Saturday, November 07, 2020

ರಾಜ್ಯೋತ್ಸವ ವಿಶೇಷ: ತಾಯಿ ಭಾರತಿಗಾಗಿ ಪ್ರಾಣಪಣಕ್ಕಿಟ್ಟ ಕೆಚ್ಚೆದೆಯ ಕರುನಾಡ ಕಲಿಗಳು!!

ಕರ್ನಾಟಕ ರಾಜ್ಯೋತ್ಸವ ಆಚರಣೆ ಹಿನ್ನೆಲೆ ನವೆಂಬರ್ ತಿಂಗಳನ್ನು ಕನ್ನಡ ಮಾಸ ಎಂದು ಆಚರಿಸಿ ಸಂಭ್ರಮಿಸುವುದು ವಾಡಿಕೆ. ಈ ಹಿನ್ನೆಲೆ ಭಾರತೀಯ ಸೇನಾಪಡೆಗಳಲ್ಲಿ ಸೇವೆ ಸಲ್ಲಿಸಿ ದೇಶರಕ್ಷಣೆಗಾಗಿ ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿದ ಕೆಲ ಮಹಾನ್ ಕನ್ನಡಿಗರನ್ನು ಪರಿಚಯಿಸುವ ಚಿಕ್ಕ ಪ್ರಯತ್ನವಿದು-

ಸ್ಕ್ವಾಡ್ರನ್ ಲೀಡರ್ ಅಜ್ಜಮದ ಬೊಪ್ಪಯ್ಯ ದೇವಯ್ಯ
ಕೊಡಗಿನ ವೀರ ಸ್ಕ್ವಾಡ್ರನ್ ಲೀಡರ್ ಅಜ್ಜಮದ ಬೊಪ್ಪಯ್ಯ ದೇವಯ್ಯ ಮರಣೋತ್ತರವಾಗಿ ಮಹಾ ವೀರ್ ಚಕ್ರ(ಎಂವಿಸಿ) ಪ್ರಶಸ್ತಿ ಪಡೆದ ಏಕೈಕ ಭಾರತೀಯ ವಾಯುಪಡೆಯ ಅಧಿಕಾರಿ. 'ವಿಂಗ್ಸ್ ಆಫ್ ಫೈರ್' ಎಂದು ಕರೆಸಿಕೊಳ್ಳುತ್ತಿದ್ದ ಇವರು, 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ತೋರಿದ ಅಪ್ರತಿಮ ಶೌರ್ಯಕ್ಕೆ 1988ರಲ್ಲಿ ಮರಣೋತ್ತರವಾಗಿ ಎಂವಿಸಿ ನೀಡಲಾಯಿತು
ಮಹಾವೀರ ಚಕ್ರ ಯುದ್ಧ ಕಾಲದ ಶೌರ್ಯ ಪುರಸ್ಕಾರದಲ್ಲಿ ಎರಡನೇ ಅತ್ಯುನ್ನತ ಪ್ರಶಸ್ತಿಯಾಗಿದೆ. . 1965 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ, ದೇವಯ್ಯಅವರು ಶತ್ರು ವಿಮಾನ್ ಮೇಲೆ ದಾಳಿ ಮಾಡಿದ್ದ ವೇಳೆ ನಡೆದ ಸ್ಟ್ರೈಕ್ ಮಿಷನ್ ನ ಬಾಗವಾಗಿದ್ದರು. ಅವರು ಶತ್ರುಗಳ ವಿಮಾನ ಹೊಡೆದುರುಳಿಸಿದ್ದರು, ಆ ವೇಳೆ ಅವರಿದ್ದ ವಿಮಾನಕ್ಕೂ ಹಾನಿಯಾಗಿತ್ತು.ಜತೆಗೆ ಅವರು ಸಹ ನಾಪತ್ತೆಯಾಗಿದ್ದರು. ಬಹುಶಃ ಅವರು ಪಾಕಿಸ್ತಾನದ ಭಾಗದಲ್ಲಿ ಬಿದ್ದು ಸಾವನ್ನಪ್ಪಿದ್ದರು. 23 ವರ್ಷಗಳ ನಂತರ, 1988 ರಲ್ಲಿ, 1965ರ ಈ "ಹೀರೋ"ಗೆ ಮರಣೋತ್ತರವಾಗಿ ಮವೀರಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದೇವಯ್ಯ ಅವರು ಡಿಸೆಂಬರ್ 24, 1932 ರಂದು ಕರ್ನಾಟಕದ ಕೊಡಗಿನಲ್ಲಿ ಜನಿಸಿದರು. ಅವರು ಡಾ. ಬೋಪಯ್ಯ ಅವರ ಮಗ. 1954 ರಲ್ಲಿ ಅವರನ್ನು ಭಾರತೀಯ ವಾಯುಪಡೆಗೆ ಪೈಲಟ್ ಆಗಿ ನಿಯೋಜಿಸಲಾಯಿತು 1965 ರ ಯುದ್ಧ ಪ್ರಾರಂಭವಾದಾಗ, ಅವರು ವಾಯುಪಡೆಯ ಫ್ಲೈಯಿಂಗ್ ಕಾಲೇಜಿನಲ್ಲಿ ಬೋಧಕರಾಗಿದ್ದರು. ಅವರನ್ನು ನಂ .1 "ಟೈಗರ್ಸ್" ಸ್ಕ್ವಾಡ್ರನ್‌ಗೆ ನೇಮಿಸಲಾಯಿತು. ಈ ವೇಳೆ ಅವರು  Mystere IVa ಫೈಟರ್ ಬಾಂಬರ್ ಆಗಿದ್ದರು.
ಹಿರಿಯ ವೈಮಾನಿಕ ಕ್ಷೇತ್ರದ ಬೋಧಕರಾಗಿ, ಸ್ಕ್ವಾಡ್ರನ್ ಲೀಡರ್ ದೇವಯ್ಯ ಅವರು ಏರ್ಕ್ರಾಫ್ಟ್ ಸ್ಟ್ರೈಕ್ಕಾರ್ಯಾಚರಣೆಯ ಭಾಗವಾಗಿದ್ದರು, ಅದು ಪಾಕಿಸ್ತಾನದ ಸರ್ಗೋಧಾ ವಾಯುನೆಲೆಯತ್ತ ಸಾಗಿತ್ತು.. ಮೊದಲ 12 ವಿಮಾನಗಳಲ್ಲಿ ಒಂದನ್ನು ಕೈಬಿಟ್ಟರೆ ನಿಜವಾಗಿ ಸ್ಟ್ಯಾಂಡ್‌ಬೈ ಆಗಿದ್ದವರು ದೇವಯ್ಯ ಮಾತ್ರ. ಈ ವೇಳೆ . ಪಾಕಿಸ್ತಾನದ ಪೈಲಟ್  ಹಾರಿಸಿದ ಪಿಎಎಫ್ ಎಫ್ -104 ಸ್ಟಾರ್‌ಫೈಟರ್‌ನಿಂದ ದೇವಯ್ಯ ಯಶಸ್ವಿಯಾಗಿ ಪಾರಾದರು. ಆದರೆ ವೇಗದ ವಿಮಾನವು ಅವರ ವಿಮಾನವನ್ನು ಹಾನಿಗೊಳಿಸಿತ್ತು.ಆದರೂ ದೇವಯ್ಯ ಸ್ಟಾರ್‌ಫೈಟರ್ ಮೇಲೆ ದಾಳಿ ಂಆಡಿ ಹೊಡೆದುರುಳಿಸಿದ್ದರು ಆದರೆ ಈ ದಾಳಿಯ ವೇಳೆ ದೇವಯ್ಯನವರಿಗೇನಾಗಿತ್ತು ತಿಳೀಯಲಿಲ್ಲ, ಬಹುಶಃ ದೇವಯ್ಯ ಪಾಕಿಸ್ತಾನ ಭಾಗದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ಕೆ.ಎಂ.ಕಾರಿಯಪ್ಪ
ಫೀಲ್ಡ್ ಮಾರ್ಷಲ್ ಕೊಡಂದೆರ ಮಾದಪ್ಪ ಕಾರಿಯಪ್ಪ ನಾಡಿನ ಹೆಮ್ಮೆಯ ಕೊಡಗಿನ ವೀರ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ (ಕೊಡಂದೆರ ಮಾದಪ್ಪ ಕಾರಿಯಪ್ಪ)! ಭಾರತದ ಸೇನೆಯ ಪ್ರಥಮ ದಂಡನಾಯಕರಾಗಿದ್ದರು ಮತ್ತು ಫೀಲ್ಡ್ ಮಾರ್ಷಲ್ (ಮಹಾದಂಡನಾಯಕ) ಪದವಿಯನ್ನು ಪಡೆದ ಮೊದಲಿಗರು!
ಕೊಡಂದೆರ ಮಾದಪ್ಪ ಕಾರಿಯಪ್ಪ ೨೮ನೆಯ ಜನವರಿ, ೧೮೯೯ರಂದು ಕೊಡಗಿನ ಶನಿವಾರಸಂತೆಯಲ್ಲಿ ಜನಿಸಿದರು. (ಆದರೆ ಸೈನ್ಯದ ದಾಖಲೆಗಳ ಪ್ರಕಾರ ಅವರು ಹುಟ್ಟಿದ ವರ್ಷ ೧೯೦೦ ಎಂದಿದೆ.)[೪].ಇವರು ಕೊಡವ ಜನಾಂಗದವರಾಗಿದ್ದು, ಕೊಡಂದೆರ ಮನೆತನಕ್ಕೆ ಸೇರಿದವರು.
ತಂದೆ ಮಾದಪ್ಪನವರು ಕಂದಾಯ ಇಲಾಖೆ ಯಲ್ಲಿದ್ದರು. ಕಟ್ಟುನಿಟ್ಟಾಗಿ ಶಿಸ್ತನ್ನು ಪಾಲಿಸುವವರು. ತಾಯಿ ಕಾವೇರಿ. ಕಾರ್ಯಪ್ಪನವರು ತಮ್ಮ ಕೊನೆಯುಸಿರಿನವರೆಗೂ ಇವರಿಬ್ಬರನ್ನೂ ದೇವರಂತೆ ಪೂಜಿಸಿದರು. ಸಂಬಂಧಿಗಳಿಗೆಲ್ಲ 'ಚಿಮ್ಮ'ನಾಗಿದ್ದ ಕಾರಿಯಪ್ಪನವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಡಿಕೇರಿಯ ಕೇಂದ್ರಿಯ ಪ್ರೌಢ ಶಾಲೆಯಲ್ಲಾಯಿತು. ನಂತರ ಮದ್ರಾಸಿನ ಪ್ರೆಸಿಡೆನ್ಸಿ ಕಾಲೆಜಿನಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದರು.
ಕಾಲೆಜಿನಲ್ಲಿ ಪುಸ್ತಕಗಳು ಮತ್ತು ಖ್ಯಾತ ಶಿಕ್ಷಣ ತಜ್ಞರ ನೇತೃತ್ವದಲ್ಲಿ ನಡೆಯುತ್ತಿದ್ದ ನಾಟಕಗಳು ಕಾರಿಯಪ್ಪನವರನ್ನು ಒಂದೇ ರೀತಿಯಿಂದ ಆಕರ್ಷಿಸಿದವು. ಇವರು ಸಕ್ರಿಯ ಕ್ರೀಡಾಪಟುವಾಗಿದ್ದು, ಹಾಕಿ ಮತ್ತು ಟೆನ್ನಿಸ್‌ನಂಥ ಆಟಗಳನ್ನು ಹುರುಪಿನಿಂದ ಮತ್ತು ಜಾಣತನದಿಂದ ಆಡುತ್ತಿದ್ದರು. ಇದರ ಜೊತೆಗೆ ಸಂಗೀತವನ್ನು ಮೆಚ್ಚುತ್ತಿದ್ದರು ಮತ್ತು ಕೈ ಚಳಕ ತೋರಿಸುವ ಜಾದುವಿನ ಬಗ್ಗೆಯೂ ಇವರಿಗೆ ಒಲವಿತ್ತು.
೧೯೧೮ರಲ್ಲಿ ಮೊದಲನೆಯ ವಿಶ್ವಯುದ್ಧ ಮುಗಿದಾಗ ಭಾರತದ ರಾಜಕೀಯ ನಾಯಕರು ಭಾರತೀಯರನ್ನೂ ರಾಜನ ಸೈನ್ಯದಲ್ಲಿ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸತೊಡಗಿದರು. ಇದರ ನಂತರ ನಡೆದ ಕಠಿಣ ಪರೀಕ್ಷೆಗಳ ನಂತರ ಆಯ್ಕೆಯಾದ ಕೆಲವೇ ಭಾಗ್ಯಶಾಲಿಗಳಲ್ಲಿ ಕಾರಿಯಪ್ಪನವರೂ ಕೂಡ ಒಬ್ಬರಾಗಿದ್ದರು, ನಂತರ ಸೇನೆಯ ನಿಯುಕ್ತಿಯ ಮುಂಚಿನ ಕಠಿಣತರವಾದ ತರಬೇತಿಯನ್ನು ಪಡೆದರು.
ಇಂದೂರಿನ ಡ್ಯಾಲಿ ಕೆಡೆಟ್ ಕಾಲೇಜ್‌(The Daly College)ನಲ್ಲಿ ಬ್ರಿಟಿಶ್ ರಾಜನ ಸೈನ್ಯಕ್ಕೆ ನಿಯುಕ್ತರಾದ ಭಾರತೀಯ ಅಧಿಕಾರಿಗಳ [KCIOs (King's Commissioned Indian Officers)] ಮೊದಲ ವರ್ಗಕ್ಕೆ ಸೇರಿಕೊಂಡರು. ನಂತರ ೧ನೇ ಡಿಸೆಂಬರ್ ೧೯೧೯ರಲ್ಲಿ ಮುಂಬಯಿಯಲ್ಲಿದ್ದ ೨ನೇ ಬೆಟ್ಯಾಲಿಯನ್ ೮೮ನೇ ಕಾರ್ನಾಟಿಕ್ (ಕೊಡಗು) ಪದಾತಿ ದಳಕ್ಕೆ ನಿಯುಕ್ತರಾದರು.
ಮೂರು ತಿಂಗಳ ನಂತರ ೨/೧೨೫ನೇಪಿಯರ್ ರೈಫ್‌ಲ್ಸ್ (ಸ್ವಾತಂತ್ರ್ಯಾನಂತರ ೫ನೇ ರಜಪುತಾನ ರೈಫ್‌ಲ್ಸ್)ಗೆ ವರ್ಗಾವಣೆಯಾಗಿ, ಮೆಸೊಪೊಟಾಮಿಯಾ (ಈಗಿನ ಇರಾಕ್)ದಲ್ಲಿ ನೇಮಕಗೊಂಡರು. ಅಲ್ಲಿ ಇದ್ದ ಎರಡು ವರ್ಷಗಳಲ್ಲಿ ಬಂಡುಗೋರರನ್ನು ಹತೋಟಿಗೆ ತರುವುದರಲ್ಲಿ ಸಫಲರಾದರು.
ತದ ನಂತರ ಭಾರತಕ್ಕೆ ಮರಳಿ ಬಂದು, ವಾಯವ್ಯ ಗಡಿ ಪ್ರದೇಶ(North-west Frontier Province)ದ ಅಫಘಾನಿಸ್ಥಾನದ ಸರಹದ್ದಿನ ವಜೀರಿಸ್ತಾನದಲ್ಲಿದ್ದ (ಈಗ ಪಾಕಿಸ್ತಾನದಲ್ಲಿದೆ) ವೇಲ್ಸ್ ರಾಜಕುಮಾರನ ಸ್ವಂತ ೭ನೇ ಡೊಗ್ರಾ ದಳದಲ್ಲಿ ಸೈನ್ಯದ ಸಕ್ರಿಯ ಸೇವೆಯನ್ನು ಮುಂದುವರೆಸಿದರು.
ಮರುಭೂಮಿಯಂಥ ವಿಪರೀತ ಹವಾಮಾನವಿರುವ ಆ ಪ್ರದೇಶದಲ್ಲಿ ಲೆಫ್ಟಿನೆಂಟ್ ಕಾರ್ಯಪ್ಪನವರು, ದೂರದರ್ಶಕ ಯಂತ್ರವಿಲ್ಲದಿರುವ ಕೋವಿ(non-telescopic rifles)ಗಳಿಂದ ಶತ್ರುವಿನ ಎರಡೂ ಕಣ್ಣುಗಳ ಮಧ್ಯಕ್ಕೆ ಗುಂಡು ಹೊಡೆಯುವ ನೈಪುಣ್ಯವಿರುವ ಪಠಾಣರ ವಿರುದ್ಧ ಹೋರಾಡಿ ಜಯಶೀಲರಾದರು. ಅತೀವ ಪ್ರತಿಕೂಲ ಪರಿಸ್ಥಿತಿಗಳಲ್ಲಿ, ಅನಾಗರಿಕ ಬಂಡುಕೋರರ ಗೆರಿಲ್ಲಾ ಆಕ್ರಮಣಗಳನ್ನು ಎದುರಿಸಿ ಕಾರ್ಯಪ್ಪನವರು ಗಳಿಸಿದ ವಿಜಯಶ್ರೀ ಬ್ರಿಟಿಶ್ ಸೈನ್ಯದ ಮೇಲಧಿಕಾರಿಗಳ ಮೆಚ್ಚುಗೆಯನ್ನು ಪಡೆಯಿತು.
ಇದು ಸೈನ್ಯದಲ್ಲಿ ಅವರ ಏಳಿಗೆಗೆ ಪ್ರೋತ್ಸಾಹದಾಯಕವಾಯಿತು. ಅಲ್ಲಿಂದ ಇವರನ್ನು ೧/೭ನೇ ರಜಪೂತ ರೆಜಿಮೆಂಟ್‌ಗೆ (ವಿಕ್ಟೊರಿಯಾ ರಾಣಿಯ ಸ್ವಂತ ಲಘು ಪದಾತಿದಳಕ್ಕೆ) ವರ್ಗಾಯಿಸಲಾಯಿತು. ಈ ದಳವೇ ಇವರು ಸೈನ್ಯದಿಂದ ನಿವೃತ್ತಿಯಾಗುವವರೆಗೆ ಇವರ ಮೂಲ ನೆಲೆಯಾಯಿತು. ಇರಾಕ್ ಮತ್ತು ವಜೀರಿಸ್ತಾನದಲ್ಲಿ ನಡೆಸಿದ ಸೈನ್ಯ ಕಾರ್ಯಾಚರಣೆಯ ಅನುಭವವು ಇವರ ಮುಂದಿನ ಜೀವನದ ಶೌರ್ಯ-ಸಾಹಸಗಳಿಗೆ ಅಡಿಪಾಯವನ್ನು ರಚಿಸಿತು.
ವಝಿರಿಸ್ತಾನದಲ್ಲಿ ತಮ್ಮ ಸೈನಿಕ ಜೀವನದ ಅನೇಕ ವರ್ಷಗಳನ್ನು ಕಳೆದರು. ೧೯೩೩ರಲ್ಲಿ ಕ್ವೆಟ್ಟಾದಲ್ಲಿದ್ದ ಸಿಬ್ಬಂದಿ ಮಹಾವಿದ್ಯಾಲಯಕ್ಕೆ ತರಬೇತಿ ಪಡೆಯಲು ಸೇರಿದ ಮೊದಲ ಭಾರತೀಯ ಅಧಿಕಾರಿಯಾಗಿದ್ದರು. ಮುಂದೆ ೧೯೪೬ರಲ್ಲಿ ಇವರಿಗೆ ಫ್ರಂಟೀಯರ ಬ್ರಿಗೆಡ್ ಗುಂಪಿನ ಬ್ರಿಗೆಡಿಯರರಾಗಿ ಬಡ್ತಿ ಕೊಡಲಾಯಿತು. ಇದೇ ಅವಧಿಯಲ್ಲಿ ಕರ್ನಲ್ ಅಯೂಬ್ ಖಾನ್ (ಮುಂದೆ ಇವರು ಪಾಕಿಸ್ತಾನದ ಸೈನ್ಯದ ಫೀಲ್ಡ ಮಾರ್ಷಲ್ ಮತ್ತು ೧೯೬೨ರಿಂದ ೧೯೬೯ರವರೆಗೆ ರಾಷ್ಟ್ರಪತಿಯಾಗಿದ್ದರು) ಕಾರ್ಯಪ್ಪನವರ ಅಧೀನ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.
೧೯೪೧-೪೨ರ ಅವಧಿಯಲ್ಲಿ ಕಾರಿಯಪ್ಪನವರು ಇರಾಕ್, ಸಿರಿಯಾ ಮತ್ತು ಇರಾನ್ ದೇಶಗಳಲ್ಲಿ ಮತ್ತು ೧೯೪೩-೪೪ರಲ್ಲಿ ಬರ್ಮಾದಲ್ಲಿ ಸೇವೆ ಸಲ್ಲಿಸಿದರು. ವಝಿರಿಸ್ತಾನದಲ್ಲಿ ತಮ್ಮ ಸೈನಿಕ ಜೀವನದ ಅನೇಕ ವರ್ಷಗಳನ್ನು ಕಳೆದರು. ೧೯೪೨ರಲ್ಲಿ ಒಂದು ತುಕಡಿಯನ್ನು ಇವರ ಸ್ವಾಧೀನಕ್ಕೆ ಒಪ್ಪಿಸಲಾಯಿತು, ಅಂತಹ ಅಧಿಕಾರ ದೊರಕಿದ ಮೊದಲ ಭಾರತೀಯ ಅಧಿಕಾರಿ ಇವರಾಗಿದ್ದರು.
ಸ್ವಲ್ಪ ಸಮಯದ ನಂತರ ಬರ್ಮಾದಿಂದ ಜಪಾನೀಯರನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದ ೨೬ನೆಯ ಡಿವಿಜನ್ನಿನಲ್ಲಿ ಕೆಲಸ ನಿರ್ವಹಿಸುವ ಸ್ವಯಂ ಇಚ್ಛೆ ವ್ಯಕ್ತಪಡಿಸಿ ಆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದಾಗ ಅವರಿಗೆ ಆರ್ಡರ್ ಆಫ್ ಬ್ರಿಟಿಷ್ ಎಂಪೈರ (Order of the British Empire (OBE)) ಪ್ರಶಸ್ತಿಯನ್ನು ೧೯೪೪ರಲ್ಲಿ ಕೊಡಲಾಯಿತು.
೧೯೪೬ರಲ್ಲಿ ಕಾರ್ಯಪ್ಪನವರಿಗೆ ಬ್ರಿಗೇಡಿಯರನ್ನಾಗಿ ಬಡ್ತಿಯನ್ನು ನೀಡಿ, ನಾಲ್ಕನೆಯ ಬಾರಿಗೆ ವಾಯವ್ಯ ಗಡಿ ಪ್ರದೇಶದಲ್ಲಿ ನೇಮಿಸಲಾಯಿತು. ಈ ಬಾರಿಗೆ ಬನ್ನು ಬ್ರಿಗೇಡಿನ ನಾಯಕತ್ವವನ್ನು ಕೊಡಲಾಯಿತು.
೧೯೪೭ರಲ್ಲಿ ಯುನೈಟೆಡ್ ಕಿಂಗಡಮ್‌‌ನ ಕಿಂಬೆರ್ಲಿಯಲ್ಲಿರುವ ಇಂಪೆರಿಯಲ್ ಡಿಫೆನ್ಸ್ ಕಾಲೇಜಿನಲ್ಲಿ ಯುದ್ಧದ ಉನ್ನತ ಮಟ್ಟದ ತಂತ್ರಗಳ ಬಗ್ಗೆ ತರಬೇತಿಯನ್ನು ಪಡೆದರು, ಇಂತಹ ತರಬೇತಿಯನ್ನು ಪಡೆದ ಮೊದಲ ಭಾರತೀಯರು ಕಾರಿಯಪ್ಪನವರು.ಹೃದಯವಿದ್ರಾವಕವಾದ ವಿಭಜನೆಯ ಸಮಯದಲ್ಲಿ ಕಾರಿಯಪ್ಪನವರು ಭಾರತದ ಸೈನ್ಯ ವಿಭಜನೆಯನ್ನು, ಮತ್ತು ಸೈನ್ಯದ ಆಸ್ತಿಯ ವಿಭಜನೆಯನ್ನು ಸಂಯಮತೆಯಿಂದ ಮತ್ತೂ ಎರಡೂ ಪಕ್ಷಗಳಿಗೂ ಒಪ್ಪುವ ರೀತಿಯಲ್ಲಿ ನೆರವೇರಿಸಿದರು. ಇವರು ಈ ನಿರ್ಗಮನದ ಕಾರ್ಯದ ಭಾರತದ ಮುಖ್ಯ ನಿರ್ವಹಣಾಧಿಕಾರಿಯಾಗಿದ್ದರು.
ಸ್ವಾತಂತ್ರ್ಯಾನಂತರ ಕಾರ್ಯಪ್ಪನವರಿಗೆ ಮೇಜರ್ ಜನರಲ್ ಪದವಿಯನ್ನಿತ್ತು ಭಾರತೀಯ ಸೈನ್ಯದ ಉಪದಂಡನಾಯಕರನ್ನಾಗಿ ಮಾಡಲಾಯಿತು. ಬಳಿಕ ಲೆಫ್ಟಿನೆಂಟ್ ಜನರಲ್ ಎಂದು ಪದೋನ್ನತಿ ಮಾಡಿದಾಗ ಇವರು ಪೂರ್ವ ಸೈನ್ಯದ ಕಮಾಂಡರ್(Eastern Army Commander) ಆದರು.
೧೯೪೭ರಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ಪ್ರಾರಂಭವಾದಾಗ ಇವರನ್ನು ಪಶ್ಚಿಮ ಸೈನ್ಯದ ಮುಖ್ಯ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಝಿಲಾ, ದ್ರಾಸ್ ಮತ್ತು ಕಾರ್ಗಿಲನ್ನು ಹಿಂತಿರುಗಿ ಪಡೆಯುವದಕ್ಕೆ ಸೈನ್ಯಕ್ಕೆ ಕಾರ್ಯಪ್ಪನವರು ಮಾರ್ಗದರ್ಶನ ಮಾಡಿದರು. ಅಲ್ಲದೆ, ಲೆಹ್‌ಗೆ ಕಡಿದು ಹೋಗಿದ್ದ ಸಂಪರ್ಕವನ್ನು ಮಾಡಿಕೊಟ್ಟರು.
೧೯೪೯ರ ಜನವರಿ ೧೫ರಂದು ಜನರಲ್ ಆಗಿ ಬಡ್ತಿಯನ್ನು ಪಡೆದ ಕಾರ್ಯಪ್ಪನವರು ಭಾರತೀಯ ಸೈನ್ಯದ ಅತಿ ವರಿಷ್ಠ ನಾಯಕ(Commander-in-Chief)ರಾದರು.
ಭಾರತೀಯ ಸೈನ್ಯದಲ್ಲಿ ಕಾರ್ಯಪ್ಪನವರ ಸೇವೆ ಅಖಂಡವಾಗಿ ೨೯ವರ್ಷಗಳವರೆಗೆ ನಡೆಯಿತು. ೧೯೫೩ನೇ ಇಸವಿಯಲ್ಲಿ ಅವರು ಸೈನ್ಯದಿಂದ ನಿವೃತ್ತರಾದರು. ಆ ಬಳಿಕ ೧೯೫೬ರವರೆಗೆ ಆಸ್ಟ್ರೇಲಿಯಾ ಮತ್ತು ನ್ಯೂ ಜೀಲ್ಯಾಂಡ್‌ ದೇಶಗಳ ಹೈ ಕಮಿಶನರ್ ಆಗಿದ್ದರು. ಅವರು ಬಹಳ ದೇಶಗಳ ಸೈನ್ಯಗಳ ಪುನಾರಚನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದವರು. ಪ್ರಪಂಚವನ್ನೆಲ್ಲಾ ಸುತ್ತಿ ಬಂದ ಅನುಭವಿ. ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಹ್ಯಾರಿ ಟ್ರುಮನ್ ಇವರಿಗೆ 'Order of the Chief Commander of the Legion of Merit' ಬಿರುದನ್ನಿತ್ತರು. ನಮ್ಮ ಭಾರತ ಸರ್ಕಾರ ೧೯೮೬ನೇ ಇಸವಿ ಜನವರಿ ೧೪ರಂದು ಫೀಲ್ಡ್ ಮಾರ್ಶಲ್ ಪದವಿಯನ್ನು ಕೊಟ್ಟಾಗ ಅವರಿಗೆ ೮೭ ವರ್ಷ ಪ್ರಾಯವಾಗಿತ್ತು.
ಕಾರ್ಯಪ್ಪನವರು ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿಗೆ ಬಹಳಷ್ಟು ದುಡಿದರು. ೧೯೬೪ರಲ್ಲಿ ‘ಭಾರತೀಯ ಭೂತಪೂರ್ವ ಸೈನಿಕ ಸಂಘ’ವನ್ನು (Indian Ex-services League) ಜನರಲ್ ತಿಮ್ಮಯ್ಯನವರೊಡನೆ ಸ್ಥಾಪಿಸಿದರು. "ರಕ್ಷಣಾಬಲಗಳ ಸ್ಥೈರ್ಯ ಉಳಿದು ಬರಬೇಕಾದರೆ, ನಿವೃತ್ತ ಯೋಧರ ಸ್ಥೈರ್ಯವನ್ನು ಮರೆಯಬೇಡಿರಿ," ಎಂಬ ಕಾರ್ಯಪ್ಪನವರ ಮಾತು ಎಷ್ಟೊಂದು ಅರ್ಥಗರ್ಭಿತ!
‘ದೇಶಕ್ಕಾಗಿ ತಾನು ಸತ್ತರೆ, ತನ್ನ ಸಂಸಾರವನ್ನು ದೇಶವು ಚೆನ್ನಾಗಿ ನೋಡಿಕೊಳ್ಳುತ್ತದೆ. ತಾನು ನಿವೃತ್ತನಾದ ನಂತರವೂ ಸರ್ಕಾರವು ತನ್ನನ್ನು ಕಡೆಗಣಿಸುವದಿಲ್ಲ’ ಎಂಬ ಭರವಸೆ ಸೈನಿಕನಿಗೆ ಬರಬೇಕು. ಆಸ್ಟ್ರೇಲಿಯಾದಲ್ಲಿ ನಿವೃತ್ತ ಸೈನಿಕರಿಗೆ ಅಲ್ಲಿನ ಸರ್ಕಾರವು ರೂಪಿಸಿದ್ದ ಯಶಸ್ವೀ ಯೋಜನೆಯನ್ನು ನಮ್ಮ ದೇಶವು ಅನುಸರಿಸುವಂತೆ ಕಾರ್ಯಪ್ಪನವರು ಸರ್ಕಾರದ ಮನವೊಲಿಸಲು ಯತ್ನಿಸಿದರು.
ತಮ್ಮ ಸ್ನೇಹಿತರ ನೆರವಿನಿಂದ ಧನಸಂಗ್ರಹಿಸಿದರು. ಪಾಟಿಯಾಲದ ಮಹಾರಾಜರು ದಾನವಿತ್ತ ಅರಮನೆಯನ್ನು ವೃದ್ಧ ಯೋಧರ ನಿವಾಸವನ್ನಾಗಿ ಪರಿವರ್ತಿಸಿದರು. ಸಿಯೆಟ್ ಕಂಪೆನಿಯವರು ಬೆಂಗಳೂರಿನಲ್ಲಿ ‘ಜನರಲ್ ಕಾರ್ಯಪ್ಪ ಭವನ’ವೆಂಬ ದೊಡ್ಡ ಕಟ್ಟಡವನ್ನು ಕಟ್ಟಿಸಿಕೊಟ್ಟರು.
ಸಾರ್ವಜನಿಕ ಸೇವೆಯಿಂದ ನಿವೃತ್ತರಾದ ಮೇಲೆ ಕಾರ್ಯಪ್ಪನವರು ಮಡಿಕೇರಿಯಲ್ಲಿ ತಮ್ಮ ಸ್ವಂತ ಮನೆ ‘ರೋಶನಾರಾ’ದಲ್ಲಿ ಇದ್ದರು. ಆರೋಗ್ಯ ಕಮ್ಮಿಯಾದಾಗ ಚಿಕಿತ್ಸೆಗೆಂದು ಬೆಂಗಳೂರಿನಲ್ಲಿ ಕಮಾಂಡೋ ಆಸ್ಪತ್ರೆಗೆ ಹೋಗುತ್ತಿದ್ದರು. ಕೊನೆಗೆ ಬೆಂಗಳೂರಿನಲ್ಲಿಯೇ ಉಳಿದರು. 1993ನೇ ಇಸವಿ ಮೇ ೧೫ನೇ ದಿನಾಂಕ ಬೆಳಿಗ್ಗೆ ಫೀಲ್ಡ್ ಮಾರ್ಶಲ್ ಕಾರ್ಯಪ್ಪನವರು ಸ್ವರ್ಗಸ್ಥರಾದರು.
ವ್ಯಕ್ತಿತ್ವ
ಮೊದಲ ವಿಶ್ವ ಯುದ್ಧದ ನಂತರದ ದಿನಗಳಲ್ಲಿ ಸೈನ್ಯವನ್ನೂ ಸೇರಿಸಿ, ದೇಶದ ಎಷ್ಟೆಲ್ಲೋ ಸಂಸ್ಥೆಗಳಿಗೆ ಭಾರತೀಯರಿಗೆ ಪ್ರವೇಶವಿರುತ್ತಿರಲಿಲ್ಲ. ಅಂತಹ ಕಡೆಗಳಲೆಲ್ಲಾ ಛಲದಿಂದ ಮತ್ತು ದೃಢ ಪ್ರಯತ್ನದಿಂದ ಕಾರ್ಯಪ್ಪನವರು ಪ್ರವೇಶವನ್ನು ಪಡೆದ ಮೊದಲ ಭಾರತೀಯರಾಗಿದ್ದರು. ಹೀಗೆ ಭಾರತೀಯ ಬ್ರಿಟಿಶ್ ಸೈನ್ಯವನ್ನು ಸೇರಿದ ಬಳಿಕ ಕಾರ್ಯಪ್ಪನವರು ಆಂಗ್ಲ ಸೈನ್ಯಾಧಿಕಾರಿಗಳು ಮತ್ತವರ ಕುಟುಂಬಗಳೊಡನೆಯೂ ಬಹು ಆಪ್ತರಾಗಿದ್ದು, ಆ ವಲಯಗಳಲ್ಲಿ "ಕಿಪ್ಪರ್" (Kipper) ಎಂಬ ಹೆಸರಿನಲ್ಲಿ ಜನಪ್ರಿಯರಾಗಿದ್ದರು.
ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹ್ರೂ, ಅವರ ಸೋದರಿ ವಿಜಯಲಕ್ಷ್ಮಿ ಪಂಡಿತ್ ಹಾಗೂ ಪುತ್ರಿ ಪ್ರಧಾನಿ ಇಂದಿರಾ ಗಾಂಧಿಯವರೂ ಕಾರ್ಯಪ್ಪನವರನ್ನು ಕಿಪ್ಪರ್ ಎಂದೇ ಕರೆಯುವಷ್ಟು ಆತ್ಮೀಯರಾಗಿದ್ದರು. ತಮ್ಮ ಕುಟುಂಬದವರಿಗೆ ಚಿಮ್ಮನಾಗಿದ್ದ ಇವರು ಗೆಳೆಯರಿಗೆ "ಕ್ಯಾರಿ" (Cary) ಆಗಿದ್ದರು. ಅತ್ಯಂತ ಮಾನವೀಯ ಹೃದಯದ ಮತ್ತು ಸರಳತೆಯ ಪ್ರತೀಕವಾಗಿದ್ದ ಇವರು ಕೊಡಗಿನವರಿಗೆ ಪ್ರೀತಿಯ "ಕಾರ್ಯಪ್ಪಜ್ಜ" ಆಗಿದ್ದರು.
ಕಾರ್ಯಪ್ಪನವರು ತಮ್ಮನ್ನು ಸೈನಿಕನೆಂದೇ ಗುರುತಿಸಿಕೊಳ್ಳುತ್ತಿದ್ದರು. ಅವರ ಮನೆಯಲ್ಲಿ ಭಾರತೀಯ ಸೈನಿಕನೊಬ್ಬನ ಸಣ್ಣ ಮೂರ್ತಿಯೊಂದಿತ್ತು. ನಿವೃತ್ತರಾದ ನಂತರವೂ ೧೯೬೫ ಮತ್ತು ೧೯೭೧ರ ಪಾಕಿಸ್ತಾನದ ವಿರುದ್ಧ ಯುದ್ಧವಾದ ಸಮಯದಲ್ಲಿ ಗಡಿ ಪ್ರದೇಶಗಳಿಗೆ ಹೋಗಿ ಸೈನಿಕರೊಂದಿಗೆ ಮಾತುಕತೆ ನಡೆಸಿ,ಅವರ ಮನಃಸ್ಥೈರ್ಯವನ್ನು ಉತ್ತುಂಗಕ್ಕೆ ತರಲು ಸಹಾಯ ಮಾಡಿದರು.
ಕಾರ್ಯಪ್ಪನವರು ಯುದ್ಧ ನಿಪುಣರಾಗಿದ್ದರು. ಹಾಗಿದ್ದರೂ ಶತ್ರುಗಳಲ್ಲೂ ಮಾನವೀಯತೆಯನ್ನು ತೋರಿಸುತ್ತಿದ್ದರು. ೧೯೪೬ರಲ್ಲಿ ಪಠಾಣ್ - ಅಫ್‌ಘನ್ ಬುಡಕಟ್ಟು ಜನಾಂಗದವರ ನಿರಂತರ ಗೆರಿಲ್ಲಾ ದಾಳಿಯು ಬನ್ನು ಎಂಬ ಪ್ರದೇಶಕ್ಕೆ "ಬ್ರಿಟಿಶರ ಶ್ಮಶಾನ" ಎಂಬ ಅನ್ವರ್ಥ ನಾಮ ವನ್ನಿತ್ತಿತ್ತು. ಹಾಜಿ ಮಿರ್ಜಾ ಖಾನ್ ಎಂಬ ಫಕೀರನು ಬ್ರಿಟಿಶ್ ಕಾಫಿರರ ವಿರುದ್ಧ ಜಿಹಾದನ್ನು ಘೋಷಿಸಿದ್ದನು. ಗೆರಿಲ್ಲಾ ದಾಳಿಗೆ ತತ್ತರಿಸಿದ ಭಾರತೀಯ-ಬ್ರಿಟಿಶ್ ಸೈನ್ಯವು ಅಪಾರ ಸಾವು-ನೋವನ್ನುಂಡರೂ ಸೋಲೊಪ್ಪಲಿಲ್ಲ.
ಬ್ರಿಗೆಡಿಯರಾಗಿದ್ದ ಕಾರ್ಯಪ್ಪನವರಿಗೆ ಈ ಯುದ್ಧದ ನೇತೃತ್ವ ದೊರಕಿದಾಗ ಇಬ್ಬಗೆಯ ಸೂತ್ರವನ್ನು ಬಳಸಿದರು. ಹಗಲು-ರಾತ್ರಿಗಳೆರಡರಲ್ಲೂ ಅವರ ಸೈನ್ಯವೂ ಗೆರಿಲ್ಲಾ ದಾಳಿಯಿಂದ ಸೇರಿಗೆ ಸವ್ವಾಸೇರಿನ ಉತ್ತರವೀಯಲಾರಂಭಿಸಿತು. ಜತೆಗೆ ಕಾರ್ಯಪ್ಪನವರು ಮಿರ್ಜಾ ಖಾನನೊಡನೆ ಸಮರಸ ಸಂಬಂಧವನ್ನು ಬೆಳೆಸಿದರು. ಈ ನಡುವೆ ಕಾರ್ಯಪ್ಪನವರಿಗೊಂದು ಸುವರ್ಣಾವಕಾಶ ತಾನಾಗಿಯೇ ಎದುರಾಯಿತು. ಅವಕಾಶಗಳನ್ನೇ ನಿರ್ಮಿಸಿಕೊಳ್ಳುವ ಚಾತುರ್ಯ ಮತ್ತು ನೈಪುಣ್ಯವಿದ್ದ ಅವರು ತಾನಾಗಿಯೇ ಬಂದದನ್ನು ಬಿಟ್ಟಾರೆಯೆ?
ಒಮ್ಮೆ ಅವರಿಗೆ ತಾವು ಹೋಗುತ್ತಿದ್ದ ಮಾರ್ಗದ ಬದಿಯಲ್ಲಿ ಉದ್ದಕ್ಕೂ ಪಠಾಣ ಹೆಂಗುಸರು ನೀರಿನ ಬಿಂದಿಗೆಗಳನ್ನಿರಿಸಿಕೊಂಡು ನಿಂತಿರುವದು ಕಾಣಿಸಿತು. ಏನೆಂದು ವಿಚಾರಿಸಿದಾಗ, ಹತ್ತಾರು ಮೈಲುಗಟ್ಟಲೆ ದೂರದಿಂದ ಆ ಸ್ತ್ರೀಯರು ತಮ್ಮ ಮನೆಗಳಿಗೆ ನೀರು ತರುತ್ತಿದ್ದಾರೆಂದು ಗೊತ್ತಾಯಿತು. ಮನಕರಗಿದ ಕಾರ್ಯಪ್ಪನವರು ತಮ್ಮ ಠಾಣ್ಯಕ್ಕೆ ಮರಳಿ, ತಮ್ಮ ಸೈನಿಕರನ್ನೊಪ್ಪಿಸಿ, ಆ ಬುಡಕಟ್ಟು ಜನರ ಊರಿನ ಸಮೀಪದಲ್ಲೇ ಬಾವಿಯೊಂದನ್ನು ಸಂಜೆಯಾಗುವದರೊಳಗೆ ತೋಡಿಸಿಕೊಟ್ಟರು.
ಕೆಲವೇ ದಿನಗಳಲ್ಲಿ ಆ ಫಕೀರನಿಗೆ ಈ ಸುದ್ಧಿ ಗೊತ್ತಾಗಿ, ತನ್ನ ಸಶಸ್ತ್ರ ಗುಂಪಿನೊಡನೆ ಕಾರ್ಯಪ್ಪನವರ ಬಳಿ ಬಂದು, ಅವರನ್ನು ಗಟ್ಟಿಯಾಗಿ ತಬ್ಬಿಕೊಂಡು, "ಖಲೀಫಾ!" ಎಂದು ಉದ್ಘೋಷಿಸಿದ!
ಯುದ್ಧದ ಸಮಯದಲ್ಲಿ ಮುಂಚೂಣಿಯಲ್ಲಿ ತಾವೂ ಇದ್ದು ಸೈನಿಕರಲ್ಲಿ ಮನಃಸ್ಥೈರ್ಯವನ್ನು ತುಂಬಿಸುತ್ತಿದ್ದರು. ಯುದ್ಧವೆಂದರೆ ಏನೆಂದು ಸೈನಿಕರು ತಿಳಿದಿರುತ್ತಾರೆಯೇ ಹೊರತು ಯುದ್ಧವನ್ನು ನಿರ್ಮಿಸುವ ರಾಜಕಾರಿಣಿಗಳಲ್ಲ, ಎಂದೆನ್ನುತ್ತಿದ್ದರು, ಕಾರ್ಯಪ್ಪನವರು. "ಆಧುನಿಕ ಯುದ್ಧನೀತಿಯಲ್ಲಿ ದೊಡ್ಡ ಸೈನ್ಯಬಲವಲ್ಲ; ಔದ್ಯೋಗಿಕ ಶಕ್ತಿಯ ಬೆಂಬಲ ಮುಖ್ಯವಾದದ್ದು. ಮುಂಚೂಣಿಯಲ್ಲಿ ಸೈನ್ಯ ಇದ್ದಾಗ, ಅದರ ಬೆನ್ನಲ್ಲೇ ಕೈಗಾರಿಕೋದ್ಯಮದ ಆಧಾರ ಅತ್ಯವಶ್ಯ"ಎಂದು ಕಾರ್ಯಪ್ಪನವರ ಪ್ರತಿಪಾದನೆ. "ನಮ್ಮ ಸೈನ್ಯಕ್ಕೆ ಯುದ್ಧಕಾಲದಲ್ಲಿದ್ದ ಶಾಂತಿಯು ಶಾಂತಿಸಮಯದಲ್ಲಿ ಇಲ್ಲವಾಗಿರುವದಕ್ಕೆ ನಮಗೆ ನಾಚಿಕೆಯಾಗಬೇಕು", ಎನ್ನುವದು ಅವರ ಕಳಕಳಿ ತುಂಬಿದ ವಿಡಂಬನೆ! ಪ್ರಾಣವನ್ನು ಮುಡಿಪಾಗಿಟ್ಟು ದೇಶ ಸೇವೆ ಮಾಡುವ ಸೈನಿಕರ ಸೇವೆಯನ್ನು ಸರಕಾರ ಮಾಡಬೇಕು. ಅದಾಗದಿರುವದು ನಮ್ಮ ರಾಜಕೀಯ ದುರಂತ.

ಜನರಲ್ ಕೆ. ಎಸ್. ತಿಮ್ಮಯ್ಯ
ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯನವರೂ ಪ್ರಮುಖರು.  ಜನರಲ್ ತಿಮ್ಮಯ್ಯನವರು  1957ರಿಂದ 1961ರವರೆಗೆ ಭಾರತದ ಭೂಸೇನಾ  ದಂಡನಾಯಕರಾಗಿದ್ದರು. ಕೊರಿಯಾ ದೇಶದ ಯುದ್ಧಾನಂತರ ಸಂಯುಕ್ತ ರಾಷ್ಟ್ರಗಳ ಒಂದು ದಳಕ್ಕೆ ಅಧಿಪತಿಯಾಗಿದ್ದ ತಿಮ್ಮಯ್ಯನವರು ಯುದ್ಧ ಖೈದಿಗಳ ಸ್ವದೇಶದಲ್ಲಿ, ಅವರುಗಳಿಗೆ ಪುನರ್ವಸತಿಯನ್ನು ಸ್ಥಾಪಿಸುವದರ ಹೊಣೆ ಹೊತ್ತಿದ್ದರು. ಭಾರತೀಯ ಸೇನೆಯಿಂದ ನಿವೃತ್ತರಾದ ಬಳಿಕ ಸಂಯುಕ್ತ ರಾಷ್ಟ್ರಗಳ ಶಾಂತಿ-ಸ್ಥಾಪಕ ಸೈನ್ಯದ ಮುಖ್ಯಸ್ಥರಾಗಿ ಸೈಪ್ರಸ್‌ನಲ್ಲಿದ್ದರು. 
ತಿಮ್ಮಯ್ಯನವರು 30 ಮಾರ್ಚ್ 1906ರಲ್ಲಿ ಕೊಡಗಿನ ಮಡಿಕೇರಿಯಲ್ಲಿ ಜನಿಸಿದರು. ಅವರ ತಂದೆಯ ಹೆಸರು ತಿಮ್ಮಯ್ಯ ಹಾಗೂ ತಾಯಿಯ ಹೆಸರು ಸೀತವ್ವ. ಅವರ ನಾಮಕರಣದ ಮುಹೂರ್ತದಲ್ಲಿಟ್ಟ ಹೆಸರು ಸುಬ್ಬಯ್ಯ. ಆದರೆ ಆಂಗ್ಲರ ಕಾಲದ ಆಂಗ್ಲೀಯ ಶಾಲೆಯಲ್ಲಿ ಅವರ ಪೂರ್ಣ ಹೆಸರು ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ ಎಂದಾದ್ದರಿಂದ ಕೆ ಎಸ್ ತಿಮ್ಮಯ್ಯ ಎಂದು ಪ್ರಸಿದ್ಧರಾದರು. ಕೊಡಂದೆರ ಎನ್ನುವದು ಅವರ ಮನೆತನದ ಹೆಸರು.ಅವರ ತಂದೆ ಆಗರ್ಭ ಶ್ರೀಮಂತ ಪ್ಲಾಂಟರ್ ಆಗಿದ್ದರು.
ಉತ್ತಮ ಶಿಕ್ಷಣವನ್ನು ಕೊಡಿಸಬೇಕೆಂಬ ಉದ್ದೇಶದಿಂದ ಅವರ ಮಾತಾಪಿತರು ಅವರನ್ನು ಕೂನೂರಿನ ಸೈಂಟ್ ಜೋಸೆಫ್’ಸ್ ಕಾನ್ವೆಂಟ್‌ನಲ್ಲಿ ಸೇರಿಸಿದರು. ಆಗ ಅವರ ವಯಸ್ಸು ಎಂಟು. ಈ ಶಾಲೆಯನ್ನು ಅಯರ್ಲೆಂಡಿನ ಇಬ್ಬರು ಸೋದರರು ನಡೆಸುತ್ತಿದ್ದರು. ಬಳಿಕ ಅವರು ಬೆಂಗಳೂರಿನ ಬಿಶಪ್ ಕಾಟನ್ ಬಾಲಕರ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಶಾಲಾ ವಿದ್ಯಾರ್ಜನೆಯ ನಂತರ ಈಗಿನ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು ಎನಿಸಿರುವ ಡೆಹ್ರಾಡೂನಿನಲ್ಲಿರುವ  ‘ಪ್ರಿನ್ಸ್ ಆಫ್ ವೇಲ್ಸ್ ರಾಯಲ್ ಇಂಡಿಯನ್ ಮಿಲಿಟ್ರಿ ಕಾಲೆಜ್’ನ್ನು ಸೇರಿದರು. ಈ ಕಾಲೇಜಿನಿಂದ ಪದವೀಧರರಾದ ಬಳಿಕ ಬ್ರಿಟನ್ನಿನ ರಾಯಲ್ ಮಿಲಿಟ್ರಿ ಅಕ್ಯಾಡೆಮಿ ಅಭ್ಯರ್ಥಿಗಳಾಗಿ  ಆಯ್ಕೆಯಾದ ಕೇವಲ ಆರು ಮಂದಿ ಭಾರತೀಯರಲ್ಲಿ ಒಬ್ಬರಾಗಿ ತರಬೇತಿಯನ್ನು ಪಡೆದರು. 1935ರಲ್ಲಿ ತಿಮ್ಮಯ್ಯನವರು ನೈನಾ ಕಾರ್ಯಪ್ಪನವರನ್ನು ವಿವಾಹವಾದರು. ಆ ಸಮಯದಲ್ಲಿ ಈಗ ಪಾಕಿಸ್ಥಾನದ ಭಾಗವಾಗಿರುವ  ಕ್ವೆಟ್ಟಾ ತಿಮ್ಮಯ್ಯನವರ ಕಾರ್ಯಕ್ಷೇತ್ರವಾಗಿತ್ತು.   ಅದೇ ವರ್ಷ ಅಲ್ಲಿ ನಡೆದ ಭೂಕಂಪದ ಮರುದಿನಗಳಲ್ಲಿ ಈ ನವದಂಪತಿಗಳು ಮಾಡಿದ ಸೇವೆ ಸ್ಮರಣೀಯವೆನಿಸಿವೆ.
ಬ್ರಿಟಿಷರ ಆಳ್ವಿಕೆಯಲ್ಲಿ ಲೆಫ್ಟಿನೆಂಟ್ ಗೌರವದೊಂದಿಗೆ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ತಿಮ್ಮಯ್ಯನವರು ಹಲವಾರು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದರು.  ಇವುಗಳಲ್ಲಿ ಅಂದಿನ ಭಾರತದ ಭಾಗವಾಗಿದ್ದ ಪಾಕಿಸ್ಥಾನದ ಪ್ರದೇಶಗಳಲ್ಲಿ ಬಂಡುಕೋರ ಪಠಾಣ್ ಪಂಗಡಗಳ ವಿರುದ್ಧದ ಕಾರ್ಯಾಚರಣೆ ಪ್ರಮುಖವಾದದ್ದು.   ಫೆಬ್ರವರಿ 1935ರಲ್ಲಿ ಅವರು ಕ್ಯಾಪ್ಟನ್ ಎನಿಸಿದ್ದರು.  ಚನ್ನೈನಲ್ಲಿರುವ ಸೇನಾ ತರಬೇತಿ ಕೇಂದ್ರದಲ್ಲಿ ನವತರುಣರಿಗೆ ಬೋಧಕರಾಗಿಯೂ ಕೆಲಸ ಮಾಡಿದರು.  
1947ರಲ್ಲಿ ಭಾರತವು ಸ್ವತಂತ್ರಗೊಳ್ಳುವ ಸನ್ನಾಹದಲ್ಲಿದ್ದುದರಿಂದ ತಿಮ್ಮಯ್ಯನವರನ್ನು ಫಿಲಿಪೈನ್ಸ್‌ನಿಂದ ವಾಪಸ್ ಕರೆದುಕೊಳ್ಳಲಾಯಿತು. ಭಾರತದ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದೊಂದಿಗೆ ಸೈನ್ಯದ ಮತ್ತು ಆಯುಧಗಳ ವಿಲೇವಾರಿಯನ್ನು ಕುರಿತು ರಚಿಸಿದ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಯಿತು. ಈ ಕರ್ತವ್ಯದ ಬಳಿಕ ಸೆಪ್ಟೆಂಬರ್ 1947ರಲ್ಲಿ ಅವರಿಗೆ ಮೇಜರ್-ಜನರಲ್ ಆಗಿ ಬಡ್ತಿ ನೀಡಲಾಯಿತು. 4ನೇ ಇನ್ಫಂಟ್ರಿ ವಿಭಾಗದ ದಳಪತಿಗಳಾಗಿ ಅವರಿಗೆ  ಹೆಚ್ಚುವರಿ ಅಧಿಕಾರವಿತ್ತು, ಭಾರತ ಮತ್ತು ಪಾಕಿಸ್ತಾನಗಳ ನಡುವೆ ಪರಸ್ಪರ ವಲಸೆ ಹೋಗುವದನ್ನು ನಿಯಂತ್ರಿಸಲು ಪಂಜಾಬ್ ಗಡಿ ಸೇನೆಯ ಮುಖ್ಯಾಧಿಕಾರವನ್ನು ವಹಿಸಿಕೊಳ್ಳುವ ಆದೇಶ ನೀಡಲಾಯಿತು. ಮತೀಯ ಗಲಭೆಗಳಿಂದ ಹೊತ್ತಿ ಉರಿಯುತ್ತಿದ್ದ ಭಾರತ-ಪಾಕಿಸ್ತಾನದ ಗಡಿಯ ಸುತ್ತುಮುತ್ತಲ ಪ್ರದೇಶಗಳಲ್ಲಿ ಸುಮಾರು ಒಂದು ಕೋಟಿ ಜನರ ರಕ್ಷಣೆಯ ಭಾರ ಅವರ ಮೇಲಿತ್ತು. ಆ ರಣರಂಗದಲ್ಲಿ ಅವರ ವೈಯಕ್ತಿಕ ಪ್ರವೇಶದಿಂದ ಸಾವಿರಾರು ಮಂದಿ ಹಿಂದೂಗಳನ್ನೂ ಸಿಖ್ಖರನ್ನೂ ಕಾಪಾಡಿ ಅವರೆಲ್ಲರ ನೆಚ್ಚಿನ ಧೀರೋದಾತ್ತ ನಾಯಕನೆನ್ನಿಸಿಕೊಂಡರು.
ಇದಾದ ನಂತರ ಜಮ್ಮು-ಕಾಶ್ಮೀರದಲ್ಲಿದ್ದ 19ನೇ ಇನ್ಫಂಟ್ರಿ ವಿಭಾಗದ ಆಧಿಪತ್ಯದಲ್ಲಿ ಅವರು ಕಾಶ್ಮೀರವನ್ನು ಆಕ್ರಮಿಸಲೆತ್ನಿಸುತ್ತಿದ್ದ ಪಾಕಿಸ್ತಾನದ ಸೇನೆಯನ್ನು ತಡೆಹಿಡಿದು ಹಿಮ್ಮೆಟ್ಟಿಸುವದರಲ್ಲಿ ಜಯಶೀಲರಾದರು. 1948ರ ನವೆಂಬರ್‌ನಲ್ಲಿ ತಾವೇ ಮುಂಚೂಣಿಯಲ್ಲಿದ್ದು 12000 ಅಡಿ ಎತ್ತರದಲ್ಲಿರುವ ಜೊಜಿಲಾ ಕಣಿವೆಯ ಮೇಲೆ ಹಠಾತ್ ಧಾಳಿ ನಡೆಸಿ ಪಾಕಿಸ್ತಾನಿ ಸೈನ್ಯವನ್ನು ಅಲ್ಲಿಂದ ಕಾಲ್ತೆಗೆಯುವಂತೆ ಮಾಡಿ ದ್ರಾಸ್, ಕಾರ್ಗಿಲ್ ಮತ್ತು ಲೇಹ್ ಪ್ರದೇಶಗಳನ್ನು ಕೈವಶಮಾಡಿಕೊಂಡರು. 10000 ಅಡಿಗಿಂತಲೂ ಎತ್ತರದ ಪ್ರದೇಶದಲ್ಲಿ ಜಗತ್ತಿನ ಯಾವದೇ ಸೈನ್ಯವು ಟ್ಯಾಂಕನ್ನು ಯುದ್ಧ ಕಾರ್ಯಾಚರಣೆಯಲ್ಲಿ ಬಳಸಿದುದು ಅದೇ ಪ್ರಪ್ರಥಮವೆಂದು ದಾಖಲಾಗಿದೆ. ತಿಮ್ಮಯ್ಯನವರು ಅಂದಿನ ಪ್ರಧಾನಿ ನೆಹ್ರೂರವರನ್ನು ಮೂರು ತಿಂಗಳ ಅವಧಿಯಿತ್ತರೆ ಅತಿಕ್ರಮಣಕಾರರನ್ನು ಮುಜಾಫರಬಾದ್‌ವರೆಗೆ ಅಟ್ಟುವುದಾಗಿ ಕೇಳಿಕೊಂಡರೂ, ಒಪ್ಪದೇ ಹೋಗಿ ಅಕಾಲಿಕ ಶಾಂತಿಸಂಧಾನ ಉಂಟಾದುದರಿಂದಾಗಿ ಕಾಶ್ಮೀರ ಸಮಸ್ಯೆಯನ್ನು ಇಂದಿನವರೆವಿಗೂ ಬಗೆಹರಿಸದೇ ಉಳಿಸಿರುವದು ಇತಿಹಾಸವೆನಿಸಿದೆ.
1953ರಲ್ಲಿ ಕೊರಿಯಾದಲ್ಲಿ ತಟಸ್ಥ ರಾಷ್ಟ್ರಗಳ ಸ್ವದೇಶ-ಪುನರ್ವಸತಿ ಸಮಿತಿಯ (Neutral Nations Repatriation Commission) ಸಭಾಧ್ಯಕ್ಷರನ್ನಾಗಿ ಸಂಯುಕ್ತ ರಾಷ್ಟ್ರಗಳು ಜನರಲ್ ಕೆ ಎಸ್ ತಿಮ್ಮಯ್ಯನವರನ್ನು ಆಯ್ಕೆ ಮಾಡಿದವು. ಕಮ್ಯುನಿಸ್ಟ್ ಮತ್ತು ಪಶ್ಚಿಮ ದೇಶಗಳೊಡನೆ ನಿಷ್ಪಕ್ಷಪಾತದಿಂದ ವ್ಯವಹರಿಸಿ ತಿಮ್ಮಯ್ಯನವರು ಎಲ್ಲರ ಮೆಚ್ಚುಗೆಯನ್ನು ಪಡೆದರು. ಈ ಸಂದರ್ಭದಲ್ಲಿ ಅವರಿಗೆ ಲೆಫ್ಟಿನಂಟ್-ಜನರಲ್ ಪದವಿಯನ್ನೀಯಲಾಯಿತು. ಭಾರತ ಸರಕಾರವು ಅವರನ್ನು ಪದ್ಮವಿಭೂಷಣವನ್ನಿತ್ತು ಗೌರವಿಸಿತು.
7ನೇ ಮೇ 1957ರಂದು ತಿಮ್ಮಯ್ಯನವರು ಭಾರತೀಯ ಭೂಸೈನ್ಯದ 6ನೇ ಮುಖ್ಯಸ್ಥರಾಗಿ ಅಧಿಕಾರವನ್ನು ವಹಿಸಿಕೊಂಡರು. 1959ರಲ್ಲೇ ಭಾರತ-ಚೀನಾ ಯುದ್ಧದ ಮುನ್ಸೂಚನೆಯಿದ್ದು, ಅದಕ್ಕೆ ಭಾರತೀಯ ಸೈನ್ಯವನ್ನು ಸಜ್ಜುಗೊಳಿಸಬೇಕೆಂಬ ತಿಮ್ಮಯ್ಯನವರ ಸಲಹೆಯನ್ನು ಆಗಿನ ರಕ್ಷಣಾ ಮಂತ್ರಿ ವಿ ಕೆ ಕೃಷ್ಣ ಮೆನೊನ್ ತಳ್ಳಿಹಾಕಿದ್ದರಿಂದ ಅದನ್ನು ಪ್ರತಿಭಟಿಸಿ ತಿಮ್ಮಯ್ಯನವರು ತಮ್ಮ ರಾಜೀನಾಮೆಯನ್ನು ಪ್ರಧಾನಿಗಿತ್ತರು. ನೆಹರೂ ಅವರು  ತಿಮ್ಮಯ್ಯನವರ ಮನವೊಲಿಸಿ ರಾಜೀನಾಮೆಯನ್ನು ಹಿಂತೆಗೆಕೊಳ್ಳುವಂತೆ ಮಾಡಿದರು. ಆದರೆ ಅವರ ಸಲಹೆ-ಸೂಚನೆಗಳನ್ನು ಕಾರ್ಯಗತ ಮಾಡಲು ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. 7ನೇ ಮೇ 1961ರಲ್ಲಿ ತಿಮ್ಮಯ್ಯನವರು ನಿವೃತ್ತರಾದರು. 35ವರ್ಷಗಳ ಅವರ ಸೈನ್ಯದ ಸೇವೆ ಅಲ್ಲಿಗೆ ಮುಗಿಯಿತು.
ಭಾರತೀಯ ಸೈನ್ಯದಿಂದ ನಿವೃತ್ತರಾದ ಮೇಲೆ, ಸಂಯುಕ್ತ ರಾಷ್ಟ್ರಗಳು ಅವರ ಸೇವೆಯನ್ನು ಬಯಸಿ ಸೈಪ್ರಸ್‌ನಲ್ಲಿ ಸಂಯುಕ್ತ ರಾಷ್ಟ್ರಗಳ ಸೇನೆಯ ಆಧಿಪತ್ಯವನ್ನು ಜುಲೈ 1964ರಲ್ಲಿ ನೀಡಿದರು. ಅಲ್ಲಿನ ಅತ್ಯಂತ ವಿಸ್ಪೋಟಕ ಪರಿಸ್ಥಿತಿಯನ್ನು ಸೂಕ್ತವಾಗಿ ಬಗೆಹರಿಸಿದ್ದಕ್ಕೆ ತುರ್ಕಿಯ ವಿದೇಶಾಂಗ ಸಚಿವರು, ‘ಅವರ ಬೌದ್ಧಿಕ ಪ್ರಾಮಾಣಿಕತೆ ಮತ್ತು ಅಚಲ ನಿಷ್ಪಕ್ಷಪಾತದಿಂದ ಶಾಂತಿಯನ್ನು ಸ್ಥಾಪಿಸಿದ ಶ್ರೇಷ್ಠ ಪ್ರಯತ್ನ’ವನ್ನು ಹೃತ್ಪೂರ್ವಕವಾಗಿ ಶ್ಲಾಘಿಸಿದ್ದರು. ಗ್ರೀಕ್ ಸರ್ಕಾರವು ಅವರ ‘ಚಾರಿತ್ರ್ಯ ಬಲ, ವಾಸ್ತವವಾದಿತ್ವ ಮತ್ತು ನ್ಯಾಯಪ್ರಜ್ಞೆ’ಯನ್ನು ಕೊಂಡಾಡಿ ಗೌರವಿಸಿತ್ತು..
ಸೈಪ್ರಸ್ನಲ್ಲಿ ಸೇವೆಯಲ್ಲಿರುವಾಗಲೇ ಅಲ್ಲಿ ಅವರು 18ನೇ ಡಿಸೆಂಬರ್ 1965ರಂದು ನಿಧನರಾದರು. ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತಂದು, ಬೆಂಗಳೂರಿನಲ್ಲಿ  ಸಂಸ್ಕಾರ ಮಾಡಲಾಯಿತು.  ಸೈಪ್ರಸ್ ದೇಶವು ತನ್ನ ನೆಲದಲ್ಲಿ ಶಾಂತಿ ನೆಲೆಸುವಂತೆ ಮಾಡಿದ ವೀರನ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತಲ್ಲದೆ, ಅವರು ವಾಸಿಸುತ್ತಿದ್ದ ನಿಕೋಸಿಯಾದ ಒಂದು ಮಾರ್ಗಕ್ಕೆ ಅವರ ಹೆಸರನ್ನಿಟ್ಟಿತು.
ಆಗ್ರಾ ಪಟ್ಟಣವು ತನ್ನ ಒಂದು ಮುಖ್ಯ ರಸ್ತೆಗೆ ಜನರಲ್ ಕೆ ಎಸ್ ತಿಮ್ಮಯ್ಯನವರ  ಹೆಸರನ್ನು  70ರ ದಶಕದ ಆರಂಭದಲ್ಲೇ ಇಟ್ಟು ಗೌರವಿಸಿತು.
ಬೆಂಗಳೂರಿನ ಶಿವಾಜಿನಗರದ ದಂಡು ಪ್ರದೇಶದಲ್ಲಿ ಒಂದು ರಸ್ತೆಗೆ ಅವರ ಹೆಸರನ್ನಿಟ್ಟಿದ್ದು, ಇತ್ತೀಚೆಗೆ ರಿಚ್ಮಂಡ್ ವೃತ್ತದಿಂದ ಹಳೆಯ ವಿಮಾನ ನಿಲ್ದಾಣದವರೆಗಿರುವ ರಿಚ್ಮಂಡ್ ರಸ್ತೆಯನ್ನು ಜನರಲ್ ತಿಮ್ಮಯ್ಯ ರಸ್ತೆಯೆಂದು ಮರುಹೆಸರನ್ನಿಡಲಾಗಿದೆ. ಅವರ ಹುಟ್ಟೂರಾದ ಮಡಿಕೇರಿಯಲ್ಲಿ ಮಂಗಳೂರಿನಿಂದ ಮತ್ತು ವಿರಾಜಪೇಟೆಯಿಂದ ಬಂದು ಮಡಿಕೇರಿಯನ್ನು ಸೇರುವಲ್ಲಿ ಆಳೆತ್ತರದ ವಿಗ್ರಹವನ್ನು ಸ್ಥಾಪಿಸಲಾಗಿದೆ. 
 
ಲೆಫ್ಟಿನಂಟ್ ಜನರಲ್ ಅಪ್ಪಾರಂಡ ಸಿ ಅಯ್ಯಪ್ಪ
ಅಪ್ಪಾರಂಡ ಸಿ ಅಯ್ಯಪ್ಪ (ಎ ಸಿ ಅಯ್ಯಪ್ಪ) ನವರು ೧೯೧೪ರಲ್ಲಿ ಕೊಡಗಿನ ಕೊಡವ ಜನಾಂಗದ ಅಪ್ಪಾರಂಡ ಮನೆತನದಲ್ಲಿ ಜನಿಸಿದರು. ಈ ಮನೆತನದವರು ಲಿಂಗಾಯತ ರಾಜರ ಕಾಲದಿಂದಲೂ ಉಚ್ಚ ಅಧಿಕಾರಿಗಳಾಗಿದ್ದು, ಆ ಕಾಲದಲ್ಲಿಯೇ ಅಲ್ಲದೆ ಆಂಗ್ಲರ ಆಡಳಿತದಲ್ಲೂ ದಿವಾನ ಪದವಿಯಲ್ಲಿದ್ದರು.
ಶ್ರೀಮಂತ ಕುಟುಂಬದಲ್ಲಿ ಜನಿಸಿದ ಅಯ್ಯಪ್ಪನವರು ಬೆಂಗಳೂರಿನ ಬಿಶಪ್ ಕಾಟನ್ ಶಾಲೆಯ ವಿದ್ಯಾಭ್ಯಾಸ ಮುಗಿಸಿ, ಇಂಗ್ಲೆಂಡಿನ ಲಿಂಕನ್ ಶೈರಿನಲ್ಲಿರುವ ಸ್ಟ್ಯಾನ್‍ಫರ್ಡ್ ಶಾಲೆಯಲ್ಲಿ ಪದವೀಧರರಾಗಿ ಭಾರತಕ್ಕೆ ಮರಳಿದರು.
ಭಾರತೀಯ ಸೈನ್ಯವನ್ನು ಸೇರಿ, ಮೆಂಬರ್ ಆಫ್ ದಿ ಆರ್ಡರ್ ಆಫ್ ದ ಬ್ರಿಟಿಶ್ ಎಂಪೈರ್ (MBE) ಪದವಿಯನ್ನು ಪಡೆದರು
ಭಾರತದ ಸೈನ್ಯದ ಕೋರ್ ಆಫ್ ಸಿಗ್ನಲ್ಸ್ (Corps of Signals)ನಲ್ಲಿ ಸೆಪ್ಟೆಂಬರ್ ೧೯೩೫ರಲ್ಲಿ ಅಯ್ಯಪ್ಪನವರು ಸೆಕೆಂಡ್ ಲೆಫ್ಟ್‍ನಂಟ್ ಆಗಿ ಕಮಿಶನ್ ಪಡೆದ ಮೊದಲ ಭಾರತೀಯ ಅಧಿಕಾರಿ. ದ್ವಿತೀಯ ಜಾಗತಿಕ ಯುದ್ಧದಲ್ಲಿ ೧೯೪೨ರಲ್ಲಿ ಜಪಾನೀಯರ ವಿರುದ್ಧದ ಮಲಯನ್ ಕಾರ್ಯಾಚರಣೆಯಲ್ಲಿ ಕ್ಯಾಪ್ಟನ್ ಆಗಿದ್ದರು. ದುರದೃಷ್ಟವಶಾತ್ ಅವರು ಸೆರೆ ಸಿಕ್ಕಿ ೧೯೪೫ರಲ್ಲಿ ಯುದ್ಧ ಕೊನೆಗೊಳ್ಳುವವರೆಗೂ ಯುದ್ಧಖೈದಿಯಾಗಿದ್ದರು. ಭಾರತಕ್ಕೆ ಮರಳಿದ ಬಳಿಕ ವೃತ್ತಿಯಲ್ಲಿ ಉತ್ತಮ ಮುನ್ನಡೆಯನ್ನು ಪಡೆದು,ಭಾರತೀಯ ಸೇನೆಯ ಪ್ರಥಮ ಪ್ರಧಾನ ಸಿಗ್ನಲ್ ಅಧಿಕಾರಿಯಾದರು. ಬಳಿಕ ಲೆಫ್ಟಿನಂಟ್ ಜನರಲ್ ಹುದ್ದೆಗೆ ಬಡ್ತಿ ಹೊಂದಿ, ಮಾಸ್ಟರ್ ಜನರಲ್ ಆಫ್ ಆರ್ಡ್‌ನನ್ಸ್ ಆದರು. ಇದು ಚೀಫ್ ಆಫ್ ಆರ್ಮಿ ಸ್ಟಾಫ್‌ನ ನಾಲ್ಕು ಪ್ರಿನ್ಸಿಪಲ್ ಸ್ಟಾಫ್ ಆಫಿಸರ್‌ಗಳಲ್ಲಿನ ಒಂದು ಹುದ್ದೆ. ಅವರು ಕೋರ್ ಆಫ್ ಸಿಗ್ನಲ್ಸ್‌ನ ಕರ್ನಲ್ ಕಮಾಂಡಂಟ್ ಆದ ಭಾರತೀಯರಲ್ಲಿ ಪ್ರಪ್ರಥಮರು. 
ನಂತರ ಅವರು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಯ ಚೇರ್ಮನ್ ಆಗಿ ನೇಮಕಗೊಂಡು ೧೯೭೨ರಲ್ಲಿ ನಿವೃತ್ತರಾದರು .
ಬೆಂಗಳೂರಿನ ಬಿ ಇ ಎಲ್ ವೃತ್ತದ ಬಳಿಯ ಉದ್ಯಾನವನಕ್ಕೆ ಜನರಲ್ ಅಯ್ಯಪ್ಪ ಉದ್ಯಾನವನವೆಂದು ಹೆಸರಿಸಲಾಗಿದೆ

ರಮೇಶ್ ಹಲಗಲಿ
ಲೆಫ್ಟಿನೆಂಟ್ ಜನರಲ್ ರಮೇಶ್ ಹಲಗಲಿ ಪರಮ ವಿಶಿಷ್ಠ ಸೇವಾ ಪದಕ ಪಿವಿಎಸ್ಎಂವಿಜೇತ  ಭಾರತೀಯ ಸೇನೆಯ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿದ್ದಾರೆ. 
ಹಲಗಲಿ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಹಲಗಲಿ ಗ್ರಾಮದವರು.
ಬಾಗಲಕೋಟೆ ಜಿಲ್ಲೆ ಮುಧೋಳದ ಲೆಫ್ಟಿನೆಂಟ್ ಜನರಲ್ ರಮೇಶ್ ಹಲಗಲಿ ಅವರಿಗೆ ಸೇನೆಯ ಉಪ ಮುಖ್ಯಸ್ಥರ ಹುದ್ದೆಗೆ ಬಡ್ತಿ ನೀಡಿ ನೇಮಕ ಮಾಡಲಾಗಿದೆ. ಸೇನೆಯ ಅತ್ಯಂತ ಹಿರಿಯ ಅಧಿಕಾರಿಗಳಲ್ಲಿ ಹಲಗಲಿ ಒಬ್ಬರಾಗಿದ್ದಾರೆ.
ಅವರು ಕರ್ನಾಟಕದ ಬಿಜಾಪುರ ಜಿಲ್ಲೆಯ ಸೈನಿಕ ಶಾಲೆಯಲ್ಲಿ ಅಧ್ಯಯನ ಮಾಡಿದರು. 1972 ರ ಡಿಸೆಂಬರ್‌ನಲ್ಲಿ ಹಲಗಲಿಯವರನ್ನು ಸಿಖ್ ಲೈಟ್ ಕಾಲಾಳುಪಡೆಗೆ ನಿಯೋಜಿಸಲಾಯಿತು ಮತ್ತು 11 ಫೆಬ್ರವರಿ 2012 ರಂದು ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ನೇಮಕಗೊಳ್ಳುವವರೆಗೂ ಮಿಲಿಟರಿ ತರಬೇತಿಯ ಮಹಾನಿರ್ದೇಶಕರಾಗಿದ್ದರು.
`ಸುಖ್ನಾ ಭೂ ಹಗರಣ`ದಲ್ಲಿ ಆರೋಪಿತರಾಗಿದ್ದ ಹಲಗಲಿ ಅವರಿಗೆ ಸೇನೆ `ಕ್ಲೀನ್ ಚಿಟ್` ನೀಡಿದ ಬಳಿಕ ಸಂಪುಟ ನೇಮಕಾತಿ ಸಮಿತಿ ಉಪ ಮುಖ್ಯಸ್ಥರ ಹುದ್ದೆಗೆ ಅವರ ಹೆಸರು ಪರಿಗಣಿಸಿ ನೇಮಕ ಮಾಡಿದೆ. ಮಾಹಿತಿ ವ್ಯವಸ್ಥೆ ಹಾಗೂ ತರಬೇತಿ ವಿಭಾಗದ ಹೊಣೆ ಹೊತ್ತಿರುವ ಇವರು ಸೇನೆಯ ಇಬ್ಬರು ಉಪ ಮುಖ್ಯಸ್ಥರ ಪೈಕಿ ಒಬ್ಬರು. ಇದುವರೆಗೆ ಅವರು ಮಿಲಿಟರಿಕೇಂದ್ರ ಕಚೇರಿಯಲ್ಲಿ ತರಬೇತಿ ಮುಖ್ಯಸ್ಥರಾಗಿದ್ದರು.

ಮಂಗೇರಿರಾ ಚೆನ್ನಪ್ಪ ಮುತ್ತಣ್ನ
ಮೇಜರ್ ಮಂಗೇರಿರಾ ಚಿನ್ನಪ್ಪ ಮುತ್ತಣ್ಣ ಭಾರತದ ವೀರ ಯೋಧ.
ಅವರು ಏಪ್ರಿಲ್ 21, 1964 ರಂದು ಕೊಡಗು ಜಿಲ್ಲೆಯಚೆಟ್ಟಿಮಣಿ ಗ್ರಾಮದಲ್ಲಿ (ಭಾಗಮಂಡಲ ಬಳಿ) ಜನಿಸಿದರು.
ಅಕ್ಟೋಬರ್ 1984 ರಲ್ಲಿ ಚೆನ್ನೈನ ಒಟಿಎಗೆ ಸೇರಿದರು ಮತ್ತು 1985 ರ ಅಕ್ಟೋಬರ್ 24 ರಂದು 5 ನೇ ಬೆಟಾಲಿಯನ್ ಸಿಖ್ ಲೈಟ್ ಕಾಲಾಳುಪಡೆಗೆ ನಿಯೋಜಿಸಲ್ಪಟ್ಟರು. ಅವರು 5 ಸಿಖ್ ಲೈಟ್ ಕಾಲಾಳುಪಡೆ 1 ಸೆಕ್ಟರ್ ರಾಷ್ಟ್ರೀಯ ರೈಫಲ್ಸ್ಗೆ ಸೇವೆ ಸಲ್ಲಿಸಿದರು. ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಲಷ್ಕರ್-ಎ-ತೋಯಿಬಾ (ಎಲ್‌ಇಟಿ) ಭಯೋತ್ಪಾದಕರೊಂದಿಗೆ ಹೋರಾಡುತ್ತಿರುವಾಗ, ಅವರು ಜನವರಿ 12, 2000 ರಂದು ಹುತಾತ್ಮರಾದರು, ಆಗ ಅವರಿಗೆ 36 ವರ್ಷ
ಮರಣೋತ್ತರವಾಗಿ ಅವರಿಗೆ ಶೌರ್ಯ ಚಕ್ರವನ್ನು ನೀಡಲಾಯಿತು. ಅವರ ನೆನಪಿಗಾಗಿ, ಮಡಿಕೇರಿ ನಗರ ಮುನ್ಸಿಪಲ್ ಕೌನ್ಸಿಲ್ (ಸಿಎಮ್ಸಿ) ಸಭಾಂಗಣದ ಮುಂದೆ ಪ್ರತಿಮೆ ಅನಾವರಣ ಮಾಡಲಾಗಿದೆ. ಡಿಸೆಂಬರ್ 9, 2000 ರಂದು ಗುರುವಾರ ಕಾವೇರಿ ಕಲಾಕ್ಷೇತ್ರ (ಟೌನ್ ಹಾಲ್) ಎದುರು ಪುರಸಭೆಯ ವೃತ್ತಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

ಮೇಜರ್ ಸಂದೀಪ್ ಉನ್ನಿಕೃಷ್ಣನ್
೨೦೦೮ ರ ನವೆಂಬರ್ ೨೬ ರಂದು ಪಾಕೀಸ್ತಾನದ ೧೦ ಭಯೋತ್ಪಾದಕರು ಸಮುದ್ರದ ಮೂಲಕ ಭಾರತದ ಮುಂಬೈನಲ್ಲಿ ನುಸುಳಿ ೧೬೬ ಜನ ಅಮಾಯಕರನ್ನು ಹತ್ಯೆಗೈದಿದ್ದರು. ಮುಂಬೈನ ಪ್ರತಿಷ್ಠಿತ ತಾಜ್ ಪ್ಯಾಲೇಸ್ ಹೋಟೆಲ್ ಒಳಗೆ ಸಿಕ್ಕಿಹಾಕಿಕೊಂಡಿದ್ದ ಜನರನ್ನು ಪಾರುಮಾಡಲು ನ್ಯಾಷನಲ್ ಸೆಕ್ಯೂರಿಟೀ ಗಾರ್ಡ್ ಕಮಾಂಡೋ ಆಗಿದ್ದ ಸಂದೀಪ್ ಹೋರಾಡುತ್ತಲೇ ಮಡಿದಿದ್ದರು. ಗುಂಡು ಅವರ ಎದೆಗೆ ನಾಟಿದಾಗಲೂ, " ದಯವಿಟ್ಟು ಮೇಲೆಹತ್ತಿಬರಬೇಡಿ; ನಾನೊಬ್ಬನೇ ಅವರನ್ನು ಎದುರಿಸುತ್ತೇನೆ", ಎಂದು ಹೇಳಿ ನುಗ್ಗಿದ ವೀರ ಯೋಧ ಸಂದೀಪ್ ನನ್ನು, ಎನ್.ಎಸ್.ಜಿ.ಅಧಿಕಾರಿಗಳು ನೆನೆಯುತ್ತಾರೆ.
ಮೇಜರ್ ಅವರ ತಂದೆ, ಉನ್ನಿಕೃಷ್ಣನ್, ನಿವೃತ್ತ ಇಸ್ರೋ ಅಧಿಕಾರಿ, ತಾಯಿ ಧನಲಕ್ಷ್ಮಿ,.
ಅಪ್ರತಿಮದೇಶಭಕ್ತ ಹಾಗೂ ಕೊಡುಗೈ ದಾನಿ. ಉನ್ನತ ಹುದ್ದೆಯಲ್ಲಿಅ ೨ ವರ್ಷಗಳಕಾಲದಲ್ಲಿ ತನ್ನ ವೇತನದ ಬಹುಭಾಗವನ್ನು ದೀನದಲಿತರಿಗೆ ಹಂಚಿಬಿಡುತ್ತಿದ್ದ.
ಸನ್. ೨೦೦೮ ರ ನವೆಂಬರ್, ೨೬ ರಂದು, ಮುಂಬೈನ ಮೇಲೆ ಭಯೋತ್ಪಾದಕ ದಾಳಿ ನಡೆದ ಕರಾಳ ನೆನಪಿಗೆ ಬೆಂಗಳೂರು ಮೂಲದ ಭಾರತದ ಹೆಮ್ಮೆಯ ಪುತ್ರರಲ್ಲೊಬ್ಬ ವೀರಯೋಧ ಮೇಜರ್ ಸಂದೀಪ್ ಉನ್ನಿಕೃಷಣನ್ ಹುತಾತ್ಮರಾದ ದಿನ. 'ಯತೀಶ್ ಪ್ರಸಾದ್ ಚಾರಿಟಬಲ್ ಟ್ರಸ್ಟ್ ,' ಬೆಂಗಳೂರು ನಗರದ ಹೊರವರ್ತುಲ ರಸ್ತೆಗೆ ಹೊಂದಿಕೊಂಡ 'ರಾಮಮೂರ್ತಿನಗರದ ಸಿಗ್ನಲ್ ಸಮೀಪ' ೨೬/೧೧ ರಂದು, ಎನ್.ಎಸ್.ಜಿ. ಕಮಾಂಡೋ ಪ್ರತಿಮೆ ಸ್ಥಾಪಿಸಲಾಗಿದೆ. 'ಮೇಜರ್ ಸಂದೀಪ್ ಉನ್ನಿಕೃಷ್ಣನ್', ತಾಜ್ ಮಹಲ್ ಹೋಟೆಲ್ ಬಳಿ ಉಗ್ರರು ನಡೆಸಿದ್ದ ದಾಳಿಯನ್ನು ಹತ್ತಿಕ್ಕಲು ತನ್ನ ಜೀವದ ಹಂಗನ್ನೂ ತೊರೆದು ಪ್ರಯತ್ನಿಸಿ ಹೋರಾಡಿ ಮಡಿದಿದ್ದರು.
ನ.26: 2008ರ ನವೆಂಬರ್ 26ರಂದು ಮುಂಬೈ ಮೇಲೆ ಭಯೋತ್ಪಾದಕ ದಾಳಿ ನಡೆದ ಕರಾಳ ನೆನಪಿಗೆ ಇಂದು ನಾಲ್ಕನೇ ವರ್ಷ. ಜೊತೆಗೆ ಬೆಂಗಳೂರು ಮೂಲದ ಭಾರತದ ಹೆಮ್ಮೆಯ ಪುತ್ರ ವೀರಯೋಧ ಸಂದೀಪ್ ಉನ್ನಿಕೃಷ್ಣನ್ ಹುತಾತ್ಮರಾದ ದಿನವೂ ಹೌದು. ಜೀವದ ಹಂಗುತೊರೆದು ತಾಜ್ ಹೋಟೆಲ್ ಬಳಿ ಉಗ್ರರು ನಡೆಸಿದ್ದ ದಾಳಿಯನ್ನು ಹತ್ತಿಕ್ಕಲು ಯತ್ನಿಸಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ನೆನಪು ಸದಾ ಇರುವಂತೆ ಮಾಡಲು ಯತೀಶ್ ಪ್ರಸಾದ್ ಚಾರಿಟಬಲ್ ಟ್ರಸ್ಟ್ ಅವರು ಬೆಂಗಳೂರಿನಲ್ಲಿ 26/11ರಂದೇ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ನಗರದ ಹೊರವರ್ತುಲ ರಸ್ತೆಗೆ ಹೊಂದಿಕೊಂಡಿರುವ ರಾಮಮೂರ್ತಿ ನಗರದ ಸಿಗ್ನಲ್ ಸಮೀಪ ಎನ್ ಎಸ್ ಜಿ ಕಮಾಂಡೋ ಸಂದೀಪ್ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ರಣರಂಗದ ಹೊರಗಡೆ ಯೋಧನೊಬ್ಬ ತೋರುವ ಅಪ್ರತಿಮ ಸಾಹಸ, ಶೌರ್ಯ, ತ್ಯಾಗಕ್ಕಾಗಿ ನೀಡುವ 'ಅಶೋಕ ಚಕ್ರ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಜನವರಿ 26,2009ರಲ್ಲಿ ಸಂದೀಪ್ ಅವರಿಗೆ ಮರಣೋತ್ತರವಾಗಿ ಅಶೋಕ್ ಚಕ್ರ ನೀಡಲಾಗಿದೆ. ಸಂದೀಪ್ ಅವರ ಜೊತೆಗೆ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಅಶೋಕ್ ಕಾಮ್ಟೆ, ವಿಜಯ್ ಸಲಾಸ್ಕರ್, ತುಕಾರಾಂ ಒಂಬಳೆ, ಗಜೇಂದರ್ ಸಿಂಗ್ ಅವರಿಗೂ ಮರಣೋತ್ತರ ಪ್ರಶಸ್ತಿ ಸಿಕ್ಕಿದೆ. ಮುಂಬೈ ದಾಳಿಗೆ ಕಾರಣರಾದ ಎಲ್ಲಾ ಉಗ್ರರು ಅಂದೇ ಮೃತಪಟ್ಟಿದ್ದರು. ಸಿಕ್ಕಿ ಬಿದ್ದಿದ್ದ ಏಕೈಕ ಉಗ್ರ ಅಜ್ಮಲ್ ಕಸಬ್ ನನ್ನು ಬಂಧಿಸಲಾಗಿತ್ತು. ಕಸಬ್ ಗೆ ನ.21 ಪುಣೆಯ ಯರವಾಡ ಜೈಲಿನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಕರಾಳ ನೆನಪು:2008ರ ನವೆಂಬರ್ 26ರಂದು ಪಾಕಿಸ್ತಾನದ ಹತ್ತು ಉಗ್ರರು ಭಾರತದೊಳಗೆ ಸಮುದ್ರದ ಮುಖಾಂತರ ನುಸುಳಿ 166 ಜನರನ್ನು ಹತ್ಯೆಗೈದಿದ್ದರು. ಮುಂಬೈನ ಪ್ರತಿಷ್ಠಿತ ತಾಜ್ ಮಹಲ್ ಪ್ಯಾಲೇಸ್ ಹೋಟೆಲಿನಲ್ಲಿ ಇದ್ದರ ಜನರನ್ನು ಪಾರು ಮಾಡಲು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ ಕಮಾಂಡೋ ಆಗಿದ್ದ ಸಂದೀಪ್ ಉನ್ನಿಕೃಷ್ಣನ್ ಅವರು ಹೋದಾಗ ಉಗ್ರರ ಜೊತೆ ಹೋರಾಡುತ್ತಲೇ ಮಡಿದಿದ್ದರು. ಭಯೋತ್ಪಾದಕ ಸಿಡಿಸಿದ ಗುಂಡು ಸಂದೀಪ್ ಗುಂಡಿಗೆಯನ್ನು ಹೊಕ್ಕಿದ್ದಾಗ, "ದಯವಿಟ್ಟು ಮೇಲೆ ಯಾರೂ ಬರಬೇಡಿ, ನಾನೊಬ್ಬನೇ ಅವರನ್ನು ಎದುರಿಸುತ್ತೇನೆ" ಎಂಬ ಸಂದೇಶ ರವಾನಿಸಿದ್ದಾಗಿ ಎನ್ಎಸ್‌ಜಿ ಅಧಿಕಾರಿಗಳು ಸಂದೀಪ್ ಅವರನ್ನು ನೆನೆಸಿಕೊಳ್ಳುತ್ತಾರೆ. ತಾಜ್ ಮಹಲ್ ಪ್ಯಾಲೇಸಿನಲ್ಲಿ ಏಕಾಂಗಿಯಾಗಿ ಉಗ್ರರ ಹಿಡಿತಕ್ಕೆ ಸಿಕ್ಕು ಸಂದೀಪ್ ಹೋರಾಡುತ್ತಲೇ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರು. ಮುಂಬೈ ದಾಳಿಯಲ್ಲಿ ಮೃತಪಟ್ಟ ಹುತಾತ್ಮರಿಗೆ ನವೆಂಬರ್ 26, 2012ರಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್, ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೇ ಸೇರಿದಂತೆ ಅನೇಕ ಗಣ್ಯರು ಮುಂಬೈನ ನಾರಿಮನ್ ಹೌಸ್ ನಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 2008ರ ಮುಂಬಯಿ ದಾಳಿಯಲ್ಲಿ ಉಗ್ರರ ಗುಂಡೇಟಿಗೆ ವೀರಮರಣವಪ್ಪಿದ್ದ ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಅಪ್ರತೀಮ ದೇಶಭಕ್ತ ಮಾತ್ರವಲ್ಲ ಕೊಡುಗೈ ದಾನಿಯಾಗಿದ್ದ. ಸೇನೆಯಲ್ಲಿ 9 ವರ್ಷ ಉನ್ನತ ಹುದ್ದೆ ಅಲಂಕರಿಸಿದ್ದರೂ ಬಂದ ಸಂಬಳವನ್ನೆಲ್ಲ ದೀನ ದಲಿತರಿಗೆ ಹಂಚಿಬಿಡುತ್ತಿದ್ದ ಎಂದು ಸಂದೀಪ್ ಕುಟುಂಬದ ಮೂಲಗಳು ಹೇಳಿದೆ. ಸಂದೀಪ್ ರನ್ನು ತುಂಬಾ ಪ್ರೀತಿಸುತ್ತಿದ್ದ ಆತನ ಚಿಕ್ಕಪ್ಪ ಮೋಹನನ್ ಅವರು ತೀವ್ರವಾಗಿ ನೊಂದು ಕೊಂಡಿದ್ದರು. ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡು ದುರಂತ ಸಾವನ್ನಪ್ಪಿದ್ದರು
ಸನ್ ೨೦೦೯ ರ ಜನವರಿ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಿಗೆ, 'ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ', ನೀಡಿ ಗೌರವಿಸಲಾಯಿತು. ಇದು ವೀರಯೋಧರ ಸಾಹಸ, ಶೌರ್ಯ, ತ್ಯಾಗಕ್ಕೆ ಸಲ್ಲುವ ಪ್ರಶಸ್ತಿ.

ಶೌರ್ಯ ಚಕ್ರ ಪ್ರಶಸ್ತಿ ವಿಜೇತ ನಿರಂಜನ್ ಕುಮಾರ್
೨೦೧೬ರ ಪಂಜಾಬಿನ ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಯಲ್ಲಿ ಹುತಾತ್ಮನಾದ ಕನ್ನಡಿಗ ಯೋಧ ಲೆ. ಕರ್ನಲ್ ನಿರಂಜನ್ ಕುಮಾರ್ ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರ ಶೌರ್ಯ ಚಲ್ರ ಪುರಸ್ಕಾರ ನೀಡಿ ಗೌರವಿಸಿದೆ.
ರಾಷ್ಟ್ರೀಯ ಭದ್ರತಾ ಪಡೆ -ಎನ್.ಎಸ್.ಜಿ. ಕಮಾಂಡೋ ಪಡೆಯ ಬಾಂಬ್ ನಿಷ್ಕ್ರಿಯ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದ ನಿರಂಜನ್ ಪಠಾಣ್ ಕೋಟ್ ವಾಯುನೆಲೆಯಲ್ಲಿ ಉಗ್ರರು ಅಡಗಿಸಿಟ್ಟ ಗ್ರೆನೇಡ್ ಸ್ಫೋಟಗೊಂಡು ಮೃತಪಟ್ಟಿದ್ದರು.’

ಹನುಮಂತಪ್ಪ ಕೊಪ್ಪದ್
2016ರ ಫೆಬ್ರವರಿ ತಿಂಗಳಲ್ಲಿ ಸಿಯಾಚಿನ್​ನಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾದ ಹಿನ್ನೆಲೆ ಯೋಧ ಹನುಮಂತಪ್ಪ ಕೊಪ್ಪದ್​ ಹಿಮದಲ್ಲಿ ಸಿಲುಕಿ 6 ದಿನಗಳ ಕಾಲ ಹಿಮದ ನಡುವೆಯೇ ಜೀವನ್ಮರಣ ಹೋರಾಟ ನಡೆಸಿದ್ದ ಕನ್ನಡಿಗನ ಕಥೆ ಎಂಥವರ ಮನ ಕರಗಿಸುತ್ತದೆ. 
ಹನುಮಂತಪ್ಪ ಕೊಪ್ಪದ್​ ಧಾರವಾಡ ಜಿಲ್ಲೆಯ ಕುಂದಗೋಳದ ಬೆಟದೂರು ಗ್ರಾಮದವರಾಗಿದ್ದು ದೆಹಲಿ ಸೇನಾ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು, ಅವರ ಸೇವೆ ಹಾಗೂ ಸಾಹಸವನ್ನು ಗುರುತಿಸಿದ್ದ ಭಾರತೀಯ ಸೇನೆ ಯೋಧನಿಗೆ  ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಿ ಗೌರವಿದೆ.
ಹುತಾತ್ಮ ಕನ್ನಡ, ಕೊಡವ ಕಲಿಗಳ ಪಟ್ಟಿ
ಇವರಷ್ಟೇ ಮಂದಿಯಲ್ಲದೆ ಕೊಡಗಿನ ಕಲಿಗಳಾದ  ಸಿಪಾಯಿ ಮಾದಪ್ಪ (ಇಂಡೋ-ಪಾಕ್) 1948, ಜನರಲ್ ಎಂ.ಬಿ.ದೇವಯ್ಯ (ಇಂಡೋ-ಪಾಕ್) 1962, ಸ್ವಾ.ಲಿ. ಎ.ಬಿ.ದೇವಯ್ಯ (ಇಂಡೋ-ಪಾಕ್) 1965, ಸಿ.ಎನ್.ಐಯ್ಯಣ್ಣ (ಇಂಡೋ-ಪಾಕ್) 1965, ದಫೇದಾರ್ ಎಂ.ಎಂ.ಪೂವಯ್ಯ (ಇಂಡೋ-ಪಾಕ್) 1965, ಶಾವರ್ ಎನ್.ಎಸ್. ಕಾರ್ಯಪ್ಪ (ಇಂಡೋ-ಪಾಕ್) 1965, ನಾಯಕ್ ಕೆ.ಎನ್. ಪೊನ್ನಪ್ಪ, (ಇಂಡೋ-ಪಾಕ್) 1965, ಸುಬೇದಾರ್ ಬಿ.ಎಂ. ಕಾವೇರಪ್ಪ, (ಕ್ಯಾಕ್‍ಟಸ್ ಲೈಲಿ) 1971, ಸಿಪಾಯಿ ಎಂ.ಎಸ್. ಮುತ್ತಣ್ಣ (ಕ್ಯಾಕ್‍ಟಸ್ ಲೈಲಿ) 1971, ಸಿ.ಎಫ್.ಎನ್. ಎಂ.ಎಸ್. ಪೊನ್ನಣ್ಣ (ಕ್ಯಾಕ್‍ಟಸ್ ಲೈಲಿ) 1971, ಸಿಪಾಯಿ ಎನ್.ಎಂ.ಅಪ್ಪಚ್ಚು (ಕ್ಯಾಕ್‍ಟಸ್ ಲೈಲಿ) 1971,
ಗನ್ನರ್ ಎಸ್.ಆರ್. ಪಳಂಗಪ್ಪ (ಕ್ಯಾಕ್‍ಟಸ್ ಲೈಲಿ) 1971, ಗನ್ನರ್ ಪಿ.ಎಸ್.ರಾಮು (ಆಪರೇಷನ್ ಮೇಘದೂತ್) 1984, ಮೇಜರ್ ಪಿ.ಎ. ದೇವಯ್ಯ (ಆಪರೇಷನ್ ಮೇಘದೂತ್) 1987, ಮೇಜರ್ ಕೆ.ಎ.ಸೋಮಯ್ಯ, (ಆಪರೇಷನ್ ಪವನ್) 1987, ಗನ್ನರ್ ಎಂ.ಬಿ.ಕುಶಾಲಪ್ಪ, (ಆಪರೇಷನ್ ಮೇಘದೂತ್) 1987, ಗನ್ನರ್ ಎಂ.ಪಿ.ಬೋಪಯ್ಯ (ಆಪರೇಷನ್ ಪವನ್) 1987, ಮೇಜರ್ ರಂಜಿತ್ ಮುತ್ತಣ್ಣ (ಆಪರೇಷನ್ ಪವನ್) 1987, ಸಿಪಾಯಿ ಎಚ್.ವೈ.ವೆಂಕಟೇಶ್, (ಆಪರೇಷನ್ ಪವನ್) 1988, ಸಿಪಾಯಿ ಕೆ.ಎ.ರಾಮಕೃಷ್ಣ (ಆಪರೇಷನ್ ಪವನ್) 1988, ನಾಯಕ್ ಪಿ.ಎ. ಶಂಭು (ಆಪರೇಷನ್ ರಕ್ಷಕ್)1991,[ಸಂದೀಪ್ ಉನ್ನಿಕೃಷ್ಣನ್ ಸ್ಮರಣೆ ಪ್ರತಿದಿನದ ಕೆಲಸವಾಗಲಿ]
ಹವಾಲ್ದಾರ್ ಪಿ.ಬಿ.ಕುಟ್ಟಪ್ಪ (ಆಪರೇಷನ್ ರಿನೋ) 1993, ಎಲ್. ನಾಯಕ್ ಸಿ.ಎಂ. ಸೋಮಯ್ಯ (ಆಪರೇಷನ್ ರಕ್ಷಕ್) 1994, ಲೆ.ಕ. ಕೆ.ಬಿ.ಪೂಣಚ್ಚ (ಆಪರೇಷನ್ ಆರ್ಚಿಡ್) 1994, ಮೇಜರ್ ಗಣೇಶ್ ಮಾದಪ್ಪ (ಆಪರೇಷನ್ ರಕ್ಷಕ್) 1995, ಎಲ್.ನಾಯಕ್ ಸಿ.ಆರ್.ಚಂದ್ರ (ಆಪರೇಷನ್ ರಕ್ಷಕ್) 1995, ಎನ್.ಬಿ. ಸಬ್. ಜಿ. ಇ. ಉತ್ತಯ್ಯ (ಆಪರೇಷನ್ ಆರ್ಚಿಡ್) 1996, ಸಬ್. ಎಸ್. ಕೆ. ಮೇದಪ್ಪ, (ಆಪರೇಷನ್ ವಿಜಯ್) 1999, ನಾಯಕ್ ಪಿ.ಡಿ. ಕಾವೇರಪ್ಪ (ಆಪರೇಷನ್ ವಿಜಯ್) 1999, ಮೇಜರ್ ಎಂ.ಸಿ.ಮುತ್ತಣ್ಣ (ಆಪರೇಷನ್ ರಕ್ಷಕ್) 2000, ಎನ್.ಬಿ.ಸಬ್. ಎಸ್.ಎಸ್. ಈರಪ್ಪ (ಆಪರೇಷನ್ ಫಾಲ್ಕಾನ್) 2000,
ಎಲ್. ನಾಯಕ್. ಕೆ.ಎ ಸವೀನ (ಆಪರೇಷನ್ ರಕ್ಷಕ್) 2000, ಸಿಪಾಯಿ ಬಿ.ಎಂ ದೇವಪ್ಪ (ಆಪರೇಷನ್ ರಕ್ಷಕ್) 2001, ಸಬ್. ಕೆ.ಪಿ. ಬೆಳ್ಯಪ್ಪ (ಆಪರೇಷನ್ ಫಾಲ್ಕಾನ್) 2002, ಹವಾಲ್ದಾರ್ ಬಿ.ಎಸ್. ದೇವಯ್ಯ (ಆಪರೇಷನ್ ಪರಾಕ್ರಮ್, 2002, ಸಿಪಾಯಿ ಸಿ.ಪಿ. ಅರುಣ್ (ಆಪರೇಷನ್ ಆಫ್ ಜಮ್ಮು ಕಾಶ್ಮೀರ್) 2003, ಎಲ್. ನಾಯಕ್. ಎ,ಯು. ಬಿದ್ದಪ್ಪ, (ಆಪರೇಷನ್ ಮೇಘದೂತ್) 2003, ನಾಯಕ್. ಎಚ್,ಜಿ ಸುಂದರೇಶ್, (ಆಪರೇಷನ್ ಪರಾಕ್ರಮ್) 2003, ಸಿಪಾಯಿ ಎ.ಪಿ.ಪ್ರಶಾಂತ್ (ಆಪರೇಷನ್ ರಕ್ಷಕ್) 2003
ನಾಯಕ್ ಕೆ.ಕೆ.ತಿಮ್ಮಯ್ಯ (ಆಪರೇಷನ್ ರಕ್ಷಕ್) 2007, ಎಲ್. ನಾಯಕ್. ಕೆ.ಸಿ.ತಿಲಕ್ (ಆಪರೇಷನ್ ರಕ್ಷಕ್) 2008, ಮೇಜರ್ ಸುನೀಲ್ ಗಣಪತಿ (ಆಪರೇಷನ್ ರಕ್ಷಕ್) 2008, ನಾಯಕ್ ಎ. ತಂಗಪ್ಪ, ರಾಧಾಕೃಷ್ಣ (ಆಪರೇಷನ್ ರಕ್ಷಕ್) 2009, ಸಿಪಾಯಿ ಕೆ.ಎಸ್.ರವೀಂದ್ರ (ಆಪರೇಷನ್ ರಕ್ಷಕ್) 2009, ಲೆ.ಕ ಸಿ.ಎನ್. ನಂಜಪ್ಪ (ಆಪರೇಷನ್ ಫಾಲ್ಕಾನ್) 2011 ಗಳು ಕನ್ನಡ ನಾಡಿನ ವೀರಪುತ್ರರೆಂಬ ಹೆಮ್ಮೆ ನಮ್ಮದಾಗಿದೆ.

No comments:

Post a Comment