ನಂದಕುಮಾರ್ ಸಿ. ಎಂ. ನಿರ್ದೇಶನದ ಅರುಣ್ ಕುಮಾರ್ ಮತ್ತು ರಾಣಿ ವರದ್ ಅಭಿನಯದ ಮನಸು ಮಲ್ಲಿಗೆ ಕಂಬೈನ್ಸ್ ನಿರ್ಮಾಣದ ಹೊಸಬರ ತಂಡದ ಚಿತ್ರ 1990s ಈ ವಾರ ಬಿಡುಗಡೆ ಆಗಿದೆ. ಚಿತ್ರಕ್ಕೆ ಮಹಾರಾಜ ಸಂಗೀತ ನಿರ್ದೇಶಕರಾದರೆ, ಹಾಲೇಶ್ ಛಾಯಾಗ್ರಾಹಣವಿದೆ. ಸಾಹಸ ನಿರ್ದೇಶಕ ಅಶೋಕ್, ನೃತ್ಯ ಸಂಯೋಜಕ ಸಾದಿಕ್ ಸರ್ದಾರ್ ಚಿತ್ರದ ಜೊತೆಗಿದ್ದಾರೆ. ಅಲ್ಲದೆ ಕೃಷ್ಣ ಈ ಚಿತ್ರದ ಎಡಿಟಿಂಗ್ ಮಾಡಿದ್ದಾರೆ. ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಅನೇಕ ಭಾಷೆಗಳಿಗೆ ಡಬ್ ಆಗುತ್ತಿರುವ ಈ ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ಇಬ್ಬರೂ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ.
ಶೀರ್ಷಿಕೆಯೇ ಹೇಳಿದಂತೆ ಈ ಚಿತ್ರವು 1990ರ ದಶಕದ್ದಾಗಿದೆ. ಬೇರೆ ಬೇರೆ ಜಾತಿಗಳ ಇಬ್ಬರು ಪ್ರೇಮಿಗಳ ಸುತ್ತ ಸುತ್ತುವ ಪ್ರೇಮ ಕಥೆಯನ್ನು ಹೊಂದಿದೆ. ಹೌದು, ಇದು ಪರಿಚಿತ ಅಂತರ-ಜಾತಿಯ ಪ್ರೀತಿಯ ಕಥೆ. ವಿಶೇಷವಾಗಿ ಹಳ್ಳಿಯ ಪರಿಸರದಲ್ಲಿ ಇಂತಹಾ ಪ್ರೀತಿ ಪ್ರೇಮದಿಂದ ಉಂತಾಗುವ ಸಮಸ್ಯೆಯನ್ನು ಇಲ್ಲಿ ಚಿತ್ರಿಸಲಾಗಿದೆ.
1990ರ ದಶಕವು ಆ ಯುಗದ ಭಾವನಾತ್ಮಕ ಪ್ರೇಮ ಕಥೆಯನ್ನು ನೆನಪಿಸುವ ಜನರೊಡನೆ ಪ್ರಾರಂಭವಾಗುತ್ತದೆ. ಅರುಣ್ ಕುಮಾರ್ ಮುಖ್ಯ ಪಾತ್ರದಲ್ಲಿದ್ದರೆ, ರಾಣಿ ವರದ್ ಆತನ ಪ್ರೇಮಿ ಪ್ರತಿಭಾ ಆಗಿ ನಟಿಸಿದ್ದಾರೆ. ಈ ಕಥೆಯು ಒಂದು ಫ್ಲ್ಯಾಶ್ ಬ್ಯಾಕ್ ಹೊಂದಿದೆ. -ಪಾಪು (ಅರುಣ್) ತನ್ನ ಬಾಲ್ಯದಲ್ಲಿ ಪ್ರತಿಭಾಳನ್ನು ಯಾವತ್ತೂ ತಿರಸ್ಕಾರದಿಂದ ಕಾಣುತ್ತಿದ್ದ ಮತ್ತು ಆಗಾಗ್ಗೆ ಅವಳಿಗೆ ದೈಹಿಕವಾಗಿ ಹಿಂಸೆ ಕೊಡುತ್ತಿದ್ದ. ಆದಾಗ್ಯೂ, ಅವನು ದೊಡ್ದವನಾದ ನಂತರ ಅವಳನ್ನು ಹುಚ್ಚನಾಗಿ ಪ್ರೀತಿಸುತ್ತಿರುತ್ತಾನೆ ಆಗ ಅವನಲ್ಲಿ ಏನೋ ಬದಲಾವಣೆ ಆಗಿರುತ್ತದೆ.
ಅವನ ಹಿಂಸೆಯ ಹೊರತಾಗಿಯೂ ತನ್ನ ಬಾಲ್ಯದಲ್ಲಿಯೂ ಸಹ ತಾನು ಅವನನ್ನು ಪ್ರೀತಿಸಿದ್ದೆ ಎಂದು ಪ್ರತಿಭಾ ಒಪ್ಪಿಕೊಂಡಾಗ, 1990s ನಾಟಕೀಯ ತಿರುವುಗಳ ಸರಣಿಯನ್ನು ತೆಗೆದುಕೊಳ್ಳುತ್ತದೆ. ಇಬ್ಬರೂ ಸಾಮಾಜಿಕ ಒತ್ತಡಗಳನ್ನು ಜಯಿಸಿ ತಮ್ಮ ಸಂತೋಷವನ್ನು ಕಂಡುಕೊಳ್ಳುತ್ತಾರೆಯೇ ಅಥವಾ ಅದೃಷ್ಟವು ಬೇರೆ ಹೇಗಿರಲಿದೆ ಎನ್ನುವುದನ್ನು ನೀವು ಸಿನಿಮಾ ನೋಡಿ ತಿಳಿಯಬೇಕು.
1990s ಚಿತ್ರದ ನಿರೂಪಣೆ, ಅಭಿನಯ ಅಥವಾ ಇತರ ಅಂಶಗಳ ಹೊರತಾಗಿಯೂ, ಛಾಯಾಗ್ರಾಹಕ ಎಸ್. ಹಾಲೇಶ್ ಕೆಲಸಕ್ಕೆ ಮೆಚ್ಚುಗೆ ಸೂಚಿಸಬೇಕಿದೆ.. ಕಥೆಯಲ್ಲಿ ತಿರುಳಿಲ್ಲದೆ ಹೋದರೂ ಆಯಾಗ್ರಾಹಣದಲ್ಲಿ ಮೂಡುವ ದೃಶ್ಯಗಳು ಮನಸೆಳೆಯುತ್ತದೆ. ಈ ಮಟ್ಟಿಗೆ 1990s ಬೆರಗುಗೊಳಿಸುತ್ತದೆ, . ಒಂದೆರಡು ಹಾಡುಗಳು ಚಿತ್ರದ ಕಥೆಗೆ ಪೂರಕವಾಗಿವೆ.
ಈಗ, 1990s ವೀಕ್ಷಿಸುವುದು ಏಕೆ ಕಷ್ಟವಾಗಲಿದೆ ಎನ್ನುವುದನ್ನು ಹೇಳುವುದಾದರೆ ನಿರೂಪಣೆ ಮತ್ತು ನಟನೆ ಅಸ್ವಾಭಾವಿಕ ರೀತಿಯಲ್ಲಿದ್ದು ಅತಿಯಾದ ಸ್ವ-ನಿರೂಪಣೆಯು, ಬೇಸರ ತರಿಸಿದೆ. ಜೊತೆಗೆ ಡಬ್ಬಿಂಗ್ ನಲ್ಲಿ ಸಾಕಷ್ಟು ದೋಷಗಳು ಎದ್ದು ಕಾಣುತ್ತದೆ. ಬೇಸರದ ಸಂಗತಿ ಎಂದರೆ ಇದು ಇಡೀ ಚಿತ್ರದಲ್ಲಿ ಮುಂದುವರಿದಿದೆ. ವಿಭಿನ್ನವಾದದ್ದನ್ನು ಹೇಳುವ ಉದ್ದೇಶವು ಸ್ಪಷ್ಟವಾಗಿದ್ದರೂ, ನಿರಾಶೆ ಬೇಗನೇ ಅವರಿಸುತ್ತದೆ. ಸಾಮಾನ್ಯ ಕಥೆಯನ್ನು ಅವ್ಯವಸ್ಥಿತವಾಗಿ ಹೇಳಕಾಗಿದೆ ಅಲ್ಲದೆ ಅನನುಭವಿ ನಟರೊಂದಿಗೆ ಅದನ್ನು ಪರದೆಯ ಮೇಲೆ ತಂದಿರುವ ರೀತಿ ಪ್ರೇಕ್ಷಕನ ಅನಾಸಕ್ತಿಗೆ ಪ್ರಮುಖ ಕಾರಣವಾಗಲಿದೆ.
ಆಕರ್ಷಕವಾದ ಛಾಯಾಗ್ರಹಣದ ಹೊರತಾಗಿಯೂ, 1990s ದುರ್ಬಲ ನಿರೂಪಣೆ, ಅನನುಭವಿ ನಟರ ನಟನೆ ಮತ್ತು ದುರ್ಬಲ ಕಥೆಯೊಡನೆ ಸಾಗುತ್ತದೆ, ಆಸಕ್ತಿದಾಯಕ ಪ್ರಾರಂಭ ಕಂಡ ಚಿತ್ರ ಅಂತಿಮವಾಗಿ ಉತ್ಪ್ರೇಕ್ಷಿತ ಕಥೆ ಎನಿಸುತ್ತದೆ.
No comments:
Post a Comment