Saturday, September 12, 2020

ಸಕಲದ್ವೀಪಿಯ ಸೂರ್ಯೋಪಾಸಕ ಬ್ರಾಹ್ಮಣ ಜೊರಾಸ್ಟರ್!!

 ಸಕಲದ್ವೀಪಿಯ ಬ್ರಾಹ್ಮಣರ ಹೆಸರು ಕೇಳಿದ್ದಿರಾ? ಸಕಲದ್ವೀಪಿಯ ಬ್ರಾಹ್ಮಣ ಅಥವಾ ಭೋಜಕ ಬ್ರಾಹ್ಮಣ ಅಥವಾ ಮಘಾ ಬ್ರಾಹ್ಮಣ ಎಂಬ ಸಮುದಾಯದ ಮೂಲ ಇಂದಿನ ಇರಾನ್ ಹಾಗೂ ಪ್ರಾಚೀನ ಪರ್ಷಿಯಾ ಆಗಿತ್ತು!! ಇಂದು ಉತ್ತರ ಭಾರತದಲ್ಲಿ ಉಳಿದಿರುವ  ಸಮುದಾಯದ ಮಂದಿ ಪುರೋಹಿತರು, ಆಯುರ್ವೇದ ಶಿಕ್ಷಕರು ಮತ್ತು ವೃತ್ತಿಪರ ವರ್ಗಕ್ಕೆ ಸೇರಿದ್ದಾರೆ. ಬಿಹಾರ, ಒಡಿಶಾ, ಬಂಗಾಳ ಮತ್ತು ಉತ್ತರ ಪ್ರದೇಶದಲ್ಲಿ ನೆಲೆಯಾಗಿರುವ ಸಮುದಾಯ ಆಯುರ್ವೇದ ವೈದ್ಯರು, ಪುರೋಹಿತರು ಮತ್ತು ಭೂಮಾಲೀಕರಿದ್ದಾರೆ.


ಸಕಲದ್ವೀಪಿಯ ಬ್ರಾಹ್ಮಣರು ತಮ್ಮನ್ನು ಶಕ್ ದ್ವೀಪಿಯಾ ಪ್ರದೇಶದಿಂದ ಬಂದವರು. ತಾವು ಈಗಿನ ಇರಾನ್ ಮೂಲದವರು ಎಂದು ಗುರುತಿಸಿಕೊಳ್ಳುತ್ತಾರೆ. ಪ್ರಾಚೀನ ಅಥವಾ ಇತಿಹಾಸಪೂರ್ವ ಕಾಲದಲ್ಲಿ ಈಗಿನ ಇರಾನ್ ಅನ್ನು ಸಕಲದ್ವೀಪಿಯ ನಾಡು ಅಥವಾ ಶಕ್ ದ್ವೀಪಿಯ ಪ್ರದೇಶ ಎಂದು ಕರೆಯಲಾಗುತ್ತಿತ್ತು. ಇಲ್ಲಿ ವಾಸವಿದ್ದ ಬ್ರಾಹ್ಮಣ ಸಮುದಾಯ ವಿವರಗಳು "ಸಾಂಬ ಪುರಾಣ" ಎಂಬ ಗ್ರಂಥದಲ್ಲಿ ದೊರಕುತ್ತದೆ. ಮತ್ತು ಶಕ್ ದ್ವೀಪಿಯ ಬ್ರಾಹ್ಮಣರು ಜಂಬೂದ್ವೀಪ(ಭಾರತ)ಕ್ಕೆ ಆಗಮಿಸಿದ ಬಗೆಗೆ ವಿವರ ಕೊಟ್ಟಿದೆ.

ಭೋಜಕರಿಗಿಂತ ಮಘ ಬ್ರಾಹ್ಮಣರು ಶ್ರೇಷ್ಠರಾಗಿದ್ದರು. ಶಕ್ ದ್ವೀಪಿಯ ಪ್ರದೇಶಕ್ಕೆ ಸೇರಿದ್ದ ಸಕಲದ್ಬೀಪಿಯ ಬ್ರಾಹ್ಮಣರು ಜಂಬುದ್ವೀಪ ಬ್ರಾಹ್ಮಣರಿಗಿಂತ ಹೇಗೆ ಶ್ರೇಷ್ಠ ಅಥವಾ ಭಿನ್ನವೆಂದು ಅಲ್ಲಿ ವಿವರವಿದೆ. ಶ್ರೀಕೃಷ್ಣನ ಪುತ್ರ ಸಾಂಬ(ಜಾಂಬವತಿಯ ಮಗ) ಅತ್ಯಂತ ಸುಂದರ ಮತ್ತು ಆಕರ್ಷಕ ವ್ಯಕ್ತಿತ್ವ  ತೆರೆದಿಡುವ ಸಾಂಬ ಪುರಾಣ ಸಾಂಬನು ಶ್ರೀಕೃಷ್ಣನ ಎಲ್ಲಾ ಗೋಪಿಗಳ ಸಂಯೋಜನೆಯಾಗಿದ್ದನೆನ್ನುತ್ತದೆ.  ಆದರೆ ಸಾಂಬ ಯಾವಾಗಲೂ ನಾರದರನ್ನು ಹೀಗಳೆಯುತ್ತಿದ್ದ.  ಆದರೆ ದೇವರ್ಷಿ ನಾರದರು ಶ್ರೀಕೃಷ್ಣನು ರಾಸಲೀಲೆಯಾಡಿದ ಸ್ಥಳಕ್ಕೆ ಭೇಟಿ ಕೊಡಲು ಸಾಂಬನಿಗೆ ಕೇಳಿದರು.  ಮನವಿಗೆ ಒಪ್ಪಿದ ಸಾಂಬ ಕೃಷ್ಣ ರಾಸಲೀಲೆಯಾಡಿದ್ದ ಪ್ರದೇಶ(ವೃದಾವನ) ತಲುಪಿದಾಗ ಅಲ್ಲಿನ ಎಲ್ಲಾ ಗೋಪಿಕೆಯರೂ ಸಾಂಬನತ್ತ ಆಕರ್ಷಿತರಾದರು, ಮತ್ತು ನಂತರ ಕೃಷ್ಣನೇ ಅಲ್ಲಿಗೆ ಬಂದರೂ ಗೋಪಿಕೆಯರು ಅವನತ್ತ ತಿರುಗಿ ನೋಡಿರಲಿಲ್ಲ!! ಹಿನ್ನೆಲೆಯಲ್ಲಿ ಕೋಪಗಿಂಡ ಕೃಷ್ಣ ಅಲ್ಲಿನ ಗೋಪಿಕೆಯರು ಹಾಗೂ ಸಾಂಬನಿಗೆ ಶಾಪವಿತ್ತ. ಅದರಂತೆ ಸಾಂಬನ ಸುಂದರವಾಗಿದ್ದ ಮುಖ ಅಸಹ್ಯಕರವಾಗಿ ಬದಲಾಗಿ ಬಿಟ್ಟಿತುಇದರಿಂದ ಸಾಂಬ ದುಃಖಿತನಾದ. ಹಾಗೂ ನಾರದ ಮುನಿ ಹೇಳಿದ್ದಕ್ಕಾಗಿ ನಾನಿಲ್ಲಿಗೆ ಆಗಮಿಸಿದ್ದೆ. ಇದರಲ್ಲಿ ನನ್ನ ತಪ್ಪಿಲ್ಲ ಎಂದು ಕೃಷ್ಣನಿಗೆ ಮನವರಿಕೆ ಮಾಡಿದ. ಇದರಿಂದ  ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟ ಕೃಷ್ಣ ಸಾಂಬನಿಗೆ ಸೂರ್ಯನ(ಭಾಸ್ಕರ) ಉಪಾಸನೆ ಮಾಡುವಂತೆ ಹೇಳಿದ.

Krishna's son, Samba, was the cause of his own father's death

ಇನ್ನೊಂದು ವಾದದಂತೆ ಸಕಲ ದ್ವೀಪಿಯ ಬ್ರಾಹ್ಮಣರು ಸೂರ್ಯನಿಂದ ಭೂಮಿಗೆ ಬಂದವರು. "ಗರುಡ ಪುರಾಣ"ದಲ್ಲಿ ಬಗ್ಗೆ ಉಲ್ಲೇಖವಿದೆ. ಅಲ್ಲಿ ಅವರನ್ನು "ಸೂರ್ಯನ್ಸ್" ಎಂದು ಕರೆಯಲಾಗಿದೆ. ಭವಿಷ್ಯ ಪುರಾಣವು ಶಕ್ ದ್ವೀಪಿಯಾ ಬ್ರಾಹ್ಮಣರನ್ನು  ಸೂರ್ಯನ ದೇಹದಿಂದ ನೇರವಾಗಿ ಅವನ ಭಾಗವಾಗಿ (‘ಅಂಶ್)’) ಜನಿಸುತ್ತಾರೆ ಮತ್ತು ಯಾವುದೇ ಮನು, ದಕ್ಷಿಣ ಅಥವಾ ಪ್ರಜಾಪತಿಗಳಿಂದಲ್ಲ ಎಂದು ದೃಢಪಡಿಸಿದೆ.  ಬ್ರಾಹ್ಮಣ ಕುಲಕ್ಕೂ ಭೂಮಿಯ ಮೇಲಿನ ಯಾವುದೇ ಮಾನವರಿಗೆ ಸಂಬಂಧಿಸಿಲ್ಲ. ಕೆಳಗಿನ ಪದ್ಯಗಳು ಅರ್ಥವನ್ನು ಸಾಬೀತು ಮಾಡುತ್ತದೆ.

सृजामि प्रथमं वर्णं मगसंज्ञमनौपमम् इत्युक्त्वा तमहं वीर राजानं खगसप्तम् 22

जगाम परमां चिन्तां तस्य कार्यस्य सिध्दये अथ मे चिन्तमानस्य स्वशरीराद्विनि:सृता: 23

शशि-कुन्देन्दु- संकाशा: संख्यडष्टौ महाबला: पठन्ति चतुरो वेदान् सांगोपनिषद: खग 24

ಶಕ್ ದ್ವೀಪಿ ಎಂಬ ಪದವನ್ನು ನಾನಾ ಬಗೆಯಲಿ ಉಚ್ಚಾರಣೆ ಮಾಡಲಾಗಿದೆ.  ಇನ್ನು "ಶಕದ್ವೀಪ್" ಎಂದು ಕರೆಯಲ್ಪಡುತ್ತಿದ್ದ ದ್ವೀಪದಲ್ಲಿ ವಾಸವಿದ್ದ ಪ್ರಾಚೀನ ಬ್ರಾಹ್ಮಣ ಕುಲ "ಶಕ್ ದ್ವೀಪಿ ಬ್ರಾಹ್ಮಣ" ಎಂದೂ ಹೇಳಲಾಗಿದೆ.

ಇದರಂತೆ ಶಕ್ ದ್ವೀಪಿ ಬ್ರಾಹ್ಮಣರನ್ನು ದ್ವಾಪರ ಯುಗದಲ್ಲಿ ಸಾಂಬನಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ (ಸಾಂಬನಿಗೆ ಕುಷ್ಟರೋಗ ಕಾಣಿಸಿಕೊಂಡಿದ್ದ ಪರಿಣಾಮ) ಕೃಷ್ಣನು ಭಾರತಕ್ಕೆ ಕರೆಸಿದ್ದ!!!( ಹಿಂದಿನ ಕಥೆಯಲ್ಲಿ ಕೃಷ್ಣನು ಸಾಂಬನಿಗೆ ಸೂರ್ಯ/ಭಾಸ್ಕರನ ಉಪಾಸನೆ ಮಾಡುವಂತೆ ಸೂಚಿಸಿದ್ದನ್ನು ನೆನಪಿಸಿಕೊಳ್ಳಿ)  ಕೃಷ್ಣ ತನ್ನ ಪುತ್ರನನ್ನು ಶಕ್ ದ್ವೀಪಿಯ ಬ್ರಾಹ್ಮಣರು ಗುಣಪಡಿಸಿದ ನಂತರ ಅವರಿಗಾಗಿ ಚಂದ್ರಭಾಗ ನದಿಯ ದಡದಲ್ಲಿ ಸೂರ್ಯನಿಗೆ ದೇವಾಲಯವನ್ನು ನಿರ್ಮಿಸಿದ್ದ!! ಅಲ್ಲಿ ಪೂಜೆ ಸಲ್ಲಿಸಲು ಯದು ಮುಖ್ಯಸ್ಥ ಉಗ್ರಸೇನನ ಸಲಹೆಗಾರ ಗೌರಮುಖನ ಸಹಾಯವನ್ನು ಪಡೆದು ಶಕ್ ದ್ವೀಪಿಯ ಬ್ರಾಹ್ಮಣರನ್ನು ಅಲ್ಲಿ ಪೂಜೆಗೆ ನೇಮಕ ಮಾಡಿದ್ದ!!

ಇಲ್ಲೇ ಇನ್ನೊಂದು ಕಥೆ ಬರುತ್ತದೆ. ಸಾಂಬನು ಸೂರ್ಯದೇವರ ದೇವಾಲಯದ ಪೂಜೆಗೆ ಬ್ರಾಹ್ಮಣರನ್ನು ಕರೆತರಲು ಶಕ್ ದ್ವೀಪಕ್ಕೆ ಹೋದಾಗ ಅಲ್ಲಿ ಬ್ರಾಹ್ಮಣನೇ, ಸೂರ್ಯನ ಆರಾಧಕರ ಪೂರ್ವವರ್ತಿಗಳು ಯಾವುವು?" ಎಂದು ಕೇಳಲು  ಗೌರಮುಖನು ಉತ್ತರಿಸಿದನು…?)ಶಖರ ಮಧ್ಯೆ ಬ್ರಾಹ್ಮಣರಲ್ಲಿ ಮೊದಲನೆಯವನನ್ನುಸುಜಿಹ್ವಾಎಂದು ಕರೆಯಲಾಯಿತು. ಅವನಿಗೆ ನಿಕ್ಷುಭ ಎಂಬ ಹೆಸರಿನ ಮಗಳಿದ್ದಳು, ಅವಳು ಸೂರ್ಯನನ್ನು ಮೋಹಿಸಿದಳು ಮತ್ತು ಅವಳು ಅವನ ಪ್ರೀತಿಯಲ್ಲಿ ಮುಳುಗಿದಳು. ಸೂರ್ಯನನ್ನು ವಿವಾಹವಾದ ಆಕೆ ಎಲ್ಲಾ ಮಘ-ಬ್ರಾಹ್ಮಣರ ಸ್ಥಾಪಕ ತಂದೆಯಾಗಿದ್ದ "ಜರಾಶಬ್ದ"(ಜೊರಾಸ್ಟರ್?)ನಿಗೆ ಜನ್ಮನೀಡಿದ್ದಳು!!! ಅವರು ಅವ್ಯಾಂಗ ಎಂಬ  ಪವಿತ್ರ ಕವಚವನ್ನು  ತಮ್ಮ ಸೊಂಟದ ಸುತ್ತಲೂ ಧರಿಸುತ್ತಾರೆ. ” ಆದ್ದರಿಂದ ಸಾಂಬಾ ಕೃಷ್ಣನನ್ನು ಗರುಡನನ್ನು ಕಳುಹಿಸುವಂತೆ ಕರೆದನು, ನಂತರ ಅವನು ಶಕ್ ದ್ವೀಪಕ್ಕೆ ತೆರಳಿ ಮಘ-ಬ್ರಾಹ್ಮಣರನ್ನು ಸಂಧಿಸಿ ಅವರನ್ನು ಭಾರತಕ್ಕೆ ಕರೆತಂದನು. ಅವರನ್ನು ತಮ್ಮ ಸೂರ್ಯ ದೇವಾಲಯದ ಪುರೋಹಿತರನ್ನಾಗಿ ಮಾಡಿದ್ದನು!

ಸಾಂಬಾಪುರ ನಗರದಲ್ಲಿ ಪುನರ್ವಸತಿಗೆ ಆಹ್ವಾನಿಸಿದ 18 ಕುಟುಂಬಗಳ ಧರ್ಮನಿಷ್ಠ ಪ್ರತಿನಿಧಿಗಳಲ್ಲಿ ಎಂಟು ಮಂದಿ ಮಂದಗರು, ಮತ್ತು ಅವರ ವಂಶಸ್ಥರು ಶೂದ್ರರಾದರು. ಇತರ 10 ಮಂದಿ ಮಘ್-ಬ್ರಾಹ್ಮಣರು, ಅವರು ಭೋಜ ವಂಶ ಮಹಿಳೆಯರನ್ನು ಮದುವೆಯಾದರು ಮತ್ತು ಆದ್ದರಿಂದ ಅವರ ವಂಶಸ್ಥರನ್ನು ಭೋಜಕರು ಎಂದು ಕರೆಯಲಾಯಿತು.

ಅವರ ಮೂಲ ನಂಬಿಕೆಗಳು ಏನೇ ಇರಲಿ, ಭವಿಶ್ಯ ಪುರಾಣ 133 ರಚಿಸುವ ಹೊತ್ತಿಗೆ ಶಕ್ ದ್ವೀಪಿಯರನ್ನು  ಸೂರ್ಯನ ಭಕ್ತರೆಂದು ಗುರುತಿಸಲಾಯಿತು, ಹಿಂದೂ ಧರ್ಮದ ಸೂರ್ಯನ ದೇವತೆ. ತರುವಾಯ ವ್ರಿಹಿತ ಸಂಹಿತೆಯಲ್ಲಿ, ವರಹಮಿಹಿರಾ ಸೂರ್ಯನ ಮೂರ್ತಿ ಸ್ಥಾಪನೆಯನ್ನು ಮಘ-ಬ್ರಾಹ್ಮಣರಿಂದ  ಮಾಡಬೇಕೆಂದು ನಿರ್ದೇಶಿಸುತ್ತಾನೆ, ಏಕೆಂದರೆ ಅವರು ಮೊದಲು ಸೂರ್ಯನ ಆರಾಧಕರಾಗಿದ್ದರು. ಆರಂಭದಲ್ಲಿ ಪ್ರತಿಮಾಶಾತ್ರವು ಸೂರ್ಯದೇವನನ್ನು  ಮಧ್ಯ ಏಷ್ಯಾದ ಉಡುಪಿನಲ್ಲಿಚಿತ್ರಿಸುತ್ತದೆ. ಇದರಲ್ಲಿ ಕಾಲುಗಳಿಗೆ ಬೂಟುಗಳಿಂದ ಮುಚ್ಚಿದೆ. ಕಾಲಾನಂತರ ಸೂರ್ಯಲೋಕ ಎಂಬ ಅನ್ಯಲೋಕದ ಕಥೆ ಸೇರಿ ಮೂರ್ತಿಯ ವಿನ್ಯಾಸ ಬದಲಾಗಿದೆ. ಆದರೂ  ಹಿಂದೂ ಧರ್ಮದ ಸೂರ್ಯನನ್ನು ಉಲ್ಲೇಖಿಸಲು ಭಾರತದಲ್ಲಿ ಮಿಹಿರ್ ಎಂಬ ಪದವನ್ನು ಬಳಸುವುದು ಶಕ್ ದ್ವೀಪಿಯಾದ ಪ್ರಭಾವವನ್ನು ಪ್ರತಿನಿಧಿಸುತ್ತದೆ ಎಂದು ಪರಿಗಣಿಸಲಾಗಿದೆ, ಇದು ಮಧ್ಯ ಇರಾನಿನ ಮೈಹರ್ನಿಂದ ಹುಟ್ಟಿಕೊಂಡಿದೆ, ಇದು ಕ್ರಿ.ಪೂ 4 ನೇ ಶತಮಾನದ ನಂತರದ ಮತ್ತೊಂದು ಬೆಳವಣಿಗೆಯಾಗಿದೆ.

ಶಕ್ ದ್ವೀಪ ಎನ್ನುವುದು ಇಂದಿನ ಇರಾನ್ ಅಥವಾ ಪ್ರಾಚೀನ ಕಾಲದ ಪರ್ಷಿಯಾ ಆಗಿದೆ. ಶಕ್ ದ್ವೀಪ ಎಂಬ ಪದ ಎರಡು ಭಾಗಗಳಾಗಿ ವಿಂಗಡಿಸಬಹುದು, ‘ಶಕಾ + ‘ದ್ವಿಪ್ಇದುಶಕ್ದ್ವೀಪವನ್ನು ಸೂಚಿಸುತ್ತದೆ. ಶಕ್ ದ್ವೀಪಿಯಾ ಜಾತಿಯ ಬ್ರಾಹ್ಮಣರು, ಅವರು ಪ್ರಾಚೀನ ಕಾಲದಿಂದಲೂ ಸೂರ್ಯ ದೇವರನ್ನು ಪೂಜಿಸಲು ಹೆಸರುವಾಸಿಯಾಗಿದ್ದಾರೆ.

ಅವರು ಪರ್ಯಾಯ ಔಷಧಿ, ‘ಆಯುರ್ವೇದ, ತಂತ್ರ- ಮಂತ್ರ ವಿಜ್ಞಾನ, ಧಾರ್ಮಿಕ ಸ್ತುತಿಗೀತೆಗಳು, ಧಾರ್ಮಿಕ ಸಮಾರಂಭಗಳನ್ನು ನಡೆಸುತ್ತಿದ್ದಾರೆ ಮತ್ತು ಆಚಾರ್ಯರು ಮತ್ತು ಭಾರತದ ಪ್ರಸಿದ್ಧ ದೇವಾಲಯಗಳ ಅರ್ಚಕರು ಎಂದು ಪ್ರಸಿದ್ಧರಾಗಿದ್ದಾರೆ. ಅವರು ಖಗೋಳವಿಜ್ಞಾನ, ಜ್ಯೋತಿಷ್ಯ ಮತ್ತು ಗಣಿತ ವಿಜ್ಞಾನದ ಪ್ರವರ್ತಕರಾಗಿದ್ದರು. ಪ್ರಸಿದ್ಧ ಗಣಿತಜ್ಞ ಮತ್ತು ಖಗೋಳ ವಿಜ್ಞಾನಿ, ವರಾಹಮಿಹಿರ  ಮತ್ತು ಆರ್ಯಭಟ ಇದೇ ಶಕ್ ದ್ವೀಪಿಯ ಬ್ರಾಹ್ಮಣರು!!!

ವರಾಹಮಿಹಿರ ಮತ್ತು ಆರ್ಯಭಟ
"ಶ್ರಾದ್ಧ ಕರ್ಮ" ಸಮಯದಲ್ಲಿ ಸೂರ್ಯಾಸ್ತವಾದರೆ ಶ್ಕ್ ದ್ವೀಪಿಯ ಬ್ರಾಹ್ಮಣರ ಸಮ್ಮುಖದಲಿ  "ಶ್ರಾದ್ಧವನ್ನು ನಿಲ್ಲಿಸುತ್ತಿರಲಿಲ್ಲ ಬದಲು ಅವರಲ್ಲೇ ಸೂರ್ಯನನ್ನು ಆವಾಹಿಸಿ ಶ್ರಾದ್ದ ಮುಂದುವರಿಯುತ್ತಿತ್ತು!!

ಇನ್ನು ಭಾರತಕ್ಕೆ ಆಗಮಿಸಿದ್ದ ಅನೇಕ ಶಕ್ ದ್ವೀಪಿಯ ಬ್ರಾಹ್ಮಣರು ಇಲ್ಲಿ ನಾನಾ ಕಡೆಗಳಲ್ಲಿ ಸೂರ್ಯ ದೇವಾಲಯ ಸ್ಥಾಪಿಸಿದ್ದಾರೆ. ಈಗಿನ ಪಾಕಿಸ್ತಾನದ ಮುಲ್ತಾನ್ ನಲ್ಲಿ ಅವರು ಜಂಬೂದ್ವೀಪದ ಮೊದಲ ಸೂರ್ಯ ದೇವಾಲಯ ಸ್ಥಾಪಿಸಿದ್ದರು.(ಇರಾನ್ ನಿಂದ ಭಾರತಕ್ಕೆ ಆಗಮಿಸುವಾಗ ಮೊದಲು ಪಾಕಿಸ್ತಾನ ಭೂಪ್ರದೇಶ ಸಿಕ್ಕುತ್ತದೆ ಎನ್ನುವುದು ನೆನಪಿಡಿ!)  ಕೊನಾರ್ಕ್ ಪ್ರಸಿದ್ದ ಸೂರ್ಯ ದೇವಾಲಯ ಸಹ ಇವರ ಕಾಲದ್ದಾಗಿದೆ. ಇದಲ್ಲದೆ ಗುಜರಾತ್ನಲ್ಲಿ ಕಾಶ್ಮೀರ, ಕಾಥಿಯಾವಾಡ, ಮತ್ತು ಸೋಮನಾಥ್, ರಾಜಸ್ಥಾನದ ಧೋಲ್ಪುರ, ಜೋಧಪುರದ ಹಿಸ್ಸಾರ್, ಭರತ್ ಪುರ ಮಧ್ಯಪ್ರದೇಶದ ಖಜುರಾಹೊಗ ಇನ್ನು ಇತರೆಡೆ ಶಕ್ ದ್ವೀಪಿಯಾ ಬ್ರಾಹ್ಮಣರು ಸೂರ್ಯ ದೇವಾಲಯಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

India's Architectural Marvel - Konark Sun Temple | #EpicFacts - YouTube


ಇನ್ನೂ ನೋಡುವುದಾದರೆ ಅಪೋಕ್ರಿಫಾಲಿ, ಶಕ್ ದ್ವೀಪಿಯಾ ಕೇಂದ್ರವು ಮಗಧದಲ್ಲಿತ್ತು. ಅವರ ಸಂಪ್ರದಾಯದ ಪ್ರಕಾರ, ಅವರಿಗೆ ಅಲ್ಲಿ 72 ಪ್ರಭುತ್ವಗಳನ್ನು (ಪುರಸ್/ಪುರಗಳು) ನೀಡಲಾಯಿತು, ಮತ್ತು ಅವರ ವಂಶಾವಳಿ ಬದಲಾಗಿ ಅವರು ಅವರ "ಪುರಗಳ" ಆಧಾರದಲ್ಲಿ ಅವರನ್ನು ಗುರುತಿಸ್ಲಾಗಿತ್ತಿತ್ತು.  ಕಾಲಾನಂತರದಲ್ಲಿ ಅವರು ಎಲ್ಲಾ ದಿಕ್ಕುಗಳಿಗೆ ವಲ್ಸ್ಸೆ ಸೆ ಹೋದರು, ಆದರೆ ಮೂಲ ಪುರಸ್ ಗಳೊಂದಿಗೆ ತಮ್ಮ ಸಂಬಂಧವನ್ನು ಉಳಿಸಿಕೊಂಡರು (ತಮ್ಮ ವಂಶಾವಳಿ, ಅವರ ಗೋತ್ರಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವುದರ ವಿರುದ್ಧವಾಗಿ), ಮತ್ತು ಅವರ ಗೋತ್ರ ಮತ್ತು ಶುದ್ಧ ಎಕ್ಸೋಗಾಮಿ (ಇತರ ಬ್ರಾಹ್ಮಣರಿಗಿಂತ ಭಿನ್ನವಾಗಿ) ಅಭ್ಯಾಸದಲ್ಲಿ ಕಟ್ಟುನಿಟ್ಟಾಗಿರುತ್ತಾರೆ ಮತ್ತು ಅದಕ್ಕೆ ಪ್ರಧಾನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಇವರಲ್ಲಿ ಒಟ್ಟಾರೆಯಾಗಿ 13ಶಕ್ ದ್ವೀಪಿಯ ಗೋತ್ರಗಳಿದೆ.- ಗರ್ಗ, ಪರಾಶರ, ಭೃಗು/ಭಾರ್ಗವ(ಗಮನಿಸಿ- ಇಲ್ಲಿ ನಮಗೆ ಶುಕ್ರಾಚಾರ್ಯನ ಸಂಪರ್ಕ ಕೊಂಡಿ ಸಿಕ್ಕುತ್ತಿದೆ!), ಕೌಂಡಿನ್ಯ, ಕೌಶಲ್ಯ, ಭರದ್ವಾಜ, ವಸು, ಸೂರ್ಯದತ್ತ/ಅರ್ಕದತ್ತ, ನಳ, ಭವ್ಯಮತಿ ಮತ್ತು ಮಿಹ್ರಾಸು

ಸೂರ್ಯಧ್ವಜದಲ್ಲಿ  5 ಗೋತ್ರಗಳಿವೆ: ಸೂರ್ಯ, ಸೊರಲ್, ಲಖಿ, ಬಿಂಜು ಮತ್ತು ಮಾಲೆಕ್ ಜೇಡ್. ಪ್ರಮುಖ ಶಕ್ ದ್ವೀಪಿಯ  ಕೇಂದ್ರಗಳು ಪಶ್ಚಿಮ ಭಾರತದ ರಾಜಸ್ಥಾನದಲ್ಲಿ ಮತ್ತು ಬಿಹಾರದ ಗಯಾ ಬಳಿ ಇವೆ. ‘ಭೋಜಕಎಂಬ ಪದವು ಪಾಶ್ಚಿಮಾತ್ಯ ರಾಜ್ಯಗಳಲ್ಲಿ ಜನಪ್ರಿಯವಾಗಿದ್ದರೆ, ಶಕ್ ದ್ವೀಪಿ  ಮತ್ತು ಅದರ ಹಲವಾರು ವ್ಯತ್ಯಾಸಗಳು ಉತ್ತರ ಮತ್ತು ಪೂರ್ವ ಭಾರತದಕ್ಕೆ ವಿಶಿಷ್ಟವಾಗಿದೆ. ಒರಿಸ್ಸಾ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನಗಳಲ್ಲಿಗ್ರಹ ವಿಪ್ರಮತ್ತುಆಚಾರ್ಯ ಬ್ರಾಹ್ಮಣಪದಗಳು ಸಾಮಾನ್ಯವಾಗಿದೆ. ಶಕ್ ದ್ವಿಪಿಯ ಗುಂಪುಗಳಲ್ಲಿ ಒಂದಾದಸೂರ್ಯಧ್ವಜಬ್ರಾಹ್ಮಣರು ಉತ್ತರ ಭಾರತಕ್ಕೆ ಸ್ಥಳೀಯರಾಗಿದ್ದಾರೆ. ಕಾಶ್ಮೀರಿ ಪಂಡಿತರು ಮಾತ್ರ ಏಕೈಕ ಶಕ್ ದ್ವೀಪಿಯ ಗುಂಪಾಗಿದೆ.

ಭೋಜಕರು ಮತ್ತು ಸೇವಕರು ಐತಿಹಾಸಿಕವಾಗಿ ಗುಜರಾತ್ ಮತ್ತು ರಾಜಸ್ಥಾನದ ಹಲವಾರು ಜೈನ ದೇವಾಲಯಗಳೊಂದಿಗೆ ಸಂಬಂಧ ಹೊಂದಿದ್ದಾರೆ, ಅಲ್ಲಿ ಅವರು ಪುರೋಹಿತರು ಮತ್ತು ಪರಿಚಾರಕರಾಗಿ ಸೇವೆ ಸಲ್ಲಿಸುತ್ತಾರೆ. ಬಿಹಾರ ಮತ್ತು ಉತ್ತರ ಪ್ರದೇಶದ ಕೆಲ ಶಕ್ ದ್ವೀಪಿಯಾ ಹ್ಮಣರು ಆಯುರ್ವೇದ ವೈದ್ಯರು, ಕೆಲವರು ರಜಪೂತ ಕುಟುಂಬಗಳಲ್ಲಿ ಅರ್ಚಕರು, ಇನ್ನೂ ಕೆಲವರು ಭೂಮಾಲೀಕರು. ಕೊಂಕಣ ಪ್ರದೇಶದಿಂದ ಬಂದ ಕೊಂಕಣಿ ಮಾತನಾಡುವ ದೈವಜ್ನಾ ಎಂಬ ಸಮುದಾಯವು ಮಗಸ್ನಿಂದ ಬಂದವರು ಎಂದು ನಂಬಲಾಗಿದೆ.

ಇಷ್ಟೂ ವಿವರ ನೋಡಿದ ಮೇಲೆ ನಮಗೆ ಶ್ಕ್ ದ್ವೀಪಿಯ ಬ್ರಾಹ್ಮಣರು ಮತ್ತು ನಮ್ಮ ಕವಿ ಉಸಾನ ಅರ್ಥಾತ್ ಶುಕ್ರಾಚಾರ್ಯರಿಗೂ ಸಂಪರ್ಕ ಕಲ್ಪಿಸುವುದು ಅಸಾಧ್ಯವೇನಲ್ಲ. ಇದಷ್ಟೇ ಅಲ್ಲದೆ ಮೇಲಿನ ವಿವರಣೆಗಳಿಂದ ಜೊರಾಸ್ಟರ್ ಹಾಗೂ ಶುಕ್ರಾಚಾರ್ಯನ ನಡುವಿನ ಸಂಪರ್ಕವನ್ನೂ ಸಹ ನಾವು ವಿವರಿಸುವುದು ಸುಲಭವಾಗಲಿದೆ.

ಜರಾಶಬ್ದನೇ ಜೊರಾಸ್ಟರ್?!!!

Zartosht 30salegee.jpg

ಜೊರಾಸ್ಟರ್ ಒಬ್ಬ ಪ್ರಾಚೀನ ಇರಾನಿನ(ಪರ್ಷಿಯಾ/ಪಾಸಿಗಳ) ಆಧ್ಯಾತ್ಮಿಕ ನಾಯಕ, ಅವನು ಈಗ ಜೊರಾಸ್ಟಿಯಂ ಎಂದು ಕರೆಯಲ್ಪಡುವ ಧರ್ಮ ಸ್ಥಾಪನೆ ಮಾಡಿದ್ದನು. ಅವನ ಬೋಧನೆಗಳು ಇಂಡೋ-ಇರಾನಿನ ಭಾಗದಲ್ಲಿ ಅದುವರೆಗೆ ಅಸ್ತಿತ್ವದಲ್ಲಿರುವ ಸಂಪ್ರದಾಯಗಳನ್ನು ಪ್ರಶ್ನಿಸಿದವು ಮತ್ತು ಅಂತಿಮವಾಗಿ ಪ್ರಾಚೀನ ಪರ್ಷಿಯಾದಲ್ಲಿ ಪ್ರಬಲ ಧರ್ಮಚಳುವಳಿಯನ್ನು  ಹುಟ್ಟುಹಾಕಿತು. ಾವನು ಇರಾನಿನ ಪ್ರಸ್ಥಭೂಮಿಯ ಪೂರ್ವ ಭಾಗದಲ್ಲಿ ವಾಸಿಸುತ್ತಿದ್ದ. ಆದರೆ  ಅವನ ನಿಖರವಾದ ಕಾಲ,  ಸ್ಥಳ ಪತ್ತೆಯಾಗಿಲ್ಲವೆಂದು ನಮಗೆ ಮಾಹಿತಿ ಲಭಿಸುತ್ತದೆ.

ಪುರಾಣದಲ್ಲಿದೆ ಜೊರಾಸ್ಟರ್ ಮೂಲ...!

ಆದರೆ ನಮ್ಮ ಪೂರ್ವಜರು ಬರೆದಿಟ್ಟ ಪುರಾಣ ಗ್ರಂಥಗಳಲ್ಲಿ ಜೊರಾಸ್ಟರ್ ಮೂಲವಡಗಿದೆ ಂದು ನನ್ನ ಭಾವನೆ. ಹೇಗೆಂದರೆ ನಾವು ಹಿಂದೆ ನೋಡಿದಂತೆ ಪ್ರಾಚೀನ ಇರಾನ್ ಗೆ ಪರ್ಷಿಯಾ ಅಥವಾ ಶಕ್ ದ್ವೀಕಿಯಾ(ಸಕಲದ್ವೀಪಿಯಾ ಪ್ರದೇಶ) ಎಂದು ಹೆಸರು ಇತ್ತಷ್ಟೆ? ಅಲ್ಲಿನ ಜನರು ಸೂರ್ಯ ಭಗವಾನನ ಆರಾಧಕರಾಗಿದ್ದರು. ದ್ವಾಪರ ಯುಗದಲ್ಲಿ ಕೃಷ್ಣ ಪುತ್ರ ಸಾಂಬ ಇಲ್ಲಿಗೆ ಬಂದಿದ್ದ ಹಾಗೂ ಇಲ್ಲಿನ ಬ್ರಾಹ್ಮಣರನ್ನು ಭಾರತಕ್ಕೆ ಕರೆದೊಯ್ದಿದ್ದ. ಸಮಯದಲ್ಲಿ ಸುಜಿಹ್ವಾನ ಪುತ್ರಿ ನಿಕ್ಷುಭಾ ಅಕಥೆಯನ್ನು ಸಾಂಬನಿಗೆ ತಿಳಿಸಲಾಗಿತ್ತು. ಅಲ್ಲಿ ನಿಕ್ಷುಭ ಸೂರ್ಯನಿಂದ "ಜರಾಶಬ್ದ" ಎಂಬ ಪುತ್ರನನ್ನು ಪಡೆದಿದ್ದಾಗಿ ದಾಖಲಾಗಿದೆ!! ಎಂದರೆ ಸೂರ್ಯಪುತ್ರ ಜರಾಶಬ್ದ ಅಥವಾ ಅವನ ವಂಶದಲ್ಲೇ ಹುಟ್ಟಿದ ಮುಂದಿನ ತಲೆಮಾರಿನ ಓರ್ವ ವ್ಯಕ್ತಿಯೇ ಜೊರಾಸ್ಟರ್ ಆಗಿರಬಾರದೇಕೆ?? ಎಂದರೆ ಜೊರಾಸ್ಟರ್ ಸೂರ್ಯನ ಆರಾಧಕರಾದ  ಶಕ್ ದ್ವೀಪಿಯ ಬ್ರಾಹ್ಮಣ ಕುಲದ  ಮೂಲದವ!!!!

ಈತ ಬೋಧಿಸಿದ್ದ ಜೊರಾಸ್ಟಿಯಂ  ಧರ್ಮದ ತತ್ವಗಳಿಗೂ ಹಿಂದೂ ಧರ್ಮದ ವೇದಗಳಲ್ಲಿನ ಕೆಲ ಮಂತ್ರಗಳಿಗೂ ಉತ್ತಮ ಹೋಲಿಕೆ ಇರುವುದು ಇದಕ್ಕೆ ಸಾಕ್ಷಿ!!!  ಹಾಹಾಗಿ ಜೊರಾಸ್ಟರ್ ನಮ್ಮ ಪುರಾಣದಲ್ಲಿನ ಜರಾಶಬ್ದನ ವಂಶಜನಾಗಿದ್ದು ಆತ ಒಂದು ಹಂತದಲ್ಲಿ ಭಾರತಕ್ಕೆ ಆಗಮಿಸಿದ್ದಿರಬೇಕು, ಇಲ್ಲವೇ ಭಾರತದಿಂದ ಹೋದ ಯಾವುದೋ ಮಹಾ ವ್ಯಕ್ತಿಯಿಂದ ಅವನಿಗೆ ವೇದಗಳ ತಿಳುವಳಿಕೆ ಬಂದಿರಬೇಕು ಎಂದು ನನ್ನ ಭಾವನೆ.

ಜಾಗಾದರೆಜೊರಾಸ್ಟರ್ ಗೆ ಹಿಂದೂ ವೇದಗಳ ತಿಳುವಳಿಕೆ ನೀಡಿದ್ದು ಯಾರು? ಅದುವೇ ಕವಿ ಉಸಾನ ಅಥವಾ ಶುಕ್ರಾಚಾರ್ಯ!!!!

ನಾವು ಹಿಂದೆ ಚರ್ಚಿಸಿದ್ದಂತೆ ಕವಿ ಉಸಾನ ಅಥವಾ ಶುಕ್ರಾಚಾರ್ಯ ದೇವಗುರು ಬೃಹಸ್ಪತಿಗೆ ನಡುವೆ ವೃತ್ತಿ ಮಾತ್ಸರ್ಯವಿತ್ತು. ಶುಕ್ರಾಚಾರ್ಯ ಅಸುರ ಗುರುವಾಗಿದ್ದು ಅಸುರರಿಗೆ ಮೃತ ಸಂಜೀವಿನಿ ವಿದ್ಯೆಯನ್ನಾಗಿ ಎಲ್ಲಾ ಬಗೆಯ ಶಾಸ್ತ್ರವಿದ್ಯೆ, ಶಸ್ತ್ರ ಇದ್ಯೆಗಳನ್ನು ಕಲಿಸಲು ಮುಂದಾಗಿದ್ದ. ಇನ್ನು ಈತೌತ್ತರದ ಹಿಮಾಲಯ ಹಾಗೂ ಸಿಂಧೂ ಸರಸ್ವತಿ ಭಾಗದಲ್ಲಿ ಪ್ರಾಬಲ್ಯ ಸಾಧಿಸಿದ್ದ ಆರ್ಯಕುಲ ಅಥವಾ ದೇವಕುಲದವರಿದ್ದ ಪ್ರದೇಶ ಬಿಟ್ಟು ಬಹುದೂರ ತೆರಳಿದ್ದ.(ಪುರಾಣ ಕಥೆಯಲ್ಲಿ ಶಿವ ಅವನಿಗೆ ಇಚ್ಚೆಬಂದಲ್ಲಿ ತೆರಳಲು ವರ ನೀಡಿದ್ದ ಎಂಬ ಸೂಚನೆಯನ್ನು ನೆನೆಯಿರಿ!) ಹಾಗೆ ಅಲೆಯುತ್ತಾ ಆತ ಪರ್ಷಿಯಾಗೆ ಬಂದಿರಬಹುದು. ಅಲ್ಲಿ ಅವನೊಬ್ಬನೇ ಬರದೆ ತನ್ನೊಡನೆ ಅಸುರರ ಬಣವನ್ನೂ ದೈತ್ಯ ಕುಲದ ಸದಸ್ಯರನ್ನೂ ಕೂಡಿಕೊಂಡು ಬಂದಿರಬಹುದು.   ಅಸುರ, ದೈತ್ಯರ ಬಣದಲ್ಲಿಯೂ ಬ್ರಾಹ್ಮಣರಿದ್ದರು ಎನ್ನುವುದನ್ನು ನಾವು ಮರೆಯಲು ಸಾಧ್ಯವಿ;ಲ್ಲವಷ್ಟೆ? (ರಾವಣ ಇದಕ್ಕೆ ಉತ್ತಮ ಉದಾಹರಣೆ)

ಜೊರಾಸ್ಟರ್ ಗುರು ಶುಕ್ರಾಚಾರ್ಯ!!!

ಶಕ್ ದ್ವೀಪಿಯಾ ಪ್ರದೇಶ ಎಂದರೆ ಅದು ಪರ್ಷಿಯಾ(ಈಗಿನ ಇರಾನ್/ಇರಾಕ್/ಸೌದಿ ಅರೇಬಿಯಾ ಇತ್ಯಾದಿ ಇದ್ದ ಭಾಗ) ಅಲ್ಲಿ ಬಿಸಿಲು ಘೋರವಾಗಿರುತ್ತದೆ ಎನ್ನುವುದು ನಿರ್ವಿವಾದ. ಅದೇ ಕಾರಣಕ್ಕೆ ಸೂರ್ಯನನ್ನು ಶಾಂತವಾಗಿಸಲು ಅಲ್ಲಿನ ಜನ ಸೂರ್ಯನ ಆರಾಧನೆ ಮಾಡುತ್ತಿದ್ದರು ಎಂದು ಭಾವಿಸಬಹುದು.  ಇಂತಹಾ ವೇಳೆ ಸಕಲ ವಿದ್ಯೆ, ಶಾಸ್ತ್ರಗಳನ್ನು ಲ್ಲ ಶುಕ್ರಾಚಾರ್ಯ ಇಲ್ಲಿಗೆ ಆಗಮಿಸಿದ್ದ ಅಲ್ಲಿ ಧಾರ್ಮಿಕ ನಾಯಕನೆನಿಸಿದ್ದ ಜೊರಾಸ್ಟರ್ ಸಂಪರ್ಕಕ್ಕೆ ಬಂದಿದ್ದ ಎಂದು ಊಹಿಸಲು ಸಾಧ್ಯವಿದೆ.

ಇನ್ನೊಂದು ಊಹೆಯಂತೆ ಇರಾನ್ ಅಥವಾ ಪರ್ಷಿಯಾದ ಮೂಲದ ಬ್ರಾಹ್ಮಣರುದ್ವಾಪರದಲ್ಲೇ ಭಾರತಕ್ಕೆ ಬಂದಿದ್ದರೆನ್ನುವುದು ಸಹ ಪುರಾಣದಲ್ಲೇ ಉಲ್ಲೇಖವಾಗಿದೆಯಷ್ಟೆ, ಶಕ್ ದ್ವೀಪಿಯ ಬ್ರಾಹ್ಮಣರು ಸೂರ್ಯಾರಾಧಕರಾಗಿದ್ದು ಭಾರತಕ್ಕೆ ಆಗಮಿಸಿ ಇಲ್ಲಿ ನೆಲೆಸಿದ್ದರು. ಹಾಗೆ ಅದಕ್ಕೆ ಮುನ್ನ ಮತ್ತು ನಂತರವೂ ಸಹ ಇರಾನ್ ಹಾಗೂ ಭಾರತದ ನಡುವೆ ಜನರ ವಲಸೆ, ಪ್ರವಾಸ ನಡೆಯುತ್ತಲೇ ಇತ್ತೆಂದು ಭಾವಿಸಿದರೆ ಜೊರಾಸ್ಟರ್ ಕೂಡ ಭಾರತದ ಸಿಂಧೂ-ಸರಸ್ವತಿ  ಸಂಸ್ಕೃತಿಯ ನೆಲೆಗೆ ಆಗಮಿಸಿರಬೇಕು. ಆಗ ಪಾರಂಪರಿಕವಾಗಿ ವೇದಾದ್ಯಯನ ಹೇಳೊಕೊಡುತ್ತಿದ್ದ ದೇವಕುಲದ ಬ್ರಾಹ್ಮಣರು ಸಹಜವಾಗಿ ಆರ್ಯನಲ್ಲದೆ ಈತನಿಗೆ ವೇದ ಹೇಳಿಕೊಡಲು ಒಪ್ಪದೆ ಹೋಗಿದ್ದಾರೆ. ಆಗ ಅವನಿಗೆ ಸಿಕ್ಕಿದ್ದು ಇದೇ ಶುಕ್ರಾಚಾರ್ಯ!! ದೇವಗುರು ಬೃಹಸ್ಪತಿ ಹಾಗೂ ದೇವ ಕುಲದ ವಿರೋಧಿ ಅಸುರ ಗುರು ಶುಕ್ರಾಚಾರ್ಯ ತಾನು ಕಲಿತಬಹುತೇಕ ಎಲ್ಲಾ ಶಾಸ್ತ್ರ ವಿದ್ಯೆಗಳನ್ನು ಜೊರಾಸ್ಟರ್ ಗೆ ಕಲಿಸಿರಬೇಕು ಹೀಗೆ ಜೊರಾಸ್ಟರ್ ಗೆ ಭಾರತೀಯ ವೇದಗಳ ತಿಳುವಳಿಕೆ ಮೂಡಿತು ಎಂದು ನಾವು ಪರಿಗಣಿಸಬಹುದು.

ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಜರಾಶಬ್ದ ಅಥವಾ ಜೊರಾಸ್ಟರ್ ಯಾರೇ ಆಗಿದ್ದರೂ ಅವನಿಗೆ ಶುಕ್ರಾಚಾರ್ಯ ಗುರುವಾಗಿದ್ದ ಎನ್ನುವುದು ನಿಸ್ಸಂಶಯ!!

ಇಲ್ಲಿ ನಾವು ಗಮನಿಸಬಹುದಾದರೆ ದೇವತೆಗಳಿಗೆ (ದೇವರುಗಳಿಗೆ) ಗುರು ಬೇಕಾದಾಗ ಅವರು ಬೃಹಸ್ಪತಿಯನ್ನು ಆರಿಸಿಕೊಂಡರು. ತಾನೇ ಆಯ್ಕೆಯಾಗುತ್ತೇನೆ ಎಂದು ನಿರೀಕ್ಷಿಸಿದ ಶುಕ್ರಾಚಾರ್ಯನಿಗೆ ಇದರಿಂದ ಆಘಾತವಾಗಿತ್ತು ಮತ್ತು ದೇವತೆಗಳ ವಿರುದ್ಧ ಮಹಾ ಕ್ಕ್ರೋಧ ಉಂಟಾಗಿತ್ತು.  ಇದಕ್ಕಾಗಿಯೇ ಅವರು  ಅಸುರರಿಗೆ (ದೇವಗಳ ಶತ್ರುಗಳು) ಗುರುಗಳಾಗಿ ತಮ್ಮ ಸೇವೆಗಳನ್ನು ಅರ್ಪಿಸಿದರು ಮತ್ತು ಅಸುರರು ಶುಕ್ರಾಚಾರ್ಯರನ್ನು ತಮ್ಮ ಎರಡೂ ತೋಳುಗಳನ್ನು ಬಳಸಿ ಸ್ವಾಗತಿಸಿದ್ದರು.  . ಇದು ಮಹಾಭಾರತ ಯುದ್ಧ ಮತ್ತು ಭಾರತದ ಹೊರಗಿನ ಪರ್ಷಿಯನ್ನರು, ಗ್ರೀಕರು ಮತ್ತು ರೋಮನ್ನರಂತಹ ಇತರ  ಜನಾಂಗಗಳಿಗೆ ಮೂಲ ಕಾರಣವಾಗಿತ್ತು.!!!ಬೃಹಸ್ಪತಿಯನ್ನು ಇತರ ಸಂಸ್ಕೃತಿಗಳಲ್ಲಿ ಜೀಯಸ್ ಅಥವಾ ಥಾರ್ ಎಂದು ಕರೆಯಲಾಗುತ್ತದೆ!

ಹಾಗಾಗಿ ಶಕ್ ದ್ವೀಪಿಯ ಬ್ರಾಹ್ಮಣರು ಅಥವಾ ಸೂರ್ಯಾನ ಆರಾಧನೆ ಮಾಡುವ ಬ್ರಾಹ್ಮಣ ಕುಲದವನಾದ ಜೊರಾಸ್ಟರ್ ತಾನು ತನ್ನದೇ ಹೊಸ ಧರ್ಮ ಸ್ಥಾಪನೆ ಮಾಡಿದ್ದನು. ಮಹಾವೀರ. ಬುದ್ದನಂತೆಯೇ ಹಿಂದೂ ಅಥವಾ ಸನಾತನ ವೈದಿಕ ಧರ್ಮದ ಶಾಸ್ತ್ರಗಳನ್ನು ತ್ಯಜಿಸಿ ಮಾಡಿದ ಧರ್ಮ ನೀತಿ ಇದಾಗಿತ್ತು!!! ಸಂದರ್ಭದಲ್ಲಿ ಜೊರಾಸ್ಟರ್  ಹಿಂದೂ ದೇವರುಗಳನ್ನು ತನ್ನ ಹೊಸ ಧರ್ಮದ ರಾಕ್ಷಸರನ್ನಾಗಿಯೂ  ಹಿಂದೂ ರಾಕ್ಷಸರನ್ನು ತನ್ನ ದೇವರನ್ನಾಗಿಯೂ ಪರಿವರ್ತಿಸಿದ್ದನು!!   ಹೊಸ ಧರ್ಮದ ತತ್ವಗಳು ಮೂಲ ಸನಾತನ ಹಿಂದೂ ಸಂಪ್ರದಾಯಕ್ಕೆ ತದ್ವಿರುದ್ದವಾಗಿತ್ತು. ಆದರೆ ಇದರಲ್ಲಿ ಶುಕ್ರಾಚಾರ್ಯನ ಪ್ರಭಾವ ಅತ್ಯಂತ ಹೆಚ್ಚಿನದಾಗಿತ್ತು.

ಯಯಾತಿಯ ಸಂತಾನ ದ್ರುಹ್ಯು ವೇದಗಳ ವಿರುದ್ಧ ಸಂಸ್ಕೃತಿಯ ಪ್ರಸಾರಕ!!

ಇಲ್ಲಿ ನಾವು ಮತ್ತೆ ಯಯಾತಿಯ ಕಥೆಗೆ ಮರಳುವುದಾದರೆ ಅವನಿಗೆ ಐವರು ಮಕ್ಕಳಷ್ಟೆ ಅದರಲ್ಲಿ ಯದು ಯಾದವ ಕುಲಕ್ಕೆ ಕಾರಣವಾದರೆ ಪುರು ಕೌರವ ಪಾಂಡವರ ವಶದ ಆದಿ. ಹಾಗಾದರೆ ಉಳಿದ ಮೂವರೇನಾದರು??? ತುರ್ವಸು, ದ್ರುಹ್ಯು ಹಾಗೂ ಅನುವಿನ ರಾಜಮನೆತನಗಳಿದ್ದವೆ? ಇಲ್ಲಿ ನೋಡಿ....

ಯಯಾತಿಗೆ ಯೌವನ ಮರಳಿ ನೀಡಲು ನಿರಾಕರಿಸಿದ್ದಕ್ಕಾಗಿ ತುರ್ವಸುವಿಗೆ ಯಯಾತಿ ನಿನ್ನ ರಾಜವಂಶ ನಾಶವಾಗುವುದು ಮತ್ತು ಮುಂದಿನ ದಿನಗಳಲ್ಲಿ ಮ್ಲೇಚ್ಚರಾಗಿ ಜನಿಸುವರು ಎಂದು ಶಾಪವಿತ್ತಿದ್ದನು! ಆಗ ತುರ್ವಸು ತಾನು ತಪ್ಪು ಮಾಡಿದ್ದೇನೆ, ಕ್ಷಮಿಸಿ ಎಂದು ಬೇಡಿದ್ದನು ಆಗ ಯಯಾತಿ ಅವರನ್ನು ಕ್ಷಮಿಸಿದ್ದ ಮತ್ತು ತುರ್ವಸುವಿನ ವಂಶಾಸ್ಥರು ಈಗಿನ ಬಲೂಚಿಸ್ಥಾನ, ಅಫ್ಘಾನಿಸ್ಥಾನದ ಮ್ಲೇಚ್ಚ ಕುಲವಾಗಿದ್ದರು

ತುರ್ವಸುವಿನ ವಂಶವೃಕ್ಷ ಹೀಗಿದೆತುರ್ವಾಸು-ವಾಹ್ನಿ-ಗರ್ಭ-ಭಾರ್ಗಾ-ಭನುಮಾನ್-ಗೋಭಾನು-ತ್ರಿಭಾನು-ತ್ರಿಶಾನು-ಕರಂಧಾಮ-ಮಾರುತ

ಇನ್ನೊಬ್ಬ ಮಗ ದ್ರುಹ್ಯುವು ಸಹ ಯಯಾತಿಯ ಕೋರಿಕೆ ಈಡೇರಿಸಿರಲಿಲ್ಲ. ಈತ ಸರಸ್ವತಿ ನದಿದಡದಲ್ಲಿ ವಾಸವಿದ್ದ. ಸರಸ್ವತಿ ನದಿ ಒಣಗಿದ ತರುವಾಯೌತ್ತರಕ್ಕೆ ವಲಸೆ ಹೋಗಿದ್ದ. ಮತ್ತು ದ್ರುಹ್ಯುವಿನ ವಂಶ ವೇದಗಳಿಂದ ದೂರವಿರುವ ಸಂಸ್ಕೃತಿಯನ್ನು ಪ್ರಸಾರ ಮಾಡಿತ್ತು!!(ವೇದಗಳಿಂದ ಎಂದರೆ ಭಾರತದಿಂದ ಹಾಗೂ ದೇವತೆಗಳಿಂದ ಎಂದೂ ಅರ್ಥೈಸಬಹುದು)  ಹೀಗೆ ವೇದಗಳ ವಿರುದ್ಧ ಸಂಸ್ಕೃತಿ ಪ್ರಸರಿಸಿದ ಮೊದಲ ರಾಜ ದ್ರುಹ್ಯು. ಮ್ಲೇಚ್ಚ ರಾಜ ದ್ರುಹ್ಯುವಿನ ವಂಶಸ್ಥರು  ಗಾಂಧಾರರು ಮತ್ತು ಮ್ಲೆಚ್ಚರು. ಅವರು ಯಾವಾಗಲೂ ಧರ್ಮಕ್ಕೆ ವಿರುದ್ಧವಾದ ಕೆಲಸಗಳನ್ನು ಮಾಡುತ್ತಿದ್ದರು, (ಧರ್ಮಕ್ಕೆ ವಿರುದ್ಧ ಎಂದರೆ ದೇವತೆಗೆ ವಿರುದ್ದ ಅಸುರರ, ದೈತ್ಯದ ಪರ)  ರಾಜವಂಶದಲ್ಲಿ ಶಕುನಿ ಜನಿಸಿದರು. ಭಗವಾನ್ ರಾಮನ ಆಳ್ವಿಕೆಯಲ್ಲಿ, ಭರತ ಮತ್ತು ಗಾಂಧಾರ ರಾಜ ನಾಗನಜಿತ್ ಗೆ ಯುದ್ಧವಾಗಿದ್ದು ನಾಗನಜಿತ್ ಸೋಲೊಪ್ಪಿದ್ದ!!! ಇವನ ಗಾಂಧಾರ ಮ್ಲೇಚ್ಚ ಕುಲ ಎಂದರೆ ಆರ್ಯರಲ್ಲದೆ, ವೇದಗಳನ್ನೊಪ್ಪದ ಎಲ್ಲಾ ಕುಲ ಎಂದೂ ಅರ್ಥೈಸಬಹುದು/ ಏಕೆಂದರೆ ಇವರಲ್ಲಿ ನಾಗಕುಲದ ತಕ್ಷಕನೂ ಇದ್ದ!!ತಕ್ಷನು ತಕ್ಷಸಿಲ (ಈಗಿನ ಟ್ಯಾಕ್ಸಿಲಾ)ದಿಂದ ಆಳಿದ್ದ. ಪುಷ್ಕಲನು ಪುರುಷಪುರ (ಪ್ರಸ್ತುತ ಪೇಶಾವರ) ಆಡಳಿತಗಾರನಾದನು. ಇಕ್ಷ್ವಾಕು ರಾಜವಂಶದ ಆಳ್ವಿಕೆಯ ನಂತರ, ದ್ವಾಪರ ಯುಗದಲ್ಲಿ ಪೇಶಾವರ  ಮತ್ತೆ ದ್ರುಹ್ಯುವಿನ ಹಿಡಿತಕ್ಕೆ ಬಂದಿತ್ತು. ಹಾಗೂ ನಾಗನಜಿತ್ (2) ಶಕುನಿ ಮತ್ತು ಗಾಂಧಾರಿ ಅವರ ಅಜ್ಜ ಮತ್ತು ಸುಬಾಲ ರಾಜನ ತಂದೆ.

ಪ್ರಾಚೀನ ಇರಾನಿನ ನವಶಿಲಾಯುಗದ ಸ್ಥಳಗಳನ್ನು ತೋರಿಸುವ ನಕ್ಷೆ

ದ್ರುಹ್ಯುವಿನ ವಂಶವೃಕ್ಷ ಹೀಗಿದೆ- ದ್ರುಹ್ಯು-ಬಬ್ರು-ಸೇತು-ಔರುವ-ಅಂಗರ-ಅರಬ್ಬ(ಅವನ ದೇಶವನ್ನು ಅರೇಬಿಯಾ ಎಂದು ಮುಂದಿನ ದಿನಗಳಲ್ಲಿ ಕರೆಯಲಾಗಿದೆ!!! ಈತ ಸೂರ್ಯವಂಶದ ಮಾಂಧಾತ್ರಿ ಮಹಾರಾಜನಿಗೆ ಸಮಕಾಲೀನನಾಗಿದ್ದ.)-ಗಾಂಧಾರ(ಗಾಂಧಾರ ಸಾಮ್ರಾಜ್ಯದ ಸ್ಥಾಪಕ)-ಧರ್ಮ-ಧೃತ- ದುರ್ಮದಾ-ಪ್ರಚೇತ (ವಿಷ್ಣು ಪುರಾಣವನ್ನು ಹೊರತುಪಡಿಸಿ ಎಲ್ಲಾ ಪುರಾಣಗಳ ಪ್ರಕಾರ) ಪ್ರಚೇತಸ್(ಪ್ರಚೇತನ  100 ಮಕ್ಕಳು)

ಯಯಾತಿಯ ಇನ್ನೋರ್ವ ಮಗ ಅನುವಿನ ವಂಶವೂ ಸಹ ಇದ್ದು ಯಯಾತಿಯ ಬೇಡಿಕೆ ನಿರಾಕರಿಸಿದ್ದ ಅನುವಿಗೆ ಕಡೆಗೆ ಕ್ಷಮೆ ನೀದಿದ್ದ ಯಯಾತಿ ವನ ವಂಶಸ್ಥರಿಗೆ ಮೋಕ್ಷ ಸಿಗುತ್ತದೆ ಮತ್ತು ಮುಂಬರುವ ಯುಗಗಳಲ್ಲಿ ಅವರ ಹೆಸರು ಮತ್ತು ಖ್ಯಾತಿ ಮಾಯವಾಗುವುದಿಲ್ಲ ಎಂಬ ವರವನ್ನು ನೀಡಿದರು.  ರಾಜ ಉಶಿನಾರಾ, ಶಿಬಿ ಚಕ್ರವರ್ತಿ, ರಾಮಾಯಣದಲ್ಲಿ ಕೈಕೇಯಿ, ಕೆಕಾಯ ರಾಜ ಅಶ್ವಪತಿ, ಸಾವಿತ್ರಿ ಮುಂತಾದವರು. ಅನುವಿನ ವಂಶಜರು.

ಅನುವಿನ ವಂಶವೃಕ್ಷ-ಅನು-ಸಭನಾರ-ಕಕ್ಷೇಯು-ಕಲನಾರ-ಶಿಂಜಯ-ಪುರಾಂಜಯ-ಜನಮೇಜಯ (ಸೂರ್ಯವಂಶಿ ರಾಜ ಅನರಣ್ಯರಿಗೆ ಸಮಕಾಲೀನ)-ಮಹಾಶಾಲ-ಮಹಾಮನು (ವಿಷ್ಣುವಿನ ಮಹಾನ್ ಭಕ್ತ)-ಉಶಿನಾರಾ ಮತ್ತು ತಿತಿಕ್ಷು

ಮೇಲಿನ ದ್ರುಹ್ಯುವಿನ ವಂಶಸ್ಥರು ಪರ್ಷಿಯಾ, ಅರೇಬಿಯಾ ಮೊದಲಾದ ಪೂರ್ವ ಏಷ್ಯಾದ ಭಾಗಗಳನ್ನು ಆಳಿದ್ದು ಅಲ್ಲೆಲ್ಲಾ ವೇದಗಳಿಗೆ ವಿರುದ್ಧವಾಗಿ ಸಂಸ್ಕ್ರ್ಇತಿಯನ್ನು ಬೆಳೆಸಿದ್ದರು. ಇಎಂದರೆ ಅದುವೇ ಅಸುರ ಸಂಸ್ಕೃತಿಯಾಗಿತ್ತು. ಶುಕ್ರಾಚಾರ್ಯ ಇವರಿಗೆಲ್ಲಾ(ಮ್ಲೇಚ್ಚರು, ಗಾಂಧಾರರು, ಕೇಕೇಯರು, ಅರೇಬಿಯನ್ನರು ಇತ್ಯಾದಿ) ಗುರುವೂ, ಮಾರ್ಗದರ್ಶಕನೂ ಆಗಿದ್ದ. ಅವರ ಪ್ರದೇಶದಲ್ಲೇ ಹುಟ್ಟಿದ್ದ ಜೊರಾಸ್ಟರ್ ನಿಗೆ ಸಹ ಇದೇ ಶುಕ್ರಾಚಾರ್ಯನು ಗುರುವಾಗಿ ದೊರಕಿದ್ದ!!

ಇನ್ನು ಮುಂದೆ ವೇದಗಳಿಗೂ ಜೊರಾಸ್ಟರನ ಉಪದೇಸಿತ ಗ್ರಂಥದ ಸಾಲುಗಳಿಗೂ ಇರುವ ಸಾಮ್ಯತೆ ಏನು ಎನ್ನುವುದನ್ನು ನೋಡೋಣ

...ಮುಂದುವರಿಯುವುದು

No comments:

Post a Comment