Tuesday, November 23, 2021

ಋಗ್ವೇದ ಕನಿಷ್ಟ ಕ್ರಿ.ಪೂ. 23720 ನಲ್ಲಿ ರಚನೆಯಾಗಿದೆ!!

 ವೇದಗಳು ಅನಾದಿ ಕಾಲದಿಂದಲೂ ಅಸ್ತುತ್ವದಲ್ಲಿದೆ. ವೇದವ್ಯಾಸರು ಕ್ರಿ.ಪೂ. 3100 ರ ಸುಮಾರಿಗೆ ಅವುಗಳನ್ನು ಸಂಗ್ರಹಿಸಿ ಪ್ರಕಟಪಡಿಸಿದರೆಂದು ಹಲವರು ನಂಬುವರು. ಆದರೆ ಅದರ ಹಿಂದಿನ ಸತ್ಯ ಎಂದರೆ ವ್ಯಾಸರು ಸಂಪೂರ್ಣ ವೇದಗಳನ್ನು ನಾಲ್ಕು ವೇದಗಳನ್ನಾಗಿ ವಿಂಗಡಿಸಿದ್ದಾರೆ.ಇದಕ್ಕೆ ಮುನ್ನ ಎಲ್ಲಾ ನಾಲ್ಕು ವೇದಗಳು ಒಂದೇ ಆಗಿದ್ದವು ಅಥವಾ ಒಟ್ಟಿಗೆ ಇದ್ದವು. ವ್ಯಾಸರು ಅನಾದಿ ಏಕ ವೇದವನ್ನು ನಾಲ್ಕಾಗಿ ವರ್ಗೀಕರಿಸಿದ್ದಾರೆ. ಅದರಿಂದಾಗಿ ಅವರನ್ನು ವೇದವ್ಯಾಸ ಅಥವಾ ವೇದಗಳ ವಿಂಗಡನೆಗಾರ ಎಂದು ಕರೆಯಲಾಗಿದೆ  ಇದು ವೇದಗಳಲ್ಲಿನ ಅಪೂರ್ವ ಜ್ಞಾನವನ್ನು ಜನರಿಗೆ ಅರ್ಥೈಸಿಕೊಳ್ಳಲು ಅನುವಾಗುವಂತೆ ಮಾಡಿದ ಒಂದು ಸಾಧನೆಯಾಗಿದೆ.

ವ್ಯಾಸ ಎಂಬ ಪದದ ಅರ್ಥ ವಿಂಗಡನೆ, ವಿಭಜನೆ ಅಥವಾ ವ್ಯತ್ಯಾಸ ಎಂದಾಗುತ್ತದೆ. ವೇದವ್ಯಾಸರು ತಮ್ಮ ಈ ಕಾರ್ಯವನ್ನು ಸು,ಆರು 5000 ವರ್ಷಗಳ ಹಿಂದೆ ಮಾಡಿದ್ದರೂ ಋಗ್ವೇದವು ಯಾವಾಗ ಅಸ್ತಿತ್ವಕ್ಕೆ ಬಂದಿತೆನ್ನುವುದು ಮಾನವನ ಕಲ್ಪನೆಗೆ ಮೀರಿದ್ದಾಗಿದೆ.

ಋಗ್ವೇದದ 1-161-13 ಭಾಗದಲ್ಲಿ ಹೇಳಿದಂತೆ "ರುಭುಸ್(ಮೋಡಗಳು) ಗಳನ್ನು ಯಾರು ಜಾಗೃತಗೊಳಿಸಿದರು? ಎಂಬ ಪ್ರಶ್ನೆಗೆ ಸೂರ್ಯನ ಉತ್ತರ "ನಾಯಿ,ಏಕೆಂದರೆ ಇಂದು ವರ್ಷದ ಕಡೆಯ ದಿನ."(ಇಲ್ಲಿ ನಾಯಿ ಎಂದರೆ  ಕ್ಯಾನಿಸ್ ಮೇಜರ್ ಅಥವಾ ಮೃಗಶಿರ ನಕ್ಷತ್ರವಾಗಿದೆ. ವರ್ಷಾಂತ್ಯವನ್ನು ಬಿರಿ ಬೇಸಿಗೆಯ ಅಂತ್ಯಕಾಲ ಅಥವಾ ಬೇಸಾಯದ ಪ್ರಾರಂಭ (ಮಳೆಗಾಲ) ಎಂದು ಭಾವಿಸಬಹುದು.

ನಾಯಿಗಳು ಮೋಡವನ್ನು ಎಚ್ಚರಿಸಿದವು ಎಂದರೆ ಸೂರ್ಯನು ಮೃಗಶಿರಾ ನಕ್ಷತ್ರವನ್ನು ಪ್ರವೇಶಿಸಿದಾಗ ಜಗತ್ತು ಮೋಡಗಳಿಂದ ಕೂಡಿ ಮಳೆಗಾಲ ಪ್ರಾರಂಬವಾಗಿತ್ತು ಎಂದು ಅರ್ಥ. ಪ್ರಸ್ತುತ ಕಾಲದಲ್ಲಿ ಸೂರ್ಯನು ಕೇನಿಸ್ ಮೇಜರ್ (ಮೃಗಶಿರ ನಕ್ಷತ್ರ) ಪ್ರವೇಶಿಸಿದಾಗ ಭಾರತದಲ್ಲಿ ಮಳೆ ಪ್ರಾರಂಭವಾಗುತ್ತದೆ.

ಋಗ್ವೇದದ ಕಾಲಮಾನ ಹಾಗೂ ಸಮಯ

ಪ್ರಸ್ತುತ ಯುಗದಲ್ಲಿ ವೇದಗಳು ರಚನೆಯಾಗಿರಲಿಲ್ಲ ಹಾಗಾಘಿ ಷುವತ್ ಸಂಕ್ರಾಂತಿಯ ಪೂರ್ವವರ್ತನೆಯ ಒಂದು ಚಕ್ರವನ್ನು ಪೂರ್ಣಗೊಳಿಸಿರಬೇಕು. ಭಾರತೀಯ ಜ್ಯೋತಿಷ್ಯದಲ್ಲಿ 27 ನಕ್ಷತ್ರಗಳಿವೆ. ಎಂದರೆ ಪ್ರತಿಪ್ರಮಾಣ ದರ  ಪ್ರತಿ ನಕ್ಷತ್ರಕ್ಕೆ 960 ವರ್ಷಗಳು. ಅಂದರೆ 27 ನಕ್ಷತ್ರಗಳ ಒಂದು ಚಕ್ರವೆಂದರೆ ಅದು 25920 ವರ್ಷಗಲಾಗುತ್ತದೆ ಹಾಗಾಗಿ ಋಗ್ವೇದವು ಕನಿಷ್ಠ 25920 ವರ್ಷಗಳಷ್ಟು ಹಳೆಯದಾಗಿದೆ (ಅಂದಿನಿಂದ ಇಂದಿನವರೆಗೆ ಕಾಲಚಕ್ರದ ಒಂದೇ ಒಂದು ಸುತ್ತು ಪೂರ್ಣವಾಗಿದೆ ಎಂದು ನಾವು ಭಾವಿಸಿದ್ದಾದರೆ..) ಪ್ರಸ್ತುತ ನಾವು 2000 ವರ್ಷಗಳನ್ನು ಕಳೆದಿರುವ ಕಾರಣ ಈ ಕಾಲವು ಸುಮಾರು ಕ್ರಿ.ಪೂ. 25720 ಗೆ ಸಮವಾಗುತ್ತದೆ.

ಋಗ್ವೇದದ 4-57-5 ನಲ್ಲಿ  ಶುನಾಸಿರಾಯನಿಗೆ ಸ್ವರ್ಗದಲ್ಲಿನ ನೀರನ್ನು ಬಳಸಿ ಭೂಮಿಯಲ್ಲಿ ಸ್ನಾನ ಮಾಡಲು ಕೇಳಲಾಗುತ್ತದೆ. ಇಲ್ಲಿ ಶುನ ಎಂದರೆ ನಾಯಿ, ಸಿರೌ ಎಂದರೆ ಎರಡು ತಲೆಗಳು. ನಾಯಿಯ ಎರಡು ತಲೆಗಳು ಎಂದರೆ  ಕ್ಯಾನಿಸ್ ಮೇಜರ್ ಮತ್ತು ಮೈನರ್ ಎಂಬ ಎರಡು ನಕ್ಷತ್ರಗಳನ್ನು ಅರ್ಥೈಸುತ್ತವೆ. ಅಂದರೆ ಮೃಗಶಿರ ನಕ್ಷತ್ರ.

ಇದು ಮೃಗಶಿರಾ ನಕ್ಷತ್ರದಂದು ಮಳೆಗಾಲದ ಆರಂಭವನ್ನು ತೋರಿಸುತ್ತದೆ, ಇದರ ಕಾಲಾವಧಿ ಕ್ರಿ.ಪೂ. 23720.

ಮೌಖಿಕ ಸಂಪ್ರದಾಯ ಅನೇಕ ತಲೆಮಾರುಗಳವರೆಗೆ ಮುಂದುವರಿದಿತ್ತಾದುದರಿಂದ  ನಿಖರವಾದ ದಿನಾಂಕವನ್ನು ಹೇಳಲು ಸಾಧ್ಯವಿಲ್ಲ. ಆದರೆ ಈ ಶ್ಲೋಕದ ರಚನೆ ಕಾಲವನ್ನು ಸಹಜವಾಗಿ ನೋಡಿದಾಗ ಋಗ್ವೇದದ ಕಾಲಮಾನವು ಅಥವಾ ಋಗ್ವೇದ ರಚನೆಯಾದ ಸಮಯವು 25920 ವರ್ಷಗಳ ಗುಣಕವಾಗಿರುತ್ತದೆ.

No comments:

Post a Comment