Friday, February 06, 2015

ನಕ್ಸಲ್ ನಾಯಕ ಸಾಕೇತ್ ರಾಜನ್ ಹತ್ಯೆಗೆ 10 ವರ್ಷ!

ಮೆಣಸಿನಹಾಡ್ಯದಲ್ಲಿ ಎನ್ಕೌಂಟರ್ನಕ್ಸಲ್ಬೇರಿಗೆ ಬಿದ್ದ ಮೊದಲ ಪೆಟ್ಟು!
ಸಾಕೇತ್ರಾಜನ್‌! ಕರ್ನಾಟಕದ ನಕ್ಸಲ್ಇತಿಹಾಸದಲ್ಲಿ ಪ್ರಮುಖವಾಗಿ ಗುರುತಿಸಲ್ಪಟ್ಟ ನಾಯಕ.ಹತ್ತುವರ್ಷಗಳ ಹಿಂದೆ 2005 ಫೆ.6 ಜಾವ ಚಿಕ್ಕಮಗಳೂರಿನ ಕೊಪ್ಪದ ಮೆಣಸಿನಹಾಡ್ಯದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗುವುದರೊಂದಿಗೆ ರಾಜ್ಯದಲ್ಲಿ ನಕ್ಸಲ್‌-ಪೊಲೀಸ್ಮುಖಾಮುಖೀಯ ನೇರ ಸಂಘರ್ಷಕ್ಕೆ  ನಾಂದಿಯಾಗಿತ್ತು.ಕರ್ನಾಟಕದಲ್ಲಿ ನಕ್ಸಲ್ಚಳವಳಿಯನ್ನು ಗಟ್ಟಿಗೊಳಿಸಿದ್ದಲ್ಲಿ ಸಾಕೇತ್ರಾಜನ್ಪಾಲು ದೊಡ್ಡದಿದೆ. ಆದರೆ ಸಾಕೇತ್ರಾಜನ್ಹತ್ಯೆ, ಶಸ್ತ್ರಸಜ್ಜಿತ ನಕ್ಸಲ್ಹೋರಾಟಕ್ಕೆ ಭಾರೀ ಪೆಟ್ಟು ನೀಡಿತ್ತು. ಹಿನ್ನೆಲೆಯಲ್ಲಿ ಸಾಕೇತ್ರಾಜನ್ಬಗ್ಗೆ, ಅಂದು ನಡೆದಿದ್ದೇನು? ಎಂಬ ಕುರಿತ ವಿವರಗಳು ಇಲ್ಲಿವೆ.

ಸಾಕೇತ್ರಾಜನ್ಯಾರು?
ಸೇನೆಯಲ್ಲಿ ಮೇಜರ್ಆಗಿದ್ದ ಎಸ್‌.ಕೆ.ಸುಂದರ್ರಾಜನ್ಅವರ ಪುತ್ರ. ಶ್ರೀಮಂತ ಅಯ್ಯಂಗಾರ್ಕುಟುಂಬದಲ್ಲಿ ಜನಿಸಿದ ಸಾಕೇತ್ರಾಜನ್‌ 1980 ವೇಳೆಗೆ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ.. ಪದವಿ ಪೂರೈಸಿದ್ದರು. ಬಳಿಕ ದೆಹಲಿಯ ಜವಾಹರಲಾಲ್ವಿವಿಯ ಇಂಡಿಯನ್ಇನ್ಸ್ಟಿಟ್ಯೂಟ್ಆಫ್ ಮಾಸ್ಕಮ್ಯುನಿಕೇಶನ್ಕಾಲೇಜಿನಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದರು. ಮೈಸೂರಿನಲ್ಲಿದ್ದಾಗಲೇ ಇಂಗ್ಲಿಷ್ನಲ್ಲಿ ಅಪೂರ್ವ ಪಾಂಡಿತ್ಯ ಮತ್ತು ವೈಚಾರಿಕತೆ ಗಳಿಸಿದ್ದರು. ವೇಳೆಗೆ ಅವರು ಫ್ರಾನ್ಸ್ಫ್ಯಾನನ್ಅ ವರ Wretched of the Earth (ಭೂಮಿಮೇಲಿನ ತಿರಸ್ಕೃತರು) ಕೃತಿ ಓದಿಕೊಂಡಿದ್ದು, ಅವರ ಮೇಲೆ ವ್ಯಾಪಕ ಪ್ರಭಾವ ಬೀರಿತ್ತು. ಓದಿನಲ್ಲಿ ಮುಂದಿದ್ದ ಗೆಳೆಯರ ಪಾಲಿನ "ಸಾಕಿ' ನಾಲ್ಕು ಚಿನ್ನದ ಪದವಿ ಪಡೆದಿದ್ದರು. ಆದರೆ ಅಂದಿನ ವಿವಿ ಘಟಿಕೋತ್ಸವದಲ್ಲಿ ಕೇಂದ್ರ ಶಿಕ್ಷಣ ಸಚಿವ ವಿ.ಸಿ. ಶುಕ್ಲಾ ರವರಿಂದ ಪದವಿ ಪತ್ರ ಸ್ವೀಕರಿಸಬೇಕಿದ್ದು, ಅದನ್ನು ಸ್ವೀಕರಿಸಿದೇ ಧಿಕ್ಕಾರ ಕೂಗಿ ವೇದಿಕೆಯಿಂದ ಹೊರನಡೆದಿದ್ದರು. (ಸಾಕೇತ್ರಾಜನ್ಪತ್ರಿಕೋದ್ಯಮದಲ್ಲಿ ಮೂರು ಸ್ನಾತಕೋತ್ತರ ಪದವಿ ಪಡೆದಿದ್ದರು. ದೆಹಲಿ ಐಐಎಮ್ಸಿ ಹೊರತಾಗಿ ಮೈಸೂರು, ಬೆಂಗಳೂರಿನಲ್ಲಿ ಪದವಿ ಪಡೆದಿದ್ದರು.) ಎಡಪಂಥೀಯ ವಿಚಾರ ಧಾರೆಗಳಿಂದ ಪ್ರೇರೇಪಿತರಾಗಿದ್ದ ಸಾಕೇತ್‌, ಅದಾಗಲೇ ಪೀಪಲ್ಸ್ವಾರ್ಗ್ರೂಪ್ಸಂಘಟನೆಗೆ ಪರಿಚಯವಾಗಿದ್ದರು.ಅಂತಹದೊಂದು ಪಡೆಯನ್ನು ತಾವೂ ಕಟ್ಟಬೇಕೆಂದು ಕನಸು ಕಾಣುತ್ತಾ 1982 ರಲ್ಲಿ ಮೈಸೂರಿಗೆ ಬಂದಿದ್ದರು.

ನಕ್ಸಲ್ಚಳವಳಿಯತ್ತ..
ಅದಾಗಲೇ ಆಂಧ್ರಪ್ರದೇಶದಲ್ಲಿ ಮಾರ್ಕ್ಸಿಸ್ಟ್‌-ಲೆನಿನಿಸಮ್‌-ಮಾವೋ ಪ್ರೇರಿತ ಚಳವಳಿಗಳು, ವ್ಯವಸ್ಥೆಯ ವಿರುದ್ಧ ಹೋರಾಟಗಳು ತೀವ್ರಗೊಂಡಿದ್ದವು. ಇದೇ ಸಂದರ್ಭ ಸಾಕೇತ್‌ 1983ರಲ್ಲಿ ಪೂರ್ಣ ಪ್ರಮಾಣದಲ್ಲಿ ನಕ್ಸಲ್ಚಳವಳಿಗೆ ಧುಮುಕಿದರು. ಆರಂಭದಲ್ಲಿ ರಾಜ್ಯದ ಕಮ್ಯುನಿಸ್ಟ್ಕ್ರಾಂತಿಕಾರಿಗಳ ವಿದ್ಯಾರ್ಥಿ ಸಂಘಟನಕಾರರಾಗಿ ಕೆಲಸಮಾಡಿದರು.ಬಳಿಕ ಸಾತನೂರಿನಲ್ಲಿ ಕಟ್ಟುತ್ತಿದ್ದ ಜಪಾನ್ಇಂಡಸ್ಟ್ರಿಯಲ್ಟೌನ್ಶಿಪ್‌, ಕುದ್ರೆಮುಖ ಅದಿರು ಕಂಪನಿಯಿಂದಾಗುವ ಹಾನಿ ಬಗ್ಗೆ ಸಕ್ರಿಯವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದರು. ಬಳಿಕ ಹಂತ ಹಂತವಾಗಿ ನಕ್ಸಲ್ಸಂಘಟನೆಯ ಹುದ್ದೆಯಲ್ಲಿ ಮೇಲೇರುತ್ತಾ ಹೋದರು. 2000ದಲ್ಲಿ ರಾಜ್ಯ ಕಾರ್ಯದರ್ಶಿಯಾಗಿದ್ದರು. ಇದರೊಂದಿಗೆ ಹಲವು ಹೋರಾಟಗಳಿಗೆ ನಿರ್ದೇಶನ ನೀಡಿದ್ದರು.

ಶಸ್ತ್ರ ಸಜ್ಜಿತ ಹೋರಾಟಕ್ಕೆ
ಪರಿಸರ ಸಂಕ್ಷಣ ಚಳವಳಿಯನ್ನು ರಾಜ್ಯಾದ್ಯಂತ ವಿಸ್ತರಿಸಲು ಯೋಜಿಸಿದ್ದ ಸಾಕೇತ್ರಾಜನ್ತಮ್ಮ ಹೋರಾಟವನ್ನು ಪ್ರತಿಭಟನೆಯಾಚೆಗೂ ವಿಸ್ತರಿಸಲು ಯೋಜಿಸಿದ್ದರು. ಪರಿಣಾಮ ಮಲೆನಾಡು ವಲಯವನ್ನು ಮೂಲವಾಗಿಟ್ಟುಕೊಂಡು ಗೆರಿಲ್ಲಾ ಪಡೆಯೊಂದನ್ನು ರೂಪಿಸಿ ಹೋರಾಟ ತೀವ್ರಗೊಳಿಸುವುದು ಅವರ ಉದ್ದೇಶವಾಗಿತ್ತು. "ಪೆನ್ಆ್ಯಂಡ್ಗನ್‌' ಒಟ್ಟಿಗೆ ಸಾಗಬೇಕು ಎಂಬ ಅವರ ಆಲೋಚನೆಯಾಗಿತ್ತು. ಇದರೊಂದಿಗೆ ಆಂಧ್ರದಲ್ಲಿ ನಕ್ಸಲ್ಪರ ಬರಹ-ಪತ್ರಿಕೆಯಲ್ಲಿ ಸಕ್ರಿಯವಾಗಿದ್ದ ಪತ್ರಕರ್ತೆ ಪತ್ನಿ ರಾಜೇಶ್ವರಿ ಅವರನ್ನುಪೊಲೀಸರು ಗುಂಡಿಟ್ಟು ಕೊಂದ ಘಟನೆ ನಿಸ್ತೇಜರನ್ನಾಗಿಸಿತ್ತು ನಂತರದಲ್ಲಿ ಸಾಕೇತ್ಆಂಧ್ರದ ತೀವ್ರವಾದಿ ಗುಂಪುಗಳೊಂದಿಗೆ ಸಕ್ರಿಯವಾಗಿ ಸೇರಿ ಬಂದೂಕು ಕೈಗೆತ್ತಿಕೊಂಡಿದ್ದು, ಮಲೆನಾಡು ಅರಣ್ಯ ಪ್ರವೇಶ ಮಾಡಿದ್ದರು.

ಮಲೆನಾಡಲ್ಲಿ ಗುಂಡಿನ ಸದ್ದು
 2003 ನವೆಂಬರ್ನಲ್ಲಿ ಉಡುಪಿಯ ಈದು ಗ್ರಾಮದಲ್ಲಿ ನಡೆದ ಎನ್ಕೌಂಟರ್ನಲ್ಲಿ ನಕ್ಸಲರಾದ ಹಾಜಿಮಾ ಮತ್ತು ಪಾರ್ವತಿ ಮೃತಪಟ್ಟಿದ್ದು, ಇದಕ್ಕೆ ಪ್ರತಿಯಾಗಿ ನಕ್ಸಲರು ಶೃಂಗೇರಿಯ ನೆಮ್ಮೂರಿನ ಅರಣ್ಯ ಇಲಾಖೆ ಅತಿಥಿಗೃಹ ಧ್ವಂಸ ಮಾಡಿದ್ದರು. 2004ರಲ್ಲಿ ಪೊಲೀಸ್ಪೇದೆ ಮುದ್ದಪ್ಪ ಅವರನ್ನು ಅಪಹರಿಸಿದ್ದರು. ಇಂತಹ ಕಾರ್ಯಗಳಲ್ಲಿ ತೀವ್ರವಾದಿ ನಕ್ಸಲರಾಗಿದ್ದ ಸಾಕೇತ್ಅವರ ಕೈವಾಡವಿದ್ದದ್ದನ್ನು ಪೊಲೀಸರು ಮನಗಂಡಿದ್ದರು.ಅಲ್ಲದೇ ಮಲೆನಾಡಲ್ಲಿ ನಕ್ಸಲ್ಬೇರು ಪ್ರಬಲವಾಗುತ್ತಿರುವುದು ಗಮನಕ್ಕೆ ಬಂದಿತ್ತು.

ತಲೆಗೆ ಬಿದ್ದ ಗುಂಡು!
ಘಟನೆಗಳ ಬಳಿಕ ಸಾಕೇತ್ರಾಜನ್ಅವರ ಚಲನವಲನಗಳ ಮೇಲೆ ಪೊಲೀಸರು ಹದ್ದಿನಗಣ್ಣಿಟ್ಟಿದ್ದರು. 2005 ಫೆ.5ರಂದು ಚಿಕ್ಕಮಗಳೂರು ಡಿವೈಎಸ್ಪಿ ಆಗಿದ್ದ ಶಿವಕುಮಾರ್ಅವರ ನೇತೃತ್ವದಲ್ಲಿ 80 ಜನ ಪೊಲೀಸರು ನಾಲ್ಕು ತಂಡಗಳಾಗಿ ಮೆಣಸಿನಹಾಡ್ಯದ ಅರಣ್ಯವಲಯದಲ್ಲಿ ಸಾಕೇತ್ಗೆ ಬಲೆ ಬೀಸಿದ್ದರು. ಗ್ರಾಮದ ಶೇಷಯ್ಯ ಸುಳಿವು ನೀಡಿದ್ದು, ಬೆಳಗಿನ ಜಾವ ಸಾಕೇತ್ಇದ್ದ ಅಡಗುದಾಣಕ್ಕೆ ಪೊಲೀಸರು ಲಗ್ಗೆ ಹಾಕಿದ್ದರು.ಬೆಳಗ್ಗೆ 4.30ರಿಂದ 7 ಹೊತ್ತಿಗೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಎಕೆ-47 ಹಿಡಿದಿದ್ದ ಸಾಕೇತ್ತಲೆಗೆ ಗುಂಡು ಹೊಕ್ಕಿತ್ತು.ಮತ್ತು ಅವರ ಅಂಗರಕ್ಷಕನಾಗಿದ್ದ ಶಿವಲಿಂಗು ಧರಾಶಾಯಿಯಾಗಿದ್ದ.

ಹತ್ಯೆಗೆ ಪಾವಗಡದಲ್ಲಿ ಪ್ರತೀಕಾರ!
ಸಾಕೇತ್ರಾಜನ್ಹತ್ಯೆಗೆ ನಕ್ಸಲರು ಪ್ರತೀಕಾರ ತೀರಿಸಿಕೊಂಡಿದ್ದು, ರಾಜ್ಯ ಪೊಲೀಸರ ಹತ್ಯೆಯ ಮೂಲಕ. ಸಾಕೇತ್ಹತ್ಯೆ ನಡೆದು ತಿಂಗಳು ಕಳೆಯುವುದರೊಳಗೆ ಅಂದರೆ 2005 ಮಾರ್ಚ್ನಲ್ಲಿ ಮಧುಗಿರಿಯ ಪಾವಗಡದಲ್ಲಿ ಪೀಪಲ್ಸ್ವಾರ್ಗೂÅಪ್ ತೀವ್ರವಾದಿಗಳು ವೆಂಕಮನಹಳ್ಳಿಯ ಶಾಲೆಯಲ್ಲಿ ಬೀಡುಬಿಟ್ಟಿದ್ದ ರಾಜ್ಯ ಪೊಲೀಸ್ಪಡೆಯ ಮೇಲೆ ದಾಳಿ ನಡೆಸಿದ್ದರು. 7 ಮಂದಿ ಪೊಲೀಸರು ಸಂದರ್ಭ ಮೃತಪಟ್ಟಿದ್ದರು. ಅಲ್ಲದೇ ಸಾಕೇತ್ಬಗ್ಗೆಮಾಹಿತಿ ನೀಡಿದ್ದ ಶೇಷಯ್ಯನನ್ನೂ ನಕ್ಸಲರು ಹತ್ಯೆ ಮಾಡಿದ್ದರು.

ನಕ್ಸಲ್ಬೇರಿಗೆ ಬಿದ್ದ ಮೊದಲ ಪೆಟ್ಟು
ಮಲೆನಾಡಿನಲ್ಲಿ ನಕ್ಸಲ್ಸಿದ್ಧಾಂತದ ಬೇರುಗಳನ್ನು ಭದ್ರಪಡಿಸುವ ಪ್ರಯತ್ನಕ್ಕೆ ಪೊಲೀಸರು ಸಾಕೇತ್ರಾಜನ್ಹತ್ಯೆ ಮೂಲಕ ಮೊದಲ ಪೆಟ್ಟು ನೀಡಿದ್ದರು. ಪಶ್ಚಿಮಘಟ್ಟದಲ್ಲಿ ನಕ್ಸಲ್ಚಟುವಟಿಕೆಗಳು ನಡೆಯುತ್ತಿದೆ ಎಂಬುದು ಹೊರಜಗತ್ತಿಗೆ ತಿಳಿದದ್ದೇ ಹತ್ಯೆಯ ಬಳಿಕ! ಘಟನೆ ನಂತರ ನಕ್ಸಲರು ಹಾಗೂ ಸರ್ಕಾರದ ನಡುವೆ ನೇರ ಸಂಘರ್ಷ ಆರಂಭವಾಯಿತು. ಸಾಕೇತ್ರಾಜನ್ಮೃತಪಟ್ಟ ನಂತರ ನಕ್ಸಲರಿಗೆ ಸೂಕ್ತ ನಾಯಕತ್ವ ದೊರಕಲಿಲ್ಲ. ಸರ್ಕಾರದ ಕೆಲವೊಂದು ಆಡಳಿತಾತ್ಮಕ ನಿರ್ಧಾರಗಳಿಂದಾಗಿಯೂ ನಕ್ಸಲ್ಪರ ಧೋರಣೆಗಳು ಕಂದಿದವು.


ಕೃಪೆ: ಉದಯವಾಣಿ ದಿನಪತ್ರಿಕೆ..



No comments:

Post a Comment