ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಬೋಸ್ ಗೆ ಸಂಬಂಧಿಸಿದ ಎಲ್ಲಾ ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಬೇಕೆಂಬ ಒತ್ತಡದ ಹಿನ್ನೆಲೆಯಲ್ಲಿ, ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ, ಬೋಸ್ ಗೆ ಸಂಬಂಧಿಸಿದ 64 ದಾಖಲೆಗಳನ್ನು ಸೆ.18ರಂದು ಬಿಡುಗಡೆ ಮಾಡುವುದಾಗಿ ಶುಕ್ರವಾರ ಘೋಷಿಸಿದೆ.
ನೇತಾಜಿ ಕಣ್ಮರೆ ಕುರಿತು ಇಂದಿಗೂ ಅನೇಕ ಪ್ರಶ್ನೆಗಳಿವೆ. 1945 ಆಗಸ್ಟ್ 18ರಂದು ತೈವಾನ್ ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನೇತಾಜಿ ಮೃತರಾದರೆಂದು ವರದಿಯಾಗಿದ್ದು ಇದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಉತ್ತರ ಪ್ರದೇಶದಲ್ಲಿ ನೆಲೆಸಿದ್ದ ಗುಮ್ನಾಮಿ ಬಾಬಾ ಹೆಸರಿನ ನಿಗೂಢ ಸನ್ಯಾಸಿಯೇ ನೇತಾಜಿ ಎನ್ನುವುದು ಇತ್ತೀಚೆಗೆ ಸಿಕ್ಕಿದ ವಿನೂತನ ಮಾಹಿತಿ. ಈ ಕುರಿತಂತೆ ಟೈಮ್ಸ್ ಸಮೂಹ ನಡೆಸಿದ ವಿವರಣಾತ್ಮಕ ತನಿಖೆಯಿಂದ ಅದು ಇನ್ನಷ್ಟು ಖಚಿತಗೊಂಡಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಗುಮ್ನಾಮಿ ಬಾಬಾನೇ ನೇತಾಜಿಯೇ? ಎನ್ನುವ ವಿಚಾರಗಳ ಕುರಿತಂತೆ ವಿಜಯ ಕರ್ನಾಟಕ ಹಾಗೂ ಟೈಮ್ಸ್ ಆಫ್ ಇಂಡಿಯಾಗಳಲ್ಲಿ ಪ್ರಕಟವಾದ ಲೇಖನವನ್ನುಇಲ್ಲಿ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
No comments:
Post a Comment