೋಶೆ ಈ ದೇಶದಿಂದ ಒಬ್ಬ ಮಹಿಳೆಯನ್ನು ಹೆಂಡತಿಯಾಗಿ ತೆಗೆದುಕೊಂಡಿದ್ದನ್ನೂ ಇದು ಸಾಧಿಸಿ ತೋರಿಸಿದೆ. ಹೆಚ್ಚಿನ ಬೈಬಲ್ ಸಿದ್ದಾಂತಿಗಳು ಕುಶನನ್ನು ಇಥಿಯೋಪಿಯಾದ ಪ್ರದೇಶದೊಂದಿಗೆ ಸಂಯೋಜಿಸುತ್ತಾರೆ. ಮೇಲಿನ ಪದ್ಯದಲ್ಲಿ, ಮಿರಿಯಮ್ ಮತ್ತು ಆರೋನನು ಮೋಶೆಯ ವಿರುದ್ಧ ಮಾತನಾಡಿದ್ದ ಕಾರಣ ಆತನ ಪತ್ನಿ, ಆಕೆ ಭಿನ್ನ ಜನಾಂಗದವಳಾಗಿದ್ದಳೆನ್ನುವುದಾಗಿದೆ.


ಪ್ರಾಚೀನ ಕಾಲದಲ್ಲಿ ಆಫ್ರಿಕಾವನ್ನು "ಶಂಖದ್ವೀಪ" ಎಂದೂ ಕರೆಯಲಾಗುತ್ತಿತ್ತು. ಏಕೆಂದರೆ ಆಫ್ರಿಕಾ ಭೂಖಂಡವನ್ನು ನೊಡಲು ದೋಡ್ಡ ಗಾತ್ರದ ಶಂಖದ ಚಿಪ್ಪಿನಂತಿತ್ತು! ಇಂಗ್ಲಿಷ್ ಪದ conch ಸಂಸ್ಕೃತದ "ಶಾಂಖ್"ನಿಂದ ವ್ಯುತ್ಪನ್ನವಾಗಿದೆ. ವೈದಿಕ ಆಡಳಿತಗಾರರು ಆಫ್ರಿಕಾದೊಂದಿಗೆ ಎಷ್ಟು ಪರಿಚಿತರಾಗಿದ್ದರು ಎಂಬುದನ್ನು ಇದು ತೋರಿಸುತ್ತದೆ, ಅದರ ಆಕಾರ ಮೈಲಿಗಳ ದೂರದಲ್ಲಿದ್ದ ಅವರಿಗೆ ಅರಿವಿತ್ತು!

ಆಫ್ರಿಕನ್ ಸ್ವಹಿಲಿ ಭಾಷೆ ಮತ್ತು ಇತರ ಸ್ಥಳೀಯ ಉಪಭಾಷೆಗಳು ಅದರ ಮೂಲ ಸಂಸ್ಕೃತದ ಕುರುಹುಗಳನ್ನು ಹೊಂದಿವೆ. ಉದಾಹರಣೆಗೆ, ಸಿಂಹಕ್ಕಾಗಿ ಸ್ವಹಿಲಿ ಪದ “ಸಿಂಬಾ” ಎಂಬುದು ಸಂಸ್ಕೃತ ಪದ "ಸಿಂಹ"ದ ತದ್ಭವ ರೂಪ. ಎರಡು ಸಂಸ್ಕೃತ ಪದಗಳ ಅಪಭ್ರಂಶದಿಂದ ಅಬಿಸ್ಸೀನಿಯಾಗೆ ಆ ಹೆಸರು ಬಂದಿದೆ. ಅಬಿಸ್ಸೀನಿಯಾದ ಮೂಲ ಪದ ಅಪ್ಪ್ ಸಿಂಧೂ ಎಂದಾಗಿದ್ದು ಇದು ಈ ಪ್ರದೇಶವು ಒಂದು ಕಾಲದಲ್ಲಿ ಸಿಂಧೂ ಪ್ರದೇಶದಿಂದ ಬಂದ ಜನರ ವಸಾಹತು ಎಂದು ಸಾರುತ್ತದೆ.

ಇನ್ನು ಆಫ್ರಿಕಾದ ಸೋಮಾಲಿಯ "ಸೋಮ"ನೊಂದಿಗೆ ಸಂಪರ್ಕ ಹೊಂದಿದೆ. ಅಲ್ಲಿನ ಜನರು ಚಂದ್ರನ ಆರಾಧಕರು ಎನ್ನುವುದು ಸಾಬೀತಾಗಿದೆ. ಮಾತ್ರವಲ್ಲದೆ ನಮ್ಮಲ್ಲಿ ಅಸುರನೆಂದು ಹೇಳಾಗುವ ಸುಮಾಲಿಯ ಆಳ್ವಿಕೆಯ ಪ್ರದೇಶವೂ ಇದಾಗಿತ್ತೆಂದು ಭಾವಿಸಲು ಸಾಧ್ಯ. ಏಕೆಂದರೆ ಹಿಂದೂ ಪುರಾಣಗಳಲ್ಲಿ ಮಾಲಿ ಹಾಗೂ ಸುಮಾಲಿ ಎಂಬಿಬರು ಅಸುರರು ಬಹಳ ಪ್ರಭಾವಶಾಲಿಗಳಾಗಿದ್ದು ಅವರ ನಾಡು ಎಂಬ ಅರ್ಥದಲ್ಲಿ ಈ ದೇಶಗಳನ್ನು ಹೆಸರಿಸಲಾಗಿದೆ! ಮಾಲಿ ಹೆಸರಿನ ದೇಶ ಸಹ ಆಫ್ರಿಕಾದಲ್ಲಿದ್ದು ಸುಮಾಲಿ ಎಂಬ ಪ್ರದೇಶವೇ ಕಾಲಕ್ರಮೇಣ ಸೊಮಾಲಿಯಾ ಆಗಿರಬಹುದು! "ಟ್ಯಾಂಗಾನಿಕಾ" ಪದದ ಮೂಲ ಸಂಸ್ಕೃತವಾಗಿದ್ದು "ತುಂಗ ನಾಯಕ" ಎಂದಿದೆ. "ತುಂಗ ನಾಯಕ ಎಂದರೆ ಶ್ರೇಷ್ಠ ನಾಯಕ ಎಂಬರ್ಥವಿದೆ. ಇದರೊಂದಿಗೆ ಜಾಂಜಿಬಾರ್ (ಕಾಂಚೀಪುರ ಸಂಸ್ಕೃತ ಹೆಸರಿನ ಹೋಲಿಕೆ)ವಿಲೀನಗೊಂಡು ಟಾಂಜಾನಿಯಾ ಆಗಿ ಮಾರ್ಪಟ್ಟಿದೆ. ಬಂದರು ನಗರ ದಾರ್-ಎಸ್-ಸಲಾಮ್ ಎಂಬುದು ಸಂಸ್ಕೃತ ಪದ ದ್ವಾರ-ಈಶಾಲಯಂ, ಇದರ ಅರ್ಥ “ದೇವರ ಆಲಯದ ಮಹಾದ್ವಾರ" 

ಇ. ಪೊಕೊಕೆಯವರ ಇಂಡಿಯಾ ಇನ್ ಗ್ರೀಸ್ (ಪುಟ 205)(India in Greece written by E. Pococke) ಎಂಬ ಪುಸ್ತಕದಲ್ಲಿ, ಇಥಿಯೋಪಿಯನ್ನರು ಮೂಲತಃ ಭಾರತೀಯ ಜನಾಂಗಕ್ಕೆ ಸೇರಿದ್ದವರೆಂದು ಹೇಳಿದ್ದಾರೆ. ಬ್ಬ ನಿರ್ದಿಷ್ಟ ರಾಜನನ್ನು ಕೊಲ್ಲುವ ಪಾಪಕ್ಕಾಗಿ ಅವರು ಭಾರತವನ್ನು ತೊರೆಯಬೇಕಾಯಿತು. ಭಾರತೀಯರು ಪುರುಷರಿಗಿಂತ ಬುದ್ಧಿವಂತರು ಮತ್ತು ಭಾರತೀಯರ ವಸಾಹತು ಪ್ರದೇಶವಾದ ಇಥಿಯೋಪಿಯನ್ನರು ತಮ್ಮ ತಂದೆಯ ಬುದ್ಧಿವಂತಿಕೆ ಮತ್ತುಗುಣಗಳನ್ನು ಕಾಪಾಡಿಕೊಂಡರು ಮತ್ತು ಇದು ಅವರ ಮೂಲ ಎಂದು ಒಪ್ಪಿಕೊಂಡರು ಎಂದು ಈಜಿಪ್ಟಿನ ಮತ್ತೊಬ್ಬ ವಿಧ್ವಾಂಸರು ಹೇಳಿದ್ದಾರೆಂದು ಪೊಕೊಕೆ ಹೇಳುತ್ತಾರೆ. ಅದೇ ತೀರ್ಮಾನವನ್ನು ಜೂಲಿಯಸ್ ಆಫ್ರಿಕಾನಸ್ ನಂತರದ ಅವಧಿಯಲ್ಲಿ ಮಾಡಿದ್ದಾನೆಂದು ಕಂಡುಹಿಡಿದಿದ್ದಾರೆ. ಹಾಗಾಗಿ ಇಥಿಯೋಪಿಯನ್ನರು ಸಿಂಧೂ ಪ್ರದೇಶದಿಂದ ವಲಸೆ ಬಂದು ಈಜಿಪ್ಟ್‌ನ ಸಮೀಪದಲ್ಲಿ ನೆಲೆಸಿದರು ಖಚಿತವಾಗುತ್ತದೆ.

ನಾವು ಇಂದು ಆಫ್ರಿಕಾದ ಧರ್ಮಗಳನ್ನು ವಿಶ್ಲೇಷಿಸಿದಾಗ, ಸಾಂಪ್ರದಾಯಿಕ ಆಫ್ರಿಕನ್ ಧರ್ಮಗಳಲ್ಲಿ ದೇವರು ಮತ್ತು ಭೂಮಿಯ ಮೇಲಿನ ಜೀವನದ ಕುರಿತಾದ ಮೂಲಭೂತ ಪರಿಕಲ್ಪನೆಗಳು ವೈದಿಕ ಸಂಸ್ಕೃತಿಯ ತತ್ವಗಳಿಗೆ ಅನುಗುಣವಾಗಿರುತ್ತವೆ ಎಂಬುದನ್ನು ನಾವು ಕಂಡುಕೊಳ್ಲಬಹುದು. . ಭವಿಷ್ಯಜ್ಞಾನದ ವಿಧಾನಗಳು ಮತ್ತು ಅಂಗೀಕಾರದ ವಿಧಿಗಳು ವೈದಿಕ ಸಂಪ್ರದಾಯಗಳಲ್ಲಿ ಕಂಡುಬರುವಂತೆಯೇ ಇರುತ್ತವೆ. ಅಲ್ಲದೆ, ಕುಶೈಟ್ ಸಂಸ್ಕೃತಿಯಲ್ಲಿ ದೈವತ್ವದೊಂದಿಗಿನ ಸಂಪರ್ಕವು ಜೀವನದ ಪ್ರಮುಖ ಅಂಶವಾಗಿತ್ತು. ಎಲ್ಲಾ ಸಾಂಪ್ರದಾಯಿಕ ಆಫ್ರಿಕನ್ ಧರ್ಮಗಳು ಪರಮಾತ್ಮನನ್ನು ಸ್ವೀಕರಿಸುತ್ತವೆ, ಆದರೆ ಅವನ ಕಾರ್ಯವು ಪ್ರದೇಶಕ್ಕೆ ಅನುಗುಣವಾಗಿ ಭಿನ್ನವಾಗಿರುತ್ತದೆ. ಅವರು ಕಡಿಮೆ ದೇವರುಗಳನ್ನು ಹೊಂದಿದ್ದಾರೆ.ಪೂರ್ವಜರನ್ನು ಗೌರವಿಸುತ್ತಾರೆ ಮತ್ತು ಮಾಂತ್ರಿಕ ಆಚರಣೆಗಳನ್ನು ಮಾಡುತ್ತಾರೆ.

Mbuti Pygmies ಆಕಾಶದ ಅಧಿಪತಿ ಎಂದುಪ್ರಾಚೀನ ಮಾನವನ ರೂಪದಲ್ಲಿ ಸರ್ವೋಚ್ಚ ಸೃಷ್ಟಿಕರ್ತನನ್ನು ನಂಬುತ್ತಾರೆ. ಅವರಿಗೆ ಚಂದ್ರನ ಬಗ್ಗೆ ಗೌರವವೂ ಇದೆ. ಅನೇಕರು ಪ್ರಾರ್ಥಿಸುವ ದೇವರೂಪರೋಪಕಾರಿಯಾಗಿದ್ದಾನೆ.. ಧಾರ್ಮಿಕ ಉದ್ದೇಶಗಳಿಗಾಗಿ ಹಬ್ಬಗಳಲ್ಲಿ ಮತ್ತು ಬಾಲಕ ಮತ್ತು ಬಾಲಕಿಯರ ಪ್ರೌಢಾವಸ್ಥೆಯ ವಿಧಿಗಳಲ್ಲಿ ಅವರು ಧಾರ್ಮಿಕ ನೃತ್ಯ ಮತ್ತು ಔತಣಕೂಟವನ್ನು ಸಹ ಮಾಡುತ್ತಾರೆ. ದಕ್ಷಿಣ ಆಫ್ರಿಕಾದ ಬುಷ್ಮೆನ್ ಆಕಾಶ ಶಕ್ತಿಗಳನ್ನು ನಂಬುತ್ತಾರೆ ಮತ್ತು ಅವರ ಗುಣಲಕ್ಷಣಗಳನ್ನು ವಿವರಿಸುವ ದಂತಕಥೆಗಳನ್ನು ಹೊಂದಿದ್ದಾರೆ. ನೈಸರ್ಗಿಕ ಶಕ್ತಿಗಳ ಪರಿಣಾಮತ್ವವನ್ನೂ ಅಂಗೀಕರಿಸಲಾಗಿದೆ, ಮತ್ತು ಮಳೆಯಂತಹಾ ಶಕ್ತಿಗಳ ಆರಾಧನೆ ಮಾಡುತ್ತಾರೆ.

ಕಲಹರಿ ಮತ್ತು ಕಾಂಗೋದಿಂದ ಟಾಂಜಾನಿಯಾವರೆಗೆ ಓಮ್ನಿ-ಪ್ರಸ್ತುತ ಸರ್ವೋಚ್ಚ ಸೃಷ್ಟಿಕರ್ತನಲ್ಲಿ ನಂಬಿಕೆ ಇದೆ, ಅವರು ತಮ್ಮ ಕೃತಿಗಳಿಗೆ ಅನುಗುಣವಾಗಿ ಜನರನ್ನು ಶಿಕ್ಷಿಸುತ್ತಾರೆ ಮತ್ತು ಪ್ರತಿಫಲ ನೀಡುತ್ತಾರೆ. ಆದರೆ ಕೆಲವು ಸಂಘಟಿತ ಧಾರ್ಮಿಕ ಸಮಾಜಗಳಿವೆ ಮತ್ತು ಸುಪ್ರೀಂಗೆ ನಿಯಮಿತವಾಗಿ ಪೂಜೆ ಸಲ್ಲಿಸಲು ದೊಡ್ಡ ದೇವಾಲಯ ನಿರ್ಮಾಣವಾಗಿಲ್ಲ . ಆದಾಗ್ಯೂ, ಸಾಮಾನ್ಯ ಸಮಯದಲ್ಲಿ ಯಾರಾದರೂ ಅಗತ್ಯವಿರುವ ಸಮಯದಲ್ಲಿ ದೇವರನ್ನು ಪ್ರಾರ್ಥಿಸಬಹುದು ಮತ್ತು ಪ್ರಕೃತಿಯ ಮತ್ತು ಭೂಮಿಯ ಎಲ್ಲಾ ಕಾರ್ಯಗಳನ್ನು ಅವರು ನೋಡಿಕೊಳ್ಳುತ್ತಾನೆಸಾವಿನ ನಂತರದ ಜೀವನದಲ್ಲಿ ನಂಬಿಕೆ ಎಲ್ಲೆಡೆ ಕಂಡುಬರುತ್ತದೆ. ಅಂತ್ಯಕ್ರಿಯೆಯ ಸಮಾರಂಭದ ಒಂದು ಭಾಗವು ಸತ್ತವರು ಶಾಂತಿಯಿಂದ ಇರುತ್ತಾರೆ ಮತ್ತು ಪ್ರಕ್ಷುಬ್ಧ ಭೂತವಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಆಗಾಗ್ಗೆ ವಿಧಿಗಳ ಆಚರಣೆ ನಡೆಯುತ್ತದೆ.ಇವೆಲ್ಲವೂ ಸಾಮಾನ್ಯ ವೈದಿಕ ಪರಂಪರೆಯ ಬಳುವಳಿಯೇ ಆಗಿದೆ.

ಇದಕ್ಕೆ ಇನ್ನೊಂದು ಪುರಾವೆ ಕೊಡಬಹುದಾದರೆ ಆಫ್ರಿಕಾದ ಈಜಿಪ್ಟ್ ನಲ್ಲಿ ನಮ್ಮ ಸನಾತನ ಸಂಸ್ಕೃತಿಯಿತ್ತು ಎನ್ನಲು ಪ್ರಾಚೀನ ಈಜಿಪ್ಟ್ ನಲ್ಲಿ ಎತ್ತುಗಳ ಪೂಜೆ ನಡೆಯುತ್ತಿದ್ದದ್ದು ಸಾಕ್ಷಿ. ಪ್ರಾಚೀನಈಜಿಪ್ಟ್‌ನಲ್ಲಿ ಎತ್ತುಗಳನ್ನು ಪೂಜಿಸಲಾಗುತ್ತಿತ್ತು,ಮತ್ತು ಈಗಲೂ ಭಾರತದ ಹಿಂದೂಗಳು ಎತ್ತನ್ನು ಪೂಜಿಸುತ್ತಾರೆ. ಯುರೋಪ್ ಮತ್ತು ಆಫ್ರಿಕಾದ ಆರಂಭಿಕ ಪರಿಶೋಧಕರು ಹಿಂದೂಗಳು. 'ನೈಲ್' ನದಿಯು ಅವಳ ನೀಲಿ ನೀರನ್ನು ಸೂಚಿಸುವ ಸಂಸ್ಕೃತ ಹೆಸರಾದ "ನೀಲಾ" ಎಂಬ ಹೆಸರನ್ನು ಹೊಂದಿದೆ. (Published in "Egyptian Myth and Legend" page 70 and "Long Missing Links" page 233.)

ಇಷ್ಟು ಮಾತ್ರವಲ್ಲದೆ ನಾನು ಈ ಹಿಂದೆ "ನರಸಿಂಹಾವತಾರ"ದ ವಿಶ್ಲೇಷಣೆಯಲ್ಲಿ ಬರೆದಂತೆ (https://bit.ly/2JxjEnr) ಆಫ್ರಿಕಾದಲ್ಲಿ ಸಿಂಹ ದೇವತೆಯ ಆರಾಧನೆಗೆ ಮಹತ್ವವಿತ್ತು. ಅದು ನಮ್ಮ ನರಸಿಂಹನಂತೆಯೇ ಮಹತ್ವದ ದೇವರಾಗಿದ್ದದ್ದು ಅಸಹಜವೇನಲ್ಲ. ಇನ್ನು ಈಜಿಫ್ಟಿನ ಫೆರೋಗಳನ್ನು ಅಲ್ಲಿನ ಜನರು ಬೃಹತ್ ಗಾತ್ರಗಳ ಚಿತ್ರದಲ್ಲಿ ತೋರಿಸಿದ್ದು  ನಿಜಕ್ಕೂ ಚ್ಚರಿಯ ಸಂಗತಿಯಲ್ಲ ಏಕೆಂದರೆ ಅವರು ನಮ್ಮ ಪುರಾಣದಲ್ಲಿ ಬರುವ ದೈತ್ಯ ಕುಲಕ್ಕೆ ಸೇರಿದವರಾಗಿದ್ದರು. ಸಿಂಹನಾರಿ, ಪಿರಮಿಡ್ ನಿರ್ಮಾಣ ಮಾಡಿದ ಮಹಾನ್ ಸಾಹಸಿಗಳು ಮೂಲತಃಅ ಭಾರತದಿಂದ ವಲಸೆ ಹೋದ ಸಂತತಿಗಳೇ ಆಗಿದ್ದರೆನ್ನಲು ಆಧುನಿಕ ಕಾಲದ ಸಂಶೋಧನೆಗಳೂ ಸಾಕ್ಷಿಯಾಗಿದೆ. (ಸಿಂಹನಾರಿ-ಸ್ಪಿಂಕ್ಸ್ ಗಳಿಗೂ ಟಿಬೆಟ್ ನಲ್ಲಿರುವ ಕೈಲಾಸ ಪರ್ವತಕ್ಕೂ ಸಂಪರ್ಕವಿದೆ ನ್ನುವ ಬಗ್ಗೆಯೂ ಸಂಶೋಧನೆಗಳು ನಡೆದಿವೆ)

ಇದಷ್ಟೇ ಅಲ್ಲದೆ ಪ್ರಾಚೀನ ವೈದಿಕ ಸಂಸ್ಕೃತಿಯಲ್ಲಿ ವಿವಿಧ ಭೂಖಂಡಗಳನ್ನು ವಿವಿಧ ಲೋಕಗಳೆಂದು ಕರೆಯಲಾಗಿತ್ತು ಎನ್ನುವುದು ಸರ್ವವಿಧಿತ.ಅಂತೆಯೇ ದಕ್ಷಿಣ ಅಮೆರಿಕಾ ಪಾತಾಳ ಲೋಕವಾಗಿದ್ದರೆ ಆಫ್ರಿಕಾ ರಸಾತಳವಾಗಿತ್ತು.ಬಲಿಚಕ್ರವರ್ತಿ ಹಾಗೂ ಅವರ ವಂಶಸ್ಥರು ಆಫ್ರಿಕಾವನ್ನು ಆಳಿದ್ದರೆನ್ನಲಾಗುತ್ತದೆ.,

ಇಷ್ಟು ಮಾತ್ರವಲ್ಲದೆ ನಮ್ಮ ಪುರಾಣದಲ್ಲಿನ ಅಸುರ ಸ್ವರಭಾನು (ರಾಹು ಹಾಗೂ ಕೇತು ಗ್ರಹಗಳ ಮೂಲವ್ಯಕ್ತಿ) ಗೂ ಆಫ್ರಿಕಾದಲ್ಲಿನ ಸುಡಾನ್ ದೇಶಕ್ಕೂ ಸಂಬಂಧವಿದೆ ಎಂದು ಕಲ್ಪನೆಯಿದೆ.

ಇಸ್ಲಾಂ (130 ಮಿಲಿಯನ್ ಅನುಯಾಯಿಗಳು) ಮತ್ತು ಕ್ರಿಶ್ಚಿಯನ್ ಧರ್ಮ (160 ಮಿಲಿಯನ್ ಅನುಯಾಯಿಗಳು ಮತ್ತು ಆರು ಸಾವಿರ ಪಂಥಗಳು) ಹರಡುತ್ತಿರುವುದರಿಂದ ಪ್ರಾಚೀನ ಆಫ್ರಿಕನ್ ಧರ್ಮಗಳು ಈಗ ನಶಿಸುತ್ತಿದೆ.ಆದರೆ ಅನೇಕ ಹಳೆಯ ಆಚರಣೆಗಳು ಮತ್ತು ನಂಬಿಕೆಗಳು ಈ ಹೊಸ ಧರ್ಮಗಳೊಂದಿಗೆ ವಿಲೀನಗೊಂಡಿವೆ.

Sunday, November 01, 2020

ಕರ್ನಾಟಕದಲ್ಲಿ ಬೆಳಗಿದ ಆದ್ಯಾತ್ಮಿಕ ಚೇತನಗಳು

ಕರ್ನಾಟಕ ರಾಜ್ಯೋತ್ಸವದ ಈ ಶುಭದಿನದಂದು ಕನ್ನಡ ನಾಡಿನಲ್ಲಿ ಬಾಳಿ ಬದುಕಿದ, ಕರ್ನಾಟಕ ಜನರ, ಕನ್ನಡ ನಾಡಿನ ಮಾರ್ಗದರ್ಶಕರಾದ ಕೆಲವಷ್ಟು ಆದ್ಯಾತ್ಮಿಕ ಸಾಧಕರ ಬಗೆಗೆ ತಿಳಿಸುವ ಚಿಕ್ಕ ಪ್ರಯತ್ನವಿಲ್ಲಿದೆ. 

ಶ್ರೀಧರ ಸ್ವಾಮಿಗಳು

ಶ್ರೀಧರ ಸ್ವಾಮಿಗಳು (೧೯೦೮–೧೯೭೩) ಒಬ್ಬ ಪ್ರಮುಖ ಮರಾಠಿ-ಕನ್ನಡ ಸಂತರು ಮತ್ತು ಹಿಂದೂ ಧರ್ಮದ ಪ್ರವರ್ತಕರು. ಶ್ರೀಧರ ಸ್ವಾಮಿಗಳು ಹಿಂದೂ ದೇವತೆ ರಾಮನ ಭಕ್ತರು ಮತ್ತು ಸಮರ್ಥ ರಾಮದಾಸರ ಶಿಷ್ಯರೂ ಆಗಿದ್ದರು.

ಮಹಾರಾಷ್ಟ್ರ ರಾಜ್ಯದ ನಾಂದೇಡ್ ಜಿಲ್ಲೆಗೆ ಒಳಪಡುವ ದೇಗಲೂರಿನಲ್ಲಿ ’ಪತಕೀ’ ಎಂಬ ಅಡ್ಡ ಹೆಸರಿನ ಮನೆತನವಿತ್ತು. ಋಗ್ವೇದಿ ಆಶ್ವಲಾಯನ ಶಾಖೆಯ ದೇಶಸ್ಥ ಬ್ರಾಹ್ಮಣರ ಆಚಾರ ನಿಷ್ಠ, ಭಕ್ತಿಪರಾಯಣವಾದ ಈ ತೇಜಸ್ವೀ ಕುಲದಲ್ಲಿ ಶ್ರೀನಾರಾಯಣ ರಾಯರು ಮತ್ತು ಕಮಲಾಬಾಯಿ ಎಂಬ ಆದರ್ಶ ದಂಪತಿಗಳಿದ್ದರು. ಇವರೇ ಶ್ರೀ ಶ್ರೀಧರ ಸ್ವಾಮಿಗಳವರನ್ನು ಪುತ್ರ ರೂಪದಿಂದ ಪಡೆದ ಭಾಗ್ಯಶಾಲಿಗಳು. ಇವರಿಗೆ ೨ ಗಂಡು, ೧ ಹೆಣ್ಣು ಮಕ್ಕಳಿದ್ದರೂ ಇವರೆಲ್ಲಾ ಅಲ್ಪಾಯುಷಿಗಳೆಂದು, ಗಾಣಗಾಪುರಕ್ಕೆ ಹೋಗಿ ಶ್ರೀ ದತ್ತ ಗುರುವಿನ ಸೇವಾ, ಅನುಷ್ಠಾನ, ತಪವನ್ನಾಚರಿಸಿದರೆ ನಿಮಗೊಬ್ಬ ಕುಲೋದ್ಧಾರಕ ಪುತ್ರನಾಗುವ ಯೋಗವಿದೆ ಎಂದು ಕುಲಪುರೋಹಿತರು ಇವರ ಜನ್ಮಕುಂಡಲಿಯನ್ನು ನೋಡಿ ಹೇಳಿದರು. ಅಂತೆಯೇ ಈ ದಂಪತಿಗಳು ಗಾಣಗಾಪುರಕ್ಕೆ ತೆರಳಿ ಉಗ್ರ ತಪಸ್ಸನ್ನಾಚರಿಸಲಾಗಿ, ಶ್ರೀ ದತ್ತನ ಸಾಕ್ಷಾತ್ಕಾರವಾಯಿತು. ನಿಮಗೆ ಒಬ್ಬ ನಿವೃತ್ತಿ ಮಾರ್ಗದ ಕುಲೋದ್ಧಾರಕ ಮಾತ್ರವಲ್ಲದೆ ವಿಶ್ವೋದ್ಧಾರಕ ತೇಜಸ್ವೀ ಪುತ್ರನಾಗುವನು ಎಂದು ವರವನ್ನಿತ್ತು ಶ್ರೀ ದತ್ತನು ಅಂತರ್ಧಾನನಾದನು. ಇದರಂತೆಯೇ ಗರ್ಭವತಿಯಾದ ಕಮಲಾಬಾಯಿಯವರನ್ನು ಇವರ ತಾಯಿಯು ತನ್ನ ಇನ್ನೊಂದು ಮಗಳ ಮನೆಯಾದ ಲಾಡ್ ಚಿಂಚೋಳಿಗೆ ಕರೆದೊಯ್ದರು. ಇದು ಕರ್ನಾಟಕ ಪ್ರಾಂತ್ಯದ ಗುಲ್ಬರ್ಗಾ ಜಿಲ್ಲೆಯಲ್ಲಿ ಗಾಣಗಾಪುರದಿಂದ ಸುಮಾರು ೨೫ ಕಿ.ಮೀ. ದೂರದಲ್ಲಿದೆ. ಇಲ್ಲಿಯೇ ಶಕೆ ೧೮೩೦ (ಡಿಸೆಂಬರ್ ೫, ೧೯೦೮) ರಲ್ಲಿ ಮಾರ್ಗಶೀರ್ಷ ಪೌರ್ಣಿಮೆಯಂದು ದತ್ತ ಜನ್ಮದ ವೇಳೆಯಲ್ಲಿಯೆ ಸಾಕ್ಷಾತ್ ಪರಬ್ರಹ್ಮ ಸ್ವರೂಪಿ ಶ್ರೀ ಶ್ರೀಧರರು ಜನ್ಮತಾಳಿದರು. ಶ್ರೀಧರ ಸ್ವಾಮಿಗಳು ೩ ವರ್ಷದವರಾಗಿದ್ದಾಗಲೇ ತಮ್ಮ ತಂದೆಯವರನ್ನು ಕಳೆದುಕೊಂಡರು. ನಂತರ ಅವರ ತಾಯಿ ಮತ್ತು ಸಹೋದರ ತ್ರ್ಯಂಬಕ ಕುಟುಂಬದ ಜವಾಬ್ದಾರಿ ವಹಿಸಿಕೊಂಡರು. ಶ್ರೀಧರರನ್ನು ಪ್ರಾಥಮಿಕ ಶಿಕ್ಷಣಕ್ಕಾಗಿ ಹೈದರಾಬಾದಿನ ಶಾಲೆಯೊಂದಕ್ಕೆ ಸೇರಿಸಲಾಯಿತು. ಬಾಲ್ಯದಿಂದಲೇ ಅವರು ಅಧ್ಯಾತ್ಮದ ಬಗ್ಗೆ ಒಲವು ಹೊಂದಿದ್ದರು. ಶ್ರೀ ಶ್ರೀಧರರಿಗೆ ಬಾಲ್ಯದಲ್ಲಿಯೇ ಹರಿಕಥಾ, ಕೀರ್ತನೆ, ಸತ್ಸಂಗ ಪುರಾಣ ಪ್ರವಚನಗಳಲ್ಲಿ ತುಂಬ ಅಭಿರುಚಿಯೂ ಮತ್ತು ಸನಾತನ ಧರ್ಮದಲ್ಲಿ ಅಚಲವಾದ ಶ್ರದ್ಧಾ, ಭಕ್ತಿ, ನಿಷ್ಠೆಗಳಿದ್ದವು. ಮುಖ ಕಮಲದಲ್ಲಿ ಅಖಂಡರಾಮನಾಮವಿತ್ತು. ಅವರ ಬಾಲ್ಯದ ಘಟನೆಯೊಂದು ಹೀಗಿದೆ: ಅವರು ಒಮ್ಮೆ ಅನಾರೋಗ್ಯಕ್ಕೊಳಗಾಗಿದ್ದರು ಮತ್ತು ಬಹಳ ದಿನ ಶಾಲೆಯನ್ನು ತಪ್ಪಿಸಿಕೊಂಡಿದ್ದರು. ಹೀಗಾಗಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಬಹುದೆಂದು ಹೆದರಿದ್ದರು. ಆಗ ಅವರ ತಾಯಿ ಅವರಿಗೆ ಸತತವಾಗಿ ರಾಮ ನಾಮ ಜಪಿಸಬೇಕೆಂದೂ ರಾಮ ಅವರ ಪರೀಕ್ಷೆಗಳನ್ನು ಸುಗಮಗೊಳಿಸುವನೆಂದೂ ಹೇಳಿದರು. ಅವರು ಶ್ರದ್ಧೆಯಿಂದ ಅದನ್ನು ಮಾಡಲಾರಂಭಿಸಿದರು; ಎಷ್ಟರ ಮಟ್ಟಿಗೆ ಎಂದರೆ ಅವರು ಸದಾ ಕಾಲ ರಾಮನಾಮವನ್ನೇ ಜಪಿಸುತ್ತಾ ಓದಲೇ ಇಲ್ಲ. ಪರೀಕ್ಷೆಯ ದಿನ ಅವರು ಏನನ್ನೂ ಓದದೆ ಹೋದರು ಮತ್ತು ಎಲ್ಲರಿಗೂ ಆಶ್ಚರ್ಯವಾಗುವಂತೆ ಎಲ್ಲ ಪ್ರಶ್ನೆಗಳಿಗೂ ಚೆನ್ನಾಗಿ ಉತ್ತರ ಬರೆದು ಮೊದಲಿಗರಾಗಿ ಉತ್ತೀರ್ಣರಾದರು. ಶ್ರೀಧರರು ಕೇವಲ ೧೦ ವರ್ಷದವರಿದ್ದಾಗ ಅವರ ಅಣ್ಣ ತೀರಿಕೊಂಡರು. ಅವರ ತಾಯಿ ಕೂಡ ಈ ಆಘಾತ ಮತ್ತು ದೀರ್ಘ ಕಾಯಿಲೆಯಿಂದ ಬಳಲಿ, ಕೆಲವೇ ಸಮಯದಲ್ಲಿ ತೀರಿಕೊಂಡರು. ಆಕೆಯ ಸಾವಿನ ನಂತರ ಶ್ರೀಧರರು ಗುಲ್ಬರ್ಗಾಕ್ಕೆ ಹೋಗಿ ಅವರ ಚಿಕ್ಕಮ್ಮನ ಜೊತೆ ಉಳಿದುಕೊಂಡು ನೂತನ ವಿದ್ಯಾಲಯದಲ್ಲಿ ತಮ್ಮ ವಿದ್ಯಾಭ್ಯಾಸ ಮುಂದುವರೆಸಿದರು. ಗುಲ್ಬರ್ಗಾದಲ್ಲಿ ಕೆಲವು ವರ್ಷಗಳನ್ನು ಕಳೆದ ನಂತರ, ಅವರು ಪುಣೆಗೆ ಹೋಗಿ ಕೆಲವು ಸಮಯಗಳ ಕಾಲ ಅನಾಥ ವಿದ್ಯಾರ್ಥಿ ಗೃಹ ಎಂಬ ಒಂದು ಅನಾಥಾಶ್ರಮದಲ್ಲಿ ಉಳಿದುಕೊಂಡರು. ಇಲ್ಲಿ ಅವರ ಆಧ್ಯಾತ್ಮಿಕ ಜ್ಞಾನ ಸಂಪಾದನೆಯ ಆಸಕ್ತಿ ಬೆಳೆಯಿತು. ಈ ನಶ್ವರ ವಿದ್ಯೆಯ ವೇಳೆಯನ್ನು ಶಾಶ್ವತವಾದ ಆಧ್ಯಾತ್ಮ ವಿದ್ಯೆಗಾಗಿ ವಿನಿಯೋಗಿಸಿದರೆ ಆದಷ್ಟು ಜಾಗ್ರತೆ ಆತ್ಮಸಾಕ್ಷಾತ್ಕಾರವಾಗಿ ಲೋಕದ ಉದ್ಧಾರಕ್ಕೂ ಪೂರ್ಣ ಸಾಮರ್ಥ್ಯ ಬರುವುದೆಂದು ನಿರ್ಧರಿಸಿ ಶ್ರೀ ಪಳ್ನಿಟ್ಕರ್ ಅವರ ಸಲಹೆಯ ಮೇರೆಗೆ ಅಧ್ಯಾತ್ಮ ಜ್ಞಾನ ಸಂಪಾದನೆಗಾಗಿ ಶ್ರೀ ಸಮರ್ಥ ರಾಮದಾಸರು ಸುಮಾರು ಮುನ್ನೂರು ವರ್ಷಗಳ ಹಿಂದೆ ವಾಸವಾಗಿದ್ದ ಸಜ್ಜನಗಡ ಎಂಬ ಸ್ಥಳಕ್ಕೆ ಹೊರಟರು.

ಸಜ್ಜನಗಡ  ಮತ್ತು ಆಧ್ಯಾತ್ಮಿಕ ಜಾಗೃತಿ

ಕಾಲಕ್ರಮೇಣ, ಶಾಲೆಯಲ್ಲಿ ತನ್ನ ಒಬ್ಬ ಶಿಕ್ಷಕರಾದ ಶ್ರೀಪಳ್ನಿಕರ್ ಗುರೂಜಿಯೊಂದಿಗೆ ಅವರು ಚೆನ್ನಾಗಿ ಪರಿಚಯವಾದರು. ಆಧ್ಯಾತ್ಮಿಕತೆಯತ್ತ ಶ್ರೀಧರನ ಒಲವು ಕಂಡುಕೊಂಡ ಅವರು  ಸಮರ್ಥಾ ರಾಮದಾಸ್ ಸ್ವಾಮೀಜಿಯ ಆಶೀರ್ವಾದವನ್ನು ಪಡೆಯುವಂತೆ ಹೇಳಿದರು. ಸಜ್ಜನಗಡದಲ್ಲಿ  ತಮ್ಮ ಜೀವನದ ಕೊನೆಯ ಆರು ವರ್ಷಗಳಿಂದ ಸ್ವಾಮಿ ಸಮರ್ತ್ ರಾಮದಾಸ್ ಅವರ ವಾಸಸ್ಥಾನವಾಗಿಸಿಕೊಂಡಿದ್ದರು. ಅದಾಗಿ ಸಜ್ಜನಗಡಕ್ಕೆ ಆಗಮಿಸಿದ ಶ್ರೀಧರರನ್ನು ಒಂದೂವರೆ ವರ್ಷಗಳ ನಂತರ, ಸಮರ್ಥ್ ರಾಮದಾಸ್ ಸ್ವತಃಆಶೀರ್ವದಿಸಿದರು. ನಂತರ, ಅವರು ದಕ್ಷಿಣ ಭಾರತ, ಕರ್ನಾಟಕಕ್ಕೆ ಹೋಗಿ ಸನಾತನ ವೈದಿಕ ಧರ್ಮದ ನಿಜವಾದ ಸಂದೇಶವನ್ನು ಹರಡಲು ನಿರ್ದೇಶಿಸಿದರು.

ಧಾರ್ಮಿಕ ಔನ್ನತ್ಯಕ್ಕಾಗಿ ಭಾರತ ಪ್ರವಾಸ

ಮುಂದಿನ ಹನ್ನೆರಡು ವರ್ಷಗಳ ಕಾಲ ಶ್ರೀಧರ ಸ್ವಾಮಿಗಳು ದಕ್ಷಿಣ ಭಾರತದ ಹೆಚ್ಚಿನ ಭಾಗಗಳನ್ನು ಬರಿಗಾಲಿನಲ್ಲಿ ಸಂಚರಿಸಿದರು. ಅವರು ದೇವಸ್ಥಾನಗಳು ಮತ್ತು ಮಠಗಳಲ್ಲಿ ಉಳಿದುಕೊಂಡು ಸನಾತನ ವೈದಿಕ ಧರ್ಮ ಮತ್ತು ಧಾರ್ಮಿಕ ಔನ್ನತ್ಯಕ್ಕಾಗಿ ಪ್ರವಚನಗಳನ್ನು ನೀಡಲಾರಂಭಿಸಿದರು. ಪ್ರವಾಸದ ವೇಳೆಗಳಲ್ಲಿ ಅವರು ಹಲವು ಹಿಂದೂ ಧರ್ಮದ ಮುಖಂಡರು ಮತ್ತು ಸಂತರ ಪರಿಚಯ ಪಡೆದುಕೊಂಡರು. ಇವುಗಳಲ್ಲಿ ಪ್ರಮುಖವಾದುದು ಶೀಗೇಹಳ್ಳಿಯ ಶಿವಾನಂದ ಸ್ವಾಮಿಗಳ ಜೊತೆಗಿನ ಪರಿಚಯ. ಅವರು ವಿವೇಕಾನಂದ ಬಂಡೆಯನ್ನೂ ಭೇಟಿ ಮಾಡಿ ಅಲ್ಲಿ ಧ್ಯಾನ ಮಾಡಿದರು. ೧೯೪೨ರಲ್ಲಿ ಶ್ರೀಧರ ಸ್ವಾಮಿಗಳು ಸಂನ್ಯಾಸ ಸ್ವೀಕರಿಸಿದರು ಮತ್ತು ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಭಗವಾನ್ ಶ್ರೀಧರ ಸ್ವಾಮಿಗಳು ಎಂಬ ಹೆಸರು ಪಡೆದರು. ಇದರ ನಂತರ ೧೯೬೭ರವರೆಗೆ ಅವರು ವ್ಯಾಪಕವಾಗಿ ಭಾರತದಾದ್ಯಂತ ಸಂಚರಿಸಿದರು ಮತ್ತು ತಮ್ಮ ಪ್ರವಚನಗಳು, ಬರಹಗಳು ಮತ್ತು ಆಧ್ಯಾತ್ಮಿಕ ಪ್ರವರ್ತನಗಳ ಮೂಲಕ ವೇದಗಳ ತಿರುಳಿನ ಸಂದೇಶಗಳನ್ನು ಸಾಮಾನ್ಯ ಜನರಿಗೆ ತಿಳಿಸಿದರು. ಹೀಗೆ ಸಂಚರಿಸುತ್ತಿರುವಾಗ ಒಮ್ಮೆ ಸಾಗರದ ಸಮೀಪದ ವರದಪುರ (ವರದಹಳ್ಳಿ) ಕ್ಷೇತ್ರಕ್ಕೆ ಶ್ರೀಗಳವರ ಆಗಮನವಾಯಿತು. ಪರಮಪವಿತ್ರ ಏಕಾಂತ, ನಿತಾಂತ, ರಮಣೀಯವಾಗಿರುವ ಈ ಸ್ಥಳದಲ್ಲಿ ಒಂದು ಕುಟೀರ ನಿರ್ಮಾಣವಾಗಿ ಶ್ರೀಗಳವರ ಚಾತುರ್ಮಾಸ್ಯ ಪ್ರಾರಂಭವಾಯಿತು. ಅನೇಕ ದಿವಸಗಳಿಂದ ತಮ್ಮ ಧ್ಯೇಯ ಮತ್ತು ಕಾರ್ಯಕ್ಕೆ ಅನುಕೂಲವಾದ ಸ್ವತಂತ್ರ ಸ್ಥಳದ ನಿರೀಕ್ಷಣೆಯಲ್ಲಿದ್ದ ಶ್ರೀಗಳವರಿಗೆ ಏನು ಕಂಡು ಬಂತೋ ಅವರೇ ಬಲ್ಲರು. ಇದೇ ೧೯೬೭ರ ಚಾತುರ್ಮಾಸದಲ್ಲಿ ವಿಜಯದಶಮಿಯ ಶುಭ ಮುಹೂರ್ತದಲ್ಲಿ ಧರ್ಮದ್ವಜದ ಸ್ಥಾಪನೆ ಮಾಡಿ ಈ ಆಶ್ರಮಕ್ಕೆ ಶ್ರೀಧರಾಶ್ರಮ ಎಂದು ನಾಮಕರಣ ಮಾಡಿದರು. ಇಲ್ಲಿ ಅನೇಕ ಧರ್ಮ ಕಾರ್ಯಗಳನ್ನು ನೆರವೇರಿಸಿದರು. ತದನಂತರ ೧೯ ಏಪ್ರಿಲ್ ೧೯೭೩ರಲ್ಲಿ ಮಹಾಸಮಾಧಿ ಹೊಂದುವವರೆಗೆ ಅವರು ಹೆಚ್ಚಿನ ಭಾಗ ಒಂಟಿಯಾಗಿದ್ದುಕೊಂಡು ಧ್ಯಾನಸ್ಥರಾಗಿದ್ದರು.

ಅಂತಿಮ ದಿನಗಳು

ಹಿಂದೂ ಕ್ಯಾಲೆಂಡರ್‌ನ ಮೊದಲ ತಿಂಗಳ ದ್ವಿತೀಯಾರ್ಧದ ಮೊದಲ ದಿನದಂದು ಸ್ವಾಮೀಜಿ  ಹುಣ್ಣಿನ ಸಮಸ್ಯೆಯಿಂದ ಚ್ಚು ನೋವು ಅನುಭವಿಸಲು ಪ್ರಾರಂಭಿಸಿದರು. ಶಿಷ್ಯರು ವೈದ್ಯರನ್ನು ಕರೆತರುವಂತೆ ಮನವಿ ಮಾಡಿದರು, ಆದರೆ ಸ್ವಾಮೀಜಿ ಮಾತ್ರ ಅದನ್ನು ನಿರಾಕರಿಸಿದರು ಮತ್ತು ದೈಹಿಕ ನೋವುಗಳನ್ನು ಸಂತೋಷದಿಂದ ಸಹಿಸಿದ್ದರು. ಇದು ಸಮರ್ಥ ರಾಮದಾಸರು ತಮಗೆ ನಿಡಿದ್ದ ಸಂದೇಶವೆಂದು ಅವರು ಹೇಳುತ್ತಿದ್ದರು. ಅದಾದ ಮರುದಿನ ಎಂದಿನಂತೆ ಮೂರು ಬಾರಿ ಸ್ನಾನ ಮಾಡಿ, ಸ್ವಲ್ಪ ಹಾಲು ಕುಡಿದು ರಾತ್ರಿಯಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಉಳಿದ ಸಮಯವನ್ನು ಸಹಜ ಸಮಾಧಿ ಅವಸ್ಥೆಯಲ್ಲಿ ಕಳೆದರು. ಸ್ವಾಮೀಜಿ ಮರುದಿನ ಬೆಳಿಗ್ಗೆ 5 ಗಂಟೆಗೆ ಎದ್ದರು. ಬೆಳಿಗ್ಗೆ ಕೆಲಸಗಳ ನಂತರ ಅವರು ಸ್ವಲ್ಪ ಹೊತ್ತು ಧ್ಯಾನದಲ್ಲಿ ಕುಳಿತರು. ಅವರು 8 ಕ್ಕೆ ಧ್ಯಾನ ಕೊಠಡಿಯಿಂದ ಹೊರಬಂದರು . ಶಿಷ್ಯರು ಅವರಿಗೆ ಸ್ವಲ್ಪ ಹಾಲನ್ನು ನೀಡಿದ್ದರು. ಮತ್ತೆ ಧ್ಯಾನದಲ್ಲಿ ಕುಳಿತರು. ಕುಳಿತುಕೊಳ್ಳುವ ಸ್ಥಾನದಲ್ಲಿ ಮತ್ತು ಧ್ಯಾನದಲ್ಲಿ ಸ್ವಾಮೀಜಿ ಎರಡು ಬಾರಿ ‘ಓಂ, ಓಂ’ ಎಂದು ಹೇಳಿದರು ಮತ್ತು ನಂತರ ತನ್ನ ದೇಹದ ಮೇಲಿನ ಭಾಗದಿಂದ ತಲೆಯ ಮೂಲಕ ತನ್ನ ಆತ್ಮವನ್ನು ತನ್ನ ದೇಹವನ್ನು ಶಾಶ್ವತವಾಗಿ ಪರಬ್ರಹ್ಮ ದೊಂದಿಗೆ ಏಕೀಕರಿಸುವಂತೆ ಮಾಡಿದರು. ಇದರ ಹೊರತಾಗಿಯೂ ಅವರ ಭಂಗಿ ಬದಲಾಗಲಿಲ್ಲ ಅಥವಾ ಅವರ ಮುಖಭಾವಗಳು ಬದಲಾಗಲಿಲ್ಲ. ವಾಸ್ತವವಾಗಿ ಅವರ ಮುಖದ ಸುತ್ತಲಿನ ಸೆಳವು ಸ್ವಲ್ಪ ಸಮಯದವರೆಗೆ ಪ್ರಕಾಶಮಾನವಾಯಿತು. ಇದು ಬೆಳಿಗ್ಗೆ 9 ಗಂಟೆ 19 ಏಪ್ರಿಲ್ 1973 ರಂದು. ಸ್ವಲ್ಪ ಸಮಯದ ನಂತರ ಸ್ವಾಮೀಜಿ ಅಂತಿಮ ಸಮಾಧಿಯನ್ನು ಪಡೆದರು. ಇದನ್ನು ಕೇಳಿದ ಆಶ್ರಮ ದುಃಖದ ಕಡಲಲ್ಲಿ ತುಂಬಿತ್ತು.

 ಅಖಿಲ ಭಾರತ ರೇಡಿಯೊದಲ್ಲಿ ಘೋಷಣೆಯಾಗುತ್ತಿದ್ದಂತೆ ಸುದ್ದಿ ದೇಶಾದ್ಯಂತ ಕಾಳ್ಗಿಚ್ಚಿನಂತೆ ಹರಡಿತ್ತು. ಸ್ವಾಮೀಜಿಯ ಶಿಷ್ಯರು ವರದಹಳ್ಳಿಗೆ ಬರಲು ಪ್ರಾರಂಭಿಸಿದರು. ಅವರ ದೇಹವನ್ನು ವಿಶೇಷವಾಗಿ ತಯಾರಿಸಿದ ಹೂವುಗಳ ಹಾಸಿಗೆಯ ಮೇಲೆ ಇರಿಸಲಾಗಿತ್ತು.

ಬರಹಗಳು - ವೇದಗಳ ಸಂದೇಶಗಳ ಹರಡುವಿಕೆ

ಶ್ರೀಧರ ಸ್ವಾಮಿಗಳು ಮರಾಠಿ, ಸಂಸ್ಕೃತ, ಕನ್ನಡ, ಹಿಂದಿ ಮತ್ತು ಆಂಗ್ಲದಲ್ಲಿ ಪ್ರತಿಭಾನ್ವಿತ ಬರಹಗಾರರಾಗಿದ್ದರು. ತಮ್ಮ ವ್ಯಾಪಕ ಪ್ರವಾಸದುದ್ದಕ್ಕೂ ಅವರು ಸ್ವಲ್ಪ ಸಮಯವನ್ನು ಧಾರ್ಮಿಕ ಬರಹಗಳಿಗಾಗಿ ವಿನಿಯೋಗಿಸಿದರು. ಸಂಕೀರ್ಣವಾದ ವೇದಗಳ ಸೂಕ್ಷ್ಮ ತತ್ವಬೋಧಗಳನ್ನು ಸಾಮಾನ್ಯ ಜನರಿಗೆ ಮನನವಾಗುವ ರೀತಿಯಲ್ಲಿ ಸರಳಗೊಳಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು. ಅವರು ಮರಾಠಿ, ಕನ್ನಡ ಮತ್ತು ಆಂಗ್ಲದಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದರು.

ಹುಬ್ಬಳ್ಳಿಯ ಶ್ರೀ ಸಿದ್ದಾರೂಢರು

ಅದ್ವೈತ ಶ್ರೇಷ್ಠ ಯೋಗಿ ಮತ್ತು ಆಧ್ಯಾತ್ಮಿಕ ಶಿಕ್ಷಕ ಸ್ವಾಮಿ ಸಿದ್ದಾರೂಢ ಅವರು ಆಧ್ಯಾತ್ಮಿಕ ಸಂತರಾಗಿದ್ದು, ಅವರ ಲಕ್ಷಾಂತರ ಭಕ್ತರ ಹೃದಯಗಳನ್ನು ಬೆಳಗಿಸಿದ್ದಾರೆ.  ಅದ್ವೈತ ತತ್ತ್ವಶಾಸ್ತ್ರದ ಮಹಾನ್ ಪ್ರತಿಪಾದಕನಿಜಗುಣ ತತ್ವ ಭಗವದ್ಗೀತೆ, ಉಪನಿಷತ್ತುಗಳು, ಪಂಚದಶಿ, ಬ್ರಹ್ಮಸೂತ್ರವನ್ನು ತಮ್ಮ ಶಿಷ್ಯರಿಗೆ ಬೋಧಿಸಿದ್ದಾರೆ. ರಾಜರಿಂದ ಹಿಡಿದು ಸಾಮಾನ್ಯರವರೆಗಿನ ಎಲ್ಲ ವರ್ಗದ ಭಕ್ತರು ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಆಶೀರ್ವಾದಕ್ಕಾಗಿ ಅವರನ್ನು ಸಂಪರ್ಕಿಸುತ್ತಿದ್ದರು.

 ಸರಳ ಜೀವನ ಮತ್ತು ಉನ್ನತ ಚಿಂತನೆಗೆ ಹೆಸರುವಾಸಿಯಾಗಿದ್ದ ಸಿದ್ದಾರೂಢರು  ಏಕೈಕ ಆಸ್ತಿ ಲಂಗೋಟಿ ಮಣ್ಣಿನ ಪಾತ್ರೆ ಮತ್ತು ಚಿಂದಿ ಬಟ್ಟೆಯ ತುಂಡು (ರಾಗತಿ) ಸ್ವಾಮಿ ಸಿದ್ದಾರೂಢ ಕೌದಿ ವಿಶೇಷ ಮಹತ್ವದ್ದಾಗಿದೆ ಮತ್ತು ಅವನ ಸರಳ ಜೀವನವನ್ನು ಸೂಚಿಸುತ್ತದೆ. ಅವರು ಎಲ್ಲಾ ಧರ್ಮಗಳ ಏಕತೆ ಮತ್ತು ಎಲ್ಲಾ ಮಾನವರ ಸಮಾನತೆಯನ್ನು ಬೋಧಿಸಿದರು. ಜಾತಿ ಮತ, ಬಣ್ಣ ಮತ್ತು ಲಿಂಗದ ಆಧಾರದ ಮೇಲೆ ಅವರು ಎಂದಿಗೂ ಜನರನ್ನು ತಾರತಮ್ಯ ಮಾಡಲಿಲ್ಲ ಅವರು ದೈವಿಕ ಅವತಾರ. ಸದ್ಗುರು ಸ್ವಾಮಿ ಗುರುನಾಥರ  ಕಟ್ಟಾ ಶಿಷ್ಯರಾಗಿದ್ದು, ಅವರ ಮಾರ್ಗದರ್ಶಕ ಸ್ವಾಮಿ ಸಿದ್ದಾರೂಢರಿಗೆ ಆಧ್ಯಾತ್ಮಿಕ ನಿರ್ದೇಶನದ ಮೇರೆಗೆ 33 ವರ್ಷಗಳ ಕಾಲ ಸ್ಟಿಥಪ್ರಜ್ಞರಾಗಿರುವಂತೆ ಮಾಡಿತ್ತು.

ಸದ್ಗುರು ಸಿದ್ದಾರೂಢ ಸ್ವಾಮಿಯ ಜೀವನ ಮತ್ತು ಸಂದೇಶ

ಅದ್ವೈತ ತತ್ತ್ವಶಾಸ್ತ್ರದ ಮಹಾನ್ ಸಂತ ಮತ್ತು ಘಾತಕ ಸ್ವಾಮಿ ಸಿದ್ಧರೂಧ 26-03-1836ರಂದು  ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಪುರ ಗ್ರಾಮದಲ್ಲಿ ಜನಿಸಿದರು (ಶಾಲಿವಾಹನ ಶೆಕೆ  1758 ದುರ್ಮುಖಿ ನಾಮ ಸಂವತ್ಸರ ಚೈತ್ರ ಶುದ್ಧ ನವಮಿ ದಿನ) ಸಂತನ ಪೋಷಕರು ಗುರುಶಾಂತಪ್ಪ ಮತ್ತು ತಾಯಿ ಶ್ರೀಮತಿ ದೇವ ಮಲ್ಲಮ್ಮ ಅವರು ಪವಿತ್ರ ಮಗುವನ್ನು “ಸಿದ್ಧ” ಎಂದು ಹೆಸರಿನಿಂದ ಕರೆದರು.

ಸಿದ್ದಾರೂಢರ ಆಧ್ಯಾತ್ಮಿಕ ಮಾರ್ಗದರ್ಶಕ ಪೂಜ್ಯ ಗಜದಂದ ಶಿವಯೋಗಿ ಅವರು ತಮ್ಮ ಶಿಷ್ಯ ಸಂತನನ್ನು ಶ್ರೀ ಸಿದ್ದಾರೂಢ ಭಾರತಿ ಎಂದು ಹೆಸರಿಸಿದರು ಮತ್ತು ಅವಧೂತಾಶ್ರಮ  ದೀಕ್ಷೆಯ ದೀಕ್ಷೆಯಿಂದ ಆಶೀರ್ವದಿಸಿದರು ಮತ್ತು ಪಂಚಕ್ಷಾರಿ ಮಂತ್ರವನ್ನು ತಮ್ಮ ಶಿಷ್ಯರಿಗೆ ಸ್ವಯಂ-ನೈಜತೆಯತ್ತ ಕೊಂಡೊಯ್ಯಲು ಮಾರ್ಗದರ್ಶನ ನೀಡಿದರು. ನಂತರ ಸಿದ್ದಾರೂಢರು  ಭಾರತ, ನೇಪಾಳ, ಸಿಲೋನ್, ಟಿಬೆಟ್ (ಚೀನಾ ಎಲ್ಲೆಡೆ ತೆರಲೀ  ಎಲ್ಲಾ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿದರು. ಅಜ್ಞಾನ, ಮೂಢನಂಬಿಕೆ  ಮತ್ತು ಕುರುಡು ನಂಬಿಕೆಗೆ ವಿರುದ್ಧವಾಗಿ ಅವರು ಹೋದಲ್ಲೆಲ್ಲಾ ಭಕ್ತರಿಗೆ ಪ್ರಬುದ್ಧ ತಿಳುವಳಿಕೆ ನಿಡುತ್ತಿದ್ದರು.ತಮ್ಮಲ್ಲಿ ದೈವತ್ವವನ್ನು ಅರಿತುಕೊಳ್ಳುವಂತೆ ಅವರು ಜನರಿಗೆ ತಿಳಿಸಿದ್ದರು.ಆಧ್ಯಾತ್ಮಿಕ ಶಕ್ತಿಗಳನ್ನು ಹೊಂದಿರುವ ಶ್ರೇಷ್ಠ ಸಂತ ಎಂದಿಗೂ ಪವಾಡಗಳನ್ನು ಮಾಡಲಿಲ್ಲ ಆದರೆ ಅವರ  ದೈವಿಕ ಆಶೀರ್ವಾದಗಳನ್ನು ಪಡೆಯಲು ತನ್ನ ಬಳಿಗೆ ಬರುವ ಶಿಷ್ಯರ ದುಃಖವನ್ನು ನಿವಾರಿಸಲು  ಮುಂದಾದಾಗ ಪವಾಡಗಳು ಸ್ಸಂಭವಿಸಿದ್ದವು.

ಅಂತಿಮವಾಗಿ, ಉನ್ನತ ಆಧ್ಯಾತ್ಮಿಕ ಸಂತ 1877 ರಲ್ಲಿ ಹುಬ್ಬಳ್ಳಿಗೆ ಆಗಮಿಸಿದರು, ಆಗ ಅವರಿಗೆ ಕೇವಲ 41 ವರ್ಷ.

ನಿಸ್ವಾರ್ಥ ಯುವ ಸಂತ ಸ್ವಾಮಿ ಸಿದ್ದಾರೂಢರು  ಎಲ್ಲಾ ವರ್ಣಗಳು ಮತ್ತು ಜಾತಿಗಳವರೊಂದಿಗೆ ಬೆರೆತರು.ಜಾತಿ, ಮತ, ಬಣ್ಣ, ಲಿಂಗ, ಭಾಷೆ, ಧರ್ಮ ಮತ್ತು ಆರ್ಥಿಕ ಸ್ಥಾನಮಾನದ ಆಧಾರದ ಮೇಲೆ ಅವರು ಎಂದಿಗೂ ತಮ್ಮ ಭಕ್ತರನ್ನು ತಾರತಮ್ಯ ಮಾಡಲಿಲ್ಲ.

ಅವರು ಶ್ರೇಷ್ಠ ಶಿಕ್ಷಕ, ದಾರ್ಶನಿಕ ಮತ್ತು ಸಂತನಾಗಿ ತಮ್ಮನ್ನು ಸಂಪರ್ಕಿಸಿದ ಲಕ್ಷಾಂತರ ಜನರಿಗೆ ಮಾರ್ಗದರ್ಶಕರಾಗಿದ್ದರು

ಸಿದ್ದಾರೂಢರು ತಮ್ಮ ಲೌಕಿಕ ದೇಹವನ್ನು ತ್ಯಜಿಸಿ 21-08-1929 ರಂದು ಶಾಶ್ವತ ದೈವತ್ವಕ್ಕೆ ಏರಿದರು. ಮಹಾನ್ ಸಂತನ ನೆನಪಿಗಾಗಿ ಅವರ ಭಕ್ತರು ಸಿದ್ದಾರೂಢ ಆಶ್ರಮದಲ್ಲಿ  ಅವರ ಶಿವಯೋಗ ಸಮಾಧಿ ಮೂಲಕ ಅವರ ದೈವಿಕ ಉಪಸ್ಥಿತಿಯನ್ನು ಶಾಶ್ವತವಾಗಿಸಿದ್ದಾರೆ.

ನವಲಗುಂದದ ನಾಗಲಿಂಗಸ್ವಾಮಿ

ನಾಗಲಿಂಗಸ್ವಾಮಿ ನವಲಗುಂದದಲ್ಲಿ ನೆಲೆಸಿ ಸಮಾಜ ಸೇವೆ ಮಾಡಿ ಪ್ರಖ್ಯಾತರಾದ ಹಠಯೋಗಿ. ಇವರು ಹಠಯೋಗಿಗಳು ಹಾಗೂ ಪವಾಡ ಪುರುಷರು. ಉತ್ತರ ಕರ್ನಾಟಕದ ಬಹುಭಾಗದಲ್ಲಿ ಚಿರಪರಿಚಿತರು. ಶಿಶುನಾಳ ಶರೀಫರು ಇವರ ಆಪ್ತ ಸ್ನೇಹಿತ. ಸಿದ್ಧಾರೂಢರು, ಗರಗದ ಮಡಿವಾಳರು ಇವರೊಡನೆ ಒಡನಾಟವಿಟ್ಟುಕೊಂಡಿದ್ದರು

ಅಜಾತ ನಾಗಲಿಂಗಸ್ವಾಮಿಗಳು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಜವಳಗೇರಿ ಗ್ರಾಮದಲ್ಲಿ ಜನಿಸಿದರು. ತಂದೆ ಮೌನಾಚಾರ್ಯ, ತಾಯಿ ನಾಗಮ್ಮ. ಇವರು ವಿಶ್ವಕರ್ಮ ಬ್ರಾಹ್ಮಣರು. ಸಾನಗ ಎಂಬ ಋಷಿಗೋತ್ರಕ್ಕೆ ಸೇರಿದ ಇವರು ಕಮ್ಮಾರ ವೃತ್ತಿಯನ್ನು ತಲತಲಾಂತರದಿಂದ ಹಮ್ಮಿಕೊಂಡಿದ್ದರು. ಇವರ ಮನೆತನದ ದೇವತೆ ಕಾಳಿಕಾಮಾತೆ. ಶಾಲಿವಾಹನ ಶಕೆ 1734ನೇ ಶ್ರೀಮುಖ ಸಂವತ್ಸರದ ಶುಕ್ಲಪಕ್ಷ ಪೂರ್ಣಿಮೆ ಸೋಮವಾರ ಸೂರ್ಯೋದಯ (ಕಿ.ಶ. 1812) ಕಾಲದಲ್ಲಿ ಜನಿಸಿದರು. ಇವರು ಜನ್ಮಿಸುವ ಮೊದಲು ಇವರ ಮನೆಗೆ ಬಂದಿದ್ದ ಚಿದಾನಂದಾವಧೂತ ಎಂಬ ಅವಧೂತರು ತಾವು ಬರೆದಿದ್ದ ‘ಜ್ಞಾನಸಿಂಧು’ ಎಂಬ ಕೈಬರಹದ ಪ್ರತಿಯನ್ನು ಕೊಟ್ಟು ಮುಂದೆ ಹುಟ್ಟುವ ಮಗ ಹನ್ನೆರಡರ ಪ್ರಾಯಕ್ಕೆ ಬಂದಾಗ ಓದಿಸಲು ಕೊಡಬೇಕೆಂದು ಸೂಚಿಸಿದರಂತೆ. ಇದು ಭವಿಷ್ಯದಲ್ಲಿ ನಿಜವಾದದ್ದು ಒಂದು ಯೋಗಾಯೋಗವೇ ಸರಿ. ನಾಗಲಿಂಗ ಹುಟ್ಟಿದ ತರುವಾಯ ತಾಯಿ-ತಂದೆ ತಮ್ಮ ಕುಲಪುರೋಹಿತರಿಂದ ಜಾತಕರ್ಮ-ನಾಮಕರಣ ಮಾಡಿಸಿದರು. ಬಾಲ್ಯದಲ್ಲಿ ನಾಗಲಿಂಗ ಕುಶಾಗ್ರಮತಿಯಾಗಿದ್ದನು. ಹನ್ನೆರಡರ ಪ್ರಾಯಕ್ಕೆ ಬಂದಾಗ ಉಳಿದ ಹುಡುಗರಿಗಿಂತ ವಿಶೇಷವಾದ ಚರ್ಯುಗಳು ಇವನಲ್ಲಿ ಕಾಣಿಸಿಕೊಂಡವು. ಆಗಾಗ್ಗೆ ಊರಿನ ಕಾಳಿಕಾಮಾತೆಯ ಗುಡಿಯ ಬಳಿ ಹೋಗಿ ಮೌನದಿಂದ ಕುಳಿತಿರುತ್ತಿದ್ದ. ‘ಜ್ಞಾನಸಿಂಧು’ವಿನ ಪಾರಾಯಣ ಮಾಡುವುದು ಅನುದಿನದ ಚರ್ಯುಯಾಗಿತ್ತು. ಧ್ಯಾನಸ್ಥನಾದರೆ ಇಹದ ಅರಿವನ್ನೇ ಮರೆಯುತ್ತಿದ್ದ. ಲೌಕಿಕದ ಓದಿನ ಕರ್ಮಗಳು ಇವನಿಗೆ ಬೇಡವಾದವು.

ನಾಗಲಿಂಗನ ಕೌಮಾರ್ಯದ ಬದುಕಿನಲ್ಲಿ ನಡೆದ ಒಂದು ಘಟನೆ ಸಂಸಾರಸಂಗದಿಂದ ಹೊರನಡೆಯಲು ಕಾರಣವಾಯಿತು. ನಾಗಲಿಂಗನ ತಾಯಿ ಸ್ನಾನಕ್ಕಾಗಿ ಬಚ್ಚಲುಮನೆಗೆ ಹೋಗಿದ್ದರು. ಇದನ್ನು ತಿಳಿಯದೆ ಸ್ನಾನದ ಮನೆಯ ಕದವನ್ನು ತೆರೆದಾಗ ತಾಯಿ ಗಾಬರಿಗೊಂಡಳು. ಮಗನಿಗೆ ‘ಹಿಂದು-ಮುಂದು ನೋಡದೆ ಅದೇಕೆ ನುಗ್ಗಿ ಬಂದೆಯೊ ನಾಗಲಿಂಗ. ಎಲ್ಲಾದರೂ ಹಾಳಾಗಿಹೋಗು’ ಎಂದುಬಿಟ್ಟಳು. ಹೊರಗೆ ನಿಂತಿದ್ದ ನಾಗಲಿಂಗ ‘ನಾನು ಮೂಡಿಬಂದ ಹಾದಿಯನ್ನು ಹಾಲುಂಡ ಹಾದಿಯನ್ನು ನೋಡಿದರೆ ನಿನಗೇನಾಯಿತು’ ಎಂದು ಹೇಳಿ ಮನೆಯಿಂದ ಹೊರಟು ಊರಾಚೆ ಇದ್ದ ಮಲದಗುಡ್ಡದ ಗವಿ ಹೊಕ್ಕು ಕುಳಿತುಕೊಂಡ. ಅಲ್ಲಿ ದೇವಿಯನ್ನು ಆರಾಧಿಸತೊಡಗಿದ. ಊರಿನ ಶಂಭುಲಿಂಗಪ್ಪ ನಾಗಲಿಂಗನ ತಂದೆ-ತಾಯಂದಿರಿಗೆ ಸಮಾಧಾನ ಹೇಳಿ ನಾಗಲಿಂಗನನ್ನು ಕರೆತಂದ. ಮಗನಿಗೆ ಮದುವೆ ಮಾಡಬೇಕೆಂದು ತಾಯಿ-ತಂದೆಯರು ನಿಶ್ಚಯಿಸಿದರು. ಆದರೆ, ನಾಗಲಿಂಗ ವಿರಕ್ತಿ, ಆತ್ಮವಿದ್ಯೆ, ಸಂಸ್ಕಾರ, ದೈವಸಾಕ್ಷಾತ್ಕಾರ ಇವುಗಳ ಬಗೆಗೆ ತಿಳಿಹೇಳಿ ಅವರ ಅನುಜ್ಞೆ ಪಡೆದು ಸಂಸಾರವನ್ನು ತೊರೆದು ಹೊರಡಲು ಸಿದ್ಧನಾದ.

ನಾಗಲಿಂಗನ ಪ್ರಸ್ಥಾನ ಪ್ರಾರಂಭವಾಯಿತು. ಬಿಜಾಪುರದ ಸಾರವಾಡಕ್ಕೆ ಬಂದ. ಅಲ್ಲಿ ಹಿರೇಮಠದ ಪಟ್ಟದ ಗುರುಗಳನ್ನು ಕಂಡ. ಅವರ ಸೂಚನೆಯಂತೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ‘ತಲೆಕಟ್ಟು’ ಎಂಬ ಗ್ರಾಮಕ್ಕೆ ಬಂದ. ಅಲ್ಲಿ ನಿರುಪಾಧೀಶ್ವರರೆಂಬ ಯೋಗಿಗಳು ಇದ್ದರು. ಅವರನ್ನು ಕಾಣುವ ಹಂಬಲಕ್ಕೆ ಒಳಗಾದ. ಸ್ವಾಮಿಗಳು ಭಿಕ್ಷೆಗಾಗಿ ಪರವೂರಿಗೆ ಹೋಗಿರುವುದು ನಾಗಲಿಂಗನಿಗೆ ತಿಳಿಯಿತು. ಅವರು ಬರುವ ದಾರಿಯಲ್ಲಿ ಹೊಂಡವೊಂದನ್ನು ತೋಡಿ ಕೊರಳಿನ ವರೆಗೆ ಭೂಮಿಯಲ್ಲಿ ಹೂತುಕೊಂಡು ನಿರುಪಾಧೀಶ್ವರರ ಆಗಮನವನ್ನು ನಿರೀಕ್ಷಿಸುತ್ತಿದ್ದ. ನಿರುಪಾಧೀಶ್ವರರು ನಾಗಲಿಂಗನನ್ನು ಕಂಡು ಸೋಜಿಗಗೊಂಡರು. ‘ನನ್ನನ್ನು ನಿಮ್ಮ ಶಿಷ್ಯನನ್ನಾಗಿ ಮಾಡಿಕೊಂಡು ಉದ್ಧರಿಸಿ ಕಾಪಾಡಿ’ ಎಂದು ಕೇಳಿಕೊಂಡ. ನಾಗಲಿಂಗ ಪರಮಾರ್ಥ ಜೀವನಕ್ಕೆ ಅಧಿಕಾರಿ ಎಂಬುದು ಸ್ವಾಮಿಗಳಿಗೆ ಮನವರಿಕೆ ಆಯಿತು. ಸ್ವಾಮಿಗಳ ಸೇವೆ ಮಾಡುತ್ತ, ಎಲ್ಲಾ ಕರ್ಮಗಳನ್ನು ನೆರವೇರಿಸುತ್ತಿದ್ದನು. ನಂತರ ಅಲ್ಲಿ ನಾಗಲಿಂಗನು ಸಾಧನ ಚತುಷ್ಟಯಗಳ ಸಂಪನ್ನತೆಯನ್ನು ತಿಳಿದುದಲ್ಲದೆ, ವೈರಾಗ್ಯ ನಿರ್ಣಯ, ಕರ್ಮಯೋಗ, ಗುರುಲಕ್ಷಣ, ಶಾಂತಿಲಕ್ಷಣ, ಸಪ್ತಭೂಮಿಕೆ, ಭಕ್ತಿಯೋಗ, ಪರಮಾತ್ಮನ ವಿಭೂತಿಗಳು, ಮಂತ್ರಯೋಗ, ಲಯಯೋಗ, ಹಠಯೋಗ, ರಾಜಯೋಗಗಳನ್ನು ಆಳವಾಗಿ ತಿಳಿದುಕೊಂಡ. ನಿರುಪಾಧೀಶ್ವರರು ಅವಧೂತನ ಮಹಿಮಾಲಕ್ಷಣಗಳನ್ನು ತಿಳಿಸಿದರು. ನಂತರ ಆತ್ಮನ ಪಂಚಲಕ್ಷಣ ತಿಳಿದುಕೊಂಡ ಮೇಲೆ ಗುರುವಿನ ಅನುಮತಿ ಪಡೆದು ನಾಗಲಿಂಗಸ್ವಾಮಿ ದೇಶಾಟನೆಗೆ ಹೊರಡಲು ಸಿದ್ಧರಾದರು.

ನಾಗಲಿಂಗಸ್ವಾಮಿ ಬಿಜವಾಡಕ್ಕೆ ಬಂದು, ಅಲ್ಲಿ ಆದಿಶಕ್ತಿಯ ಅನುಗ್ರಹಕ್ಕೆ ಪಾತ್ರರಾದರು. ನಂತರ ತಿಂಥಿಣಿ ಮೌನೇಶ್ವರ ಸನ್ನಿಧಿಗೆ, ನಂತರ ಗಂಗಾವತಿ, ಬನಶಂಕರಿಗೆ ಬಂದರು. ಮಹಾಕೂಟಕ್ಕೆ ಹೋಗಿ ಅಲ್ಲಿ ಕೆಲವು ಲೀಲೆಗಳನ್ನು ನಾಗಲಿಂಗಯತಿಗಳು ಮಾಡಿದರು. ಅಲ್ಲಿಂದ ‘ಕಲಾದಗಿ’ ಎಂಬ ಊರಿಗೆ ಹೋಗಿ ತಮ್ಮ ಲೀಲೆ ತೋರಿಸಿದರು. ಲೋಹರಸದ ಪಾನವನ್ನು ಮಾಡಿದರು. ನವಲಗುಂದಕ್ಕೆ ಬಂದರು. ಅಲ್ಲಿರುವ ಗುಡ್ಡದ ತಪ್ಪಲಿನಲ್ಲಿ ಮೌನೇಶ್ವರನೆಂಬ ಮಹಾಂತನ ಗದ್ದುಗೆಯಿಂದ ಕೂಡಿದ ಚಿಕ್ಕಮಠವಿತ್ತು. ಅದನ್ನು ವಿಶ್ವಕರ್ಮದ ಅಧಿಪತಿಗಳಾದ ಧಮೇಂದ್ರಸ್ವಾಮಿ ಎಂಬುವರು ಸ್ಥಾಪಿಸಿದ್ದರು. ಅಲ್ಲಿ ಇಲ್ಲಿ ಅಲೆದು ರಾತ್ರಿ ಮಠಕ್ಕೆ ಬಂದು ಮಲಗುತ್ತಿದ್ದರು. ಒಂದು ದಿನ ಸ್ವಾಮಿಗಳಿಗೆ ನಿತ್ರಾಣವಾಗಿ ಜ್ವರ ಕವಿಯಿತು. ‘ಪ್ರಾರಬ್ಧಕರ್ಮವಾಗಿ ಈ ರೋಗ ಬಂದಿದೆ. ಈ ಶರೀರ ಅನುಭವಿಸುತ್ತಿದೆ’ ಎಂದು ಸುಮ್ಮನಿದ್ದರು. ಆ ಗದ್ದುಗೆಗೆ ನಿತ್ಯ ಬಂದು ದರ್ಶನ ತೆಗೆದುಕೊಳ್ಳುತ್ತಿದ್ದ ಭೀಮವ್ವ ಎಂಬ ಹೆಂಗಸು ಸಮಗಾರ ಕುಲಕ್ಕೆ ಸೇರಿದವಳು. ಅವಳು ಗಂಜಿನೀಡಿ ನಾಗಲಿಂಗಯತಿಗಳನ್ನು ಸಂರಕ್ಷಿಸಿದಳು. ನಂತರ ಭೀಮವ್ವ ನಾಗಲಿಂಗಸ್ವಾಮಿಗಳ ಶಿಷ್ಯಳಾದಳು. ‘ಜನನ-ಮರಣಗಳಿಗೆ ಗುರಿಯಾಗದ, ಸತ್​ಚಿತ್ ಆನಂದ ಪರಿಪೂರ್ಣವಾದ ಪರಬ್ರಹ್ಮ ವಸ್ತುವೇ ನೀನು’ ಎಂಬ ಸ್ವಾಮಿಗಳ ಬೋಧೆಯಿಂದ ಸಮಗಾರ್ತಿ ಭೀಮವ್ವ ಆತ್ಮಬೋಧೆಗೊಂಡಳು.

ನಾಗಲಿಂಗಯತಿವರರು ಕಡಕೋಳ ಮಡಿವಾಳಪ್ಪ ಜತೆಗೂಡಿ ಕಾಶಿಯಾತ್ರೆ ಕೈಗೊಂಡರು. ಕಾಶಿಯಲ್ಲಿ ಜಂಗಮವಾಡಿ ಮಠದಲ್ಲಿ ಕೆಲಕಾಲವಿದ್ದು ತಮ್ಮ ಮಹಿಮೆಯನ್ನು ತೋರಿಸಿದರು. ಅಲ್ಲಿಂದ ಹೊರಟು ಉಪ್ಪಿನ ಬೆಟಗೇರಿಗೆ ಬಂದರು. ಅಲ್ಲಿದ್ದ ಬೂದಿಸ್ವಾಮಿಗಳನ್ನು ಕಂಡರು. ಆಗ ಧಾರವಾಡದಲ್ಲಿ ವೆಲ್ಲೆಸ್ಲಿ ಎಂಬ ಬ್ರಿಟಿಷ್ ಅಧಿಕಾರಿ ಇದ್ದನು. ಅವನ ಬಳಿ ಬಂದು ‘ನಾನು ನಿನಗಿಂತ ದೊಡ್ಡ ಅಧಿಕಾರಿ; ನಿನ್ನ ಆಡಳಿತವೆಲ್ಲಾ ನೆಟ್ಟಗಿದೆಯೋ ಇಲ್ಲವೋ, ದುಡ್ಡುಕಾಸಿನ ವ್ಯವಹಾರವೆಲ್ಲ ಸರಿಯಾಗಿದೆಯೋ ಇಲ್ಲವೋ ಎಂದು ಕಡತಗಳನ್ನು ಪರೀಕ್ಷಿಸಲು ಬಂದಿದ್ದೇನೆ. ಅವುಗಳನ್ನು ನನ್ನ ವಶಕ್ಕೊಪಿಸು’ ಎಂದು ಆಜ್ಞೆಮಾಡಿದರು. ಇದನ್ನು ಕೇಳಿದ ಕಲೆಕ್ಟರ್​ನಿಗೆ ದಿಗ್ಭ್ರಾಂತಿ ಆಯಿತು. ಸೆರೆಮನೆಗೆ ತಳ್ಳಿದ್ದ ಈತ ಮರಳಿ ಇಲ್ಲಿಗೆ ಹೇಗೆ ಬಂದ? ಎಂದು ಆತ ಅಚ್ಚರಿಗೊಂಡ. ಬಂದೀಖಾನೆಯ ಅಧಿಕಾರಿಯನ್ನು ಕರೆದು ಮರಳಿ ಜೈಲಿನಲ್ಲಿಡಲು ಕಳುಹಿಸಿದ. ಆದರೆ, ನಾಗಲಿಂಗಯತಿವರರು ಸಂಜೆಗೆ ವೆಲ್ಲೆಸ್ಲಿಯ ಕಚೇರಿಯಲ್ಲಿ ಕಾಣಿಸಿಕೊಂಡರು. ನಾಗಲಿಂಗಸ್ವಾಮಿ ಸಾಮಾನ್ಯನಲ್ಲವೆಂದು ಕಲೆಕ್ಟರನಿಗೆ ತಿಳಿಯಿತು.

ಶರೀಫ-ಸಿದ್ಧಾರೂಢರ ಸಖ್ಯ

ಶಿಶುನಾಳ ಶರೀಫರು ತತ್ತ್ವಪದಗಳನ್ನು ಹೇಳುತ್ತ, ಆತ್ಮಬೋಧೆಯಲ್ಲೆ ಸದಾ ಇರುತ್ತಿದ್ದರು. ಇವರನ್ನು ನೋಡಲು ನಾಗಲಿಂಗಯತಿಗಳು ಪಲ್ಲಕ್ಕಿಯಲ್ಲಿ ಕುಳಿತು ಶಿಶುನಾಳಕ್ಕೆ ಹೊರಟರು. ಅಲ್ಲಿಗೆ ಬಂದಾಗ ಶರೀಫರೇ ಎದುರಾದರು. ತಕ್ಷಣವೇ ‘ಒಂದು ಹೆಣಕೆ ಎರಡು ಹೆಣವು ದಣಿವುದ್ಯಾತಕೆ ನಾಗಲಿಂಗಯೋಗಿ ತಿರುಗುದ್ಯಾತಕೆ’ ಎಂದು ನುಡಿದರು. ಶರೀಫರ ಮಾತಿನ ಅರ್ಥ ನಾಗಲಿಂಗಯತಿಗೆ ತಿಳಿಯಿತು. ಆದರೂ ‘ಕುಳಿತವನಾರು ಹೊತ್ತವನಾರು ಎಂಬುದನ್ನು ಮೊದಲು ನನಗೆ ಹೇಳೊ ಶರೀಫ’ ಎಂದು ಮಾರುತ್ತರವಾಗಿ ಸವಾಲನ್ನೊಡ್ಡಿದರು. ಇದು ಅದ್ವೈತದ ಹಿನ್ನೆಲೆಯ ಪ್ರಶ್ನೆಯೆಂಬುದು ಶರೀಫರಿಗೆ ತಿಳಿಯಿತು. ನಂತರ ಶರೀಫರನ್ನು ಪರಮಾನಂದದಿಂದ ಅಪ್ಪಿಕೊಂಡರು. ಶರೀಫರು ನಾಗಲಿಂಗಯತಿಗಳನ್ನು ತಮ್ಮೊಡನೆ ಕೆಲಕಾಲ ಇರಲು ಒತ್ತಾಯ ಮಾಡಿದರು. ಒಂದು ದಿನ ನಾಗಲಿಂಗಯತಿವರ್ಯರು ‘ನೀನು ಸರಸ್ವತಿಯ ವರಪುತ್ರನಲ್ಲವೇ ಸರೀಪಾ. ಆಶುಕವಿಯಲ್ಲವೇ, ನೀನು ಕಟ್ಟಿರುವ ಪದಗಳನ್ನು ಹಾಡು’ ಎಂದು ಕೋರಿದರು. ಶರೀಫರ ಹಾಡಿಗೆ ನಾಗಲಿಂಗಯತಿಗಳು ತಲೆದೂಗುತ್ತ ‘ವೇದಾಂತ ಮಾರ್ಗಕ್ಕೆ ನಿನ್ನ ಹಾಡೆಲ್ಲವೂ ಯೋಗ್ಯವಾಗಿವೆ ಸರೀಪಾ’ ಎಂದು ಕೊಂಡಾಡಿದರು.

ನಾಗಲಿಂಗಯತಿಗಳು ನವಲಗುಂದಕ್ಕೆ ಹಿಂತಿರುಗಿದರು. ಶರೀಫರು ಆಗಾಗ್ಗೆ ನವಲಗುಂದಕ್ಕೆ ಬಂದುಹೋಗುತ್ತಿದ್ದರು ನವಲಗುಂದದಲ್ಲಿ ನಾಗಲಿಂಗಯತಿಗಳು ಶರೀಫರೊಡನೆ ಅಧ್ಯಾತ್ಮದ ಅನುಸಂಧಾನದಲ್ಲಿ ಕೆಲಕಾಲ ಕಳೆದರು. ಒಂದು ದಿನ ಶರೀಫರಿಗೆ ‘ನಾವೀಗ ಹುಬ್ಬಳ್ಳಿಗೆ ಹೋಗೋಣ. ನೀನೂ ನಮ್ಮೊಡನೆ ಬಾ ಸರೀಪಾ’ ಎಂದು ಹೇಳಿದರು. ದಾರಿ ಉದ್ದಕ್ಕೂ ಶರೀಫರು ಹಾಡುಗಳನ್ನು ಹೇಳುತ್ತ ಹೋಗುತ್ತಿದ್ದರು. ಹುಬ್ಬಳ್ಳಿಗೆ ಬಂದಾಗ ಸಂಜೆಯಾಗಿತ್ತು. ಸಂತೋಜಿ ಸಿಂಧೆ ಎಂಬ ಮರಾಠ ಭಕ್ತನ ಮನೆಯಲ್ಲಿ ಅವರು ಉಳಿದರು. ಸುತ್ತಮುತ್ತಲ ಭಕ್ತರು ಬಂದು ದರ್ಶನ ಪಡೆದರು. ಮರುದಿನ ಸಿದ್ಧಾರೂಢರನ್ನು ಕಾಣಲು ಸಿದ್ಧಾಶ್ರಮಕ್ಕೆ ಹೊರಟರು. ಅವರಿಬ್ಬರು ಬಂದಾಗ ಸಿದ್ಧಾರೂಢರು ಬಂದು ಆಲಿಂಗಿಸಿ ಸ್ವಾಗತಿಸಿದರು. ಆಗ ನಾಗಲಿಂಗಯತಿ ‘ಆರೂಢಾ ನಿನ್ನ ಮಠ ಪರಮಶಾಂತಿಯ ತಾಣವಾಗಿದೆ. ಸದ್ಭಕ್ತರಿಗೆ ಕಲ್ಪವೃಕ್ಷದಂತಿದೆ. ಸಾಧಕರ ಕಣ್ಣ ಬೆಳಕಾಗಿದೆ. ಇಲ್ಲಿ ಅನ್ನಪೂರ್ಣೆಯ ಆರಾಧನೆ ನಿರಂತರವಾಗಿ ನಡೆಯಬೇಕು’ ಎಂದು ಹೇಳಿ ತಾನು ತಂದಿದ್ದ ನೇಗಿಲಗುಳವನ್ನು ಬಾವಿಯಲ್ಲಿ ನಿಕ್ಷೇಪಗೊಳಿಸಿದರು. ಅಂದಿನಿಂದ ಜಲದೇವಿ ಮತ್ತು ಅನ್ನದೇವಿಯ ಆರಾಧನೆ ಅಲ್ಲಿ ಪ್ರಾರಂಭವಾಯಿತು.

ಸಿದ್ಧಾರೂಢರ ಮತ್ತು ನಾಗಲಿಂಗ ಮಹಾತ್ಮರ ಅಪೂರ್ವ ಸಮ್ಮಿಲನವನ್ನು ಸುತ್ತಲಿದ್ದ ಭಕ್ತರು ಕಣ್ತುಂಬಿಕೊಂಡರು. ಮುಂದೆ ಕೆಲವು ದಿನ ನಾಗಲಿಂಗಯತಿ ಮತ್ತು ಶರೀಫರು ಸಿದ್ಧಾರೂಢರ ಜತೆ ಆಧ್ಯಾತ್ಮಿಕ ವಿನೋದದಲ್ಲಿ ಕಾಲಕಳೆದರು. ಅವರು ಹೊರಡುವ ದಿನ ನಾಗಲಿಂಗಯತಿಗಳು ಸಿದ್ಧಾರೂಢರು ಹೊದ್ದುಕೊಂಡಿದ್ದ ಮೇಲುವಸ್ತ್ರವನ್ನು ಸೆಳೆದುಕೊಂಡು ಐದು ಭಾಗ ಮಾಡಿ ಒಂದನ್ನು ಆಕಾಶಕ್ಕೆ ಬೀಸಿದರು. ಎರಡನೆಯದನ್ನು ವಾಯುಮಂಡಲದಲ್ಲಿ ತೂರಿದರು. ಮೂರನೆಯದನ್ನು ಅಗ್ನಿಗೆ ಆಹುತಿ ನೀಡಿದರು. ನಾಲ್ಕನೆಯದನ್ನು ಬಾವಿಗೆ ಎಸೆದರು. ಐದನೆಯದನ್ನು ನೆಲಕ್ಕೆ ಹಾಕಿ ತುಳಿದರು. ಇದನ್ನು ನೋಡಿದ ಭಕ್ತಜನ ಅಚ್ಚರಿಗೊಂಡರು. ಆಗ ಸಿದ್ಧಾರೂಢರು ‘ಈ ಪ್ರಪಂಚವು ಪಂಚಭೂತಗಳ ಸಂಕಲನವಾಗಿ ಬ್ರಹ್ಮಾಂಡ ಎನಿಸಿಕೊಂಡಿದೆ. ಈ ಮನುಷ್ಯದೇಹ ಆ ಪಂಚಭೂತಗಳ ಪಂಚೀಕರಣ ಎನಿಸಿ ಪಿಂಡಾಂಡವೇ ಆಗಿದೆ. ಈ ಪಿಂಡಾಂಡದಲ್ಲಿ ಬಂಧಿತವಾಗಿರುವ ಪಂಚಭೂತಗಳು ಮರಣದ ನಂತರ ತಂತಮ್ಮ ಮಹಾಭೂತಗಳಲ್ಲಿ ಸೇರಿಕೊಳ್ಳುತ್ತವೆ. ಅದನ್ನೇ ನಾವು ಪಂಚತ್ವ ಎಂದು ಹೇಳುವುದು. ನಾಗಲಿಂಗಯತಿಗಳು ತಮ್ಮ ಲೀಲೆಯ ಮೂಲಕ ಅದನ್ನು ಶ್ರುತಪಡಿಸಿದರು’ ಎಂದರು.

ಶರೀಫರು ಅತ್ತ ಶಿಶುನಾಳಕ್ಕೆ ಹೊರಟರು. ನಾಗಲಿಂಗಯತಿಗಳು ಇತ್ತ ನವಲಗುಂದಕ್ಕೆ ಬಂದರು. ಅಲ್ಲಿ ಭಕ್ತಜನರೊಡನೆ ಕಾಲಕಳೆಯುವಾಗ ಬರಗಾಲ ಬರುವ ಸೂಚನೆ ನಾಗಲಿಂಗಸ್ವಾಮಿಗಳಿಗೆ ತಿಳಿಯಿತು. ಆಗ ಗದಗ, ನವಲಗುಂದ ಮುಂತಾದ ಊರುಗಳಲ್ಲಿ ಸಂಚಾರ ಮಾಡುತ್ತ ಬರಗಾಲ ಬರುವ ಸೂಚನೆಗಳನ್ನು ಜನರಿಗೆ ನೀಡಿದರು. 1876ನೆಯ ಇಸವಿಯಲ್ಲಿ ಉತ್ತರಕರ್ನಾಟಕಕ್ಕೆ ಭಯಂಕರ ಬರಗಾಲ ಒದಗಿತು. ನೀರಿಲ್ಲದೆ ಜನ ಸತ್ತರು. ದನಕರುಗಳು ಮೇವು ನೀರಿಲ್ಲದೆ ಅಲೆದಾಡಿದುವು. ನಂತರ ನಾಗಲಿಂಗಯತಿ ಭಕ್ತರನ್ನು ಉದ್ಧರಿಸಲು ಹೊಂಬಳ, ಜಮಖಂಡಿ, ನಿಡಗುಂದಿ, ಬಂಕಾಪುರಗಳಿಗೆ ಹೋಗಿ ತಮ್ಮ ಲೀಲೆಯನ್ನು ಮೆರೆದರು.

ನಾಗಲಿಂಗಯತಿಗಳ ಅವತಾರ ಸಮಾಪ್ತಿಯ ದಿನಗಳು ಹತ್ತಿರವಾದುವು. ಸಮಗಾರ್ತಿ ಭೀಮವ್ವ ಮದುವೆಯಾಗದೆ, ನಾಗಲಿಂಗಯತಿಗಳ ಸೇವೆಯಲ್ಲಿ ತೊಡಗಿದ್ದಳು. ಒಂದು ದಿನ ಭೀಮವ್ವನ ದೇಹಾವಸಾನ ಆಗುವುದೆಂಬುದನ್ನು ಯೋಗಬಲದಿಂದ ತಿಳಿದ ನಾಗಲಿಂಗಜ್ಜ ಆಕೆಯ ಮನೆಗೆ ಬಂದರು. ಎರಡು ಲೋಟ ಹಾಲು ತರಲು ಹೇಳಿ ‘ಗುರುಸ್ಮರಣೆ ಮಾಡುತ್ತ ಈ ಹಾಲನ್ನು ಕುಡಿ’ ಎಂದು ಹೇಳಿದರು. ನಂತರ ಭೀಮವ್ವ ಪದ್ಮಾಸನದಲ್ಲಿ ಕುಳಿತಳು. ತನ್ನ ಚಿತ್ತವೃತ್ತಿಯನ್ನೆಲ್ಲಾ ಒಳಗೆ ಎಳೆದುಕೊಂಡು ಬ್ರಹ್ಮಚೇತನದಲ್ಲಿ ನಿಲ್ಲಿಸಿದಳು. ಆಗ ನಾಗಲಿಂಗಯತಿ ಭೀಮವ್ವನ ಶಿರದ ಮೇಲೆ ಹಸ್ತವನ್ನು ಇಟ್ಟರು. ತಕ್ಷಣವೇ ಆಕೆಯ ಪ್ರಾಣ ಬ್ರಹ್ಮರಂಧ್ರದಿಂದ ಹೊರಟು ಗುರುಚರಣದಲ್ಲಿ ಲೀನವಾಯಿತು.

ಆಷಾಢಮಾಸದ ಬಿದಿಗೆ ಮಂಗಳವಾರ. ಆ ದಿನ ನಾಗಲಿಂಗಜ್ಜ ನವಲಗುಂದದ ಬೀದಿಗಳಲ್ಲಿ ಅಡ್ಡಾಡಿದರು. ಕಂಡವರಿಗೆ ಕೈಮುಗಿದು ‘ನಾನು ಹೋಗಿಬರುತ್ತೇನೆ. ಇದೇ ನಮ್ಮ ನಿಮ್ಮ ಕೊನೆಯ ಭೇಟಿ’ ಎಂದರು. ಆ ದಿನ ಸಂಜೆ ಜನರಿಗೆ ಬ್ರಹ್ಮಚರ್ಯದ ಮಹತ್ತ್ವವನ್ನು ತಿಳಿಸಿಕೊಡುತ್ತ ‘ಸರ್ವರೂ ಸುಖಿಗಳಾಗಿರಿ, ಸರ್ವರೂ ದೃಢಕಾಯರಾಗಿರಿ. ಸರ್ವರೂ ಮಂಗಳಕರವಾದುದನ್ನೇ ಕಾಣಿರಿ’ ಎಂದು ಹೇಳಿ ನಡೆದರು. ನಡುರಾತ್ರಿ ಮುಗಿಯಿತು. ಆ ದಿನ ಸತ್ಯಮ್ಮನ ಮನೆಗೆ ಹೋಗಿ ಹಾಲು-ಅನ್ನ ಊಟ ಮಾಡಿದರು. ಮರುದಿನ ಬೆಳಗ್ಗೆ ಎದ್ದರು, ತಮ್ಮ ದೇಹವನ್ನು ಪಂಚಭೂತಗಳಿಗೆ ಅರ್ಪಿಸಲು ನಿರ್ಧರಿಸಿದರು. ಆ ದಿನ ಶಾಲಿವಾಹನಶಕ 1803 ವೃಷ ಸಂವತ್ಸರದ ಆಷಾಢಮಾಸದ ಶುಕ್ಲಪಕ್ಷದ ಚತುರ್ಥಿ, ಗುರುವಾರ (30.06.1881) ಆಗಿತ್ತು. ಎಲ್ಲ ಭಕ್ತರಿಗೂ ಸನ್ಮಂಗಳವನ್ನು ಹೇಳುತ್ತ ತಮ್ಮ ಬಾಹ್ಯವೃತ್ತಿಗಳನ್ನು ಒಳಮುಖ ಮಾಡಿಕೊಂಡರು. ವಾಕ್, ಪಾಣಿ, ಪಾದ, ಪಾಯು, ಉಪಸ್ಥಾದಿ ಕಮೇಂದ್ರಿಯಗಳನ್ನೆಲ್ಲಾ ನಿಷ್ಕ್ರಿಯಗೊಳಿಸಿದರು. ಬ್ರಹ್ಮಚೈತನ್ಯದಲ್ಲಿ ಲಕ್ಷ್ಯರಿಸಿ ಸಮರತಿ-ಸಮಕಳೆಯಲ್ಲಿ ಲೀನವಾದರು. ಘಟಾಕಾಶವು ಮಹಾಕಾಶದಲ್ಲಿ, ಘಟವಾಯುವು ಮಹಾವಾಯುವಿನಲ್ಲಿ, ಘಟಾಗ್ನಿಯು ಮಹಾಗ್ನಿಯಲ್ಲಿ, ಘಟಜಲವು ಮಹಾಜಲದಲ್ಲಿ, ಘಟಪೃಥ್ವಿಯು ಮಹಾಪೃಥ್ವಿಯಲ್ಲಿ ಹಂಚಿಹೋಗಿ ಪರಮಹಂಸಭಾವದಿಂದ ಬ್ರಹ್ಮೈಕ್ಯರಾದರು. ನಂತರ ಭಕ್ತರೆಲ್ಲ ಸೇರಿ ಕಾಯವನ್ನು ಮೆರವಣಿಗೆ ಮಾಡಿ, ಅವರು ಇರುತ್ತಿದ್ದ ಮೌನೇಶ್ವರಮಠದಲ್ಲಿ ಗದ್ದುಗೆ ಮಾಡಿದರು. ಹೀಗೆ ನಾಗಲಿಂಗಯತಿಗಳ ಅವತಾರಕಾರ್ಯ ಮುಗಿಯಿತು. ಆ ಕಾಲದಲ್ಲಿ ನಾಗಲಿಂಗಯತಿಗಳನ್ನು ಗೊತ್ತಿಲ್ಲದ ಸಾಧಕರು ಒಬ್ಬರೂ ಇರಲಿಲ್ಲ. ಅವರು ತತ್ತ್ವಬೋಧಕ ಸ್ವಾಮಿಗಳಾಗಿರಲಿಲ್ಲ. ಅವರು ಅದನ್ನು ಆಚರಿಸುತ್ತ ಬೋಧಿಸುತ್ತಿದ್ದರು. ಅವರು ಅನುಷ್ಠಾನ ವೇದಾಂತಕ್ಕೆ ರೂಪಕವಾಗಿದ್ದರು. ಅವರ ಹೆಸರಿನಿಂದಾಗಿ ನವಲಗುಂದವು ಇಂದು ಕರ್ನಾಟಕದ ಆಧ್ಯಾತ್ಮಿಕ ಕೇಂದ್ರವಾಗಿ ಉಳಿದಿದೆ.

ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಇವರ ಪ್ರಸಿದ್ಧ ದೇವಾಲಯವಿದೆ. ಇಲ್ಲಿ ಪ್ರತಿವರ್ಷ ದೊಡ್ಡ ಜಾತ್ರೆ ನಡೆಯುತ್ತದೆ, ಸುತ್ತೂ ಹಳ್ಳೀಗಳ ಸಾವಿರಾರು ಜನರು ಈ ಜಾತ್ರೆಗೆ ಆಗಮಿಸುತ್ತಾರೆ. ಅಂದು ಇಡೀ ರಾತ್ರೀ ಇವರ ಪಲ್ಲಕ್ಕಿಯನ್ನು ಡೊಳ್ಳು, ಕವಾಯತು ಹಾಗೂ ಪುರುವಂತರೊಡನೆ ಊರ ತುಂಬ ಮೆರವಣಿಗೆ ಮಾಡಲಾಗುತ್ತದೆ.

ಕೈವಾರ ತಾತಯ್ಯ ಯೋಗಿನಾರೇಯಣರು

ಕೈವಾರ ಕರ್ನಾಟಕ ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಪುಣ್ಯಕ್ಷೇತ್ರ. ದ್ವಾಪರಯುಗದಲ್ಲಿ ಇದು ಏಕಚಕ್ರನಗರ.

ಪಾಂಡವರು ವನವಾಸದಲ್ಲಿದ್ದಾಗ ಇಲ್ಲಿಗೆ ಬಂದಿದ್ದರು. ಇಲ್ಲಿರುವ ಭೀಮಲಿಂಗೇಶ್ವರ ದೇವಸ್ಥಾನ ಭಿಮಸೇನ ಸ್ಥಾಪಿಸಿದನೆಂದು ಐತಿಹ್ಯವಿದೆ. ಇದಕ್ಕೆ "ಕೈವಾರನಾಡು" ಎಂಬ ಹೆಸರೂ ಇತ್ತೆಂಬ ಉಲ್ಲೇಖವಿದೆ. ಮಹಾನ್ ಸಂತ ಕಾಲಜ್ಞಾನ-ಭವಿಷ್ಯವಾಣಿ ನುಡಿದ ಶ್ರೀ ಯೋಗಿನಾರೇಯಣ ಯತೀಂದ್ರರು ಜನ್ಮವೆತ್ತಿದ ಸ್ಥಳವಿದು.

೧೭೨೬ ರಲ್ಲಿ ಬಲಿಜ ಜನಾಂಗಕ್ಕೆ ಸೇರಿದ ಮುದ್ದಮ್ಮ ಕೊಂಡಪ್ಪ ದಂಪತಿಗಳಿಗೆ ಹುಟ್ಟಿದ ಯೋಗಿನಾರೇಯಣರ ಜನ್ಮನಾಮ ನಾರಾಣಪ್ಪ. ತಂದೆ ತಾಯಿ ದೈವಭಕ್ತರು. ಕುಲದೇವರಾದ ಅಮರನಾರಾಯಣನ ಕೃಪೆಯಿಂದ ಗರ್ಭವತಿಯಾದಳು ಮುದ್ದಮ್ಮ. ಸೋದರತ್ತೆ ಆಸ್ತಿಯ ದುರಾಸೆಯಿಂದ ಮುದ್ದಮ್ಮ ಗರ್ಭವತಿ ಇದ್ದಾಗಲೇ ವಿಷಕೊಟ್ಟು ಗರ್ಭಪಾತ ಮಾಡಲೆತ್ನಿಸಿದಾಗ, ಸರ್ಪ ಆದಿಶೇಷನೇ ಬಂದು ಕಾಪಾಡುತ್ತಾನೆ. ಹೀಗೆ ಜನ್ಮ ತಳೆದ ನಾರಾಣಪ್ಪನ ತಂದೆ ಬಳೆ ವ್ಯಾಪಾರಿಗಳು. ಅವರ ದುಡಿಮೆಲ್ಲೇ ಸಂತೃಪ್ತ ಜೀವನ ಕಂಡವರು. ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡ ಹುಡುಗ ನಾರಾಣಪ್ಪ ಅಮರನಾರಾಯಣ ದೇವಸ್ಥಾನದ ಅರ್ಚಕರ ಆಶ್ರಯಲ್ಲಿ ಬೆಳೆದನು. ಓದಿನಲ್ಲಿ ಅಷ್ಟೇನೂ ಆಸಕ್ತಿ ಇಲ್ಲದೇ ಯಾವಾಗಲೂ ಆಧ್ಯಾತ್ಮದಲ್ಲಿ ಚಿಂತನ ಮಂಥನ ನಡೆಸುವುದರಲ್ಲಿ ಮಗ್ನನಾಗಿರುತ್ತಿದ್ದನು. ಸಾಕು ತಂದೆ ತಾಯಿಗಳು ಹೇಳುತ್ತಿದ್ದ ಪುರಾಣಗಳು, ಪುಣ್ಯಪುರುಷರ ಕಥೆಗಳಿಂದ ಸ್ಫೂರ್ತಿಪಡೆದ ನಾರಾಣಪ್ಪನಿಗೆ ವಿಷಯೋಪ ಭೋಗಗಳೆಂದರೆ ವಿರಕ್ತಭಾವವೇ. ಊರಿನ ಕೂಲಿಮಠದಲ್ಲಿ ಸಂಸ್ಕೃತ, ಕನ್ನಡ, ತೆಲುಗು ಭಾಷೆಗಳನ್ನು ಕಲಿತು ಪಾರಂಗತನಾಗಿ ಪ್ರೌಢ ವಯಸ್ಕನಾದಾಗ, ಹಿರಿಯರು ಮುಂದೆ ನಿಂತ ಸೋದರತ್ತೆಯ ಮಗಳು ಮುನಿಯಮ್ಮ(ಲಕ್ಷ್ಮಮ್ಮ)ನನ್ನು ಕೊಟ್ಟು ವಿವಾಹ ನೆರವೇರಿಸಿ ಗೃಹಸ್ಥಾಶ್ರಮ ಸ್ವೀಕಾರ ಮಾಡಿಸಿದ್ದರು. ಮುದ್ದಮ, ಪೆದ್ದಕೊಂಡಪ್ಪ, ಚಿಕ್ಕಕೊಂಡಪ್ಪ ಎಂಬ ಮೂವರು ಮಕ್ಕಳಾದರು. ಸಂಸಾರ ದೊಡ್ಡದಾಗಿತ್ತು. ಜೀವನ ನಿರ್ವಹಣೆ ಕಷ್ಟವಾಗಿ ಗಂಡ ದುಡಿಮೆಸ್ತನಲ್ಲ ಸದಾ ಮೂಗು ಹಿಡಿದು ದೇವರ ಧ್ಯಾನ ಮಾಡುತ್ತ ಕುಳಿತರೆ ಹೊಟ್ಟೆ ತುಂಬುವುದಾದರೂ ಹೇಗೆ..? ಹೆಂಡತಿ ಮುನಿಯಮ್ಮನ ವರಾತ ಹೆಚ್ಚಿತ್ತು. ಬಳೆಮಲಾರ ಕೈಗಿತ್ತು ವ್ಯಾಪಾರಕ್ಕೆ ಹೋಗಿ ದಿನಕ್ಕಿಷ್ಟು ತರಲೇ ಬೇಕೆಂದು ತಾಕೀತು ಮಾಡುತ್ತಿದ್ದಳು. ಲೋಕದ ಸ್ತ್ರೀಯರೆಲ್ಲ ತಾಯಿ ಸಮಾನರೆಂದು ಭಾವಿಸತೊಡಗಿದ್ದ ನಾರಾಣಪ್ಪ ಹೆಣ್ಣುಮಕ್ಕಳಿಗೆ, ಸುಮಂಗಲಿಯರಿಗೆಲ್ಲ ಶುದ್ಧಭಾವದಿಂದ ಬಳೆತೊಡಿಸುತ್ತಿದ್ದರು. ಅವರು ಕಾಸುಕೊಟ್ಟಷ್ಟೇ.. ಕೊಡದೇ ತಾತಯ್ಯ ಕಾಸಿಲ್ಲವೆಂದರೆ ಎಲ್ಲ ಅವನಿಚ್ಛೆ ಎಂದು ಮುನ್ನಡೆದು ಸಂಜೆ ವೇಳೆಗೆ ಬಳೆಯಲ್ಲ ಮಾರಿ ಬರಿಗೈಲಿ ಮನೆಸೇರುತ್ತಿದ್ದರು. ಹೆಂಡತಿ ಮುನಿಯಮ್ಮ ಶುದ್ಧ ಮುಠ್ಠಾಳ ಗಂಡ ದೊರೆತನೆಂದು ಗೊಣಗುತ್ತ ಹೇಗೋ ಸಂಸಾರ ನೀಚುವುದಾಗಿತ್ತು.. ದಾಂಪತ್ಯದಲ್ಲಿ ವಿರಸವೇರ್ಪಟ್ಟಿತ್ತು.

-ಅದೊಂದು ದಿನ ನಾರಾಣಪ್ಪ ಬಳೆಮ ಲಾರ ಹೆಗಲಿಗೇರಿಸಿ ಮೂಗೊಳಿ ವೆಂಕಟಗಿರಿ ಕಣಿವೆಯಲ್ಲಿ ಸಾಗುತ್ತಿರುವಾಗ ದಿವ್ಯ ತೇಜಸ್ಸಿನ ಪ್ರಖರತೆಯಲ್ಲಿ ಸ್ವಾಮಿಗಳೊಬ್ಬರಿಂದ ’ಓಂ ನಮೋ ನಾರಾಯ” ಎಂಬ ಬೀಜಾಕ್ಷರಿ ಮಂತ್ರೋಪದೇಶ ಪಡೆದಿದ್ದರು. ಬಾಯಲ್ಲಿ ಬೆಣಚು ಕಲ್ಲು ಇಟ್ಟುಕೊಂಡು ಅದು ಕಲ್ಲು ಸಕ್ಕರೆಯಾಗುವವರೆಗೂ ಈ ಮಂತ್ರವನ್ನು ಜಪಿಸು ನೀನು ಶ್ರೀಹರಿಯ ಕೃಪಾಕಟಾಕ್ಷದಿಂದ ದೈವಾಂಶಸಂಭೂತನಾಗಿ ಯೋಗಸಿದ್ಧಿ ಹೊಂದುವೆ ಎಂದು ಹರಸಿದ್ದರು. ಅನಂತರ, ತಪಸ್ಸಿಗೆ ಪ್ರಶಸ್ತವೆನಿಸಿದ ನರಸಿಂಹ ಗುಹೆಯಲ್ಲಿ ಕುಳಿತು ಬೀಜಾಕ್ಷರಿ ಮಂತ್ರ ಜಪಿಸುವಾಗ ಅದು ಬೆಣಚುಕಲ್ಲಿದ್ದ ಬಾಯಲ್ಲಿ “ಓಂ ನಮೋ ನಾರೇಯಣಾಯ” ಎಂಬ ಉಚ್ಛಾರವಾದಾಗ ಗಾಬರಿಯಿಂದ ಮತ್ತೆ ಧ್ಯಾನಮಗ್ನರಾಗುತ್ತಿದ್ದಂತೆ ಅದನ್ನೇ ಮುಂದುವರೆಸು "ನೀನು ಯೋಗಿ ನಾರೇಯಣ" ಎಂದೇ ಹೆಸರಾಗುವೆ ಎಂಬ ಅಶರೀರವಾಣಿಯಾಯಿತು. ಮೂರುವರುಷಗಳ ಕಠಿಣ ತಪದ ಫಲವಾಗಿ ಬೆಣಚು ಕಲ್ಲು ಸಕ್ಕರೆಯಾಗಿತ್ತು. ಅಮರ ನಾರಾಯಣನ ಪರಮ ಭಕ್ತರಾದರು. ಆಧ್ಯಾತ್ಮಿರಹಸ್ಯಗಳನ್ನು ಅನುಭವವೇದ್ಯ ಸತ್ಯಸಂಗತಿಗಳನ್ನು ಅರಿತು ಜನತೆಗೆ ವೇದಾಂತದ ವಿಷಯಗಳನ್ನು ಬೋಧಿಸುತ್ತಾ ದೈವಿಕ ಪವಾಡಗಳನ್ನೆ ಮಾಡಿದರು. ಭಕ್ತಿಭಾವದ ಮೂಲಕ ಜ್ಞಾನಮಾರ್ಗ ಎಂಬಂತೆ ಜನಮಾನಸದಲ್ಲಿ ಭಕ್ತಿಭಾವ ಬಿತ್ತುವಂಥ ಭಕ್ತಿಗೀತೆಗಳನ್ನು ರಚಿಸಿದರು. ಸನ್ಮಾರ್ಗ ತೋರುತ್ತ ಮಹಾನ್ ಭವಿಷ್ಯತ್ ಜ್ಞಾನಿಗಳಾಗಿ ಕಾಲಜ್ಞಾನವನ್ನು ರಚಿಸಿದರು. ಅದು ಇಂದಿನ ಕಾಲಕ್ಕೆ ಪ್ರಸ್ತುತವೆನಿಸುತ್ತದೆ. ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರೆಂದೇ ಪ್ರಖ್ಯಾತರಾದರು. ತಾತಯ್ಯನವರು ೧೧೦ ವರುಷಗಳಷ್ಟು ಸುದೀರ್ಘ ಕಾಲ (೧೭೨೬-೧೮೩೬) ಇಲ್ಲಿ ನೆಲೆಸಿದ್ದರು.

ಶ್ರೀ ವಿದ್ಯಾರಣ್ಯ

ವಿದ್ಯಾರಣ್ಯ : 14ನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದ ಹರಿಹರ ರಾಯ ಮತ್ತು ಬುಕ್ಕ ರಾಯರ ಮಾರ್ಗದರ್ಶಕರಾಗಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾದವರೆಂದು ಐತಿಹ್ಯಗಳಲ್ಲಿ ಪ್ರಸಿದ್ಧರಾಗಿರುವ ಅದ್ವೈತ ಪಂಥದ ಯತಿ, ಶೃಂಗೇರಿ ಮಠಾಧೀಶ, ದರ್ಶನ, ಸಂಗೀತ ಇತ್ಯಾದಿಗಳ ಬಗ್ಗೆ ಮಹತ್ವದ ಕೃತಿಗಳನ್ನು ರಚಿಸಿರುವ ಪ್ರತಿಭಾನ್ವಿತ ವಿದ್ವಾಂಸ.

ಇವರು ವಿದ್ಯಾಪ್ರೇಮಿಗಳಾಗಿದ್ದರೆಂದೂ ವಿಶಿಷ್ಟಾದ್ವೈತ ವೇದಾಂತ ದೇಶಿಕ, ದ್ವೈತಿ ಟೀಕಾಚಾರ್ಯ ಈ ಸಮಕಾಲೀನರನ್ನು ಗೌರವಿಸಿದ್ದರೆಂದೂ ಪ್ರತೀತಿಗಳಿವೆ. 1386ರಲ್ಲಿ ಹಂಪೆಯಲ್ಲಿ ಮೃತರಾದರೆಂದೂ ಅಲ್ಲಿಯ ವಿರೂಪಾಕ್ಷ ದೇವಾಲಯದ ಹಿಂಭಾಗದಲ್ಲಿ ಇವರ ಸಮಾಧಿ ಇದೆಯೆಂದೂ ಕೆಲವು ದಾಖಲೆಗಳು ತಿಳಿಸುತ್ತವೆ.

ಸಂಪ್ರದಾಯದಲ್ಲಿ ಪ್ರಸಿದ್ಧರಾಗಿರುವ ವಿದ್ಯಾರಣ್ಯ ಬಹುಮುಖ ಪ್ರತಿಭೆಯ ವ್ಯಕ್ತಿ. ಇವರು ಹಿಂದು ರಾಜ್ಯ ಸ್ಥಾಪನೆಗೆ ಕಾರಣರೂ ಪ್ರಸಿದ್ಧ ಮಠದ ಅಧಿಪತಿಗಳೂ ಆಗಿದ್ದರು. ಶಂಕರಾಚಾರ್ಯರ ಅನಂತರ ಅದ್ವೈತ ವೇದಾಂತ ಪುಷ್ಟಿ ನಡೆದದ್ದು ಇವರಿಂದಲೇ. ಇವರು ವಿವರಣಾ ಸಂಪ್ರದಾಯ ಎಂದು ಕರೆಯಲ್ಪಡುವ ಅದ್ವೈತ ಪರಂಪರೆಯನ್ನು ಸ್ಪಷ್ಟವಾಗಿ ನಿರೂಪಿಸಿ ಜನಪ್ರಿಯಗೊಳಿಸಿದರು. ಇವರ ವಿವರಣಾಪ್ರಮೇಯ ಸಂಗ್ರಹ ಈ ದೃಷ್ಟಿಯಿಂದ ಬರೆದ ಮಹತ್ತ್ವದ ಕೃತಿ. ಅದ್ವೈತ ವೇದಾಂತ ಸಾರವನ್ನು ನಿರೂಪಿಸುವ ಪಂಚದಶೀ, ಜೀವನ್ಮುಕ್ತಿ ವಿವೇಕ, ಅನುಭೂತಿ ಪ್ರಕಾಶ ಎಂಬ ಗ್ರಂಥಗಳನ್ನೂ ಇವರು ಬರೆದಿದ್ದಾರೆ. ಭಾರತೀಯ ತತ್ತ್ವಶಾಸ್ತ್ರ ಪ್ರಕಾರಗಳ ಸುಲಭ ಪರಿಚಯವನ್ನು ಮಾಡಿಕೊಡುವ ಸರ್ವದರ್ಶನ ಸಂಗ್ರಹ ಜ್ಯೋತಿಷಕ ಕೃತಿ ಕಾಲನಿರ್ಣಯ, ಶಂಕರವಿಜಯ ಮುಂತಾದ ಇತರ ಗ್ರಂಥಗಳೂ ಇವರೇ ರಚಿಸಿದರೆಂಬ ನಂಬಿಕೆ ಇದೆ.

ಇವರು ಸಂಗೀತಸಾರ (ಈಗ ಅನುಪಲಬ್ಧ) ಎಂಬ ಸಂಗೀತ ಗ್ರಂಥವನ್ನೂ ರಚಿಸಿದ್ದಾರೆ. ಅದರಲ್ಲಿ ರಾಗಗಳ ಜನಕ ಜನ್ಯ ರೀತಿಗಳ ಮೊದಲ ನಿರೂಪಣೆ ಕಂಡುಬರುವುದೆಂದೂ ಇವರು ನಿರೂಪಿಸಿರುವ ಪ್ರಕಾರದಿಂದಲೇ ದಕ್ಷಿಣಾದಿ ಸಂಗೀತ ರೀತಿಗೆ ಕರ್ಣಾಟಕ ಸಂಗೀತ ಎಂಬ ಹೆಸರು ಬರಲು ಕಾರಣವಾಯಿತೆಂದೂ ಒಂದು ಅಭಿಪ್ರಾಯವಿದೆ.

ಕಾಲಮಾಧವ . "ಸರ್ವದರ್ಶನ ಸಂಗ್ರಹ".ಇದರಲ್ಲಿ ೧೬ ಭಾರತೀಯ ದರ್ಶನಗಳ ವಿಮರ್ಶಾತ್ಮಕ ಪರಿಚಯವಿದೆ.

ಶ್ರೀ ಚಂದ್ರಶೇಖರ ಬಾರತಿ

ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಶ್ರೀ ಶೃಂಗೇರಿ ಶಾರದಾಪೀಠದ 34ನೆಯ ಪೀಠಾಧಿಪತಿಗಳು. ತಪಸ್ವಿಗಳು, ಅವಧೂತರು. ನಂದನ ಸಂವತ್ಸರದ ಆಶ್ವಯುಜ ಬಹುಳ ಏಕಾದಶಿಯ ಶುಭದಿನ (16 ಅಕ್ಟೋಬರ್ 1892)
ಈ ಮಹಾಮಹಿಮರ ಜನನವಾಯಿತು. ತಂದೆ ಗೋಪಾಲಶಾಸ್ತ್ರಿಗಳು. ತಾಯಿ ಲಕ್ಷ್ಮಮ್ಮ. ಸ್ವಾಮಿಗಳ ಪೂರ್ವಾಶ್ರಮದ ನಾಮಧೇಯ ನರಸಿಂಹ ಶಾಸ್ತ್ರಿ.
ಶಾಸ್ತ್ರಿಗಳ ಮಾತಾ-ಪಿತೃಗಳು ಮಗನ ಪಾಲನೆ ಪೋಷಣೆಯ ಜವಾಬ್ದಾರಿಯನ್ನು ಮಠದ ಆಗಿನ ಕಾರ್ಯಭಾರಿ ಶ್ರೀಕಂಠಶಾಸ್ತ್ರಿಗಳಿಗೆ ಒಪ್ಪಿಸಿದರು. ಶಾಸ್ತ್ರಿಗಳು ಬಾಲಕನನ್ನು ತಮ್ಮ ಮನೆಯಲ್ಲಿ ಅಕ್ಕರೆಯಿಂದ ಸಾಕಲು ಪ್ರಾರಂಭಿಸಿದರು. ಪೀಠದ 33ನೆಯ ಗುರುಗಳಾದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳ ಅಪ್ಪಣೆಯ ಮೇರೆಗೆ ಒಂಬತ್ತನೆಯ ವಯಸ್ಸಿನಲ್ಲಿ ಶಾಸ್ತ್ರಿಗಳಿಗೆ ಮಠದಲ್ಲಿಯೇ ಉಪನಯನ’ ನೆರವೇರಿಸಲಾಯಿತು. ತಮ್ಮ ಉತ್ತರಾಧಿಕಾರಿಯಾಗಲು ನರಸಿಂಹ ಶಾಸ್ತ್ರಿಗಳು ಯೋಗ್ಯರೆಂದು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳ ನಿಶ್ಚಯವಾಗಿತ್ತು. ಈ ವಿಷಯ ಮಠದ ಕೆಲವರಿಗೆ ಮತ್ತು ಅಂದಿನ ಮೈಸೂರಿನ ಅರಸರಿಗೆ ಮಾತ್ರ ತಿಳಿದಿತ್ತು. ಶ್ರೀ ನೃಸಿಂಹ ಭಾರತಿಗಳು 1912ರಲ್ಲಿ ಪರಮಪದ ಹೊಂದಿದರು. ಆಗ ಎಲ್ಲ ಪ್ರಮುಖರು ರ್ಚಚಿಸಿ, ಬೆಂಗಳೂರಿನಲ್ಲಿ ವಿದ್ಯಾಭ್ಯಾಸದಲ್ಲಿದ್ದ ನರಸಿಂಹ ಶಾಸ್ತ್ರಿಗಳನ್ನು ಶೃಂಗೇರಿಗೆ ಕರೆತಂದು, ಚೈತ್ರ ಬಹುಳ ಷಷ್ಠಿಯಂದು (7.4.1912) ಅವರಿಗೆ ಶಾಸ್ತ್ರೋಕ್ತವಾಗಿ ಸಂನ್ಯಾಸದೀಕ್ಷೆ ಕೊಟ್ಟು, ‘ಚಂದ್ರಶೇಖರ ಭಾರತೀ’ ಎಂಬ ಅಭಿಧಾನ ನೀಡಲಾಯಿತು.
ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಸದಾ ಸಮಾಧಿಸ್ಥಿತಿಯಲ್ಲಿರುತ್ತಿದ್ದರು. ಅಂತರ್ದೃಷ್ಟಿ ಹೊಂದಿದ್ದ ಶ್ರೀಗಳು ಎಲ್ಲರಿಗೂ ಸಾಂತ್ವನ ಹೇಳಿ, ಸಲಹೆಗಳನ್ನು ಕೊಟ್ಟು ಉದ್ಧರಿಸುತ್ತಿದ್ದರು. ‘ನುಡಿಗಿಂತ ನಡೆ ಮುಖ್ಯ’ ಎಂಬುದಾಗಿ ಗುರುವರ್ಯರು ಯಾವಾಗಲೂ ಹೇಳುತ್ತಿದ್ದರು. ವಿದ್ವತ್ಪ್ರೌಡಿಮೆ ಪ್ರದರ್ಶನ, ಸ್ವಮತ ಪ್ರಶಂಸೆ, ಅನ್ಯಮತ ದೂಷಣೆ ಇತ್ಯಾದುಗಳನ್ನು ಗುರುವರ್ಯರು ಸಹಿಸುತ್ತಿರಲಿಲ್ಲ. ಭಾರತೀಯ ಸಂಸ್ಕೃ, ನಾಗರಿಕತೆ, ಭವ್ಯ ಪರಂಪರೆ, ತತ್ವ, ವೇದಾಂತ, ಸಾಹಿತ್ಯ, ಇತಿಹಾಸಗಳನ್ನು ಕುರಿತು ಭಾಷಣ ಮಾಡುವುದು, ಆಚಾರ್ಯರ ಗ್ರಂಥಗಳನ್ನು ಕುರಿತು ವ್ಯಾಖ್ಯಾನ ಮಾಡುವುದು, ಅವುಗಳನ್ನು ಕುರಿತ ಗ್ರಂಥಗಳನ್ನು ರಚಿಸುವುದು ಮುಖ್ಯವಲ್ಲ.
ಆ ತತ್ವಗಳ ಅನುಷ್ಠಾನವೇ ಮುಖ್ಯ’ವೆಂದು ಗುರುವರ್ಯರ ಅಭಿಪ್ರಾಯವಾಗಿತ್ತು.
ಒಮ್ಮೆ ಒಬ್ಬ ಐರೋಪ್ಯನು ಹಲವಾರು ಗ್ರಂಥಗಳನ್ನು ಓದಿ, ಹಿಂದೂ ಮತದ ವಿಚಾರದಲ್ಲಿ ಆಸಕ್ತಿ ತಳೆದಿದ್ದನು. ತಾನು ಹಿಂದುವಾಗಿ ಪರಿವರ್ತನೆ ಹೊಂದಬೇಕೆಂಬ ಅಪೇಕ್ಷೆಯನ್ನು ಗುರುಗಳಿಗೆ ತಿಳಿಸಿದನು. ‘ಹಿಂದೂಮತವು ಬುದ್ಧಿಯುಳ್ಳವರೆಲ್ಲರನ್ನೂ ಆಕರ್ಷಿಸುತ್ತದೆ. ಆದರೆ
ಈ ಮತದಲ್ಲಿ ಸಾಮಾಜಿಕವಾದ ಮತಪರಿವರ್ತನೆಗೆ ಅವಕಾಶವಿಲ್ಲ. ಸಾವಿರಾರು ಮೈಲಿಗಳಿಂದ ಬರುತ್ತೀರಿ. ನಿಮ್ಮಲ್ಲೇ ಶಾಂತಿ ಮತ್ತು ನೆಮ್ಮದಿಯನ್ನು ಹುಡುಕಿ’ ಎಂದು ಹೇಳಿದ ದಿಟವಾದ ಗುರು ಶ್ರೀ ಚಂದ್ರಶೇಖರ ಭಾರತಿಗಳು.
ನಿತ್ಯಕರ್ಮಗಳು, ಪೂಜೆ, ಇತ್ಯಾದಿಗಳಿಗೆ ಸಮಯವಿಲ್ಲ ಎಂದು ಬೇರೆಯವರನ್ನು ನೇಮಿಸುವುದೆಲ್ಲ ಸರಿಯಾದ ಮಾರ್ಗವಲ್ಲ. ತನ್ನ ಹಸಿವೆಗೆ ತಾನೇ ಊಟ ಮಾಡಬೇಕು. ವಿದ್ಯೆಗಾಗಿ ಅಲ್ಲಲ್ಲಿ ಅಲೆದಾಡಿ ಡಿಗ್ರಿ ಇತ್ಯಾದಿ ಲೌಕಿಕ ಅಭಿವೃದ್ಧಿಗೆೆ ಶ್ರಮ ಜಾಸ್ತಿಯಾಗಿದೆ. ಆದರೆ ಇದರ ಜೊತೆಯಲ್ಲಿ ಶ್ರೇಯಸ್ಸು-ಪ್ರೇಯಸ್ಸುಗಳಿಗೆ ಪ್ರಯತ್ನಿಸುತ್ತಿಲ್ಲ.
15 ನಿಮಿಷಗಳಲ್ಲಿ ಎಲ್ಲ ಸಿದ್ಧವಾಗಿ ಪೂಜೆ ಮಾಡಬಹುದು ಎಂಬುದಾಗಿ ಹೇಳುತ್ತಿದ್ದರು. ಆಗಿನ ಕಾಲದಲ್ಲಿಯೇ ವಿವಾಹಕ್ಕೆ ಮಾಡುವ ಅನವಶ್ಯಕ ವೆಚ್ಚಗಳನ್ನು ಕಡಿಮೆ ಮಾಡಲು ಹೇಳುತ್ತಿದ್ದರು. ಧಾರ್ವಿುಕ ಕಲಾಪ ಬೇರೆ. ಸಂತೋಷಕ್ಕೆಂದು ಏರ್ಪಡಿಸುವ ಕಲಾಪ ಬೇರೆ. ವಿವಾಹಸಂಸ್ಕಾರವನ್ನು ಕಡಿಮೆ ವೆಚ್ಚದಲ್ಲಿ ಮಾಡಬಹುದು. ಸಂಗೀತ, ನೃತ್ಯ, ಭೂರಿಭೋಜನ, ಉಡುಗೊರೆ, ವೈಭವದ ಮೆರವಣಿಗೆ, ಆಡಂಬರ ಅನಗತ್ಯ. ಆದರೆ ನಿರಾಡಂಬರ ಧರ್ಮಕಾರ್ಯಗಳನ್ನು ಕಡಿಮೆ ಮಾಡುವುದು ಸರಿಯಲ್ಲ ಎಂಬ ಸಂದೇಶ ಕೊಟ್ಟಿದ್ದರು.
ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳು ಅನೇಕ ಕಾರ್ಯಗಳನ್ನು ನೆರವೇರಿಸಿದ್ದಾರೆ. ಶ್ರೀ ಶಾರದೆಯ ಪ್ರೇರಣೆ ಮತ್ತು ಆದೇಶದಂತೆ 22.5.1931ರಲ್ಲಿ ಶ್ರೀನಿವಾಸ ಎಂಬ ಯುವಕನನ್ನು ಉತ್ತಾರಾಧಿಕಾರಿಯನ್ನಾಗಿ ಆರಿಸಿಕೊಂಡು ಸಂನ್ಯಾಸಾಶ್ರಮ ಕೊಟ್ಟು ಶ್ರೀ ಅಭಿನವ ವಿದ್ಯಾತೀರ್ಥ ಎಂಬ ಹೆಸರಿಟ್ಟರು.
ಅವಧೂತರಾದ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಮಹಾಲಯ ಅಮಾವಾಸ್ಯೆಯಂದು (26.9.1954) ತುಂಗಾನದಿಯಲ್ಲಿ ಎಂದಿನಂತೆ ಧ್ಯಾನಾವಸ್ಥೆಯಲ್ಲಿಯೇ ದೇಹತ್ಯಾಗ ಮಾಡಿದರು.

ಚಂದ್ರಶೇಖರ ಭಾರತಿ ಸ್ವಾಮಿನಾ ಕೆಲವು ಕಾವ್ಯಗಳನ್ನು  ರಚಿಸಿ ಪ್ರಸಿದ್ಧ ವ್ಯಾಖ್ಯಾನವನ್ನು ಬರೆದಿದ್ದಾರೆ. ಅವರ ಮುಖ್ಯ ಕೃತಿಗಳು:

ಗುರುರಾಜ ಶಕ್ತಿಮಾಲಿಕಾ ಸುಮಾರು 400 ಪುಟಗಳಲ್ಲಿ 36 ಸಂಯೋಜನೆಗಳನ್ನು ಒಳಗೊಂಡಿದೆ. ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿ ಮುದ್ರಿಸಲಾಗಿದೆ

ಶ್ರೀ ಆದಿ ಶಂಕರಾಚಾರ್ಯ ರ ವಿವೇಕಚೂಡಾಮಣಿಕುರಿತು ಭಾಷ್ಯವ್ಯಾಖ್ಯಾನ)

ಗೋವಿಂದ ಭಟ್ಟ ಹಾಗೂ ಷರೀಫರು

ಶಿಶುನಾಳ ಶರೀಫರು ತತ್ವಪದಗಳ ರೂವಾರಿ. ಶಿಶುನಾಳ ಶರೀಫರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಕ್ರಿ.ಶ. ೧೮೧೯ ಮಾರ್ಚ ೭ರಂದು ಜನಿಸಿದರು. ಇವರ ತಂದೆ ದೇವಕಾರ ಮನೆತನದ ಇಮಾಮ ಹಜರತ ಸಾಹೇಬರು ಹಾಗು ತಾಯಿ ಹಜ್ಜೂಮಾ. ಇವರ ಪೂರ್ಣ ಹೆಸರು ಮಹಮ್ಮದ ಶರೀಫ. ಮುಲ್ಕಿ ಪರೀಕ್ಷೆ ಪಾಸು ಮಾಡಿದ ಬಳಿಕ ಶರೀಫರು ಕೆಲ ಕಾಲ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರೆಂದು ಕೆಲಸ ಮಾಡಿದರು.

ಆದರೆ ಮುಂದೆ ಈ ಕೆಲಸವನ್ನು ಬಿಟ್ಟು ಬಿಟ್ಟರು. ಈ ಸಮಯದಲ್ಲಿ ಶರೀಫರಿಗೆ ಕಳಸದ ಗುರು ಗೋವಿಂದಭಟ್ಟರಿಂದ ಅನುಗ್ರಹವಾಯಿತು. ಮಗನು ಕೆಲಸವನ್ನು ಬಿಟ್ಟು ಆಧ್ಯ್ಶಾತ್ಮಚಿಂತನೆಯಲ್ಲಿ ತೊಡಗಿಸಿಕೊಂಡದ್ದರಿಂದ ಶರೀಫರ ತಂದೆ ತಾಯಿ ಅವರಿಗೆ ಕುಂದಗೋಳ ನಾಯಕ ಮನೆತನದ ಫಾತಿಮಾ ಎಂಬ ಕನ್ಯೆಯೊಂದಿಗೆ ಮದುವೆ ಮಾಡಿದರು.

ಕೆಲವು ಸಮಯದ ನಂತರ ಇವರಿಗೆ ಒಂದು ಹೆಣ್ಣು ಮಗು ಜನಿಸಿತು. ದುರ್ದೈವದಿಂದ ಕೆಲವು ತಿಂಗಳುಗಳಲ್ಲಿ ಹೆಂಡತಿ ತೀರಿಕೊಂಡರು. ಶರೀಫರಿಗೆ ಜೀವನದಲ್ಲಿ ಬೇಸರವಾದರೂ, ದೇವರಲ್ಲಿ ನಂಬಿಕೆ ಉಳಿದಿತ್ತು. ಶರೀಫರು ಆ ಬಳಿಕ ತಮ್ಮ ಜೀವನವನ್ನು ಆಧ್ಯಾತ್ಮಸಾಧನೆಗೆ ಮುಡಿಪಿಟ್ಟರು. ತಾಳ್ಮೆಯಿಂದ ಸಜ್ಜನರ ಹಾಗೂ ವಿದ್ಯಾವಂತರ ಸಹವಾಸದಲ್ಲಿಯೇ ಕಾಲ ಕಳೆಯುತ್ತಾ ಬಂದರು. ತಮಗೆ ಸರಿಯಾಗಿ ಮಾರ್ಗದರ್ಶನ ನೀಡುವಂತಹ ಗುರುವಿಗಾಗಿ ಅವರು ಊರೂರು ಅಲೆದರು.

ಕೊನೆಗೆ ಗೋವಿಂದಭಟ್ಟ ಎಂಬ ಗುರುವಿನಲ್ಲಿ ಸರಿಯಾದ ಮಾರ್ಗದರ್ಶನ ದೊರೆಯಿತು. ಯಾವುದೇ ಮತತ ಬಗ್ಗೆ ಮೂಡನಂಬಿಕೆ ಇಲ್ಲದ ಈ ಗುರುಗಳು ಶರೀಫರಿಗೆ ತುಂಬಾ ಮೆಚ್ಚುಗೆಯಾದರು. ಗುರುಶಿಷ್ಯರಿಬ್ಬರೂ ಮಸೀದಿಗಳಿಗೆ, ದೇವಾಲಯಗಳಿಗೆ ಸಂದರ್ಶನಕ್ಕಾಗಿ ಹೊರಟರು. ಶರೀಫರು ಅನೇಕ ಹಾಡುಗಳನ್ನು ರಚಿಸಿ ಹಾಡಿದರು. ಈ ಗುರುಗಳ ಜೊತೆಗೆ ನವಲಗುಂದದ ನಾಗಲಿಂಗಮತಿ ಮತ್ತು ಗಂಗೆಯ ಮಡಿವಾಳಪ್ಪ ಎಂಬುವರು ಸಹ ಶರೀಫರ ಮೇಲೆ ಹೆಚ್ಚಿನ ಪರಿಣಾಮ ಬೀರಿದರು.

ಶರೀಫರು ಹಾಡಿದ ಪದಗಳು ಧಾರವಾಡ ಜಿಲ್ಲೆಯ ಆಡುಭಾಷೆಯ ಶೈಲಿಯಲ್ಲಿವೆ. ಈ ಪದಗಳಲ್ಲಿ ಕೆಲವು ದೇವತಾಸ್ತುತಿಯ ಪದಗಳಾದರೆ, ಇನ್ನು ಕೆಲವು ಪದಗಳು ತತ್ವಬೋಧನೆಯ ಪದಗಳಾಗಿವೆ.ಹೆಚ್ಚಿನ ಪದಗಳು ಕನ್ನಡದಲ್ಲಿ ಇದ್ದರೂ ಸಹ ಕೆಲವು ಪದಗಳು ಉರ್ದು ಭಾಷೆಯಲ್ಲಿವೆ.

ಹೊಸಗನ್ನಡ ಅರುಣೋದಯ ಸಾಹಿತ್ಯದ ಮುಂಬೆಳಗಿನ ಕಾಲದಲ್ಲಿ ತಮ್ಮ ಅನುಭಾವಕಾವ್ಯದ ಹೊಂಗಿರಣವೊಂದನ್ನು ಹಾಯಿಸಿದ ಪ್ರಸಿದ್ಧ ಅನುಭಾವಿ ಕವಿ. ಇವರ ಮೊದಲಿನ ಹೆಸರು ಮಹಮ್ಮದ್ ಶರೀಫ್. ಶಿಗ್ಗಾವಿ ತಾಲ್ಲೂಕಿನ ಶಿಶುವಿನಾಳ ಇವರ ಜನ್ಮಸ್ಥಳ. 1819 ಮಾರ್ಚ್ 7 ರಂದು ಜನಿಸಿದರು. ಕನ್ನಡ ಮುಲ್ಕೀ ಪರೀಕ್ಷೆಯವರೆಗೆ ಓದಿದ ಇವರು, ಆರಂಭದಲ್ಲಿ ಕೆಲಕಾಲ ಹಳ್ಳಿಯ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರಾದರೂ ಬೇಗನೆ ಅದರ ಹಂಗು ಹರಿದುಕೊಂಡು ಆಧ್ಯಾತ್ಮಸಾಧನೆಗೆ ತಮ್ಮನ್ನು ಸಮರ್ಪಿಸಿ ಕೊಂಡರು.

ಅಭಿಜಾತ ಕಲಾವಿದರಾಗಿದ್ದ ಶಿಶುನಾಳರು ಚಿಕ್ಕಂದಿನಲ್ಲಿಯೇ ಹಳ್ಳಿಯ ಜಾತ್ರೆ ಉತ್ಸವಗಳಲ್ಲಿ ಶರಣರ ವಚನಗಳನ್ನೂ ಅನುಭಾವ ಪದಗಳನ್ನೂ ಹಾಡುತ್ತ, ಬಹುರೂಪಿಗಳ ಹಾಗೆ ವಿವಿಧ ವೇಷ ಹಾಕುತ್ತ, ಬಗೆಬಗೆಯ ಬಯಲಾಟಗಳಲ್ಲಿ ಪಾತ್ರವಹಿಸುತ್ತ ತಮ್ಮ ಕಲೆಗಾರಿಕೆಯನ್ನು ಜನಮನದ ವಿಲಾಸ-ವಿಕಾಸಗಳಿಗೆ ಮುಡಿಪಿಡಲು ಮೊದಲುಮಾಡಿದರು. ಮೊಹರಂ ಪರ್ವ ಸಮಯದಲ್ಲಿ ತಲೆ ಎತ್ತುವ ಕರ್ಬಲಾ ಮೇಳಗಳಿಗಾಗಿ ರಿವಾಯತ್ ಪದ ರಚಿಸಿಕೊಟ್ಟರು, ಲಾವಣಿಗಳನ್ನೂ ಬರೆದರು. ಹೀಗೆ ನಿಧಾನವಾಗಿ ಸಾಹಿತ್ಯಪಥದಲ್ಲಿ ತಮ್ಮ ಹೆಜ್ಜೆ ಮೂಡಿಸಿ, ಮುಂದಿನ ಸೃಷ್ಟಿಗೆ ಅಗತ್ಯ ವಾದ ಪೂರ್ವಸಿದ್ಧತೆ ಮಾಡಿಕೊಂಡರು. ಕಳಸದ ಗುರುಗೋವಿಂದ ಭಟ್ಟರು, ಅಂಕಲಗಿಯ ಅಡವಿ ಸ್ವಾಮಿಗಳು, ಗರಗದ ಮಡಿವಾಳಪ್ಪ ನವರು, ನವಿಲುಗುಂದದ ನಾಗಲಿಂಗಪ್ಪನವರು, ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳು ಮುಂತಾದ ಸಮಕಾಲೀನ ಸಾಧುಸತ್ಪುರುಷರ ಸಾನ್ನಿಧ್ಯ, ಸಂಸರ್ಗಗಳಿಂದ ಅನುಭಾವಿಯಾಗಿ ಮಾಗಿದರು.

ಕನ್ನಡ ಸಂಸ್ಕಂತಿಯ ಸರ್ವಧರ್ಮಸಹಿಷ್ಣುಭಾವ ಮತ್ತು ಆಧ್ಯಾತ್ಮಿಕ ಪರಂಪರೆಯ ಸರ್ವಸಮನ್ವಯ ಅನುಭಾವ ಸಂಪತ್ತನ್ನು ಅರಗಿಸಿಕೊಂಡು ಇವರು ರಚಿಸಿದ ಅನುಭವ ಪದಗಳು ಆಪ್ತವಾದ ಕಳಕಳಿಗೆ ನೆಲೆ ಯಾಗಿವೆ. ಹಳ್ಳಿಯ ಬಾಳಿನ ದಿನದಿನದ ಬದುಕಿನಲ್ಲಿ ತಮ್ಮ ಕಣ್ಮನಗಳನ್ನು ಸೆಳೆದ ಒಂದೊಂದು ಸನ್ನಿವೇಶ-ಸಂಗತಿ, ವಸ್ತು-ವ್ಯಕ್ತಿ, ಪಶು-ಪಕ್ಷಿ ಮೊದಲಾದವುಗಳನ್ನೇ ಒಂದು ರೂಪಕವನ್ನಾಗಿಯೋ ದೃಷ್ಟಾಂತವ ನ್ನಾಗಿಯೋ ಪ್ರತಿಮೆಯನ್ನಾಗಿಯೋ ಮಾಡಿಕೊಂಡು ಅವುಗಳಲ್ಲಿ ತಮ್ಮ ಅನುಭವದ ಬೆಳಕು ಮತ್ತು ಅನುಭಾವದ ಬೆಳಗನ್ನು ವರ್ಣಮಯವಾಗಿ ಹೇಳಿದ್ದಾರೆ. ತಮ್ಮ ಜೀವಮಾನದುದ್ದಕ್ಕೂ ಇವರು ಬರೆದ ಹಾಡು, ಒರೆದ ಪಾಡು ಒಂದೇ ಆಗಿದೆ. ಬೋಧ ಒಂದೇ, ಬ್ರಹ್ಮನಾದ ಒಂದೇ ಎಂಬುದು ಅವರ ಬೀಜಮಂತ್ರವಾಗಿದ್ದು ನಡಿಯೊ ದೇವರ ಚಾಕರಿಗೆ, ಮುಕ್ತಿಗೊಡೆಯ ಖಾದರ ಲಿಂಗ ನೆಲಸಿರ್ಪ ಗಿರಿಗೆ ಎಂಬುದು ಇವರು ತಮ್ಮ ಮನಕ್ಕೂ ಜನಕ್ಕೂ ಕೊಟ್ಟ ಜೀವಾಳದ ಕರೆಯಾಗಿದೆ. ಇವರ ದೃಷ್ಟಿಯಲ್ಲಿ ಸನಾತನ ವೈದಿಕ ಮತ ಎತ್ತಿಹಿಡಿಯುವ ಬ್ರಹ್ಮತತ್ತ್ವ, ತಮ್ಮ ಪರಿಸರದಲ್ಲಿ ಪ್ರಭಾವಕಾರಿಯಾಗಿದ್ದ ವೀರಶೈವ ಮತದ ಲಿಂಗತತ್ತ್ವ ಹಾಗೂ ತಮ್ಮ ಮನೆತನಕ್ಕೆ ಪೂಜ್ಯವಾಗಿದ್ದ ಹುಲಗೂರ ಖಾದರಶಾ ಸಾಧುವಿನ ಸಮಾಧಿತತ್ತ್ವ-ಇವೆಲ್ಲವೂ ಮೂಲತಃ ಒಂದೇ. ಇದರಿಂದಾಗಿ ಇವರು ಸರ್ವಧರ್ಮಸಮನ್ವಯದ ಉಜ್ಜ್ವಲ ಮೂರ್ತಿಯಾಗಿ ಹಿಂದು-ಮುಸ್ಲಿಮ್ ಬಾಂಧವ್ಯದ ಧವಲಕೀರ್ತಿಯಾಗಿ ಉತ್ತರ ಭಾರತದ ಮಹಾತ್ಮ ಕಬೀರರಂತೆ ಉತ್ತರ ಕರ್ನಾಟಕದ ಭಾಗದಲ್ಲಿ ಜನಮನದ ಗದ್ದುಗೆ ಏರಿದರು. ಇದಲ್ಲದೆ ತಮ್ಮ ಅಭಿವ್ಯಕ್ತಿಯಲ್ಲಿ ಅಳವಡಿಸಿಕೊಂಡ ಜನಪದ ಭಾಷೆಯ ಸೊಗಡು-ಗತ್ತು, ಗ್ರಾಮೀಣ ಸಂಗೀತದ ಲಯ-ಲಾಸ್ಯಗಳಿಂದಾಗಿಯೂ ಇವರು ಜನಮನವನ್ನು ಸೂರೆಗೊಂಡರು. ಹೀಗೆ ಆಧ್ಯಾತ್ಮಿಕ ಸಾಧನೆಯ ಸಿದ್ಧಿಯನ್ನು ಮುಟ್ಟಿದಮೇಲೆ ತಮ್ಮಲ್ಲಿ ಬಂದವರಿಗೆ ಧರ್ಮನೀತಿ ಬೋಧೆ ಮಾಡಲೆಂದು ಇವರು ತಮ್ಮ ಮನೆ ಹತ್ತಿರದಲ್ಲಿ ಕುಳಿತುಕೊಳ್ಳುತ್ತಿದ್ದ ಕಟ್ಟೆಯೊಂದು ಇಂದಿಗೂ ಇದ್ದು ಬೋಧಪೀಠ ಎಂಬುದಾಗಿ ಪೂಜಿಸಲ್ಪಡುತ್ತದೆ.

ಉತ್ತರಕರ್ನಾಟಕವು ಅನೇಕ ಸಂತರನ್ನು ಪಡೆದ ಪುಣ್ಯಕ್ಷೇತ್ರ. ಹುಬ್ಬಳ್ಳಿಯ ಸಿದ್ಧಾರೂಢರು, ನವಲಗುಂದದ ನಾಗಲಿಂಗಜ್ಜ, ಅಥಣಿಯ ಮುರುಘೇಂದ್ರರು, ಅಗಡಿ ಶೇಷಾಚಲಸ್ವಾಮಿಗಳು, ತಿಂಥಿಣಿ ಮೋನೇಶ್ವರರು, ಕಡಕೋಳ ಮಡಿವಾಳಪ್ಪ ಮುಂತಾದವರು ಜನಮಾನಸದಲ್ಲಿ ಬೆರೆತು ಹೋಗಿದ್ದಾರೆ. ಜಾತಿ, ಧರ್ಮಗಳನ್ನು ಬದಿಗೊತ್ತಿ ‘ಸೋಹಂತತ್ತ್ವ’ವನ್ನು ಹಿಡಿದು ಕೆಲವರು ನಡೆದರೆ; ಇನ್ನೂ ಕೆಲವರು ‘ದಾಸೋಹಂ’ ಭಾವದಲ್ಲಿ ನಡೆದಿದ್ದಾರೆ. ಇವರೆಲ್ಲರು ‘ಆತ್ಮತತ್ತ್ವ’ವನ್ನು ಹಿಡಿದು ನಡೆದವರೇ. ಅಲ್ಲಮಪ್ರಭು ಹೇಳಿದ ‘ತನ್ನ ತಾನರಿದಡೆ ತನ್ನರಿವೆ ಗುರು’ ಎಂಬ ಮಹಾಸೂತ್ರವನ್ನು ಇಲ್ಲಿಯ ನೂರಾರು ಸಂತರು ಬಿಡದೆ ಧ್ಯಾನಿಸಿದ್ದಾರೆ.

ಜನನ-ವಿದ್ಯಾಭ್ಯಾಸ: ಈಗಿನ ಹಾವೇರಿ ಜಿಲ್ಲೆಗೆ ಸೇರಿದ ಶಿಗ್ಗಾವಿ ತಾಲ್ಲೂಕಿನಲ್ಲಿ ಶಿಶುನಾಳ ಗ್ರಾಮವಿದೆ. ಈಗ ಇದನ್ನು ಶಿಶುವಿನಹಾಳ, ಶಿಶುವಿನಾಳ ಎಂದು ಕರೆಯುತ್ತಾರೆ. ಈ ಗ್ರಾಮದಲ್ಲಿ ದೇವಕಾರ ಮನೆತನದ ಇಮಾಮ್ ಹಜರತ್ ಸಾಹೇಬ ಮತ್ತು ಆತನ ಹೆಂಡತಿ ಹಜ್ಜೂಮಾ ಇವರಿಗೆ ಬಹುಕಾಲ ಸಂತಾನ ಇರಲಿಲ್ಲ. ಅವರು ಹುಲಗೂರಿನ ಸಂತ ಖಾದರ ಷಾವಲಿ ಸಮಾಧಿಗೆ ಭಕ್ತಿಯಿಂದ ನಡೆದುಕೊಂಡ ಮೇಲೆ, ಕ್ರಿ.ಶ.1819 ಮಾರ್ಚ್ 7 ರಂದು ಶರೀಫರು ಜನ್ಮಿಸಿದರು. ಖಾದರ್ ಷಾವಲಿಯವರ ವರಪ್ರಸಾದದಿಂದ ಜನ್ಮಿಸಿದ ಶರೀಫರು ತಮ್ಮ ಕೊನೆಗಾಲದ ವರೆಗೂ ಮೇಲಿಂದ ಮೇಲೆ ಹುಲಗೂರಿನ ಸಮಾಧಿಗೆ ಭೇಟಿ ಕೊಡುತ್ತಿದ್ದರು. ಶರೀಫರು ಯಾವುದೇ ಕೆಲಸ ಮಾಡಿದರೂ ‘ಯಾ ಖಾದರ್’ ಎಂದು ಹೇಳುತ್ತಿದ್ದರೆಂದು ಅವರ ಶಿಷ್ಯರು ದಾಖಲಿಸಿದ್ದಾರೆ. ಶರೀಫರು ತಮ್ಮೊಂದು ತತ್ತ್ವಪದದಲ್ಲಿ ‘ನಡೆಯೋ ದೇವರ ಚಾಕರಿಗೆ ಮುಕ್ತಿ | ಗೊಡೆಯ ಖಾದರಲಿಂಗ ನೆಲಸಿರ್ಪ ಗಿರಿಗೆ’ ಎಂದು ಅನನ್ಯತೆಯಿಂದ ಹಾಡಿದ್ದಾರೆ. ಇವರ ಹುಟ್ಟು ಹೆಸರು ಮಹಮ್ಮದ್ ಶರೀಫ್. ಪ್ರಾಥಮಿಕ ವಿದ್ಯಾಭ್ಯಾಸ ಆ ಕಾಲದ ಕೂಲಿಮಠದಲ್ಲಿ ನಡೆಯಿತು. ಶರೀಫರು ಬಾಲ್ಯದಲ್ಲೂ ತುಂಬಾ ಚುರುಕಾದ ಹುಡುಗ, ಆಟ-ಪಾಠಗಳೆರಡರಲ್ಲೂ ಮುಂದು. ಅಲ್ಲಿ ಮುಲ್ಕಿಪರೀಕ್ಷೆ ಪಾಸು ಮಾಡಿದರು. ನಂತರ ಶರೀಫರು ಮೋಡಿಲಿಪಿಯನ್ನು ಚೆನ್ನಾಗಿ ಓದುವ ಅಭ್ಯಾಸವನ್ನು ರೂಢಿಸಿಕೊಂಡರು. ಮನೆತನದಲ್ಲಿ ಉರ್ದುಬಳಕೆ ಮಾಡುತ್ತಿದ್ದುದರಿಂದ ಅದನ್ನು ಚೆನ್ನಾಗಿ ಕಲಿತುಕೊಂಡರು.

ಶರೀಫರು ಮುಲ್ಕಿ ಪರೀಕ್ಷೆ ಮಾಡುವ ವೇಳೆಗೆ ರಾಮಾಯಣ, ಮಹಾಭಾರತಗಳನ್ನು ಓದಿ ಕರಗತ ಮಾಡಿಕೊಂಡಿದ್ದರು. ಚಾಮರಸನ ‘ಪ್ರಭುಲಿಂಗಲೀಲೆ’ ಅವರ ಮೇಲೆ ಬಹಳ ಪ್ರಭಾವವನ್ನು ಉಂಟು ಮಾಡಿತ್ತು. ‘ಪ್ರಭುಲಿಂಗಲೀಲೆ’ಯ ಕೈಪ್ರತಿಯನ್ನು ಮಾಡಿಕೊಂಡು ಅದನ್ನು ಸದಾ ತಮ್ಮ ಬಳಿ ಇಟ್ಟುಕೊಂಡಿರುತ್ತಿದ್ದರು. ಅವರು ದೇವಿಪುರಾಣವನ್ನು ಮನನ ಮಾಡಿದ್ದರು. ಊರಿನ ಜನರೊಡನೆ ಸೇರಿ ಹಗಲುವೇಷ ಹಾಕಿ ಕುಣಿದದ್ದುಂಟು. ಬಯಲಾಟಗಳಲ್ಲಿ ಬಣ್ಣ ಬಳಿದುಕೊಂಡು ಪಾತ್ರವಹಿಸಿದ್ದರಂತೆ. ಸರ್ವಜ್ಞ ಹಾಗೂ ಸರ್ಪಭೂಷಣ ಶಿವಯೋಗಿಗಳ ಕಾವ್ಯವಾಚನ ಮಾಡುವುದರಲ್ಲಿ ಶರೀಫರಿಗೆ ಎಲ್ಲಿಲ್ಲದ ಹಿಗ್ಗು, ಗ್ರಾಮದ ಸುತ್ತಮುತ್ತ ಎಲ್ಲೆ ಶಾಸ್ತ್ರ-ಪುರಾಣ ನಡೆಯಲಿ ಅಲ್ಲಿ ಶರೀಫರು ಹಾಜರಾಗುತ್ತಿದ್ದರು. ಅವರು ಮೊಹರಮ್ ಹಬ್ಬ ನಡೆಯುವಾಗ ರಿವಾಯತ್​ಪದಗಳನ್ನು ರಚಿಸುತ್ತಿದ್ದರು. ಶರೀಫರು ಕನ್ನಡ ಮಾತ್ರವಲ್ಲದೆ ಉರ್ದು, ಮರಾಠಿ ಭಾಷೆಗಳನ್ನು ಬಲ್ಲವರಾಗಿದ್ದರು. ಆ ಮೂರು ಭಾಷೆಗಳಲ್ಲಿ ನೂರಾರು ಪದಗಳನ್ನು ರಚಿಸಿದ್ದಾರೆ. ಶರೀಫರು ಸಮಾಜದಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿದ್ದರು. ಅವರು ಜಾತಿ, ಮತ, ಪಂಥಗಳನ್ನು ಎಂದೂ ಲೆಕ್ಕಿಸುತ್ತಿರಲಿಲ್ಲ. ಅವರು ‘ಬೆಲ್ಲದ ಹೇರಾಗಿ’ ಜನಮನದಲ್ಲಿ ಚಿರಸ್ಥಾಯಿಯಾದರು.

ಶರೀಫರು ಮುಲ್ಕಿ ಪರೀಕ್ಷೆ ಪಾಸುಮಾಡಿದ್ದರಿಂದ ಪ್ರಾಥಮಿಕಶಾಲೆಯ ಶಿಕ್ಷಕರಾದರು. ಆದರೆ, ನಾಲ್ಕು ಗೋಡೆಗಳ ನಡುವೆ ಶಿಕ್ಷಕರಾಗಿ ಉಳಿಯಲು ಅವರ ಮನಸ್ಸು ಯಾಕೊ ಒಪ್ಪಲಿಲ್ಲ. ಅವರು ಲೋಕಶಿಕ್ಷಕರಾಗಲು ದೈವ ಬಯಸಿತ್ತೆಂದು ತೋರುತ್ತದೆ. ಅವರು ಶಾಲಾಶಿಕ್ಷಕವೃತ್ತಿಗೆ ಕೈಮುಗಿದು ತಮ್ಮ ಮನೆಯ ಮುಂದಿದ್ದ ಕಟ್ಟೆಯ ಮೇಲೆ ಅಧ್ಯಾತ್ಮ ವಿಷಯ ಕುರಿತು ಚಿಂತಿಸುವ ಪರಿಪಾಠವನ್ನು ಬೆಳೆಸಿಕೊಂಡರು. ಆದರೆ, ಒಳಗಿನ ಅಧ್ಯಾತ್ಮದಾಹ ಆರಲಿಲ್ಲ. ನಿಜಗುರುವಿಗಾಗಿ ಹುಡುಕತೊಡಗಿದರು. ಅವರಿಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಕಳಸ ಎಂಬ ಗ್ರಾಮದಲ್ಲಿದ್ದ ಗೋವಿಂದಭಟ್ಟರ ಸಂಪರ್ಕ ಹೇಗೊ ಬೆಳೆಯಿತು. ಗೋವಿಂದಭಟ್ಟರು ಸ್ಮಾರ್ತ ಬ್ರಾಹ್ಮಣರು. ಶುದ್ಧ ಅಧ್ಯಾತ್ಮಜೀವಿ. ಅವರು ಒಬ್ಬ ನಿಜಶಿಷ್ಯನ ಹುಡುಕಾಟದಲ್ಲಿ ತೊಡಗಿದ್ದರು. ಶರೀಫರನ್ನು ಕಂಡ ಗುರುಗೋವಿಂದ ಭಟ್ಟರು ತಮ್ಮ ನಿಜಶಿಷ್ಯನನ್ನು ಅವರಲ್ಲಿ ಕಂಡು, ಶಿಷ್ಯನನ್ನಾಗಿ ಮಾಡಿಕೊಂಡು ಗುರೂಪದೇಶ ನೀಡಿದರು. ಇಬ್ಬರೂ ತುಂಬಾ ಅನ್ಯೋನ್ಯರಾದರು. ಆ ಕಾಲದಲ್ಲಿ ಬ್ರಾಹ್ಮಣ-ಮುಸ್ಲಿಮ ಎಂಬ ಭೇದ ಸಮಾಜದಲ್ಲಿತ್ತು. ಬ್ರಾಹ್ಮಣರು ಗೋವಿಂದಭಟ್ಟರಿಗೆ ಸಮಾಜದಿಂದ ಬಹಿಷ್ಕಾರ ಹಾಕುವ ಬೆದರಿಕೆಯನ್ನು ಒಡ್ಡಿದರು. ಶರೀಫ ಗೋವಿಂದಭಟ್ಟರೊಡನೆ ಗುರೂಪದೇಶ ಪಡೆದು ಕೊಂಡದ್ದು ಖತೀಬಾ, ಮುಲ್ಲಾ, ಮೌಲ್ವಿಗಳಿಗೆ ಸರಿಕಾಣಬರಲಿಲ್ಲ. ಆದರೆ, ಇವರಿಬ್ಬರೂ ಇದಕ್ಕೆ ಸೊಪ್ಪು ಹಾಕದೆ; ತಮ್ಮ ಹಾದಿಯನ್ನು ಹಿಡಿದು ನಡೆದೇ ನಡೆದರು. ‘ನನ್ನೊಳಗೆ ನಾ ತಿಳಕೊಂಡೆ ಎನಗೆ ಬೇಕಾದ ಗಂಡನ್ನ ಮಾಡಿಕೊಂಡೆ’ ಎಂದು ಶರೀಫರು ತಮ್ಮೊಂದು ತತ್ತ್ವಪದದಲ್ಲಿ ಹೇಳಿಕೊಂಡು ಕೊನೆಗೆ ‘ಗುರುಗೋವಿಂದನ ಪಾದ ಹಿಡಕೊಂಡೆ’ ಎಂದು ಸ್ಮರಿಸಿದ್ದಾರೆ.

ಗುರುಗೋವಿಂದರು ಉಪನಿಷತ್ತುಗಳ ಸಾರವನ್ನು ಶರೀಫರಿಗೆ ತಿಳಿಸಿಕೊಟ್ಟರು. ‘ಬ್ರಹ್ಮ ಒಂದೇ ಬ್ರಹ್ಮನಾದ ಒಂದೇ’, ‘ಬ್ರಹ್ಮಾನಂದದಿ ಮುಣಗ್ಯಾಡ್ವುದು ನೋಡು’, ‘ಬಾಯಿಲೆ ಬ್ರಹ್ಮವ’ ಇವೇ ಮುಂತಾದ ತತ್ತ್ವಪದಗಳಲ್ಲಿ ಉಪನಿಷತ್ತು ಸಾರುವ ‘ಅಯಮಾತ್ಮಾ ಬ್ರಹ್ಮ’, ‘ಅಹಂ ಬ್ರಹ್ಮಾಸ್ಮಿ’, ಎಂಬ ಸೂತ್ರರೂಪಿ ಮಾತುಗಳ ವಿಸ್ತರಣೆಗಳನ್ನು ನಾವು ಕಾಣಬಹುದು. ಶರೀಫರು ಆತ್ಮಧಾನ್ಯದಲ್ಲಿ ತೊಡಗಿದರು; ಬ್ರಹ್ಮಧ್ಯಾನದಲ್ಲಿ ಲೀನರಾಗತೊಡಗಿದರು. ಶರೀಫರ ತಂದೆ-ತಾಯಿಗಳು ಮಗ ಹೀಗೆ ಅಲೆದಾಡುತ್ತಿರುವುದಕ್ಕೆ ಮದುವೆಯೇ ಸರಿಯಾದ ಮದ್ದೆಂದು ತಿಳಿದು ಕುಂದಗೋಳದ ನಾಯಕ ಮನೆತನಕ್ಕೆ ಸೇರಿದ ಫಾತಿಮಾ ಎಂಬಾಕೆಯೊಡನೆ ನಿಕಾ ನೆರವೇರಿಸಿದರು. ಶರೀಫರ ಮದುವೆಗೆ ಗೋವಿಂದ ಭಟ್ಟರು ಹಸಿರು ನಿಶಾನೆ ತೋರಿಸಿದರು. ಸ್ವತಃ ತಾಯಿ-ತಂದೆಯರನ್ನು ಮಕ್ಕಾ-ಮದೀನ ಸ್ವರೂಪರೆಂದು ತಿಳಿದಿದ್ದರಿಂದ ಮದುವೆ ಯಾವ ಅಡ್ಡಿಆತಂಕಗಳೂ ಇಲ್ಲದೆ ನಡೆಯಿತು. ಶರೀಫರ ಬಾಳಿನಲ್ಲಿ ಫಾತಿಮಾ ‘ಚಂದ್ರಮಾ’ ಆಗಿ ಬಂದಳು. ಶರೀಫರೂ ಕೂಡ ಜಾಣ ಸಂಸಾರಿಗನಾಗಿ ಬಾಳಿದರು; ಹೆಂಡತಿಯನ್ನು ಬಲು ಗೌರವಯುತವಾಗಿ ನಡೆಸಿಕೊಂಡರು. ಅವರೊಂದು ತತ್ತ್ವಪದದಲ್ಲಿ ‘ತಕ್ಕವಳೆನಿಸಿದಿ ನನ್ನ ಹೆಣ್ತೆ’ ಎಂದು ಹೇಳಿಕೊಂಡಿದ್ದಾರೆ. ಅವರ ದಾಂಪತ್ಯದ ಬಾಳಿನಲ್ಲಿ ಹೆಣ್ಣುಕೂಸು ಬೆಳ್ದಿಂಗಳಂತೆ ಜನ್ಮಿಸಿತು. ಅದರ ಹೆಸರು ಲತೀಮಾ. ಶರೀಫರು ಮಡದಿ-ಮಕ್ಕಳ ವ್ಯಾಮೋಹಕ್ಕೊಳಗಾಗದೆ, ಪ್ರಾಪಂಚಿಕ ವಿಷಯಗಳಲ್ಲಿ ಕುಂಬಾರಹುಳುವಿನಂತೆ ವ್ಯವಹರಿಸುತ್ತಿದ್ದರು. ಈ ನಡುವೆ ಹುಟ್ಟಿದ ಹೆಣ್ಣುಮಗು ಕೆಲದಿನಗಳಲ್ಲಿ ತೀರಿಕೊಂಡಿತು. ತವರುಮನೆಗೆ ಹೋಗಿದ್ದ ಫಾತಿಮಾ ಕೂಡ ಅಲ್ಲಿಯೇ ತೀರಿಕೊಂಡಳು. ಮಾವ ಅಂತ್ಯಕ್ರಿಯೆಗೆ ಬರಬೇಕೆಂದಾಗ ‘ಮೋಹದ ಹೆಂಡತಿ ತೀರಿದ ಬಳಿಕ | ಮಾವನ ಮನೆಯ ಹಂಗಿನ್ಯಾಕೋ’ ಎಂದು ಹೇಳಿ ಪ್ರಪಂಚದ ಹಂಗನ್ನು ತೊರೆದು ಸ್ವತಂತ್ರರಾದರು.

ಶರೀಫರು ಮಗಳು, ಮಡದಿ, ತಾಯಿ-ತಂದೆ ಕೊನೆಗೆ ಗುರುಗೋವಿಂದ ಭಟ್ಟರನ್ನು ಕಳೆದುಕೊಂಡ ಮೇಲೆ ಸಹಜವಾಗಿ ಅವರ ಚಿತ್ತ ಕದಡಿತು. ಅವರು ಮನಶ್ಶಾಂತಿಗಾಗಿ ಕ್ಷೇತ್ರದರ್ಶನ ಪಡೆಯಲು ಹೊರಟರು. ಅವರು ಶಿರಹಟ್ಟಿ ಫಕೀರಸ್ವಾಮಿಗಳನ್ನು ಕಂಡು ಮಂಗಳ ಹಾಡಿದರು. ಅಲ್ಲಿಂದ ಮೈಲಾರ ಮಹದೇವನಲ್ಲಿ ಬಂದು ಶರಣಾದರು. ಅನಂತರ ಸವದತ್ತಿಗೆ ಬಂದು ಏಳುಕೊಳ್ಳದ ಎಲ್ಲಮ್ಮನ ದರ್ಶನ ಪಡೆದು; ಚೆನ್ನಬಸವಣ್ಣನ ತಾಣವಾದ ಉಳವಿಗೆ ಬಂದರು. ಅವರ ಹಾಡುಗಳಲ್ಲಿ ನಲವತ್ತಾರಕ್ಕೂ ಹೆಚ್ಚು ಊರುಗಳ ಪ್ರಸ್ತಾಪವುಂಟು.ಶರೀಫರು ಸಂಚಾರಕಾಲದಲ್ಲಿ ಚಿದಂಬರ ದೀಕ್ಷಿತರು, ಬಾಲಲೀಲಾ ಮಹಾಂತ ಶಿವಯೋಗಿ, ಗುಡಗೇರಿಯ ಸಂಗಮೇಶ್ವರರು, ಅಂಕಲಗಿ ಅಡವಿಸ್ವಾಮಿಗಳು, ಗದುಗಿನ ಶಿವಾನಂದರು, ಅವರಾದಿ ಫಲಾಹಾರ ಸ್ವಾಮಿಗಳು, ಇನ್ನೂ ಹಲವು ಸಾಧು-ಸಂತರನ್ನು ಕಂಡರು. ಇವರೆಲ್ಲರು ಒಂದಲ್ಲ ಒಂದು ರೀತಿ ಶರೀಫರ ಮೇಲೆ ಪ್ರಭಾವವನ್ನು ಬೀರಿದವರೇ.

ಶರೀಫರು ನವಲಗುಂದದ ನಾಗಲಿಂಗಯತಿಗಳೊಡನೆ ಬಲು ಮೋಜಿನಿಂದ ವ್ಯವಹರಿಸುತ್ತಿದ್ದರು. ಅವರಿಬ್ಬರಲ್ಲಿ ಆತ್ಮೀಯ ಸಖ್ಯವಿತ್ತು. ಒಮ್ಮೆ ನಾಗಲಿಂಗಾವಧೂತರು ಶರೀಫರನ್ನು ಕಾಣಲು ಶಿಶುನಾಳಕ್ಕೆ ಹೋದರು. ‘ಸರೀಪನಿರುವದೆಲ್ಲಿ?’ ಎಂದಾಗ ಅವರ ಎದುರಿಗೆ ಶರೀಫರೇ ಬಂದರು. ಪಲ್ಲಕ್ಕಿ ಏರಿ ಬರುತ್ತಿರುವ ನಾಗಲಿಂಗಯತಿಗಳನ್ನು ಶರೀಫರು ಛೇಡಿಸಿದರು. ಇಬ್ಬರಿಗೂ ವಾಗ್ವಾದ ಆಯಿತು. ನಂತರ ‘ಬಗಳಮುಖಿಯ ಮಗನ ಕೂಡಾ ರಗಳೆಯಾತಕೆ’ ಎಂದು ನಾಗಲಿಂಗಯತಿಗಳನ್ನು ಕೊಂಡಾಡಿದರು. ಸಿದ್ಧಾರೂಢರು ಶರೀಫರಿಗಿಂತ ಚಿಕ್ಕವರಷ್ಟೆ? ಒಮ್ಮೆ ಹುಬ್ಬಳ್ಳಿಗೆ ಬಂದು ಸಿದ್ಧಾರೂಢರನ್ನು ಕಂಡು, ‘ಆ ರೂಢಾ ಈ ರೂಢಾ ಪ್ರಭು ಆಡೋ ನಿರಂಜನ… ಭಂಗರಹಿತ ಪರತತ್ತ್ವದ ಇಂಗಿತ ತಿಳಿದವನೇ ಆರೂಢಾ’ ಎಂದು ಹೇಳಿ ಆರೂಢದ ದಾರಿ ಮತ್ತು ಏರುವ ಕ್ರಮ ಕಠಿಣವೆಂದು ತಿಳಿಸಿ-ಅಧ್ಯಾತ್ಮತತ್ತ್ವದ ಗಹನತೆಯನ್ನು ಸಿದ್ಧಾರೂಢರಿಗೆ ಮನವರಿಕೆ ಮಾಡಿಕೊಟ್ಟರು.

ಶರೀಫರು ವರಕವಿ. ಆದರೆ, ಲೋಕದ ಬಾಳುವೆ ಬಂಗಾರವೇನೂ ಆಗಿರಲಿಲ್ಲ. ಬಡತನ ಬೆನ್ನನ್ನು ಹತ್ತುತ್ತಲೇ ಇತ್ತು. ಒಂದು ಘಟ್ಟದಲ್ಲಿ ಅವರಿಗೆ ತುತ್ತು ಅನ್ನ ಸಿಗದೆ ಹೋಯಿತು. ಶರೀಫರು ಸಾಲಗಾರರಿಂದ ಮುಕ್ತರಾಗಲು ತಮ್ಮ ಹೊಲ, ಮನೆ ಹಾಗೂ ಶಿಶುವಿನಾಳ ಗ್ರಾಮದಲ್ಲಿದ್ದ 2-20ಎಕರೆ ಹೊಲವನ್ನು 1888ರ ಆಗಸ್ಟ್ ತಿಂಗಳಿನಲ್ಲಿ 200 ರೂಪಾಯಿಗಳಿಗೆ ಮಾರಿ ಎಲ್ಲದರಿಂದ ಋಣಮುಕ್ತರಾದರು. ಶರೀಫರು ಹಲವು ಪ್ರಕಾರಗಳಲ್ಲಿ ಪದ್ಯಗಳನ್ನು ರಚಿಸಿದರು. ಅವರ ಕಾವ್ಯ ವೈವಿಧ್ಯಮಯವಾದುದು. ಅವರು ತತ್ತ್ವಪದಗಳನ್ನು ಹಾಡಿದರು. ದಂಡಕಗಳನ್ನು ಹೇಳಿ ದೇವ-ದೇವಿಯರನ್ನು ನುತಿಸಿದರು. ಕಾಲಜ್ಞಾನವನ್ನು ಹೇಳಿ ಜನರನ್ನು ಎಚ್ಚರಿಸಿದರು. ಲಾವಣಿಗಳನ್ನು ಹಾಡಿ ನೀತಿಬೋಧೆಯನ್ನು ಹೇಳಿದರು. ಹೋಳೀ ಹಾಡುಗಳ ಮೂಲಕ ಚರಿತ್ರೆಯನ್ನು ವಿವರಿಸಿದರು. ಅವರು ರಚಿಸಿದ ದಿವಾಯತ್ ಹೆಜ್ಜೆಮೇಳಕ್ಕೆ ಸೊಬಗನ್ನು ನೀಡಿದುವು. ಮಂಗಳಾರತಿ ಪದಗಳನ್ನು ರಚಿಸಿ-ಜನತೆಗೂ ದೈವಕ್ಕೂ ಮಂಗಳವನ್ನು ಹೇಳಿದರು. ಶರೀಫರು ಜೀವನದ ನಿತ್ಯಘಟನೆಗಳನ್ನೆ ವಸ್ತುವಾಗಿ ಆರಿಸಿಕೊಂಡು ಅಧ್ಯಾತ್ಮ ನಡೆಯ ಮಾರ್ಗಗಳನ್ನು ನಿರೂಪಿಸಿದರು. ಶರೀಫರು ಚಿಕ್ಕಂದಿನಲ್ಲಿ ಆ ಊರಿನ ಹಿರೇಮಠದ ಸಿದ್ಧರಾಮಯ್ಯ ಎಂಬ ವೀರಶೈವ ಪಂಡಿತರಿಂದ ವೀರಶೈವಧರ್ಮದ ಮರ್ಮವನ್ನು ತಿಳಿದರು. ಅವರು ಬಸವಣ್ಣ ಮತ್ತು ಅಲ್ಲಮಪ್ರಭುಗಳ ವಚನಗಳಿಗೆ ಮಾರುಹೋಗಿದ್ದರು. ಅವರೊಂದು ಕಡೆ ‘ಬಸವಣ್ಣನಂಥ ಭಕ್ತನಿಲ್ಲ; ಪ್ರಭುದೇವರಂಥ ಪರಮಾತ್ಮನಿಲ್ಲ’ ಎಂದು ಮನದುಂಬಿ ಹಾಡಿದ್ದಾರೆ. ‘ಮಣ್ಣುಬಿಟ್ಟು ಮಡಕೆಯಿಲ್ಲ; ತನ್ನ ಬಿಟ್ಟು ದೇವರಿಲ್ಲ’ ಎಂದು ಬಲು ಸೂಚ್ಯವಾಗಿ ಅದ್ವೈತದ ಪ್ರಮೇಯವನ್ನು ತಿಳಿಸಿದ್ದಾರೆ. ಭಕ್ತಿಯಿಂದ ಜ್ಞಾನ, ಜ್ಞಾನದಿಂದ ವಿರಕ್ತಿ, ವಿರಕ್ತಿಯಿಂದ ಮುಕ್ತಿ- ಎಂದು ಸಾರಿದ್ದಾರೆ. ಅವರು ತಮ್ಮ ಹಾಡುಗಳಿಗೆ ‘ಶಿಶುನಾಳಧೀಶ’ ಎಂಬ ಅಂಕಿತವನ್ನು ನೀಡಿದ್ದಾರೆ. ಇದು ಶಿಶುವಿನಾಳಗ್ರಾಮದ ಬಯಲುಗುಡಿಯ ಸ್ತಂಭಮೂರ್ತಿ-ಬಸವಣ್ಣ. ಇದು ಊರಿನ ಜಾಗ್ರತ ದೇವತೆ.

ಶರೀಫರ ದೈವಭಕ್ತ, ಸಂತ, ಜ್ಞಾನಿ, ಕವಿ, ಸಮಾಜಸುಧಾರಕ, ವಿಚಾರವಾದಿ ಇವೆಲ್ಲ ಮುಖವೂ ಅವರು ರಚಿಸಿದ ಕೃತಿಗಳಿಂದ ನಮಗೆ ಕಾಣಬರುತ್ತದೆ. ಅವರು ಭಕ್ತಿಸಾಧನೆಯೇ ಜೀವನದ ಏಕಮಾತ್ರ ಉದ್ದೇಶವೆಂದು ತಿಳಿದಿದ್ದರು. ಎಲ್ಲಾ ಪಂಥಗಳು ಹೇಳುವುದು ‘ಬ್ರಹ್ಮತತ್ತ್ವ’ವೆಂದು ಅನುಭವದಿಂದಲೇ ಮನಗಂಡಿದ್ದರು. ಆ ಮೂಲಕ ಪರಮಾರ್ಥಸಾಧನೆಯ ಹಾದಿಯನ್ನು ಎಲ್ಲರಿಗೂ ತೋರಿಸಿದರು. ಲೋಕದಲ್ಲಿ ನಡೆಯುತ್ತಿದ್ದ ಅನೀತಿ, ಮೋಸ, ವಂಚನೆ, ಕಪಟತನ, ಬಾಹ್ಯಾಡಂಬರ, ಅಂಧಶ್ರದ್ಧೆ, ಶೋಷಣೆ, ಇವುಗಳನ್ನು ಕಂಡು ಕಟುವಾಗಿ ವಿರೋಧಿಸಿದರು. ಉಚ್ಚ-ನೀಚ, ಕುಲ-ಗೋತ್ರ ಇತ್ಯಾದಿ ಎಲ್ಲಾ ಬಗೆಯ ಭೇದಗಳನ್ನು ತ್ಯಜಿಸಬೇಕೆಂದು ಸಾರಿದರು. ಸರಳತೆಯೇ ದೈವೀಭಾವಗಳನ್ನು ತಂದುಕೊಡುತ್ತದೆಂದೂ ಬ್ರಹ್ಮಾನಂದಕ್ಕೆ ಇದು ಮೆಟ್ಟಿಲೆಂದೂ ಹೇಳುತ್ತಿದ್ದರು.

ಶರೀಫರು ತಮಗೆ ಸರಿಕಂಡದ್ದನ್ನು ಮುಚ್ಚುಮರೆಯಿಲ್ಲದೆ ಹೇಳುತ್ತಿದ್ದರು. ಆದರೆ, ಅವರದು ಮಾತೃಹೃದಯ. ಕರುಣೆ, ಮೈತ್ರಿ, ಪ್ರೇಮಲ ಸ್ವಭಾವ ಅವರ ಅಂತರಂಗದಲ್ಲಿ ಸದಾ ನೆಲೆಯಾಗಿರುತ್ತಿತ್ತು. ಶರೀಫರು ಲೋಕಹಿತಕ್ಕಾಗಿ ಬದುಕಿದರು. ಅವರ ಅಂತರಂಗ-ಬಹಿರಂಗಗಳೆರಡು ಬ್ರಹ್ಮಧ್ಯಾನದಲ್ಲೇ ಇರುತ್ತಿದ್ದುವು. ಶರೀಫರು ತಮ್ಮ ಅವಸಾನಕಾಲವನ್ನು ತಿಳಿದುಕೊಂಡರು. ಅವರು ತಮ್ಮೆಲ್ಲ ಶಿಷ್ಯರನ್ನು ಕರೆದು ಯಾರೂ ದುಃಖಪಡಕೂಡದೆಂದೂ ಎಲ್ಲರೂ ಆತ್ಮಜ್ಞಾನದಲ್ಲಿ ಅನುಷ್ಠಾನಪರರಾಗಿಬೇಕೆಂದೂ ಹೇಳಿದರು. ಅವರು ‘ಬಿಡತೇನಿ ದೇಹ ಬಿಡತೇನಿ | ಕೊಡತೇನಿ ಭೂಮಿಗೆ | ಇಡತೇನಿ ಮಹಿಮರ ನಡತೆಯ ಹಿಡಿದು | ಅವನಿಯೊಳು ಶಿಶುನಾಳಧೀಶನೇ ಗತಿಯೆಂದು | ಜವನ ಬಾಧೆಗೆದ್ದು ಶಿವಲೋಕದೊಳಗೆ ನಾ ||’ ಎಂದು ಹಾಡುತ್ತ ದೇಹವನ್ನು ತ್ಯಜಿಸಲು ಅನುವಾದರು. ಆಗ ಅವರಿಗೆ ಎಪ್ಪತ್ತುವರ್ಷ. ಶರೀಫರು ಶರಣತತ್ತ್ವವನ್ನು ಒಪ್ಪಿಕೊಂಡಿದ್ದರಷ್ಟೆ. ಆ ಸಂಪ್ರದಾಯದಂತೆ ‘ವಿಭೂತಿವೀಳ್ಯೆ’ ಮಾಡಿಸಿಕೊಂಡು ದೇಹತ್ಯಾಗ ಮಾಡಬೇಕೆಂಬ ಅಪೇಕ್ಷೆ ಅವರಿಗಿತ್ತು. ಈ ವಿಧಾನ ಅನುಸರಿಸುವುದಕ್ಕೆ ಜಂಗಮಪಾದಪೂಜೆ ಹಾಗೂ ಜಂಗಮಪಾದವನ್ನು ಮಸ್ತಕದ ಮೇಲೆ ಇಟ್ಟು ಶಿವಸಾಯುಜ್ಯ ಮಂತ್ರಗಳ ಪಠಣ ಅಗತ್ಯವಾಗಿತ್ತು. ಆದರೆ, ಶರೀಫರ ಮಸ್ತಕದ ಮೇಲೆ ಪಾದವನ್ನು ಇಡಲು ಯಾವ ಜಂಗಮನೂ ಮನಸ್ಸು ಮಾಡಲಿಲ್ಲ. ಕೊನೆಗೆ ಹಿರೇಮಠದ ಕರಿಬಸವಯ್ಯ ಎಂಬುವರು ಶರೀಫರ ಅಂತಿಮ ಬಯಕೆಯನ್ನು ಈಡೇರಿಸಿದರು. ಆಕ್ಷಣವೇ ಅನಿಮಿಷ ದೃಷ್ಟಿಯಿಂದ ಶಿವಯೋಗದಲ್ಲಿ ತಮ್ಮ ನಿಲುವನ್ನು ಇರಿಸಿ; ಓಂಕಾರದ ಪ್ರಭೆಯಲ್ಲಿ ಅವರು ಬಯಲಾದರು.

ಶರೀಫರ ಅಂತ್ಯಕ್ರಿಯೆಯನ್ನು ಹಿಂದೂ ಪದ್ಧತಿಯಂತೆ ನಡೆಸಬೇಕೊ ಮುಸ್ಲಿಂ ಸಂಪ್ರದಾಯದಂತೆಯೋ ಎಂಬ ಚರ್ಚೆ ಶಿಷ್ಯರಲ್ಲಿ ಗೊಂದಲವನ್ನು ಉಂಟುಮಾಡಿತು. ಅಂತಿಮವಾಗಿ ಎರಡೂ ಕಡೆಯ ಶಿಷ್ಯರು ಒಪ್ಪಂದ ಮಾಡಿಕೊಂಡು ಅಪೂರ್ವರೀತಿಯಲ್ಲಿಯೇ ಶರೀಫರ ಸಂಸ್ಕಾರವನ್ನು ನಡೆಸಿದರು. ಒಂದು ಕಡೆ ಮುಸ್ಲಿಮರು ಕುರಾನ್ ಪಠಣ ಮಾಡಿದರೆ; ಮತ್ತೊಂದು ಕಡೆ ಹಿಂದೂಗಳು ಉಪನಿಷತ್ತು ಮಂತ್ರಗಳ ಪಠಣ ಮಾಡಿದರು. ‘ಇವ ನಮ್ಮವ’ ಎಂದು ಎಲ್ಲರೂ ಅಂತಿಮಯಾತ್ರೆಯಲ್ಲಿ ಭಾಗವಹಿಸಿದರು. ಮುಸ್ಲಿಂ ಬಂಧುಗಳು ‘ಶರೀಫಾ ನಾನಾಕಿ ದೋಸ್ತಾರಾ’ ಎಂದರೆ ಹಿಂದೂಗಳು ‘ಶರೀಫ ಶಿವಯೋಗಿ ಮಹಾರಾಜ್ ಕೀ ಜೈ’ ಎಂದರು. ಅವರ ಇಚ್ಛೆಯ ಮೇರೆಗೆ ತಾಯಿ-ತಂದೆಗಳ ಸಮಾಧಿ ಮಗ್ಗುಲಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು. ಶರೀಫರ ಗದ್ದುಗೆ ವಿಶಿಷ್ಟವಾದುದು. ಅದು ಯಾವ ಧರ್ಮದ ಮಾದರಿಯಲ್ಲೂ ಇಲ್ಲ. ಅವರ ಗದ್ದುಗೆಯ ಎಡಭಾಗದಲ್ಲಿ ಮಹಮ್ಮದೀಯರು ಸಕ್ಕರೆಯನ್ನು ಓದಿಸುತ್ತಿದ್ದರೆ; ಬಲ ಭಾಗದಲ್ಲಿ ಹಿಂದೂಗಳು ಕಾಯಿ-ಕರ್ಪರ ಅರ್ಪಿಸುತ್ತಾರೆ. ಶರೀಫರ ಗದ್ದುಗೆಯಲ್ಲಿ ಮತೀಯ ಭಾವನೆಗೆ ಅವಕಾಶವಿಲ್ಲ. ಎಲ್ಲರೂ ಶರೀಫಜ್ಜನ ಮಕ್ಕಳೆಂಬಂತೆ ಏಕೋಭಾವ ನಮಗಿಂದು ಅಲ್ಲಿ ಕಾಣಸಿಗುತ್ತದೆ.

ಮಹಮ್ಮದ್ ಶರೀಫರು ಶಿವಯೋಗಿ ಶರೀಫರಾಗಿ ಹತ್ತೊಂಭತ್ತನೆಯ ಶತಮಾನದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯದ ತಾತ್ತಿ್ವಕ ಭೂಮಿಕೆಯನ್ನು ಪಸರಿಸಿದ ಮಹಾಸಂತ. ವ್ಯಷ್ಟಿಯಿಂದ ಸಮಷ್ಟಿ ಬಾಳುವೆಯ ಮಹಾತತ್ತ್ವವನ್ನು ಸಾರುತ್ತ ‘ಬೋಧ ಒಂದೇ ಬ್ರಹ್ಮಭಾವ ಒಂದೇ’ ಎಂಬ ಸಾರ್ವತ್ರಿಕ ಹಾಗೂ ತಾತ್ತಿ್ವಕ ಮೌಲ್ಯವನ್ನು ಸಾರಿ ಜನಮಾನಸದಲ್ಲಿ ನೆಲೆನಿಂತಿದ್ದಾರೆ.

ಇಂಥ ದಿವ್ಯ ಸಂದೇಶ ನೀಡುತ್ತ 70 ವರ್ಷಗಳ ಕಾಲ ಬದುಕಿ ಹುಟ್ಟಿದ ದಿನದಂದೇ (1889 March 7) ಎಲ್ಲರಿಗೂ ಹೇಳಿ ಕೇಳಿ, ಬಿಡತೇನಿ ದೇಹ ಬಿಡತೇನಿ ಎಂದು ಹಾಡುತ್ತ ವಿದೇಹ ಕೈವಲ್ಯವನ್ನು ಪಡೆದು ಶಿಶುನಾಳಧೀಶನಲ್ಲಿ ಒಂದಾದರು. ಅವರ ದಿವ್ಯ ಸಂದೇಶ ನಮ್ಮೆಲ್ಲರಿಗೆ ದಾರಿದೀಪವಾಗಲಿ. ತುಂಬು ಜೀವನವನ್ನು ನಡೆಸಿದ ಶರೀಫರ ಮರಣದ ತರುವಾಯ ಅವರ ಅಂತ್ಯಕ್ರಿಯೆಯು ಹಿಂದು ಹಾಗು ಮುಸಲ್ಮಾನ ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಶ್ರೀ ಉದ್ದಾನ ಶಿವಯೋಗಿಗಳು

ಶ್ರೀ ಉದ್ದಾನ ಶಿವಯೋಗಿಗಳು ಅಟವೀಶ್ವರ ಸ್ವಾಮಿಗಳ ನಂತರ ಶ್ರೀ ಸಿದ್ದಗಂಘಾ ಮಠದ ಪೀಠಾಧ್ಯಕ್ಷರಾಗಿದ್ದವರು. ಹತ್ತನೇ ವಯಸ್ಸಿನಲ್ಲಿ ಅವರ ಗುರುಗಳಾದ ಶ್ರೀ ಶ್ರೀ ಫಲಾರ್ ಸ್ವಾಮಿಗಳುಓದಲು ಒಂದು ಪುಸ್ತಕವನ್ನು ನೀಡಲಾಗಿ ಅದು ಅವರನ್ನು ಏಕಾಂತಕ್ಕೆ ತೆರಳಲು ಪ್ರೇರಣೆ ನೀಡಿತ್ತು.  ಅವರು ಪ್ರಾರ್ಥನೆಯಲ್ಲಿ ನಿರತರಾಗಿದ್ದರು, ಸಂಪೂರ್ಣವಾಗಿ ಶಿವನ ಪೂಜೆ ಮತ್ತು ಸಿದ್ಧನಬೆಟ್ಟ ಗುಹೆಗಳಲ್ಲಿ ಧ್ಯಾನದಲ್ಲಿ ತೊಡಗಿದ್ದರು.

 1860 ರಲ್ಲಿ ನೆಲಮಂಗಲ ತಾಲ್ಲೂಕಿನ ಲಕ್ಕೂರು ಗ್ರಾಮದ "ಗಟ್ಟೆಪ್ಪ ಮರುಳಸಿದ್ದಯ್ಯ " ದಂಪತಿಗೆ ಜನಿಸಿದರು. ಅವರು ಐದು ಹಿರಿಯ ಸಹೋದರರು ಮತ್ತು ನಾಲ್ಕು ಸಹೋದರಿಯರೊಂದಿಗೆ ಕುಟುಂಬದ ಕಿರಿಯ ಸದಸ್ಯರಾಗಿದ್ದರು. ಇವರ ಸಾಕು ಹೆಸರು  ರುದ್ರಪ್ಪ. ಅವರ ತಂದೆ ಗ್ರಾಮದ ಮುಖ್ಯಸ್ಥರಾಗಿದ್ದರು ಮತ್ತು ವೃತ್ತಿಯಲ್ಲಿ ಕೃಷಿಕರಾಗಿದ್ದರು. ಅವರ ಬಾಲ್ಯವು ಕುರಿ ಹಿಡಿನ ಆರೈಕೆ ಹಾಗೂ  ಸಿದ್ದನಬೆಟ್ಟ ಮತ್ತು ಹತ್ತಿರದ ಶಿವಗಂಗದಲ್ಲಿ ತನ್ನ ಸ್ನೇಹಿತರೊಂದಿಗೆ ಅಲೆದಾಡುವುದರಲ್ಲಿ ಕಳೆಯಿತು. ಅವರನ್ನು ಶಾಲಾ ಶಿಕ್ಷಣಕ್ಕಾಗಿ ಕೂಲಿ ಮಠಕ್ಕೆ ಕಳುಹಿಸಲಾಗಿದ್ದರೂ, ಅವರು ಆಗಾಗ್ಗೆ ಸಿದ್ದನಬೆಟ್ಟದಲ್ಲಿ ತಮ್ಮ ಸಮಯವನ್ನು ಕಳೆಯುತ್ತಿದ್ದರು.ಸುತ್ತಮುತ್ತಲಿನ ಪ್ರದೇಶಗಳನ್ನು ಕುತೂಹಲದಿಂದ ನೋಡುತ್ತಿದ್ದರು ಮತ್ತು ಅದು ಅವರ ಮೇಲೆ ಶಾಶ್ವತ ಪರಿಣಾಮ ಬೀರಿತು. ಅವರು ಶಾಲಾ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಆದರೆ ಓದಲು ಮತ್ತು ಬರೆಯಲು ಸಮರ್ಥರಾಗಿದ್ದರು.ಹುಟ್ಟಿನಿಂದಲೇ ಶ್ರೇಷ್ಠತೆಯನ್ನು ಗಳಿಸಿದರು ಮತ್ತು ಒಂದು ದಿನ ಶ್ರೀ ಸಿದ್ದಗಂಗಾ ಮಠದ ಮುಖ್ಯಸ್ಥರಾಗಲು ಉದ್ದೇಶಿಸಿಯೇ ಹುಟ್ಟಿದ್ದರು!

ಒಂದು ರಾತ್ರಿ ಅವರುಮನೆಯ ಎಲ್ಲ ಸಂಬಂಧಗಳನ್ನು ತೊರೆದು ಮನೆಯಿಂದ ಹೊರಟುಹೋದರು. ಅವರ ಮನಸ್ಸು ಅವನನ್ನು ಸಿದ್ದಗಂಹೆಯ ಲಡೆ ಸೆಳೆಯಿತು. ಮುಂಜಾನೆ ಅವರು ಸಿದ್ದಲಿಂಗೇಶ್ವರ ದೇವಸ್ಥಾನದ ಹೊಸ್ತಿಲಲ್ಲಿ ಶ್ರೀ ಶ್ರೀ ಅಟವೀಸ್ವಾಮೀಜಿಯನ್ನು ಭೇಟಿಯಾದರು. ಅವರು ತನ್ನ ತಲೆಯ ಮೇಲೆ ಕರವನ್ನಿಟ್ಟು ಶ್ರೀ ಶ್ರೀ ಸ್ವಾಮೀಜಿ ಅವರ ಹಿಂದಿನ ಬದುಕಿನ ಕುರಿತು ಕೇಳಿದ್ದರು.. ರುದ್ರಪ್ಪ ಅವರು ಮಠದಲ್ಲಿ ವಾಸಿಸಲು ಬಂದಿರುವೆ ಎಂದಾಗ  ಮಠದಲ್ಲಿ ವಾಸಿಸುವುದು ತುಂಬಾ ಶ್ರಮದಾಯಕವಾಗಿದೆ, ಬೆಟ್ಟಗಳಿಂದ ಉರುವಲು ತಂದು , ಹೊಲಗಳಲ್ಲಿ ಕೆಲಸ ಮಾಡುವುದು ಮುಂತಾದವುಗಳನ್ನು ಮಾಡಬೇಕು ಎಂದಾಗ ಅವರು ಅದಕ್ಕೆಲ್ಲಾ ಒಪ್ಪಿದ್ದರು. ಹೀಗೆ ಅವರ ಮಠದ ವಾಸವು ಪ್ರಾರಂಭವಾಗಿತ್ತು.

ರುದ್ರಪ್ಪನು ಮಠದ ಸಂಪೂರ್ಣ ಜವಾಬ್ದಾರಿಯನ್ನು ಮತ್ತು ದಾಸೋಹ ಜವಾಬ್ದಾರಿಯನ್ನೂ ಹೊತ್ತರು.ತನ್ನ ಪೂರ್ಣಗೊಳ್ಳದ ಕೆಲಸವನ್ನು ಮುಂದುವರಿಸಲು ರುದ್ರಪ್ಪ ಸರಿಯಾದ ವ್ಯಕ್ತಿ ಎಂದು ಶ್ರೀ ಅಟವೀ ಸ್ವಾಮಿಗಳು  ಮನಸ್ಸಿನಲ್ಲಿ ನಿರ್ಧರಿಸಿದರು. ಅವರು ಕ್ರಿ.ಶ.1300 ರಲ್ಲಿ ಜೀವಿಸಿದ್ದ ಋಷಿಯೊಬ್ಬರ ಹೆಸರಾದ "ಉದ್ದಾನ ಶಿವಯೋಗಿ" ಎಂದು ರುದ್ರಪ್ಪನಿಗೆ ಹೆಸರಿಟ್ಟರು.ಆದ್ದರಿಂದ ರುದ್ರಪ್ಪ ಅವರು ಶ್ರೀ ಶ್ರೀ ಉದ್ದಾನ ಶಿವಯೋಗಿ ಆದರು ಮತ್ತು ಶ್ರೀ ಸಿದ್ದಗಂಗಾ  ಮಠದ ಪ್ರಕಾಶಮಾನವಾದ ನಕ್ಷತ್ರವಾಗಿ ಮಿಂಚಲು ಅವರ ಅದ್ಭುತ ಮತ್ತು ಪರಿಣಾಮಕಾರಿ ಜೀವನ ಪ್ರಾರಂಭಿಸಿದರು.  ಶ್ರೀ ಶ್ರೀ ಉದ್ದಾನ ಶಿವಯೋಗಿಪ್ರವಾಸವು ಹೀಗೆ ಪ್ರಾರಂಭವಾಯಿತು ಮತ್ತು ಅವರ ಕಾಲದ ಅನೇಕ ಸಾಧನೆಗಳನ್ನು ಅವರನ್ನು ಬಹಳ ಹತ್ತಿರದಿಂದ ತಿಳಿದಿರುವ ಜನರು ದಾಖಲಿಸಿದ್ದಾರೆ. ಕೆಲಸದಲ್ಲಿ ಮತ್ತು ಬುದ್ಧಿವಂತಿಕೆಯಿಂದ ಮತ್ತು ಶ್ರೀ ಸಿದ್ದಗಂಗಾ  ಕ್ಷೇತ್ರವನ್ನು ಉದ್ದರಿಸಿದರು. ಬಡವರಿಗೆ  ಶಿಕ್ಷಣವನ್ನು ಮುಂದುವರೆಸಲು, ಮತ್ತು ಜಾತ್ಯತೀತತೆಯನ್ನು ಧ್ಯೇಯವಾಗಿಟ್ಟುಕೊಂಡು ಶ್ರಮಿಸಿದರು.

ಇವರೇ ಮುಂದೆ ಶತಾಯುಷಿ, ನಡೆದಾಡುವ ದೇವರೆಂದು ಖ್ಯಾತವಾದ ಡಾ. ಶಿವಕುಮಾರ ಸ್ವಾಮಿಗಳಿಗೆ ಗುರುಗಳಾಗಿದ್ದರು. , ೧೯೩೦ ಮಾರ್ಚ್ ೩ರಂದು ವೀರಾಪುರದ ಶಿವಣ್ಣನಿಗೆ ದೀಕ್ಷೆ ನಿಡಿ "ಶ್ರೀ ಶಿವಕುಮಾರ ಸ್ವಾಮಿ"ಗಳನ್ನಾಗಿ ಂಆಡಿದ್ದರು. 

ಇದಾಗಿ ಕೆಲ ದಿನಗಳ ನಂತರ ೧೧ ಜನವರಿ ೧೯೪೧ರಂದು ಉದ್ದಾನ ಶಿವಯೋಗಿಗಳ ಜೀವಜ್ಯೋತಿಯು ಪರಂಜ್ಯೋತಿಯಲ್ಲಿ ಲೀನವಾಗಿತ್ತು.

ಡಾ. ಶ್ರೀಶ್ರೀ ಶಿವಕುಮಾರ ಸ್ವಾಮಿ

ಶಿವಕುಮಾರ ಸ್ವಾಮಿ (ಜನನ- ಶಿವಣ್ಣ, ೧ ಏಪ್ರಿಲ್ ೧೯೦೭ - ೨೧ ಜನವರಿ ೨೦೧೯)  ಒಬ್ಬ ಭಾರತೀಯ ಆಧ್ಯಾತ್ಮಿಕ ನಾಯಕ, ಮಾನವೀಯ ಮತ್ತು ಶಿಕ್ಷಣತಜ್ಞ.ಅವರು ಹಿಂದೂ ಲಿಂಗಾಯತ ಧಾರ್ಮಿಕ ವ್ಯಕ್ತಿಯಾಗಿದ್ದರು ಮತ್ತು ಕರ್ನಾಟಕದ ಸಿದ್ದಗಂಗಾ ಮಠದ  ಮಠಾಧಿಪತಿಗಳಾಗಿದ್ದರು. ಅವರು ಶ್ರೀ ಸಿದ್ದಗಂಗ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರುಹಿಂದೂಧರ್ಮದ ಲಿಂಗಾಯತ ಸಂಪ್ರದಾಯದ ಅತ್ಯಂತ ಗೌರವಾನ್ವಿತ ಅನುಯಾಯಿಯಾಗಿದ್ದರು.[೪] ಅವರನ್ನು ರಾಜ್ಯದಲ್ಲಿ ನಡೆದಾಡುವ  ದೇವರು ಎಂದು ಕೂಡ ಉಲ್ಲೇಖಿಸಲಾಗಿದೆ.ಭಾರತದಲ್ಲಿ ವಾಸಿಸುತ್ತಿದ್ದ ಅತಿ ಪುರಾತನ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅವರಿಗೆ ಭಾರತ ಸರ್ಕಾರವು ೨೦೧೫ ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿದೆ.

ಇವರು ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿ. ೧೨ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ "ಕಾಯಕವೇ ಕೈಲಾಸ" ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀಗಳು. ಮಾರ್ಚ್ ೩, ೧೯೩೦ರಲ್ಲಿ ಇವರು ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಮಠ, ಯಾವುದೋ ಒಂದು ಧರ್ಮಕ್ಕೆ ಸ್ಥೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದರು.[೬]

ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿರುವ ಸ್ವಾಮೀಜಿಯವರು ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಪಣತೊಟ್ಟಿದ್ದರು. ಇವರು ಸಮಾಜದ ಎಷ್ಟೋ ಗಣ್ಯರ ಬಾಲ್ಯ ಜೀವನಗಳ ಪರಿವರ್ತನೆಗೆ ಕಾರಣವಾಗಿದ್ದಾರೆ. ತಮ್ಮ ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯವನಿತ್ತು ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದರು..

ಪೂರ್ವಾಶ್ರಮ

ಮಾಗಡಿ ತಾಲೂಕಿನ ವೀರಾಪುರದ ಶ್ರೀಯುತ ಹೊನ್ನೇಗೌಡ ಮತ್ತು ತಾಯಿ ಗಂಗಮ್ಮನವರಿಗೆ ಎಪ್ರಿಲ್ ೧, ೧೯೦೮ರಲ್ಲಿ ೧೩ನೇ ಮಗನಾಗಿ ಶಿವಣ್ಣ ಜನಿಸಿದರು.ಎಲ್ಲರಿಗಿಂತಲೂ ಕಿರಿಯರಾದ ಶಿವಣ್ಣನವರೆಂದರೆ ತಂದೆ ತಾಯಿಗಳಿಗೆ ಅಪಾರ ಪ್ರೀತಿ. ವೀರಾಪುರದಲ್ಲಿಯೇ ಇದ್ದ ಕೂಲಿಮಠ ದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶಿವಣ್ಣನ ಶೈಕ್ಷಣಿಕ ಜೀವನ ಆರಂಭವಾಯಿತು. ಅನಂತರ ಪ್ರಾಥಮಿಕ ಶಾಲೆಗಾಗಿ ಪಕ್ಕದ ಊರಾದ ಪಾಲನಹಳ್ಳಿಯ ಶಾಲೆಗೆ ದಾಖಲಾದರು. ತಮ್ಮ ಪ್ರಾಥಮಿಕ ಶಾಲಾ ದಿನಗಳಲ್ಲಿ ತಾಯಿಯನ್ನು ಕಳೆದುಕೊಂಡ ಶಿವಣ್ಣ ಅನಂತರ ಅಕ್ಕನ ಆಸರೆಯಲ್ಲಿ ಬೆಳೆದರು . ತುಮಕೂರು ಬಳಿ ಇರುವ ನಾಗವಲ್ಲಿ ಯಲ್ಲಿ ಮಾಧ್ಯಮಿಕ ಶಿಕ್ಷಣದ ನಂತರ ೧೯೨೨ರಿಂದ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ೧೯೨೬ರಲ್ಲಿ ಮೆಟ್ರಿಕ್ಯುಲೇಷನ್ ಗಳಿಸಿದರು. ೧೯೨೭ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳವರೊಡನಾಟ ಆಯಿತು. ಇದೇ ವರ್ಷ ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಬೆಂಗಳೂರಿನಲ್ಲಿ ರಾವ್ ಬಹದ್ದೂರ್ ಧರ್ಮಪ್ರವರ್ತ ಶ್ರೀ ಗುಬ್ಬಿ ತೋಟದಪ್ಪ ಧರ್ಮ ಛತ್ರದಲ್ಲಿ ಉಳಿದುಕೊಂಡು, ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು.ವಿದ್ಯಾಭ್ಯಾಸದೊಂದಿಗೆ ಸಿದ್ದಗಂಗಾ ಮಠದ ಒಡನಾಟದಲ್ಲಿದ್ದರು. ಹಿರಿಯ ಗುರುಗಳಾದ ಶ್ರೀ ಉದ್ಧಾನ ಸ್ವಾಮಿಜಿಗಳ ಹಾಗು ಆಗ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರ ಸಂಗ ಶಿವಣ್ಣನವರಿಗೆ ಒಂದು ಹಿತಾನುಭೂತಿ ನೀಡುತ್ತಿತು. ಶಿವಣ್ಣನವರು ಎಲ್ಲ ಸಮಯಗಳಲ್ಲೂ ಮಠದ ಹಿತವನ್ನು ಬಯಸುತ್ತ ಮಠಕ್ಕೆ ಭೇಟಿಕೊಡುತಿದ್ದರು.ತುಮಕೂರು ಜಿಲ್ಲೆಯಲ್ಲಿ ಭೀಕರ ಪ್ಲೇಗ್ ರೋಗ ಇದ್ದರು ಶಿವಣ್ಣನವರ ಹಾಗು ಮಠದ ಒಡನಾಟ ಎಂದಿನತೆಯೇ ಇತ್ತು.

ಮಠಾಧಿಪತಿಯಾಗಿ

ಶ್ರೀ ರಕ್ಷೆಯಿಂದ ಉತ್ತಮವಾಗಿ ನಡೆಯುತ್ತಿದ್ದ ಸಿದ್ದಗಂಗಾ ಮಠಕ್ಕೆ ೧೯೩೦ರಲ್ಲಿ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾದರು. ಆಗ ಅವರ ಕ್ರಿಯಾ ಸಮಾಧಿ ಕಾರ್ಯಕ್ಕೆ ಆಗಮಿಸಿದ್ದ ಶಿವಣ್ಣನರನ್ನು ಉದ್ಧಾನ ಸ್ವಾಮಿಜಿಗಳು ಎಲ್ಲರ ಸಮ್ಮುಖದಲ್ಲಿ ಮಠದ ಉತ್ತರಾಧಿಕಾರಿ ಎಂದು ಘೋಷಿಸಿದರು.ನಂತರ ಕಾವಿ, ರುದ್ರಾಕ್ಷಿಗಳನ್ನು ಧರಿಸಿದ ಸನ್ಯಾಸಿಯಾಗಿ ,ಸನ್ಯಾಸತ್ವ ಸ್ವೀಕಾರದ ನಂತರವೂ ವಿದ್ಯಾಭ್ಯಾಸ ಮುಂದುವರಿಸಿದ ಶಿವಣ್ಣನವರು ಬೆಂಗಳೂರಿಗೆ ಬಂದು ಸನ್ಯಾಸತ್ವದ ರೀತಿ ರಿವಾಜು ಪಾಲಿಸುತ್ತಾ ವಿದ್ಯಾಭ್ಯಾಸ ಮುಗಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಸಿದ್ದಗಂಗಾ ಮಠಕ್ಕೆ ಹಿಂದಿರುಗಿದರು, ನಂತರ ತಮ್ಮ ಪೂರ್ಣ ಸಮಯವನ್ನು ಮಠದ ಏಳಿಗೆಗಾಗಿ ಮೀಸಲಿಡುತ್ತಾರೆ. ನಂತರ ಶ್ರೀ ಉದ್ಧಾನ ಶಿವಯೋಗಿಗಳು ಶಿವೈಕ್ಯರಾದಾಗ ಮಠದ ಸಕಲ ಆಡಳಿತ , ಮಠದ ವಿದ್ಯಾರ್ಥಿಗಳ, ಶಿಕ್ಷಣ ಸಂಸ್ಥೆಗಳ ಯೋಗ ಕ್ಷೇಮದ ಜವಾಬ್ದಾರಿಯೂ ಶ್ರೀಗಳವರಿಗೆ ಹಸ್ತಾಂತರವಾಗುತ್ತದೆ.

ಶ್ರೀಗಳು ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ಸಂಧರ್ಭದಲ್ಲಿ ಮಠದ ಆದಾಯ ತುಂಬಾ ಕಡಿಮೆ ಇತ್ತು. ಮಠಕ್ಕೆಂದು ಮೀಸಲಾಗಿದ್ದ ಜಮೀನಿನಲ್ಲಿ ಬೆಳೆದು ವಿಧ್ಯಾರ್ಥಿಗಳ ಸನಿವಾಸ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟದಾಯಕವಾಗಿತ್ತು. ಮಠದ ಭೂಮಿಯೆಲ್ಲ ಮಳೆಯಾಧಾರಿತವಾದದ್ದು ಮತ್ತೂ ತೊಡಕಾಗಿ ಅತಿವೃಷ್ಟಿ, ಅನಾವೃಷ್ಟಿಗಳಂತಹ ಸಮಯದಲ್ಲಿ ಬಹಳ ಕಷ್ಟವಾಗುತ್ತಿತ್ತು. ಇದನ್ನೆಲ್ಲಾ ಧೈರ್ಯವಾಗಿ ಮೆಟ್ಟಿ ನಿಂತ ಶ್ರೀಗಳು ಭಕ್ತರ ಮನೆಗೆ ಭಿನ್ನಹವೇ ಮೊದಲಾದ ಆದ್ಯತೆಗಳ ಮೇರೆಗೆ ನಡೆದುಕೊಂಡೇ ಹೋಗಿ ಅಲ್ಲಿಂದ ಧವಸ ಧಾನ್ಯಗಳನ್ನು ತಂದಿದ್ದೂ ಉಂಟು. ಬರಿಯ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಷ್ಟೇ ಅಲ್ಲದೆ ದಿನ ನಿತ್ಯ ಮಠದಲ್ಲಿ ನಡೆಯಬೇಕಾದ ಧಾರ್ಮಿಕ ಕಾರ್ಯಗಳು, ಮಠಕ್ಕೆ ಭಕ್ತರ ಹಾಗು ಗಣ್ಯರ ಭೇಟಿ, ಮಠದ ಅರ್ಥಿಕ ನಿರ್ವಹಣೆಗಳೂ ಸೇರಿ ಶ್ರೀಗಳಿಗೆ ಬಿಡುವಿಲ್ಲದ ಕಾರ್ಯ ಪಟ್ಟಿಯೇ ಇರುತ್ತಿತ್ತು. ಆರಂಭದ ದಿನಗಳಲ್ಲಿ 'ಶ್ರೀಗಳು ಇವನ್ನೆಲ್ಲ ನಿಭಾಯಿಸಲು ಸಾಧ್ಯವಿಲ್ಲ' ಎಂಬ ಆಡು ನುಡಿಗಳೂ ಕೇಳಿಬಂದಿದ್ದವು. ಇದ್ಯಾವುದಕ್ಕೂ ಧೃತಿಗೆಡದ ಶ್ರೀಗಳು ಪೂಜ್ಯ ಲಿ. ಶ್ರೀ ಅಟವೀ ಸ್ವಾಮಿಗಳ ಹಾಗು ಲಿ. ಶ್ರೀ ಉದ್ಧಾನ ಸ್ವಾಮಿಗಳ ಆಶಯದಂತೆ ಯಾವುದೇ ತೊಡಕುಗಳಾಗದಂತೆ ಮಠದ ಶಿಕ್ಷಣ ಸಂಸ್ಥೆಗಳನ್ನು, ವಿದ್ಯಾರ್ಥಿ ನಿಲಯಗಳನ್ನು, ಪ್ರಸಾದ ನಿಲಯಗಳನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ.

ಅವರು ಶಿಕ್ಷಣ ಮತ್ತು ತರಬೇತಿಗಾಗಿ ಒಟ್ಟು 132 ಸಂಸ್ಥೆಗಳನ್ನು ಸ್ಥಾಪಿಸಿದರು,[೮]ನರ್ಸರಿಯಿಂದ ಎಂಜಿನಿಯರಿಂಗ್, ವಿಜ್ಞಾನ, ಕಲೆ ಮತ್ತು ನಿರ್ವಹಣೆ ಜೊತೆಗೆ ವೃತ್ತಿಪರ ತರಬೇತಿಯೂ ಸಹ ಇದೆ.ಅವರು ಸಂಸ್ಕೃತದ ಸಾಂಪ್ರದಾಯಿಕ ಕಲಿಕೆಯಲ್ಲಿ ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನದಲ್ಲಿ ಶಿಕ್ಷಣ ನೀಡುವ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದರು.ಅವರ ಪರೋಪಕಾರಿ ಕೆಲಸಕ್ಕಾಗಿ ಅವರು ಎಲ್ಲಾ ಸಮುದಾಯಗಳಿಂದ ವ್ಯಾಪಕವಾಗಿ ಗೌರವಿಸಲ್ಪಟ್ಟರು. ಸ್ವಾಮಿ ಅವರ ಮಠದಲ್ಲಿ ೧೦೦೦೦ ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದೆ. ೫ ವಯಸ್ಸಿನಿಂದ ೧೬ ವರ್ಷ ವಯಸ್ಸಿನ ಯಾವುದೇ ಹಂತದಲ್ಲಿ ಮತ್ತು ಉಚಿತ ಆಹಾರ, ಶಿಕ್ಷಣ ಮತ್ತು ಆಶ್ರಯ (ತ್ರಿವಿಧ ದಾಸೋಹ)[೧೦] ಅನ್ನು ಒದಗಿಸುವ ಎಲ್ಲ ಧರ್ಮ, ಜಾತಿ ನೋಡದೆ ಎಲ್ಲಾ ಮಕ್ಕಳಿಗೆ ತೆರೆದಿರುತ್ತದೆ. ಮಠದ ಯಾತ್ರಾರ್ಥಿಗಳು ಮತ್ತು ಸಂದರ್ಶಕರು ಕೂಡಾ ಉಚಿತ ಊಟದ ವ್ಯವಸ್ಥೆ ಇದೆ. ಮಠಾಧೀಶ ಮಾರ್ಗದರ್ಶನದಲ್ಲಿ, ವಾರ್ಷಿಕ ಕೃಷಿ ಜಾತ್ರೆಯನ್ನು ಸ್ಥಳೀಯ ಜನಸಂಖ್ಯೆಯ ಅನುಕೂಲಕ್ಕಾಗಿ ನಡೆಸಲಾಗುತ್ತದೆ.ಕರ್ನಾಟಕ ಸರಕಾರವು 2007 ರಿಂದ ಶಿವಕುಮಾರ ಸ್ವಾಮೀಜಿ ಪ್ರಶಸ್ತಿಯನ್ನು ಸ್ವಾಮೀಜಿಯ ಶತಮಾನೋತ್ಸವದ ವಾರ್ಷಿಕೋತ್ಸವವನ್ನು ಘೋಷಿಸಿತು. ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತುಮಕೂರಿಗೆ ಭೇಟಿ ನೀಡಿದರು ಮತ್ತು ಶಿಕ್ಷಣ ಮತ್ತು ಮಾನವೀಯ ಕೆಲಸದಲ್ಲಿ ಸ್ವಾಮಿಯ ಉಪಕ್ರಮಗಳನ್ನು ಶ್ಲಾಘಿಸಿದರು.

ನಿಧನ

ವಯೋಸಂಬಂಧಿ ಅನಾರೋಗ್ಯದಿಂದ ಬಳಲಿದ ಸ್ವಾಮೀಜಿಯವರನ್ನು ಹೃದಯಕ್ಕೆ ಸ್ಟಂಟ್ ಅಳವಡಿಸುವುದಕ್ಕೋಸ್ಕರ ೨೦೧೮ರ ಡಿಸೆಂಬರ್ ನಲ್ಲಿ ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಸ್ವಾಮೀಜಿ ಮಠಕ್ಕೆ ಹಿಂದಿರುಗಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಶ್ವಾಸಕೋಶ ಸೋಂಕಿನಿಂದ ಬಳಲಿದ ಶ್ರೀಗಳನ್ನು ಮತ್ತೆ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅರೋಗ್ಯ ಸುಧಾರಿಸಿದ ಕಾರಣ ಸ್ವಾಮೀಜಿಯವರನ್ನು ಮಠಕ್ಕೆ ಹಿಂದಿರುಗಿ ಕರೆತರಲಾಗಿತ್ತು. ೨೦೧೯ ಜನವರಿ ೨೧ ರಂದು ಬೆಳಗ್ಗೆ ರಕ್ತದೊತ್ತಡ ಏರುಪೇರಾಗಿ ಶ್ರೀಗಳು ಸಿದ್ಧಗಂಗಾದ ಹಳೆಯ ಮಠದಲ್ಲಿ ಕೊನೆಯುಸಿರೆಳೆದರು ಅವರಿಗೆ ೧೧೧ ವರ್ಷ ವಯಸ್ಸಾಗಿತ್ತು.

ಸಚ್ಚಿದಾನಂದ ಶಿವಭಿನವ ನರಸಿಂಹ ಭಾರತಿ ಮಹಸ್ವಾಮಿ


ಸಚ್ಚಿದಾನಂದ ಶಿವಭಿನವ ನರಸಿಂಹ ಭಾರತಿ ಮಹಸ್ವಾಮಿಜಿ ಆದಿ ಶಂಕರರು ಸ್ಥಾಪಿಸಿದ ದಕ್ಷಿಣನಾಮ ಶಾರದ ಪೀಠದಲ್ಲಿ 33 ನೇ ಜಗದ್ಗುರುವಾಗಿದ್ದರು.ಶಾಸ್ತ್ರಗಳ ಅಸಾಧಾರಣ ಪಾಂಡಿತ್ಯದಿಂದ, ಈ ಮಹಾನ್ ವ್ಯಕ್ತಿತ್ವವು ದೊಡ್ಡ ತಪಸ್ವಿ, ಯೋಗಿಯಾಗಿ ಮಿಂಚಿತ್ತು.

ಭಾರತದಲ್ಲಿ ಶಂಕರ ಜಯಂತಿ ಹಬ್ಬದ ಸಂಭ್ರಮವನ್ನು ಪ್ರಾರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.. ಆದಿ ಶಂಕರರ ಸಂಗ್ರಹಿಸಿದ ಕೃತಿಗಳನ್ನು ಶಂಕರ ಗ್ರಂಥಾವಳಿ ಎಂಬ  ಶೀರ್ಷಿಕೆಯಲ್ಲಿ ಪ್ರಕಟಿಸಿದ್ದು ಅವರೇ. ಶಾರದಾಪೀಠದ ಮಾಣಿಕ್ಯರೆಂದು ಪ್ರಥಿತರಾದ ಶ್ರೀಚಂದ್ರಶೇಖರ ಭಾರತೀಸ್ವಾಮಿಗಳನ್ನು ಪೀಠದ ಉತ್ತರಾಧಿಕಾರಿ ಮಾಡಿದ್ದಲ್ಲದೆ; ಕಾಲಟಿಯಲ್ಲಿ ಶಂಕರಭಗವತ್ಪಾದರ ಪುಣ್ಯಕ್ಷೇತ್ರವನ್ನು ಕಂಡುಹಿಡಿದದ್ದೂ ಇವರೇ ಆಗಿದ್ದಾರೆ.

ಬೆಂಗಳೂರು ಗ್ರಾಮಾಂತರಕ್ಕೆ ಸೇರಿದ ಕುಣಿಗಲ್ ನಲ್ಲಿ ನೆಲೆಸಿದ ಮುಲಕನಾಡು ಬ್ರಾಹ್ಮಣ ಕುಟುಂಬವೂ ಒಂದು. ಆ ಕುಟುಂಬದ ಘನಪಾಠಿಗಳು, ವೇದಾಧ್ಯಯನ ಸಂಪನ್ನರು ನರಸಿಂಹಶಾಸ್ತ್ರೀ. ಇವರ ತಮ್ಮನೇ ಪ್ರಖ್ಯಾತ ವಿದ್ವಾಂಸರೂ ಸಾಕ್ಷಾತ್ ದಕ್ಷಿಣಾಮೂರ್ತಿ ಸ್ವರೂಪರೆಂದು ಹೆಸರಾದ ಶ್ರೀರಾಮ ಶಾಸ್ತ್ರಿಗಳೇಶಿವಾಭಿನವ ಮಹಾಸ್ವಾಮಿಯ ಪೂರ್ವಾಶ್ರಮದ  ತಂದೆ. ಶ್ರೀರಾಮ ಶಾಸ್ತ್ರಿಗಳ ಧರ್ಮಪತ್ನಿ ಲಕ್ಷ್ಮಮ್ಮ ಇವರ ತಾಯಿ. ಪೈಂಗಳ ಸಂವತ್ಸರ ಫಾಲ್ಗುಣಮಾಸದ ಬಹುಳ ಏಕಾದಶೀ ದಿವಸ (24.02.1858) ಶ್ರೀಗಳ ಜನನವಾಯಿತು.ಜನ್ಮನಾಮ ಶಿವಸ್ವಾಮಿ. ಶ್ರೀರಾಮ ಶಾಸ್ತ್ರಿಗಳು ಮಗುವಿನ ಜಾತಕವನ್ನು ಮಹಾರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಒಪ್ಪಿಸಿದರು. ಜ್ಯೋತಿಷ್ಯಶಾಸ್ತ್ರದ ಜಾತಕಫಲವನ್ನು ತಿಳಿದಿದ್ದ ಮಹಾರಾಜರು ಜಾತಕವನ್ನು ನೋಡಿ ‘ಶಾಸ್ತ್ರೀಗಳೇ, ಈ ಶಿಶುವು ಸಾಧಾರಣನಲ್ಲ, ಮುಂದೆ ನಮಗೂ ನಿಮಗೂ ಸ್ವಾಮಿಯಾಗುತ್ತಾನೆ, ಗುರುವಾಗುತ್ತಾನೆ ಎಂದು ಹೇಳಿದ್ದರು. ಬಾಲ್ಯದಲ್ಲೇ ಬೇರೆಯವರಿಗಿಂತ ವಿಭಿನ್ನವಾಗಿದ್ದ ಶಿವಸ್ವಾಮಿ ಯಾರೊಡನೆ ಸೇರುತ್ತಿರಲಿಲ್ಲತಂದೆಯ ಜತೆ ಸ್ತೋತ್ರ ಕಲಿಯುತ್ತಾ ಕಾಲ ಕಳೆಯುತ್ತಿದ್ದಾಗ ಎರಡು ವರ್ಷ ಪ್ರಾಯವಿದ್ದಾಗಲೇ ತಂದೆ ರಾಮಶಾಸ್ತ್ರಿ ನಿಧನವಾಗಿದ್ದರು. ಮುಂದೆ ಶಿವಸ್ವಾಇಗೆ ಐದು ವರ್ಷವಿದ್ದಾಗ ತಾಯಿ ಲಕ್ಷ್ಮಮ್ಮ ಸಹ ಕೊನೆಯುಸಿರೆಳೆದರು.

ಆಗ ಅವರ ಅಣ್ಣ ಲಕ್ಶ್ಮಿನರಸಿಂಹ ಶಾಸ್ತ್ರಿ ತಮ್ಮನ ಜವಾಬ್ದಾರಿ ವಹಿಸಿಕೊಂಡು ಅವನ ವಿದ್ಯಾಭ್ಯಾಸ, ಉಪನಯನಾದಿಗಳನ್ನು ನೆರವೇರಿಸಿದ್ದರು. 

ಅದು ಶೃಂಗೇರಿಯ ಜಗದ್ಗುರುಗಳಾಗಿದ್ದ ಶ್ರೀವೃದ್ಧನೃಸಿಂಹಭಾರತೀ ಸ್ವಾಮಿಗಳು ಪೀಠಕ್ಕೆ ಉತ್ತರಾಧಿಕಾರಿಯನ್ನು ಹುಡುಕುತ್ತಿದ್ದ ಸಮಯ. ಮ್ಮೆ ಮೈಸೂರಿಗೆ ಬಂದಾಗ, ಶಿವಸ್ವಾಮಿಯೇ ಉತ್ತರಾಧಿಕಾರಿಯೆಂದು ಅವರು ತೀರ್ವನಿದ್ದರು.  ಆ ನಂತರ ಮಹಾರಾಜರಲ್ಲಿ ಈ ಬಗ್ಗೆ ಹೇಳೀ ಲಕ್ಶ್ಮಿನರಸಿಂಹ ಶಾಸ್ತ್ರಿಗಳಿಗೆ ಸಹ ಕೇಳಲಾಗಿತ್ತು. ಆದರೆ ತಮ್ಮನನ್ನು ಸನ್ಯಾಸಿಯಾಗಿ ಮಾಡಲು ಅವರು ಸಿದ್ದವಿರಲಿಲ್ಲ.  ಆ ನಂತರ ಮಹಾರಾಜರ ಸಲಹೆಯಂತೆ ಒಪ್ಪಿದರು. 1868ರಲ್ಲಿ ಶಿವಸ್ವಾಮಿಯ ಶಿಷ್ಯ ಪರಿಗ್ರಹಣ ಸಮಾರಂಭ ನಡೆಯಿತು. ಹಿರಿಯ ಗುರುಗಳೂ ಅವರಿಗೆ ಮಹಾವಾಕ್ಯಗಳನ್ನು ಉಪದೇಶಮಾಡಿ ‘ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ’ ಎಂದು ಯೋಗಪಟ್ಟವನ್ನು ಅನುಗ್ರಹಿಸಿದರು.

ಆದಿಶಂಕರರ  ಜನ್ಮಸ್ಥಳವನ್ನು ಯಾತ್ರಾ ಕೇಂದ್ರವಾಗಿ ಸ್ಥಾಪಿಸಿದ ಅವರು ಅಲ್ಲಿ ಶಂಕರಾಚಾರ್ಯ ಹಾಗೂ ಶಾರದಾಂಬಾ ದೇವಾಲಯ ಸ್ಥಾಪಿಸಿದ್ದರು.ಚಾರ್ವಾಕರಂತೆ ದ ಮತ್ತು ಶಾಸ್ತ್ರಗಳ ಬಗ್ಗೆ ನಂಬಿಕೆಯಿಲ್ಲದ ಅನೇಕ ಜನರು ಅವರ ಬೋಧನೆಗಳಿಂದ ಸಂಪೂರ್ಣವಾಗಿ ಅಸ್ತಿಕಗಳಾಗಿ ಸುಧಾರಿಸಲ್ಪಟ್ಟರು ಎನ್ನುವುದು  ಉಲ್ಲೇಖಿಸಬೇಕಾದ ಸಂಗತಿ.

ವೃದ್ಧನೃಸಿಂಹ ಭಾರತೀ ಸ್ವಾಮಿಗಳು 1879ರಲ್ಲಿಪಾಂಚಭೌತಿಕ ಶರೀರವನ್ನು ಬಿಟ್ಟರು. ಆ ನಂತರ ಸಂಪ್ರದಾಯದಂತೆ  ಶ್ರೀಗಳು ಖ್ಯಾನ ಪೀಠದಲ್ಲಿ ಪಟ್ಟಾಭಿಷೇಕ  ಮಾಡಿಸಿಕೊಂಡರು. ಹಠಯೋಗ, ರಾಜಯೋಗ, ಅಷ್ಟಾಂಗಯೋಗದಲಿ ಸಿದ್ದಿ ಪಡೆದಿದ್ದ ಶ್ರೀಗಳು ಉತ್ತರದೇಶದ ವಿರಕ್ತರಾದ ಶ್ರೀಗಂಗಾದಾಸರಿಂದ  ಖೇಚರೀಸಿದ್ಧಿಯನ್ನು ಕುರಿತು ತಿಳುವಳಿಕೆ ಪಡೆದರು.

1886ರಲ್ಲಿ ಕ್ಷೇತ್ರಯಾತ್ರೆ ಕೈಗೊಂಡ ಶ್ರೀಗಳು ಕ್ಕಮಗಳೂರು-ಶಿವಮೊಗ್ಗ ಜಿಲ್ಲೆಗಳಲ್ಲಿ ಹನ್ನೊಂದು ತಿಂಗಳು ಸಂಚರಿಸಿ ಗೋಕರ್ಣಕ್ಕೆ ಬಂದರು. ಅಲ್ಲಿಂದ ಉತ್ತರಕನ್ನಡ, ಧಾರವಾಡ, ಜಮಖಂಡಿ ಮೀರಜ್, ಸಾಂಗ್ಲಿ, ಕುರಂದವಾಡ, ಕೊಲ್ಹಾಪುರಕ್ಕೆ ಭೇಟಿಕೊಟ್ಟರು.

ಬಳ್ಳಾರಿ, ರಾಯದುರ್ಗದ  ಬೆಳಗುಪ್ಪೆಗೆ ಆಗಮಿಸಿದ್ದ ಶ್ರೀಗಳು  ಅಲ್ಲಿ ಒಂದು ಮನೆಯಲ್ಲಿ ನೆಲೆಸಿದ್ದ ವೇಳೆ  ದೇವರ ಸಂಪುಟ ಕಳ್ಳತನವಾಗಿತ್ತು. ಇದರಿಂದ ಕೋಪಗೊಂಡ ಶ್ರೀಗಳು ಳು ಶ್ರೀನಾರಸಿಂಹ ಮಂತ್ರೋಪಾಸನೆಗೆ ತೊಡಗಿದರು. ಇದಾಗಿ ಐದು ದಿನಕ್ಕೆ ಕಳುವಾಗಿದ್ದ ವಸ್ತು ಅಲ್ಲಿನ ರೈತನೊಬ್ಬನ ಹೊಲದಲ್ಲಿ ಪತ್ತೆಯಾಗಿತ್ತು!!! ಇದಾಗಿ  ಶ್ರೀಗಳು 1889ನೆಯ ಫೆಬ್ರವರಿ 13 ರಂದು ಶೃಂಗೇರಿಗೆ ಮರಳಿದ್ದರು.

ಇದಾದ ಎರಡು ವರ್ಷಗಳ ನಂತರ ಮತ್ತೆ ಸಂಚಾರ ಕಒಗೊಂಡ ಶ್ರೀಗಳು ಚಿಕ್ಕಮಗಳೂರು, ಬೇಲೂರು ಹಾಸನದ ಮೂಲಕ ಮೈಸೂರಿಗೆ ಬಂದು ಮಹಾರಾಜರಿಗೆ ದರ್ಶನ ನೀಡಿದ್ದರು.ಅಲ್ಲಿಂದ ತಮಿಳುನಾಡಿನ ಹಲವು ಸ್ಥಳಗಳನ್ನು ಸಂದರ್ಶಿಸಿದ ಶ್ರೀಗಳು ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಗಳದರು.

 ಶೃಂಗೇರಿಯಲ್ಲಿ ಪ್ರಪ್ರಥಮವಾಗಿ ಸಂಸ್ಕೃತ ಪಾಠಶಾಲೆ ಪ್ರಾರಂಭಿಸಿದ ಕೀರ್ತಿ ಇವರದ್ದಾಗಿದೆ.

ಎರಡನೇ ಬಾರಿಯ ದಿಗ್ವಿಜಯ ಸಂಚಾರ ಮುಗಿಸಿದ್ದ ಅವರು  12 ವರ್ಷಗಳ ಕಾಲ ಶೃಂಗೇರಿಯಲ್ಲಿ ಇದ್ದರೂ ನರಸಿಂಹವನದಲ್ಲೇ ಹೆಚ್ಚಿನ ಸಮಯ ಕಳೆದಿದ್ದರು.

ಶ್ರೀಗಳು 1907ರಲ್ಲಿ ಮೂರನೆಯ ಸಂಚಾರ ಕೈಗೊಂಡು  ಬೆಂಗಳೂರಿಗೆ ಆಗಮಿಸಿದ್ದರು. ಆಗ ಈಗಿನ ಶಂಕರಪುರಂ ಸ್ಥಳದಲ್ಲಿ ಶ್ರೀಶಂಕರರ ದೇವಾಲಯ ನಿರ್ಮಾಣ ಮಾಡಲಾಯಿತು.

 ಶ್ರೀರಂಗ, ಅಲ್ಲಿಂದ ತಿನ್ನವೆಲ್ಲಿಗೆ ಭೇಟಿ ನೀಡಿದ್ದ ಶ್ರೀಗಳು ತಮಿಳು ಪ್ರದೇಶಗಳಲ್ಲಿ ಅನೇಕ ಧಾರ್ಮಿಕ ಸಂಸ್ಥೆಗಳು ಪ್ರಾರಂಭಕ್ಕೆ ಕಾರಣವಾಗಿದ್ದಾರೆ.  ಅಲ್ಲಿಂದ 1910ರಲ್ಲಿ ಕಾಲಟಿಗೆ ಆಗಮಿಸಿದರು ಅದೇ ವರ್ಷ ಮಾಘ ಶುದ್ಧ ದ್ವಾದಶೀ ಸೋಮವಾರ ಅಭಿಜನ್​ವುಹೂರ್ತದಲ್ಲಿ ಶಾರದಾ, ಶಂಕರಾಚಾರ್ಯರ ಶಿಲಾಮೂರ್ತಿಗಳ ಪ್ರತಿಷ್ಠೆ ನೆರವೇರಿತ್ತು.  ಕಾಲಟಿಯಲ್ಲಿ ಮೂರುತಿಂಗಳು ಇದ್ದ ಶ್ರೀಗಳು 1911ರಲ್ಲಿ ವಿರೋಧಿಸಂವತ್ಸರದ ವೈಶಾಖ ಶುದ್ಧ ಪಂಚಮಿಯ ದಿನ ಬೆಂಗಳೂರಿನಲ್ಲಿ ‘ಭಾರತೀಯ ಗೀರ್ವಾಣ ಪ್ರೌಢವಿದ್ಯಾಭಿವರ್ಧಿನೀ ಪಾಠಶಾಲೆ’ಯನ್ನು ಪ್ರಾರಂಭಗೊಳಿಸಿದರು.

ಅವರು ಬೆಂಗಳೂರು ಮತ್ತು ಇತರ ಸ್ಥಳಗಳಲ್ಲಿ ವೇದ ಮತ್ತು ಶಾಸ್ತ್ರಗಳಿಗಾಗಿ ಪಾಠಶಾಲೆಗಳನ್ನು  ಸ್ಥಾಪಿಸಿದರು  ಭೂಮಿಯಲ್ಲಿ ಸನಾತನ ಧರ್ಮವನ್ನು ಪುನಃ ಸ್ಥಾಪಿಸಿದ ಆದಿ ಶಂಕರರ ಪುನರ್ಜನ್ಮ ಎಂದು ಖ್ಯಾತಿ ಪಡೆದ ಅವರು ಧರ್ಮವನ್ನು ಹರಡಲು ಅಗತ್ಯವಾದ  ಎಲ್ಲ ಕಾರ್ಯಗಳಿಗೆ ಚಾಲನೆ ನೀಡಿದರು.

ಹಾಗೆ ಅನೇಕ ಧಾರ್ಮಿಕ ಕೆಲಸಗಳಲ್ಲಿ ಭಾಗಿಯಾಗಿದ್ದ ಶ್ರೀಗಳು 1912ರ ಚೈತ್ರಶುದ್ಧ ಬಿದಿಗೆಯಂದು ಸ್ನಾನಾಹ್ನಿಕಗಳನ್ನು ಮುಗಿಸಿ ಹಾಲು ಕುಡಿದು ಪದ್ಮಾಸನದಲ್ಲಿ ಕುಳಿತರು. ಶಿರವನ್ನು ಬಗ್ಗಿಸಿ, ನಿಶ್ಚಲರಾಗಿ ಕುಳಿತುಪ್ರಾಣವನ್ನು ಹೊರದೂಡಿ ವಿಶ್ವೈಕ್ಯರಾದರು. ಅವರ ಶರೀರ ಹಿಂದಕ್ಕೆ ಬಾಗಿತು. ಶ್ರೀಗಳ ನಿರ್ಯಾಣದ ಸುದ್ದಿ ಎಲ್ಲೆಡೆ ಹಬ್ಬಿತು. ಜನ ತಂಡೋಪತಂಡವಾಗಿ ಶೃಂಗೇರಿಗೆ ಬಂದರು. ಅವರ ಶರೀರವನ್ನು ವಿಧಿಪೂರ್ವಕವಾಗಿ ಸಮಾಧಿ ಮಾಡಲಾಯಿತು.

ಕಡಕೋಳ ಮಡಿವಾಳಪ್ಪ


ಗುಲ್ಬರ್ಗ ಜಿಲ್ಲೆ ಜೇವರ್ಗಿ ತಾಲ್ಲೂಕು ಯಡ್ರಾಮಿ ಬಳಿಯ ಕಡಕೋಳ ಗ್ರಾಮವು ಧಾರ್ಮಿಕ ಕೇಂದ್ರವಾಗಿಯೂ ಪ್ರಸಿದ್ಧಿ ಪಡೆದಿದೆ.  ಶರಣಬಸವೇಶ್ವರರ ಸಮಕಾಲೀನರಾದ ಕಡಕೋಳ ಮಡಿವಾಳಪ್ಪನವರ ಮಠ ಇಲ್ಲಿದೆ.  
ಗುಲ್ಬರ್ಗ ತಾಲ್ಲೂಕಿನ ಬಿದನೂರಿನಲ್ಲಿ ಜನಿಸಿದ ಮಡಿವಾಳಪ್ಪನವರು ಸುಮಾರು 1780ರಿಂದ 1855ರವರೆಗೆ ಜೀವಿಸಿದ್ದರೆಂಬುದು ವಿದ್ವಾಂಸರ ಅಭಿಪ್ರಾಯ.
ಶರಣಬಸವೇಶ್ವರರ ಪ್ರಭಾವಕ್ಕೆ ಒಳಗಾಗಿ ಸ್ವಲ್ಪಕಾಲ ಅರಳಗುಂಡಗಿಯಲ್ಲಿದ್ದರು. ನಂತರ ಕಡಕೋಳಕ್ಕೆ ಬಂದು ನೆಲೆಸಿ, ಐಕ್ಯರಾದರು. ಇವರ ಸಮಾಧಿಯು ಕಡಕೋಳದಲ್ಲಿದ್ದು, ಆ ಜಾಗವೇ ಈಗ ಮಠವಾಗಿದೆ.
ಮಠದ ಕಟ್ಟಡವು ಪ್ರಾಚೀನವಾಗಿದ್ದು, ವಿಶಾಲವಾದ ಪ್ರಾಕಾರದಲ್ಲಿರುವ ಗುಡಿಯಲ್ಲಿ ವೇದಿಕೆಯ ಮೇಲೆ ಮಡಿವಾಳಪ್ಪನ ಗದ್ದುಗೆ ಜೊತೆಗೆ ಶಿಷ್ಯನ ಗದ್ದುಗೆ ಇರುವ ಭೀಮಾಶಂಕರ ಗುಡಿ ಇದೆ. 
ಹನುಮಂತನ ಗುಡಿಯ ಮುಂದೆ ಸುಮಾರು 11-12ನೇ ಶತಮಾನದ ಶಿವಲಿಂಗ, ಗಣಪತಿ ಶಿಲ್ಪಗಳಿದ್ದು, ಪಾಳುಬಿದ್ದಿರುವ ಪ್ರಾಚೀನ ಈಶ್ವರ ಗುಡಿ ಇದೆ. ಯಮನೂರಪ್ಪನ ದರ್ಗಾವೂ ಇಲ್ಲಿಯೇ ಇದ್ದು, ನವಲಗುಂದ ತಾಲ್ಲೂಕಿನ ಯಮನೂರಿನಲ್ಲಿ ಉರುಸ್ ನಡೆಯುವಾಗ ಇಲ್ಲಿ ಉರುಸ್  ನಡೆಯುತ್ತದೆ. 
ಸ್ವರ ವಚನಕಾರರಾಗಿದ್ದ ಮಡಿವಾಳಪ್ಪನವರು `ಕೈವಲ್ಯ ವಾಕ್ಯಾಮೃತ~ ಎಂಬ ವಚನ ಕೃತಿ, ಹಲವಾರು ತತ್ವಪದಗಳನ್ನು ರಚಿಸಿದ್ದಾರೆ.`ಊರ ಮುಂದಿನ ಬಾವಿ ಯಾರ ತೋಡಿದರೇನು
ಕಾಲು ಜಾರಿದರೆ  ಕೈಲಾಸ, ಕಾಲು ಜಾರಿದರೆ ಕೈಲಾಸ ನಾರಿಯ ಮನವ ಜಾರಿದರೆ ವನವಾಸ~ ಮತ್ತು `ಯಾಕ ಚಿಂತಿ ಮಾಡತಿದಿ ಎಲೆ ಮಾನವ, ನಿನಗ ಯಾತರ ಸುಖವಿಲ್ಲ ಎಲೆ ಮಾನವ~ ಎಂದು ಹಾಡಿ ಜನರನ್ನು ತಿದ್ದಲು ಪ್ರಯತ್ನಿಸಿದ ಅನುಭಾವಿ ಅವರು.
ಜಾತಿ, ಮತ, ಧರ್ಮವನ್ನು ಮೀರಿದ ವ್ಯಕ್ತಿತ್ವ ಹೊಂದಿದ ಮಡಿವಾಳಪ್ಪನವರು ಈಗ ಕಾಲವಾಗಿದ್ದರೂ ಅವರು ರಚಿಸಿದ ತತ್ವಪದಗಳು ಜೀವಂತವಾಗಿದ್ದು ಸಮಾಜವನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡುತ್ತಿವೆ.ಈ ಮಠದಲ್ಲಿ ನಿರ್ದಿಷ್ಟ ಪೂಜೆ, ಸೇವೆ, ಶುಲ್ಕಗಳಿಲ್ಲ. ಭಕ್ತಾದಿಗಳು ತಮ್ಮ ಇಷ್ಟಾನುಸಾರ ಪೂಜೆ ಮಾಡಬಹುದು.
ಶ್ರೀ ಮೃತ್ಯುಂಜಯ ಸ್ವಾಮೀಜಿ
ಮೃತ್ಯುಂಜಯ ಸ್ವಾಮಿಗಳು ಏಪ್ರಿಲ್ 9,1888 ರಂದು ಹುಬ್ಬಳ್ಳಿಯ ಇಂಗಳಹಳ್ಳಿಯಲ್ಲಿ ಶಾಂತಮ್ಮ ಸ್ವಾಮಿ ಮತ್ತು ಚನ್ನವೀರಮ್ಮರಿಗೆ ಸಣ್ಣ ಕುಗ್ರಾಮದಲ್ಲಿ ಜನಿಸಿದರು. ಧಾರವಾಡದಲ್ಲಿ ನ್ನ ಪ್ರಾಥಮಿಕ ಶಿಕ್ಷಣದ ಒಂದು ಭಾಗವನ್ನು ಪೂರ್ಣಗೊಳಿಸಿದ ನಂತರ,  ತೋಂಟಾಚಾರ್ಯ ಮಠದಲ್ಲಿ ಸಂಸ್ಕೃತ ಮತ್ತು ಕನ್ನಡವನ್ನು ಕಲಿತರು. ಅವರ ಬಾಲ್ಯದಿಂದಲೇ ದೈವತ್ವದ ಚಿಹ್ನೆಗಳನ್ನು ಕಾಣಬಹುದು. ಮನಸ್ಸಿನ ತೀಕ್ಷ್ಣತೆ ಮತ್ತು ರ ಭಕ್ತಿಯ ಆಳವನ್ನು ನೋಡಿ ಶಿಕ್ಷಕರು ಆಶ್ಚರ್ಯಚಕಿತರಾದರು. ಅವರು ಧಾರ್ಮಿಕ ಗ್ರಂಥಗಳಲ್ಲಿ ತೀವ್ರ ಆಸಕ್ತಿ ಹೊಂದಿದ್ದರು. ಅವರಿಗೆ ಸಂಗೀತದ ಸಹಜ ಪ್ರೀತಿ ಇತ್ತು, ಅದನ್ನು ಅರು ತನ್ನ ತಂದೆಯಿಂದ ಆನುವಂಶಿಕವಾಗಿ ಪಡೆದಿದ್ದರು.ಅವರು ಭಕ್ತಿಗೀತೆಗಳನ್ನು ಹಾಡಲು ಹೆಚ್ಚಿನ ಸಮಯವನ್ನು ಕಳೆದರು.
ಆ ನಂತರ ಮೃತ್ಯುಂಜರು ಆತ್ಮಶಕ್ತಿಯನ್ನು ಹುಡುಕಲು ಅನೇಕ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿದರು, ಅಂದರೆ ಆಂತರಿಕ ಸಂತೃಪ್ತಿ. ನಂತರ ಅವರು ಅಂಕಳಿಗೆಗೆ ಬಂದು  ಶ್ರೀ ಅಡವಿ ಮೀಜಿಯನ್ನು ಭೇಟಿಯಾದರು, ಅವರು ಚಿಕ್ಕ ಹುಡುಗನನ್ನು ಕಂಡು ಸಂತಸ ಹೊಂದಿದ್ದರು. ಮತ್ತು ಅವರನ್ನು ಅಥಣಿಯ ಮುರಗೇಂದ್ರ ಶಿವಯೋಗಿ ಸ್ವಾಮೀಜಿ ಬಳಿ ಕಳುಹಿಸಲು ವ್ಯವಸ್ಥೆ ಮಾಡಿದರು. ಮೃತ್ಯುಂಜಯಸ್ವಾಮಿ ತಮ್ಮ ಗುರುವನ್ನು ಶುದ್ಧ ಮತ್ತು ಪೂರ್ಣ ಹೃದಯದಿಂದ ಸೇವಿಸಿದರು. ಶಿವಯೋಗಿ ಸ್ವಾಮೀಜಿ ಅವರು ತಮ್ಮ 18 ನೇ ವಯಸ್ಸಿನಲ್ಲಿ ಮೃತ್ಯುಂಜಯ ವಿರಾಕ್ತಶ್ರಮವನ್ನು ಪ್ರದಾನ ಮಾಡಿದರು. ಅವರನ್ನು ದಾವಣಗೆರೆ ವಿರಕ್ತಮಠಕ್ಕೆ ನಿಯೋಜಿಸಲಾಯಿತು ಮತ್ತು ಭಾರವಾದ ಹೃದಯದಿಂದ ತಮ್ಮ ಪ್ರೀತಿಯ ಗುರುವನ್ನು ತೊರೆದರು.
ಮೃತ್ಯುಂಜಯಸ್ವಾಮಿ ಶಿವಶರಣಗಳ ಮರೆತುಹೋದ ಶ್ರೀಮಂತ ಪರಂಪರೆಯ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಬಯಸಿದ್ದರು. ತನ್ನದೇ ಆದ ಧರ್ಮದ ಬಗ್ಗೆ ನಂಬಿಕೆಯಿಲ್ಲದವರಿಗೆ ನಂಬಿಕೆ ಬರಿಸುಉವುದು ಇತರರ ಬಗ್ಗೆ ಅನಂತ ಸಹಿಷ್ಣುತೆ ಅವನ ಧ್ಯೇಯವಾಕ್ಯವಾಗಿತ್ತು. ಅವರು ಬಸವಜಯಂತಿ ಆಚರಣೆ, ವಿರಶೈವ ತರುಣ ಸಂಘ ಚಳವಳಿ ಇತ್ಯಾದಿಗಳಿಗೆ ಚಾಲನೆ ನೀಡಿದರು. ಈ ಸಂಘಗಳು ವಿರಶೈವ ಗ್ರಂಥಾಲಯಗಳನ್ನು ಪ್ರಾರಂಭಿಸಿ, ವಿದ್ವಾಂಸರು, ಕಲಾವಿದರು ಮತ್ತು ಸಾಮಾಜಿಕ ಕಾರ್ಯಕರ್ತರು ಸೇರಿ  ವಿವಿಧ ಕಾರ್ಯಗಳನ್ನು ನಡೆಸಿದರು.  ಮೃತ್ಯುಂಜಯಸ್ವಾಮಿ ಜಾನಪದ ಗೀತೆಗಳ ಮೂಲಕ ಶರಣಗಳ ಸಂದೇಶವನ್ನು ಹರಡಿದರು. ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಭಜನಾ ಮಂಡಳಿಗಳನ್ನು ಪ್ರಾರಂಭಿಸಲಾಯಿತು.
ಆಧುನಿಕ ಶಿಕ್ಷಣವಿಲ್ಲದೆ ಸಮುದಾಯವು ಪ್ರಗತಿ ಹೊಂದಲು ಸಾಧ್ಯವಿಲ್ಲ ಎಂದು ಶ್ರೀ ಮೃತ್ಯುಂಜಯಸ್ವಾಮಿ ಅರಿತುಕೊಂಡರು. ಆದ್ದರಿಂದ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ತಮ್ಮ ಶಾಲೆ ಮತ್ತು ಕಾಲೇಜು ಅಧ್ಯಯನವನ್ನು ಮುಂದುವರಿಸಲು ಸಹಾಯ ಮಾಡುವ ಸಲುವಾಗಿ ಪ್ರಸಾದ ನಿಲಯವನ್ನು ಪ್ರಾರಂಭಿಸಲಾಯಿತು. ಅವರು ಹಣವನ್ನು ಸಂಗ್ರಹಿಸಿ ವೀರಶೈವ ವಿದ್ಯಾವರ್ಧಕ ಸಂಘವನ್ನು ಪ್ರಾರಂಭಿಸಿದರು, ಇದು ಅಗತ್ಯವಿರುವ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಅವರ ಮುಂದಿನ ಅಧ್ಯಯನಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡಲಾಗಿತ್ತು.
1916 ರಲ್ಲಿ ಜಗದಗುರು ಅವರನ್ನು ಧಾರವಾಡ ಮುರುಗಾಮಠದ ಸ್ವಾಮೀಜಿಯಾಗಿ ನೇಮಿಸಿದರು. ಅದನ್ನು ನಿರ್ವಹಿಸಲು ಸಹ ಯಾವುದೇ ಆದಾಯವಿಲ್ಲದ ಸಣ್ಣ ಮಠವಾಗಿತ್ತು.. ಶಿವಯೋಗಿ ಸ್ವಾಮೀಜಿ ಅವರ ಕಠಿಣ ನಂಬಿಕೆ ಮತ್ತು ಕಠಿಣ ಪರಿಶ್ರಮವು ಮಠವನ್ನು ಇಂದಿನ ಶ್ರೇಷ್ಠ ಸಂಸ್ಥೆಯಾಗಿ ಪರಿವರ್ತಿಸಿತು.
 ಮೃತ್ಯುಂಜಯ ಸ್ವಾಮೀಜಿ ಧಾರವಾಡಕ್ಕೆ ಬಂದ ಕೂಡಲೇ ಅವರು ಮಾಡಿದ ಮೊದಲ ಕೆಲಸವೆಂದರೆ ಸಂಸ್ಕೃತ ಪಾಠಶಾಲೆಯನ್ನು ಪ್ರಾರಂಭಿಸುವುದು. ಆ ಉದ್ದೇಶಕ್ಕಾಗಿ ಪ್ರತ್ಯೇಕ ಕಟ್ಟಡವನ್ನು ಶೀಘ್ರದಲ್ಲೇ ಸ್ಥಾಪಿಸಲಾಯಿತು. ಸಾಂಪ್ರದಾಯಿಕ ರೀತಿಯ ಸಂಸ್ಕೃತ ಪಂಡಿತರನ್ನು  ನೇಮಿಸಿ  ಬಯಸಿದ್ದವರಿಗೆ ಶಾಸ್ತ್ರೀಯ ಸಂಸ್ಕೃತ ಕಲಿಸುವುದು ಅವರ ಉದ್ದೇಶವಾಗಿತ್ತು.ಶಿಕ್ಷಣದ ಔಪಚಾರಿಕ ಮತ್ತು ಅನೌಪಚಾರಿಕತೆಯ ಮೂಲಕ ಬಡವರ ಉದ್ದಾರಮತ್ತು ಅನೌಪಚಾರಿಕತೆಯ ಮೂಲಕ ಬಡವರ ಆದರ್ಶವೇ ಶ್ರೀ ಮೃತ್ಯುಂಜಯ ಸ್ವಾಮೀಜಿಯನ್ನು ಧಾರವಾಡದಲ್ಲಿ ಮುರುಘ ರಾಜೇಂದ್ರ ಪ್ರಸಾದ ನಿಲಯವನ್ನು ಪ್ರಾರಂಭಿಸಲು ಪ್ರೇರೇಪಿಸಿತು. 
ಅರವತ್ತಮೂರು ಕೊಠಡಿಗಳು, ಪ್ರತಿಯೊಂದೂ 63 ಪುರಾತನರಿಂದ ಹೆಸರು ಪಡೆಯಲಾಗಿದ್ದು.
ಮೃತ್ಯುಂಜಯ ಸ್ವಾಮೀಜಿ ಬರಹಗಾರರು, ವಿದ್ಯಾವಂತರು, ತ್ತು ಪ್ರತಿಭಾವಂತ ಜನರು, ಸಾಮಾಜಿಕ ಕಾರ್ಯಕರ್ತರು, ಸಂಗೀತಗಾರರು, ಕಲಾವಿದರು, ಜಾನಪದ ಸಂಗೀತದ ಉತ್ತಮ ಪೋಷಕರಾಗಿದ್ದರು. ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಪರಾಕಾಷ್ಠೆ ಮತ್ತು ಎಲ್ಲ ಜನರನ್ನು ಒಟ್ಟುಗೂಡಿಸಲು ಸ್ವಾಮೀಜಿ ಶ್ರೀಮದ್ ಅಥಣಿ  ಶಿವಯೋಗೀಶ್ವರರ ರಥೋತ್ಸವವನ್ನು ಪ್ರಾರಂಭಿಸಿದರು.
ಮೃತ್ಯುಂಜಯ ಸ್ವಾಮೀಜಿ 13 ಅಕ್ಟೋಬರ್ 1964 ರಂದು ಲಿಂಗದೊಂದಿಗೆ ವಿಲೀನಗೊಂಡಾಗ ಸಂಪೂರ್ಣ ಕರ್ನಾಟಕವು ತೀವ್ರ ದುಃಖದಲ್ಲಿ ಮುಳುಗಿತು. ಮಹಾ ಸಂತನ ಕೊನೆಯ ದರ್ಶನ ಪಡೆಯಲು ಜನರು ಜಾತಿ, ಮತ, ಧರ್ಮಗಳ ಅಂತರವಿಲ್ಲದೆ ಲಕ್ಷಾಂತರ ಜನರು ಸುರಿದರು. ಸ್ವಾಮೀಜಿಗಳ ದೇಹವು ಕಣ್ಮರೆಯಾಗಿದ್ದರೂ, ಅವನ ಆತ್ಮವು ಮಠದದ ಬಗೆಗೆ ಆಲೋಚಿಸುತ್ತಿದೆ. ಅವರ ಮಾರ್ಬಲ್ ಪ್ರತಿಮೆಯನ್ನು ಇಂದೂ ನಾವು ಈ ಮಠದಲ್ಲಿ ಸ್ಥಾಪಿಸಲಾಗಿದೆ.

ಶ್ರೀ ವಾದಿರಾಜ ತೀರ್ಥರು
ದಕ್ಷಿಣಕನ್ನಡ ಜಿಲ್ಲಾ ಕು೦ದಾಪುರ ತಾಲ್ಲೂಕಿನ ಕೋಟೇಶ್ವರ ಕ್ಷೇತ್ರದಿ೦ದ ಪೂವ೯ಕ್ಕೆ ಶ೦ಕರನಾರಾಯಣಕ್ಕೆ ಹೋಗುವ ದಾರಿಯಲ್ಲಿ, ದಕ್ಷಿಣ ಪಾಶ್ವ೯ದಲ್ಲಿ ಹೂವಿನಕೆರೆಯ೦ಬ ಪ್ರದೇಶವಿದೆ. ಅಲ್ಲಿ ರಾಮಾಚಾಯ೯ರೆ೦ಬುವರು ತನ್ನ ಪತ್ನಿಯಾದ ಸರಸ್ವತಿಯೊ೦ದಿಗೆ ವಾಸವಾಗಿದ್ದರು. ಸರಸ್ವತಿಗೆ ಗೌರಿಯೆ೦ದು ಹೆಸರಿದ್ದಿತು. ಪುತ್ರಸ೦ತಾನವಿಲ್ಲದ ಈ ದ೦ಪತಿಗಳು ವಾಗೀಶತೀಥ೯ರನ್ನು ಪುತ್ರಸ೦ತಾನಕ್ಕಾಗಿ ಪ್ರಾಥಿ೯ಸಿದರು. ಸ್ವಾಮಿಗಳು ಫಲ, ಮ೦ತ್ರಾಕ್ಷತೆ ಕೊಟ್ಟು ಅನುಗ್ರಹಸಿದರು. ಆದರೆ ಹುಟ್ಟಿದ ಮಗುವನ್ನು ತಮ್ಮ ಮಠಕ್ಕೆ ಸನ್ಯಾಸದೀಕ್ಷೆಗಾಗಿ ಕೊಡಬೇಕೆ೦ದಾಗ ದ೦ಪತಿಗಳು ವ್ಯಥಿಥರಾದರು. ಅವರ ವ್ಯಥೆಯನ್ನು ತಿಳಿದು ಗುರುಗಳು "ನಿಮಗೆ ಹುಟ್ಟುವ ಮಗನು ನಮ್ಮ ಮಠದ ಸನ್ಯಾಸಿಯೇ ಆಗುವನು, ಆದರೂ ನಿಮ್ಮ ಅಪೇಕ್ಷೆ ಬೇರೆ ವಿಧವಾಗಿದೆ. ಅದ್ರುಷ್ಟ ಪರೀಕ್ಷೆ ಮಾಡೋಣ. ಹುಟ್ಟುವ ಶಿಶುವು ಮನೆಯೊಳಗೆ ಹುಟ್ಟಿದರೆ ನಿಮಗಿರಲಿ, ಮನೆಯ ಹೊರಗೆ ಜನಿಸಿದರೆ ದೇವರಿಗಿರಲಿ" ಅ೦ದರು. ಮು೦ದೆ ಸರಸ್ವತಿಯು ಗಭ್ರಿಣಿಯಾದಳು. ಗಭ್ರಿಣಿಯಾದ ಗೌರಿಗೆ ದೇವರ ದಶ೯ನದಲ್ಲಿ ಹರಿಕಥೆ ಕೇಳುವದರಲ್ಲಿಯೇ ಬಯಕೆಯು ಬೆಳೆಯಿತು.
ಶಾಲಿವಾಹನ ಶಕ ೧೪೦೨(ಕ್ರಿ.ಶ.೧೪೮೦) ಶಾವ೯ರಿ ಸ೦ವತ್ಸರದ ಮಾಘ ಶುದ್ದ ಸಾಧನ ದ್ವಾದಶಿ ರಾಮಾಚಾಯ೯ರು ಪಾರಣೆ ಮಾಡುತ್ತಿದ್ದಾಗ, ಮನೆಯ ಎದುರು ಇದ್ದ ಪೈರನ್ನು ಒ೦ದು ಹಸು ಬ೦ದು ಮೇಯಲಾರ೦ಭಿಸಿತು. ರಾಮಾಚಾಯ೯ರು ಅದುವರೆಗೂ ಮನೆಯಿ೦ದ ಹೊರಗೆ ಹೋಗದ೦ತೆ ತಡೆದಿದ್ದ ತು೦ಬು ಗಭಿ೯ಣಿ ಸರಸ್ವತಿಯನ್ನು ಕುರಿತು "ಸ್ವಲ್ಪ ಹಸುವನ್ನು ಓಡಿಸಿ ಬಾ" ಎ೦ದರು. ಮನೆಯಿ೦ದ ಸ್ವಲ್ಪ ದೂರದ ಗದ್ದೆಯ ಬಳಿಗೆ ಬ೦ದಾಗ, ಅದುವರೆಗೆ ಯಾವ ಸೂಚನೆಯೂ ಇಲ್ಲದೆ, ಆಗಲೇ ಗೌರಿಗೆ ಪ್ರಸವವೇದನೆಯು ಪ್ರಾರ೦ಭವಾಗಿ ಅವಳು ಪುತ್ರರತ್ನವನ್ನು ಮನೆಯ ಹೊರಗೆ ಪ್ರಸವಿಸಿದಳು ದೈವಸ೦ಕಲ್ಪವೇ ಪ್ರಬಲವೆ೦ದರಿತು ರಾಮಾಚಾಯ೯ರು ಮನಸ್ಸಿಗೆ ಸಮಾಧಾನ ತ೦ದುಕೊ೦ಡರು. ಆ ಗದ್ದೆಗೆ ಈಗಲು ಗೌರಿಗದ್ದೆಯ೦ದೆ ಹೆಸರಿದೆ. "ಭೂವರಾಹನ" ಅನುಗ್ರಹದಿ೦ದ ಹುಟ್ಟಿದ ಆ ಮಗುವಿಗೆ "ಭೂವರಾಹ" ಎ೦ದು ನಾಮಕರಣವಾಯಿತು. ಐದನೆಯ ವಷ೯ದಲ್ಲಿ ಉಪನಯನ ಮಾಡಿ ರಾಮಾಚಾಯ೯ರು "ನಮ್ಮ ಭಾಗ್ಯವಿಷ್ಟೇ" ಎ೦ದು ಯೋಚಿಸುತ್ತಾ ಮಗನನ್ನು ತ೦ದು ಶ್ರೀ ವಾಗಿಶತಿಥ೯ರಿಗೆ ಒಪ್ಪಿಸಿದರು.
ವಾಗಿಶತಿಥ೯ರ ಶಿಷ್ಯರಾದ ವಿದ್ಯಾನಿಧಿತೀಥ೯ರೆ೦ಬ ಬಿಡಿ ಸನ್ಯಾಸಿಗಳಲ್ಲಿ ಭೂವರಾಹನ ವಿದ್ಯಾಬ್ಯಾಸ ಪ್ರಾರ೦ಭವಾಯಿತು. ದೇವರಿಗೆ ನೀವೆದನೆ ಮಾಡದ ವಸ್ತು ತಿನ್ನುವುದಿಲ್ಲ ಎ೦ಬ ಸ೦ಕಲ್ಪ, ದೇವರ ನೋಟದ ಹೊರತು ಮತ್ತಾವ ನೋಟವು ಬೇಕಾಗಿಲ್ಲ ಎ೦ಬ ನಿಧಾ೯ರ. ಆಟವೆ೦ದರೆ ದೆವರಪೂಜೆಯ ಆಟ. ಹೀಗೆ ಭೂವರಾಹನ ಬಾಲ್ಯ ಕಳೆಯಿತು. ಎ೦ಟನೆಯ ವಷ೯ದಲ್ಲಿ ವಿರಕ್ತಿ, ಭಕ್ತಿ, ಉಪಾಸನಾಕ್ತಿಗಳಿ೦ದ ಕೂಡಿದ ಭೂವರಾಹನಿಗೆ ಶ್ರಿ ವಾಗಿಶತಿಥ೯ರು ಸನ್ಯಾಸವಿತ್ತರು. "ವಾದಿರಾಜ ತಿಥ೯" ಎ೦ದು ಕರೆದು ತಮ್ಮ ಸ೦ಸ್ಥಾನದ ಉತ್ತರಾಧಿಕಾರಿಯನ್ನಾಗಿ ಮಾಡಿದರು. ಸನ್ಯಾಸನ೦ತರದಲ್ಲಿ ಕೆಲವು ಕಾಲದ ವರೆಗೆ ಶ್ರೀ ವಾಗಿಶತಿಥ೯ರಲ್ಲಿ ವಿದ್ಯಾಬ್ಯಾಸ ಮು೦ದುವರೆಯೆತು.
ಶ್ರೀ ವಾದಿರಾಜರು ತೀಥ೯ಕ್ಷೇತ್ರ ಸ೦ಚಾರಕ್ಕಾಗಿ ಗುರುಗಳ ಅಪ್ಪಣೆಯನ್ನು ಪಡೆದು ಹೊರಟರು. ಆಗ ತನ್ನ ಅಗಲಿಕೆಯನ್ನು ಸಹಿಸಲಾರದ ತಾಯಿಗಾಗಿ ತನ್ನ ಆಕಾರದ ಒ೦ದು ಪ್ರತಿಮೆಯನ್ನು ಮಾಡಿಸಿಕೊಟ್ಟರು. ಶ್ರೀ ವಾದಿರಾಜರು ಪಶ್ಚಿಮ, ಉತ್ತರ, ಪೂರ್ವ, ದಕ್ಷಿಣ, ದಿಕ್ಕುಗಳಲ್ಲಿ ಕ್ರಮವಾಗಿ ಪಾದಚಾರಿಗಳಾಗಿ ಎರಡು ಬಾರಿ ಭಾರತದೇಶವನ್ನೆಲ್ಲಾ ಸ೦ಚರಿಸಿ, ತೀಥ೯ಯಾತ್ರೆ ಮಾಡಿದರು. ಆ ಸಮಯದಲ್ಲಿ ಅನೇಕ ದಿವ್ಯ ಮಹಿಮೆಗಳನ್ನು ತೋರಿಸಿದರು. ವಾದದಲ್ಲಿ ವಾದಿಗಳನ್ನು ಗೆದ್ದರು.
ಸ್ವಣ೯ಕಾರನೂಬ್ಬನು ಪ೦ಚಲೋಹದ ಗಣೇಶನನ್ನು ರಚಿಸುತ್ತಿದ್ದಾಗ ಆ ಗಣೇಶವಿಗ್ರಹವು ದೈವವಶಾತ್ ಸಲ್ಲಕ್ಷಣ ಭರಿತವಾದ ಹಯಗ್ರಿವಮೂತಿ೯ಯಾಯತು. ಆಗ ಅವನು ಪುನ: ಪುನ: ವಿಗ್ರಹವನ್ನು ಸುತ್ತಿಗೆಯಿ೦ದ ಹೊಡೆದು ಗಣೇಶನನ್ನಾಗಿ ಮಾಡಬೇಕೆ೦ದು ಬಹಳ ಪ್ರಯತ್ನ ಪಟ್ಟನು. ಎಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗದೆ ಇದ್ದಾಗ ಆ ಪ್ರತಿಮೆಯನ್ನು ಒ೦ದು ಮೊಲೆಯಲ್ಲಿಟ್ಟು ಚಿ೦ತಾಕ್ರಾ೦ತನಾಗಿ ಸುಮ್ಮನಿದ್ದನು. ವಾದಿರಾಜರು ಅಕಸ್ಮಾತ್ತಾಗಿ ಆ ಊರಿಗೆ ಬ೦ದಿದ್ದಾಗ, ಒ೦ದು ರಾತ್ರಿ ಹಯಗ್ರಿವದೇವರು ಸ್ವಣ೯ಕಾರನ ಕನಸಿನಲ್ಲಿ ಬ೦ದು "ಇಲ್ಲಿಗೆ ಬ೦ದಿರುವ ಯತಿಗಳಿಗೆ ನನ್ನನ್ನು ಕೊಟ್ಟುಬಿಡು" ಎ೦ದು ಹೇಳಿದರು. ವಾದಿರಾಜರಿಗೂ ಸ್ವಪ್ನದಲ್ಲಿ ಹಯಗ್ರಿವದೇವರು ದಶ೯ನ ಕೊಟ್ಟು "ನಾನು ನಿನ್ನಿ೦ದ ಪೂಜೆಯನ್ನು ಸ್ವೀಕರಿಸಲು ಬರುವೆನು" ಎ೦ದರು. ಮರುದಿನ ಸ್ವಣ೯ಕಾರನು ಹಯಗ್ರಿವದೇವರನ್ನು ತ೦ದೊಪ್ಪಿಸಿದನು. ಆ ಪ್ರತಿಮೆಯನ್ನು ಸ೦ಸ್ಕರಿಸಿ, ಆವಾಹಿಸಿ ಪೊಜೆ ಮಾಡುತ್ತಾ ಇದ್ದರು. ಅವರ ಭಕ್ತಿಗೆ ಮೆಚ್ಹಿದ ಹಯಗ್ರಿವದೇವನು, ಅವರು ಕೊಟ್ಟ ಕಡಲೆಯ ಹೊರಣದ ಭಕ್ವ್ಯವನ್ನು ಕುದುರೆಯ ರೂಪದಿ೦ದ ಬ೦ದು ಮೆಲ್ಲುತ್ತಿದ್ದನು. ಹಯಗ್ರಿವದೇವರು ತನ್ನ ಮು೦ಗಾಲುಗಳನ್ನು ವಾದಿರಾಜರ ಹೆಗಲುಗಳಲ್ಲಿಟ್ಟು "ಹಯಗ್ರಿವ ಭಕ್ವ್ಯವನ್ನು" ಸ್ವೀಕರಿಸಿ ಸ್ವಲ್ಪ ಪ್ರಸಾದ ಉಳಿಸಿ ಹೋಗುತ್ತಿದ್ದರು.
ವಾದಿರಜರು ಪರಮಾತ್ಮನನ್ನು ಸ್ತುತಿಸುತ್ತಾ ಉಡುಪಿಯಲ್ಲಿ ಶ್ರೀಕ್ರಷ್ಣನ ಐದು ಪಯಾ೯ಯ ಪೊಜೆಗಳನ್ನು ಮಾಡಿ ಭಕ್ತಾನುಗ್ರಹ ಮಾಡುತ್ತಾ ೧೨೦ ವಷ೯ಗಳವರೆಗೂ ಅರೋಗ ಧ್ರಢಗಾತ್ರರಾಗಿ, ಭರತಖ೦ಡದಲ್ಲಿ ಭಕ್ತರ ಎದುರು ಕ೦ಗೊಳಿಸಿದರು.
ಉತ್ತಮಶ್ಲೋಕರಾದ ಶ್ರೀವಾದಿರಜರು ಉಡುಪಿ ಶ್ರೀಕ್ರಷ್ಣನ ಐದನೇಯ ಪಯಾ೯ಯವನ್ನು ತಮ್ಮ ಶಿಷ್ಯರಾದ ಶ್ರೀವೇದವೇದ್ಯತೀಥ೯ರನ್ನು ಕರೆದು "ನೀವು ಶ್ರೀಕ್ರಷ್ಣನ ಪಯಾ೯ಯ ಪೊಜೆಯನ್ನು ಮಾಡಿರಿ" ಎ೦ದರು. ಸೋದೆ ಅರಸನನ್ನು ಕರೆದು "ಸೋದೆಯಲ್ಲಿ ನಾವು ನಮ್ಮ ಪಯಾ೯ಯ ಪೊಜೆಯನ್ನು ಮಾಡುವೆವು" ಎ೦ದು ತಿಳಿಸಿದರು. ಪ್ರತಿ ವಷ೯ದ೦ತೆ ಶ್ರೀ ಶಾಲಿವಾಹನ ಶಕೆ ೧೫೨೨ ನೇ ಶಾವ೯ರಿ ಸ೦ವತ್ಸರದ ಫಾಲ್ಗುಣ ಮಾಸದ ಶುದ್ದ ನವಮಿಯ೦ದು ಶ್ರೀ ರಮಾ-ತ್ರಿವಿಕ್ರಮ ಉತ್ಸವವು ಪ್ರಾರ೦ಬಗೊ೦ಡಿತು. ನವಮಿಯ ದಿನ
ಭೇರಿತಾಡನ, ಮ್ರತಿಕಾಹರಣ ಪೂವ೯ಕ ಅ೦ಕುರಾರೋಪಣ, ದಶಮಿಯ ದಿನ ಧ್ವಜಾರೋಹಣ, ಧ್ವಜಬುತ್ತಿ, ರತ್ನಮ೦ಟಪೋತ್ಸವ, ಏಕಾದಶಿ ದಿನ ಸಿ೦ಹೋತ್ಸವ, ದ್ವಾದಶಿ ದಿನ ವಸ೦ತೋತ್ಸವ, ಗಜೋತ್ಸವ, ತ್ರಯೋದಶಿ ದಿನ ಶೇಷೋತ್ಸವ, ಚತುದ೯ಶಿಯ ದಿನ ಭೂತರಾಜರ ದ೦ಡೆ ಬಲಿ, ಗರುಡೋತ್ಸವ, ಹುಣ್ಣಿಮೆಯ ದಿನ ಬ್ರಹ್ಮ ರಧೋತ್ಸವ, ಶ್ರೀತ್ರಿವಿಕ್ರಮ ದೇವರಿಗೆ ಫಾಲ್ಗುಣ ಕ್ರಷ್ಣ ಪ್ರತಿಪದೆ ತಿಧಿಯಲ್ಲಿ ಶ್ರೀರಮಾದೇವಿಯೊ೦ದಿಗೆ ಕಲ್ಯಾಣೋತ್ಸವ, ಅವಭ್ರತ ಸ್ನಾನ, ಧ್ವಜಾರೋಹಣ, ನ೦ತರ ಉತ್ಸವ ಸಮಾಪ್ತಿಗೊಳಿಸಿದರು.
ಫಾಲ್ಗುಣ ಕ್ರಷ್ಣ ದ್ವಿತಿಯ ತಿಥಿಯಲ್ಲಿ ಶ್ರೀವಾದಿರಜರು ಎಲ್ಲಾ ಭಕ್ತರಿಗೂ ಮ೦ತ್ರಾಕ್ಷತೆಯನ್ನು ಅನುಗ್ರಹಿಸಿ ಮೊದಲೇ ಮಾಡಿಸಿಟ್ಟಿದ್ದ ಪ೦ಚವ್ರ೦ದಾವನಗಳ ಮಧ್ಯದಲ್ಲಿರುವ "ವ್ರ೦ದಾವನದ ಒಳಗೆ ನಾನು ಕುಳಿತು ಜಪಿಸುತ್ತಿರುವೆನು. ನನ್ನ ಕೈಯೊಳಗಿನ ಜಪ ಸರವು ಕೆಳಗೆ ಬಿದ್ದ ಕೂಡಲೆ ನನ್ನ ಸಮ್ಮುಖಕ್ಕೆ ಕಲ್ಲು ಮುಚ್ಹಿಬಿಡಿ" ಎ೦ದು ಅಪ್ಪಣೆಯಿತ್ತು ವ್ರ೦ದಾವನದೊಳಗೆ ಕುಳಿತು ಧ್ಯಾನಮಗ್ನರಾದರು. ಮರುದಿನ ಶಾಲಿವಾಹನ ಶಕ ೧೫೨೨ ನೇ ಶಾವ೯ರಿ ಫಾಲ್ಗುಣ ಕ್ರುಷ್ಣ ಪಕ್ಷ ತ್ರತಿಯ ಬುಧವಾರ ಸ್ವಾತಿ ನಕ್ಷತ್ರದಲ್ಲಿ ಶ್ರೀಮದ್ವಾದಿರತಿಥ೯ ಪರಮಹ೦ಸ ಕುಲತಿಲಕರ ಹಸ್ತದಿ೦ದ ಜಪಸರವು ಕೆಳಗೆ ಬಿದ್ದಿತು. ಕೂಡಲೇ ವ್ರ೦ದಾವನದ ಮುಚ್ಚಳವನ್ನು ಮುಚ್ಚಿದರು

ಶ್ರೀ ವ್ಯಾಸತೀರ್ಥರು
1460ರಲ್ಲಿ ಅವರು ಜನ್ಮತಾಳಿದರು. ಐದನೇ ವರ್ಷದಲ್ಲಿ ಉಪನಯನ ಸಂಸ್ಕಾರವನ್ನು ಹೊಂದುತ್ತಾರೆ, 7ನೇ ವರ್ಷದಲ್ಲಿ ಸನ್ಯಾಸಾಶ್ರಮ ಸ್ವೀಕರಿಸುತ್ತಾರೆ. ಅಬ್ಬೂರಿನ ಶ್ರೀ ಬ್ರಹ್ಮಣ್ಯ ತೀರ್ಥರು ಅವರ ದೀಕ್ಷಾಗುರುಗಳಾಗಿದ್ದಾರೆ.
ವ್ಯಾಸರಾಜರ ಆಧ್ಯಾತ್ಮಿಕ ತೀವ್ರತೆಯನ್ನು ಮನಗಂಡ ಅವರು ಮುಳುಬಾಗಿಲ ಶ್ರೀಪಾದರಾಜರ ಬಳಿ ಹೆಚ್ಚಿನ ಅಧ್ಯಯನಕ್ಕೆಂದು ಕಳುಹಿಸುತ್ತಾರೆ. ವ್ಯಾಸರಾಜರು ದರ್ಶನ ಕ್ಷೇತ್ರದಲ್ಲಿ , ಸಾಮಾಜಿಕವಾಗಿಯೂ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ವಿಜಯನಗರ ಆಳರಸರ ಕಾಲದಲ್ಲಿ ರಾಜಗುರುಗಳಾಗಿ ನಾಡ ಭವ್ಯ ಸಂಸ್ಕೃತಿಯನ್ನು ರಕ್ಷಿಸಿದ್ದಾರೆ. ವ್ಯಾಸರಾಯರು ಸಾಕಷ್ಟು ಸಂಸ್ಕೃತ ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ ಮೂರು ಕೃತಿಗಳನ್ನು ವ್ಯಾಸತ್ರಯ ಗ್ರಂಥಗಳೆಂದು ಗುರುತಿಸಲಾಗಿದೆ. ಅವೆಂದರೆ ಚಂದ್ರಿಕಾ, ನ್ಯಾಯಾಮೃತ ಮತ್ತು ತರ್ಕತಾಂಡವ. ವಿಜಯೀಂದ್ರರು, ವಾದಿರಾಜರು, ಶ್ರೀನಿವಾಸ ತೀರ್ಥರು ಸೇರಿದಂತೆ 24 ಅತಿರಥ ಮಹಾರಥ ಯತಿಗಳಿಗೇ ವಿದ್ಯಾಗುರುಗಳಾಗಿದ್ದರು. ಮಧ್ವಸರೋವರದ ಶುದ್ಧ ತತ್ತ್ವಜ್ಞಾನದ ತೀರ್ಥವನ್ನು ತಿಳಿಗನ್ನಡದಲ್ಲಿ ಮನೆಮನೆಗೆ ಹಂಚುವ ಕಾರ್ಯ ವ್ಯಾಸತೀರ್ಥರಿಂದ ಆರಂಭವಾಯಿತು. ಅವರು ಕನ್ನಡದ ಪದ್ಯಗಳನ್ನು ತಮ್ಮ ವ್ಯಾಸಪೀಠದಲ್ಲಿಟ್ಟು ಪಂಡಿತರ ಬಾಯಿಕಟ್ಟಿ ಅದಕ್ಕೆ ಪುರಂದರೋಪನಿಷತ್ತು ಎಂಬ ಮನ್ನಣೆ ನೀಡಿದ ಮಹೋನ್ನತ ಗುರುಗಳಿವರು. ತಿರುಪತಿಯಲ್ಲಿ ಸಾಳುವ ನರಸಿಂಹನ ದುಡುಕಿನಿಂದ ನಿಂತುಹೋಗಿದ್ದ ದೇವತಾಸೇವೆಗಳನ್ನು ಊರ್ಜಿತಗೊಳಿಸಿದ ಹನ್ನೆರಡು ವರ್ಷಗಳ ಕಾಲ ಶ್ರೀನಿವಾಸ ದೇವರ ಭವ್ಯಮೂರ್ತಿಗೆ ತಂತ್ರಸಾರೋಕ್ತ ಪೂಜೆ ಸಲ್ಲಿಸುತ್ತಾರೆ.
ಕೊಡುಗೆ ಅನನ್ಯ
ಹರಿದಾಸ ಸಾಹಿತ್ಯಕ್ಕೆ ವ್ಯಾಸರಾಜರು ನೀಡಿದ ಕೊಡುಗೆ ಅನನ್ಯ. ದಾಸಶ್ರೇಷ್ಠರಾದ ಪುರಂದರ ದಾಸರು, ಕನಕದಾಸರಿಗೆ ದೀಕ್ಷೆ ಕೊಟ್ಟ ಅಂಕಿತನಾಮ ನೀಡಿದ ಮಹಾನ್‌ ಪುರುಷರಿವರು. ಇವರ ಪ್ರಸಿದ್ಧ ಕೃತಿ ಕೃಷ್ಣಾ ನೀ ಬೇಗನೇ ಬಾರೋ ಇಂದಿಗೂ ಜನಪ್ರಿಯವಾಗಿದೆ. ಸೋಮನಾಥ ಕವಿ ಅವರ ಆತ್ಮಚರಿತ್ರೆಗೆ ಸ್ವತಃ ವ್ಯಾಸತೀರ್ಥರೇ ಅಂಕಿತಮುದ್ರೆ ಹಾಕಿದ್ದಾರೆ.
ವ್ಯಾಸತೀರ್ಥರು ಯತಿಗಳಾಗಲೆಂದೇ ಹುಟ್ಟಿದವರು. ಇವರ ತಂದೆ ಬಲ್ಲಣ್ಣ ಮತ್ತು ತಾಯಿ ಅಕ್ಕಮ್ಮ. ಸಂತಾನಭಾಗ್ಯವಿಲ್ಲದ ದಂಪತಿಯೀರ್ವರು ಅಬ್ಬೂರಿನ ಬ್ರಹ್ಮಣ್ಯತೀರ್ಥರ ಬಳಿ ಹೋಗುತ್ತಾರೆ. ಆಗ ಬ್ರಹ್ಮಣ್ಯ ತೀರ್ಥರು ಮೂರು ಮಕ್ಕಳಾಗುವ ವರವನ್ನು ಒಂದು ಷರತ್ತಿನ ಮೇಲೆ ನೀಡುತ್ತಾರೆ. ಅದೆಂದರೆ ಮೂವರಲ್ಲಿ ಒಬ್ಬರನ್ನು ತಮ್ಮ ಮಠಕ್ಕೆ ನೀಡಬೇಕೆಂಬುದಾಗಿರುತ್ತದೆ.
ಬ್ರಹ್ಮಣ್ಯತೀರ್ಥರಿಗೆ ನೀಡಿದ ವಾಗ್ದಾನದಂತೆ ವ್ಯಾಸರಾಯರ ಉಪನಯನದ ನಂತರ ಅವರನ್ನು ಶ್ರೀಮಠಕ್ಕೆ ಒಪ್ಪಿಸುತ್ತಾರೆ. ನಂತರ ವ್ಯಾಸರಾಜರು ಹಂಪಿಯ ಮಾರ್ಗದರ್ಶಕ ಯತಿಗಳಾಗಿ ಆಯ್ಕೆಯಾಗುತ್ತಾರೆ. ತಮ್ಮ ಗ್ರಂಥಗಳ ಮೂಲಕ ಶ್ರೀಮದಾಚಾರ್ಯರ ದ್ವೈತ ಸಿದ್ಧಾಂತಕ್ಕೆ ಪೂರಕವಾದ ಗಣನೀಯ ಕೊಡುಗೆ ನೀಡಿದ್ದಾರೆ.
ದಾಸ ಸಾಹಿತ್ಯದ ಹರಿಕಾರ
ಅವರ ಮಹೋನ್ನಥ ಗ್ರಂಥ ಅದ್ವೈತ ಮತದ ತೀಕ್ಷ್ಣ ವಿಮರ್ಶೆಯಲ್ಲಿ ಅದರಲ್ಲಿ ನೋಡಬಹುದು. ಭಾರತೀಯ ನ್ಯಾಯಶಾಸ್ತ್ರ, ತರ್ಕಶಾಸ್ತ್ರಕ್ಕೆ ಅಪೂರ್ವವಾದ ವಿಷಯಗಳನ್ನು ತಿಳಿಸಿದ್ದಾರೆ. ಈ ಮೂರು ಗ್ರಂಥಗಳನ್ನು ನಾವು ಅತ್ಯುತ್ತಮ ಕೃತಿಗಳೆಂದು ಎಲ್ಲರೂ ಗುರುತಿಸಿದ್ದಾರೆ. ಅವರ ಗಣನೀಯವಾದ ಕಾರ್ಯವೆಂದರೆ ದಾಸ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕೊಡುಗೆ. ಅವರ ವಿದ್ಯಾಗುರುಗಳಾದ ಶ್ರೀಪಾದರಾಜರು ಸ್ವತಃ ವಾಗ್ಗೇಯಕಾರರು. ಇವರ ಶಿಷ್ಯರೇ ವಿಜಯೇಂದ್ರ ತೀರ್ಥ ಮತ್ತು ವಾದಿರಾಜ ತೀರ್ಥರು. 1539ರಲ್ಲಿ ವ್ಯಾಸತೀರ್ಥರು ಇಹಲೋಕವನ್ನು ತ್ಯಜಿಸುತ್ತಾರೆ.
ತತ್ತ್ವಶಾಸ್ತ್ರ ಕ್ಷೇತ್ರದಲ್ಲಿ ವ್ಯಾಸರಾಯರ ಕೊಡುಗೆ ಅಪ್ರತಿಮ. ಇವರು ತಮ್ಮ ಕೃತಿ ಹಾಗೂ ಉಪನ್ಯಾಸಗಳ ಮೂಲಕ ಸಾಮಾನ್ಯ ಜನರಲ್ಲೂ ಭಗವದ್ಭಕ್ತಿಯನ್ನು ಪ್ರಚೋದಿಸಿದ್ದಾರೆ. ಈ ಅಂಶವನ್ನು ತಂಜಾವೂರಿನ ಮಹಾರಾಜರೊಬ್ಬರು ರಚಿಸಿದ 'ಸಂಗೀತ ಸಾರಾಮೃತ' ಎನ್ನುವ ಗ್ರಂಥದಲ್ಲಿ ಶ್ರೀ ವ್ಯಾಸರಾಜ ತೀರ್ಥರ ಉಲ್ಲೇಖವಿದೆ. ಮುಖ್ಯವಾಗಿ ಅವರು ದಾಸ ಸಾಹಿತ್ಯ ರತ್ನಗಳಾದ ಹಾಗೂ ಪರಮ ಮಾನ್ಯರಾದ ಪುರಂದರದಾಸರಿಗೆ ಹಾಗೂ ಕನಕದಾಸರಿಗೆ ದೀಕ್ಷೆಯನ್ನು ಕೊಟ್ಟಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ವ್ಯಾಸರಾಯರು ನೀಡಿದ ದೊಡ್ಡ ಕೊಡುಗೆಯಿದು ಎಂದರೆ ಅತಿಶಯೋಕ್ತಿಯಾಗಲಾರದು.
ಕುಹಯೋಗ ನಿವಾರಿಸಿದ ಯೋಗಿ
ವಿಜಯನಗರ ಆಳರಸರಿಗೆ ವ್ಯಾಸರಾಯರು ಗುರುಗಳಾಗಿದ್ದ ಸಮಯವದು. ಕೃಷ್ಣದೇವರಾಯನಿಗೆ ಒದಗಿ ಬಂದಿದ್ದ ಕುಹಯೋಗವನ್ನು ವ್ಯಾಸರಾಜರು ಸ್ವತಃ ಪರಿಹರಿಸುತ್ತ್ತಾರೆ. ಆ ಅಂಶವನ್ನು ಕೃಷ್ಣದೇವರಾಯ ತನ್ನ ಅನೇಕ ಶಾಸನಗಳಲ್ಲಿ ಉಲ್ಲೇಖಿಸಿದ್ದಾನೆ. ಬಹುಮನಿ ಸುಲ್ತಾನರು ಪ್ರಬಲರಾಗಿದ್ದ ಆ ದಿನಗಳಲ್ಲಿ ತಮಗೆ ನೀತಿ ಮಾರ್ಗೋಪದೇಶಕರಾಗಿ ರಾಜ್ಯವನ್ನು ಸಂರಕ್ಷಿಸಿದರು ಎಂದು ಸ್ತುತಿಸಿದ್ದಾರೆ. ಹಿಂದೂ ಧರ್ಮ ಸಂರಕ್ಷಣೆಯಲ್ಲೂ ಶ್ರೀ ವ್ಯಾಸರಾಜರ ಕೊಡುಗೆ ಅನನ್ಯ.
ಭಗವಂತನಲ್ಲಿ ಭಕ್ತಿ ಮೂಡದ ಹೊರತು ಧರ್ಮ ಸಂರಕ್ಷಣೆಯಾಗದು ಎಂಬುದು ಅವರ ನಿಲುವು. ಆ ಕಾರಣ ಅವರು ತಮಿಳುನಾಡು, ಆಂಧ್ರಪ್ರದೇಶ ಹಾಗೂ ನಮ್ಮ ರಾಜ್ಯದಲ್ಲಿ ಒಟ್ಟು 740 ಸ್ಥಳಗಳಲ್ಲಿ ಪ್ರಾಣದೇವರ ವಿಗ್ರಹಗಳನ್ನು ಸ್ಥಾಪಿಸಿದ್ದಾರೆ. ಜನರ ಕಲ್ಯಾಣಕ್ಕಾಗಿ ವ್ಯಾಸ ಸಮುದ್ರ ಸೇರಿದ್ದಂತೆ ಸಾಕಷ್ಟು ಕೆರೆಗಳನ್ನು ಕಟ್ಟಿಸಿದ್ದಾರೆ. ಅವರದ್ದು ಅಸಾಧಾರಣ ವ್ಯಕ್ತಿತ್ವ. ಸಮಾಜದಲ್ಲಿ ಒಂದು ರೀತಿಯಲ್ಲಿ ಎಲ್ಲರನ್ನೂ ಭಕ್ತಿ ಮಾರ್ಗದತ್ತ ಕೊಂಡೊಯ್ದಿದ್ದಾರೆ.

ಪೇಜಾವರ ವಿಶ್ವೇಶ ತೀರ್ಥರು
ಶ್ರೀ ಶ್ರೀ ವಿಶ್ವೇಶ ತೀರ್ಥರು (ಏಪ್ರಿಲ್ ೨೭, ೧೯೩೧ - ೨೯ ಡಿಸೆಂಬರ್ ೨೦೧೯) ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಮುಖ್ಯಸ್ಥರಾಗಿದ್ದರು, ನಾಡಿನ ಹಿರಿಯ ವಿದ್ವಾಂಸರಾಗಿ, ಸಾಮಾಜಿಕ ಸೇವಾ ಕಳಕಳಿಯ ಮನೋಭಾವವುಳ್ಳವರಾಗಿ ಪ್ರಸಿದ್ಧರಾಗಿದ್ದರು
ಪೂರ್ವಾಶ್ರಮ
ಉಡುಪಿಯಿಂದ ೧೨೦ ಕಿ.ಮೀ ದೂರದ ಸುಬ್ರಮಣ್ಯದ ಸಮೀಪದ ಹಳ್ಳಿ. ಅಚಾರ್ಯ ಮಧ್ವರು ನಡೆದಾಡಿದ ಪವಿತ್ರ ಸ್ಥಳ. ಹೆಸರು ರಾಮಕುಂಜ. ಬಹಳ ಜನಕ್ಕೆ ಹೆಸರು ಕೇಳಿಯೇ ಗೊತ್ತಿಲ್ಲ. ಅಂಥ ಅಜ್ಞಾತವಾದೊಂದು ಕುಗ್ರಾಮ. ಇಂಥ ಹಳ್ಳಿಯಲ್ಲಿ ೧೯೩೧ ಎಪ್ರಿಲ್ ೨೭ರಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಜನಿಸಿದರು.
ತಂದೆ ನಾರಾಯಣಾಚಾರ್ಯ, ತಾಯಿ ಕಮಲಮ್ಮ. ಹುಟ್ಟಿದ ಎರಡನೆಯ ಗಂಡುಮಗುವಿಗೆ ‘ವೆಂಕಟರಮಣ’ ಎಂದು ಹೆಸರಿಟ್ಟರು. ಪ್ರಜಾಪತಿ ಸಂವತ್ಸರದ ವೈಶಾಖ ಶುದ್ಧ ದಶಮಿ ಸೋಮವಾರದಂದು ವೆಂಕಟರಮಣನ ಶುಭ ಜನನವಾಗಿತು.
ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಪಡೆದರು. ಏಳನೆಯ ವರ್ಷದಲ್ಲೇ ಗಾಯತ್ರಿಯ ಉಪದೇಶ ಪಡೆದರು. ವೇದಮಾತೆ ವಟುವಿನ ತುಟಿಯಲ್ಲಿ ನಲಿದಳು.
ಉಪನಯನಕ್ಕೂ ಮುಂಚೆ, ಹುಡುಗನಿಗಿನ್ನೂ ಆರು ವರ್ಷ. ಆಟವಾಡುವ ವಯಸ್ಸು. ತಂದೆ – ತಾಯಿ ಮಗನನ್ನು ಉಡುಪಿಗೆ ಕರೆ ತಂದರು. ಆಗ ಪೇಜಾವರ ಮಠದ ಪರ್ಯಾಯವೇ ನಡೆದಿತ್ತು. ವೆಂಕಟರಮಣ ಮಠದ ಸ್ವಾಮೀಜಿ ಕೃಷ್ಣ ಪೂಜೆ ಮಾಡುವುದನ್ನು ಆಸಕ್ತಿಯಿಂದ ಗಮನಿಸಿದ. ಏನೋ ಒಂದು ಅಂತರಂಗದ ಸೆಳೆತ: ತಾನೂ ಹೀಗೆ ಕೃಷ್ಣನನ್ನು ಪೂಜಿಸಬಹುದೆ?
ತಂದೆ – ತಾಯಿ ವೆಂಕಟರಮಣನನ್ನು ಸ್ವಾಮಿಗಳ ಭೇಟಿಗೆ ಕರೆದುಕೊಂಡು ಹೋದರು. ವೆಂಕಟರಮಣ ಭಕ್ತಿಯಿಂದ ಸ್ವಾಮಿಗಳಿಗೆ ನಮಸ್ಕರಿಸಿದ. ಪುಟ್ಟ ಹುಡುಗನ ಮುಗ್ಧ ಮುಖ, ಅಲ್ಲಿ ತುಂಬಿದ ಭಕ್ತಿ ಭಾವ, ನಡೆಯ ಚುರುಕುತನ ಎಲ್ಲ ಗಮನಿಸಿದ ಸ್ವಾಮಿಗಳಿಗೆ ಏನನ್ನಿಸಿತೋ! ಆಕಸ್ಮಿಕವಾಗಿ ಅವರ ಬಾಯಿಂದ ಹೀಗೊಂದು ಮಾತು ಬಂತು. ‘ನೀನು ನನ್ನಂತೆ ಸ್ವಾಮಿಯಾಗುತ್ತೀಯಾ?’
ವೆಂಕಟರಮಣ ಉತ್ತರಿಸಿದ: “ಹ್ಞೂ, ಆಗುತ್ತೇನೆ”
ಈ ಆಕಸ್ಮಿಕ ಸಂಭಾಷಣೆಗೆ ಒಳಗಿನಿಂದ ಪ್ರೇರಿಸಿದ, ಮೇಲೆ ನಿಂತ ದೇವತೆಗಳು ‘ತಥಾಸ್ತು’ ಎಂದರು.
ಪರ್ಯಾಯದ ಅವಧಿ ಮುಗಿಯಿತು. ಆಗಣ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಮಾನ್ಯ ತೀರ್ಥರು ಸಂಚಾರಕ್ಕೆ ಹೊರಟರು. ಪಯಣದ ಹಾದಿಯಲ್ಲಿ ಹಂಪೆಯನ್ನು ತಲುಪಿದರು. ವ್ಯಾಸತೀರ್ಥರ ತಪೋಭೂಮಿಯಾದ ಹಂಪೆಯಲ್ಲಿ ಅವರ ನಿರ್ಧಾರ ಗಟ್ಟಿಗೊಂಡಿತು. ಅವರು ವಿಳಂಬ ಮಾಡದೆ ವೆಂಕಟರಮಣನನ್ನು ಕರೆಸಿಕೊಂಡರು. ಆಗಷ್ಟೇ ಉಪನೀತನಾಗಿದ್ದ ವಟು ವೆಂಕಟರಮಣ ಹಿರಿಯರ ಜತೆ ಹಂಪೆಗೆ ತೆರಳಿದರು.
ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ
ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿಯಂದು (೩.೧೨.೧೯೩೮) ವೆಂಕಟರಮಣನಿಗೆ ಹಂಪೆಯ ಯಂತ್ರೋದ್ಧಾರ ಮುಖ್ಯಪ್ರಾಣನ ಸನ್ನಿಧಿಯಲ್ಲಿ ದೀಕ್ಷೆ ನಡೆಯಿತು. ರಾಮಕುಂಜದ ಪುಟ್ಟ ಹಳ್ಳಿಯ ಮುಗ್ಧ ಬಾಲಕ, ಇನ್ನೂ ಏಳರ ಬಾಲ್ಯದ ಹಸುಳೆ, ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ, ಪೇಜಾವರ ಮಠದ ಪರಂಪರೆಯ 32ನೆಯ ಯತಿಯಾಗಿ, ಆಚಾರ್ಯ ಮಧ್ವರ ವೇದಾಂತ ಪೀಠವನ್ನೇರಿದ. ವೆಂಕಟರಾಮ ‘ವಿಶ್ವೇಶ ತೀರ್ಥ’ರಾದರು.
ಈ ಸಂದರ್ಭದಲ್ಲಿಯೇ ಇನ್ನೊಂದು ದೈವೀ ಘಟನೆ ನೆಡೆಯಿತು.
ಒಮ್ಮೆ ಆಗಿನ ಭಂಡಾರಕೇರಿ ಮಠಾಧೀಶರಾದ (ಮುಂದೆ ಫಲಿಮಾರು ಮಠಾಧೀಶರೂ ಆದ) ಶ್ರೀ ವಿದ್ಯಾಮಾನ್ಯ ತೀರ್ಥರು ಉಡುಪಿಗೆ ಚಿತ್ತೈಸಿದರು. ಶ್ರೀಪಾದರು ಮಾಧ್ವ ಯತಿಗಳಲ್ಲೇ ಅಗ್ರಮಾನ್ಯ ಪಂಡಿತರೆಂದು ಖ್ಯಾತರಾದವರು. ಸ್ವತಃ ಹಿರಿಯ ಸಾಧಕರು. ಈ ಬಾಲ ಯತಿ ಅವರ ಕಣ್ಣಿಗೆ ಬಿದ್ದರು. ಈ ಪುಟ್ಟ ಯತಿಯ ಚುರುಕು ಬುದ್ಧಿಯ ಚಾಕಚಕ್ಯತೆ ಯತಿಗಳ ಮನ ಸೆಳೆಯಿತು.
೧೯೪೩ರ ಫೆಬ್ರವರಿ ತಿಂಗಳು. ಶ್ರೀವಿದ್ಯಾಮಾನ್ಯ ತೀರ್ಥರು ಭಂಡಾರಕೇರಿಯಲ್ಲಿ ಶ್ರೀ ಮಧ್ವರಾದ್ಧಾಂತ ಸಂವರ್ಧಿನೀ ಸಭೆಯನ್ನು ಸ್ಥಾಪಿಸಿದರು. ವಿದ್ವಾಂಸರ ಮೇಳವೇ ಭಂಡಾರಕೇರಿಗೆ ಧಾವಿಸಿತು. ಆ ಬಾರಿಯ ಮಧ್ವನವಮಿಯ ವಿದ್ವತ್ಸಭೆಯ ಅಧ್ಯಕ್ಷತೆಯನ್ನು ೧೨ರ ಬಾಲಯತಿ ಶ್ರೀ ವಿಶ್ವೇಶ ತೀರ್ಥರಿಗೆ ಒಪ್ಪಿಸಿದರು. ಈ ವಾಮನಮೂರ್ತಿಯ ವಿದ್ಯೆಯ ತ್ರಿವಿಕ್ರಮಾವತಾರವನ್ನು ಅವರು ಅಂದೇ ಗುರುತಿಸಿದ್ದರು.
ನಾಡಿನ ಉದ್ದಗಲದಿಂದ ಹಿರಿಯ ವಿದ್ವಾಂಸರೆಲ್ಲ ಬಂದು ನೆರೆದಿದ್ದ ಆ ವಿದ್ವತ್ ಸಭೆಯಲ್ಲಿ ಪುಟ್ಟ ಯತಿ ವಿಶ್ವೇಶ ತೀರ್ಥರು ನೀಡಿದ ಚುಟುಕು ಭಾಷಣ ಎಲ್ಲರಿಗೂ ಚುರುಕು ಮುಟ್ಟಿಸಿತು. ಇಡಿಯ ಸಭೆಗೆ ಸಭೆಯೇ ತಲೆದೂಗಿತು. ಜತೆಗೆ ಅವರು ಶಾರ್ದೂಲ ವಿಕ್ರೀಡಿತದಲ್ಲಿ ರಚಿಸಿದ ಪದ್ಯವಂತೂ ಪಂಡಿತ ಮಂಡಳಿಯನ್ನು ಬೆರಗುಗೊಳಿಸಿತು.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. ನಂಬಲಾರ್ಹ ಮೂಲಗಳ ಉಲ್ಲೇಖಗಳನ್ನು ಸೇರಿಸುವ ಮೂಲಕ ಈ ಲೇಖನವನ್ನು ಸುಧಾರಿಸಲು ಸಹಾಯ ಮಾಡಿ. ಆಕರಗಳಿಲ್ಲದ ಭಾಗಗಳನ್ನು ಆಕ್ಷೇಪಿಸಿ ಅಳಿಸಬಹುದಾಗಿದೆ.
ವ್ಯಾಸಂಗ
ಹೀಗೆ ಬೆಸೆದ ಬಾಂಧವ್ಯ ಮತ್ತಷ್ಟು ಗಟ್ಟಿಗೊಂಡು ಇಬ್ಬರು ಮಹಾನ್ ಯತಿಗಳನ್ನು ಇನ್ನಷ್ಟು ಹತ್ತಿರಕ್ಕೆ ತಂದು ಬೆಸೆಯಿತು. ಶ್ರೀ ವಿಶ್ವೇಶ ತೀರ್ಥರು ಶ್ರೀ ವಿದ್ಯಾಮಾನ್ಯ ತೀರ್ಥರಲ್ಲಿಯೇ ವ್ಯಾಸಂಗಕ್ಕೆ ನಿಂತರು. ಭಂಡಾರಕೇರಿಯ ಗುರುಕುಲ ವಾಸ ಅವರ ಏಕಾಂತ ಚಿಂತನೆಗೆ, ಬ್ರಹ್ಮಚರ್ಯದ ಪಾಲನೆಗೆ ಮತ್ತು ಆಳವಾದ ಅಧ್ಯಯನಕ್ಕೆ ಉತ್ತಮ ವಾತಾವರಣವನ್ನು ಒದಗಿಸಿತು.
ಮಾಧ್ವ ವಿದ್ವಾಂಸರಲ್ಲಿಯೇ ಅಗ್ರಮಾನ್ಯರಾಗಿದ್ದ ಶ್ರೀವಿದ್ಯಾಮಾನ್ಯತೀರ್ಥರ ಮಾರ್ಗದರ್ಶನದಲ್ಲಿ ಶ್ರೀವಿಶ್ವೇಶತೀರ್ಥರ ಅಧ್ಯಯನ ಅಖಂಡವಾಗಿ ಸಾಗಿತು.
ಎಂಟು ವರ್ಷಗಳ ಅವಿಚ್ಛಿನ್ನ ಅಧ್ಯಯನದಲ್ಲಿ ವಿದ್ಯಾಮಾನ್ಯ ತೀರ್ಥರು ತನ್ನೆಲ್ಲ ಅರಿವನ್ನು ಇವರಿಗೆ ಧಾರೆಯೆರೆದರು. ವಿಶ್ವೇಶ ತೀರ್ಥರು ವಿದ್ಯೆಯ ಪರ್ವತವೇ ಆದರು. ಬಹಳ ಜನಕ್ಕೆ ತಿಳಿದಿಲ್ಲ; ಇಂದು ಶಾಸ್ತ್ರಪಾಂಡಿತ್ಯದಲ್ಲಿ ವಿಶ್ವೇಶ ತೀರ್ಥರ ಸಮಕ್ಕೆ ನಿಲ್ಲಬಲ್ಲ ಪೀಠಾಧಿಪತಿ ಇಡಿಯ ದೇಶದಲ್ಲಿ ಇನ್ನೊಬ್ಬನಿಲ್ಲ.
ವಿದ್ವತ್ ಪ್ರಕಾಶ
ಆಗ ಪೇಜಾವರ ಶ್ರೀಪಾದರಿಗೆ, ವಿಶ್ವೇಶ ತೀರ್ಥರಿಗೆ ೨೦ರ ಹಸಿಹಸೀ ಹರೆಯ. ೧೯೫೧ರಲ್ಲಿ ನಂಜನಗೂಡಿನಲ್ಲಿ ಆಗಮತ್ರಯ ವಿದ್ವಾಂಸರ ಸಮ್ಮೇಳನ ನಡೆಯಿತು. ಎಲ್ಲ ಪಂಡಿತರ ಒಮ್ಮತದಿಂದ ಆ ಸಮ್ಮೇಳನದ ಅಧ್ಯಕ್ಷತೆಯ ಹೊಣೆಯನ್ನು ಹೊಸ ಹರೆಯದ ವಿಶ್ವೇಶ ತೀರ್ಥರಿಗೆ ಒಪ್ಪಿಸಲಾಯಿತು.
ಆ ಸಭೆಯಲ್ಲಿ ಆಗಣ ಮೈಸೂರು ಅರಸರಾಗಿದ್ದ ದಿ. ಜಯಚಾಮರಾಜೇಂದ್ರ ಒಡೆಯರು ಉಪಸ್ಥಿತರಿದ್ದರು. ತರುಣ ಯತಿಯ ತೇಜಸ್ವಿತೆಗೆ, ಪಾಂಡಿತ್ಯಕ್ಕೆ ಮೆಚ್ಚಿದ ಒಡೆಯರು ಶ್ರೀಪಾದರನ್ನು ಅರಮನೆಗೆ ಕರೆಸಿ ಪೂಜೆ ಮಾಡಿಸಿದರು.
೧೯೫೨ ಜನವರಿ ೧೮ರಂದು, ೨೧ರ ಹರೆಯದಲ್ಲಿ ಮೊದಲ ಪರ್ಯಾಯ ಪೀಠಾರೋಹಣ, ಅನ್ನದಾನ – ಜ್ಞಾನದಾನಗಳಲ್ಲಿ ಸಾಟಿಯಿಲ್ಲದ ಪರ್ಯಾಯ. ಪರ್ಯಾಯದ ಅವಧಿಯಲ್ಲೇ ಮಾಧ್ವರೆಲ್ಲರ ಸಂಘಟನೆಗೆ ನಾಂದಿ ಹಾಡಿದ ಮಾಧ್ವ ತತ್ವಜ್ಞಾನ ಸಮ್ಮೇಳನ,
೧೯೫೬ ಜುಲೈ ೨೮, ಟೀಕಾಚಾರ್ಯರ ಪುಣ್ಯದಿನದಂದು ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠದ ಸ್ಥಾಪನೆ. 12 ವರ್ಷಗಳ ಕಾಲ ನಿರಂತರ ಶಾಸ್ತ್ರಾಧ್ಯಯನ ನಡೆಸುವ ಗುರುಕುಲದ ಮಾದರಿಯ ನಾಡಿನ ಹೆಮ್ಮೆಯ ಆಧ್ಯಾತ್ಮ ವಿದ್ಯಾಕೇಂದ್ರ. ಈ ೫೬ ವರ್ಷಗಳ ಹರವಿನಲ್ಲಿ ಈ ಸಂಸ್ಥೆಯಲ್ಲಿ ಕಲಿತು ಹೊರಬಂದ ಖ್ಯಾತ ವಿದ್ವಾಂಸರು ನೂರಾರು ಮಂದಿ.
ಇವೆಲ್ಲಾ ತರುಣ ಶ್ರೀಪಾದರ ಉತ್ತುಂಗ ಸಾಧನೆಯ ಕಿರೀಟಕ್ಕೊಂದು ಗರಿ. ಚಿನ್ನದಲ್ಲಿ ಕಂಪು ಸೇರಿದಂತೆ. ‘ಹೆಮ್ನಃ ಪರಮಾಮೋದಃ.’
೧೯೬೧, ಶ್ರೀಪಾದರಿಗೆ ೩೦ ನಡೆಯುತ್ತಿದೆ. ದಿಲ್ಲಿಯಲ್ಲಿ ವಿಶ್ವ ಕಲ್ಯಾಣ ಯಾಗದ ಸಂಭ್ರಮ. ಗುರು ವಿದ್ಯಾಮಾನ್ಯ ತೀರ್ಥರು ಏರ್ಪಡಿಸಿದ ಈ ಯಾಗದಲ್ಲಿ ಸಹಜವಾಗಿಯೇ ಶಿಷ್ಯ ವಿಶ್ವೇಶ ತೀರ್ಥ ಶ್ರೀಪಾದರು ಭಾಗವಹಿಸಿದ್ದರು.
ಯಾಗದಲ್ಲೊಂದು ವಿದ್ವತ್ ಸಭೆ. ಕಾಶಿಯ ಪ್ರಖಾಂಡ ಪಂಡಿತ ಷಡಂಗ ರಾಮಚಂದ್ರ ಶಾಸ್ತ್ರಿಗಳು ಆ ಸಭೆಯ ಮುಂದೆ ಒಂದು ಸಮಸ್ಯೆಯನ್ನಿಟ್ಟರು. ತರ್ಕಶಾಸ್ತ್ರದ ಅತ್ಯಂತ ಜಟಿಲವಾದ ಪ್ರಶ್ನೆ. ಪಂಡಿತರೆಲ್ಲ ಉತ್ತರ ಕಾಣದೆ ತತ್ತರಿಸಿದರು. ಉತ್ತರ ಸಿಗದೆ ಆ ದಿನ ಸಂದಿತು. ರಾಮಚಂದ್ರ ಶಾಸ್ತ್ರಿಗಳು ತನಗೆ ಸಾಟಿಯಿಲ್ಲ ಎಂದು ಬೀಗಿದರು. ಆ ಹಮ್ಮಿನಿಂದಲೇ ಶಾಸ್ತ್ರಿಗಳು ಮಾರನೆಯ ದಿನ ಸಭೆಗೆ ಆಗಮಿಸಿದರು. ಪೇಜಾವರ ಶ್ರೀಪಾದರು ಮುಂಜಾನೆಯ ಸಭೆಯಲ್ಲಿ ಆ ಸಮಸ್ಯೆಗೆ ಸೂಕ್ತ ಉತ್ತರ ನೀಡಿದರು. ಷಡಂಗರಿಗೆ ಅಚ್ಚರಿ ಅವರು ತೆಪ್ಪಗೆ ಶ್ರೀಪಾದರ ಕಾಲಿಗೆರಗಿದರು.
೧೯೬೫ರಲ್ಲಿ ಕೊಚ್ಚಿಯ ಮಹಾರಾಜರ ಭೇಟಿ. ಮಹಾರಾಜರು ದೊಡ್ಡ ಸಂಸ್ಕೃತ ವಿದ್ವಾಂಸರು. ನ್ಯಾಯ ಶಾಸ್ತ್ರದಲ್ಲಿ ವಿಶೇಷ ಪರಿಣತರು. ಅವರು ಪೇಜಾವರ ಶ್ರೀಪಾದರನ್ನು ವಾಕ್ಯಾರ್ಥಕ್ಕೆ ಆಹ್ವಾನಿಸಿದರು. ಮೊದಲು ನ್ಯಾಯ ಶಾಸ್ತ್ರದಲ್ಲಿ ಚರ್ಚೆ. ಅನಂತರ ದ್ವೈತಾದ್ವೈತ ವಿಮರ್ಶೆ. ಶ್ರೀಪಾದರ ಸಮರ್ಥನೆಗೆ ಮಹಾರಾಜರು ಮನಸೋತರು. ಅರಮನೆಯಲ್ಲಿ ಶೀಪಾದರನ್ನು ವೈಭವದಿಂದ ಸನ್ಮಾನಿಸಿ ಕಳಿಸಿಕೊಟ್ಟರು.
೧೯೬೬ರಲ್ಲಿ ಕಾಶಿಯಲ್ಲೊಂದು ವಿದ್ವತ್ ಸಭೆ. ಕಾಶಿ ತರ್ಕಪಂಡಿತರ ತವರೂರು. ಇಡಿಯ ದೇಶದಲ್ಲಿ ಖ್ಯಾತರಾದ ಮಹಾನ್ ಅದ್ವೈತ ವಿದ್ವಾಂಸ ಅನಂತಕೃಷ್ಣ ಶಾಸ್ತ್ರಿಗಳು, ಅಖಿಲ ಭಾರತ ಖ್ಯಾತಿಯ ಮಹಾ ತರ್ಕ ಪಂಡಿತ ರಾಜರಾಜೇಶ್ವರ ಶಾಸ್ತ್ರಿ ದ್ರಾವಿಡ ಮುಂತಾದ ದಿಗ್ಗಜರೊಡನೆ ಶಾಸ್ತ್ರಾರ್ಥ ಚರ್ಚೆ. ಸೋಲರಿಯದ ಪಂಡಿತರು, ವಯಸ್ಸಿನಲ್ಲಿ ಹಿರಿಯರು. ಅವರ ಮುಂದೆ ಉಡುಪಿಯಿಂದ ಬಂದ ೩೫ರ ತರುಣ ಯತಿ.
ಲೆಕ್ಕಾಚಾರ ತಲೆ ಕೆಳಗಾಯಿತು. ತಮ್ಮ ಭದ್ರಕೋಟೆಯಲ್ಲಿದ್ದ ದಿಗ್ಗಜಗಳೆಲ್ಲ ಈ ತರುಣ ಯತಿ ಸಿಂಹದ ಮುಂದೆ ಮಾತು ಮೂಕವಾಗಿ ತಲೆ ಬಾಗಿಸಿದರು. ಇದು ಒಂದೆರಡು ಉದಾಹರಣೆಯಷ್ಟೇ. ಇತರ ಮತದ ವಿದ್ವಾಂಸರು, ಯತಿಗಳು ಕೂಡಾ ಪೇಜಾವರ ಶ್ರೀಪಾದರ ಪಾಂಡಿತ್ಯಕ್ಕೆ ಮೆಚ್ಚಿ ಅವರ ಕೊರಳಿಗೆ ವಿಜಯಮಾಲೆ ತೊಡಿಸಿ ಸತ್ಕರಿಸಿದರು. ಪುಣೆ – ಪ್ರಯಾಗ ಮುಂತಾದ ಎಲ್ಲ ಕಡೆಯೂ, ಎಲ್ಲಾ ವಿದ್ವತ್ ಸಭೆಗಳಲ್ಲೂ ಶ್ರೀಪಾದರಿಗೇ ಜಯಭೇರಿ.
೧೯೬೮ ಜನವರಿ ೧೮ರಿಂದ, ೧೯೭೦ ಜನವರಿ ೧೭ರ ವರೆಗೆ ಎರಡನೆಯ ಶ್ರೀಕೃಷ್ಣ ಪೂಜಾ ಪರ್ಯಾಯ ಐತಿಹಾಸಿಕ ಪರ್ಯಾಯ. ಮೊದಲ ಪರ್ಯಾಯವನ್ನೂ ಮೀರಿ ನಿಂತ ಅದ್ದೂರಿಯ ಎರಡನೆಯ ಪರ್ಯಾಯ. ಕಲಾವಿದರ, ವಿದ್ವಾಂಸರ ಮನಸೂರೆಗೊಂಡ ಪರ್ಯಾಯ.
ಈ ಅವಧಿಯಲ್ಲೇ, ಪರ್ಯಾಯೋತ್ಸವದ ಸಂಭ್ರಮದಲ್ಲೇ, ಶ್ರೀಪಾದರು ಗೀತೆಯ ಕುರಿತು ನೀಡಿದ ಉಪನ್ಯಾಸ ಮಾಲಿಕೆ ಪುಸ್ತಕ ರೂಪದಲ್ಲಿ ಮೂಡಿ ಬಂತು: ‘ಗೀತಾ ಸಾರೋದ್ಧಾರ.’
ಈ ಪರ್ಯಾಯದ ಅವಧಿಯಲ್ಲೇ ೧೯೬೮ ಆಗಸ್ಟ್ ೧೮ರಂದು ಉಡುಪಿಯಲ್ಲಿ, ಕೃಷ್ಣನ ಸನ್ನಿಧಿಯಲ್ಲಿ, ಶ್ರೀಕೃಷ್ಣ ಉಚಿತ ಚಿಕಿತ್ಸಾಲಯದ ಉದ್ಘಾಟನೆ. ಬಡ ರೋಗಿಗಳಿಗೊಂದು ವರದಾನ. ಶ್ರೀಪಾದರ ಸಾಮಾಜಿಕ ಕಳಕಳಿಗೊಂದು ಅನನ್ಯ ನಿದರ್ಶನ. ಈ ಅವಧಿಯಲ್ಲೇ ಉಡುಪಿಯಲ್ಲಿ ಶ್ರೀಪಾದರ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮಹಾಸಮ್ಮೇಳನ ನಡೆಯಿತು. ಜನಸಾಗರವವೇ ಉಡುಪಿಯತ್ತ ಹರಿದುಬಂತು. ‘ಹಿಂದೂಗಳೆಲ್ಲ ಒಂದಾಗಿ ಬಂಧುಭಾವದಿಂದ ಬದುಕಬೇಕು’ ಎಂಬ ಸಂದೇಶವನ್ನು ಶ್ರೀಪಾದರು ಈ ವೇದಿಕೆಯಲ್ಲಿ ನೀಡಿದರು.
ದೀನದಲಿತರಿಗಾಗಿ ಮರುಗಿದ ಮನ
ಶ್ರೀಪಾದರನ್ನು ಬಾಲ್ಯದಿಂದ ಕಾಡುತ್ತಿದ್ದ ಸಮಸ್ಯೆ ಅಸ್ಪೃಶ್ಯತೆ. ಸಮಾಜದಲ್ಲಿ ಒಂದು ವರ್ಗವನ್ನು ಅಸ್ಪೃಶ್ಯರೆಂದು ಪರಿಗಣಿಸಿ ದೂರವಿಡುವುದರ ವಿರುದ್ಧ ಅವರ ಒಳಮನಸ್ಸು ಸಿಡಿದೇಳುತ್ತಲೇ ಇತ್ತು.
ಈ ಸಂದರ್ಭದಲ್ಲಿಯೇ ಗಾಂಧೀಜಿಯ ವಿಚಾರಧಾರೆ ಅವರ ಮೇಲೆ ಗಾಢವಾದ ಪ್ರಭಾವ ಬೀರಿತು. ಅಂದಿನಿಂದ, ಮಠದ ಯತಿಗಳು ಉತ್ಸವಗಳಲ್ಲಿ ಧರಿಸುತ್ತಿದ್ದ ಪಟ್ಟೆ ಪೀತಾಂಬರಗಳ ವೈಭವದ ಪೋಷಾಕನ್ನು ತೊರೆದು ಶುದ್ಧ ಖಾದಿಧಾರಿಯಾಗುವ ದೀಕ್ಷೆ ತೊಟ್ಟರು.
ಮಠದಲ್ಲಿ ಸ್ವಾಮಿಗಳಿಗೆ ಪ್ರತ್ಯೇಕ ಅಡುಗೆ ಮಾಡುವ ಪದ್ಧತಿಯನ್ನು ರದ್ದುಗೊಳಿಸಿದರು. ಎಲ್ಲರಿಗೂ ಬಡಿಸುವ ಅಡುಗೆಯನ್ನೇ ತಾನೂ ಉಂಡರು. ವೈಭವದ ಉತ್ತುಂಗ ಸ್ಥಿತಿಯಲ್ಲಿ ಸರಳತೆಯ ಸಾಕಾರ ಮೂರ್ತಿಯಾಗಿ ನಿಂತರು.
ಜಾತಿಯ ಬಗ್ಗೆ ಆಚಾರ್ಯ ಮಧ್ವರ ಹೇಳಿಕೆ ಅವರಲ್ಲಿ ಕ್ರಾಂತಿಯ ಕಿಡಿಯನ್ನು ಮೂಡಿಸಿತು. ೧೩ನೆಯ ಶತಮಾನದಷ್ಟು ಹಿಂದೆಯೇ ಅಚಾರ್ಯ ಮಧ್ವರು ಸಾರಿದ್ದರು
‘ಯೋನಿಭೇದಕೃತೋ ಭೇದೋ ಜ್ಞೇಯ ಔಷಾಧಿಕಸ್ತ್ವಯಮ್!’
ತಂದೆ-ತಾಯಿಯ ಜಾತಿಯಿಂದ ಮಗನ ಜಾತಿಯನ್ನು ನಿರ್ಧರಿಸುವುದು ಕೇವಲ ಸಾಮಾಜಿಕ ಪದ್ಧತಿ ಮಾತ್ರ. ಅಧ್ಯಾತ್ಮದಲ್ಲಿ ಅದಕ್ಕೆ ಸ್ಥಾನವಿಲ್ಲ. ಅಧ್ಯಾತ್ಮದ ಸಾಧನೆಯಲ್ಲಿ ಮುಖ್ಯವಾಗುವುದು ವ್ಯಕ್ತಿಯ ಸ್ವಭಾವಗುಣ ಮಾತ್ರ. ಜಾತಿಯಲ್ಲಿ ಶೂದ್ರನ ಮಗ ಸ್ವಭಾವದಲ್ಲಿ ಬ್ರಾಹ್ಮಣನಿರಬಹುದು, ಜಾತಿಯಲ್ಲಿ ಬ್ರಾಹ್ಮಣನ ಮಗ ಸ್ವಭಾವದಲ್ಲಿ ಶೂದ್ರನಿರಬಹುದು.
ಅಚಾರ್ಯ ಮಧ್ವರ ಈ ಕ್ರಾಂತಿಕಾರಿ ಹೇಳಿಕೆ ಶ್ರೀಪಾದರ ಮನದಲ್ಲಿ ಗಾಢವಾಗಿ ಬೇರೂರಿತು. ಏಳು ಶತಮಾನಗಳ ಹಿಂದೆ ಸಾರಿದ ಈ ಸಂದೇಶ ಇವತ್ತಿಗೂ ಬರಿಯ ಪುಸ್ತಕದ ಮಾತಾಗಿ ಉಳಿದಿದೆ.
ಮನಸ್ಸು ಬಂಡಾಯವೇಳುತ್ತದೆ, ಆದರೆ ಸಂಪ್ರದಾಯದ ಚೌಕಟ್ಟಿನ ದಿಗ್ಬಂಧನದಲ್ಲಿ ಬಡಭಡಿಕೆಯ ಹಿಂದೆ ಮಡುಗಟ್ಟಿರುವುದು ಈ ಭಯವೇ!
೪೦ ವರ್ಷಗಳ ಹಿಂದೆ ಪ್ರಾರಂಭಿಸಿದ್ದ ಈ ಕಾರ್ಯ ಹಾಗೆಯೇ ಮುಂದುವರೆದಿದ್ದರೆ ಏನೆಲ್ಲಾ ಅದ್ಭುತವನ್ನು ಸಾಧಿಸಬಹುದಿತ್ತು. ಈ ಸನಾತನಿಗಳು ಮತ್ತು ವಿಚಾರವಾದಿಗಳು ಸೇರಿ ಒಂದು ಅಧ್ಬುತ ಕ್ರಾಂತಿಯ ಸಾಧ್ಯತೆಯನ್ನೇ ಹೊಲೆಗೆಡಿಸಿಬಿಟ್ಟರು.
೪೦ ವರ್ಷಗಳ ಹಿಂದೆ ಶ್ರೀಪಾದರು ಮೊದಲು ಹರಿಜನ ಕೇರಿಗೆ ಹೋದಾಗ ಬಂದ ಟೀಕೆಗಳಿಗೆ ನೊಂದ ಶ್ರೀಪಾದರು ಅಂದು ನನ್ನ ಬಳಿ ಹೇಳಿಕೊಂಡದ್ದು ಈಗಲೂ ನನ್ನ ಕಿವಿಯಲ್ಲಿ ರಣರಣಿಸುತ್ತಿದೆ ಎನ್ನುತ್ತಾರೆ ಆಚಾರ್ಯ ಬನ್ನಂಜೆ ಗೋವಿಂದಾಚಾರ್ಯರು –
“ತಪ್ಪು ಅರ್ಥ ಹಚ್ಚಿ ನನ್ನ ಪ್ರಾಮಾಣಿಕತೆಯನ್ನೇ ಪ್ರಶ್ನಿಸಲಾಗುತ್ತಿದೆ. ಇದರಿಂದ ನನಗೆ ತುಂಬಾ ನೋವಾಗಿದೆ. ಇದು ಹೀಗೆಯೇ ಮುಂದುವರಿದರ ನಾನು ಪೀಠ ತ್ಯಾಗ ಮಾಡಿ, ಬಿಡಿ ಸನ್ಯಾಸಿಯಾಗಿ ಬದುಕುತ್ತೇನೆ. ಹರಿದ್ವಾರದಲ್ಲೋ ಹೃಷಿಕೇಶದಲ್ಲೋ ಒಂದು ಪುಟ್ಟ ಗುಡಿಸಲು ಕಟ್ಟಿಕೊಂಡು ಇದ್ದು ಬಿಡುತ್ತೇನೆ.”
ಹಾಗೆ ನಡೆಯಲಿಲ್ಲ. ಶೀಪಾದರ ಪ್ರೀತಿಯ ಗುರುಗಳಾದ ಶ್ರೀ ವಿದ್ಯಾಮಾನ್ಯ ತೀರ್ಥರೆ ಅವರನ್ನು ಕರೆಸಿಕೊಂಡರು. ‘ನೀವು ಮಾಡಿದ ಕೆಲಸ ಶಾಸ್ತ್ರೀಯವಾಗಿದೆ. ದಲಿತರಿಗೂ ಹರಿಭಕ್ತಿಯ ಸಂದೇಶ ನೀಡಿದಿರಿ. ಇದು ಪುಣ್ಯದ ಕೆಲಸ’ ಎಂದು ಪ್ರೀತಿಯಿಂದ ಹರಸಿ ಸಂತೈಸಿದರು.
ಧಾರ್ಮಿಕ ಕ್ರಿಯೆ
ಶ್ರೀಪಾದರು ಹೀಗೆ ತಮ್ಮನ್ನು ಸಾರ್ವಜನಿಕವಾಗಿ ತೊಡಗಿಸಿಕೊಂಡರೂ ಯತಿ ಧರ್ಮದ ಯಾವ ನಿಯಮವನ್ನೂ ಕೈ ಬಿಟ್ಟವರಲ್ಲ. ಅಖಂಡವಾದ ಬ್ರಹ್ಮಚರ್ಯೆ, ನಿತ್ಯವೂ ಪ್ರಣವ ಜಪ, ಸಂಸ್ಥಾನದ ಮೂರ್ತಿಗಳ ಪೂಜೆ, ವಿದಾರ್ಥಿಗಳಿಗೆ ವೇದಾಂತ ಗ್ರಂಥಗಳ ಪಾಠ ಪ್ರವಚನ – ಇವು ಅವರ ಜೀವನದ ಅವಿಭಾಜ್ಯ ಅಂಗಗಳಾಗಿ ನಿರಂತರ ನಡೆಯುತ್ತಿವೆ.
ಪೂರ್ಣಪ್ರಜ್ಞ ವಿದ್ಯಾಪೀಠ
ಅವರ ನಿರಂತರ ಓಡಾಟದ ನಡುವೆ 1978ರಲ್ಲಿ ಪೂರ್ಣಪ್ರಜ್ಞಾ ವಿದ್ಯಾ ಪೀಠದ ರಜತೋತ್ಸವವನ್ನು ತಾನೇ ನಿಂತು ವೈಭದಿಂದ ನೆರವೇರಿಸಿದರು.
ಸರ್ವಧರ್ಮ ಸಮಭಾವ
ತನ್ನ ಮೂರನೆಯ ಪರ್ಯಾಯದ ಅವಧಿಯಲ್ಲಿ ರಂಜಾನ್ ಆಚರಣೆಯನ್ನು ಉಡುಪಿಯ ರಾಜಾಂಗಣದಲ್ಲಿ ನಡೆಸಿ, ಸರ್ವಧರ್ಮ ಸಮಭಾವಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟವರು ಪೇಜಾವರ ಶ್ರೀಪಾದರು.
ಕಡೆಯ ದಿನಗಳು
ವಿಶ್ವೇಶ ತೀರ್ಥರು  ಡಿಸೆಂಬರ್ 20 ರಂದು ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ)  ಆಸ್ಪತ್ರೆಗೆ ದಾಖಲಾಗಿದ್ದರು, ಅನಾರೋಗ್ಯಕ್ಕೆ ತುತ್ತಾದ ಅವರು ಜಿ ಉಸಿರಾಟದಲ್ಲಿ ತೀವ್ರ ತೊಂದರೆ ಅನುಭವಿಸಿದ್ದರು
ಡಿಸೆಂಬರ್ 27 ರಂದು, ವೈದ್ಯರು ಬುಲೆಟಿನ್ ಅನ್ನು ಬಿಡುಗಡೆ ಮಾಡಿ ಮೆದುಳಿನ ಕಾರ್ಯವು ಕ್ಷೀಣಿಸುತ್ತಿದೆ ಎಂದು ಹೇಳಿದರು. ಡಿಸೆಂಬರ್ 29 ರ ಮುಂಜಾನೆ, ಪವಿತ್ರ ಮಠದಲ್ಲಿ ಕೊನೆಯ ಕ್ಷಣಗಳನ್ನು ಕಳೆಯಬೇಕೆಂಬ  ಅವರ ಇಚ್ಚೆಯಂತೆ ಅವರನ್ನು ಪೇಜಾವರ ಮಠಕ್ಕೆ ಸ್ಥಳಾಂತರಿಸಲಾಯಿತು.
ಅದೇ ದಿನ  ಸ್ವಾಮೀಜಿ ನಿಧನರಾದರು. ಸರ್ಕಾರ ಶ್ರೀಗಳ ನಿಧನಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿತು. ಆ ನಂತರ ಸ್ವಾಮೀಜಿಯ  ಮೃತ ಶರೀರವನ್ನು ಸಕಲ ಸರ್ಕಾರಿ ಗೌರವದೊಂದಿಗೆ ಬೆಂಗಳೂರಿನ ವಿದ್ಯಾಪೀಠದಲ್ಲಿ ಸಮಾಧಿ ಮಾಡಲಾಯಿತು ಬಳೀಕ ಅದರ ಮೇಲೆ ಬೃಂದಾವನ ಪ್ರತಿಷ್ಠಾಪನೆ ನೆರವೇರಿತು,

ಉಪಸಂಹಾರ

ಇಲ್ಲಿ ಹೇಳೀರುವವರಷ್ಟೇ ಅಲ್ಲದೆ ಇನ್ನೂ ಅನೇಕ ಮಹನೀಯರು, ಆದ್ಯಾತ್ಮ ಮೇರು ಸಾಧಕರು ಕರ್ನಾಟಕದಲ್ಲಿ ಆಗಿ ಹೋಗಿದ್ದಾರೆ. ಅವರ ಕುರಿತಂತೆ ಕಾಲ ಕಾಲಕ್ಕೆ ಮುಂದಿನ ದಿನಗಳಲ್ಲಿ ತಿಳಿಸುವೆ.