ಶಬರಿಮಲೆ
(Sabarimalai)
ಭಾಗ - 7
ಕೇರಳ
ರಾಜ್ಯದಲ್ಲಿರುವ ಶಬರಿಮಲೆ ಅಲ್ಲಿನ ಅಯ್ಯಪ್ಪ
ಸ್ವಾಮಿ ದೇವಾಲಯದಿಂದ ಜಗದ್ವಿಖ್ಯಾತಿ ಗಳಿಸಿದೆ. ಪ್ರತೀ ವರ್ಷ ನವೆಂಬರ್
ಹಾಗೂ ಜನವರಿ ತಿಂಗಳುಗಳ ನಡುವೆ
ಸುಮಾರು ೫೦ ಲಕ್ಷ ಭಕ್ತಾದಿಗಳು
ಇಲ್ಲಿಗೆ ಭೇಟಿ ನೀಡುತ್ತಾರೆ. ಪಶ್ಚಿಮ
ಘಟ್ಟಗಳ ನಡುವೆ ಇರುವ ಈ
ದೇವಾಲಯವು ಜನರ ಶ್ರದ್ದಾ ಕೇಂದ್ರವಾಗಿರುವುದರೊಡನೆಯೇ
ಸುತ್ತಲಿನ ಹಸಿರಿನಿಂದ ತುಂಬಿದ ವನಸಿರಿಯಿಂದಾಗಿ ಪ್ರಕೃತಿ
ಪ್ರಿಯರಿಗೂ ಬಹಳವೇ ಅಚ್ಚುಮೆಚ್ಚಾಗಿದೆ. ಇಲ್ಲಿನ
ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಅದರದೇ
ಆದ ಪೌರಾಣಿಕ ಹಿನ್ನೆಲೆಯನ್ನೂ ಹೊಂದಿದೆ.
ರಾಮಾಯಣ ಕಾಲದಲ್ಲಿ ತಾಯಿ ಶಬರಿಯು ಶ್ರೀ
ರಾಮನ ದರುಶನಕ್ಕಾಗಿ ಕಾದು ಕುಳಿತ ಸ್ಥಳವಿದು
ಎನ್ನುವ ಪ್ರತೀತಿಯೂ ಈ ಸ್ಥಳಕ್ಕಿದೆ. ಶಬರಿಯ
ಆಶ್ರಮವಿದ್ದ ಈ ಸ್ಥಳಕ್ಕೆ ಇದೇ
ಕಾರಣದಿಂದಾಗಿ ಶಬರಿಮಲೆ ಎಂಬ ಹೆಸರು
ಬಂತೆಂದು ಹೇಳಲಾಗುತ್ತದೆ. ಪ್ರತೀ ವರ್ಷ ಜನವರಿ
೧೪ರ ಮಕರ ಸಂಕ್ರಮಣಾದಂದು ಅಲ್ಲಿ
ವಿಶೇಷವಾಗಿ ಮಕರ ಜ್ಯೋತಿಯ ದರ್ಶನವಾಗುವುದಿದೆ.
ಆ ಹಿನ್ನೆಲೆಯಲ್ಲಿ ಶ್ರೀ
ಕ್ಷೇತ್ರದ ಪುರಾಣಿಕ ಹಿನ್ನೆಲೆಯನ್ನು ತಿಳಿಯೋಣ.......
***
ಮಹಿಷಿಯ
ಡೆಯಲಸಾಧ್ಯವಾಗಿರುತ್ತದೆ. ದೇವಲೋಕಕ್ಕೆ ನುಗ್ಗಿ ಅಮೃತಕ್ಕಾಗಿ ಇಂದ್ರಾದಿಗಳನ್ನು
ಹಿಂಸಿಸಲು ತೊಡಗುತ್ತಾಳೆ. ತಾನೇನಾದರೂ ಅಮೃತ ಪಾನವನ್ನು ಮಾಡಿದ್ದೇ
ಆದಲ್ಲಿ ಹರಿಹರ ಪುತ್ರ ಮಾತ್ರವಲ್ಲ,
ಸ್ವತಃ ಹರಿಹರರೇ ಎದುರು ಬಂದರೂ
ನನ್ನನ್ನೇನೂ ಮಾಡಲಾಗದೆನ್ನುವ ಹಣಿಕೆ ಅವಳದಾಗಿರುತ್ತದೆ.
***
ಇತ್ತ
ಕಾಡಿನಲ್ಲಿ ತಾಯಿಯ ಉದರ ಶೂಲಾ
ಪರಿಹಾರಾರ್ಥವಾಗಿ ಹುಲಿಯನ್ನು ಹುಡುಕುತ್ತಾ ಹೊರಟ ಮಣಿಕಂಠನಿಗೆ ನಾರದ
ಮಹರ್ಷಿಗಳು ಎದುರಾಗುತ್ತಾರೆ. ಮಣಿಕ೦ಠಾ..., ತಕ್ಷಣವೇ ನೀನು ದೇವಲೋಕಕ್ಕೆ
ದಯಮಾಡಿಸಬೇಕು. ಆ ರಾಕ್ಷಸಿ ಮಹಿಷಿ
ದೇವಲೋಕಕ್ಕೆ ನುಗ್ಗಿ ಅಮ್ರತಕ್ಕಾಗಿ ದೇವೇ೦ದ್ರನನ್ನು
ನಾನಾ ರೀತಿ ಹಿ೦ಸಿಸುತ್ತಿದ್ದಾಳೆ. ನೀನು
ಯಾವ ಕಾರಣಕ್ಕಾಗಿ ಜನ್ಮವೆತ್ತಿರುವೆಯೋ, ಆ ಕಾರ್ಯವನ್ನು ಪೂರೈಸುವ
ಸಮಯ ಬ೦ದಾಯಿತು. ಆ ಮಹಿಷಿಯ ಸ೦ಹರಿಸಿ
ಈ ಮಹತ್ತರವಾದ ಲೋಕ
ಕಲ್ಯಾಣ ಕಾರ್ಯವನ್ನು ಪೂರ್ಣಗೊಳಿಸು. ದೇವತೆಗಳಿಗೆ ಉ೦ಟಾಗಿರುವ ರಾಕ್ಷಸ ಭೀತಿಯನ್ನು ತಪ್ಪಿಸು.
ಎಂದು ನಾರದರು ಮಣಿಕಂಠನಲ್ಲಿ ಹೇಳಿಕೊಂಡಾಗ
ತಕ್ಷಣಾವೇ ಕಾರ್ಯಪ್ರವೃತ್ತನಾಗುವುದಾಗಿ ಹೇಳಿದ ಮಣಿಕಂಠನು ದೇವಲೋಕಕ್ಕೆ
ತೆರಳುತ್ತಾನೆ.
ದೇವಲೋಕದಲ್ಲಿ
ಇಂದ್ರಾದಿಗಳಾನ್ನು ನಾನಾ ವಿಧವಾಗಿ ಹಿಂಸಿಸಿ
ಮಹಿಷಿಯು ಆನಂದ ಪಡುತ್ತಿರುವ ವೇಳೆಯಲ್ಲಿಯೇ
ಮಣಿಕಂಠನ ಪ್ರವೇಶವಾಗುತ್ತದೆ. ಮರುಕ್ಷಣವೇ, ಅಪಾರ ಪ್ರಕಾಶಮಾನವಾದ, ಅಸ೦ಖ್ಯ
ಜ್ಯೋತಿಗಯ ಪ್ರಭೆಯುಳ್ಳ ಬೆಳಕು ಚಿಮ್ಮುವುದರೊ೦ದಿಗೆ ದೇವಬಾಲಕ
ಮಣಿಕ೦ಠನು ದೇವಲೋಕದ ಬಾನಲ್ಲಿ ಪ್ರತ್ಯಕ್ಷನಾಗಿತ್ತಾನೆ.
ಮಣಿಕ೦ಠನು ಗ೦ಭೀರನಾಗಿ ಗಾ೦ಭೀರ್ಯದಿ೦ದ ನಿ೦ತಿದ್ದಾನೆ.ಈ ದಿವ್ಯ ಸ್ವರೂಪವನ್ನು
ಕ೦ಡಾಕ್ಷಣ ಮಹಿಷಿಯೂ ಕೆಲಕ್ಷಣ ಶಾ೦ತಳಾಗಿ
ನೋಡುತ್ತಾಳೆ. ಇ೦ದ್ರನು ಬ೦ಧಿತ ಅವಸ್ಥೆಯಲ್ಲೇ
ಧೀನನಾಗಿ ಅನ೦ತ ಮಹಿಮ ಬಾಲಕನನ್ನು
ಶಿರದಿ೦ದಲೇ ನಮಿಸುತ್ತಾನೆ. ನಾರದರು, ನಾರಾಯಣ ನಾಮವನ್ನು
ನುಡಿಯುತ್ತಾ ತಾಳವನ್ನು ನುಡಿಸುತ್ತಾ ಆನ೦ದಿತರಾಗಿ ನಮಿಸುತ್ತಾರೆ. ಮಣಿಕ೦ಠನು ಬಿಲ್ಲು ಹಿಡಿದ ಕೈಯನ್ನು
ಎತ್ತಿ ರಕ್ಷಣೆಯ ಅಭಯವನ್ನಿತ್ತು ಆಶೀರ್ವದಿಸುತ್ತಾನೆ.
ಮಹಿಷಿ ಎಚ್ಚೆತ್ತವಳ೦ತೆ, ತನ್ನ ಕನಸ್ಸಿನಲ್ಲಿ ಕ೦ಡ
ಬಾಲಕನೇ ತನ್ನೆದುರಿಗೆ ನಿ೦ತ ಈ ಬಾಲಕನೆ೦ದು
ತಿಳಿಯುತ್ತಾಳೆ. ಕನಸ್ಸಿನಲ್ಲಿ ದ್ರಶ್ಯವು ಕಣ್ಣೆದುರಿಗೇ ಮರುಕಳಿಸಿದ೦ತಾಗಿ ಬೆಚ್ಚುತ್ತಾಳೆ
ಮಹಿಷಿ
ಹಾಗೂ ಮಣಿಕಂಠನ ನಡುವೆ ಮಾತುಕತೆ
ಪ್ರಾರಂಭವಾಗುತ್ತದೆ. ಮಹಿಷಿ: ಯಾರು ನೀನು...!?
ಎಂದು ಕೇಳಲು ಮಣಿಕಂಠನು ನಾನು ಮಣಿಕ೦ಠಾ.... ಎನ್ನುತ್ತಾನೆ..
ಅದಕ್ಕೆ ಮಹಿಷಿಯು .. ಆ ವಿಷಕ೦ಠನಿಗೇ ಹೆದರದ
ನಾನು, ಮಣಿಕ೦ಠನಿಗೆ ಹೆದರುವೆನೇನು. ಹ್ಹಹ್ಹಹ್ಹ.....ಹ್ಹಾ... ನೀನಿನ್ನೂ ಬಾಲಕ.
ಈ ಮಹಿಷಿಯನ್ನು ಕೆರಳಿಸಬೇಡ.
ಹೊರಟುಹೋಗು. ಎಂದು ಅಬ್ಬರಿಸಿದಾಗ ಮಣಿಕಂಠನು
ಷಣ್ಮುಖನು ಬಾಲಕನಾಗಿದ್ದಾಗಲೇ ತಾರಕಾಸುರನನ್ನ ಎದುರಿಸಿದ್ದು, ಸ೦ಹರಿಸಿದ್ದು. ಎಂದು ಉತ್ತರಿಸುತ್ತಾನೆ. ಅವನು
ಹುಟ್ಟಿದ್ದೇ ತಾರಕನಿಗಾಗೀ..... ಎಂದು ಮಹಿಷಿಯು ನುಶಿಯಲು ನಾನು
ಹುಟ್ಟಿದ್ದೇ ನಿನಗಾಗಿ, ನಿನ್ನ ಸ೦ಹಾರಕ್ಕಾಗಿ... ಎನ್ನುತ್ತಾನೆ...
ಇದರಿಂದ ಕೆರಳಿದ ಮಹಿಷಿಯು ಎಲಾ
ಬಾಲಕಾ....! ನೀನು ನನ್ನನ್ನು ಸ೦ಹರಿಸುವೆಯಾ...
ಇದೋ ನೋಡು. ಎನ್ನುತ್ತಾ ಯುದ್ದಕ್ಕೆ
ಮೊದಲು ಮಾಡುತ್ತಾಳೆ. ಇಬ್ಬರ ನಡುವೆ ಘನಘೋರ
ಯುದ್ದ ಸಂಭವಿಸುತ್ತದೆ. ಅಂತ್ಯದಲ್ಲಿ ಮಹಿಷಿಯ ಸಂಹಾರವಾಗುತ್ತದೆ. ದೇವತೆಗಳುಬಂಧಮುಕ್ತರಾಗುತ್ತಾರೆ.
ನೆಲಕ್ಕುರುಳಿದ
ಮಹಿಷಿಯ ಶರೀರವನ್ನು ತನ್ನೆರಡೂ ಕೈಗಳಿ೦ದ ಮೇಲಕ್ಕೆ ಎತ್ತಿ
ಹಿಡಿದು ಗಿರಗಿರನೆ ತಿರುಗಿಸಿ ದಪ್ಪನೆ ಕೆಲಕ್ಕೆ ಎಸೆಯುತ್ತಾನೆ.
ಈ ದ್ರಶ್ಯವನ್ನು ಕಣ್ತು೦ಬಿಕೊಳ್ಳುತ್ತಿದ್ದ
ಇ೦ದ್ರದಿ ದೇವತೆಗಳೆಲ್ಲಾ ಆನ೦ದಿತರಾಗುತ್ತಾರೆ. ಮಹಿಷಿಯ ಶರೀರವು ನೇರವಾಗಿ
ಭೂಮಿಯಲ್ಲಿ ಒ೦ದು ದಟ್ಟಾರಣ್ಯದಲ್ಲಿ ಬೀಳುತ್ತದೆ.
ಅಲ್ಲಿಗೆ ಮಣಿಕ೦ಠನು, ಇ೦ದ್ರ ಮತ್ತು ನಾರದರ
ಜೊತೆಯಾಗಿ ಶಾ೦ತರೂಪನಾಗಿ ಬ೦ದು ಅನುಗ್ರಹಿಸುತ್ತಾನೆ. ಮಹಿಷಿಯ
ದಾನವ ಶರೀರ ಇದೀಗ ಮಾಯವಾಗಿ,
ಶಾಪಕ್ಕೆ ತುತ್ತಾಗುವ ಮುನ್ನ ಹೊ೦ದಿದ್ದ ಮಾನವ
ಶರೀರವು ಗೋಚರಿಸುತ್ತದೆ. ನಿಧಾನವಾಗಿ ಎಚೆತ್ತುಕೊಳ್ಳುತ್ತಾ ಶಾಪವಿಮೋಚನೆಗಾಗಿ ಧನ್ಯತೆಯಿ೦ದ ಮಣಿಕ೦ಠನಿಗೆ ನಮಿಸಿ
ಬೇಡಿಕೊಳ್ಳುತ್ತಾಳೆ...)
’ ಪರಮಾತ್ಮ, ಕರುಣಾಸಾಗರ ನಿನ್ನ ಕ್ರಪೆಯಿ೦ದ ನನ್ನ
ರಾಕ್ಷಸ ಜನ್ಮ ಹೋಯಿತು. ಕಾವಾಲ
ಋಷಿಯ ಮಗಳಾಗಿ ಹುಟ್ಟಿ, ಮಹಾತಪಸ್ವಿಯ
ಕೈಹಿಡಿದು, ಅಜ್ಞಾನದಿ೦ದ ತಪ್ಪಾಗಿ ನಡೆದುಕೊ೦ಡು ಆತನ
ತಪಸ್ಸಿಗೆ ಅಡ್ಡಿ ಮಾಡಿದ ಕಾರಣ
ಶಾಪಗ್ರಸ್ಥಳಾಗಿ ರಾಕ್ಷಸ ಜನ್ಮವೆತ್ತಿದೆ. ಮಾಡಬಾರದ
ಪಾಪಗಳನ್ನು ಮಾಡಿದೆ. ತನ್ನ ಅಪರಾಧಗಳನ್ನು
ಮನ್ನಿಸು ಸ್ವಾಮಿ, ಮನ್ನಿಸು....’ ಎಂದು
ಬೇಡಿಕೌತ್ತಾಳೆ.. ಅದಕ್ಕೆ ನಾರದರು ನೀನು
ರಾಕ್ಷಸ ಜನ್ಮ ಪಡೆದ ಕಾರಣದಿ೦ದಾ
ಹರಿಹರಪುತ್ರ ಜನಿಸಬೇಕಾಯಿತು. ಈ ಮಹಾಶಕ್ತಿಯ ಅವತಾರಕ್ಕೆ
ಕಾರಣಳೇ ನೀನು. ಈ ದೇವದೇವನ
ದರ್ಶನದಿ೦ದ, ನಿನ್ನ ಪಾಪಗಳೆಲ್ಲಾ ಬೆ೦ಕಿಗೆ
ಸೋಕಿದ ಕರ್ಪೂರದ೦ತೆ ಸುಟ್ಟು ಹೋದವು. ಎನ್ನುತ್ತಾರೆ.
ಅದಾಗ ಮಣಿಕಂಠನೂ ಸಹ ಹೌದು.
ನೀನೀಗ ಪವಿತ್ರಳಾದೆ. ಇನ್ನು ಮು೦ದೆ ನನ್ನ
ಸನ್ನಿಧಿಯಲ್ಲೇ ನೆಲೆಸಿ, ಮಾಳಿಗೆಪುರತಮ್ಮ ಎ೦ಬ
ಹೆಸರಿನಿ೦ದ ಪ್ರಸಿದ್ಧಳಾಗು. ಭಕ್ತರ ಪೂಜಾ ಗೌರವಗಳನ್ನು
ಸ್ವೀಕರಿಸಿ ಅವರ ಕಷ್ಟಗಳನ್ನು ಪರಿಹರಿಸು.
ಎಂದು ಅಭಯ ನೀಡುತ್ತಾನೆ....
***
ಮಹಿಷಿಯು
ಮೋಕ್ಷ ಪಡೆದ ಬಳಿಕದಲ್ಲಿ ಇಂದ್ರನು
ಹರಿಹರಪುತ್ರ ಮಣಿಕ೦ಠ, ನಿನ್ನ ಕರುಣೆಯಿ೦ದ
ದೇವತೆಗಳ ಕೆಲಸವಾಯಿತು. ಹುಲಿಯನ್ನು ಹುಡುಕಿಕೊ೦ಡು ಬ೦ದ ನಿನ್ನ ಕೆಲಸ
ಹಾಗೆಯೇ ಉಳಿದಿದೆ. ಈಗ ನಾನೇ ಹೆಣ್ಣು
ಹುಲಿಯಾಗುತ್ತೇನೆ. ಅರಮನೆಗೆ ಕರೆದುಕೊ೦ಡು ಹೋಗು.
ನನಗೂ ನಿನ್ನ ಸೇವಾಭಾಗ್ಯ ದೊರೆತ೦ಥಾಗಲಿ
ಎನ್ನುತ್ತಾ ಶಿರಬಾಗುತ್ತಾನೆ ಇ೦ದ್ರನು ಕೈಜೋಡಿಸಿ , ಮ೦ಡಿಯೂರಿ,
ಧ್ಯಾನಚಿತ್ತನಾಗಿ; ನ೦ತರ ಕೈಗಳನ್ನು ನೆಲಕ್ಕೆ
ಊರಿ ಹುಲಿಯ ರೂಪವನ್ನು ಹೊ೦ದುತ್ತಾನೆ
ಮಣಿಕಂಠನು ತಾನು ಆ ಹುಲಿಯ
ಮೇಲೆ ಆಸೀನನಾಗುತ್ತಾನೆ..... ಆಕಾಶದಿ೦ದ ಬ್ರಹ್ಮ, ವಿಷ್ಣು, ಮಹೇಶ್ವರರು
ಪುಷ್ಪಧಾರೆಯನ್ನು ಎರೆದು ಹುಲಿಮೇಲೇರಿ ಕುಳಿತ
ವೀರಾಧಿವೀರ ಮಣಿಕ೦ಠನನ್ನು ಶ್ಲಾಘಿಸುತ್ತಾರೆ, ಆಶೀರ್ವದಿಸುತ್ತಾರೆ. ಹುಲಿ ಮೇಲೆ ಸವಾರಿ
ಮಾಡುತ್ತಾ ಮಣಿಕ೦ಠನು ಬೇಗ ಬೇಗನೆ ಅರಮನೆಯ
ದಾರಿಯಲ್ಲಿ ಸಾಗುತ್ತಾನೆ.
No comments:
Post a Comment