ಶುಕ್ರಾಚಾರ್ಯ ಮತ್ತು ಜೊರಾಸ್ಟ್ರಿಯನಿಸಂ ನಡುವಿನ ಸಂಪರ್ಕವನ್ನು ನೋಡೋಣ.
ಮೊದಲನೆಯದಾಗಿ
ಪರ್ಷಿಯನ್ನರು "ಎಸ್" ಅಕ್ಷರ ಉಚ್ಚರಿಸಲು ಸಾಧ್ಯವಿಲ್ಲ. ಅವರು "ಎಸ್" ಬದಲಿಗೆ "ಎಚ್" ಎಂದು ಉಚ್ಚರಿಸುತ್ತಾರೆ.ಜಪಾನೀಯರು "ಎಲ್" ಬದಲಿಗೆ "ಆರ್", ಚೀನೀಯರು "ಆರ್" ಬದಲು "ಎಲ್" ಎನ್ನುವಂತೆ ಪರ್ಷಿಯನ್ನರು "ಎಸ್" ಅಕ್ಷರ ಉಚ್ಚರಿಸಲು ಸಾಧ್ಯವಿಲ್ಲ. ಹಾಗಾಗಿ
ಹಿಂದೂಗಳ ರಾಕ್ಷಸರಾದ ಅ"ಸು"ರರು ಜೊರಾಸ್ಟ್ರಿಯನಿಸಂ ನಲ್ಲಿ ಅ"ಹು"ರ ಎಂದಾಗಿ ದೇವರೆನಿಸಿಕೊಂಡರು!
ಟೆಹ್ರಾನ್ ದೇವಾಲಯದಲ್ಲಿ ಜರತುಷ್ಟನ ಚಿತ್ರ |
ಹಾಗಾಗಿ ಜೊರಾಸ್ಟ್ರಿಯನಿಸಂ ಪವಿತ್ರ ಗ್ರಂಥ "ಜಿಂದ್ ಅವೆಸ್ತಾ"ದಲ್ಲಿ ದೇವರನ್ನು ಅಹುರ ಮಜ್ದಾ ಎಂದು ಕರೆದಿದ್ದಾರೆ. ಇಲ್ಲಿ ಅಹುರ ಎಂದರೆ ದೇವರು, ಮಜ್ದಾ ಎಂದರೆ ಶ್ರೇಷ್ಠ ಎಂದರ್ಥ! ಜೊರಾಸ್ಟ್ರಿಯನಿಸಂ ನಲ್ಲಿ ಹಿಂದೂ ದೇವ ದೇವತೆಗಳನ್ನು ದುಷ್ಟ ಜನರು ಎಂದು ಪರಿಗಣಿಸಲಾಗುತ್ತದೆ. ದುಷ್ಟ ದೇವ ದೇವತೆಗಳು(ರಾಕ್ಶಸರು/ಅಸುರರು) ಅಲ್ಲಿ ಶ್ರೇಷ್ಠರಾಗಿ ಪರಿಗಣಿಸಲ್ಪಡುತ್ತಾರೆ. ಜೊರಾಸ್ಟ್ರಿಯನಿಸಂನಲ್ಲಿ "ಅಬ್ರಹಾಂ" ನನ್ನು ಶ್ರೇಷ್ಠ ಎನ್ನಲಾಗಿದೆ. ಈ "ಅಬ್ರಹಾಂ" ಎಂಬುದದ ನಿಗೂಡಾರ್ಥವು "ಅಬ್ರಾಹ್ಮಣ"(ಬ್ರಾಹ್ಮಣನಲ್ಲದವ) ಎಂದೂ ಆಗಿರುತ್ತದೆ! ಎಂದರೆ ವೇದಗಳಲ್ಲಿ, ಸನಾತನ ಸಂಸ್ಕೃತಿಯಲ್ಲಿ ಬ್ರಾಹ್ಮಣರೆಂದರೆ ಅತ್ಯುಚ್ಚ ಕುಲವೆಂದು ಪರಿಗಣಿಸಲಾಗಿದೆ. ದೇವತೆಗಳ ಅತಿ ಪ್ರೀತಿಪಾತ್ರರೆಂದು ಭಾವಿಸಲಾಗಿದೆ. ಸನಾತನ ಹಿಂದೂ ಸಂಸ್ಕೃತಿಯನ್ನು ವಿರೋಧಿಸಿ ಹುಟ್ಟಿಕೊಂಡಿದ್ದ ಜೊರಾಸ್ಟ್ರಿಯನಿಸಂ ನಲ್ಲಿ ಬ್ರಾಹ್ಮಣನಲ್ಲದವರು ಶ್ರೇಷ್ಠ ಎನ್ನುವುದು ಅತಿಶಯೋಕ್ತಿಯಲ್ಲ!!
ಮುಂದಿನ
ದಿನಗಳಲ್ಲಿ ಜಿಂದ್ ಅವೆಸ್ತಾದ ಸಾಹಿತ್ಯದಲ್ಲಿ ಒಳ್ಳೆಯ ದೇವರುಗಳನ್ನು "ಯಜತ್" ಗಳೆಂದು ಕರೆಯಲಾಗಿದೆ.. ಹಾಗೆಯೇ ಹಿಂದೂ ಸಂಸ್ಕೃತಿಯಲ್ಲಿ ಪ್ರತಿ ದೇವರಿಗೆ ಒಬ್ಬ ಹೆಣ್ಣು ದೇವತೆ ಇರುತ್ತಾಳೆ. ಆದರೆ ಜೊರಾಸ್ಟರ್ ಇದಕ್ಕೆ ಅನುಮತಿಸಲಿಲ್ಲ!
ಇನ್ನು
ಜಿಂದ್ ಅವೆಸ್ತಾ ಎನ್ನುವ ಗ್ರಂಥ ವೇದಗಳಲ್ಲಿ
ಕಾಣಿಸದ ಅಥವಾ ನಾವು ಮರೆತ ಭಾಗವನ್ನು ಅಚ್ಚುಕಟ್ಟಾಗಿ ನಮಗೆ ತೋರಿಸುವ ಗ್ರಂಥವಾಗಿದೆ ಎಂದರೆ ನಂಬಲೇಬೇಕು!! ಇದಕ್ಕೆ ಉದಾಹರಣೆಗಳಾಗಿ ಈ ಮುಂದಿನ ಕೆಲ
ಸಾಲುಗಳನ್ನು ನೋಡಿ-
"ಯದಿ
ಅಂತರಿಕ್ಷೆ ಯದಿ ವಾತೆ ಆಸ ಯದಿ ವ್ರ್ಇಕ್ಷೇಶು ಯದಿ ಬೊಲಪಸು ಯಾದ್ ಆಶ್ರವಣ್ಪಶವ-ಉದ್-ಯಮಾನಂ ತದ್ ಬ್ರಹ್ಮಣಾಂ ಪುನರ್ ಅಸ್ಮಾನ್ ಉಪೈತು" (ಅರ್ಥರ್ವ ವೇದ 7:66; ಜಿಂದ್
ಅವೆಸ್ತಾ ಪ್ರಿಶ್ನಿ,
ಅಧ್ಯಾಯ 8, ಗಥಾ 12)
ಅನುವಾದ:
"ಓ ಕರ್ತನೇ! ನೀವು ಆಕಾಶದಲ್ಲಿ ಅಥವಾ ಗಾಳಿಯಲ್ಲಿ, ಕಾಡಿನಲ್ಲಿ ಅಥವಾ ಅಲೆಗಳಲ್ಲಿ ಇರಲಿ. ನೀವು ಎಲ್ಲಿದ್ದರೂ ಪರವಾಗಿಲ್ಲ, ಒಮ್ಮೆ ನಮ್ಮ ಬಳಿಗೆ ಬನ್ನಿ. ಎಲ್ಲಾ ಜೀವಿಗಳು ನಿಮ್ಮ
ಹೆಜ್ಜೆಗಳ ಶಬ್ದಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ"
ವೇದ:
ಮಜದಾಹ್ ಸಾಕ್ರಿತ್ವ ಸ್ಮರಿಶ್ತಾಹ್ [ಆ
ಪರಮಾತ್ಮ ಮಾತ್ರ ಪೂಜೆಗೆ ಅರ್ಹ.]
ಅವೆಸ್ತಾ:
ಮದತ್ತಾ ಸಖಾರೆ ಮರ್ಹರಿಂತೋ(ಗಾಥಾ 17:4 ಯಶ್ನಾ 29) [ಅಹುರಾ ಮಜ್ದಾ ಮಾತ್ರ ಪೂಜೆಗೆ ಅರ್ಹರು.]
ಮಹಂತಾ
ಮಿತ್ರಾ ವರುಣಾ ಸಮ್ರಜಾದೇವಾವ್ ಅಸುರಹಾ ಸಾಖೇ ಸಖಾಯಂ ಅಜರೋ ಜರಿಮ್ಮೆ ಅಗ್ನೇ ಮರ್ತ್ಯಾನ್ ಅಮರ್ತ್ಯಾಸ್ ತ್ವಂ ನಃ(ಋಗ್ವೇದ 10:87:21)
ಅನುವಾದ:
ಓ ಪರಮಾತ್ಮ, ನೀನು ಬೆಂಕಿ, ನೀನು ಸೂರ್ಯ, ನೀನು ನೀರು. ನೀನು ನಮಗೆ ತಂದೆಯಾಗಿ, ನಮ್ಮ ಆಡಳಿತಗಾರನಾಗಿ, ನಮ್ಮ ಸ್ನೇಹಿತನಾಗಿ ಮತ್ತು ನಮ್ಮ ಶಿಕ್ಷಕನಾಗಿ ಕಾಣಿಸಿಕೊಂಡಿದ್ದೀರಿ. ಮಾತ್ರವಲ್ಲ ನೀವು
ಸಾವನ್ನು ಮೀರಿದವರು ಆದರೆ ನಾವಲ್ಲ ಅದರ ಹೊರತಾಗಿಯೂ ನಿಮ್ಮನ್ನು ನಮ್ಮ ಸ್ನೇಹಿತ ಎಂದು ಕರೆಯುವ ದೊಡ್ಡ ಅದೃಷ್ಟವನ್ನು ನೀವು ನಮಗೆ ನೀಡಿದ್ದೀರಿ.
ಮಹಂತಾ
ಮಿತ್ರಾ ವರುಣಾ ದೇವಾವ್ ಅಹುರಹ ಸಖೇ ಯಾ ಫೆಡಿರೋ ವಿಧಾತ್
ಪತ್ಯಯೇ ಕಾ ವಾಸ್ತ್ರೇವ್ಯೋ ಅತ್
ಕಾ ಖತ್ರತವೇ ಅಶವುನೋ ಅಶವಾಯೋ (ಗಾಥಾ 17:4 ಯಶ್ನಾ
53: 4)
ಅನುವಾದ:
ಓ ಅಹುರಾ ಮಜ್ದಾ, ನೀವು ತಂದೆಯಾಗಿ, ಆಡಳಿತಗಾರರಾಗಿ, ಸ್ನೇಹಿತರಾಗಿ, ಕೆಲಸಗಾರರಾಗಿ ಮತ್ತು ಜ್ಞಾನವಾಗಿ ಕಾಣಿಸಿಕೊಳ್ಳುತ್ತೀರಿ. ನಿಮ್ಮ ಅಪಾರ ಕರುಣೆಯಿಂದಾಗಿ ನಿಮ್ಮ ಪಾದದಲ್ಲಿ ಉಳಿಯುವ ಅದೃಷ್ಟವನ್ನು ಮರಣವನ್ನಪ್ಪುವ ನಮಗೆ ನೀಡಿದ್ದೀರಿ
ಇದಲ್ಲದೆ
ಅಥರ್ವ ವೇದದ ಹಲವು ಭಾಗಗಳು ಸಹ ಜಿಂದ್ ಅವೆಸ್ತಾದಲ್ಲಿದೆ.
ಕ್ರಿ.ಪೂ 5000 ರ ಅಥರ್ವ ವೇದ
ಅವೆಸ್ತಾದಲ್ಲಿ ಕಾಣಿಸಿಕೊಳ್ಳುತ್ತದೆ!!!
ಜೊರಾಸ್ಟ್ರಿಯನಿಸಂನ
ನಾಲ್ಕು ಸಾಮಾಜಿಕ ವಿಭಾಗಗಳಾಗಿ ಜಿಂದ್ ಅಬೆಸ್ತಾದಲ್ಲಿ ಬರುವ ವಿವರಣೆ ಹಿಂದೂ
ಗ್ರಂಥಗಳೊಂದಿಗೆ ಹೋಲಿಕೆಗೆ ಸಿಕ್ಕುತ್ತದೆ. ಅವು-
- ಅಥರ್ವ-ಅರ್ಚಕ/ಪಾದ್ರಿ
- ರಥೆಶ್ತಾನ್, ಯೋಧ (ಇಲ್ಲಿ ರಥದ ಸೇರ್ಪಡೆ ಗಮನಿಸಿ ಸಂಸ್ಕೃತದಲ್ಲಿ ರಥ ಎಂಬ ಪದ ಮಹತ್ವವಾಗಿದೆ!)
- ವಸ್ತ್ರಿಯೋಕ್ಸಿಯಾ, ಕೃಷಿ ಕಾರ್ಮಿಕ
- ಹ್ಯೂಟ್ಸ್, ಕಾರ್ಮಿಕ
ಈ
ಮೇಲಿನ ವಿವರಣೆಗಳು ಪ್ರಾಚೀನ ವೇದಗಳಲ್ಲಿನ ನಾಲ್ಕು ಸಾಮಾಜಿಕ ಶ್ರೇಣಿಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ಶೂದ್ರ ಎಂಬ ವಿಭಾಗಕ್ಕೆ ಪರ್ಯಾಯವಾಗಿದೆ!!!
ವೇದಗಳು
ಮತ್ತು ಅವೆಸ್ತಾದಲ್ಲಿ ಬರುವ ಕೆಲ ಸಾಮಾನ್ಯ ಪದಗಳನ್ನು ಪಟ್ಟಿ ಮಾಡೋಣ.
- ಪದ
ಸಂಸ್ಕೃತ
ಅವೆಸ್ತಾ
- ಚಿನ್ನ ಹಿರಣ್ಯ ಜರಣ್ಯ
- ಸೈನ್ಯ ಸೇನಾ ಹೀನಾ
- ಈಟಿ ರಿಸಿ ಅರಿಶಿ
- ಸಾರ್ವಭೋಉಮತ್ವ ಕ್ಷತ್ರ ಕ್ಷಾತ್ರ
- ದೇವರು/ಲಾರ್ಡ್ ಅಸುರ ಅಹುರ
- ಸಮರ್ಪಣೆ ಯಜ್ಞ ಯಸ್ನಾ
- ಅರ್ಚಕ ಹೋತರ್ ಜೋತರ್
- ಪೂಜೆ ಸ್ತ್ರೋತ್ರ ಜವೋತ್ರ
- ಸಮರ್ಪಣೆಯ
ಪವಿತ್ರ ರಸ ಸೋಮ
ಹವೋಮ
ಅಥರ್ವ ವೇದ ಮತ್ತು ಜಿಂದ್ ಅವೆಸ್ತಾದಲ್ಲಿ ಎರಡರಲ್ಲೂ, ತಾತ್ವಿಕ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಹೇಳಿಕೆಗಳು ಕೇವಲ ಹೋಲಿಕೆಯಾಗುವುದಲ್ಲ ಅವು ಒಂದೇ ಆಗಿದೆ!! ಅಥರ್ವ ವೇದದ ಕೆಲ ಅಧ್ಯಾಯಗಳು ಅವೆಸ್ತಾದಲ್ಲಿ ಪರ್ಷಿಯನ್ ಬಾಷೆಯಲ್ಲಿ ಭಾಷಾಂತರಗೊಂಡು ಬಳಕೆಯಾಗಿದೆ.ಸಂಸ್ಕೃತದಲ್ಲಿ "ಎಸ್" ಅಕ್ಷರದಲ್ಲಿದ್ದ ಪದ ಅವೆಸ್ತಾದಲ್ಲಿ "ಎಚ್" ಅಕ್ಷರದಲ್ಲಿ
ಬದಲಾಗಿದೆ.
- ಸೋಮ - ಹೋಮಾ
- ಸಪ್ತಾ - ಹಪ್ತಾ
- ಮಾಸ-ಮಾಹಾ
- ಸೆನಾ - ಹೆನಾ
- ಅಸ್ಮಿ-ಅಹ್ಮಿ(ನಾನು)
- ಸಂತಿ-ಹಂತಿ(ಅವನು)
- ವೈವಸ್ವತ-ವೈವಹ್ನತ
ಸಂಸ್ಕೃತದ
"ಹ" ಕಾರ ಅವೆಸ್ತಾದಕ್ಲ್ಲಿ "ಜೆ" ಅಥವಾ "ಝೆಡ್" ಆಗಿ ಬದಲಾಗಿದೆ
- ಹೃದಯ - ಜರ್ದಯಾ
- ಹಸ್ತ - ಜಂತ
- ವರಾಹ-ವರಾಜ
- ಹೋತಾ-ಜೋತಾ
- ಆಹುತಿ-ಆಜುತಿ
- ಹಿಂ-ಜಿಂ
- ಹ್ವೆ-ಜ್ವೆ
- ವಾಹು-ವಾಜು
- ಅಹಿ-ಅಜಿ
ಸಂಸ್ಕೃತದಲ್ಲಿ
‘ಶ್ವಾ’ ಅನ್ನುಅವೆಸ್ತಾದಲ್ಲಿ ‘ಸ್ಪಾ’ ಎಂದು
ಮಾರ್ಪಡಿಸಿದ ಪದಗಳು:
- ವಿಶ್ವ - ವಿಸ್ಪಾ
- ಅಶ್ವ - ಆಸ್ಪಾ
- ಶ್ವಾನ್-ಸ್ಪಾನ್
- ಕ್ರಿಶಾಶ್ವ-ಕ್ರಿಹಸ್ಪ
- ಸಂಸ್ಕೃತದಲ್ಲಿ “ತಿ" ಅವೆಸ್ತಾದಲ್ಲಿ "ಥಾ" ಆಗಿದೆ
- ಮಿತ್ರ - ಮಿಥ್ರಾ
- ತ್ರಿತ-ಥ್ರಿಥಾ
- ತ್ರೈತಾಲ್ ಮಂತ್ರ-ಥ್ರೈಥಾಲ್ ಮಂಥ್ರಾ
ರಾಜಸ್ಥಾನದ ಜೈಪುರದ ಶಕ್ತಿ-ವೈಷ್ಣವ ಬಿರ್ಲಾ ಮಂದಿರದ ಕಂಬದ ಮೇಲೆ ಜೊರಾಸ್ಟರ್ ನ ಚಿತ್ರ |
ಗುಜರಾತ್‌ನ ಸೂರತ್‌ನ ಶ್ರೀ ಸಾಯಿಬಾಬಾ ಸತ್ಸಂಗ ಮಂಡಲದ ಭಿತ್ತಿಚಿತ್ರದ ಮೇಲೆ ವಿವೇಕಾನಂದರ ಪಕ್ಕ ನಿಂತಿರುವ ಜೊರಾಸ್ಟರ್ ಚಿತ್ರ |
ಜೊರಾಸ್ಟರ್
ಎನ್ನುವುದು ಧರ್ಮ ಸ್ಥಾಪಕನ ಪರ್ಷಿಯನ್ ಹೆಸರಾಗಿದ್ದು ಅವನನ್ನು ಗ್ರೀಕ್ ಭಾಷೆಯಲ್ಲಿ "ಜರತುಷ್ಟ" ಎಂದು ಕರೆಯುತ್ತಾರೆ. "ಜಿಂದ್" ಎಂದರೆ "ವ್ಯಾಖ್ಯಾನ"
ಎಂದರ್ಥ. ಇರಾನಿನ "ಜಾನ್" ಈ ಪದದ ಮೂಲವಾಗಿದ್ದು
"ಜಾನ್" ಎಂದರೆ "ತಿಳಿಯುವುದು/ಕಲಿಯುವುದು" ಎಂದರ್ಥ. "ಅವೆಸ್ತಾ" ಎಂದರೆ "ಅ" ಮತ್ತು "ವೇದ್" ಎಂಬುದರ
ಸ್ಥೂಲರೂಪ. "ಅ" ಎಂದರೆ ನಿರಾಕರಣೆ ಎಂದಾಗಿದ್ದು "ವೇದ್" ಎಂದರೆ "ವೇದ" ಮತ್ತೆ
"ವೇದವಲ್ಲದ್ದರ ತಿಳಿಉವಳಿಕೆ" ಎಂದಾಗಲಿದೆ.!!
ಜೊರಾಸ್ಟರ್
ಕಾಲದಲ್ಲಿ ಪರ್ಷಿಯಾ ಮತ್ತಿತರೆ ಪ್ರದೇಶದಲ್ಲಿ ಭಾರತದ ಸನಾತನ ಸಂಸ್ಕೃತಿಯೇ ಮನೆ ಮಾಡಿತ್ತು. ಅವನು ತನ್ನ ಹೊಸ ಧರ್ಮವನ್ನು ರೂಪಿಸಿದನು ಮತ್ತು ಅವನ ದೇವರನ್ನು ಅಸುರ್ ಮಜ್ದಾ ಎಂದು ಕರೆದನು, ಅಂದರೆ ರಾಕ್ಷಸರ ದೇವರು (ಇದು ನಂತರ ಅಹುರ್ ಮಜ್ದಾ ಎಂದು ಬದಲಾಗಿದೆ) ಅವನು ದೇವಗಳ
ಧರ್ಮವನ್ನು ತಿರಸ್ಕರಿಸಿದ ಅವರ ದೇವರನ್ನು ದುಷ್ಟಶಕ್ತಿ ಎಂದು ಕರೆದರು, ಅವರ ಆರಾಧಕರು ನರಕಕ್ಕೆ ಹೋಗುತ್ತಾರೆ ಎಂದು ನಂಬಿದ್ದ.
ಇನ್ನು
ಜಿಂದ್ ಅವೆಸ್ತಾದಲ್ಲಿನ "ಜಿಂದ್" ಎನ್ನುವ ಪದ ಭಾರತ್ದ ಮೂಲದ
"ಚಾಂದ್" ಗೆ ಸಹ ಸಮಾನವಾಗಿ
ಹೋಲುತ್ತದೆ.
ಮಹಾಭಾರತದ
ಉದ್ಯೋಗ ಪರ್ವದಲ್ಲಿನ ಅಧ್ಯಾಯ 43: 4 [76] ಗಮನಿಸಿ- ಓ
ಕ್ಷತ್ರಿಯ, ಅಥರ್ವಣರು ಮಹಾನ್
ಋಷಿಗಳ ಸಮಾವೇಶದಲ್ಲಿ ವಾಚಿಸಿದ್ದ ಪದ್ಯಗಳನ್ನು ಪ್ರಾಚೀನ ದಿನಗಳಲ್ಲಿ "ಛಂದಾಸ್" ಎಂದು ಕರೆಯಲಾಗುತ್ತಿತ್ತು. ವೇದಗಳ ಮೂಲಕ ಪರಿಚಿತವಾಗಿರುವ ಆತನ ಜ್ಞಾನವನ್ನು ವೇದಗಳ ಮೂಲಕ ಮಾತ್ರ ಓದಿದ ಮಾತ್ರಕ್ಕೆ ಅವರನ್ನು ಪರಿಣಿತರು ಅಥವಾ ಪಂಡಿತರೆಂದು ಪರಿಗಣಿಸಲಾಗುವುದಿಲ್ಲ. ಛಂದಾಗಳು ಸ್ವತಂತ್ರವಾಗಿ ಮತ್ತು ವಿದೇಶಿಗರ ಸಹಾಯವಿಲ್ಲದೆದೆ ಬ್ರಹ್ಮನನ್ನು (ಮೋಕ್ಷ) ಗಳಿಸುವ ಸಾಧನವಾಗುತ್ತಾರೆ.
'ಅವೆಸ್ತಾ'
ಎಂಬ ಪದವು ಸಂಸ್ಕೃತ 'ಅಭ್ಯಾಸ್ತ' ದಿಂದ ಬಂದಿದೆ, ಅಂದರೆ ಪುನರಾವರ್ತಿತ. ಆದ್ದರಿಂದ, ಅವೆಸ್ತಾ (ಅಭ್ಯಾಸ್ತಾ) ಮೂಲತಃ ಜೊರಾಸ್ಟರ್ ನ ಬೋಧನೆಗಳ ಪುನರಾವರ್ತನೆಯಾಗಿದೆ
ಒಳ್ಳೆಯದನ್ನು
ಅಹುರಾ ಮಜ್ದಾ ಮೂಲಕ ಪ್ರತಿನಿಧಿಸಲಾಗುತ್ತದೆ, ಮತ್ತು ಕೆಟ್ಟದ್ದು ಅಂಗ್ರಾ ಮೈನ್ಯುವಿನ ಮೂಲಕ ಬರುತ್ತದೆ. ಬೋಧನೆಗಳ ಸ್ತೋತ್ರವು ಗ್ಯಾಥಿಕ್ ಅವೆಸ್ತಾನ್ ಭಾಷೆಯಲ್ಲಿದೆ, ಇದು ವೈದಿಕ ಸಂಸ್ಕೃತಕ್ಕೆ ನಿಕಟ ಸಂಬಂಧ ಹೊಂದಿದೆ ಇದನ್ನು ಸುಮಾರು ಕ್ರಿ.ಪೂ 600 ರಲ್ಲಿ ಬರೆಯಲಾಗಿದೆ; ಆದಾಗ್ಯೂ ಅದರೊಂದಿಗೆ ಬರುವ ಧಾರ್ಮಿಕ ಆಚರಣೆಗಳು ಬಹಳ ಹಿಂದಿನ ಅವಧಿಯಿಂದ ಜಾರಿಯಲ್ಲಿತ್ತು.
ಮಜ್ದೇನ್
ವಿದ್ವಾಂಸರಾದ ಜುಬಿನ್ ಮೆಹ್ತಾ ಮತ್ತು ಗುಲ್ಶನ್ ಮಜೀದ್ ಜೊರಾಸ್ಟ್ರಿಯನ್ ಪದ್ಧತಿಗಳೊಂದಿಗೆ ಕಾಶ್ಮೀರಿ ಪದ್ಧತಿಗಳ ಹೋಲಿಕೆಯನ್ನು ಗಮನಿಸಿದ್ದರು. ಆಧುನಿಕ ಯುಗದಲ್ಲಿ, ಕೆಲವು ಮಜ್ದೇನ್ ಪಾದ್ರಿಗಳು ಕಾಶ್ಮೀರಕ್ಕೆ ಭೇಟಿ ನೀಡಿದ್ದರು, ಅವರಲ್ಲಿ ಅಜರ್ ಕೈವಾನ್] ಮತ್ತು ಅವರ ಡಜನ್ ಶಿಷ್ಯರು ದಬಿಸ್ತಾನ್-ಇ ಮಜಾಹಿಬ್ ಅನ್ನು
ಸಂಕಲಿಸಿದ ಮೊಬಾದ್ ಜುಲ್ಫಿಕರ್ ಅರ್ದಸ್ತಾನಿ ಸಸಾನಿ ಸಹ ಸೇರಿದ್ದಾರೆ.
ಜೊರಾಸ್ಟ್ರಿಯಂ
ನಲ್ಲಿ ಶುಕ್ರಾಚಾರ್ಯ
ಇದೀಗ
ನಾವು ಜೊರಾಸ್ಟ್ರಿಯಂ ನಲ್ಲಿ ಬರುವ ಶುಕ್ರಾಚಾರ್ಯನ ಉಲ್ಲೇಖವನ್ನು ನೋಡೋಣ. ಇದರಿಂದ ಶುಕ್ರಾಚಾರ್ಯ ಹಾಗೂ ಕೊರಾಟರ್ ನಡಿವಿನ ಸಾಂಪರ್ಕ ಇನ್ನಷ್ಟು ಸ್ಪಷ್ಟವಾಗಲಿದೆ. ಅಹುರ ಮಜ್ದಾಯಾಸನ ಎನ್ನುವುದು ಹಿಂದೂಧರ್ಮದ ಅಥವಾ ಸನಾತನ ಧರ್ಮದ ಅಸುರ
ಎಂದು ಅರ್ಥೈಸಲಾಗಿದೆ. ಅಸುರರ
ಗುರುಗಳಾದ ಶುಕ್ರಾಚಾರ್ಯ ಅಥವಾ ಕವಿ ಉಸಾನನ್ನು ಅತ್ಯಂತ
ಪವಿತ್ರ ಜೀವಿಗಳಲ್ಲಿ ಒಬ್ಬರೆಂದು ಪೂಜಿಸಲಾಗುತ್ತಿತ್ತು ಎನ್ನುವುದರಲ್ಲಿ ಯಾವ ಸಂದೇಹವಿಲ್ಲ. ಈ ಕವಿ ಉಸಾನ
ಅಥವಾ ಶುಕ್ರಾಚಾರ್ಯ "ವರುಣ"ನ ಆರಾಧಕ ಎನ್ನುವುದು ಶತಪಥ ಬ್ರಾಹ್ಮಣ ಸೇರಿ ಅನೇಕ ಕಡೆಗಳಲ್ಲಿ ವರ್ಣನೆ ಇದೆ.
ಅವೆಸ್ತಾದಲ್ಲಿ
ಕವಿ ಉಸಾನನನ್ನು "ಅಸ್" ಎಂದು ಕರೆಯಲಾಗಿದೆ!! ನಂತರದ ಬಹ್ರಮ್ ಯಶ್ತ್ನಲ್ಲಿ "ಕವಿ ಉಶಾ" ಎಂದು ಗುರುತಿಸಲಾಗಿದೆ.
ಜಿಂದ್
ಅವೆಸ್ತಾದ ಯಶ್ನಾ29ರ ಈ ವಾಕ್ಯವನ್ನು
ಗಮನಿಸಿ- "ಇದು ನಮಗೆ ತಿಳಿದಿದ್ದಾಗಿದೆ. ಅವನು ನಮ್ಮ ಉಪದೇಶವನ್ನಷ್ಟೇ ಕೇಳಿದ್ದಾನೆ. ಜೊರಾಸ್ಟರ್ ಪವಿತ್ರ
ಮಾನವ ಅವನು ನಮ್ಮಿಂದ
ಕೇಳುತ್ತಾನೆಮಜ್ದಾ ಮತ್ತು ಆಶಾ, ಘೋಷಿಸಲು ಸಹಾಯ ಮಾಡುತ್ತಾರೆ, ನಾನದನ್ನು ಮಾತಿನ ಕೌಶಲ್ಯದಿಂದ ಮಾಡುವೆನು."
ಕವಿ
ಉಶನನ್ನು ಕವ ಉಶನ್ ಅಶ್ವರೆಚೋ
ಎಂದೂ ಅವಸ್ತಾದಲ್ಲಿ ಕರೆಯಲಾಗಿದೆ. ಇದರರ್ಥ ಹಿಂದೂಧರ್ಮದ ಕವಿ ಉಸಾನನ ಹೆಸರು ಶುಕ್ರಾಚಾರ್ಯನಾಗಿದ್ದು ಶುಕ್ರನೆಂದರೆ ಪ್ರಕಾಶ, ವಿಕಿರಣ ಅರ್ಥವು ಹೇಗೆ ಬರುವುದೋ ಅದೇ ಅರ್ಥವನ್ನು ಈ ಅಶ್ವರೆಚೋ ಎಂಬ
ಪದವೂ ಹೊರಹೊಮ್ಮಿಸಿದೆ! "ಯೋಗ ವಸಿಶ್ಟ" ದಂತಹಾ ಗ್ರಂಥಗಲೂ ಶುಕ್ರಾಚಾರ್ಯನನ್ನು ಪ್ರಕಾಶಮಾನವಾದ ಯುವಶುಕ್ರ ಎಂದು ವರ್ಣಿಸಿದೆ. ರಾಮಾಯಣದಲ್ಲಿ ಸಹ ಶುಕ್ರನನ್ನು ಸೂರ್ಯನಂತೆ
ಪ್ರಕಾಶಮಾನವಾಗಿರುವನೆಂದು
ವರ್ಣಿಸಲಾಗಿದೆ.
ಆದರೆ
ಅವೆಸ್ತಾದಲ್ಲಿ ಶುಕ್ರನನ್ನು "ಶುಕ್ರ" ಎನ್ನುವುದಿಲ್ಲ. ಏಕೆಂದರೆ ಆ ಹೆಸರನ್ನು ಅಹುರಾ
ಮಜ್ದಾ ಎಂಬ ಹೆಸರಿನೊಂದಿಗೆ ಸಂರಕ್ಷಿಸಲಾಗಿದೆ!! (ಇಲ್ಲಿ ಗಮನಿಸಿ ಜೊರಾಸ್ಟರ್ ಗೆ ಶುಕ್ರಾಚಾರ್ಯನಿಂದ ವೇದಶಾಸ್ತ್ರಾದಿಗಳ ತಿಳುವಳೀಕೆ ಬಂದಿದ್ದು
ಶುಕ್ರಾಚಾರ್ಯ ಅಸುರ ಗುರುವಾಗಿದ್ದರು. ಅವರು ಜೊರಾಸ್ಟರ್ ಗೆ ಅಸುರರಿಗೆ ತಕ್ಕುದಾಗಿರುವ
ನೀತಿಗಳನ್ನು (ದೇವತೆಗೆ ವಿರುದ್ಧವಾದ ಅಥವಾ ಸನಾತನ ಧರ್ಮಕ್ಕೆ ವಿರುದ್ಧವಾದ) ಬೋಧಿಸಿದ್ದರು, ಹಾಗಾಗಿ ತನ್ನ ಗುರುವಿನ ಹೆಸರನ್ನು ಜೊರಾಸ್ಟರ್ ತನ್ನ ಹೊಸ ಧರ್ಮದ ಪ್ರಧಾನ ದೇವತೆಯ ಹೆಅರಿನೊಂದಿಗೆ ಸಮಾನವಾಗಿರಿಸಿದ್ದ,!!!) ಅಲ್ಲದೆ
ಈ ಅಹುರ ಮಜ್ದಾ ಎನ್ನುವುದರ ಇನ್ನೊಂದು ವಿಸ್ಕೃತ ರೂಪ "ಅಥ್ರಾ
ಸುಖ್ರಾ ಮಜ್ದಾ" ಎಂದಿದೆ!!!! ಎಂದರೆ ಕವಿ ಉಸಾನನೈಗೆ ಅನೇಕ ಹೆಸರುಗಳಿದ್ದವು ಎನ್ನುವುದು ಸ್ಪಷ್ಟ.
ಉಸಾನನಿಗೆ
ಪ್ರಾಮುಖ್ಯತೆ ನೀಡಿರುವದರ ಹಿಂದೆಇನ್ನೊಂದು ಕಾರಣವಿದೆ. ಈತ
ಅಂಗೀರಸನಿಂದ ಬಂದವ(ಶುಕ್ರಾಚಾರ್ಯನ ಮೊದಲ ಗುರು ಅಂಗೀರಸ) ಕಾವ್ಯವು ಕವಿಯಿಂದ ಹೊರಹೊಮ್ಮಿತು ಎಂದು ಮಹಾಭಾರತ ಉಲ್ಲೇಖಿಸುತ್ತದೆ. ಮನು ಸ್ಮೃತಿ ಕವಿಯನ್ನು ಅಂಗೀರಸನ ವಂಶಜನನ್ನಾಗಿ ಸ್ಥಾಪಿಸಿದೆ.
ಹಿಂದೂ
ಜ್ಯೋತಿಷ್ಯಶಾಸ್ತ್ರದಲ್ಲಿ
ಉಸಾನಾ ಹೇಗೆ ರಾಜಪ್ರತಿನಿಧಿ ನಕ್ಷತ್ರಪುಂಜವಾಗಿದೆಯೋ(ಶುಕ್ರನು ಜ್ಯೋತಿಷ್ಯದಲ್ಲಿ ಬರುವ ಪ್ರಧಾನ ಗ್ರಹಗಳಲ್ಲಿ ಒಂದು) ಅವೆಸ್ತಾದಲ್ಲಿ ಆತನನ್ನು ಹ್ಯಾಪ್ಟೋ-ಇರಿಂಗಾಸ್ ಎಂದು ಗುರುತಿಸಿದ್ದು ಅಲ್ಲಿಯೂ ಸಹ ಗ್ರೇಟ್ ಬೇರ್
ನಕ್ಷತ್ರಪುಂಜ,ದಲ್ಲಿ ಬರುವ ಒಂದು ಪ್ರಧಾನ ನಕ್ಷತ್ರವಾಗಿ ಗುರುತಿಸಿದ್ದಾರೆ!!!!
....ಮುಂದುವರಿಯುವುದು
No comments:
Post a Comment