ಮರಾಠಿ ಸಾಹಿತಿ ಭಾಲಚಂದ್ರ ನೇಮಾಡೆ ಅವರು 2014ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಆಯ್ಕೆ ಮಂಡಳಿ 50ನೇ ಜ್ಞಾನಪೀಠ ಪ್ರಶಸ್ತಿಗೆ ಭಾಲಚಂದ್ರ ಅವರನ್ನು ಆಯ್ಕೆ ಮಾಡಿದೆ. ಈ ಮೂಲಕ ಮರಾಠಿ ಸಾಹಿತ್ಯಕ್ಕೆ ಭಾರತದ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ನಾಲ್ಕನೇ ಬಾರಿ ಸಂದಂತೆ ಆಗಿದೆ.ಈ ಮುಂಚೆ ಮಹಾರಾಷ್ಟ್ರದ ವಿಷ್ಣು ಸಖಾರಾಮ್ ಖಂಡೇಕರ್ (1974), ವಿಷ್ಣು ವಾಮನ ಶಿರ್ವಾಡ್ಕರ್ (1987) ಮತ್ತು ವಿಂದಾ ಕರಂಡಿಕರ್ (2003) ಅವರು ಈ ಗೌರವದಿಂದ ಪುರಸ್ಕೃತರಾಗಿದ್ದರು.ಈ ಹಿನ್ನೆಲೆಯಲ್ಲಿ ಇಲ್ಲಿ ಈ ಬಾರಿಯ ಪ್ರಶಸ್ತಿ ವಿಜೇತರ ಪರಿಚಯ ಹಾಗೂ ಕನ್ನಡದ ಪ್ರಸಿದ್ದ ದಿನ ಪತ್ರಿಕೆ ಪ್ರಜಾವಾಣಿ’ಯ ಸೋದರ ಪತ್ರಿಕೆ ‘ಮಯೂರ’ದ ಡಿಸೆಂಬರ್ 2014 ರ ಸಂಚಿಕೆಯಲ್ಲಿ ಪ್ರಕಟವಾದ ಸಂದರ್ಶನವೊಂದನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ...
***
ಭಾಲಚಂದ್ರ ನೇಮಾಡೆ ವ್ಯಕ್ತಿ ಪರಿಚಯ
ಮಹಾರಾಷ್ಟ್ರದ ಸಾಂಘ್ವಿ ಗ್ರಾಮದಲ್ಲಿ 1938ರಲ್ಲಿ ಹುಟ್ಟಿದ ನೇಮಾಡೆ ಅವರು ಪದವಿ ಪಡೆದದ್ದು ಪುಣೆಯ ಫರ್ಗ್ಯುಸನ್ ಕಾಲೇಜಿನಿಂದ. ನಂತರ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು, ಉತ್ತರ ಮಹಾರಾಷ್ಟ್ರ ವಿ.ವಿ.ಯಿಂದ ಪಿಎಚ್.ಡಿ. ಮತ್ತು ಡಿ.ಲಿಟ್ ಪದವಿಗಳನ್ನೂ ಪಡೆದಿದ್ದಾರೆ.
ವಿವಿಧ ವಿಶ್ವವಿದ್ಯಾಲಯಗಳಲ್ಲಿ ಇಂಗ್ಲಿಷ್, ಮರಾಠಿ ಮತ್ತು ತೌಲನಿಕ ಅಧ್ಯಯನದ ಬೋಧಕರಾಗಿ ಅವರು ಕಾರ್ಯನಿರ್ವಹಿಸಿದ್ದಾರೆ. ಲಂಡನ್‌ನ ‘ಓರಿಯಂಟಲ್ ಅಂಡ್ ಆಫ್ರಿಕನ್ ಸ್ಟಡೀಸ್ ಸ್ಕೂಲ್’ನಲ್ಲೂ ಬೋಧಕರಾಗಿದ್ದ ಅವರು, ಮುಂಬೈ ವಿ.ವಿ.ಯ ಗುರುದೇವ್ ಟ್ಯಾಗೋರ್ ತೌಲನಿಕ ಸಾಹಿತ್ಯ ಅಧ್ಯಯನ ಪೀಠದ ಬೋಧಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಅವರು 1960ರ ದಶಕದಲ್ಲಿ ‘ವಾಚಾ’ ಎಂಬ ಮರಾಠಿ ನಿಯತಕಾಲಿಕದ ಸಂಪಾದಕರೂ ಆಗಿದ್ದರು.
‘ಕೋಸಲಾ’, ‘ಬಿಢಾರ್’, ‘ಜರಿಲಾ’, ‘ಹೂಲ್’, ‘ಝೂಲ್’, ‘ಹಿಂದೂ– ಜಗಣ್ಯಾಚಿ ಸಮೃದ್ಧ ಅಡಗಳ್’ ಅವರ ಪ್ರಮುಖ ಕಾದಂಬರಿಗಳು, ‘ಮೆಲೋಡಿ’, ‘ದೇಖಣೀ’ ಮುಖ್ಯ ಕವನ ಸಂಕಲನಗಳು, ‘ಟೀಕಾ ಸ್ವಯಂವರ್’, ‘ಸಾಹಿತ್ಯಾಚಿ ಭಾಷಾ’, ‘ತುಕಾರಾಂ’ ಹೆಸರಾಂತ ವಿಮರ್ಶಾ ಕೃತಿಗಳು.
‘ಟೀಕಾ ಸ್ವಯಂವರ್’ ಕೃತಿಗಾಗಿ 1990ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗರಿ ಅವರ ಮುಡಿಗೇರಿದೆ. ಪದ್ಮಶ್ರೀ ಗೌರವ (2011) ಕ್ಕೂ ಪಾತ್ರರಾಗಿದ್ದಾರೆ.
***
2014ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ವಿಜೇತಮರಾಠಿ ಸಾಹಿತಿ ಭಾಲಚಂದ್ರ ನೇಮಾಡೆ |
ಭಾಲಚಂದ್ರ ನೇಮಾಡೆ ಮರಾಠಿಯ ಅತ್ಯಂತ ಶ್ರೇಷ್ಠ ಲೇಖಕ. ಕೇವಲ ರಾಷ್ಟ್ರಮಟ್ಟದಲ್ಲಷ್ಟೇ ಅಲ್ಲ. ಜಾಗತಿಕ ಮಟ್ಟದಲ್ಲೂ ಖ್ಯಾತಿಯನ್ನು ಪಡೆದವರು. ಕವಿತೆ, ಕಾದಂಬರಿ, ವಿಮರ್ಶೆಯನ್ನು ಭಿನ್ನವಾದ ರೀತಿಯಲ್ಲಿ ಬರೆದು ಪರಂಪರೆಗೆ, ಪ್ರಸ್ತಾಪಿತ ವ್ಯವಸ್ಥೆಗೆ ‘ಶಾಕ್’ ನೀಡಿದವರು.
‘ಮರಾಠಿ ಸಾಹಿತ್ಯದ ಕಕ್ಷೆ ಹಿಗ್ಗಿಸಲು, ಸಶಕ್ತಗೊಳಿಸಲು ಸಮಾಜದ ಎಲ್ಲ ಸ್ತರದ ಜನರು ತಮ್ಮ ಜೀವನಾನುಭವವನ್ನು ಸಾಹಿತ್ಯದಲ್ಲಿ ತರುವ ಅಗತ್ಯವಿದೆ ಎಂದು ನಂಬಿದವರು. ಅರವತ್ತರ ದಶಕದಲ್ಲಿ ‘ಲಿಟ್ಲ್ ಮಾಗಝಿನ್’ ಎಂಬ ಕಿರುಪತ್ರಿಕೆಗಳ ಚಳವಳಿಯ ಮುಂದಾಳತ್ವವನ್ನು ವಹಿಸಿ, ಮರಾಠಿ ಗದ್ಯ ಸಾಹಿತ್ಯಕ್ಕೆ ಶಕ್ತಿಯನ್ನು ತುಂಬಿದವರು, ‘ಬರೆಯಲು ಬಾರದ ಪರಂಪರೆಯಿರುವ ಜನರಿಗೆ ಬರೆಯುವ ಪ್ರೇರಣೆ ನೀಡುವದಕ್ಕಾಗಿ ಕೇವಲ ತಾತ್ವಿಕ ಮತ್ತು ಸೈದ್ಧಾಂತಿಕ ಮಂಡನೆ ಮಾಡಿದರೆ ಸಾಲದು, ಪ್ರತ್ಯಕ್ಷ ಸಂವಾದ ಮತ್ತು ಸಂಪರ್ಕದ ಅಗತ್ಯವಿದೆ’ ಎಂಬ ಸಂಪೂರ್ಣ ಅರಿವು ಅವರಿಗಿದೆ. ಈ ಕಾರಣಕ್ಕಾಗಿ ಅವರು ಆರು ಕಾದಂಬರಿಗಳನ್ನು ಬರೆದದ್ದಲ್ಲದೆ, ಜೊತೆಜೊತೆಗೆ ವಿಚಾರ ಸಂಕಿರಣಗಳಲ್ಲಿ ಭಾಗವಹಿಸುತ್ತಾರೆ., ಸೃಜನಶೀಲ ಬರವಣಿಗೆಯನ್ನು ಬದಿಗಿಟ್ಟು ಅತ್ಯಂತ ನಿಷ್ಠೆಯಿಂದ ವಿಚಾರ ಪ್ರಸಾರವನ್ನು ಸತತವಾಗಿ ಮಾಡುತ್ತ ಬಂದಿದ್ದಾರೆ. ನೇಮಾಡೆಯವರು ಮಂಡಿಸಿದ ಚಿಂತನೆಗಳು ಸಮಾಜ ಶಾಸ್ತ್ರೀಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಅವರ ಮಾತುಗಳಲ್ಲಿ ಬರಹಗಳಲ್ಲಿ ಅಧ್ಯಯನ, ಕಳಕಳಿ, ವೈಚಾರಿಕ ಆಯಾಮ, ದಿಟ್ಟ ಅಭಿವ್ಯಕ್ತಿ, ಭಾಷಾ ಪ್ರಭುತ್ವವನ್ನು ಗುರುತಿಸಬಹುದು.
ಭಾಲಚಂದ್ರ ನೇಮಾಡೆಯವರು 27 ಮೇ 1938 ರಲ್ಲಿ ಖಾನದೇಶದ ಸಾಂಗವಿ ಎಂಬಲ್ಲಿ, ಕೃಷಿ ಕುಟುಂಬದಲ್ಲಿ ಜನಿಸಿದರು. ಹದಿನಾಲ್ಕನೇ ವಯಸ್ಸಿನಲ್ಲಿದ್ದಾಗ ಸಾತಪುಡಾ ಬೆಟ್ಟದಡಿಯಲ್ಲಿ ಕೂತು ಕವಿತೆ ಬರೆದರು. 1961 ರಲ್ಲಿ ಪುಣೆಯ ಫರ್ಗ್ಯೂಸನ್ ಕಾಲೇಜಿನಿಂದ ಬಿ.ಎ. ಪದವಿಯನ್ನು, 1964 ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್) ಪದವಿ ಪಡೆದರು. 1965 ರಿಂದ ಆಂಗ್ಲ ಸಾಹಿತ್ಯ ಪ್ರಾಧ್ಯಾಪಕರಾಗಿ ಅಹಮದ್‌ನಗರ, ಧುಳೆ, ಔರಂಗಾಬಾದ್, ಲಂಡನ್, ಗೋವೆ, ಮರಾಠವಾಡಾ, ಕೊನೆಗೆ ಮುಂಬೈ ವಿ.ವಿ.ಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದರು.
ನೇಮಾಡೆ ಅವರು 25ನೇ ವಯಸ್ಸಿನಲ್ಲಿ ವಿಮನಸ್ಕ ಅವಸ್ಥೆಯಲ್ಲಿದ್ದಾಗ ‘ಕೋಸಲಾ’ (ಗೂಡು) ಎಂಬ ಕಾದಂಬರಿಯನ್ನು ಬರೆದರು. ಅದನ್ನೂ ಸಹ ಸಾತಪುಡಾದ ಬೆಟ್ಟದ ಮಡಿಲಲ್ಲಿ ಕೂತೇ ಬರೆದರು. ಇಂಗ್ಲೆಂಡಿನಿಂದ ಕರಾರು ಮುರಿದು ಅರ್ಧಕ್ಕೆ ಮತ್ತೆ ಊರಿಗೆ ಮರಳಿ ನಿರುದ್ಯೋಗಿ ಅವಸ್ಥೆಯಲ್ಲಿದ್ದಾಗಲೇ ಬಿಢಾರ, ಹೊಲ, ಜರೀಲಾ ಮತ್ತು ಝಾಲ್–ಎಂಬ ಚತುಷ್ಟಯ ಕಾದಂಬರಿ ಬರೆದರು. ಬರೆಯುವಾಗ ಯಾವುದೇ ಪ್ರಸ್ತಾಪಿತ ಮೌಲ್ಯಗಳ ಬಗೆಗಾಗಲಿ, ಸಂಸ್ಥೆಯ ಬಗೆಗಾಗಲಿ, ತಲೆ ಕೆಡಿಸಿಕೊಳ್ಳಲಿಲ್ಲ. ಕುಟುಂಬ, ಜಾಲಿಯೆ, ಧರ್ಮ, ಪ್ರದೇಶ ಮುಂತಾದ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡರು. ಸಮಕಾಲೀನ ಪೀಳಿಗೆಯ ಪ್ರವೃತ್ತಿಯನ್ನುಬಯಲಿಗೆಳೆದರು. ಮಹಾರಾಷ್ಟ್ರದಲ್ಲಿ ಕೊಬ್ಬಿದ ಅಪಪ್ರವೃತ್ತಿಯನ್ನು ಬಹಿರಂಗವಾಗಿಯೇ ಧಿಕ್ಕರಿಸಿದರು. ಯಾವ ಕೃತಿ, ವರ್ತನೆ, ಬರವಣಿಗೆ ಮತ್ತು ಶೈಕ್ಷಣಿಕ ವ್ಯವಸಾಯದಲ್ಲಿ ಯಾವ ಬಗೆಯ ಹೊಂದಾಣಿಕೆಯನ್ನೂ ಮಾಡಿಕೊಳ್ಳಲಿಲ್ಲ. ವಂದಿಮಾಗಧರಂತೆ ಯಾರನ್ನೂ ಹೊಗಳಲಿಲ್ಲ, ಎಳೆಯ ವಯಸ್ಸಿನಲ್ಲೇ ಮನೆಯಿಂದ ಹೊರಬಿದ್ದು, ಹಲವು ಪ್ರದೇಶಗಳನ್ನು ಸುತ್ತಾಡಿ, ಪ್ರತಿಯೊಂದು ಕಡೆ ತನ್ನ ಬೇರು ಊರುತ್ತ ಅಸ್ವಸ್ಥರಾದರು. ಎಲ್ಲಿ ನೆಲೆಯೂರುತ್ತಿದ್ದರೋ ಅದೇ ತನ್ನ ಪ್ರದೇಶವೆಂದು ಬದುಕಿದರು. ‘ಆದರೂ ಆರಂಭದ ಭಾಷಿಕ ಸಂಸ್ಕಾರವೇ ಮನದ ಆಳದಲ್ಲಿರುತ್ತದೆ. ಅದು ಲೇಖಕನಿಗೆ ವಿಶ್ವದ ಕಡೆಗೆ ನೋಡುವ ದೃಷ್ಟಿಯನ್ನು ನೀಡುತ್ತದೆ’ ಎಂಬ ಅರಿವಾಗಿ, ಈಗಲೂ ತಮ್ಮ ಮನದೊಳಗೆ ಖಾನದೇಶದ ಭಾಷೆಯೇ ಉಳಿಯಿತೆಂದು ನೇಮಾಡೆ ಹೇಳಿಕೊಂಡಿದ್ದಾರೆ. ಈಗಲೂ ಅವರು ‘ಅದೇ ಭೂಮಿ ತತ್ವದ’ ಶೋಧನೆಯಲ್ಲಿರುತ್ತಾರೆ. ಕವಿತೆ, ಕಾದಂಬರಿ, ವಿಮರ್ಶೆ, ಸಂಶೋಧನೆಯಲ್ಲೂ ಇದೇ ‘ವ್ಯೂಹ’ ದಿಕ್ಕು ತೋರಿಸಿದೆ. ಸತತ ಬೆವರು ಸುರಿಸುವ ಅದರಿಂದ ಬಾಹ್ಯ ಮತ್ತು ಆಂತರಿಕವಾಗಿ ನಿರೋಗಿಯಾಗಿರುವ ರೈತ ಸಂಸ್ಕೃತಿ–ಕೃಷಿ ಸಂಸ್ಕೃತಿಯ ಬಗೆಗೆ ತಮ್ಮ ಸೃಜನ ಪ್ರಕ್ರಿಯೆಯಲ್ಲಿ ಗೌರವದ ಸ್ಥಾನ ನೀಡಿದ್ದಾರೆ. ಈ ನೆಲದ ಜಾನಪದ, ಹಬ್ಬ–ಹುಣ್ಣಿವೆ, ಕಥೆ–ಕೀರ್ತನೆ, ಸಂತಕವಿಗಳ ಅಭಂಗ, ವಾರಕರಿ–ಮಹಾನುಭಾವ ವಾಙ್ಮಯ, ಲಾವಣಿ, ವಗ್ ಇದೆಲ್ಲ ಅವರನ್ನು ರೂಪಿಸಲು ಕಾರಣವಾಯಿತು. ‘ಇಡೀ ಭಾರತವನ್ನು ವ್ಯಾಪಿಸಿದ ವಿಸ್ತೀರ್ಣ ಸಂಸ್ಕೃತಿಯು ಚಿಕ್ಕಹಳ್ಳಿಯಲ್ಲಿ ಜೀವಕೋಶದಂತೆ ಜೀವಂತನಾಗಿರುತ್ತದೆ’ ಎಂದು ಅವರು ನಂಬುತ್ತಾರೆ. ಇಂಥ ಸ್ವಾಯತ್ತ, ಸಮೃದ್ಧ ವಾಙ್ಮಯ ಸಂಸ್ಕೃತಿಯು ಜಗತ್ತಿನಲ್ಲಿ ತಮಗೆ ಎಲ್ಲೂ ಕಂಡುಬರಲಿಲ್ಲ ಎನ್ನುತ್ತಾರೆ. ಈ ಬಲಿಷ್ಠ ಭೂಮಿತತ್ವದ ಸಹಾಯದಿಂದ ಗರ್ವದಿಂದ ತಲೆಎತ್ತಿ ಓಡಾಡಬಲ್ಲೆ ಎಂಬ ದೃಢ ನಂಬಿಕೆ ಅವರದ್ದು. ನೇಮಾಡೆಯವರಿಗೆ ಜಗತ್ತಿನ ಎಲ್ಲ ಚಿಕ್ಕ–ದೊಡ್ಡ ಸಾಹಿತ್ಯಿಕ ಪರಂಪರೆಯೊಂದಿಗೆ ಗಾಢ ನಂಟಿದೆ. ಆದರೂ ಅವರು ಭೂಮಿನಿಷ್ಠ ಪರಂಪರೆಯ ಇಬ್ಬರೂ ಮಹಾತ್ಮರಾದ ಶ್ರೀ ಚಕ್ರಧರ ಮತ್ತು ತುಕಾರಾಮ ಅವರನ್ನೇ ಶ್ರೇಷ್ಠ ಆದರ್ಶವಾಗಿ ಕಾಣುತ್ತಾರೆ.
‘ಸಂಪೂರ್ಣ ವಿಶ್ವದ ಮಹಾವ್ಯವಸ್ಥೆಯಲ್ಲಿ ನಮ್ಮ ಸಮೂಹವು ಉಪ ವ್ಯವಸ್ಥೆಯಾಗಿ ಕಾರ್ಯ ಮಾಡುತ್ತಿರುತ್ತದೆ. ಈ ಮಹಾವ್ಯವಸ್ಥೆಯಲ್ಲಿ ನಾವೆಲ್ಲಿದ್ದೇವೆ ಎಂಬ ಅರಿವನ್ನು ತಂದುಕೊಳ್ಳುವದು ಈ ಯುಗದ ಅಗತ್ಯವಾಗಿದೆ. ತನ್ನ ಬಗ್ಗೆ, ತನ್ನ ಪ್ರದೇಶ, ಜಾತಿ ಬಗ್ಗೆ ಮಾತ್ರ ಯೋಚಿಸುವ ಜನರ ಸಮಾಜದಲ್ಲಿ ನಿಂತ ನೀರಿನಂತೆ ಕೊಳೆತ ದುರ್ವಾಸನೆ ಹರಡುತ್ತದೆ. ವಿಶೇಷವಾಗಿ ಕೃಷಿ ಪ್ರಧಾನ ಸಂಸ್ಕೃತಿಯಲ್ಲಿ ಸ್ವಾರ್ಥ ಪ್ರವೃತ್ತಿ ಬೆಳೆಯುತ್ತದೆ. ಹಣ ಮತ್ತು ಸಂಪತ್ತೇ ಸರ್ವಸ್ವ ಎನ್ನುವ ಸ್ವಾರ್ಥ ಪದ್ಧತಿ ಬೆಳೆಯುತ್ತದೆ. ಮನುಷ್ಯ ಮನುಷ್ಯನಿಗೆ ಪ್ರೀತಿ ನೀಡಲಾರದ ವೃತ್ತಿ ಕೊಬ್ಬುತ್ತದೆ. ಪರಿಸರವನ್ನು ದೋಚುವ ಅವಿಚಾರ ಬೆಳೆಯುತ್ತದೆ. ಬಡ ಶ್ರಮಿಕರು ಇದರ ಕ್ರೂರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಅಂಥ ಹಲವು ಶೋಷಣೆಯ ಪದ್ಧತಿಯನ್ನು ನಾನು ನನ್ನ ಕಾದಂಬರಿಗಳಲ್ಲಿ ಕಲಾತ್ಮಕತೆಯನ್ನು ಧಿಕ್ಕರಿಸಿ ಮಂಡಿಸಿದ್ದೇನೆ. ಆದರೆ ಈಗ ಕೃಷಿ ಮತ್ತು ಶ್ರಮಸಂಸ್ಕೃತಿಯ ಗತಿ ಶೀಲತೆಯೇ ಮುಗಿದಿದೆ. ಹೀಗಾಗಿ ಅನ್ಯಾಯದ ವಿರುದ್ಧ ಹೋರಾಡುವ ಶಕ್ತಿಯೇ ಕೃಷಿ ಪ್ರಧಾನ ಪ್ರದೇಶದಲ್ಲಿ ಉಳಿಯಲಿಲ್ಲ. ಆಗ ದುಷ್ಟ ರೂಢಿಯನ್ನು ವಿಧ್ಯುಕ್ತಗೊಳಿಸಬೇಕಾಗುತ್ತದೆ. ಸಾಹಿತ್ಯ ಕಲೆಯಲ್ಲಿ ಬೆಳಕು ಬೀರುವ ಒಂದು ಆಧ್ಯಾತ್ಮಿಕ ಗೀತೆಯಾಗಿದೆ. ಅದು ಸಮಾಜದಲ್ಲಿ ಮೂಲಗಾಮಿ ಬದಲಾವಣೆಯನ್ನು ತರುತ್ತದೆ ಎಂದು ಅವರು ಹೇಳುತ್ತಾರೆ.
ನೇಮಾಡೆಯವರು ಬೆಳಗಾವಿಗೆ ಬಂದಾಗ ನಾನು ಅವರ ಜೊತೆಗೆ ಅನೌಪಚಾರಿಕವಾಗಿ ಮಾತನಾಡಿದಾಗ ಮೇಲಿನ ವಿಷಯ ನಮ್ಮ ಚರ್ಚೆಯಲ್ಲಿ ಬಂತು. ಅವರ ಜೊತೆ ಎರಡು ದಿನ ಓಡಾಡಿಕೊಂಡಿದ್ದಾಗ ಇಂಥ ಹಲವು ಸಂಗತಿಗಳ ಬಗೆಗೆ ಸಹಜವಾಗಿ ಮಾತಾಡುತ್ತಿದ್ದರು. ಅವರು ಬೆಳಗಾವಿಯ ಹಲವು ಸ್ಮಾರಕಗಳು, ಮರಾಠಿ ಗ್ರಂಥಾಲಯಗಳಿಗೆ ಭೇಟಿ ನೀಡಿದರು. ಅವರನ್ನು ಯಾರೇ ಬಂದು ಭೇಟಿಯಾಗಲಿ ಜನಸಾಮಾನ್ಯರಂತೆ ಬೆರೆತು ಹರಟೆ ಹೊಡೆಯುತ್ತಿದ್ದರು. ಯಾವ ಬಗೆಯ ಅಹಂ ಆಗಲಿ, ಹಮ್ಮುಬಿಮ್ಮಾಗಲಿ ಅವರಲ್ಲಿರಲಿಲ್ಲ. ಮುಂಬೈಯಿಂದ ಬರುವಾಗ ನನಗಾಗಿ ಮರಾಠಿ ವಿಚಾರ ಸಾಹಿತ್ಯದ ಪುಸ್ತಕಗಳನ್ನು ತಂದಿದ್ದರು. ಮರಾಠಿ ವೈಚಾರಿಕ ಪರಂಪರೆಯ ಬಗೆಗೂ ಮಾತನಾಡಿದರು.
ನೇಮಾಡೆಯವರಿಗೆ ಕನ್ನಡದ ಲೇಖಕರಾದ ಜಿ.ಎಸ್. ಆಮೂರ, ಶಾಂತಿನಾಥ ದೇಸಾಯಿ, ಯು.ಆರ್. ಅನಂತಮೂರ್ತಿ, ಗೋಪಾಲಕೃಷ್ಣ ಅಡಿಗ ಮುಂತಾದವರ ಗಾಢ ಪರಿಚಯ, ನಿಕಟ ಸಂಬಂಧವಿತ್ತು. ಅದನ್ನೆಲ್ಲ ಅವರು ನೆನಪು ಮಾಡಿಕೊಂಡು ಅವರ ಸಾಹಿತ್ಯ ಕೃತಿಗಳ ಬಗೆಗೆ ಮನದುಂಬಿ ಮಾತಾಡಿದರು.
1963 ರಲ್ಲಿ ಬಂದ ‘ಕೋಸಲಾ’ ಕಾದಂಬರಿ ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ನೇಮಾಡೆಯವರಿಗೆ ಈಗ 75 ವರ್ಷ, ಅವರ ‘ಕೋಸಲಾ’ಕ್ಕೆ 50 ವರ್ಷ. ಇದೊಂದು ಬಹುಚರ್ಚಿತ ಕಾದಂಬರಿ. ಈ ಕೃತಿಗೆ ಆಧ್ಯಾತ್ಮಿಕ ‘ಗೀತೆ’ ಎಂದು ಕರೆಯಲಾಗಿದೆ. ತಾರುಣ್ಯದ ಬಂಡುಕೋರತನ ಚಡಪಡಿಕೆ ಮತ್ತು ಜಡತ್ವವನ್ನು ಎತ್ತಿ ತೋರಿಸುವ ಇಂಥ ಮರಾಠಿ ಕಾದಂಬರಿ ಮತ್ತೊಂದಿಲ್ಲ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಇವತ್ತಿಗೂ ಜಾತೀಯತೆ, ಪರಂಪರೆಯ ಮೋಹ, ಧಾರ್ಮಿಕ ಕರ್ಮಕಾಂಡದ ಆಸ್ಥೆ ಕಡಿಮೆಯಾಗಿಲ್ಲ. ಇದನ್ನೇ ಕಾದಂಬರಿ ಬಿಂಬಿಸುತ್ತದೆ. ಇದೇ ಕೃತಿಯ ಯಶಸ್ಸು. ಇದು 23 ಮುದ್ರಣಗಳನ್ನು ಕಂಡಿದೆ. ಈಗ ‘ಕೋಸಲಾ’ಕ್ಕೆ ಸುವರ್ಣ ಮಹೋತ್ಸವದ ಸಂಭ್ರಮ.
ಭಾಲಚಂದ್ರ ನೇಮಾಡೆ ಸಂದರ್ಶನ
2010 ರಲ್ಲಿ ಪ್ರಕಟಗೊಂಡ ನೇಮಾಡೆ ಅವರ ‘ಹಿಂದೂ’ ಎಂಬ ಮಹಾಕಾದಂಬರಿ ಅತೀಹೆಚ್ಚು ವಿವಾದಕ್ಕೊಳಗಾಯಿತು. ಈ ಕಾದಂಬರಿಯು ಸಮಾಜದ ಕುಬ್ಜತನದ ಹುಡುಕಾಟ ನಡೆಸುತ್ತದೆ. ಐದು ಸಾವಿರ ವರ್ಷಗಳ ಹಿಂದೂ ಸಂಸ್ಕೃತಿಗೆ ಬಂಜೆತನ ಬಂದಿದೆ ಎಂಬ ಯಾತನೆ ಲೇಖಕನನ್ನೂ ಕಾಡುತ್ತದೆ. ಅಸ್ವಸ್ಥಗೊಳಿಸುತ್ತದೆ. ಈ ಕಾದಂಬರಿ ಬರೆಯಲು ಅವರು ಮೂವತ್ತೈದು ವರ್ಷ ತೆಗೆದುಕೊಂಡರು. ಇದು ‘ಹಿಂದೂ’ ಕಾದಂಬರಿಯ ಮೊದಲ ಭಾಗವಷ್ಟೆ– ಮತ್ತೆ ಮೂರು ಭಾಗಗಳು ಬರಲಿವೆ. ಓದುಗರು ಹಾದಿ ಕಾಯುತ್ತಲಿದ್ದಾರೆ.
‘ಹಿಂದೂ’ ಕಾದಂಬರಿಯಲ್ಲಿ ವಿಘಟಿತಗೊಂಡ ಸಮಾಜದ ಚಿತ್ರಣವನ್ನು ಸೆರೆಹಿಡಿಯಲಾಗಿದೆ. ಐದು ಸಾವಿರ ವರ್ಷಗಳ ಪ್ರಾಚೀನತೆ ಹೊಂದಿದ ಒಂದು ಸಂಸ್ಕೃತಿ ಇಂದು ಎಂಥ ಹೀನಾಯ ಸ್ಥಿತಿಗೆ ಬಂದು ನಿಂತಿದೆ ಎಂಬ ವಿಚಾರ ಲೇಖಕನನ್ನು ಅಸ್ವಸ್ಥಗೊಳಿಸುತ್ತದೆ. ನಾಯಕನಾದ ಖಂಡೇರಾವನು ಮೊಹೆಂಜದಾರೋ ಸಂಸ್ಕೃತಿಯಿಂದ ಹಿಡಿದು ತನ್ನೂರಿನ ಮೋರಗಾಂದವರೆಗಿನ ಸಮಗ್ರ ಜೀವನವನ್ನು ಉತ್ಖನನ ಮಾಡಲು ಆರಂಭಿಸುತ್ತಾನೆ. ಸಮೃದ್ಧವಾಗಿರುವ ಕೃಷಿ ಸಂಸ್ಕೃತಿಯು ಅಧೋಗತಿಗೊಂಡಿರುವ ದಾರುಣ ದೃಶ್ಯವನ್ನು ಕಾಣುತ್ತಾನೆ. ವರ್ತಮಾನದ ಸಮಸ್ಯೆಯನ್ನು ಅರಿಯಲು ಭೂತಕಾಲದ ಉತ್ಖನನ ನಡೆಸುತ್ತಾನೆ ಉದಾಹರಣೆಗಾಗಿ, ಗೋವಧೆಯನ್ನು ನಿಷೇಧಿಸುವ ವಿಧೇಯಕ (ಪಾರ್ಲಿಮೆಂಟಿನಲ್ಲಿ) ಸಂಸತ್ತಿನಲ್ಲಿ ಚರ್ಚೆಯಾಗುತ್ತದೆಯೇ? ಹಿಂದೂಗಳಿಗೂ ಅದಕ್ಕೂ ಏನು ಸಂಬಂಧ? ಯಾವುದೇ ಸಮಸ್ಯೆಯೂ ನಮ್ಮ ಬುದ್ಧಿ ಎಷ್ಟು ಪ್ರಖರವಾಗಿದೆ, ಎಷ್ಟು ವಿಶಾಲವಾಗಿದೆ ಎನ್ನುವದರ ಪರೀಕ್ಷೆ ನಡೆಸುತ್ತದೆ. ಇಂಥ ಪ್ರಸಂಗವು ನಾವು ನಿಜವಾಗಿ ಎಲ್ಲಿದ್ದೇವೆ ಎಂಬ ನಮ್ಮ ಅಸ್ಮಿತೆಯ ಒರೆಗಲ್ಲಾಗಿ ಎದುರಾಗುತ್ತದೆ ‘ಅತ್ಯಂತ ಪ್ರಾಚೀನವಾದ ಹಿಂದೂ ಸಮಾಜ ಮತ್ತು ಎಲ್ಲಕ್ಕಿಂತ ಹೆಚ್ಚು ಬದಲಾವಣೆ ಹೊಂದಿದ ಮಹಾಸಂಕಲ್ಪನೆಯ ಅಗಣಿತ ಸಾಮಾಜಿಕ–ವೈಚಾರಿಕ ಆಚಾರ ವಿಚಾರಗಳ ಸ್ತರಗಳಲ್ಲಿ ಒಂದು ಸೂತ್ರವನ್ನು ಖಚಿತವಾಗಿ ಹಿಡಿದು, ಅದನ್ನು ಅಭಿವ್ಯಕ್ತಗೊಳಿಸುವದು ಅದೆಷ್ಟು ಜಟಿಲ ಎನ್ನುವ ಕಲ್ಪನೆಯು ‘ಹಿಂದೂ’ ಕಾದಂಬರಿಯು ರೂಪುಗೊಳ್ಳುವಾಗ ಅನುಭವಕ್ಕೆ ಬಂತು’ ಎಂದವರು ಹೇಳಿಕೊಂಡಿದ್ದಾರೆ. ಹಿಂದಿಯ ಹಜಾರಿ ಪ್ರಸಾದ ದ್ವಿವೇದಿ ಮಾತ್ರ ಸಂಪೂರ್ಣ ಹಿಂದೂ ಸಂಸ್ಕೃತಿಯನ್ನು ಯಶಸ್ವಿಯಾಗಿ ಛೇದಿಸುವ ಕಾರ್ಯ ಮಾಡಿದ್ದಾರೆಂದು ನೇಮಾಡೆ ಗುರುತಿಸಿದ್ದಾರೆ. ನಮ್ಮ ಕಾದಂಬರಿಕಾರರು ವಾಸ್ತವವನ್ನು ಆಳವಾಗಿ ಗ್ರಹಿಸುವಲ್ಲಿ ವಿಫಲರಾಗುತ್ತಾರೆ. ನಮ್ಮಂಥ ಪ್ರಾಚೀನ ಪರಂಪರೆಯ ಸಮಾಜವನ್ನು ಭೂತಕಾಲದ ಆಯಾಮದಿಂದಲೇ ಸರಿಯಾಗಿ ಅರ್ಥ ಮಾಡಿಕೊಳ್ಳುವದು ಸಾಧ್ಯ ಎಂದು ಅವರು ದೃಢವಾಗಿ ಪ್ರತಿಪಾದಿಸುತ್ತಾರೆ. ‘ಹಿಂದೂ’ ಕಾದಂಬರಿಯಲ್ಲಿ ಮಹಿಳೆಯರ ದಾರುಣ ಜೀವನದ ಆ ಲೇಖವಿದೆ. ಯುದ್ಧ, ವ್ಯಾಪಾರ, ಲೂಟಿ, ಹಲ್ಲೆ, ಆಕ್ರಮಣದ ಸಾಮಾಜಿಕ ಅವಶೇಷವಿದೆ. ಚಾರಿತ್ರಿಕ, ಧಾರ್ಮಿಕ, ಸಾಂಸ್ಕೃತಿಕ, ಭೌಗೋಲಿಕ ಭೂಪಟ ಅನಾವರಣಗೊಂಡಿದೆ.
* ದೇಶಿಯತೆಯನ್ನು ಇವತ್ತಿಗೂ ನೀವು ಪುರಸ್ಕರಿಸುತ್ತೀರ? ಇದು ಸಂಕುಚಿತತನಕ್ಕೆ ಎಡೆಮಾಡಿಕೊಡುತ್ತದೆ ಎಂದು ಕೆಲ ವಿಮರ್ಶಕರು ಹೇಳುತ್ತಾರೆ.
ಇವತ್ತಿನ ದಿನಮಾನಗಳಲ್ಲಿ ದೇಶಿಯತೆಗೆ ಹೆಚ್ಚು ಬೆಲೆಯಿದೆ. ಅದರ ಅಗತ್ಯ ಇದ್ದೇ ಇದೆ. ಇಂದು ಹೆಚ್ಚೆಚ್ಚು ದೇಶಿಯತೆಯನ್ನು ಉಳಿಸಕೊಂಡರೆ, ಸಾಹಿತ್ಯ ಸಂಸ್ಕೃತಿಯನ್ನು ಸಂರಕ್ಷಣೆ ಮಾಡಬಹುದು. ಸಂಕುಚಿತತನದ ಆರೋಪ ಮಾಡಲಾಗಿತ್ತು. ಈ ಆರೋಪವನ್ನು ಯಾವುದರ ಮೇಲೂ ಮಾಡಬಹುದು. ಉದಾಹರಣೆಗಾಗಿ, ಅಹಿಂಸೆಯೆಂದರೆ ಅದು ಸಹ ಸಂಕುಚಿತತನವೆ. ಇದನ್ನು ಯಾರು ಹೇಗೆ ಸ್ವೀಕಾರ ಮಾಡುತ್ತಾರೋ, ಅದರ ಮೇಲೆ ಅವಲಂಬಿತವಾಗಿದೆ. ಮನುಷ್ಯ ಇದರ ಬಳಕೆಯನ್ನು ಸ್ವಾರ್ಥಕ್ಕಾಗಿಯೂ ಮಾಡಬಹುದು. ಇದ್ದ ದೇಶಿಯತೆಯನ್ನು ಮೊದಲು ಉಳಿಸಿಕೊಳ್ಳಬೇಕು. ಅನಂತರ ಅಗತ್ಯಬಿದ್ದರೆ ಹೊರಗಿನವರನ್ನು ಸ್ವೀಕರಿಸಬೇಕು. ಇದಕ್ಕೆ ಪರ್ಯಾಯವಿಲ್ಲ.
* ಭಾರತೀಯ ಲೇಖಕನ ಇಂದಿನ ಹೊಣೆಗಾರಿಕೆಯೇನು?
ಮೊದಲನೆಯದು ಅವನ ಪ್ರಜ್ಞೆಯನ್ನು ಅಧಿಕಗೊಳಿಸುವುದು. ಭಾರತೀಯರ ಮನೋಭಾವನೆಯನ್ನು ಅರ್ಥಮಾಡಿಕೊಳ್ಳುವುದು. ಅದನ್ನು ವಿಶಾಲಗೊಳಿಸುವದು...
*ಟ್ಯಾಗೋರರನ್ನು ಹೊರತುಪಡಿಸಿ ಬೇರೆ ಯಾವ ಭಾರತೀಯ ಲೇಖಕರಿಗೆ ಸಾಹಿತ್ಯಿಕ ನೊಬೆಲ್ ಪ್ರಶಸ್ತಿ ಸಿಗಲಿಲ್ಲ. ಭಾರತೀಯ ಲೇಖಕ ಅಷ್ಟು ಕೀಳು ದರ್ಜೆಯವನೆ?
ಇದು ಖರೆ ಅಲ್ಲ. ರವೀಂದ್ರನಾಥ ಟ್ಯಾಗೋರರಿಗೂ ಸಿಗಬೇಕಾದ ಅಗತ್ಯವಿರಲಿಲ್ಲ. ಅದು ಸಾಮ್ರಾಜ್ಯವಾದಿ ಜನರ ಪುರಸ್ಕಾರ. ಹೀಗಾಗಿ ಆ ಪ್ರಶಸ್ತಿ ಕೇವಲ ಯುರೋಪಿಯನ್ನರಿಗೆ, ಅದರಲ್ಲೂ ಕೆಥೋಲಿಕ್ ಲೇಖಕರಿಗೆ, ಅಮೆರಿಕನ್ನರಿಗೆ ಸಿಗುತ್ತದೆ. ಆಫ್ರಿಕನ್ ಲೇಖಕರಿಗೆ, ಪೋರ್ತುಗೀಸ್ ಸಾಹಿತಿಗಳಿಗೆ ಎಂದೂ ಸಿಗೋದಿಲ್ಲ. ಏಷ್ಯಾದವರಿಗೂ ದೊರೆಯುವುದಿಲ್ಲ. ಟ್ಯಾಗೋರರಿಗಿಂತಲೂ ಶ್ರೇಷ್ಠ ಲೇಖಕರು ಭಾರತದಲ್ಲಿದ್ದಾರೆ. ಪ್ರೇಮಚಂದ, ಶಿವರಾಮ ಕಾರಂತ ಟ್ಯಾಗೋರರಿಗಿಂತಲೂ ಎಷ್ಟೋ ಶ್ರೇಷ್ಠರು. ನನ್ನ ಪ್ರಕಾರ ಇಕ್ಬಾಲ್ ಟ್ಯಾಗೋರರಿಗಿಂತ ಎಷ್ಟೋ ಪಟ್ಟು ದೊಡ್ಡ ಲೇಖಕ. ಅವನು ಮುಸ್ಲಿಮನಾಗಿದುದರಿಂದ ದೊರೆಯಲಿಲ್ಲ, ಹೀಗೆ ಎಲ್ಲದರಲ್ಲೂ ರಾಜಕೀಯ ನಡೆಯುತ್ತದೆ. ಕಾಫ್ಕಾನಿಗೆ ಸಿಗಲಿಲ್ಲ, ಸ್ಟೀಲ್‌ಬರ್ಗ್‌ನಿಗೆ ಸಿಗಲಿಲ್ಲ. ಯಾರು ಅವರ ಹಿತದ ಬಗ್ಗೆ ಮಾತನಾಡುತ್ತಾರೋ ಅವರಿಗಷ್ಟೆ ಪ್ರಶಸ್ತಿ ಸಿಗುತ್ತದೆ.
*ನೀವು ಸಾಹಿತ್ಯ ಸಮ್ಮೇಳನವನ್ನು ಏಕೆ ವಿರೋಧಿಸುತ್ತೀರಿ?
ಇದಕ್ಕೆ ಮುಖ್ಯ ಕಾರಣವೆಂದರೆ, ಅಲ್ಲಿ ಸಾಹಿತ್ಯ ಒಂದು ಬಿಟ್ಟು ಬೇರೆ ಏನೇನೋ ನಡೆಯುತ್ತಿರುತ್ತದೆ. ರಾಜಕೀಯ ಕಾರಣದಿಂದ ಅಲ್ಲಿ ಯಾವುದೂ ಒಳ್ಳೆಯದು ನಡೆಯುವುದಿಲ್ಲ. ಇದರಿಂದಾಗಿ ಸಾಹಿತ್ಯ ಬದಿಗೆ ಸರಿದು ಏನೇನೋ ಫಾಲ್ತು ಸಂಗತಿಗಳು ನಡೆಯುತ್ತಿರುತ್ತವೆ. ಮೂರನೆಯ ದರ್ಜೆಯವನೇ ಅಧ್ಯಕ್ಷನಾಗುತ್ತಿರುತ್ತಾನೆ. ಅದಕ್ಕಾಗಿ ಚುನಾವಣೆಗೂ ನಿಲ್ಲಬೇಕಾಗುತ್ತದೆ. ಇದನ್ನೆಲ್ಲ ನಾನು ವಿರೋಧಿಸುತ್ತೇನೆ.
*ಅನುವಾದ ಸಾಹಿತಿಗಳು ಯಾವ ಬಗೆಯ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು?
ಅನುವಾದ ತನ್ನ ಸ್ವಂತ ಭಾಷೆಯಲ್ಲೇ ಮಾಡಬೇಕು. ನಿಮ್ಮ ಭಾಷೆ ಕನ್ನಡವಾಗಿದ್ದರೆ ಕನ್ನಡದಲ್ಲೇ ಅನುವಾದ ಮಾಡಬೇಕು. ಎರಡೂ ಬೇರೆ ಬೇರೆ ಭಾಷೆಗಳಲ್ಲಿ ಅನುವಾದ ಮಾಡೋದು ಅಸಾಧ್ಯ. ಬೆಳಗಾವಿ ಅಂಥ ಪ್ರದೇಶ ಅನುವಾದಕ್ಕೆ ಉತ್ತಮ ಸ್ಥಳ. ಇಲ್ಲಿ ನಿಮಗೆ ಕನ್ನಡ, ಮರಾಠಿ ಎರಡೂ ಭಾಷೆ ಗೊತ್ತಿರುತ್ತದೆ.
*ಬಹಳಷ್ಟು ಲೇಖಕರು ಭೂತವನ್ನು ಆಧರಿಸಿಯೇ ಬರೆಯುತ್ತಾರೆ? ವರ್ತಮಾನದ ತಲ್ಲಣಗಳನ್ನು ಕಟ್ಟಿಕೊಡುವುದಿಲ್ಲ ಯಾಕೆ?
ವರ್ತಮಾನ ಕಾಲ ಕ್ಷಣಿಕವಾದುದು. ವರ್ತಮಾನಕ್ಕೂ ಸಹ ಒಂದು ಇತಿಹಾಸವಿದೆ. ಒಂದು ಕ್ಷಣವನ್ನು ಅರ್ಥೈಸಿಕೊಳ್ಳಬೇಕಾದರೆ, ನೀವು ಯಾವಾಗಲೂ ಭೂತಕ್ಕೆ ಹೋಗಬೇಕು. ಹಿಂದಕ್ಕೆ ಹೋಗುವುದರಲ್ಲಿಯೂ ಬಗೆಬಗೆಯ ಪದ್ಧತಿಗಳಿವೆ. ಇದನ್ನು ಅರ್ಥ ಮಾಡಿಕೊಳ್ಳಲು ಬೇರೆ ಬೇರೆ ತಂತ್ರಗಳನ್ನು ಅನುಸರಿಸಿಕೊಳ್ಳಬೇಕಾಗುತ್ತದೆ. ಭೂತ ಬಿಟ್ಟರೆ ವರ್ತಮಾನಕ್ಕೆ ಅರ್ಥವಿಲ್ಲ. ಹಿನ್ನೆಲೆ ತಂತ್ರದ ಮೂಲಕ ಇದನ್ನು ಅರ್ಥೈಸಿಕೊಳ್ಳಬಹುದು. ಒಂದು ಬಗೆಯ ಕ್ರೊನೊಲಾಜಿಕಲ್ ಡೆವಲಪ್‌ಮೆಂಟನ್ನು ಬಳಸಿಕೊಳ್ಳಬಹುದು. ವರ್ತಮಾನವನ್ನು ಗ್ರಹಿಸಿಕೊಳ್ಳಲು ಭೂತ ತೀರ ಅಗತ್ಯ.
*ಇತ್ತೀಚೆಗೆ ಕಾದಂಬರಿಯ ಬರವಣಿಗೆ ಕ್ಷೀಣಿಸುತ್ತಿದೆ, ಏಕಿರಬಹುದು?
ಕರ್ನಾಟಕದಲ್ಲಿ ಈ ಸ್ಥಿತಿಯಿರಬಹುದು, ಮಹಾರಾಷ್ಟ್ರದಲ್ಲಿ ಈ ಸ್ಥಿತಿಯಿಲ್ಲ. ಮರಾಠಿಯಲ್ಲಿ ಕಾದಂಬರಿಗಳು ಹೇರಳವಾಗಿ ಬರ್ತಿವೆ, ಕಥೆಗಳು ಕ್ಷೀಣಿಸುತ್ತವೆ. ಜಗತ್ತಿನ ಎಲ್ಲ ಭಾಷೆಗಳಲ್ಲಿ ಸಣ್ಣ ಕತೆಗಳು ಕ್ಷೀಣಿಸುತ್ತಲೇ ಇವೆ. ಕಾದಂಬರಿಗಳೇ ಬೆಳೆಯುತ್ತಿವೆ.
*ದಲಿತ ಸಾಹಿತ್ಯಕ್ಕೆ ಬೇರೆ ಕಾವ್ಯ ಮೀಮಾಂಸೆ ಬೇಕೆ?
ಎಲ್ಲರ ಕಾವ್ಯ ಮೀಮಾಂಸೆ ಒಂದೇ, ವಿಮರ್ಶೆಯ ಮಾನದಂಡವೂ ಒಂದೇ. ಹೀಗೆ ಮಾಡುವುದರಿಂದ ಮೀಸಲಾತಿಯನ್ನು ಬೆಂಬಲಿಸಿದಂತಾಗುತ್ತದೆ. ನೀವು ಯಾವ ಭಾಷೆಯಲ್ಲಿ ಬರೆಯುತ್ತೀರೋ ಅದಕ್ಕೆ ಒಂದೇ ಮಾನದಂಡ. ಎಲ್ಲರೂ ಒಂದೇ ಬಗೆಯಲ್ಲಿ ಬರೆಯುವುದರಿಂದ ದಲಿತರಿಗಾಗಿ ಬೇರೆ ಸಾಹಿತ್ಯಿಕ ಮಾನದಂಡದ ಅಗತ್ಯವಿಲ್ಲ. ಬೇರೆ ಬೇರೆ ವಿಮರ್ಶೆಗಳು ಅಗತ್ಯವಿಲ್ಲ. ಮೌಲ್ಯಮಾಪನದ ಮಾದರಿ ಒಂದೇ ಬಗೆಯದ್ದಾಗಿರುತ್ತದೆ.
*ಕೇಂದ್ರ ಸಾಹಿತ್ಯ ಅಕಾಡೆಮಿಯ ಸಂಚಾಲಕರಾದ ನಿಮಗೆ, ಅದರ ಕಾರ್ಯವೈಖರಿಯ ಬಗ್ಗೆ ತೃಪ್ತಿಯಿದೆಯೆ?
ಸಾಹಿತ್ಯ ಅಕಾಡೆಮಿ ಒಂದು ಸ್ವಾಯತ್ತ ಸಂಸ್ಥೆ. ಭಾಷಾಂತರ ಕಾರ್ಯದ ಜತೆಗೆ ಬೇರೆ ಬೇರೆ ಯೋಜನೆಗಳನ್ನು ಕೂಡ ನಾವು ಹಮ್ಮಿಕೊಳ್ಳುತ್ತೇವೆ. ಇದರಿಂದ ಭಾರತೀಯ ಭಾಷೆಗಳು ಸಮೀಪ ಬರುವುದಕ್ಕೆ, ಅರ್ಥ ಮಾಡಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. ಭಾಷಾಂತರದ ಸಂಗಡ ವಿಚಾರ ಸಂಕಿರಣ, ಚರ್ಚೆ, ಕಮ್ಮಟ ಹಿರಿಯ ಲೇಖಕರ ಜೊತೆಗೆ ಯುವ ಲೇಖಕರಿಗೂ ಪ್ರಶಸ್ತಿ ಇಂಥ ಯೋಜನೆಗಳನ್ನೆಲ್ಲ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿದೆ. ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ.
*ಮಾತೃಭಾಷೆ ಉಳಿಸಿಕೊಳ್ಳಲು ಕೈಕೊಳ್ಳಬೇಕಾದ ಕ್ರಮಗಳೇನು?
ಮಾತೃಭಾಷೆಯನ್ನು ಉಳಿಸಿಕೊಳ್ಳಲು ನೀವು ಅದನ್ನು ಅಧಿಕಾಧಿಕವಾಗಿ ಬಳಸಬೇಕು. ಅದನ್ನೇ ಮತ್ತೆ ಮತ್ತೆ ಯೋಚಿಸಿಕೊಳ್ಳುವುದು, ಅದರಲ್ಲೇ ತೊಡಗಿಸಿಕೊಳ್ಳುವುದರ ಮೂಲಕ ಮಾತೃಭಾಷೆಯನ್ನು ಉಳಿಸಿಕೊಳ್ಳಬಹುದು.
***
ಇದುವರೆಗೆ ಜ್ಞಾನಪೀಠ ಪ್ರಶಸ್ತಿ ಪಡೆದವರ ಪಟ್ಟಿ ಇಂತಿದೆ.....
ವರ್ಷ
|
ಭಾಷೆ
|
ಲೇಖಕ
|
ಕೃತಿ
|
ಓಡಕ್ಕುಳಲ್
|
|||
ಗಣದೇವತಾ
|
|||
ನಿಶಿತಾ
|
|||
ಚಿದಂಬರ
|
|||
ಗುಲ್-ಎ-ನಗ್ಮಾ
|
|||
ರಾಮಾಯಣ
ಕಲ್ಪವೃಕ್ಷಮು
|
|||
ಸ್ಮೃತಿ
ಸತ್ತ ಭವಿಷ್ಯತ್
|
|||
ಊರ್ವಶಿ
|
|||
ಮತ್ತಿಮತಾಲ್
|
|||
ಯಯಾತಿ
|
|||
ಚಿತ್ತ್ರಪ್ಪಾವೈ
|
|||
ಪ್ರಥಮ್
ಪ್ರತಿಸೃತಿ
|
|||
ಕಿತ್ನಿ
ನಾವೊಃ ಮೆಃ ಕಿತ್ನಿ ಬಾರ್
|
|||
ಮೃತ್ಯುಂಜಯ್
|
|||
ಒರು ದೇಶತ್ತಿಂಡೆ ಕಥಾ
|
|||
ಕಾಗಜ್
ಕೆ ಕನ್ವಾಸ್
|
|||
ಸಮಗ್ರ
ಸಾಹಿತ್ಯ
|
|||
ಸಮಗ್ರ
ಸಾಹಿತ್ಯ
|
|||
ಸಮಗ್ರ
ಸಾಹಿತ್ಯ
|
|||
ಆಧಾರ"ಪ್ರಜಾವಾಣಿ ಜಾಲತಾಣ
No comments:
Post a Comment