Monday, September 14, 2020

ಜುದಾಯಿಸಂ, ಇರಾಕಿನ ಯಾಜಿದಿಗಳಿಗೂ ಇದೆ ಶುಕ್ರಾಚಾರ್ಯನ ನಂಟು!!

 ಹಿಂದೂ ಧರ್ಮ ಮತ್ತು ಜುದಾಯಿಸಂ

ಜೊರಾಸ್ಟ್ರಿಯನಿಸಂ ನಿಂದ ಕವಲೊಡೆದ ಪ್ರಥಮ ಮತ ಎಂದರೆ ಅದು ಜುದಾಯಿಸಂ. ಹಿಂದೂ ಧರ್ಮ ಮತ್ತು ಜುದಾಯಿಸಂ ವಿಶ್ವದ ಅತ್ಯಂತ ಹಳೆಯ ಧರ್ಮಗಳಲ್ಲಿ ಒಂದಾಗಿದೆ. ಆಧುನಿಕ ಕಾಲದಲ್ಲಿಯೂ ಎರಡೂ ಧರ್ಮಗಳಲ್ಲಿ ಕೆಲ ಹೋಲಿಕೆಗಳನ್ನು ಮತ್ತು ಪರಸ್ಪರ ಕ್ರಿಯಾ ವಿಧಾನವನ್ನು ಹಂಚಿಕೊಂಡಿದ್ದಾರೆ.

ಇದು ಜುದಾಯುಸಂ ಧರ್ಮದ ಚಿಹ್ನೆ- ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ನಾವು ಗಣಪತಿಯನ್ನು ಪೂಜಿಸಲು ಇಂತಹದೇ ಚಿಹ್ನೆ ಬಳಸುತ್ತೇವೆ!!

ಹಿಂದೂ ಧರ್ಮ ಮತ್ತು ಜುದಾಯಿಸಂ ಅನ್ನು ಹೋಲಿಸುವ ವಿದ್ವತ್ಪೂರ್ಣ ಪ್ರಯತ್ನಗಳು ನವೋದಯ ಕಾಲಘಟ್ಟದಲ್ಲಿ ನಡೆದ್ತ್ತು. ದೇವತಾವಾದಿ ವಿಶ್ವ ದೃಷ್ಟಿಕೋನವನ್ನು ವಾದಿಸುವ ಪ್ರಕ್ರಿಯೆಯಲ್ಲಿ  ಇದು ಜನಪ್ರಿಯಗೊಂಡಿತ್ತು. ವಿಗ್ರಹಾರಾಧನೆ, ಆಧ್ಯಾತ್ಮಿಕತೆ, ಪ್ರಾಚೀನ, ಜನಾಂಗದ ಸಿದ್ಧಾಂತಗಳು, ಭಾಷೆ, ಪುರಾಣಗಳು ಇತ್ಯಾದಿಗಳ ಯುರೋಪಿಯನ್ ಚರ್ಚೆಗಳಲ್ಲಿ ಹಿಂದೂ ಧರ್ಮ ಮತ್ತು ಜುದಾಯಿಸಂ ಪ್ರಮುಖ ಪಾತ್ರ ವಹಿಸಿವೆ ಎಂದು ಹನ್ಯಾ ಗುಡ್ಮನ್ ಹೇಳುತ್ತಾರೆ ಎರಡೂ ಧರ್ಮಗಳನ್ನು ಕೆಲವು ವಿದ್ವಾಂಸರು ಜನಾಂಗೀಯ ಧರ್ಮವೆಂದು ಪರಿಗಣಿಸಿದ್ದರು ಮತ್ತು ಮತಾಂತರಗಳನ್ನು ಉತ್ತೇಜಿಸಲಿಲ್ಲ. ಆದಾಗ್ಯೂ, ಎರಡೂ ಧರ್ಮಗಳ ಅನುಯಾಯಿಗಳು ಪ್ರಪಂಚದಾದ್ಯಂತ ಕಂಡುಬರುತ್ತಾರೆ] ತಮ್ಮ ಸಮುದಾಯಗಳನ್ನು ವ್ಯಾಖ್ಯಾನಿಸಲು ಕಾನೂನುಗಳು, ಶುದ್ಧತೆ ಸಂಕೇತಗಳು ಮತ್ತು ಆಹಾರ ನಿರ್ಬಂಧಗಳ ಸಂಕೀರ್ಣ ವ್ಯವಸ್ಥೆಗೆ ಸಂಬಂಧಿಸಿದಂತೆ ಎರಡೂ ಧರ್ಮಗಳು ಸಾಮಾನ್ಯ ಅಂಶಗಳನ್ನು ಹೊಂದಿವೆ.

ಜುದಾಯಿಸಂ ಅನ್ನು ಓಶೋ ರಜನೀಶ್ ಹಾಗೂ  ಸ್ಟೀವನ್ ರೋಸೆನ್ ತಮ್ಮ ಪುಸ್ತಕಗಳಲ್ಲಿ ಬ್ರಾಹ್ಮಣ ಧರ್ಮದೊಂದಿಗೆ ಹೋಲಿಸಿದ್ದಾರೆ. ತಮ್ಮನ್ನು "ದೇವರು ಆಯ್ದ ಜನರು" ಎಂದು ಭಾವಿಸಿದ ಬ್ರಾಹ್ಮಣರು ಮತ್ತು ಯಹೂದಿಗಳ ನಡುವಿನ ಸಾಮ್ಯತೆಯನ್ನು ಅವರು ಉಲ್ಲೇಖಿಸುತ್ತಾರೆ. ರೋಸೆನ್ ಬ್ರಾಹ್ಮಣರಿಗೆ "ಪುರೋಹಿತರ ಸಮುದಾಯ" ವನ್ನು ಹೊಂದಿದ್ದರೆ, ಯಹೂದಿಗಳು "ಅರ್ಚಕರ ರಾಜ್ಯ(Kingdom of Priests)" ವನ್ನು ಹೊಂದಿದ್ದರು

ಅಬ್ರಹಾಮನ ಕಥೆಯು ಉಪನಿಷತ್ತುಗಳ ಒಂದು ನಿರ್ದಿಷ್ಟ ಕಥೆಯೊಂದಿಗೆ ಅನೇಕ ಹೋಲಿಕೆಗಳನ್ನು ಹೊಂದಿದೆ ಎಂದು ಡೇವಿಡ್ ಫ್ಲೂಸರ್ ಹೇಳುತ್ತಾರೆ, "ಒಬ್ಬರು ಉಪನಿಷತ್ತುಗಳಲ್ಲಿನ ಅಬ್ರಹಾಂ ದಂತಕಥೆಯ ರೂಪಾಂತರವನ್ನು ಸುಲಭವಾಗಿ ಗುರ್ತಿಸಬಹುದು"ಎಂದು ಹೇಳಿದ್ದಾರೆ. (ಆಡಮ್ ಈವ್ ಕಥೆಯೂ ಸಹ ಪ್ರಾಚೀನಆದ ಪ್ರಶ್ನೋಪನಿಷತ್ ಹಾಗೂ ಮುಂಡಕೋಪನಿಷತ್ ನಲ್ಲಿದೆ.!!!) ಅಮೇರಿಕನ್ ಜೀವಶಾಸ್ತ್ರಜ್ಞ ಕಾನ್ಸ್ಟಂಟೈನ್ ಸ್ಯಾಮ್ಯುಯೆಲ್ ರಾಫಿನೆಸ್ಕ್ (1783-1840) ತನ್ನ " The American Nations" ಪುಸ್ತಕದಲ್ಲಿ ಎರಡು ಧರ್ಮಗಳ ನಡುವಿನ ಭಾಷೆ ಹಾಗೂ  ಸಾಂಪ್ರದಾಯಿಕ ಸಾಮ್ಯತೆಗಳನ್ನು ಚರ್ಚಿಸಿದ್ದಾನೆ. ಅವನು ಒಂದು ಅಧ್ಯಾಯದಲ್ಲಿ ಬರೆದಂತೆ-

"ನಮ್ಮ Noah-is  thus NH ಅನ್ನು ಯಹೂದಿಗಳು NUH ಮತ್ತು ಇನ್ನೂ ಸ್ಪಷ್ಟವಾಗಿ Mnuh ಎಂದು ಉಚ್ಚರಿಸಿದ್ದಾರೆ! ಹಿಂದೂಗಳು ಅವನಿಗೆ ನೀಡಿದ ಅದೇ ಹೆಸರು "ಮನು" ಎಂದಿದೆ!! ಮತ್ತು ಹಿಂದೂಗಳ ವೇದಗಳಲ್ಲಿ : ಅವನಿಗೆ ವೇದಗಳ ವಸ್ತುವನ್ನು ಮತ್ತು ಇಡೀ ಮೊಸಾಯಿಕ್ ಇತಿಹಾಸವನ್ನು ಅವನ ಮರಣದ ತನಕವೂ ಹೇಳಲಾಗುತ್ತದೆ. ಆದರೆ ಹಿಂದೂಗಳು ಅನೇಕ ಮನುಗಳನ್ನು ಹೊಂದಿದ್ದಾರೆ. ; ಆಡಮ್ ಮತ್ತು ಸೇಥ್ ನಂತೆ ಆದಿಮ ಹಾಗೂ ಸತ್ಯ ಎಂಬ ಹೆಸರುಗಳಿಂದ ಹಿಂದೂಗಳು ಅವರನ್ನು ಕರೆಯುತ್ತಾರೆ."

ಇನ್ನು ಭಾರತ ಮತ್ತು ಲೆವಂಟ್ ನಡುವಿನ ಪ್ರಾಚೀನ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂವಹನವನ್ನು ಎರಿಥ್ರೇನ್ ಸಮುದ್ರದ ಪೆರಿಪ್ಲಸ್ ಮತ್ತು ಹೀಬ್ರೂ ಬೈಬಲ್ ಶೆಬಾ ರಾಣಿಯ ಕಥೆಗಳಲ್ಲಿ  ದಾಖಲಿಸಲಾಗಿದೆ. ಅಲ್ಲದೆ ಭವಿಷ್ಯ ಪುರಾಣದಲ್ಲಿ ಹಲವಾರು ಕಡೆ ಜುದಾಯಿಸಂನ ಪ್ರವಾದಿ ಮೋಶೆಯ ಕಾಲ್ಪನಿಕ ವಿವರಣೆ ಇದೆ ಎಂದು  ಹಲವಾರು ವಿದ್ವಾಂಸರು ಹೇಳಿದ್ದಾರೆ. ಹಾಗೆಯೇ ಅದೇ ಬಗೆಯ ಸಮಾನ ವಿವರಗ್ಳು ವೇದಗಳಲ್ಲಿ ಸಹ ಕಾಣಿಸಿಕೊಳ್ಳುತ್ತದೆ!!

ಎರಡೂ ಸಮುದಾಯಗಳ ವ್ಯಾಪಾರ ಸಂಬಂಧಗಳನ್ನು ಕ್ರಿ.ಪೂ 1,000 ಮತ್ತು ಹಿಂದಿನ ಭಾರತೀಯ ಉಪಖಂಡದ ಸಿಂಧೂ ಕಣಿವೆ ನಾಗರೀಕತೆ ಮತ್ತು ಮಧ್ಯಪ್ರಾಚ್ಯದ ಬ್ಯಾಬಿಲೋನಿಯನ್ ಸಂಸ್ಕೃತಿಯ ಕಾಲದಿಂದಲೂ ಗುರುತಿಸಬಹುದು. ಇದಕ್ಕೆ ಸಾಕ್ಷಿಯಾಗಿ ಬೌದ್ಧ ಕಥೆಯೊಂದು ಭಾರತೀಯ ವ್ಯಾಪಾರಿಗಳು ಬಾವೆರು (ಬ್ಯಾಬಿಲೋನಿಯಾ) ] ಗೆ ಭೇಟಿ ನೀಡಿ ನವಿಲುಗಳನ್ನು ಸಾರ್ವಜನಿಕ ಪ್ರದರ್ಶನಕ್ಕಾಗಿ ಮಾರಾಟ ಮಾಡುವುದನ್ನು ವಿವರಿಸುತ್ತದೆ. ಇದೇ ರೀತಿಯ, ಹಿಂದಿನ ದಾಖಲೆಗಳು  ಸಾರ್ವಜನಿಕ ಪ್ರದರ್ಶನಕ್ಕಾಗಿ ಕೋತಿಗಳನ್ನು ಮಾರಿದ ಕಥೆಯನ್ನು ಹೊಂದಿದೆ. ಇನ್ನೂ ಸ್ಪಷ್ಟವಾಗಿ ಎರಡು ಸಂಪ್ರದಾಯಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಹಳೆಯ ಒಡಂಬಡಿಕೆಯು ಸಹಕಾರಿಯಾಗಿದೆ. ಇಸ್ರೇಲಿನ ಭೌಗೋಳಿಕ ವಿಶ್ಲೇಷಣೆಯು ಹಳೆಯ ಒಡಂಬಡಿಕೆಯ ಲೇಖಕರು ಭಾರತದ ಬಗ್ಗೆ ಮಾತನಾಡಿದ್ದಾರೆ!!ಅಲ್ಲಿ ಕೋತಿಗಳು ಮತ್ತು ನವಿಲುಗಳಂತಹ ಪ್ರಾಣಿಗಳ ಮಾರಾಟವು ಅಸ್ತಿತ್ವದಲ್ಲಿತ್ತು ಭಾರತ ಮತ್ತು ಪ್ಯಾಲೆಸ್ಟೈನ್ ಮತ್ತು ಮೆಡಿಟರೇನಿಯನ್ ಯಹೂದಿ ಸಮುದಾಯಗಳ ನಡುವಿನ ವ್ಯಾಪಾರ ಸಂಪರ್ಕಗಳು ಮುಂದುವರೆದವು, ಮತ್ತು ನಂತರ, ಸಂಸ್ಕೃತಿಗಳ ಭಾಷೆಗಳು ಭಾಷಾ ಸಾಮ್ಯತೆಯನ್ನು ಹಂಚಿಕೊಳ್ಳಲು ಪ್ರಾರಂಭಿಸಿದವು.

ಶಿವನ ತ್ರಿಶೂಲವಿರುವ ಬಾಕುವಿನ  ಅಗ್ನಿ ದೇವಾಲಯ

ಶಿವನ ತ್ರಿಶೂಲವಿರುವ ಬಾಕುವಿನ  ಅಗ್ನಿ ದೇವಾಲಯ ಪಾರ್ಸಿಗಳಿಗೆ ಪವಿತ್ರವೆಂದು ಈಗಲೂ ನಂಬಲಾಗುತ್ತದೆ!! ದೇವಾಲಯ ಇತಿಹಾಸ ನೋಡಿ-

ಬಾಕುವಿನ  ಅಗ್ನಿ ದೇವಾಲಯ

ಅಜರ್ಬೈಜಾನ್ ಬಾಕುದಲ್ಲಿನ ಉಪನಗರವಾದ ಸುರಖಾನಿಯಲ್ಲಿರುವ ಬಾಕು ಅಟೆಷ್ಗಾ ಅಥವಾ "ಫೈರ್ ಟೆಂಪಲ್" ಒಂದು ಕೋಟೆಯಂತಹ ಧಾರ್ಮಿಕ ದೇವಾಲಯವಾಗಿದೆ. ಪರ್ಷಿಯನ್ ಮತ್ತು ಭಾರತೀಯ ಶಾಸನಗಳ ಆಧಾರದ ಮೇಲೆ, ದೇವಾಲಯವನ್ನು ಹಿಂದೂ, ಸಿಖ್ ಮತ್ತು ಜೊರಾಸ್ಟ್ರಿಯನ್ ಅಗ್ನಿ ಆರಾಧನಾ ಸ್ಥಳವಾಗಿ ಬಳಕೆ ಮಾಡಲಾಗುತ್ತಿತ್ತುಸನ್ಯಾಸಿಗಳಿಗೆ ಕೋಶಗಳಿಂದ ಆವೃತವಾದ ಪ್ರಾಂಗಣ ಮತ್ತು ಮಧ್ಯದಲ್ಲಿ ಟೆಟ್ರಾಪಿಲ್ಲರ್-ಬಲಿಪೀಠವನ್ನು ಹೊಂದಿರುವ ಪೆಂಟಗನಲ್ ಸಂಕೀರ್ಣವನ್ನು 17 ಮತ್ತು 18 ನೇ ಶತಮಾನಗಳಲ್ಲಿ ನಿರ್ಮಿಸಲಾಗಿದೆ. 1883 ನಂತರ ತೈಲ ಮತ್ತು ಅನಿಲ ಸ್ಥಾವರಗಳನ್ನು ಸ್ಥಾಪಿಸಿದಾಗ ದೇವಾಲಯಕ್ಕೆ ನೈಸರ್ಗಿಕ ಅನಿಲದ ಹರಿವನ್ನು ಕೊನೆಗೊಳಿಸಲಾಯಿತು. ಮತ್ತು ಸಾವಿರಾರು ವರ್ಷಗಳಿಂದ ಉರಿಯುತ್ತಾ ಬಂದಿದ್ದ ಪವಿತ್ರ ಜ್ವಾಲೆ ನಂದಿ ಹೋಯಿತು.

ಬಾಕು ಅಟೆಷ್ಗಾ ಮುಲ್ತಾನ್ ಅಗ್ನಿ ಆರಾಧಕರ ಯಾತ್ರಾ ಮತ್ತು ತಾತ್ವಿಕ ಕೇಂದ್ರಗಳಾಗಿದ್ದು, ಅವರು ಪ್ರಸಿದ್ಧ "ಗ್ರ್ಯಾಂಡ್ ಟ್ರಂಕ್ ರಸ್ತೆ" ಮೂಲಕ ಕ್ಯಾಸ್ಪಿಯನ್ ಪ್ರದೇಶದೊಂದಿಗೆ ವ್ಯಾಪಾರದಲ್ಲಿ ತೊಡಗಿದ್ದರು. ಅವರ ನಂಬಿಕೆಯ ನಾಲ್ಕು ಪವಿತ್ರ ಅಂಶಗಳು: ಅಟೆಶಿ (ಬೆಂಕಿ), ಬಡಿ (ಗಾಳಿ), ಅಬಿ (ನೀರು) ಮತ್ತು ಹೆಕಿ (ಭೂಮಿ)

1883 ನಂತರ ಸುರಖಾನಿಯಲ್ಲಿ ಪೆಟ್ರೋಲಿಯಂ ಸ್ಥಾವರಗಳನ್ನು (ಉದ್ಯಮ) ಸ್ಥಾಪಿಸುವುದರೊಂದಿಗೆ ದೇವಾಲಯವು ಪೂಜಾ ಸ್ಥಳದ ಪಾವಿತ್ರ ಕಳೆದುಕೊಂಡಿತು. ಸಂಕೀರ್ಣವನ್ನು 1975 ರಲ್ಲಿ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಯಿತು. 1998 ರಲ್ಲಿ ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಇದು ನಾಮಕರಣಗೊಂಡಿತು, ಗ್ಲೋಬ್ ಟ್ರೆಕ್ಕರ್ ಒಂದು ಕಂತಿನಲ್ಲಿಯೂ ಇದು ಕಾಣಿಸಿಕೊಂಡಿತ್ತು. 19 ಡಿಸೆಂಬರ್ 2007 ರಂದು ಅಜೆರ್ಬೈಜಾನ್ ಅಧ್ಯಕ್ಷರ ತೀರ್ಪಿನಿಂದ ಇದನ್ನು ರಾಜ್ಯ ಐತಿಹಾಸಿಕ-ವಾಸ್ತುಶಿಲ್ಪ ಮೀಸಲು ತಾಣ ಎಂದು ಘೋಷಿಸಲು ಸಾಧ್ಯವಾಗಿದೆ.

ಇರಾಕ್‌ನ ಯಾಜಿದಿಗಳು ಪ್ರಾಚೀನ ಹಿಂದೂ ಅರ್ಚಕರು!!

ಗೊಬೆಕ್ಲಿ ತೇಪಿಯ ಪ್ರಾಚೀನ ಹಿಂದೂ ಅರ್ಚಕರು ಈಗ ಇರಾಕ್ ಮತ್ತು ಸುತ್ತಮುತ್ತ ವಾಸಿಸುವ ಯಾಜಿದಿಗಳು.

ಯಾಜಿದಿಗಳನ್ನು ಮತಾಂತರಗೊಳಿಸಲು ಇರಾಕ್ ಅಲ್ಲಿ ಐಸಿಸ್ ನರಕ ತಲೆ ಎತ್ತಿದೆ. ಅವರು ವಿರೋಧಿಸಿದಾಗ,ಪ್ರತಿದಿನ ನೂರಾರು ಜನರನ್ನು ಕೊಲ್ಲಲಾಗುತ್ತದೆ ಹಾಗೂ ಅವರ ಮಹಿಳೆಯರನ್ನು  ಲೈಂಗಿಕ ಗುಲಾಮರನ್ನಾಗಿ ಮಾಡಿಕೊಳ್ಳಲಾಗುತ್ತದೆ.


ಯಾಜಿದಿಗಳು ಏಕದೇವತಾವಾದಿಗಳು, ದೇವರನ್ನು ವಿಶ್ವದ ಸೃಷ್ಟಿಕರ್ತ ಎಂದು ನಂಬುತ್ತಾರೆ, ಇದನ್ನು ಅವರು ಏಳು ಪವಿತ್ರ ಜೀವಿಗಳು ಅಥವಾ ದೇವತೆಗಳ ಆಧಾರದ ಮೇಲೆ ಇರಿಸುತ್ತಾರೆ. ರೆ, ಅವರಲ್ಲಿ ಮುಖ್ಯರಾದ ಮೆಲೆಕ್ ತೌಸ್, ಪಿಕಾಕ್ ಏಂಜೆಲ್. ಪಿಕಾಕ್ ಏಂಜೆಲ್, ವಿಶ್ವ-ಆಡಳಿತಗಾರನಾಗಿ ಒಳ್ಳೆಯ ಮತ್ತು ಕೆಟ್ಟ ಎರಡನ್ನೂ ವ್ಯಕ್ತಿಗಳಿಗೆ ಅವರವರ ಫಲ ನೀಡುತ್ತದೆ.

ಇವರ ಪ್ರಾಚೀನ ಸಂಸ್ಕೃತಿ ಯಾಜಿದಿಸಂ (ಒಂದು ರೀತಿಯ ಯಾಜ್ದಾನಿಸಂ)ಜೊರಾಸ್ಟ್ರಿಯನಿಸಂ  ಮತ್ತು ಪ್ರಾಚೀನ ಮೆಸೊಪಟ್ಯಾಮಿಯಾದ ಧರ್ಮಗಳೊಂದಿಗೆ ಸಂಬಂಧ ಹೊಂದಿದೆ, ಆದಾಗ್ಯೂ ಯಾಜಿದಿಗಳು ಒಂದು ವಿಶಿಷ್ಟ ಮತ್ತು ಸ್ವತಂತ್ರ ಧಾರ್ಮಿಕ ಸಮುದಾಯವನ್ನು ಹೊಂದಿದ್ದಾರೆ. ತಮ್ಮದೇ ಆದ ಸಂಸ್ಕೃತಿಯನ್ನು ಹೊಂದಿದ್ದಾರೆ. ಇವರಿಗೆ ನವಿಲುಗಳು ಹೇಗೆ ದೇವರಾದವು? ಏಕೆಂದರೆ ಯಾವುದೇ ಮಧ್ಯಪ್ರಾಚ್ಯ ದೇಶದಲ್ಲಿ ನವಿಲುಗಳು ಕಂಡುಬರುವುದಿಲ್ಲ. ಅವು ಭಾರತದಲ್ಲಿ ಕಂಡುಬರುತ್ತವೆ. ಅಲ್ಲದೆ, ಯಾಜಿದಿಗಳು ಎಣ್ಣೆ ದೀಪಗಳನ್ನು ನವಿಲುಗಳೊಡನೆ ಚಿಹ್ನೆಗಳಆಗಿ ಬಳಕೆ ಮಾಡುತ್ತಾರೆ.  ಇದು ಬಾರತದ ಆಚರಣೆ ವಿಧಾನವಾಗಿದೆ! ಯಾಜಿದಿಸ್ ದೇವಾಲಯಗಳು ಹಿಂದೂ ದೇವಾಲಯಗಳಂತೆ ಪಿರಮಿಡ್ ಆಕಾರದ ಗೋಪುರವನ್ನು ಹೊಂದಿವೆ. ಯಾಜಿದಿಸ್ ಚಿಹ್ನೆಯು ಗರಿ ಹರಡಿರುವ ನವಿಲು ಹಿಂದೂ ದೇವರು ಶಿವನ ಮಗ, ಸುಬ್ರಹ್ಮಣ್ಯನ ವಾಹನ!!ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲು ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಅಥವಾ ಆಫ್ರಿಕಾದ ಸ್ಥಳೀಯ. ಇರಾಕ್ ಅಥವಾ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಕಂಡುಬರುವುದಿಲ್ಲ

ಲಾಲಿಶ್ನಲ್ಲಿರುವ ಯಾಜಿದಿ ದೇವಸ್ಥಾನವು ಪ್ರವೇಶದ್ವಾರದಲ್ಲಿ ಹಾವಿನ ಚಿಹ್ನೆಯನ್ನು ಹೊಂದಿದೆ. ಅರೇಬಿಯಾ ಅಥವಾ ಮೆಸೊಪಟ್ಯಾಮಿಯಾದ ಇತರ ಬುಡಕಟ್ಟು ಜನಾಂಗದವರಲ್ಲಿ ನೀವು ಇದನ್ನು ಕಾಣುವುದಿಲ್ಲ.

ಹಿಂದೂಗಳಿಗೆ, ಸುಬ್ರಹ್ಮಣ್ಯನು ಸರ್ಪದ ಸ್ವರೂಪನೂ ಹೌದು. ನಾಗ ಪಂಚಮಿಯಂತಹ ಎಲ್ಲಾ ಹಾವುಗಳಿಗೆ ಸಂಬಂಧಿಸಿದ ಹಬ್ಬ, ಪೂಜೆಗಳಲ್ಲಿ ಸುಬ್ರಹ್ಮಣ್ಯನ ಪೂಜೆ ಸಾಮಾನ್ಯವಾಗಿದೆ.

ಇರಾಕ್ ಯಾಜಿದಿಗಳು ಮತ್ತು ವೈದಿಕ ಧರ್ಮ ಅನುಯಾಯಿಗಳ ನಡುವೆ ಇನ್ನೂ ಅನೇಕ ಹೋಲಿಕೆಗಳಿವೆ:

  • ಯಾಜಿದಿಗಳು ತಮ್ಮ ಜಾತಿಗಳಲ್ಲಿ ಮಾತ್ರ ಮದುವೆಯಾಗುತ್ತಾರೆ (ಒಟ್ಟು 4 ಜಾತಿಗಳು ಮೂಲ ಹಿಂದೂಗಳಂತೆ) ಮತ್ತು ಬೇರೆ ಪರಿಭಾಷೆಯಲ್ಲಿ ಗೋತ್ರ ವ್ಯವಸ್ಥೆಯನ್ನು ಅನುಸರಿಸುತ್ತಾರೆ.
  • ಅವರು ಮರುಕಳಿಸುವ ಜನನ ಮತ್ತು ಮರಣ ಚಕ್ರ(ಪುನರ್ಜನ್ಮ) ನಂಬುತ್ತಾರೆ.
  • ಅವರ ಪುರುಷರು ಸುನ್ನತಿ ಮಾಡುವುದಿಲ್ಲ, ಇದು ಮಧ್ಯಪ್ರಾಚ್ಯದಲ್ಲಿ ಅಪರೂಪ.
  • ಯಾಜಿದಿಗಳು ಮಡಿಸಿದ ಕೈಗಳಿಂದ, ಸೂರ್ಯೋದಯ ಮತ್ತು ಸೂರ್ಯಾಸ್ತದ ವೇಳೆ ಸೂರ್ಯನ ಎದುರು ಪ್ರಾರ್ಥಿಸುತ್ತಾರೆ.
  • ಹಬ್ಬದ ಆಚರಣೆಯ ಸಮಯದಲ್ಲಿ ಯಾಜಿದಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಎಣ್ಣೆ ದೀಪಗಳನ್ನು ಬೆಳಗುತ್ತಾರೆ.
  • ಅವರು ತಮ್ಮ ದೇವಾಲಯಗಳಿಗೆ ಪ್ರವೇಶಿಸುವಾಗ ಹಣೆಯ ಮೇಲೆ ಗುರುತು ಧರಿಸುತ್ತಾರೆ (ಬಿಂದಿ ಅಥವಾ ತಿಲಕ)
  • ಯಾಜಿದಿಗಳಲ್ಲಿ ವೇದ ಸಂಪ್ರದಾಯದಲ್ಲಿ ಹವಾನ(ಹವನ)ಹೋಲುವಂತೆ ಅಗ್ನಿ ಆರಾಧನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
  • ಯಾಜಿದಿ ಕ್ಯಾಲೆಂಡರ್ ಪ್ರಕಾರ, ಇದು ಪ್ರಸ್ತುತ  6,769ನೇ ವರ್ಷವಾಗಿದೆ. (ಅದು ಅವರು ಭಾರತದಿಂದ ದೂರ ಬಂದು ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದ ವರ್ಷಗಳ ಸಂಖ್ಯೆ?!!!)
  • ಸನಾತನ ಧರ್ಮ, ಮಿತ್ರಾಯಿಸಂ, ಮತ್ತು ಜೊರಾಸ್ಟ್ರಿಯನಿಸಂ ಸೇರಿದಂತೆ ಪ್ರಾಚೀನ ನಂಬಿಕೆಗಳಿಂದ ಯಾಜಿದಿಗಳು ಅನೇಕ ಅಂಶಗಳನ್ನು ತೆಗೆದುಕೊಂಡಿದ್ದಾರೆ.
  • ಇನ್ನು ಹಿಂದೂಗಳ ಸ್ಕಂದ ಷಷ್ಟಿ ಅಥವಾ ಸುಬ್ರಹ್ಮಣ್ಯ ಷಷ್ಟಿಯಂದೇ ಯಾಜಿದಿಗಳು  ಸಬ್ಬತ್ ದಿನ ಎಂದು ಆಚರಿಸುತ್ತಾರೆ.

ಕಳೆದ 800 ವರ್ಷಗಳಲ್ಲಿ 25 ದಶಲಕ್ಷ ಯಾಜಿದಿಗಳನ್ನು ಕೊಲ್ಲಲಾಯಿತು,  ಅವರೆಲ್ಲಾ ಸೈತಾನನ ಆರಾಧಕರೆಂದು ಭಾವಿಸಿ ಕೃತ್ಯ ನಡೆದಿದೆ!!! ಇಂದು ಇಡೀ ಜಗತ್ತಿನಲ್ಲಿ ಯಾಜಿದಿಗಳು ಕೇವಲ 0.9 ಮಿಲಿಯನ್ನಿಗಿಂತಲೂ ಕಡಿಮೆ ಸಂಖ್ಯೆಯಲ್ಲಿದ್ದಾರೆ.

ಮೇಲಿನ ಜುದಾಯಿಸಂ, ಯಾಜಿದಿ ಧರ್ಮ ಎಲ್ಲವೂ ಮೂಲದಲ್ಲಿ ಹಿಂದೂ ಧಾರ್ಮಿಕ ಆಚರಣೆ, ಯಾಗ, ಅಗ್ನಿಪೂಜಾದಿಗಳನ್ನು ಮಾಡುವ ಧರ್ಮವಾಗಿತ್ತು, ಇದಕ್ಕೆಲ್ಲಾ ಮೂಲವೆಂದರೆ ಪ್ರಾಚೀನ ಪರ್ಶಿಯಾದಲ್ಲಿದ್ದ ಅದೇ ಜೊರಾಸ್ಟ್ರಿಯನಿಸಂ. ಜೊರಾಸ್ಟ್ರರ್ ನಿಗೆ ಗುರುವಾಗಿದ್ದ ಶುಕ್ರಾಚಾರ್ಯ ಎಲ್ಲಾ ಆಚರಣೆ ಸಂಪ್ರಧಾಯಗಳನ್ನು ಅಸುರರಿಗಾಗಿ ಜಾರಿಗೆ ತಂದಿದ್ದ!(ನೆನಪಿಡಿ ಶುಕ್ರಾಚಾರ್ಯ ವಿಷ್ಣು ಹಾಗೂ ದೇವತೆಗಳ ವಿರೋಧಿ ಆದರೆ ಮಹಾನ್ ಶಿವಭಕ್ತರಾಗಿದ್ದ!! ಅವನು ತಾನು ಹೋದ ಕಡೆಗಳಲ್ಲೆಲ್ಲಾ ಶಿವನ ಆರಾಧನೆಯನ್ನು ಮಾಡಿದ್ದ ಹಾಗೂ ತನ್ನ ಶಿಷ್ಯರಾದ ಅಸುರರಿಗೆ ಸಹ ಶಿವಾರಾಧನೆಯ ಮಹತ್ವ ಹೇಳಿದ್ದ. (ರಾವಣನು ಮಹಾನ್ ಶಿವಭಕ್ತ ಹಾಗೆಯೇ ಹಿಂದೂ ಪುರಾಣಗಳಲ್ಲಿ ಬರುವ ಅನೇಕ ರಾಕ್ಷಸರು, ಅಸುರರು ಶಿವನ ಕುರಿತು ತಪಸ್ಸು ಮಾಡಿ ವರ ಪಡೆದಿರುತ್ತಾರೆ ಎನ್ನುವುದು ನೆನಪಿಸಿಕೊಳ್ಳಿ!!!)ಇದಕ್ಕಾಗಿಯೇ ಇರಾನ್, ಇರಾಕ್ ಸೇರಿ ಪ್ರಾಚೀನ ಏಷ್ಯಾದಲ್ಲಿ ಶಿವನ ದೇವಾಲಯದ ಕುರುಹುಗಳು ಪತ್ತೆಯಾಗಿದೆ..ಇಸ್ಲಾಮ್ ಪೂರ್ವ ಅರೇಬಿಯಾದಲ್ಲಿಯೂ ಹಿಂದೂ ಸಂಸ್ಕೃತುಯ ಕುರುಹು ಸಿಕ್ಕಿವೆ,. )

ಶುಕ್ರಾಚಾರ್ಯನನ್ನು ಸಂಧಿಸಿದ್ದ ಶೂರ್ಪನಖಿ?!

ಇಷ್ಟು ಮಾತ್ರವಲ್ಲದೆ ರಾಮಾಯಣದಲ್ಲಿ ಲಂಕಾಧಿಪತಿ ರಾವಣನನ್ನು ರಾಮ ಅಂತ್ಯಗೊಳಿಸಿದ ನಂತರ ಆತನ ಪ್ರೀತಿಯ ತಂಗಿ ಶೂರ್ಪನಖಿ ಹಲವಾರು ದಿನಗಳು, ತಿಂಗಳುಗಳು ಅಲೆದಾಡಿ ಕಡೆಗೆ ತನ್ನ ನೂರಾರು ಸಂಗಡಿಗರೊಂದಿಗೆ ಶುಕ್ರಾಚಾರ್ಯನನ್ನು ಸಂಧಿಸಿದ್ದಳೆಂದು ಪುರಾಣ ಕಥೆ ಉಲ್ಲೇಖವಿದೆ! ತನ್ನ ಮೂಗಿಗೆ ಲಕ್ಷ್ಮಣನಿಂದ ಗಾಯವಾಗಿದ್ದ ಕಾರಣ ಹಾಗೂ ರಾಮ ಹಾಗೂ ಇತರರು ತನ್ನ ಗುರುತು ಪತ್ತೆ ಮಾಡದಿರಲೆಂದು ಆಕೆ ಮುಖ ಹಾಗೂ ಮೈಗೆ ಗಾಢವರ್ಣದ ಬಟ್ಟೆ ಸುತ್ತಿಕೊಂಡಿದ್ದಳು ಎಂದು ಹೇಳಲಾಗುತ್ತದೆ.

ಕೃಷ್ಣನ ಹತ್ಯೆಗೆ ಕಾಲ ಯವನರ ಕರೆಸಿದ್ದ ಜರಾಸಂಧ!

ಹಾಗೆಯೇ , 5000 ವರ್ಷಗಳ ಹಿಂದೆ ಮಗಧ ದೊರೆ ಜರಾಸಂಧ (ಕಂಸನ ಮಾವ) ಕೃಷ್ಣನ ಮೇಲೆ ದಾಳಿ ಮಾಡಲು ಅರಬ್‌ನಿಂದ ಕಾಲ ಯವನರನ್ನು ಆಹ್ವಾನಿಸಿದ್ದ!!!

ಕಾಲ ಯವನರು ಅಜೇಯರು. ಯುದ್ಧದಲ್ಲಿ ಸಾಟಿಯಿಲ್ಲದವನಾಗಿದ್ದರು ಆದರೆ ಅವರು ಕರುಣೆ ಇಲ್ಲದ ಕ್ರೂರಿಗಳಾಗಿದ್ದರು. ಯುದ್ಧದಲ್ಲಿ ಅವರನ್ನು ಸೋಲಿಸಬಲ್ಲ ಏಕೈಕ ವ್ಯಕ್ತಿ ಕೃಷ್ಣನೆಂದು ಅವರು ಅರಿಯುತ್ತಾರೆ. ಮತ್ತು ಈ ಸವಾಲನ್ನು ಸ್ವೀಕರಿಸಿ ಕೃಷ್ಣನ ರಾಜ್ಯವಾದ ಮಥುರಾವನ್ನು ಆಕ್ರಮಿಸಲು ಹೊರಡುತ್ತಾರೆ. ಯುದ್ಧದಲ್ಲಿ ಎರಡು ಸೈನ್ಯಗಳು ಪರಸ್ಪರ ಎದುರಾದಾಗ, ಕೃಷ್ಣನು ತನ್ನ ರಥದಿಂದ ಕೆಳಗಿಳಿದು ಹೊರನಡೆಯಲು ಪ್ರಾರಂಭಿಸುತ್ತಾನೆ, ನಂತರ  ಕಾಲ ಯವನರು ಕೃಷ್ಣನನ್ನೇ ಅನುಸರಿಸಿ ಕತ್ತಲೆಯ ಕೂಪದಂತಿದ್ದ ಗುಹೆಯೊಂದರಲ್ಲಿ ಸೇರುತ್ತಾರೆ. ಆದರೆ ತನ್ನ ಸ್ವಂತ ಪ್ರದೇಶವಾದ ಮಥುರಾದಲ್ಲಿದ್ದ ಆ ಗುಹೆಯ ಒಳ ಹೊರಗು ಕಳ್ಳದಾರಿಗಳನ್ನೆಲ್ಲಾ ಬಲ್ಲವನಾಗಿದ್ದ ಕೃಷ್ಣ ತಾನು ಆ ಕತ್ತಲೆಯ ಗವಿಯಿಂಡ ಕಳ್ಳಮಾರ್ಗದ ಮೂಲಕ ಹೊರಬರುತ್ತಾನೆ ಹಾಗೂ ಅವರನ್ನು ಅಲ್ಲಿಂದ ಪಾರಾಗದಂತೆ ಹೊರಹೋಗುವ ಮಾರ್ಗವನ್ನೆಲ್ಲಾ ಮುಚ್ಚಿ ಹಾಕುತ್ತಾನೆ, ನಂತರ ಬೆಂಕಿ ಹಚ್ಚಿ ಅವರನ್ನೆಲ್ಲಾ ಅಲ್ಲೇ ಸುಟ್ಟು ಹಾಕುತ್ತಾನೆ!! ಅಲ್ಲಿ ದೇವರಾಜನಿಂದ ಆಶೀರ್ವದಿಸಲ್ಪಟ್ಟ ಮುಚಕುಂದ ರಾಜ ಮಲಗಿದ್ದ.(ಆದರೆ ಮಹಾಭಾರತದಲ್ಲಿ ಗುಹೆಯಲ್ಲಿ ತ್ರೇತಾಯುಗದವನೆನ್ನಲಾಗಿದ್ದ ಮುಚಕುಂದ ನಿದ್ರಿಸುತ್ತಿದ್ದ. ಅವನನ್ನೇ ಕಾಲ ಯವನರು ಕೃಷ್ಣನೆಂದು ಬಾವಿಸಿದ್ದರು, ಆತ ಕಣ್ ತೆರೆದಾಗ ಅವರೆಲ್ಲಾ ಸುಟ್ಟು ಭಸ್ಮವಾದರೆಂದು ಮಾರ್ಪಾಟು ಮಾಡಲಾಗಿದೆ. ಇದಕ್ಕಾಗಿ ಮುಚಕುಂದ ಎನ್ನುವವನಿಗೆ "ಆತ ಕಣ್ಣಿಟ್ಟ ಕಡೆ ಸುಟ್ಟುಹೋಗುವ ಬೆಂಕಿ ಉತ್ಪನ್ನವಾಗಿ ಎದುರುಗಿದ್ದ ವ್ಯಕ್ತಿ, ವಸ್ತು ಸುಟ್ಟುಹೋಗುವಂತಹಾ "ವರ"ದ ಕಥೆಯನ್ನೂ ಸೇರಿಸಿದ್ದಾರೆ!! ಅಲ್ಲದೆ ನಮ್ಮ ಪುರಾಣ ಕಾವ್ಯದ ಎಲ್ಲೆಡೆ ಮಾಡುವಂತೆ "ಕಾಲ ಯವನ" ಎಂಬ ಮಹಾ ಸಮುದಾಯವೊಂದನ್ನು ಒಬ್ಬನೇ ವ್ಯಕ್ತಿ ಎಂದು ಬಿಂಬಿಸಲಾಗಿದೆ!)

ಅದೇನೇ ಇರಲಿ ಇಲ್ಲಿ ಬರುವ ಆ ಕಾಲ ಯವನರು ಬೇರಾರೂ ಆಗಿರದೆ ಇದೇ ಶುಕ್ರಾಚಾರ್ಯನ ಶಿಷ್ಯರು ಪರ್ಷಿಯಾ, ಅರೇಬಿಯಾ ಸೀಮೆಯಲ್ಲಿದ್ದ ಅಸುರ ಕುಲದವರು ಎನ್ನುವುದು ಮುಖ್ಯ!!!

ಹಾಗಾಗಿ ಶಿವನ ಮಕ್ಕಳಾದ ಸುಬ್ರಹ್ಮಣ ಹಾಗೂ ಗಣೇಶ ಸೇರಿ ಶಿವನ ಪರಿವಾರವನ್ನು ಪೂಜಿಸುವ ಸಂಪ್ರದಾಯ ಯಾಜಿದಿಗಳಿಗೆ ಸಿಕ್ಕಿದ್ದು ಶುಕ್ರಾಚಾರ್ಯನಿಂದಲೇ ಎಂದು ಊಹಿಸಲು ಯಾವ ಅಭ್ಯಂತರವಿಲ್ಲ. ಇಲ್ಲಿಂದ ಮುಂದೆ ಜುದಾಯಿಸಂ ನಿಂ ಕವಲೊಡೆದ ಕ್ರೈಸ್ತ, ಇಸ್ಲಾಂ ಮತಗಳಿಗೂ ಸಹ ಶುಕ್ರಾಚಾರ್ಯ ಹಾಗೂ ಅವನ ನೀತಿಗಳು ಕೆಲ ಮಟ್ಟಿಗೆ ಪ್ರಭಾವ ಬೀರಿದ್ದವು ಎನ್ನುವುದು ಹಲವರ ವಾದವಿದೆ. ಇದಕ್ಕೆ ತಕ್ಕಂತೆ ಎರಡೂ ಧರ್ಮಗಳಲ್ಲಿ (ಮುಸ್ಲಿಮರಿಗೆ ಶುಕ್ರವಾರ ಪವಿತ್ರ ದಿನ, ಚಂದ್ರನು ಪವಿತ್ರ ದೇವತೆ, ಕ್ರೈಸ್ತರಿಗೆ ಭಾನುವಾರ(ಸೂರ್ಯನ ದಿನ) ಪವಿತ್ರ ಹೀಗೆ...) ಹಿಂದೂಧಾರ್ಮಿಕ ನಿಯಮಗಳಿಗೆ ಸಾಕಷ್ಟು ಹೋಲಿಕೆಗಳು ಸಿಕ್ಕುತ್ತದೆ. ಒಟ್ಟಾರೆ ಶುಕ್ರಾಚಾರ್ಯ ಸನಾತನ ಧರ್ಮದ ವೇದ ಹಾಗೂ ಅಲ್ಲಿನ ದೇವತೆಗಳ ಪ್ರಾಬಲ್ಯವನ್ನು ಧಿಕ್ಕರಿಸಿ ಅಸುರರ ಗುರುವಾಗಿ ಅವರ ವಿಭಿನ್ನ ಸಂಸ್ಕೃತಿಯು ಜಗತ್ತಿನಾದ್ಯಂತ ಬೆಳೆಯಲು ಕಾರಣಕರ್ತನಾಗಿದ್ದು ಸತ್ಯ

ಇನ್ನು "ಶುಕ್ರನೀತಿ" ಎಂಬ ನೀತಿಶಾಸ್ತ್ರ ಗ್ರಂಥದ ಬಗ್ಗೆ ಕೆಲವು ವಿವರಗಳನ್ನು ನೋಡೋಣ. ಹಾಗೆಯೇ ಶುಕ್ರಾಚಾರ್ಯ ಅಥವಾ ಶುಕ್ರನು ಭಾರತೀಯ ಜ್ಯೋತಿಷ್ಯದಲ್ಲಿ ಹೇಗೆಲ್ಲಾ ಪ್ರಭಾವ ಬೀರುತ್ತಾನೆ ವಿಶ್ಲೇಷಿಸೋಣ....

 ...ಮುಂದುವರಿಯುವುದು

No comments:

Post a Comment