Tuesday, February 10, 2015

ದೆಹಲಿ ಚುನಾವಣೆ ಫಲಿತಾಂಶ: ಒಂದು ವಿಶ್ಲೇಷಣೆ

2015 ಹೈವೋಲ್ಟೆಜ್ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ನಿರ್ಮಿಸಿದೆ. ದೆಹಲಿಯಲ್ಲಿ ಮೋದಿ ಅಲೆಯನ್ನು ಕೇಜ್ರಿವಾಲ್ ಸುನಾಮಿ ಬ್ರೇಕ್ ಮಾಡಿದೆ. ಐತಿಹಾಸಿಕ ಗೆಲುವಿನಿಂದ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ದೆಹಲಿ ಗದ್ದುಗೆ ಏರಲು ಹೊರಟಿದೆ. ಪ್ರತಿ ಮತದಾರನ ಮನೆ ತಲುಪಿದ್ದ ಎಎಪಿ ಕಾರ್ಯಕರ್ತರು ಜನರ ಮನ ಗೆದ್ದಿದ್ದಾರೆ. 70 ಸದಸ್ಯಬಲದ ವಿಧಾನಸಭೆಯಲ್ಲಿ ಎಎಪಿ 67 ಸ್ಥಾನ ಪಡೆದು ಪ್ರಚಂಡ ಜಯಭೇರಿ ಬಾರಿಸಿದೆ. ಬಿಜೆಪಿ ಕೇವಲ 03 ಸ್ಥಾನ ಪಡೆಯುವ ಮೂಲಕ, ತೀರಾ ಕಳಪೆ ಸಾಧನೆ ಮಾಡಿದೆ. ಇನ್ನು ಸತತ 15 ವರ್ಷಗಳ ಕಾಲ ದೆಹಲಿ ಗದ್ದುಗೆಯಲ್ಲಿ ವಿರಾಜಮಾನವಾಗಿದ್ದ ಕಾಂಗ್ರೆಸ್ ಸಾಧನೆ ಮಾತ್ರ ಬಾರಿ ಶೂನ್ಯವಾಗಿದೆ. ಇದಕ್ಕೂ ಹಿಂದೆ ನಡೆದ 2013 ಚುನಾವಣೆಯಲ್ಲಿ. ಆಮ್ ಆದ್ಮಿ ಪಕ್ಷ 28 ಸ್ಥಾನ ತನ್ನದಾಗಿಸಿಕೊಂಡಿತ್ತು. ಕಾಂಗ್ರೆಸ್ 08 ಸ್ಥಾನ ಪಡೆದಿದ್ದರೆ, ಬಿಜೆಪಿ 32 ಸ್ಥಾನ ಪಡೆದಿತ್ತು. ಆಮ್ ಆದ್ಮಿ ಪಕ್ಷ 28 ಸ್ಥಾನ ತನ್ನದಾಗಿಸಿಕೊಂಡಿತ್ತು. ಒಂದು ಹಿನ್ನೆಲೆಯಲ್ಲಿ ದೆಹಲಿ ಚುನಾವಣೇಯಲ್ಲಿ ಜಾದೂ ಮಾಡಿದ ಕೇಜ್ರಿವಾಲ್ ಯಾರು? ಅವರ ಅಭೂತಪೂರ್ವ ಗೆಲುವಿನ ಕಾರಣಗಳೇನು? ಆಮ್ ಆದ್ಮಿ ಗೆಲುವಿನಿಂದ ರಾಷ್ಟ್ರೀಯ ಪಕ್ಷಗಳು ಕಲಿಯಬೇಕಾದುದೇನು? ಆಮ್ ಆದ್ಮಿ ಪಕ್ಷದ ಮುಂದಿರುವ ಸವಾಲುಗಳೇನು? ಎಲ್ಲದರ ಕುರಿತಾದ ಒಂದು ವಿಶ್ಲೇಷಣೆ ಇಲ್ಲಿದೆ....

ಕೇಜ್ರಿವಾಲ್ ಯಾರು..?
ಅರವಿಂದ್ ಕೇಜ್ರಿವಾಲ್ರವರು ಹರ್ಯಾಣದ ಹಿಸ್ಸಾರ್ನಲ್ಲಿ ಎಲೆಕ್ಟ್ರಿಕ್ ಇಂಜಿನಿಯರರಾಗಿದ್ದ ಗೋಬಿಂದ್ ರಣ್ ಕೇಜ್ರಿವಾಲ್ ಹಾಗೂ ಗೀತಾದೇವಿಯವರ ಪುತ್ರನಾಗಿ ಜೂನ್ 16, 1968ಲ್ಲಿ ಜನಿಸಿದರು. ಅಲ್ಲಿಯೇ ಇದ್ದ ಕ್ಯಾಂಪಸ್ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿ ಖರಗ್ಪುರದ ಪ್ರತಿಷ್ಟಿತ ಐಟಿಯಲ್ಲಿ 1989ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಪದವಿ ಪೂರೈಸಿದರು. ವರ್ಷವೇ ಟಾಟಾ ಸ್ಟೀಲ್ನಲ್ಲಿ ವಾರ್ಷಿಕ 5-8 ಲಕ್ಷ ವರಮಾನದ ನೌಕರಿ ಗಿಟ್ಟಿಸಿದರಾದರೂ 1992ರಲ್ಲಿ ಕೆಲಸಕ್ಕೆ ವಿದಾಯ ಹೇಳಿ ನಾಗರೀಕ ಸೇವಾ ಪರೀಕ್ಷೆಯಲ್ಲಿ ಅರ್ಹತೆ ಪಡೆದು 1995ರಲ್ಲಿ ಕಂದಾಯ ಇಲಾಖೆಯ() ಕೆಲಸಕ್ಕೆ ಸೇರಿಕೊಂಡರು. ತಮ್ಮ ತೆರಿಗೆ ಕಚೇರಿಯಲ್ಲಿ ನಡೆದ ಭ್ರಷ್ಟಚಾರದಿಂದ ಆಕ್ರೋಶಗೊಂಡು ಇದರ ವಿರುದ್ಧ ಹೋರಾಡಲು 2000ರಲ್ಲಿ ಕೆಲಸಕ್ಕೆ ರಾಜಿನಾಮೆ ನೀಡಿ ಭ್ರಷ್ಟಚಾರದ ವಿರುದ್ಧ ಧ್ವನಿ ಎತ್ತಿದರು. ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಲಗಿಸಲು ಪರಿವರ್ತನ ಎಂಬ ಸಂಘವನ್ನು ಹುಟ್ಟುಹಾಕಿದರು. ಇವರ ಹಲವು ಹೋರಾಟಕ್ಕೆ ಮಣಿದ ಸರ್ಕಾರ ಮಾಹಿತಿ ಹಕ್ಕು ಕಾಯ್ದೆ(551) ಜಾರಿಗೆ ತಂದಿತು. ಉತ್ತಮ ನಾಯಕತ್ವದೊಂದಿಗೆ, ಭ್ರಷ್ಟಾಚಾರದ ವಿರುದ್ದ ಹೋರಾಡಿದ್ದ ಕೇಜ್ರಿವಾಲ್ಗೆ 2006ರಲ್ಲಿ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಲಭಿಸಿದೆ.
ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಲಗಿಸಲು 2010ರಲ್ಲಿ ಜನಲೋಕಪಾಲ ಮಸೂದೆ ಜಾರಿಗೆ ತರಲು ಅಣ್ಣಾ ಹಜಾರೆ, ಕಿರಣ್ ಬೇಡಿ ಜೊತೆಗೂಡಿ ದೆಹಲಿ ಸೇರಿದಂತೆ ದೇಶದ ಮಹಾನಗರಗಳಲ್ಲಿ ಪ್ರತಿಭಟನೆ ನಡೆಸಿದ್ದರು.
ಕೇಂದ್ರ ಸರ್ಕಾರ ಇವರ ಪ್ರತಿಭಟನೆ ಮಣಿಯದ ಹಿನ್ನಲೆಯಲ್ಲಿ 2012ರಲ್ಲಿ ಅಧಿಕೃತವಾಗಿ ಕೇಜ್ರಿವಾಲ್ ಆಮ್ ಆದ್ಮಿ ಪಾರ್ಟಿಯನ್ನು ಹೊರತಂದರು. ನಂತರ ಮೊದಲ ಬಾರಿಗೆ 2013ರಲ್ಲಿ ಆಮ್ ಆದ್ಮಿ ಪಕ್ಷದಿಂದ ಚುನಾವಣೆಯ ಕಣಕ್ಕಿಳಿದ ಕೇಜ್ರಿವಾಲ್, ಕಾಂಗ್ರೆಸ್ ಪಕ್ಷದ ಶೀಲಾ ದೀಕ್ಷಿತ್ರನ್ನು ಸೋಲಿಸಿ 2013 ಡಿಸೆಂಬರ್ 28 ದೆಹಲಿಯ ಸಿಎಂ ಆಗಿ ಹೊರಹೊಮ್ಮಿದರು. 2014 ಫೆ.14ರಂದು ಜನ ಲೋಕಪಾಲ ಮಸೂದೆ ಮಂಡನೆ ವೇಳೆ ಕೇಜ್ರಿವಾಲ್ಗೆ ದೆಹಲಿಯಲ್ಲಿ ವಿಧಾನಸಭೆಯಲ್ಲಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ಬೆಂಬಲ ನೀಡಿರಲಿಲ್ಲ. ಬೆಂಬಲ ನೀಡದ್ದಕ್ಕೆ ಬೇಸತ್ತ ಕೇಜ್ರಿವಾಲ್ ಅದೇ ದಿನ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.


ಗೆಲುವಿನ ಕಾರಣಗಳು

ಲೋಕಸಭೆ ಚುನಾವಣೆಯಲ್ಲಿ ಎಎಪಿ ಸೋಲನ್ನಪ್ಪುತ್ತಿದ್ದಂತೆ ಎಎಪಿಯ ಕತೆ ಮುಗಿಯಿತು ಎಂಬ ಮಾತುಗಳು ಕೇಳಿ ಬರಲಾರಂಭಿಸಿದವು ದೆಹಲಿ ವಿಧಾನಸಭೆ ಚುನಾವಣೆ ಘೋಷಣೆಯಾದಾಗ ನಡೆದಿದ್ದ ಚುನಾವಣಾಪೂರ್ವ ಸಮೀಕ್ಷೆಗಳೂ ಬಿಜೆಪಿ ಭರ್ಜರಿ ಬಹುಮತ ಗಳಿಸಲಿದೆ ಎಂದೇ ಭವಿಷ್ಯ ನುಡಿದಿದ್ದವು. ಕೆಲ ವಾರಗಳವರೆಗೂ ಇದೇ ಪರಿಸ್ಥಿತಿ ಇತ್ತು. ಆದರೆ ಕೆಲವೇ ದಿನಗಳ ಅಂತರದಲ್ಲಿ ದೆಹಲಿ ರಾಜಕೀಯ ಚಿತ್ರಣವೇ ಬದಲಾಗಿದೆ. ಎಎಪಿ ಫೀನಿಕ್ಸ್ನಂತೆ ದೆಹಲಿಯಲ್ಲಿ ಎದ್ದು ಬಂದಿದೆ... ಆಮ್ಆದ್ಮಿ ಪಕ್ಷಕ್ಕೆ ಪರಿಯ ಗೆಲುವು ಬರಲು ಕಾರಣಾಗಳನ್ನು ಹೀಗೆ ವಿಶ್ಲೇಷಿಸಬಹುದು...
  1. ·         49 ದಿನದ ಬಳಿಕ ರಾಜೀನಾಮೆ ನೀಡಿದ್ದ ಕೇಜ್ರಿವಾಲ್ ಚುನಾವಣೆ ಆರಂಭವಾದ ಬಳಿಕ ಸಿಕ್ಕ ಪ್ರತಿ ಅವಕಾಶದಲ್ಲೂ ಜನರ ಕ್ಷಮೆ ಯಾಚಿಸಿದರು. ಮೂಲಕ ಕೇಜ್ರಿವಾಲ್ ನಾನು ಪ್ರಾಮಾಣಿಕ ಮನುಷ್ಯ ಎಂಬುದನ್ನು ಜನರ ಮುಂದೆ ಬಿಂಬಿಸಲು ಸಾಧ್ಯವಾಯಿತು. ಇದರೊಂದಿಗೇದೆಹಲಿಯ ಒಟ್ಟು ಮತದಾರರ ಪೈಕಿ ಶೇ.60ರಷ್ಟು ಜನರ ಮಾಸಿಕ ಆದಾಯ 13 ಸಾವಿರ ರೂ.ಗಿಂತಲೂ ಕಡಿಮೆ ಇದೆ. ದುಬಾರಿ ದೆಹಲಿಯಲ್ಲಿ ವಿದ್ಯುತ್ಹಾಗೂ ನೀರಿನ ಬಿಲ್ ಜನರಿಗೆ ಅಧಿಕ ಹೊರೆಯಾಗಿಯೇ ಪರಿಣಮಿಸಿದೆ. 49 ದಿನಗಳ ಅಧಿಕಾರದಲ್ಲಿ ಎರಡೂ ದರಗಳನ್ನೂ ಇಳಿಸುವ ನಿರ್ಧಾರವನ್ನು ಕೇಜ್ರಿವಾಲ್ಮಾಡಿದ್ದರು. ಅದು ಬಡವರ್ಗದ ಜನರಿಗೆ ತುಂಬಾ ಹಿಡಿಸಿಬಿಟ್ಟಿತು. ಜತೆಗೆ ಬೀದಿ ಬದಿ ವ್ಯಾಪಾರಿಗಳು, ವರ್ತಕರು, ಆಟೋರಿಕ್ಷಾ ಚಾಲಕರು ನಿತ್ಯ ಪೊಲೀಸರಿಗೆ "ಮಾಮೂಲಿ' ಕೊಡುವ ವಾತಾವರಣವಿದೆ. ಆದರೆ ಕೇಜ್ರಿವಾಲ್ಅಧಿಕಾರದಲ್ಲಿದ್ದಾಗ ಒಮ್ಮೆಯೂ ಪೊಲೀಸರು ರೀತಿ ಸುಲಿಗೆ ಮಾಡಿರಲಿಲ್ಲ. ಭ್ರಷ್ಟರಿಗೆ ಅವರು ಸಿಂಹಸ್ವಪ್ನರಾಗಿದ್ದರು. ಹೀಗಾಗಿ ಕೇಜ್ರಿವಾಲ್ಅಧಿಕಾರಕ್ಕೇರಿದರೆ "ಮಾಮೂಲಿ' ಕೊಡುವುದು ನಿಲ್ಲುತ್ತದೆ ಎಂದು ಬಡವರ್ಗ ಅತಿಯಾಗಿ ನಂಬಿದ್ದರಿಂದ ಆಮ್ಆದ್ಮಿ ಪಕ್ಷ ಬಿಟ್ಟು ಕದಲಲಿಲ್ಲ. ಕೇಜ್ರಿವಾಲ್ಗಾಗಿ ಜಾತಿಗಳನ್ನೂ ಮೀರಿ ಬಡವರು ಆಮ್ಆದ್ಮಿ ಪಕ್ಷದ ಪರ ನಿಂತರು
  2. ·      ಕೇಜ್ರಿವಾಲ್ಬಗ್ಗೆ ದೆಹಲಿಯ ಜನರಲ್ಲಿ ಸಿಟ್ಟಿದೆ, ಅದರಿಂದ ತನಗೆ ಲಾಭವಾಗಲಿದೆ ಎಂದೇ ಬಿಜೆಪಿ ಭಾವಿಸಿತ್ತು. ಲೋಕಸಭೆ ಚುನಾವಣೆಯಲ್ಲಿ ಎಲ್ಲ ಏಳೂ ಸ್ಥಾನಗಳಲ್ಲೂ ಗೆದ್ದ ಬಳಿಕವಂತೂ ಪಕ್ಷದ ಸಂತಸಕ್ಕೆ ಪಾರವೇ ಇರಲಿಲ್ಲ. ಹೀಗಾಗಿ ದೆಹಲಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಬದಲು ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ, ಜಮ್ಮು-ಕಾಶ್ಮೀರ ಚುನಾವಣೆಗಳ ಮೇಲೆ ಹೆಚ್ಚು ಗಮನಹರಿಸಿತು. ಆದರೆ, ನಿಜ ಹೇಳಬೇಕೆಂದರೆ ದೆಹಲಿಯಲ್ಲಿ ಮೋದಿ ಅಲೆಯೇ ಇರಲಿಲ್ಲ. ಮೋದಿಗಿಂತ ಹೆಚ್ಚು ದೆಹಲಿಯಲ್ಲಿ ಮಫ್ಲರ್ ಮ್ಯಾನ್ ಸದ್ದು ಮಾಡಿದ್ದ. ನಡುವೆ, "ಆಪರೇಷನ್ಕಮಲ' ನಡೆಸಿ ಸರ್ಕಾರ ರಚಿಸುವ ಯತ್ನಕ್ಕೂ ಕೈಹಾಕಿತು. ಚುನಾವಣೆಯೋ, ಸರ್ಕಾರವೋ ಎಂಬ ಗೊಂದಲದಲ್ಲೇ ಕಾಲ ದೂಡಿತು. ಬಿಜೆಪಿಯ ಸಮಯ ತಿನ್ನುವ ಪ್ರಕ್ರಿಯೆಯಿಂದ ಆಮ್ಆದ್ಮಿ ಪಕ್ಷಕ್ಕೆ ಪ್ರಚಾರ ಮಾಡಲು ಹೆಚ್ಚು ಸಮಯಾವಕಾಶ ಲಭಿಸಿತು.
  3. ·     ಡಿ.1ರಿಂದ ಈವರೆಗೆ ದೆಹಲಿಯಲ್ಲಿ ಐದು ಚರ್ಚ್ಗಳ ಮೇಲೆ ದಾಳಿ ನಡೆದಿದೆ. ಇದರಿಂದ ರೊಚ್ಚಿಗೆದ್ದ ಕ್ರೈಸ್ತರೂ ಆಮ್ಆದ್ಮಿ ಪಕ್ಷದತ್ತ ತಿರುಗಿದರು. ಜೆಡಿಯುನ ನಿತೀಶ್ಕುಮಾರ್‌, ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿ, ಎಡರಂಗದ ಪ್ರಕಾಶ್ಕಾರಟ್ಅವರೆಲ್ಲಾ ಕೇಜ್ರಿವಾಲ್ಅವರಿಗೇ ಬೆಂಬಲ ನೀಡಿದ್ದರಿಂದ, ಉತ್ತರಪ್ರದೇಶದ ಸಮಾಜವಾದಿ ಪಕ್ಷ ಹಾಗೂ ಬಿಎಸ್ಪಿಗಳು ದೆಹಲಿಯಲ್ಲಿ ಅಭ್ಯರ್ಥಿಯನ್ನು ಹೂಡದ ಕಾರಣಕ್ಕೆ ಮೋದಿ- ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗದೆ ಆಮ್ಆದ್ಮಿ ಪಕ್ಷದ ಪರ ಒಗ್ಗೂಡಿದವು ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮರ ಮತ ಎಎಪಿ ಹಾಗೂ ಕಾಂಗ್ರೆಸ್ಗೆ ವಿಂಗಡಣೆಯಾಗಿತ್ತು. ಆದರೆ ಬಾರಿ ಬಿಜೆಪಿ ಹಾಗೂ ಆಪ್ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿಗೆ ಪೈಪೋಟಿ ನೀಡುವ ಸಾಮರ್ಥ್ಯ ಕಾಂಗ್ರೆಸ್ಸಿಗಿಲ್ಲ ಎಂಬುದು ಮನವರಿಕೆಯಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮಣಿಸಲು ಕೇಜ್ರಿಯೇ ಸರಿಯಾದ ನಾಯಕ ಎಂದು ಮುಸ್ಲಿಮರು ಕಂಡುಕೊಂಡರು.
  4. ·         ಒಂದು ಹಂತದಲ್ಲಿ ಬಿಜೆಪಿಗೆ ಸಮರ್ಥ ನಾಯಕನ ಕೊರತೆಯ ಅರಿವಾಯಿತು. ಮೋದಿ ಮುಖ ತೋರಿಸಿ, ಅಮಿತ್ಶಾ ತಂತ್ರಗಾರಿಕೆಯನ್ನಿಟ್ಟುಕೊಂಡು ಚುನಾವಣೆ ಗೆಲ್ಲಬಹುದು ಅಂದುಕೊಂಡಿದ್ದ ಬಿಜೆಪಿಗೆ ಅವು ಕೆಲಸ ಮಾಡುವುದಿಲ್ಲ ಎಂಬುದು ತಿಳಿಯಿತು. ಕೂಡಲೇ ಕೇಜ್ರಿವಾಲ್ಅವರ ಮಾಜಿ ಸಹವರ್ತಿ ಕಿರಣ್ಬೇಡಿ ಅವರನ್ನು ಪಕ್ಷಕ್ಕೆ ಸೆಳೆಯಲಾಯಿತು. ಆದರೆ ರೀತಿ ಮಾಡುವ ಮುನ್ನ ದೆಹಲಿ ಬಿಜೆಪಿ ಘಟಕದ ಒಪ್ಪಿಗೆಯನ್ನು ವರಿಷ್ಠರು ಪಡೆಯಲೇ ಇಲ್ಲ. ಉದ್ಭವಮೂರ್ತಿಯಂತೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬೇಡಿ ಹೊರಹೊಮ್ಮಿದ್ದು, ದೆಹಲಿ ಬಿಜೆಪಿಗಾಗಿ ದಶಕಗಳಿಂದ ದುಡಿದ ನಾಯಕರಿಗೆ ಪಥ್ಯವಾಗಲಿಲ್ಲ. ಅವರೆಲ್ಲಾ ನಿಧಾನವಾಗಿ ಬಿಜೆಪಿ ಪರ ಪ್ರಚಾರದ ಭರಾಟೆಯಿಂದ ಹಿಂದೆ ಸರಿದರು. ಉತ್ತಮ ರೀತಿ ಅಧಿಕಾರ ನಡೆಸಿದ್ದ, ನಿಷ್ಕಳಂಕ ವ್ಯಕ್ತಿತ್ವದ ಕೇಜ್ರಿವಾಲ್ಮುಂದೆ ಬಿಜೆಪಿ ಪಾಲಿಗೆ ಬೇಡಿ ಅತ್ಯುತ್ತಮ ಅಭ್ಯರ್ಥಿಯಾಗಿದ್ದರೂ ಜನರಿಗೆ ಬಿಜೆಪಿ ನಿರೀಕ್ಷಿಸಿದ್ದಷ್ಟು ಇಷ್ಟವಾಗಲಿಲ್ಲ. ಹೀಗಾಗಿಯೇ ಕಿರಣ್ ಬೇಡಿಯನ್ನು ಸಿಎಂ ಅಭ್ಯರ್ಥಿಯಾಗಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮಾಸ್ಟರ್ ಸ್ಟ್ರೋಕ್ ಅವರಿಗೇ ತಿರುಮಂತ್ರವಾಯಿತು.
  5. ·         ಎದುರಾಳಿ ಪಕ್ಷದ ನಾಯಕರನ್ನು ವೈಯುಕ್ತಿಕವಾಗಿ ತೆಗಳುವುದರಿಂದ ಮತ್ತೂಬ್ಬರಿಗೆ ಲಾಭವಾಗುತ್ತದೆ ಎಂಬುದನ್ನು ಬಿಜೆಪಿ ಅದೇಕೋ ಮರೆಯಿತು. ಕೇಜ್ರಿವಾಲ್ವಿರುದ್ಧ ವೈಯಕ್ತಿಕ ನಿಂದನೆಗೆ ನಾಯಕರು, ಸಚಿವರು ಸೇರಿದಂತೆ ಪ್ರಧಾನಿ ಮೋದಿಯೇ ನೇತೃತ್ವ ಹೊತ್ತುಕೊಂಡರು. ಪತ್ರಿಕೆಗಳಲ್ಲಿ ಕೇಜ್ರಿ ಹೀಯಾಳಿಸುವ ಜಾಹೀರಾತುಗಳನ್ನು ಬಿಜೆಪಿ ಪುಂಖಾನುಪುಂಕವಾಗಿ ಪ್ರಕಟಿಸಿದರು. ಇದೆಲ್ಲದರ ಲಾಭ ಕೇಜ್ರಿವಾಲ್ಅವರಿಗೆ ಆಯಿತು ಕೇಜ್ರಿವಾಲ್ವಿರುದ್ಧ ಪರಿ ಟೀಕೆಗಳನ್ನು ಮಾಡುತ್ತಿರುವುದನ್ನು ಕಂಡು ಆಮ್ಆದ್ಮಿ ಪಕ್ಷದಿಂದ ದೂರ ಸರಿದಿದ್ದ ಮಧ್ಯಮವರ್ಗದ ಮತದಾರರೂ ಅನುಕಂಪದಿಂದ ಮತ್ತೆ ಅದೇ ಪಕ್ಷದತ್ತ ವಾಲಲೂ ಆರಂಭಿಸಿದರು.
  6. ·         ರಾಜೀನಾಮೆ ನೀಡಿದ ಬಳಿಕ ಕೇಜ್ರಿವಾಲ್ ಸುಮ್ಮನೆ ಕೂರಲಿಲ್ಲ. ಎಎಪಿ ಧರಣಿಗೆ ಮಾತ್ರ ಸೀಮಿತವಾದ ಪಕ್ಷವಲ್ಲ. ಅಭಿವೃದ್ಧಿಯನ್ನೂ ನೋಡುತ್ತದೆ ಎಂದು ಜನಸಭೆಗಳನ್ನೂ ಮಾಡಿದರು. ಇದರಿಂದ ಪಕ್ಷ ಸಂಘಟನೆಯೂ ಸಾಧ್ಯವಾಯಿತು. ಬಾರಿ ಪಕ್ಷ ಸೇವೆಗಾಗಿ ಹೆಚ್ಚು ಕಾರ್ಯಕರ್ತರು ದೆಹಲಿಗೆ ಬಂದರು. ದೆಹಲಿಯ ಚುನಾವಣೆ ಘೋಷಣೆಯಾಗುವುದಕ್ಕೂ ಮುನ್ನವೇ ಕೇಜ್ರಿವಾಲ್ ಎರಡೆರಡು ಬಾರಿ ಎಲ್ಲಾ ಕ್ಷೇತ್ರಗಳಲ್ಲೂ ಪ್ರವಾಸ ಮುಗಿಸಿದ್ದರು. ಕೇಜ್ರಿವಾಲ್ ಜೊತೆ ಕಾರ್ಯಕರ್ತರ ತಂಡವೂ ಹಗಲು ಇರುಳೆನ್ನದೆ ಬೆನ್ನಿಗೆ ನಿಂತು ದುಡಿದರು.

 ರಾಷ್ಟ್ರೀಯ ಪಕ್ಷಗಳಿಗೆ ಪಾಠ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವು ನಮ್ಮ ದೇಶದ ರಾಷ್ಟ್ರೀಯ ಪಕ್ಷಗಳಿಗೆ ನಿಜಕ್ಕೂ ಒಂದು ಪಾಠ, ನಿಟ್ಟಿನಲ್ಲಿ ಬಿಜೆಪಿ, ಕಾಂಗ್ರೆಸ್ ನಂತಹಾ ಪಕ್ಷಗಳು ಎಚ್ಚೆತ್ತುಕೊಳ್ಳಬೇಕು.
ಬಿಜೆಪಿ ವಿಚಾರಕ್ಕೆ ಬಂದರೆ, ಮೋದಿ ಅವರ ಜನಪ್ರಿಯತೆಯೊಂದನ್ನೇ ಅವಲಂಬಿಸಿ ರಾಜ್ಯದ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಮನಗಾಣಬೇಕು. ಲೋಕಸಭಾ ಚುನಾವಣೆಯಲ್ಲಿ ಆಪ್ಹೀನಾಯವಾಗಿ ಹಿನ್ನಡೆ ಕಂಡಿರಬಹುದು. ಆದರೆ ರಾಷ್ಟ್ರ ರಾಜಧಾನಿಯಲ್ಲಿ ಅದು ಒಂದು ಪ್ರಬಲ ಶಕ್ತಿಯಾಗಿ ಉಳಿದಿದೆ. ನೆರೆಯ ಪಂಜಾಬ್ನಲ್ಲೂ ಅದು ತನ್ನ ಶಕ್ತಿಯನ್ನು ಪ್ರದರ್ಶಿಸಿದೆ. ಚುನಾವಣೆಯಿಂದ ಚುನಾವಣೆಗೆ ಬಿಜೆಪಿಯಲ್ಲಿ ಸಂತೃಪ್ತಿಯ ಭಾವನೆ ಹೆಚ್ಚುತ್ತಿದೆ. ಆದರೆ ಪಕ್ಷದ ಸೋಲಿಗೂ ಅದೇ ಕಾರಣವಾಗುತ್ತಿದೆ. ಕಾಂಗ್ರೆಸ್ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಏನಾದರೂ ಮಹತ್ವದ ಬದಲಾವಣೆ ಮಾಡಿಕೊಳ್ಳಲೇಬೇಕಿದೆ.

ಮುಂದಿದೆ ಸವಾಲು
ಆಮ್ ಆದ್ಮಿ ಪಕ್ಷದ ಗೆಲುವಿನಿಂದ ದೆಹಲಿ ಗದ್ದುಗೆಗೆ ಒಬ್ಬ ಹೊಸ ನಾಯಕ ಸಿಕ್ಕಂತಾಗಿದೆ. ಜನರು ಕೇಜ್ರಿವಾಲ್ ಮೇಲೆ ನಂಬಿಕೆ ಇಟ್ಟು ಇನ್ನೊಮ್ಮೆ ಬಹುಮತ ನೀಡಿ  ಆರಿಸಿ ಕಳಿಸಿದ್ದಾರೆ. ಭ್ರಷ್ಠಾಚಾರವನ್ನು ನಿರ್ಮೂಲನಗೊಳಿಸುವ ಸಲುವಾಗಿ ಹುಟ್ಟಿಕೊಂಡ ಒಂದು ಸಂಘಟನೆ ಮುಂದೆ ಒಂದು ರಾಜಕೀಯ ಪಕ್ಷವಾಗಿ ಬೆಳೆದಿದ್ದು ಇದೀಗ ಒಂದು ರಾಜ್ಯದ ಚುಕ್ಕಾಣಿ ಹಿಡಿದಿರುವ ಹಿನ್ನೆಲೆಯಲ್ಲಿ ಪಕ್ಷ ಹಾಗೂ ಕೇಜ್ರಿವಾಲ್ ರವರ ಮುಂದೆ ಸಾಕಷ್ಟು ಸವಾಲುಗಳಿವೆ. ಕಳೆದ ಬಾರಿ ನಡೆಸಿದಂತೆ ಅಧಿಕಾರ ಗದ್ದುಗೆ ಸಿಕ್ಕಿದೊಡನೆಯೇ ಬೀದಿಗಿಳಿದು ಪ್ರತಿಭಟನೆಗೆ ತೊಡಗುತ್ತಾ ಸಮಯ ವ್ಯರ್ಥ ಮಾಡದೆ ಜನರ ವಿಶ್ವಾಸವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಉತ್ತಮ ರೀತಿಯ ಕೆಲಸಗಳಲ್ಲಿ ತೊಡಗಬೇಕಿದೆ. ಕೇವಲ ಪ್ರತಿಭಟನೆ, ಬೀದಿರಂಪಗಳ್ನ್ನು ಮಾಡದೆಯೇ ಜನರಿಗೆ ಅಭಿವೃದ್ದಿಯೇ ಮುಂದಾದ ಉತ್ತಮ ಆಡಳಿತ ನೀಡುವತ್ತ ಕೇಜ್ರಿವಾಲ್ ಮುಂದಾಗಬೇಕು. ಆಗ ಮಾತ್ರವೇ ದೆಹಲಿಯ ಜನತೆ ಇವರನ್ನು ನಂವಿ ಮತ ಹಾಕಿದ್ದಕ್ಕೆ ನ್ಯಾಯ ದೊರೆಯಬಲ್ಲದೆ.
ಅಂತಿಮವಾಗಿ, ಅರವಿಂದ ಕೇಜ್ರಿವಾಲ್ ಗೆದ್ದಿದ್ದಾರೆ, ಶ್ರೀ ಸಾಮಾನ್ಯರ ಪಕ್ಷ ಎಂದೆನಿಸಿದ ಆಮ್ ಆದ್ಮಿ ಗೆದ್ದು ಗದ್ದುಗೆ ಏರಿದೆ. ಮುಂದಿನ ದಿನಗಳಲ್ಲಿ ದೆಹಲಿಯ ಜನತೆ ಉತ್ತಮ ಆಡಳಿತ ಕಾಣುವಂತಾಗಲಿ, ದೆಹಲಿಯು ಸರ್ವತೋಮುಖ ಅಭಿವೃದ್ದಿ ಕಂಡು ಗಾಂಧೀಜಿಯವರರಾಮರಾಜ್ಯ ಕನಸು ಸಾಕಾರವಾಗಲಿ ಎಂದು ಆಶಿಸೋಣ......

No comments:

Post a Comment