Tuesday, November 16, 2021

ನಮ್ಮಲ್ಲಿನ ಸ್ಥಳ ಪುರಾಣಗಳು (Myths)- 108

 ಹೊರನಾಡು (Hornadu)

ಚಿಕ್ಕಮಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಹೊರನಾಡಿನಲ್ಲಿ ತಾಯಿ ಪಾರ್ವತಿಯು ಶ್ರೀ ಅನ್ನಪೂರ್ಣೇಶ್ವರಿಯ ರೂಪದಲ್ಲಿ ನೆಲೆಸಿದ್ದಾಳೆ. ಈ ದೇವಾಲಯವು ಅತ್ಯಂತ ಪುರಾತನವಾದುದಾಗಿದ್ದು, ಅನ್ನಪೂರ್ಣೆಶ್ವರಿಯ ಮೂಲ ವಿಗ್ರಹವು ಬಂಗಾರದಿಂದ ನಿರ್ಮಾಣ ಮಾಡಲಾಗಿದೆ. ಈ ದೇವಾಲಯದ ಒಂದು ನಂಬಿಕೆಯ ಪ್ರಕಾರ, ಇಲ್ಲಿಗೆ ಭೇಟಿ ನೀಡುವ ಭಕ್ತರು ಅನ್ನದ ಕೊರತೆಯನ್ನು ಯಾವುದೇ ರೀತಿಯಲ್ಲಿ ಕಾಣುವುದಿಲ್ಲ ಹೊರನಾಡು ಪ್ರಮುಖ ಧಾರ್ಮಿಕ ಆಕರ್ಷಣೆಯಾಗಿರುವುದರಿಂದ ಹಲವಾರು ಸ್ಥಳಗಳಿಂದ ಈ ತಾಯಿಯ ದರ್ಶನ ಕೋರಿ ಬರುತ್ತಾರೆ. ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾಧಿಗಳಿಗೂ ಅನ್ನಪ್ರಸಾದ ಮತ್ತು ಉಳಿದುಕೊಳ್ಳಲು ವಸತಿ ವ್ಯವಸ್ಥೆ ಇದೆ. ಬೆಂಗಳೂರಿನಿಂದ 330 ಕಿ.ಮೀ ಗಳಷ್ಟು ದೂರದಲ್ಲಿರುವ ಹೊರನಾಡಿಗೆ ಹತ್ತಿರವಿರುವ ರೈಲ್ವೆ ನಿಲ್ದಾಣ ಶಿವಮೊಗ್ಗ ಆಗಿದೆ. ಅಲ್ಲದೇ ರಾಜ್ಯ ಮತ್ತು ಸ್ಥಳೀಯ ಬಸ್ಸು ಸೇವೆಗಳು ಇಲ್ಲಿಗೆ ಬರುವಂತೆ ಉತ್ತರ ರಸ್ತೆ ಸಂಪರ್ಕ ಹೊಂದಿದೆ. ಮಂಗಳೂರು ನಗರ ವಿಮಾನ ನಿಲ್ದಾಣವು ಹೊರನಾಡಿಗೆ ಸಮೀಪವಿದೆ. ಇಲ್ಲಿ ಎಲ್ಲರಿಗೂ ಉಚಿತವಾಗಿ ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಮಹಾಪ್ರಸಾದವಾಗಿ ನೀಡಲಾಗುತ್ತದೆ. ಹೊರನಾಡು ಅನ್ನಪೂಣೇಶ್ವರಿ ಬೇಡಿದ್ದನ್ನು ಕರುಣಿಸುವ ತಾಯಿ ಎಂಬ ನಂಬಿಕೆಯಿಂದ ಭಕ್ತರು ನಾನಾ  ಬಗೆಯ ಹರಕೆ ಮಾಡಿಕೊಳ್ಳುತ್ತಾರೆ. ಸಂತಾನ, ಆರೋಗ್ಯ, ವ್ಯವಹಾರಗಳಲ್ಲಿ ಯಶಸ್ಸು ಇತ್ಯಾದಿಗಳನ್ನು ಕರುಣಿಸುವಂತೆ ಹರಕೆ ಕಟ್ಟಿಕೊಳ್ಳುತ್ತಾರೆ. ಬೇಡಿದ್ದು ದಕ್ಕಿದಾಗ ಹರಕೆ ತೀರಿಸಲು ಮತ್ತೆ ಬರುತ್ತಾರೆ.ದೂರದ ಗರ್ಭಗುಡಿಯ ನಂದಾದೀಪದ ಬೆಳಕಿನಲ್ಲಿ ದರ್ಶನ ಕೊಡುವ ಇತರ ದೇವಿಯರಂತಲ್ಲ ಹೊರನಾಡ ಅನ್ನಪೂರ್ಣೇಶ್ವರಿ. ತೀರಾ ಹತ್ತಿರದಿಂದ ದೇವಿಯ ದರ್ಶನ ಲಭ್ಯವಿದೆ.

ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಅಲಂಕಾರದ ಎಕ್ಸ್ಕ್ಲೂಸಿವ್ ಚಿತ್ರ Exclusive image of Sri Annapoorneshwari Ammanavar(ಚಿತ್ರಕೃಪೆ: Sri Kshetra Horanadu Facebook page)


ದೇವಿಯ ಪ್ರಧಾನ ವಿಗ್ರಹ  ಆರು ಅಡಿ ಎತ್ತರದ ದೇವಿಯ ಶಿಲಾಮೂರ್ತಿ ಪ್ರತಿಷ್ಠಾಪನೆಯಾದದ್ದು 1973ರಲ್ಲಿ . ತಮಿಳುನಾಡಿನ ಶಂಕೋಟೆಯಿಂದ ತಂದು ಸ್ಥಾಪಿಸಲಾಯಿತು. ಈ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಈ ಕ್ಷೇತ್ರವನ್ನು ಅಗಸ್ತ್ಯ ಋಷಿಗಳು ಸ್ಥಾಪಿಸಿದರು ಎಂದು ಬಲ್ಲವರು ಹೇಳುತ್ತಾರೆ  

ಮೂರ್ತಿಯ ಕೆಳಭಾಗದಲ್ಲಿ ಮೂಲದೇವಿಯಿದ್ದಾಳೆ. ಬೆಳಗ್ಗೆ ಏಳರಿಂದ ರಾತ್ರಿ ಒಂಭತ್ತರವರೆಗೂ ದೇವಿಯ ದರ್ಶನ ಭಾಗ್ಯ ಲಭ್ಯ. ದಿನಕ್ಕೆ ಮೂರು ಸಲ ಮಹಾ ಮಂಗಳಾರತಿ ನಡೆಯುತ್ತದೆ.

***

ಶಿವನ ಮಡದಿಯಾದ ಮಹಾಗೌರಿಯು ಅತ್ಯಂತ ಸುಂದರ ಹಾಗು ರೂಪವತಿಯಾಗಿದ್ದಳು. ಒಂದೊಮ್ಮೆ ರಸಿಕಾಟದಲ್ಲಿ ಮಹಾಶಿವನ ಮೂರು ಕಣ್ಣುಗಳನ್ನು ಮುಚ್ಚಿದಳು. ಇದರ ಪರಿಣಾಮ. ಇದರಿಂದ ಜಗತ್ತಿನೆಲ್ಲೆಡೆ ಅಂಧಕಾರ ವ್ಯಾಪಿಸಿತು. ಗೌರಿಯು ಕೂಡ ತನ್ನ ಪ್ರಭೆಯನ್ನು ಕಳೆದುಕೊಂಡಳು. ಇದರಿಂದ ಅಂತಕಕ್ಕೊಳಗಾದ ಗೌರಿಯು ಶಿವನನ್ನು ಕ್ಷಮೆ ಯಾಚಿಸಿದಳು. ಇದಕ್ಕೆ ಮಹಾಶಿವನು ಕಾಶಿಯಲ್ಲಿ ಅನ್ನದಾನ ಮಾಡಲು ಸೂಚಿಸುತ್ತಾನೆ.ಅದರಂತೆ ಕಾಶಿಯಲ್ಲಿ ಅನ್ನಪೂರ್ಣೆಯ ರೂಪದಲ್ಲಿ ಅವತರಿಸಿದ ಗೌರಿಯು ಅಲ್ಲೇ ಅಡುಗೆ ಮನೆ ನಿರ್ಮಿಸಿ ಪ್ರತಿಯೊಬ್ಬರಿಗೆ ಆಹಾರವ, ಭೋಜನವನ್ನು ನೀಡಿದಳು.

***

ಒಮ್ಮೆ ಶಿವನು ಮಾತನಾಡುವ ಸಮಯದಲ್ಲಿ ಪಾರ್ವತಿಗೆ ಈ ಲೋಕವು ಮಾಯೆ ಎಂದೂ, ಇಲ್ಲಿರುವ ಸಕಲ ವಸ್ತುಗಳು ಕೂಡ ಮಾಯೆ ಎಂದೂ, ಆಹಾರವು ಕೂಡ ಮಾಯೆ ಎಂದು ಹೇಳಿದನು. ಇದರಿಂದ ಬೇಸರಗೊಂಡ ಪಾರ್ವತಿ ದೇವಿಯು ಅದೃಶ್ಯಳಾಗಿ ಆಹಾರವನ್ನೆ ಲೋಕದಿಂದ ಮಾಯ ಮಾಡಿದಳು. ಪಾರ್ವತಿ ದೇವಿ ಹೀಗೆ ಮಾಡಿದ್ದರಿಂದ ಹಾಹಾಕಾರ ಉಂಟಾಯಿತು. ಜನರು ಹಸಿವಿನಿಂದ ನರಳತೊಡಗಿದರು. ಶಿವನಿಗೂ ಸಹ ಹಸಿವಿನ ತೀವ್ರತೆ ಎದುರಾಯಿತು. ನಂತರ ಪಶ್ಚಾತಾಪ ಪಟ್ಟು ಕರುಣೆಯಿಂದ ಪಾರ್ವತಿ ದೇವಿ ಅನ್ನಪೂರ್ಣೆಯಾಗಿ ಕಾಶಿಯಲ್ಲಿ ಅಡುಗೆ ಮನೆಯನ್ನು ತೆರೆದು ಎಲ್ಲರಿಗೂ ಆಹಾರವನ್ನು ನೀಡತೊಡಗಿದಳು. ಹೀಗೆ ಆಹಾರ ನೀಡುವ ಸಲುವ ತಾಯಿಗೆ ನಾವು ನಮಿಸಲೇಬೇಕು ಅಲ್ಲವೇ? ಹಾಗಾಗಿಯೇ ಪಾರ್ವತಿ ದೇವಿಯ ಅವತಾರವಾದ ಅನ್ನಪೂರ್ಣೆಯನ್ನು ನಾವು ಭಕ್ತಿಯಿಂದ ಆರಾಧಿಸಿದರೆ ಸಕಲ ಧನ-ಧಾನ್ಯಗಳು ಮನೆಯಲ್ಲಿರುತ್ತದೆ ಎಂಬ ನಂಬಿಕೆ ಇದೆ.!

***

 ಒಮ್ಮೆ ಶಿವ ಮತ್ತು ಪಾರ್ವತಿ ನಡುವೆ ಪಗಡೆ ಆಟದಲ್ಲಿ ಜಗಳ ಆಗುತ್ತದೆ ಕೋಪಗೊಂಡ ಶಿವ ಜಗತ್ತಿನ ಎಲ್ಲ ವಸ್ತುಗಳು ಮಾಯ ಆಗಲಿ ಎಂದು ಹೇಳುತ್ತಾನೆ ಅದರಂತೆ ಜಗತ್ತಿನಲ್ಲಿ ಅನ್ನ ಆಹಾರ ಸೇರಿದಂತೆ ಎಲ್ಲ ವಸ್ತುಗಳು ಮಾಯ ಆದವು ಮನುಷ್ಯ ಸೇರಿದಂತೆ ಸಕಲ ಜೀವ ಸಂಕುಲ ಅನ್ನ ಆಹಾರವಿಲ್ಲದೆ ತತ್ತರಿಸಿದವು. ಆಗ ಪಾರ್ವತಿ ಮಾತೇ ಹೊರನಾಡಿನಲ್ಲಿ ಬಂದು ನೆಲಸಿ ಎಲ್ಲರಿಗೂ ಆಹಾರ ಕೊಟ್ಟರು ಅಂದಿನಿಂದ ಪಾರ್ವತಿಯ ಈ ಅವತಾರವನ್ನು ಅನ್ನಪೂರ್ಣೇಶ್ವರಿ ಎಂದು ಕರೆಯಲಾಯಿತು 


No comments:

Post a Comment