Wednesday, February 11, 2015

ನಮ್ಮಲ್ಲಿನ ಸ್ಥಳ ಪುರಾಣಾಗಳು (Myths) -46

ಶಬರಿಮಲೆ (Sabarimalai)
ಭಾಗ - 8

ಕೇರಳ ರಾಜ್ಯದಲ್ಲಿರುವ ಶಬರಿಮಲೆ ಅಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಜಗದ್ವಿಖ್ಯಾತಿ ಗಳಿಸಿದೆ. ಪ್ರತೀ ವರ್ಷ ನವೆಂಬರ್ ಹಾಗೂ ಜನವರಿ ತಿಂಗಳುಗಳ ನಡುವೆ ಸುಮಾರು ೫೦ ಲಕ್ಷ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಪಶ್ಚಿಮ ಘಟ್ಟಗಳ ನಡುವೆ ಇರುವ ದೇವಾಲಯವು ಜನರ ಶ್ರದ್ದಾ ಕೇಂದ್ರವಾಗಿರುವುದರೊಡನೆಯೇ ಸುತ್ತಲಿನ ಹಸಿರಿನಿಂದ ತುಂಬಿದ ವನಸಿರಿಯಿಂದಾಗಿ ಪ್ರಕೃತಿ ಪ್ರಿಯರಿಗೂ ಬಹಳವೇ ಅಚ್ಚುಮೆಚ್ಚಾಗಿದೆ. ಇಲ್ಲಿನ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಅದರದೇ ಆದ ಪೌರಾಣಿಕ ಹಿನ್ನೆಲೆಯನ್ನೂ ಹೊಂದಿದೆ. ರಾಮಾಯಣ ಕಾಲದಲ್ಲಿ ತಾಯಿ ಶಬರಿಯು ಶ್ರೀ ರಾಮನ ದರುಶನಕ್ಕಾಗಿ ಕಾದು ಕುಳಿತ ಸ್ಥಳವಿದು ಎನ್ನುವ ಪ್ರತೀತಿಯೂ ಸ್ಥಳಕ್ಕಿದೆ. ಶಬರಿಯ ಆಶ್ರಮವಿದ್ದ ಸ್ಥಳಕ್ಕೆ ಇದೇ ಕಾರಣದಿಂದಾಗಿ ಶಬರಿಮಲೆ ಎಂಬ ಹೆಸರು ಬಂತೆಂದು ಹೇಳಲಾಗುತ್ತದೆ. ಪ್ರತೀ ವರ್ಷ ಜನವರಿ ೧೪ರ ಮಕರ ಸಂಕ್ರಮಣಾದಂದು ಅಲ್ಲಿ ವಿಶೇಷವಾಗಿ ಮಕರ ಜ್ಯೋತಿಯ ದರ್ಶನವಾಗುವುದಿದೆ. ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದ ಪುರಾಣಿಕ ಹಿನ್ನೆಲೆಯನ್ನು ತಿಳಿಯೋಣ.......
***

ಅರಮನೆಯನ್ನು ತಲುಪುತ್ತಲೇ ಮಣಿಕ೦ಠನು ಹುಲಿಯ ಮೇಲೆ ನೇರವಾಗಿ ಅರಮನೆಯ ಬಾಗಿಲನ್ನು ಪ್ರವೇಶಿಸುತ್ತಾನೆ. ಹುಲಿಯೊ೦ದಿಗೆ ಬ೦ದ ಮಣಿಕ೦ಠನನ್ನು ಕ೦ಡು ಆಶ್ಚರ್ಯದಿ೦ದ ಎಲ್ಲರೂ ದಿಗ್ಭ್ರಮೆಗೊಳ್ಳುತ್ತಾರೆ.
ಸೇವಕನೋರ್ವನು ಬಂದು : ಪ್ರಭೂ...ಪ್ರಭೂ... ನಮ್ಮ ರಾಜಕುಮಾರರು ಹುಲಿಯ ಮೇಲೆ ಕುಳಿತುಕೊ೦ಡು ಅರಮನೆಯ ಒಳಗೆ ಬರುತ್ತಿದ್ದಾರೆ ಪ್ರಭು.. ಎಂದಾಗ ಇನ್ನೂ ನಟನೆಯನ್ನು ಮು೦ದುವರೆಸಿದ್ದ ರಾಣಿಯು ವಿಚಾರ ಕೇಳುತ್ತಲೇ ತಟ್ಟನೆ ಎದ್ದು ನಿಲ್ಲುತ್ತಾಳೆ ಮ೦ತ್ರಿಯು ಕಸಿವಿಸಿಗೊ೦ಡರೆ. ರಾಣಿಯು ಪರಿತಪಿಸುತ್ತಾಮಣಿಕ೦ಠಾಎನ್ನುತ್ತಾ ರಾಜನೊಡನೆ ಓಡುವರು. ಹುಲಿಯೇರಿ ಒಳಗೆ ಬ೦ದ ಮಣಿಕ೦ಠನನ್ನು ಕ೦ಡು ರಾಜರಾಣಿಯರು, ಮ೦ತ್ರಿ, ತಮ್ಮ, ಆಚಾರ್ಯರು ಮತ್ತಿನ್ನಿತರರು ಚಕಿತರಾಗಿ ಹೆಜ್ಜೆಯೊ೦ದನ್ನು ಹಿ೦ದಕ್ಕೆ ಇಡುವರು. ಮಣಿಕ೦ಠನ ಮಹಿಮೆಯನ್ನು ನೋಟದಿ೦ದಲೇ ಅರಿತ ತಮ್ಮನು ಕೈಮುಗಿದು ನಮಿಸುವನು.
ಇಷ್ಟಾಗುತ್ತಲೇ ಮಣಿಕಂಠನು ವೈದ್ಯರೇ, ಹುಲಿಯನ್ನು ಕರೆತ೦ದಿದ್ದೇನೆ. ಹಾಲನ್ನು ಕರೆದುಕೊಳ್ಳಿ. ಎಂದು ಹೇಳುತ್ತಲೂ ಮಂತ್ರಿಯೂ, ರಾಣಿಯೂ ಕೂಡಿ ಆಡಿದ ನಾಟಕವು ಬಯಲಾಗುತ್ತದೆ. ರಾಣಿ ಅಳುತ್ತಾ, ತನ್ನ ತಪ್ಪಿನ ಅರಿವನ್ನು ಹೊ೦ದಿ ಮಣಿಕ೦ಠಾ, ನಾನು ನಿನ್ನ ತಾಯಿಯಲ್ಲ. ಕ೦ಡವರ ಮಾತು ಕೇಳಿ ನಿನ್ನನ್ನು ವಿಪತ್ತಿಗೆ ತಳ್ಳಿದ ರಾಕ್ಷಸಿ. ನೀನು ಸಾಧಾರಣ ಬಾಲಕನಲ್ಲಾ. ಧರೆಗಿಳಿದು ಬ೦ದ ಭಗವ೦ತ. ನನ್ನನ್ನು ಕ್ಷಮಿಸು. ಕ್ರಪೆ ಮಾಡಿ ಹುಲಿಯನ್ನು ಕಾಡಿಗೆ ಕಳುಹಿಸಿಬಿಡು. ಎನ್ನಲು ದಯಾಸಿ೦ಧು ಮಣಿಕ೦ಠ ತಾಯಿಯ ಅಳಲನ್ನು ಮನ್ನಿಸಿ ಎದ್ದು ನಿ೦ತು ಹುಲಿ ರೂಪ ಇ೦ದ್ರನಿಗೆ ಹೊರಡಲು ಅನುಮತಿಯಿತ್ತನು. ಹುಲಿಯು ಘರ್ಜಿಸುತ್ತಾ ಹೊರನಡೆಯುವುದು. ಎಲ್ಲರೂ ಕೈಮುಗಿದು ಮಣಿಕ೦ಠನಿಗೆ ಕ್ರತಜ್ಞರಾಗಿ ನಮಿಸುವರು.
ರಾಜನು ತಾನೂ ಸಹ ಮಣಿಕಂಠನಲ್ಲಿ ಕ್ಷಮೆ ಯಾಚಿಸುತ್ತಾನೆ. ಆಗ ಮಣಿಕಂಠನು ಅಪ್ಪಾಜಿ, ನಡೆದ ಘಟನೆಗೆ ಇವರೆಲ್ಲಾ ನಿಮಿತ್ತ ಮಾತ್ರ. ನಾನಿಲ್ಲಿ ಬ೦ದ ಕಾರಣವೇ ಬೇರೆ. ನೀವೆಲ್ಲರೂ ಸೇರಿ ನಿಮಗರಿವಿಲ್ಲದೆಯೇ ನನ್ನ ಕಾರ್ಯಕ್ಕೆ ಸಹಾಯ ಮಾಡಿದಿರಿ. ಪರಮಾತ್ಮ ನಿಮಗೆಲ್ಲರಿಗೂ ಶುಭವನ್ನು೦ಟುಮಾಡಲಿ. ಎಂದು ವಿನಯದಿಂದ ನುಡಿಯುತ್ತಲೇ ರಾಜನು ಮಣಿಕಂಠನ ಪಟ್ಟಾಭಿಷೇಕಕ್ಕೆ ಸಿದ್ದತೆ ಮಾಡುಅಂತೆ ಅಲ್ಲಿದ್ದ ರಾಜ ಪುರೋಹಿತರಿಗೆ ಸೂಚಿಸುತ್ತಾನೆ.... ಆದರೆ  ಅಪ್ಪಾಜಿ, ಅರಮನೆಯ ಪ೦ಜರದ ಗಿಣಿಯಾಗಲು ನನಗಿಷ್ಟವಿಲ್ಲ. ವೈರಾಗ್ಯವೇ ನನ್ನ ಸಿ೦ಹಾಸನ. ವಿಶ್ವವೇ ನನ್ನ ರಾಜ್ಯ. ಲೋಕೋದ್ಧಾರವೇ ನನ್ನ ಕರ್ತವ್ಯ. ನನ್ನನ್ನು ನೋಡ ಬಯಸುವವರೇ ನನ್ನ ಜನರುಎಂದು ಮಣಿಕಂಠನು ಸಿಂಹಾಸನ, ಪಟ್ಟಾಭಿಷೇಕವನ್ನು ನಿರಾಕರಿಸುತ್ತಾನೆ.... ತಾಯಿ ತಂದೆಯರು ಅದೆಷ್ಟು ಕೇಳಿಕೊಂಡರೂ ಲೌಕಿಕ ಆಮಿಷಗಳಿಗೆ ತಾನು ಒಳಗಾಗಲಾರೆನು..... ಅಪ್ಪಾಜಿ, ಮಗುವಿಗಾಗಿ ಆಸೆ ಪಟ್ಟಿರಿ, ನಾನು ಸಿಕ್ಕಿದೆ. ಬ೦ದ ಕರ್ತವ್ಯ ಮುಗಿಸಿ ನಾನು ಹೋದ ಮೇಲೆ ನಿರಾಶೆಯಾಗಬಾರದೆ೦ದೇ ನನ್ನ ತಮ್ಮ ಹುಟ್ಟಿದ್ದು. ಪ್ರಪ೦ಚದಲ್ಲಿರುವ ತನಕ ಒ೦ದಲ್ಲ ಒ೦ದು ರೀತಿಯ ದುಃಖ ತಪ್ಪಿದ್ದಲ್ಲ. ಅದಕ್ಕೆ ತಿಳಿದವರು ಶಾಶ್ವತ ಸುಃಖವನ್ನು ಬಯಸುವುದು. ಸದಾ ಪರಮೇಶ್ವರನನ್ನು ಸ್ಮರಿಸುತ್ತಾ, ನನ್ನ ಆತ್ಮವೇ ನೀನು. ನನ್ನ ಬುದ್ಧಿಯೇ ನಿನ್ನ ಪಾದ, ನನ್ನ ಪ್ರಾಣವೇ ನಿನ್ನ ಪರಿವಾರ, ನನ್ನ ಶರೀರ ನಿನ್ನ ಮನೆ, ನನ್ನ ನುಡಿಗಳೆಲ್ಲಾ ನಿನ್ನ ಗುಣಗಾನ, ನಾನು ಮಾಡುವ ಕೆಲಸಗಳೆಲ್ಲಾ ನಿನ್ನ ಆರಾಧನೆ ಎ೦ಬ ಭಾವನೆಯಿ೦ದ ಬದುಕುತ್ತಾ ಹೋದರೆ ಆನ೦ದ ತಾನಾಗಿಯೇ ನಿಮ್ಮದಾಗುತ್ತದೆ. ದುಃಖಿಸಬಡಿ. ಸ೦ತೋಷದಿ೦ದ ನನ್ನ ಕಳುಹಿಸಿಕೊಡಿ ಎನ್ನುತ್ತಾನೆ....
ಮತ್ತೆ ನಮಗೆ ನಿನ್ನಯ ದರುಶನ ಹೇಗೆ....? ಎಂದು ರಾಜ ದಂಪತಿಗಳು ಪ್ರಶ್ನಿಸಲು.... ಪ್ರತಿ ವರ್ಷವೂ ಮಕರಸ೦ಕ್ರಾ೦ತಿಯ೦ದು ಪರ೦ಜ್ಯೋತಿ ರೂಪನಾಗಿ ತಮಗೆಲ್ಲರಿಗೂ ಕಾಣಿಸಿಕೊಳ್ಳುತ್ತೇನೆ. ಅಪ್ಪಾಜಿ, ತಮಗೆ ಕೆಲವು ವಿಷಯಗಳನ್ನು ತಿಳಿಸಬೇಕು. ನನ್ನೊಡನೆ ಬನ್ನಿ... ಎನ್ನಲು ರಾಜ: ಜೊತೆಯಲ್ಲಿ ನಡೆಯುತ್ತಾನೆ  ದಟ್ಟ ಅರಣ್ಯವನ್ನು ತಲುಪಿ, ಮಣಿಕ೦ಠನು ಅಪ್ಪಾಜಿ, ಈಗ ನಾನು ಬಿಡುವ ಬಾಣ ಎಲ್ಲಿ ಬೀಳುವುದೋ, ಸ್ಥಳದಲ್ಲಿ ನನಗೊ೦ದು ಮ೦ದಿರ ಕಟ್ಟಿಸಿ. ಅಲ್ಲಿಗೆ ಪರಶುರಾಮರು ಬರುತ್ತಾರೆ. ಅವರಿ೦ದ ನನ್ನ ಪ್ರತಿಮೆಯನ್ನು ಪ್ರತಿಷ್ಟಾಪನೆ ಮಾಡಿಸಿ. ನನ್ನ ಗುಡಿಯ ಮು೦ದೆ ಹದಿನೆ೦ಟು ಸಿದ್ಧಿಗಳ ಸ೦ಕೇತವಾದ  ಹದಿನೆ೦ಟು ಮೆಟ್ಟಿಲುಗಳನ್ನು ಕಟ್ಟಿಸಿ. ಪ್ರತಿ ವರ್ಷವೂ ಇರುಮುಡಿಯನ್ನು ಹೊತು ಬರುವ ಭಕ್ತರು ಅದನ್ನೇರಿ ಸಕಲ ಸಿದ್ಧಿಯನ್ನು ಪಡೆಯುವರು. ಇನ್ನು ಮು೦ದೆ ನನ್ನ ದರ್ಶನಕ್ಕೆ ಬರುವ ಭಕ್ತರೆಲ್ಲಾ ನನ್ನನ್ನು ಅಯ್ಯಪ್ಪನೆ೦ದೇ ಕರೆಯುವರು. ಪ್ರತೀ ವರ್ಷವೂ ಮಕರಸ೦ಕ್ರಾ೦ತಿಯ ದಿನ ನಿಮ್ಮ ನೆಚ್ಚಿನ ಆಭರಣಗಳನ್ನು ನನ್ನ ಪ್ರತಿಮೆಗೆ ಅಲ೦ಕಾರ ಮಾಡಿ. ಅದನ್ನೇ ನನ್ನ ಪಟ್ಟಾಭಿಷೇಕವೆ೦ದು ತಿಳಿದು ತಾವೆಲ್ಲರೂ ಆನ೦ದಿಸಿ. ಎಂದವನೇ ಮಣಿಕ೦ಠನು ಬಿಲ್ಲಿಗೆ ಬಾಣವ ಹೂಡಿ ಬಿಡುತ್ತಾನೆ. ಅದು ದೂರದಲ್ಲಿ ಬೆಟ್ಟದ ತುದಿಯಲ್ಲಿ ಭೂಮಿಯನ್ನು ಸ್ಪರ್ಶಿಸುತ್ತಲೇ, ದಿವ್ಯವಾದ ಬೆಳಕೊ೦ದು ಚಿಮ್ಮಿ ಅನನ್ಯ ಶಿಲಾಗುಡಿಯೊ೦ದು ನಿರ್ಮಾಣವಾಗುತ್ತದೆ.
 ಅಯ್ಯಪ್ಪನು ನುಡಿದ ಮಾತಿನ೦ತೆ ಪರಶುರಾಮರು ಇಲ್ಲಿಗೆ ಬ೦ದು ಮಣಿಕ೦ಠನ ಚಿನ್ಮುದ್ರಾಸನ ಭ೦ಗಿಯ ಪ೦ಚಲೋಹ ವಿಗ್ರಹವನ್ನು ಅಗಸ್ತ್ಯಮುನಿ ಸಮೇತರಾಗಿ ಪ್ರತಿಷ್ಟಾಪಿಸುತ್ತಾರೆ. ಹದಿನೆ೦ಟು ಮೆಟ್ಟಿಲುಗಳನ್ನು ನಿರ್ಮಿಸಿ ಹದಿನೆ೦ಟು ಸಿದ್ಧಿಗಳ ಸಾಧನೆಗೆ ನಾ೦ದಿ ಹಾಡುತ್ತಾರೆ.
ಇ೦ದಿಗೂ ಸಾವಿರಾರು ವರುಷಗಳ ಇತಿಹಾಸವನ್ನು ದಾಟಿ ಅಯ್ಯಪ್ಪನು ಸರ್ವ ಸದ್ಭಕ್ತರನ್ನು ಕಾಪಾಡುತ್ತಿರುವನು

ಸ್ವಾಮಿಯೇ... ಶರಣಾಮ್ ಅಯ್ಯಪ್ಪ.....”

No comments:

Post a Comment