Tuesday, September 01, 2020

ವಿಶ್ವಾಮಿತ್ರ-ದೇವರಿಗೇ ಸಲಾಲೊಡ್ಡಿದ ಮಾನವ!!!

 ವಿಶ್ವಾಮಿತ್ರ- ಪ್ರಾಚೀನ ಭಾರತದ ಅತ್ಯಂತ ಪೂಜ್ಯಋಷಿಗಳಲ್ಲಿ ಒಬ್ಬ. ಬ್ರಹ್ಮರ್ಷಿ ಎಂದೆನ್ನಿಸಿಕೊಂಡ ಮಹಾನುಭಾವ. ಆದರೆ ಅದೃಷ್ಟದ ವಿರುದ್ಧ ಹೋರಾಡಲು ಮತ್ತು ತನ್ನದೇ ಆದ ಹಣೆಬರಹವನ್ನು ತಾನೇ ಬರೆದುಕೊಳ್ಲಲು ತನ್ನ ದೈಹಿಕ ಮತ್ತು ಮಾನಸಿಕ ಗಡಿಯ ಮೇರೆ ಮೀರಿ  ಮೇಲೇರಿದ ಸಾಮಾನ್ಯ ಮನುಷ್ಯ!! ಮನುಷ್ಯನು ನಿಜವಾಗಿಯೂ ಅಪೇಕ್ಷಿಸುವದನ್ನು ಪಡೆಯಲು ಮನುಷ್ಯ ಎಷ್ಟು ದೂರ ಹೋಗಬಹುದು ಎಂಬುದಕ್ಕೆ ವಿಶ್ವಮಿತ್ರನ ಜೀವನವು ಒಂದು ಉತ್ತಮ ಉದಾಹರಣೆಯಾಗಿದೆ.

How Rishi Vishwamitra Created Haven Know The Whole Story - जानिए कैसे  विश्वामित्र ने रचा दूसरा स्वर्ग, पढ़ें पूरी कथा - Amar Ujala Hindi News Live

ಗಾಯತ್ರಿ ಮಂತ್ರವೂ ಸೇರಿದಂತೆ ಋಗ್ವೇದದ ಮೂರನೇ ಮಂಡಲದ ಲೇಖಕ ವಿಶ್ವಾಮಿತ್ರನಾಗಿದ್ದಾನೆ. ಪ್ರಾಚೀನ ಕಾಲದಿಂದ ಕೇವಲ 24  ಋಷಿಗಳು ಮಾತ್ರ ಗಾಯತ್ರಿಯ ಸಂಪೂರ್ಣ ಅರ್ಥ ಅರಿತಿದ್ದಾರೆ.  ಎಂದು ಪುರಾಣಗಳು ಉಲ್ಲೇಖಿಸುತ್ತವೆ. ವಿಶ್ವಾಮಿತ್ರ ಮೊದಲನೆಯವನು ಮತ್ತು ಯಾಜ್ಞವಲ್ಕ ಕೊನೆಯವನು.

ವಿಶ್ವಾಮಿತ್ರನ ಪೂರ್ವಜರು

ಈತ ಹುಟ್ಟಿನಿಂದ ಋಷಿಯಾಗಿದ್ದವನಲ್ಲ ಈತನೊಬ್ಬ ಲೋಧ (ಯೋಧ) ರಾಜ ಆತನನ್ನು ಕೌಶಿಕ (ಕುಶನ ವಂಶಸ್ಥರು-(ರಾಮನ ಮಗನಾದ ಕುಶನೊಂದಿಗೆ ಗೊಂದಲಕ್ಕೀಡಾಗಬಾರದು)) ಎಂದು ಕರೆಯಲಾಗುತ್ತಿತ್ತು.  ಅಮಾವಾಸು ರಾಜವಂಶಕ್ಕೆ ಸೇರಿದವರು. ವಿಶ್ವಮಿತ್ರ ಮೂಲತಃ ಕನ್ಯಾಕುಬ್ಜದ ಚಂದ್ರವಂಶದ  (ಸೋಮವಂಶಿ) ರಾಜ. ಅವರು ಧೀರ ಯೋಧ ಮತ್ತು ಕುಶನ ಮೊಮ್ಮಗ. ಕುಶನ ನಾಲ್ಕು ಗಂಡುಮಕ್ಕಳಲ್ಲಿ ಒಬ್ಬನಿಗೆ ಕುಶನಾಭ ಎಂದು ಹೆಸರಿಸಲಾಯಿತು, ಅವರು ಪುತ್ರಕಾಮೇಷ್ಟಿ ಯಾಗವನ್ನು ಮಾಡಿದ್ದ. ಇದರ ಪರಿಣಾಮ ಗಾಧಿಎಂಬ ಮಗನನ್ನು ಪಡೆದನು. ಕೌಷಿಕನು ಗಾಧಿಯ ಮಗ! ಕಥೆ ವಾಲ್ಮೀಕಿ ರಾಮಾಯಣದ ಬಾಲಕಾಂಡದಲ್ಲಿ ಬರುತ್ತದೆ.

ಆದರೆ ವಿಶ್ವಾಮಿತ್ರನ ಕಥೆ ಇನ್ನೂ ವಿವಿಧ ಪುರಾಣಗಳಲ್ಲಿಯೂ ದಾಖಲಾಗಿದೆ.  ಆದಾಗ್ಯೂ, ರಾಮಾಯಣದ ಕಥೆಗೆ ಅದಕ್ಕೂ ಹೆಚ್ಚು ವ್ಯತ್ಯಾಸವಿಲ್ಲ ಮಹಾಭಾರತದ ವಿಷ್ಣು ಪುರಾಣ ಮತ್ತು ಹರಿವಂಶ ಅಧ್ಯಾಯ 27 (ಅಮಾವಾಸುವಿನ ರಾಜವಂಶ) ವಿಶ್ವಾಮಿತ್ರನ ಜನನದ ಬಗೆಗೆ ವಿವರಿಸಿದೆ.  ವಿಷ್ಣು ಪುರಾಣದ ಪ್ರಕಾರ ಕುಶನಾಭನು ಪುರುಕುತ್ಸ ರಾಜವಂಶದ ಹೆಣ್ಣನ್ನು ವಿವಾಹವಾದನು.  (ನಂತರ ಇದನ್ನು ಶತಮರ್ಶನ ವಂಶಾವಳಿ ಎಂದು ಕರೆಯಲಾಗುತ್ತಿತ್ತು - ಇಕ್ಷ್ವಾಕು ರಾಜ ತ್ರಸದಸ್ಯು ವಿನ ವಂಶಸ್ಥರು) ಮತ್ತು ಗಾಧಿ ಎಂಬ ಮಗನನ್ನು ಪಡೆದನು. ಹಾಗೂ ಸತ್ಯವತಿ ಎಂಬ ಮಗಳೂ ಇದ್ದಳು(ಈಕೆ ಮಹಾಭಾರತದಲ್ಲಿ ಬರುವ ಸತ್ಯವತಿ ಅಲ್ಲ)

ಕ್ರಿ.ಪೂ 100 ರ ಸುಮಾರಿಗೆ ವಿಶ್ವಾಮಿತ್ರನ ಚಿತ್ರವಿರುವ ಇಂಡೋ-ಗ್ರೀಕ್ ಶೈಲಿಯಲ್ಲಿ ಆಡುಂಬರ ರಾಜನಾದ ಧರಘೋಷನ ನಾಣ್ಯ ಇಲ್ಲಿ ನಿಂತಿರುವ ವ್ಯಕ್ತಿ ವಿಶ್ವಾಮಿತ್ರ ಎಂದು ನಂಬಬಹುದು. 

ತಾಯಿ-ಮಗಳು ಬದಲಿಸಿಕೊಂಡ ಆ 'ಚರು'ವಿಂದ ಹುಟ್ಟಿದ ಕೌಶಿಕ!!

ಸತ್ಯವತಿ ಭೃಗು ಜನಾಂಗದವರಲ್ಲಿ ಅಗ್ರಗಣ್ಯನಾಗಿದ್ದ ರುಚಿಕ ಎಂಬ ವೃದ್ಧನನ್ನು ಮದುವೆಯಾದಳು. ಒಳ್ಳೆಯ ವ್ಯಕ್ತಿಯ ಗುಣಗಳನ್ನು ಹೊಂದಿರುವ ಮಗನನ್ನು ರುಚಿಕ ಬಯಸಿದ್ದ. ಆದ್ದರಿಂದ ಅವರು ಉದ್ದೇಶವನ್ನು ಸಾಧಿಸಲು ಸಿದ್ಧಪಡಿಸಿದ್ದ "ಚರು" ವನ್ನು ನೀಡಿದ್ದರು. ಅದೇ ವೇಳೆ ಸತ್ಯವತಿಯ ತಾಯಿಗೆ (ಕುಶನಾಭನ ಪತ್ನಿ)ಸಹ ಒಂದು "ಚರು"ವನ್ನು ನಿಡೀದ್ದರು. ಆಕೆ ತಾನು ಕ್ಷತ್ರಿಯ  ಕುಲಕ್ಕೆ ತಕ್ಕುದಾದ ವೀರ ಯೋಧನನ್ನು ಪಡೆಯಬೇಕೆಂದು ಬಯಸಿದ್ದಳು.

("ಚರು" ಎಂಬುದು ಎಂಬುದು ಸಂಸ್ಕೃತದಿಂದ ಪಡೆದ ಪದವಾಗಿದ್ದು, ಇದು ಆಧ್ಯಾತ್ಮಿಕ ಅರ್ಥದಲ್ಲಿ ಸುಂದರವಾದ, ಆಕರ್ಷಕವಾದ ಮತ್ತು ಶುದ್ಧವಾದ ಎಂಬ ಅರ್ಥ ನೀಡುತ್ತದೆ.  ಪದವು ವಿಕಿರಣ ಮತ್ತು ಆಕರ್ಷಕ ಎಂದು ಅರ್ಥ ಹೊಮ್ಮಿಸುತ್ತದೆ. ಎಂದರೆ ರುಚಿಕನು ತನಗೆ ಶುದ್ದ ಮನಸ್ಸಿನ ಪುತ್ರ ಬೇಕೆಂದು  ಬಯಸಿ ಅಂತಹಾ ಬೇಡಿಕೆಯೊಂದಿಗೆ ತಯಾರಿಸಿದ ವಿಶೇಷ ಪದಾರ್ಥವೊಂದನ್ನು ತನ್ನ ಪತ್ನಿ ಸತ್ಯವತಿಗೆ ನೀಡಿದ್ದಿರಬಹುದು."ಚರು" ಬಗೆಗೆ ಗೊಂದಲವಿದೆ )

ಆದರೆ ಸತ್ಯವತಿ ತನ್ನ ಪತಿಯು ಕೊಟ್ಟ "ಚರು"ವನ್ನು ತಾಯಿಯೊಡನೆ ವಿನಿಮಯ ಮಾಡಿಕೊಂಡಳು. ಅದರ ಪರಿಣಾಮ ಸತ್ಯವತಿಯ ತಾಯಿ ಕೌಶಿಕ (ವಿಶ್ವಾಮಿತ್ರ)ನಿಗೆ ಜನ್ಮ ನೀಡಿದ್ದರೆ ರುಚಿಕನ ಪತ್ನಿ ಸತ್ಯವತಿ ಪರಷುರಾಮನ ತಂದೆ ಜಮದಗ್ನುಗೆ ಜನ್ಮ ಕೊಟ್ಟಳು!!

ಕೌಶಿಕ ಕುಶನಾಭನ ನಂತರ ರಾಜ್ಯದ ಆಡಳಿತ ವಹಿಸಿಕೊಂಡನು.  ಅದನ್ನು ತಕ್ಕಮಟ್ಟಿಗೆ ಆಳಿದನು. ಅವನ ಜನರು ಅವನನ್ನು ಮೆಚ್ಚಿಕೊಂಡರು. ಒಮ್ಮೆ ಅವನು ತನ್ನ ರಾಜ್ಯ ಪ್ರವಾಸದಲ್ಲಿದ್ದಾಗ, ತನ್ನ ಪ್ರಜೆಗಳ ದೂರುಗಳನ್ನು ಆಲಿಸಿ, ಮತ್ತು ಅವುಗಳನ್ನು ಪರಿಹರಿಸಲು ಆದೇಶಗಳನ್ನು ಹೊರಡಿಸಿದನು.

ವಿಶೇಷ ತಳಿಯ ಹಸುಗಳಿಗಾಗಿ ವಸಿಷ್ಟ-ಕೌಶಿಕನ ಸಂಘರ್ಷ 

ಕೌಶಿಕನೊಮ್ಮೆ ತನ್ನ ಪರಿವಾರದೊಡನೆ ವಸಿಷ್ಟ ಎಂಬ ಎಂಬ ಮಹಾನ್ ಋಷಿಯ ಆಶ್ರಮಕ್ಕೆ ಆಗಮಿಸಿದ್ದ, ಆಗ ಸ್ಥಳವನ್ನು ಸುತ್ತುವರೆದಿರುವ ಶಾಂತಿ ಮತ್ತು ಶಾಂತಿಯ ವಾತಾವರಣದಿಂದ ಅವನು ಒಮ್ಮೆಗೇ ಪ್ರಭಾವಿತನಾದನು.  ವಸಂತಕಾಲ ಇಲ್ಲಿ ಶಾಶ್ವತವಾಗಿ ನೆಲೆಸಿದ್ದು  ಎಲ್ಲಾ ಪ್ರಾಣಿಗಳು ಸಂಪೂರ್ಣ ಸಾಮರಸ್ಯದಿಂದ ಒಟ್ಟಿಗೆ ವಾಸಿಸುತ್ತಿರುವುದು ಕಂಡುಬಂತು. ವೇದಗಳ ಪಠಣವು ಗಾಳಿಯನ್ನು ತುಂಬಿತ್ತು. ಅನೇಕ ಋಷಿಗಳು ವಿವಿಧ ಆಚರಣೆಗಳು ಮತ್ತು ತಪಸ್ಸಿನಲ್ಲಿ ಪಾಲ್ಗೊಳ್ಳುತ್ತಿರುವುದು ಕಂಡುಬಂತು. ರಾಜನನ್ನು ವಸಿಷ್ಠರು ಸತ್ಕರಿಸಿದರು. ಅವನ ಪರಿವಾರವನ್ನೂ ಸಹ ಅಷ್ಟೇ ಆದರಾತಿಥ್ಯದಿಂದ ಬರಮಾಡಿಕೊಂಡರು.  ಆದರೆ ನಗರದಿಂದ ಸಾಕಷ್ಟು ದೂರದಲ್ಲಿರುವ ಆಶ್ರಮದಲ್ಲಿ ಇಂತಹಾ ಭವ್ಯ ಶ್ರೀಮಂತಿಕೆ ಹೇಗೆ ಎಂದು ಕೌಶಿಕ ಅಚ್ಚರಿ ಪಟ್ಟನು.

ಇಲ್ಲೊಂದು ಮಾತು ಹೇಳುವುದಾದರೆ ವೇದಕಾಲದಿಂದಲೂ ಬಾರತದಲ್ಲಿ ಪಶು ಸಂಪತ್ತನ್ನು ಬಹಳ ಅಮೂಲ್ಯವೆಂದು ಭಾವಿಸಲಾಗುತ್ತಿತ್ತು. ಆಡಳಿತ ಕೇಂದ್ರ, ನಗರದಿಂದ ದೂರದ ಹಳ್ಳಿಗಳಲ್ಲಿ ಪಶುಸಂಗೋಪನೆ, ಪೋಷಣೆ ಬಹುದೊಡ್ಡ ಮಟ್ಟದಲ್ಲಿ ನಡೆಯುತ್ತಿತ್ತು. ಋಷಿಗಳ  ಆಶ್ರಮ ಎನ್ನುವುದು ವೇದ, ಶಾಸ್ತ್ರಗಳನ್ನು ಕಲಿಸುವುದಕ್ಕಷ್ಟೇ ಉಪಯೋಗವಾಗದೆ ಇಂತಹಾ ಕೃಷಿ ಚಟುವಟಿಕೆಗಳಿಗೂ ಆಧಾರವಾಗಿತ್ತು. ವಸಿಷ್ಟ, ಭೃಗುವಿನಂತಹಾ ಮಹಾನ್ ರ್‍ಇಷಿಗಳು ತಾವು ಆಶ್ರಮ ಸ್ಥಾಪಿಸಿ ಸುತ್ತಲಿನ ಜನಸಮುದಾಯಕ್ಕೆ ವೇದ ಶಾಸ್ತ್ರ ಉಪದೇಶ ನಿಡುತ್ತಿದ್ದದ್ದಲ್ಲದೆ ಅವರ ಪಶುಪಾಲನೆ, ಕೃಷಿ ಚಟುವಟಿಕೆ ಸೇರಿ ಅವರ ಆರ್ಥಿಕ ಸಬಲತೆಗೂ ನೆರವಾಗುತ್ತಿದ್ದರು. "ಇಂದ್ರ"ನಂತಹಾ ಆಡಳಿತಾಧಿಕಾರಿಗಳು ಸಹ ಇಂತಹಾ ಆಶ್ರಮಗಳಿಗೆ ಸಾಕಷ್ಟು ನೆರವನ್ನು ನೀಡುತ್ತಿದ್ದರು. ಈ ವಿಶ್ವಾಮಿತ್ರನ ಕಥೆಯಲ್ಲಿ ಬರುವ ಆಶ್ರಮ ಸಹ ಇಂತಹಾ ಹಳ್ಳಿಯ ಜನರ ಬೆಂಬಲಕ್ಕೆ ನಿಂತ ಆಶ್ರ್ಮವಾಗಿದ್ದು ಅಲ್ಲಿದ್ದ ಹಸುಗಳನ್ನು ಹೊಡೆದುಕೊಂಡು ಹೋಗಲು ಬರುವ ಕೌಶಿಕನನ್ನು ಕಂಡು ಸ್ಥಳೀಯ ಜನ ಸಮುದಾಯ ರೊಚ್ಚಿಗೆದ್ದಿದೆ. ವಸಿಷ್ತರು ಸಹ ಹಸುಗಳ ಹಾನಿಯನ್ನು ಎಂದೂ ಬಯಸದೆ ಆ ರಾಜನ ವಿರುದ್ಧ ತಿರುಗಿ ಬಿದ್ದಿದ್ದರು. 

ಬಗ್ಗೆ ತನ್ನ ಸಂದೇಹವನ್ನು ವಸಿಷ್ಟರಲ್ಲಿ ಕೇಳಿದ ಕೌಶಿಕನಿಗೆ "ನಂದಿನಿ" ಎಂಬ ಹಸುವು ನನಗೆ ಇಂದ್ರನಿಂದ ದೊರಕಿದೆ. ಇದೇ ಕ್ರಣದಿಂದ ಆಶ್ರಮದಲ್ಲಿ ಸಮೃದ್ದಿ ಇದೆ: ಎಂದರು. ಇಲ್ಲಿ "ನಂದಿನಿ" ಎಂಬುದು ಒಂದು ಉಪಮೆ ಎಂದು ಬಾವಿಸಿದರೆ ಆಶ್ರಮದಲ್ಲಿ ನೂರಾರು ಹಸುಗಳನ್ನು ಸಾಕಿರಬಹುದು,  ಮತ್ತು ಅವೆಲ್ಲವೂ ವಿಶೇಷ ತಳೀಯ ಹಸುಗಳಾಗಿದ್ದವು. "ಇಂದ್ರ" ವೇದಕಾಲದ ಜನರ ಅಧಿಕಾರಿಯಾಗಿದ್ದು ಇಂತಹಾ ಆಶ್ರಮಗಳ ಪೋಷಣೆಗಾಗಿ ಹಸುಗಳನ್ನ ನೀಡಿದ್ದನೆಂದು ಭಾವಿಸಬಹುದು.  ಏಕೆಂಡರೆ ನಂದಿನಿ ಎಂಬುದು ಕಾಮಧೇನುವಿನ(ಪುರಾಣಗಳಲ್ಲಿ ಬರುವ ಸ್ವರ್ಗವಾಸಿಗಳು ಬಳಸುವ, ಕೇಳಿದ್ದನ್ನು ನೀಡುವ ವಿಶೇಷ ಹಸು) ಮಗಳು ಎಂದು ವಸಿಷ್ಟರು ಹೇಳುತ್ತಾರೆ. ಎಂದರೆ ಕಾಮಧೇನು ಎನ್ನುವುದು ಒಂದು ವಿಶೇಷ ತಳಿಯ ಹಸುವಾಗಿದ್ದು ಅವು ಸಾಕಷ್ಟು ಹಾಲನ್ನು ನೀಡುತ್ತಿದ್ದವು. ಸಮಾಜದಲ್ಲಿ ಬೇಕಾದಷ್ಟು ಸಮೃದ್ದಿಗೆ ಕಾರಣವಾಗುತ್ತಿದ್ದವು!

 ಹೀಗೆ ನಂದಿನಿ ಯಿಂದಾಗಿ ಆಶ್ರಮದಲ್ಲಿ ಸಮೃದ್ದಿ ಇದೆ ಎಂದರಿತ ಕೌಶಿಕ ಆಶ್ರಮದಲ್ಲಿದ್ದ ಹಸುಗಳನ್ನೆಲ್ಲಾ ತನಗೆ ನಿಡುವಂತೆಯೂ ತಾನು ತನ್ನ ರಾಜ್ಯದ ಜನರಿಗಾಗಿ ಅದನ್ನು ಬಳಸಿಕೊಳ್ಳುವುದಾಘಿಯೂ ಹೇಳುತ್ತಾನೆ. ಆದರೆ ವಸಿಷ್ಟರು ಹಾಗೆ ಹಸುಗಳನ್ನು ನೀಡಲು ಒಪ್ಪುವುದಿಲ್ಲ! ಇಲ್ಲಿ ನಾವು ನಗರ ಹಾಗೂ ಗ್ರಾಮೀಣ ಭಾಗದ ಜನತೆಯ ನಡುವಿನ ಸಂಘರ್ಷವನ್ನೂ ಗುರುತಿಸಬಹುದು. ನಗರ, ಪಟ್ಟಣದ ರಾಜರು, ಅಧಿಕಾರಿಗಳು ನಗರದಿಂದ ದೂರದ ಪ್ರದೇಶದಲ್ಲಿನ ಸುಖ, ಸಮೃದ್ದಿ ಕಂಡು ಅದು ತನಗೇ ಸೇರಬೇಕೆಂದು ಬಯಸುವುದು ಹಿಂದಿನಿಂದ ನಡೆದಿದ್ದೇ ಆಗಿದೆ. ಅದೇ ರೀತಿ ಕೌಶಿಕ ವಸಿಷ್ಟರ ಆಶ್ರಮದಲ್ಲಿ ಹಸುಗಳನ್ನೆಲ್ಲಾ ತನಗೆ ಕೊಡಿರೆಂದು ಹಠ ಹಿಡಿದಿದ್ದ!!]

ಹಸುಗಳ ಬದಲಿಗೆ ಹಣ, ಚಿನ್ನ, ಸಂಪತ್ತಿಗಳನ್ನು ಕೊಡುವುದಾಗಿ ಹೇಳಿದ್ದರೂ ವಸಿಷ್ಟರು ಮಾತ್ರ ಅದೆಲ್ಲವನ್ನೂ ಸೌಮ್ಯವಾಗಿ ನಿರಾಕರಿಸಿದರು,  ಇದು ಕೌಶಿಕನನ್ನು ಕೆರಳಿಸಿತ್ತು. ಆತ ತನ್ನ ಪರಿವಾರದ ಸೈನಿಕರಿಗೆ ಹಸುಗಳನ್ನು ಬಲವಂತದಿಂದ ಆಶ್ರಮದಿಂದ ಹಿಡಿದೊಯ್ಯುವಂತೆ ಆದೇಶಿಸಿದ. ಆದರೆ ಆಶ್ರಮದಲ್ಲಿದ್ದ ವಸಿಷ್ಟರ ಶಿಷ್ಯರು ಹಾಗೂ ಬೆಂಬಲಿಗರು ಅವನ ಸೇನೆಯೊಡನೆ ಹೋರಾಡಿದ್ದಲ್ಲದೆ ಕೌಶಿಕನನ್ನು ಹಿಡಿದು ಕಟ್ಟಿಹಾಕಿ ವಸಿಷ್ಟರ ಮುಂದೆ ಹಾಜರುಪಡಿಸಿದರು. ಎಂದರೆ ವಸಿಷ್ಟ ಆಶ್ರಮದ ಸುತ್ತ ಒಂದು ಬಲವಾದ ರಕ್ಷಣಾ ವ್ಯವಸ್ಥೆ ಇತ್ತು. ಜನರು ಶಾಂತಿಯುತವಾಗಿ ಬದುಕಿದವರು. ಆಶ್ರಮ ಹಾಗೂ ಅಲ್ಲಿನ ಹಸುಗಳ ಯೋಗಕ್ಷೇಮಕ್ಕಾಗಿ ತಾವೆನೇ ತ್ಯಾಗಕ್ಕೂ ಸಿದ್ದವಾಗಿದ್ದರು ಎಂದು ಭಾವಿಸಬಹುದು. ಇಲ್ಲಿ ರಾಜ ಕೌಶಿಕನ ಕಥೆಯಲ್ಲಿಯೂ ಅದುವೇ ಕಾನುತ್ತೇವೆ. ರುಷಿ ವಸಿಷ್ಟರು ಸನ್ಯಾಸಿಯೇ ಆಗಿದ್ದರೂ ಮಹಾನ್ ಅನುಭವಿಗಳಗಿದ್ದರೂ ಸಹ ತಮ್ಮ ಆಶ್ರಮದ ಜನರು, ಪಶು ಸಂಪತ್ತಿಗೆ ಧಕ್ಕೆಯುಂಟಾದಾಗ ಸುಮ್ಮನಿರುತ್ತಿರಲಿಲ್ಲ.  ಆದರೆ ಉತ್ತಮ ರೀತಿಯಲ್ಲಿಯೇ ಸಮಸ್ಯೆಯನ್ನು ಬಗೆಹರಿಸುತ್ತಿದ್ದರು. ಕೌಶಿಕನ ವಿಚಾರದಲ್ಲಿ ಆದದ್ದೂ ಅದುವೆ.

ಋಷಿಯ ಮುಂದೆ ರಾಜನ ಸೋಲು!!

ಕೌಶಿಕನನ್ನು ಆಶ್ರಮದ ಬೆಂಬಲಿತ ಜನರು ಕಟ್ಟಿ ತಂದು ವಸಿಷ್ಟರ ಮುಂದೆ ನಿಲ್ಲಿಸಿದಾಗ ಅವರು ರಾಜನಿಗೆ ಅವನ ತಪ್ಪನ್ನು ಮನಗಾಣಿಸಿದ್ದರು. ಮತ್ತು ಆತನನ್ನು ಕ್ಷಮಿಸಿದ್ದರು! ಅತ್ಯಂತ ಉತ್ತಮ ಸಲಹೆಯ ಮಾತುಗಲನ್ನು ತಿಳಿಸಿ ಹಿಂತಿರುಗಿ ಕಳಿಸಿದ್ದರು!!

ಮಾನವನಿಗೆ ಎದುರಾಳಿ  ವಿರುದ್ಧ ಗೆದ್ದಾಗ ಸಿಕ್ಕುವ ಆನಂದಕ್ಕಿಂತ ಸೋತಾಗ ಕಲಿಯುವ ಪಾಠ ದೊಡ್ಡದಾಗಿರುತ್ತದೆ. ಅದರಂತೆ ವಸಿಷ್ಟರಂತಹಾ ಸಾಮಾನ್ಯ ಆಶ್ರಮವಾಸಿಯೊಬ್ಬನಿಗೆ ಸೋತ ಕೌಶಿಕನಿಗೆ ಘಟನೆ ಅವನ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರಿತ್ತು. ತಪಸ್ಸಿನ ಶಕ್ತಿ ದೇಹಶಕ್ತಿಯನ್ನು ಮೀರಿದ್ದಾಗಿದೆ ಎನ್ನುವುದನ್ನು ಅರಿತನು.  ಅವನು ತನ್ನ ರಾಜ್ಯವನ್ನು ತ್ಯಜಿಸಿದನು ಮತ್ತು ವಸಿಷ್ಠನಿಗಿಂತ ದೊಡ್ಡ ಋಷಿಯಾಗಬೇಕೆಂದು ಛಲದೊಡನೆ  ಅನ್ವೇಷಣೆಯಲ್ಲಿ ತೊಡಗಿದನು!!

ಕೌಶಿಕ ವಿಶ್ವಾಮಿತ್ರನಾದ!!

ಮಾನವ ತನ್ನ ಬದುಕಿನಲ್ಲಿ ಹೊಸ ಹಿಸ ಅನುಭವ ಪಡೆದಂತೆಲ್ಲಾ ಎತ್ತರಕ್ಕೇರುತ್ತಾ ಸಾಗುತ್ತಾನೆ. ಆದರೆ ಅರುಷಡ್ವರ್ಗಗಳಾದ ಕಾಮ, ಕೊರೋಧಾದಿಗಳನ್ನು ಮಣಿಸಿ ಮುಂದೆ ಸಾಗುವುದು ಮಾನವರಿಗೆ ಅತ್ಯಂತ ಕಠಿಣ ಸವಾಲಾಗಿರುತ್ತದೆ, ವಿಶ್ವಾಮಿತ್ರನಿಗೂ ಕೂಡ ಇದೇ ಸಮಸ್ಯೆ ಇತ್ತು!  ಅವನ ಮುಖ್ಯ  ದೋಷವೆಂದರೆ ಅವನ ಸಣ್ಣತನ ಹಾಗೂ ಕೋಪ. ಆತನು ಬಹುಬೇಗ ಕೋಪಗೊಳ್ಳುತ್ತಿದ್ದನು.

ವಸಿಷ್ಟ ಹಾಗೂ ಉಶ್ವಾಮಿತ್ರರ ನಡುವೆ ಅಂತಹಾ ಸಾಕಷ್ಟು ಪ್ರಸಂಗಗಳನ್ನು ನಾವು ನೋಡುತ್ತೇವೆ. ಪುರಾಣದಲ್ಲಿ ಬರುವ ಪ್ರಸಿದ್ದ ಹರಿಶ್ಚಂದ್ರನ ಕಥೆಯಲ್ಲಿ ಕೂಡ ವಿಶ್ವಾಮಿತ್ರ ಹಾಗೂ ವಸಿಷ್ಟರು ಮುಖಾಮುಖಿಯಾಗುತ್ತಾರೆ. ವಸಿಷ್ಟ ಹರಿಶ್ಚಂದ್ರನಿಗೆ ಬೆಂಬಲ್ವಾಗಿ ನಿಂತರೆ ವಿಶ್ವಾಮಿತ್ರ ಹರಿಶ್ಚಂದ್ರನ ಪರೀಕ್ಷೆಗೆ ನಿಲ್ಲುತ್ತಾನೆ ಇಂತಹ ಹಲವಾರು ಘಟನೆಗಳಲ್ಲಿಕೆಲವೊಮ್ಮೆ ಸೃಷ್ಟಿಕರ್ತ ದೇವರಾದ ಬ್ರಹ್ಮನೇ ಬಂದು ಇಬ್ಬರ ನಡುವಿಅ ಹೋರಾಟಕ್ಕೆ ಅಂತ್ಯ ಹಾಡಿದ್ದನು!!

ಪರ್ಯಾಯ ಆವೃತ್ತಿ

ವಶಿಷ್ಟ ವಿಶ್ವಾಮಿತ್ರನ ಸಂಪೂರ್ಣ ಸೈನ್ಯವನ್ನು ಹಾನ್ ಅತೀಂದ್ರಿಯ ಮತ್ತು ಆಧ್ಯಾತ್ಮಿಕ ಶಕ್ತಿಗಳ ಸರಳ ಬಳಕೆಯಿಂದ ನಾಶಪಡಿಸುತ್ತಾನೆ, ಆಗ ಶಿವನ್ನು ಮೆಚ್ಚಿಸಿ ತಾನೂ ತಪಸ್ವಿಯಾಗಲು ಹಾಗೂ ಅಪಾರ ಶಸ್ತ್ರಾಸ್ತ್ರ ಜ್ಞಾನವನ್ನು ಪಡೆಯಲು ಹಲವಾರು ವರ್ಷಗಳ ಕಾಲ ತಪಸ್ಯವನ್ನು ಕೈಗೊಳ್ಳುತ್ತಾನೆ.  ಬಳಿಕ ಮತ್ತೊಮ್ಮೆ ವಸಿಷ್ಟನ ಆಶ್ರಮಕ್ಕೆ ಬರುತ್ತಾನೆ. ಆಗ ವಸಿಷ್ಟನ ಆಶ್ರಮ ಹಾಗೂ ಸುತ್ತಲಿನ ಪ್ರದೇಶ ನಾಶಗೊಳಿಸಲು ತಾನು ಸಂಪಾದಿಸಿದ ಎಲ್ಲಾ ಜ್ಞಾನವನ್ನು  ಬಳಸಿಕೊಳ್ಳುತ್ತಾನೆ  ಆಶ್ರಮದ ಪ್ರದೇಶದಲ್ಲಿದ್ದ ಸುಮಾರು ಸಾವಿರ ಜನರನ್ನು ವಿಶ್ವಾಮಿತ್ರ ಹತ್ಯೆ ಮಾಡುತ್ತಾನೆ. ಆದರೆ ವಸಿಷ್ಟನನ್ನು ಏನೂ ಮಾಡಲೂ ಅವನಿಗೆ ಸಾಧ್ಯವಾಗುವುದಿಲ್ಲ.

ಆಗ ಕೋಪಗೊಂಡ ವಸಿಷ್ಟ  ತನ್ನ ಬ್ರಹ್ಮದಂಡವನ್ನು ಹೊರತರುತ್ತಾನೆ, ಬ್ರಹ್ಮನ ಶಕ್ತಿಯಿಂದ ತುಂಬಿದ ಮರದ ಕೋಲಾಗಿದ್ದ ಅದನ್ನು  ಬ್ರಹ್ಮಾಸ್ತ್ರ  ಎನ್ನುತ್ತಾರೆ! ಅಸ್ತ್ರ ವಿಶ್ವಾಮಿತ್ರನ ನಾಶಕ್ಕೆ ಕಾರಣವಾಗುತ್ತಿತ್ತು. ಆದರೆ ಅಷ್ಟರಲ್ಲಿ ಅಲ್ಲಿಗೆ ದೇವತೆಗಳಾಗನಿಸಿ (ದೇವತೆಗಳು ಎಂದರೆ ದೇವಗಣದ ಮಾನವರು ನಮ್ಮ ಪ್ರಾಚೀನ ಭಾರತದ ಉತ್ತರ ಹಿಮಾಲಯದಲ್ಲಿದ್ದರು ಎಂಬುದಕ್ಕೆ ಪುರಾವೆಗಳಿದೆ) ವಸಿಷ್ಟನ ಕೋಪವನ್ನು ಶಾಂತಗೊಳಿಸುತ್ತಾರೆ. ಆಗ ಶಾಂತನಾದ ವಸಿಷ್ತ ತನ್ನ ಆಶ್ರಮವನ್ನು ಪುನರ್ ಸ್ಥಾಪಿಸಿದ್ದ. ಆದರೆ ಇತ್ತ ವಿಶ್ವಾಮಿತ್ರ ಮತ್ತೊಮ್ಮೆ ಅವಮಾನವನ್ನು ಅನುಭವಿಸಿದ್ದ!!!

...ಮುಂದುವರಿಯುವುದು

No comments:

Post a Comment