ಟಿ-20ನಂತಹಾ ಕ್ರಿಕೆಟ್ ಬಂದಿದ್ದರೂ ಸಹ ತನ್ನದೇ ಛಾಪು ಹೊಂದಿರುವ ಐವತ್ತು ಓವರ್ ಗಳ ಏಕದಿನ ಕ್ರಿಕೆಟ್ ಗೆ ಇಂದು ಸುವರ್ಣ ಸಂಭ್ರಮ. 1971ರ ಜನವರಿ 5ರಂದು ಏಕದಿನ ಮಾದರಿಯ ಅಂತರಾಷ್ಟ್ರೀಯ ಪಂದ್ಯ ಜನ್ಮ ತಾಳಿತ್ತು.
ಏಕದಿನ ಕ್ರಿಕೆಟ್ ಜನ್ಮದಾಳಲು ಕಾರಣನಾದ ವರುಣ!
ಮೆಲ್ಬೋರ್ನ್ ನಲ್ಲಿ ಆಸ್ಟ್ರೇಲಿಯಾ-ಇಂಗ್ಲೆಂಡ್ ತಂಡಗಳು ಮೊದಲ ಏಕದಿನ ಪಂದ್ಯವನ್ನಾಡಿದ್ದವು. ಆಶಸ್ ಸರಣಿಯಲ್ಲಿ ಮೂರನೇ ದಿನದ ಟೆಸ್ಟ್ ಪಂದ್ಯಕ್ಕೆ ಮಳೆಯ ಕಾಟದಿಂದಾಗಿ ಒಂದು ಮೀಸಲು ದಿನವನ್ನು ಇಡಲು ನಿರ್ಧರಿಸಿದಾಗ ಏಕದಿನ ಕ್ರಿಕೆಟ್ ಜನ್ಮ ಪಡೆದಿತ್ತು. ಅಂದಿನಿಂದ ಡಿಸೆಂಬರ್ 2 ರಂದು ಕ್ಯಾನ್‌ಬೆರಾದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ನಡೆದ ಇತ್ತೀಚಿನ ಅಂತರರಾಷ್ಟ್ರೀಯ ಪಂದ್ಯ 4,267 ನೇ ಸ್ಥಾನ ಹೊಂದಿದೆ.
ಆದರೆ ಅಂದು 1970-71ರ ಆಶಸ್ ಪ್ರವಾಸದ ವ್ಯವಸ್ಥಾಪಕ ಡೇವ್ ಕ್ಲಾರ್ಕ್ಇಲಿಂಗ್ವರ್ತ್ ಟೀಂಗೆ ಎಂಸಿಜಿಯಲ್ಲಿ 40 ಓವರ್‌ಗಳ ಪೂರ್ವಸಿದ್ಧತೆಯಿಲ್ಲದ ಪಂದ್ಯವೊಂದರಲ್ಲಿ ಭಾಗವಹಿಸಬೇಕೆಂದು ಹೇಳಿದಾಗ ಅವರಿಗೆ ಸಹ ಇದು ಮುಂದೊಂದು ದಿನ ಮಹತ್ವದ ಸರಣಿಗಳ ಹುಟ್ಟಿಗೆ ಕಾರಣವಾಗುತ್ತದೆ ಎನ್ನುವುದು ಗೊತ್ತಿರಲಿಲ್ಲ!
40-40 ಓವರ್ ಏಕದಿನ
ಪ್ರಸ್ತುತ, ಏಕದಿನ ಪಂದ್ಯಗಳು 50-50 ಓವರ್‌ಗಳು, ಆದರೆ ಮೊದಲ ಏಕದಿನ 40-40 ಓವರ್‌ಗಳದ್ದಾಗಿತ್ತು.ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯಗಳಿಸಿತು. 82 ರನ್ ಗಳಿಸಿದ ಇಂಗ್ಲೆಂಡ್‌ನ ಜಾನ್ ಎಡ್ರಿಚ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಪಂದ್ಯಶ್ರೇಷ್ಠ ಎನಿಸಿಕೊಂಡರು.. ಅವರಿಗೆ 90 ಫೌಂಡ್ ಬಹುಮಾನ ನೀಡಲಾಯಿತು. ಈ ಐತಿಹಾಸಿಕ ಘಟನೆಗೆ 46,000 ಪ್ರೇಕ್ಷಕರು ಸಾಕ್ಷಿಯಾದರು. ಪಂದ್ಯದ ನಂತರ, ಸರ್ ಡಾನ್ ಬ್ರಾಡ್ಮನ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ, "ಇಂದು ನೀವು ಐತಿಹಾಸಿಕ ಘಟನೆಯನ್ನು ನೋಡಿದ್ದೀರಿ" ಎಂದಿದ್ದರು.
ನವೆಂಬರ್ 1970 ರಲ್ಲಿ, ಆಶಸ್ ಸರಣಿಗಾಗಿ ಇಂಗ್ಲೆಂಡ್ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತು. ಆ ಸಮಯದಲ್ಲಿ, ಆಶಸ್ ಸರಣಿಯಲ್ಲಿ ಆರು ಟೆಸ್ಟ್ ಪಂದ್ಯಗಳನ್ನು ಆಡಲಾಯಿತು. ಮೊದಲ ಪಂದ್ಯವನ್ನು ಬ್ರಿಸ್ಬೇನ್‌ನಲ್ಲಿ ಆಡಲಾಯಿತು, ಅದು ಡ್ರಾದಲ್ಲಿ ಕೊನೆಗೊಂಡಿತು. ಎರಡನೇ ಪಂದ್ಯವು ಪರ್ತ್‌ನಲ್ಲಿ ನಡೆಯಿತು ಮತ್ತು ಇದು ಕೂಡ ಡ್ರಾ ಆಗಿತ್ತು.ಈಗ ಮೆಲ್ಬೋರ್ನ್‌ನಲ್ಲಿ ಮೂರನೇ ಟೆಸ್ಟ್ ಆಡುವ ಸಮಯದಲ್ಲಿ . ಪಂದ್ಯವು ಡಿಸೆಂಬರ್ 29, 1970 ರಂದು ಪ್ರಾರಂಭವಾಗಬೇಕಿತ್ತು. ಆದರೆ ಭಾರೀ ಮಳೆ ಆಟದ ಮೊದಲ ಮೂರು ದಿನಗಳನ್ನು ವ್ಯರ್ಥ ಮಾಡಿತು. ಆಗ ರೆಫರಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಅಧಿಕಾರಿಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು. ಆದರೆ ಆ ದಿನಗಳಲ್ಲಿ ಕ್ರಿಕೆಟ್ ಪಂದ್ಯಗಳಿಗೆ ವಿಮೆ ಮಾಡಿಸಲಾಗುತ್ತಿರಲಿಲ್ಲ.ಈಗಾಗಲೇ, ಪಂದ್ಯದ ಮೊದಲ ಮೂರು ದಿನಗಳು ಮಳೆಯಿಂದ ವ್ಯರ್ಥವಾಗಿದ್ದರಿಂದ ಸಂಘಟಕರಿಗೆ ದೊಡ್ಡ ನಷ್ಟವಾಗಿತ್ತು. ಮೆಲ್ಬೋರ್ನ್ ಟೆಸ್ಟ್ ನ ಟ್ಕೆಟ್ ಗಳನ್ನು ಪ್ರೇಕ್ಷಕರಿಗೆ ಹಿಂದಿರುಗಿಸಬೇಕಾಗಿತ್ತು. ಸರಣಿಯ ಕೊನೆಯಲ್ಲಿ ಏಳನೇ ಟೆಸ್ಟ್ ಆಡಲು ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳು ನಿರ್ಧರಿಸಿದವು. ಆದರೆ ಈ ಹೆಚ್ಚುವರಿ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ಆಟಗಾರರು ಹೆಚ್ಚುವರಿ ಹಣವನ್ನು ಕೋರಿದ್ದರು. ಏಕೆಂದರೆ ಆ ಸಮಯ ಕ್ರಿಕೆಟ್‌ನಲ್ಲಿ ಪ್ರಾಯೋಜಕರು, ಒಪ್ಪಂದಗಳು ಮತ್ತು ಹಣದ ಹೊಳೆ ಹರಿಯುತ್ತಿರಲಿಲ್ಲ./ಆ ಸಮಯದಲ್ಲಿ, ಕ್ರಿಕೆಟಿಗರು ಪ್ರತಿದಿನ ಪಂದ್ಯಕ್ಕೆ ಹಣ ಪಡೆಯುತ್ತಿದ್ದರು.
ಕೇವಲ 5,000 ಫೌಂಡ್ ನೀಡಿ ಪ್ರಾಯೋಜಕತ್ವ ಪಡೆದ ತಂಬಾಕು ಕಂಪನಿ!
ನಂತರ, ಮೆಲ್ಬೋರ್ನ್‌ನ ಸ್ಥಳೀಯರ ಮನರಂಜನೆ ಮತ್ತು ಎರಡೂ ತಂಡಗಳ ಆಟಗಾರರ ಆರ್ಥಿಕ ಲಾಭವನ್ನು ಗಮನದಲ್ಲಿಟ್ಟುಕೊಂಡು ತಂಡಗಳ ನಡುವೆ 40-40 ಓವರ್‌ಗಳ ಏಕದಿನ ಪಂದ್ಯವನ್ನು ನಡೆಸಲು ಎರಡೂ ದೇಶಗಳ ಅಧಿಕಾರಿಗಳು ನಿರ್ಧರಿಸಿದರು. ಆದರೆ ಈ ಪಂದ್ಯಕ್ಕೆ ಪ್ರಾಯೋಜಕರನ್ನು ಹುಡುಕುವುದು ಕಷ್ಟದ ಕೆಲಸವಾಗಿತ್ತು. ಅಂತಿಮವಾಗಿ, ತಂಬಾಕು ಕಂಪನಿಯಾದ ರೋಥ್‌ಮ್ಯಾನ್ಸ್ ಪಂದ್ಯವನ್ನು ಕೇವಲ 5,000 ಫೌಂಡ್ ಗೆಪ್ರಾಯೋಜಿಸಲು ಒಪ್ಪಿಕೊಂಡರು. ಅದರಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ವಿಜೇತರಿಗೆ 90 ಫೌಂಡ್ ನಿಗದಿಪಡಿಸಲಾಯಿತು.ವೆಚ್ಚವನ್ನು ಸರಿದೂಗಿಸಲು ಕಂಪನಿಯು ಪಂದ್ಯಕ್ಕಾಗಿ 20,000 ಟಿಕೆಟ್ ಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿತ್ತು.
ಇಂಗ್ಲೆಂಡ್ -11 ಮತ್ತು ಆಸ್ಟ್ರೇಲಿಯಾ -11 ಎಂಬ ಎರಡು ತಂಡಗಳು ಮೈದಾನದಲ್ಲಿದ್ದವು. ಟಾಸ್ ಗೆದ್ದ ಆಸ್ಟ್ರೇಲಿಯಾ -11 ನಾಯಕ ಬಿಲ್ ಲೌರಿ ಇಂಗ್ಲೆಂಡ್ -11 ನಾಯಕ ರೇ ಇಲಿಂಗ್ವರ್ತ್ ಅವರನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಇಂಗ್ಲೆಂಡ್ -11 39.4 ಓವರ್‌ಗಳಲ್ಲಿ 190 ಕ್ಕೆ ಆಲೌಟ್ ಆಗಿತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಜಾನ್ ಆಂಡ್ರಿಚ್ 82 ರನ್ ಗಳಿಸಿ ಅಗ್ರ ಸ್ಕೋರ್ ಮಾಡಿದ್ದರು.ಆಸ್ಟ್ರೇಲಿಯಾ -11 ವಿರುದ್ಧ ಜಯಗಳಿಸುವ ಗುರಿ 40 ಓವರ್‌ಗಳಲ್ಲಿ 191 ರನ್ ಆಗಿತ್ತು. . ಇಯಾನ್ ಚಾಪೆಲ್ ಅವರ 60 ರನ್ 0 ಆಸ್ಟ್ರೇಲಿಯಾ -11 ಐದು ವಿಕೆಟ್ ನಷ್ಟಕ್ಕೆ ಸುಲಭವಾಗಿ ದಾಟಲು ನೆರವಾಯಿತು.
ಮೊದಲ ಪಂದ್ಯ ವೀಕ್ಷಿಸಿದ್ದು 46,000 ಮಂದಿ!
ಪ್ರಾಯೋಜಕ ಕಂಪನಿ ರಾಥ್‌ಮ್ಯಾನ್ಸ್ ಪಂದ್ಯವನ್ನು ವೀಕ್ಷಿಸಲು 20,000 ಪ್ರೇಕ್ಷಕರನ್ನು ನಿರೀಕ್ಷಿಸಿತ್ತು.ಆದರೆ ಪಂದ್ಯವನ್ನು ವೀಕ್ಷಿಸಲು 46,000 ಕ್ಕೂ ಹೆಚ್ಚು ಪ್ರೇಕ್ಷಕರು ಬಂದರು. ಇದು ಕಂಪನಿಯು ಹಣವನ್ನು ಮರುಪಡೆಯಲು ಸಹಾಯ ಮಾಡುವುದಲ್ಲದೆ ದೊಡ್ಡ ಲಾಭವನ್ನು ಗಳಿಸಿಕೊಳ್ಲಲು ಕಾರಣವಾಗಿತ್ತು.ಪಂದ್ಯದ ಯಶಸ್ಸಿನ ನಂತರ, ಐಸಿಸಿ ಇದನ್ನು ಅಂತರರಾಷ್ಟ್ರೀಯ ಪಂದ್ಯವೆಂದು ಅನುಮೋದಿಸಿತು. ಏಕದಿನ ಕ್ರಿಕೆಟ್ ಪಂದ್ಯ ಅಧಿಕೃತವಾಗಿ ಪ್ರಾರಂಭವಾಯಿತು!!
ಈ ನನ್ನ ಲೇಖನವು 'ಕನ್ನಡಪ್ರಭ ಡಾಟ್ ಕಾಂ' ನಲ್ಲಿ "ಕ್ರಿಕೆಟ್ ಪಾಲಿನ ಐತಿಹಾಸಿಕ ದಿನದ ಹಿನ್ನೆಲೆಯಲ್ಲಿ " ಪ್ರಕಟವಾಗಿದೆ
No comments:
Post a Comment