ಹೇಮು ಎಂದೂ ಕರೆಯಲ್ಪಡುವ ಹೇಮಚಂದ್ರ ವಿಕ್ರಮಾದಿತ್ಯ ಒಬ್ಬ ಶ್ರೇಷ್ಠ ಹಿಂದೂ ರಾಜನಾಗಿದ್ದು, ಈ ಹಿಂದೆ ಮೊಘಲರು ಮತ್ತು ಆಫ್ಘಾನರ ಉತ್ತರ ಭಾರತದಾದ್ಯಂತ ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿದ್ದಾಗ ಸೂರಿ ರಾಜವಂಶದ ಆದಿಲ್ ಷಾ ಸೂರಿಯ ಒಬ್ಬ ನಿಷ್ಠಾವಂತ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ.
ದರ್ಗಾ ಆಗಿ ಬದಲಾದ ರಾಜ ಹೇಮುವಿನ ಸಮಾಧಿ |
ಅಕ್ಬರ್‌ಗೆ ಘಾಜಿ ಎಂಬ ಬಿರುದನ್ನು ಪಡೆಯಲು ಬೈರಮ್ ಖಾನ್1556 ರ ನವೆಂಬರ್ 5 ರಂದು ಈ ಹೇಮುವಿನ ಶಿರಚ್ಚೇಧ ಮಾಡಿದ್ದ!
ಆ ಪ್ರದೇಶದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ನಾಸ್ತಿಕರನ್ನು ಅಥವಾ ಕಾಫೀರರನ್ನು ಕೊಲ್ಲುವ ಮುಸ್ಲಿಂ ಯೋಧನಿಗೆ ನೀಡುತ್ತಿದ್ದ ಬಿರುದು "ಘಾಜಿ" ಇಂತಹಾ ಸಹಸ್ರ ಸಹಸ್ರ ಕೊಲೆ, ಹತ್ಯೆಗಳ ಬಳಿಕ ರಚನೆಯಾಗಿದ್ದೇ ಉತ್ತರ ಪ್ರದೇಶದ ಇಂದಿನ ಘಾಜಿಯಾಬಾದ್!!
ಕ್ರಿ.ಶ 1554 ರಲ್ಲಿ ಆದಿಲ್ ಷಾ ಇಸ್ಲಾಂ ಷಾ ಸೂರಿಯ 12 ವರ್ಷದ ಮಗ ಫಿರೋಜ್ಷಾ ಸೂರಿಯನ್ನು ಹತ್ಯೆಗೈದು ಸಿಂಹಾಸನವನ್ನು ಏರಿದನು.
ಹೇಮುವನ್ನು ಅವನ ವಜೀರ್ (ಸಚಿವ) ಆಗಿ ನೇಮಿಸಲಾಯಿತು.
1555 ರಲ್ಲಿ, ಆದಿಲ್ ಅವರ ಸಹೋದರ, ಆಗ್ರಾದ ಇಬ್ರಾಹಿಂ ಷಾ ಸೂರಿ ದಂಗೆ ಎದ್ದ, ಆದಿಲ್ ಶಾ ಸಿಂಹಾಸನವನ್ನು ಕಳೆದುಕೊಂಡ. ದು ರಾಜ್ಯವನ್ನು 4 ಭಾಗಗಳಾಗಿ ಒಡೆಯಲುಕಾರಣವಾಗುತ್ತದೆ.ಇಬ್ರಾಹಿಮ್ ನನ್ನು ಎರಡು ಬಾರಿ ಹೇಮು ಸೋಲಿಸಿದ. ಒಮ್ಮೆ ಕಲ್ಪಿ ಬಳಿ ಮತ್ತುಖನುವಾ ಬಳಿ. ಹೇಮು ಮುತ್ತಿಗೆ ಹಾಕಿದ ಮತ್ತುಬಯಾನಾ ಕೋಟೆಯಲ್ಲಿ ಆಶ್ರಯ ಪಡೆದನು.
1910 ರ ದಶಕದ ಹೇಮು ವಿಕ್ರಮಾದಿತ್ಯನ ಚಿತ್ರಣ |
ಬಂಗಾಳದ ಮುಹಮ್ಮದ್ ಷಾ ಕಲ್ಪಿಯ ಮೇಲೆ ದಾಳಿ ಮಾಡಿದಾಗ, ಆದಿಲ್ ಶಾಕಲ್ಪಿ ಬಳಿಯ ಚಪ್ಪರ್‌ಘಟ್ಟದ ಯುದ್ಧದಲ್ಲಿ ಸೋತು ಕೊಲ್ಲಲ್ಪಟ್ಟ ಆಗ ಹೇಮುವನ್ನು ಕರೆಯಲಾಗಿತ್ತು.ಆದಿಲ್ ಬಂಗಾಳದ ಹಿಡಿತ ಸಾಧಿಸಿ ಶಹಬಾಜ್ ಖಾನ್ ನನ್ನು ರಾಜ್ಯಪಾಲರನ್ನಾಗಿ ನೇಮಿಸಿದ. ಆತ ಚುನಾರ್ ನನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡ.
ಮಹಮ್ಮದ್ ಷಾ ಮಗನಾಗಿದ್ದ ಘಿಯಾಸುದ್ದೀನ್ ಬಹದ್ದೂರ್ ಷಾ II (ಖಿಜ್ರ್ ಖಾನ್ ಸೂರಿ) ಗೆ ಬಂಗಾಳ ಮತ್ತೆ ಮಣಿಯಿತು. ಕ್ರಿ.ಶ 1557 ರಲ್ಲಿ, ಖಿಜ್ರ್ ಖಾನ್ ಷಾ ಅವರೊಂದಿಗಿನ ಯುದ್ಧದಲ್ಲಿ ಆದಿಲ್ ಷಾನನ್ನು ಸೋಲಿಸಲಾಯಿತು.ಮತ್ತು ಕೊಲ್ಲಲಾಯಿತು.
ಹೇಮು ಉತ್ತರ ಭಾರತದಾದ್ಯಂತ ಪಂಜಾಬ್‌ನಿಂದ ಬಂಗಾಳದವರೆಗೆ ಮತ್ತು ಆಗ್ರಾ ಮತ್ತು ದೆಹಲಿಯಲ್ಲಿ ಹುಮಾಯೂನ್ ಮತ್ತು ಅಕ್ಬರ್‌ನ ಮೊಘಲ್ ಪಡೆಗಳೊಂದಿಗೆ ಹೋರಾಡಿ, ಆದಿಲ್ ಷಾ ಪರ ರ 22 ಯುದ್ಧಗಳನ್ನು ಗೆದ್ದನು. ಈ ಎಲ್ಲಾ ಯುದ್ಧಗಳು ಆದಿಲ್ ಷಾ ವಿರುದ್ಧ ದಂಗೆ ಎದ್ದ ಆಫ್ಘಾನರ ವಿರುದ್ಧವಾಗಿದ್ದವು!
ಜನವರಿ 26, 1556 ರಂದು ಹುಮಾಯೂನ್ ನಿಧನರಾದಾಗ ಹೇಮು ಬಂಗಾಳದಲ್ಲಿದ್ದ. . ಅದೇ ವರ್ಷದಲ್ಲಿ ಹೇಮು ಆಗ್ರಾವನ್ನು ವಶಪಡಿಸಿಕೊಂಡ. ದೆಹಲಿಯ ಮೇಲೆ ದಾಳಿ ಮಾಡಲು ಉದ್ದೇಶಿಸಿದ. ಹುಮಾಯೂನ್‌ನ ಉತ್ತರಾಧಿಕಾರಿ ಅಕ್ಬರ್‌ಗೆ ಅವನ ಆಡಳಿತಗಾರ ತರ್ದಿ ಬೇಗ್ ಖಾನ್ ಹೇಮು ಯೋಜನೆಗಳ ಬಗ್ಗೆ ಮಾಹಿತಿ ನೀಡಿದ. ತುಘಲಕಾಬಾದ್ ಕದನದಲ್ಲಿ ಮೊಘಲರನ್ನು ಸೋಲಿಸಲಾಗಿತ್ತು. ಕ್ರಿ.ಶ 1556 ರ ಅಕ್ಟೋಬರ್ 7 ರಂದು ಹೇಮು ದೆಹಲಿಯನ್ನು ತನ್ನದಾಗಿಸಿಕೊಂಡನು.
ವಿಕ್ರಮಾದಿತ್ಯ (ಬಿಕ್ರಂಜಿತ್) ಬಿರುದು
ದೆಹಲಿಯನ್ನು ವಶಪಡಿಸಿಕೊಂಡ ನಂತರ, ಹೇಮು ರಾಜನ ಸ್ಥಾನಮಾನವನ್ನು ಪಡೆದುಕೊಂಡನು ಮತ್ತು ವಿಕ್ರಮಾದಿತ್ಯ (ಅಥವಾ ಬಿಕ್ರಂಜಿತ್) ಎಂಬ ಬಿರುದನ್ನು ಪಡೆದುಕೊಂಡನು, ಇದು ಭಾರತದ ಪ್ರಾಚೀನ ಕಾಲದಹಲವಾರು ಹಿಂದೂ ರಾಜರು ಬಳಸಿದ ಒಂದು ಬಿರುದಾಗಿದೆ. ಹೇಮುನ ಮಿಲಿಟರಿ ಬಲವು ಸಂಪೂರ್ಣವಾಗಿ ಆಫ್ಘಾನರಿಂದ ಕೂಡಿದ್ದಾಗಿತ್ತು.ಅವರು ಅವನ ದರೋಡೆಯ ಬಗ್ಗೆ ಆಸಕ್ತಿ ತೋರಲಿಲ್ಲ. ಅಲ್ಲದೆ ಅವನ ಕಡೆಗಾಲಕ್ಕಾಗಿ ಪ್ರಾರ್ಥಿಸುತ್ತಿದ್ದರು!
ಆದರೆ ಹೇಮು ಆದಿಲ್ ಷಾನನ್ನು ತನ್ನ ಚಕ್ರವರ್ತಿ ಎಂದು ಒಪ್ಪಿಕೊಳ್ಳುತ್ತಿದ್ದ. ಹಾಗಿದ್ದರೂ ಅಕ್ಬರ್ಪಾಣಿಪತ್ ನಲ್ಲಿ ದಾಳಿ ನಡೆಸಿದ್ದರಿಂದ ಹೇಮು ಆಳ್ವಿಕೆಯು ಒಂದು ತಿಂಗಳಿಗಿಂತ ಕಡಿಮೆ ಕಾಲ ನಡೆಯಿತು.
ಎರಡನೇ ಪಾಣಿಪತ್ ಕದನ
ಅಕ್ಬರ್ ಮತ್ತು ಬೈರಮ್ ಖಾನ್ ಯುದ್ಧಭೂಮಿಯಿಂದ ಎಂಟು ಮೈಲಿ ದೂರದಲ್ಲಿ ಹಿಂಭಾಗದಲ್ಲಿಯೇ ಇದ್ದರು. ತೀವ್ರವಾಗಿ ಹೋರಾಡಿದ ಯುದ್ಧದಲ್ಲಿ, ಮೊನಚಾದ ಮು ಬಾಣವೊಂದು ಕಣ್ಣಿಗೆ ಸಿಲುಕಿಪ್ರಜ್ಞಾಹೀನನಾದಾಗ ಹೇಮು ವಿಜಯದ ಹಾದಿ ತಲುಪಿದ್ದ!
ಇದು ಸೈನ್ಯದಲ್ಲಿ ಭೀತಿಯನ್ನು ಉಂಟುಮಾಡಿತು, ಅದು ಸಾಮಾನ್ಯ ನಿಯಮವನ್ನು ಮುರಿದು ಓಡಿಹೋಗಲು ಪ್ರಯತ್ನಿಸಿದೆ. ಹಾಗೆ ಓಡಲು ಯತ್ನಿಸಿದ್ದ 5000 ಕ್ಕೂ ಹೆಚ್ಚು ಸೈನಿಕರು ಕೊಲ್ಲಲ್ಪಟ್ಟರು.ಗಾಯಗೊಂಡ ಹೇಮುನನ್ನು ಹೊತ್ತ ಆನೆಯನ್ನು ಸೆರೆಹಿಡಿದು ಮೊಘಲ್ ಶಿಬಿರಕ್ಕೆ ಕರೆದೊಯ್ಯಲಾಯಿತು. ಬೈರಮ್ ಖಾನ್ 13 ವರ್ಷದ ಅಕ್ಬರ್‌ನನ್ನು ಹೇಮುವಿನ ಶಿರಚ್ಚೇಧ ಮಾಡಲು ಬೇಡಿದ್ದನು. ಆದರೆ ಅವನು ಸಾಯುತ್ತಿರುವ ಮನುಷ್ಯನ ಬಳಿಗೆ ಕತ್ತಿಯನ್ನು ತೆಗೆದುಕೊಂಡು ಹೋಗಲು ನಿರಾಕರಿಸಿದ್ದನು, ಅಕ್ಬರ್ ತನ್ನ ಕತ್ತಿಯಿಂದ ಹೇಮುನ ತಲೆಯನ್ನು ಮುಟ್ಟುವಂತೆ ಮನವೊಲಿಸಿದ ಬೈರಮ್ ಖಾನ್ ಬಳಿಕ ಹೇಮುವನ್ನು ಗಲ್ಲಿಗೇರಿಸಿದನು!!
ದೆಹಲಿಯ ದ್ವಾರದ ಮೇಲೆ ಅವನ ದೇಹವನ್ನು ನೇತು ಹಾಕಲಾಗಿತ್ತು. ಹೇಮುವಿನ ತಲೆಯನ್ನು ಕಾಬೂಲ್ ಗೆ ಕಳಿಸಲಾಗಿತ್ತು!ತರುವಾಯ ಇತರರ ತಲೆಗಳಿಂದ ಮಿನಾರ್ ನಿರ್ಮಿಸಲಾಯಿತು.
ಈ ಯುದ್ಧದ ಮೂಲಕ ಮೊಘಲರು ಯುದ್ಧದಲ್ಲಿ ಆನೆಗಳ ಮಹತ್ವವನ್ನು ಅರಿತುಕೊಂಡರು.
ಹೇಮಚಂದ್ರ ವಿಕ್ರಮಾದಿತ್ಯ ಸಮಾಧಿ ಸ್ಥಳ ಮಾಚರಿಯಲ್ಲಿ (ಅಳ್ವಾರ್ ಸಮೀಪ)ವಾಸಿಸುತ್ತಿದ್ದ ಹೇಮುವಿನ ಕುಟುಂಬವನ್ನು ಪಾಣಿಪತ್‌ನಲ್ಲಿ ಹೋರಾಡಿದ ಮೊಘಲ್ ಅಧಿಕಾರಿ ಪಿರ್ ಮುಹಮ್ಮದ್ ಅವರು ಸೆರೆಹಿಡಿದಿದ್ದ. ಪಿರ್ ಮುಹಮ್ಮದ್ ಅವರು ಇಸ್ಲಾಂಗೆ ಮತಾಂತರಗೊಂಡರೆ ಹೇಮು ಅವರ ಹಿರಿಯ ತಂದೆಯ ಜೀವವನ್ನು ಉಳಿಸಿಕೊಡುವುದಾಗಿ ಹೇಳಿದ!. ಮುದುಕ ನಿರಾಕರಿಸಿದಾಗ ಅವನನ್ನು ಗಲ್ಲಿಗೇರಿಸಲಾಯಿತು. ಆದಾಗ್ಯೂ, ಹೇಮುವಿನ ಪತ್ನಿತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದಳು,
ಭಾರತದ ಹರಿಯಾಣ ರಾಜ್ಯದ ಪಾಣಿಪತ್ ಜಿಲ್ಲೆಯ ಪಾಣಿಪತ್ ನಗರದ ಸಮೀಪ ಜಿಂದ್ ರಸ್ತೆಯಲ್ಲಿರುವ ಶೋಂದಾಪುರ ಗ್ರಾಮದಲ್ಲಿ ಈಗ ಹೇಮುವಿನ ಸಮಾಧಿ ಸ್ಥಳ ಎಂದು ಕರೆಯಲ್ಪಡುವ ಸ್ಥಳವಿದೆ.ಪಾಣಿಪತ್‌ನಲ್ಲಿ ಹೇಮು ಬೆಂಬಲಿಗರು ರಕವನ್ನು ನಿರ್ಮಿಸಿದರು. ಅದು ಅವನನ್ನು ಗಲ್ಲಿಗೇರಿಸಿದ ಸ್ಥಳದಲ್ಲಿ ಸ್ಥಾಪಿತವಾಗಿದೆ.
ಹರಿಯಾಣ ರಾಜ್ಯ ಸರ್ಕಾರದಿಂದ ನಿರ್ಲಕ್ಷಿತವಾಗಿದ್ದ ಈ ಸ್ಥಳ ವನ್ನು ದುರ್ಗಾ ಆಗಿ ಪರಿವರ್ತಿಸಿ ಇದೀಗ ಮುಸ್ಲಿಮರು ಬಳಸಿಕೊಂಡಿದ್ದಾರೆ!
1526 ರಲ್ಲಿ ಮೊದಲ ಪಾಣಿಪತ್ ಕದನದಲ್ಲಿ ಬಾಬರ್ ಶಿಬಿರ ಮತ್ತು 1556 ರಲ್ಲಿ ಎರಡನೇ ಪಾಣಿಪತ್ ಕದನದಲ್ಲಿ ಅಕ್ಬರ್ ಶಿಬಿರವನ್ನು ರಚಿಸಿದ್ದ ಈ ಪ್ರದೇಶದ ಒಡೆತನ1990 ರವರೆಗೆ ಹರಿಯಾಣ ಎಎಸ್ಐನೊಂದಿಗೆ ಇತ್ತು. ಪ್ರದೇಶದಲ್ಲಿ ನೀರಿನ ಟ್ಯಾಂಕ್ ಅನ್ನು ನಿರ್ಮಿಸಲಾಗಿದೆ.ಬಾಬರ್ ವಾಸವಾಗಿದ್ದಾಗ ನಿರ್ಮಿಸಲಾದ ಶಿಥಿಲಾವಸ್ಥೆಯಲ್ಲಿರುವ ಲಖೋರಿ ಇಟ್ಟಿಗಳನ್ನು ಅತಿಕ್ರಮಣ ಮಾಡಲಾಗಿದೆ.ಅಲ್ಲದೆ ಇದನ್ನೀಗ ದರ್ಗಾ ಎಂದು ಕರೆಯಲಾಗುತ್ತದೆ.
ದಾಖಲೆಗಳಲ್ಲಿರಚನೆಯನ್ನು ಪರ್ಷಿಯನ್ ಭಾಷೆಯಲ್ಲಿ ‘ಖಾಂಘಾ’ ಎಂದು ವರ್ಗೀಕರಿಸಲಾಗಿದೆ, ಇದರರ್ಥ ‘ಸೆರೈ’ ಅಥವಾ ಪ್ರಯಾಣಿಕರಿಗೆ ವಿಶ್ರಾಂತಿ ಸ್ಥಳ. ಇಂತಹ ಸೆರೈಗಳನ್ನು ಅನೇಕವೇಳೆ ಸತ್ತವರ ನೆನಪಿಗಾಗಿ ಶ್ರೀಮಂತರು ನಿರ್ಮಿಸಿದ್ದಾರೆ, ವಿಶೇಷವಾಗಿ ಹರಿಯಾಣದ ರೇವಾರಿ ಪ್ರದೇಶದಲ್ಲಿ ಇಂತಹಾ ಅನೇಕ ರಚನೆಗಳಿದ್ದು ಇವುಗಳಲ್ಲಿ ಹೇಮಚಂದ್ರನೂ ಸೇರಿದ್ದಾನೆ. ಪ್ರಯಾಣಿಕರಿಗಾಗಿ ‘ಚತ್ರ’ ಅಥವಾ ‘ವಿಶ್ರಾಂತಿ ಸ್ಥಳಗಳು’ ಎಂದು ಕರೆಯಲ್ಪಡುವ ಇಂತಹ ಹಲವಾರು ರಚನೆಗಳು ರೇವಾರಿ ಪ್ರದೇಶದಲ್ಲಿ ಇದೇ ರೀತಿಯ ವಾಸ್ತುಶಿಲ್ಪದೊಂದಿಗೆ ಕಂಡುಬರುತ್ತವೆ ಮತ್ತು ಕಳೆದ ಹಲವು ಶತಮಾನಗಳಲ್ಲಿ ಇದನ್ನು ನಿರ್ಮಿಸಲಾಗಿದೆ.
ಈ ಸ್ಥಳವು ಇನ್ನೂ ರಾಜ ಹೇಮಚಂದ್ರನ ತಲೆ ಇಲ್ಲದ ದೇಹವನ್ನು ಹೊಂದಿದೆ, ಆದರೆ ಇದು ದರ್ಗಾ (ಅಪರಿಚಿತ ಸೂಫಿ ಸಂತನ) ಸಮಾಧಿಯಂತೆ ಕಾಣಿಸುವಂತೆ ಪರಿವರ್ತಿತವಾಗಿದೆ.
ಅಕ್ಟೋಬರ್ 2016 ರಲ್ಲಿ, ಕೆಲವು ಸ್ಥಳೀಯರು ದರ್ಗಾದಿಂದ ಹಸಿರು ಧ್ವಜವನ್ನು ತೆಗೆದುಹಾಕಿ ಮತ್ತು ಅದನ್ನು ಕೇಸರಿ ಧ್ವಜಕ್ಕೆ ಬದಲಿಸಿದರು. ಹೇಮಚಂದ್ರ ವಿಕ್ರಮಾದಿತ್ಯನ ಪೋಸ್ಟರ್ ಗಳನ್ನು ಸಹ ಪ್ರದೇಶದಲ್ಲಿ ಹಾಕಲಾಗಿದ್ದು ಚೆನ್ನೈನಿಂದ ಬಂದ ಮೊಹಮ್ಮದ್ ನಜೀಬ್ ಅವರನ್ನು ಇಲ್ಲಿಂದ ದೂರ ಕಳಿಸುವಂತೆ ಒತ್ತಾಯಿಸಿದರು.
ಮೊಹಮ್ಮದ್ ನಜೀಬ್ ತಾವು 1987 ರಿಂದ ತದರ್ಗಾಕ್ಕೆ ಬರುತ್ತಿರುವುದಾಗಿ2002 ರಿಂದ ಆ ಪ್ರದೇಶದಲ್ಲಿ ವಾಸಿಸಲು ಪ್ರಾರಂಭಿಸಿದುದಾಗಿ ಹೇಳುತ್ತಾರೆ. ರಾಜ ಹೇಮುವುನ ಸಮಾಧಿಯನ್ನು ಅಕ್ರಮವಾಗಿ ಅತಿಕ್ರಮಿಸಲಾಗಿದೆ ಮತ್ತು ಹಸಿರು ಬಣ್ಣ ಬಳಿಯಲಾಗಿದೆ ಎಂದು ಸ್ಥಳೀಯರು ವಾದಿಸಿದರು.
ಈವರೆಗೆ ಪೊಲೀಸರು ಯಾವ ಪ್ರಕರಣ ಸಹ ದಾಖಲಿಸಿಕೊಂಡಿಲ್ಲ.
No comments:
Post a Comment