Thursday, February 12, 2015

ಯದುವೀರ್‌ಗೆ ಮೈಸೂರು ರಾಜಮನೆತನದ ಉತ್ತರಾಧಿಕಾರಿ ಕಿರೀಟ

ಮೈಸೂರು ರಾಜಮನೆತನದ ಯುವರಾಜನ ಪಟ್ಟಕ್ಕೆ ಚಾಮರಾಜ ಒಡೆಯರ್ ರವರ ಹಿರಿಯ ಪುತ್ರಿ ಗಾಯಿತ್ರಿದೇವಿಯವರ ಮಗಳು ತ್ರಿಪುರಸುಂದರಿ ದೇವಿ - ಸ್ವರೂಪ್ ಆನಂದ್ ಗೋಪಾಲರಾಜೇ ಅರಸ್ ದಂಪತಿಗಳ ಪುತ್ರನಾಗಿರುವ ಯದುವೀರ್ ಗೋಪಾಲ್ ರಾಜೇ ಅರಸ್ ರವರನ್ನು ದತ್ತು ತೆಗೆದುಕೊಳ್ಳುವುದಕ್ಕೆ ರಾಣಿ ಪ್ರಮೋದಾ ದೇವಿ ಅಂತಿಮ ಮುದ್ರೆ ಒತ್ತಿದ್ದಾರೆ.  ಇದರಿಂದಾಗಿ ಕಳೆದ ಒಂದು ವರ್ಷದಿಂದ ಒಡೆಯರ್ ರವರ ಉತ್ತರಾಧಿಕಾರಿ ಪಟ್ಟಕ್ಕೆ ಯಾರು? ಎಂಬ ಪ್ರಶ್ನೆ ಹಾಗೂ ವಿವಾದಕ್ಕೆ ಇಂದು ಅಂತಿಮ ಉತ್ತರ ದೊರಕಿದಂತಾಗಿದೆ. ಇದೇ ಫೆಬ್ರವರಿ .20 ರಂದು ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ರವರ ಜನ್ಮ ದಿನವಾಗಿದ್ದು ಅಂದು ಅರಮನೆಯ ಅಂಗಳದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಫೆಬ್ರವರಿ .21 ರಂದು ಅರಮನೆಯ ಬ್ಯಾಂಕ್ಪೆಟ್ ಹಾಲ್ ನಲ್ಲಿ ಗಣಪತಿ ಹೋಮ ಸೇರಿದಂತೆ ದಿನವಿಡಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಫೆಬ್ರವರಿ .23 ರಂದು ಬೆಳಿಗ್ಗೆ 6.30 ರಿಂದ ಸಂಜೆ ತನಕ ವಿಶೇಷ ಪೂಜಾ ಕಾರ್ಯಕ್ರಮಗಳ ನಡುವೆ ಯದುವೀರ್ ಗೋಪಾಲ ರಾಜೇ ಅರಸ್ ರವರನ್ನು ದತ್ತು ಸ್ವೀಕಾರ ಮಾಡಲಾಗುವುದು.
ಈ ಹಿನ್ನೆಲೆಯಲ್ಲಿ ಮುಂದಿನ ಮಹಾರಾಜರಾಗಲಿರುವ ಯದುವೀರರ ಕಿರು ಪರಿಚಯ ಮತ್ತು ಇದುವರೆವಿಗಿನ ಮೈಸೂರು ಅರಸರ ಮಾಹಿತಿಯನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. 

ಯದುವೀರ್ ಗೋಪಾಲ್ ರಾಜೇ ಅರಸ್


ಯದುವೀರ್ ಗೋಪಾಲ್ ರಾಜೇ ಅರಸ್

ಚಾಮರಾಜ ಒಡೆಯರ್ ರವರ ಹಿರಿಯ ಪುತ್ರಿ ಗಾಯಿತ್ರಿದೇವಿಯವರ ಮಗಳು ತ್ರಿಪುರಸುಂದರಿ ದೇವಿ-ಸ್ವರೂಪ್ ಆನಂದ್ ಗೋಪಾಲರಾಜೇ ಅರಸ್ ದಂಪತಿಗಳ ಪುತ್ರನಾಗಿರುವ ಯದುವೀರ್ ಗೋಪಾಲ್ ರಾಜೇ ಅರಸ್ ಯದುವೀರ್ ಬೆಂಗಳೂರಿನ ವಿದ್ಯಾನಿಕೇತನ್ ಶಾಲೆಯಲ್ಲಿ 10ನೇ ತರಗತಿವರೆಗೆ ವ್ಯಾಸಂಗ ಮಾಡಿ ನಂತರ ಕೆನೆಡಿಯನ್ ಅಂತರಾಷ್ಟ್ರೀಯ ಶಾಲೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿ ಪ್ರಸ್ತುತ ಅಮೇರಿಕಾದ ಬಾಸ್ಟನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಹಾಗೂ ಆಂಗ್ಲ ಭಾಷೆಯೊಂದಿಗೆ ಬಿ.ಎ.ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಇವರು ಬೆಟ್ಟದ ಕೋಟೆ ಮನೆತನಕ್ಕೆ ಸೇರಿದವರು. ಮೈಸೂರಿನ ಒಡೆಯರ್ ಮನೆತನ ಹಾಗೂ ಬೆಟ್ಟದ ಕೋಟೆ ಮನೆತನದ ಮಧ್ಯೆ ಇರುವ ಸಂಬಂಧ ಹಾಗೂ ಒಡನಾಟ 200 ವರ್ಷಕ್ಕೂ ಮಿಗಿಲಾಗಿ ಬೆಳೆದು ಬಂದಿದೆ. ಮಹಾರಾಣಿ ಲಕ್ಷಮಣ್ಣಿ ರವರು, ಇದೇ ಮನೆತನಕ್ಕೆ ಸೇರಿದವರು. ಮುಮ್ಮಡಿ ಕೃಷ್ಣರಾಜ ಒಡೆಯರ್ ರವರಿಗೆ ರಾಜ್ಯಭಾರವನ್ನು ಮರುಗಳಿಸಿಕೊಡುವಲ್ಲಿ ಅವರ ಪ್ರಮುಖ ಪಾತ್ರ ಮರೆಯುವಂತಿಲ್ಲ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ದತ್ತು ಪುತ್ರ 10 ನೇ ಚಾಮರಾಜೇಂದ್ರ ಒಡೆಯರ್ ರವರು ಸಹ ಇದೇ ಮನೆತನಕ್ಕೆ ಸೇರಿದವರು. 

ಮೈಸೂರು ಸಂಸ್ಥಾನವನ್ನು ಆಳಿದ ಅರಸರು

೧) ಯದುರಯರುರು (ಸುಮಾರು ೧೩೯೯-೧೪೨೩)
೨) ಬೆಟ್ಟದ ಚಾಮರಾಜ ಒಡೆಯರು (೧೪೨೩-೧೪೫೯)
೩) ತಿಮ್ಮರಾಜ ಒಡೆಯರು (೧೪೫೯-೧೪೭೮)
೪) ಹಿರಿಯ ಚಾಮರಾಜ ಒಡೆಯರು (೧೪೭೮-೧೫೧೩)
೫) ಹಿರಿಯ ಬೆಟ್ಟದ ಚಾಮರಾಜ ಒಡೆಯರು (೧೫೧೩-೧೫೫೩)
೬) ತಿಮ್ಮರಾಜ ಒಡೆಯರು
೭) ಬೋಳ ಚಾಮರಾಜ ಒಡೆಯರು
೮) ಬೆಟ್ಟದ ಚಾಮರಾಜ ಒಡೆಯರು ( ಈ ಮೂರೂ ಜನ ೧೫೫೩-೧೫೭೮)
೯) ರಾಜ ಒಡೆಯರು (೧೫೭೮-೧೬೧೮) ನಲವತ್ತು ವರ್ಷಗಳ ದೀರ್ಘ ಕಾಲದ ಆಳ್ವಿಕೆ.
೧೦) ಚಾಮರಾಜ ಒಡೆಯರು (೧೬೧೭-೧೬೩೭)
೧೧) ಎರಡನೆ ರಾಜ ಒಡೆಯರು (೧೬೩೭-೧೬೩೮)ಕೇವಲ ೧ ವರ್ಷದ ಆಳ್ವಿಕೆ
೧೨) ರಣಧೀರ ಕಂಠೀರವ ನರಸರಾಜ ಒಡೆಯರು (೧೬೩೮-೧೬೫೯)
೧೨) ದೊಡ್ಡದೇವರಾಜ ಒಡೆಯರು (೧೬೫೯-೧೬೭೩)
೧೩) ಚಿಕ್ಕದೇವರಾಜ ಒಡೆಯರು (೧೬೭೩-೧೭೦೪)
೧೪) ಚಿಕ್ಕದೇವರಾಜ ಒಡೆಯರ ಮೂಕ ಮಗ (೧೭೦೪-೧೭೧೪ ತಾಯಿ, ಮಂತ್ರಿಗಳ ಸಹಕಾರದೊಂದಿಗೆ)
೧೫) ದೊಡ್ಡ ಕೃಷ್ಣರಾಜ ಒಡೆಯರು (೧೭೧೪-೧೭೩೪)
೧೬) ಅಂಕನಹಳ್ಳಿ ಚಾಮರಾಜ ಒಡೆಯರು
೧೭) ಇಮ್ಮಡಿ ಕೃಷ್ಣರಾಜ ಒಡೆಯರು (ಇಬ್ಬರೂ ದತ್ತುಪುತ್ರರು,೧೭೬೬ರರ ವರೆಗೆ, ಅಂದಿನ ಆಡಳಿತ ಮಂತ್ರಿಗಳ ಕುತಂತ್ರಕ್ಕೊಳಪಟ್ಟಿದ್ದು ವಿವರಗಳು ಕಡಿಮೆ)
೧೮) ನಂಜರಾಜ ಒಡೆಯರು (೧೭೬೬- ೧೭೭೦)
೧೯) ಬೆಟ್ಟದ ಚಾಮರಾಜ ಒಡೆಯರು (೧೭೭೦-೧೭೭೬)
೨೦) ಖಾಸಾ ಚಾಮರಾಜ ಒಡೆಯರು (೧೭೭೬-೧೭೯೬) (ನಂಜರಾಜ ಒಡೆಯರ ಕಾಲಕ್ಕೆ ಹೈದರಾಲಿಯು ಪ್ರಬಲನಾಗಿ ಮೈಸೂರು ಸಂಸ್ಥಾನದ ಆಡಳಿತವನ್ನು ಕೈಗೆ ತೆಗೆದುಕೊಂಡನು,೧೭೮೨ರಲ್ಲಿ ಅವನು ಮರಣ ಹೊಂದಿದನು. ನಂತರ ಅವನ ಮಗ ಟಿಪ್ಪೂಸುಲ್ತಾನನು ಸಂಸ್ಥಾನದ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಿದ್ದುದರಿಂದ, ನಂಜರಾಜರು,ಬೆಟ್ಟದ ಚಾಮರಾಜರು,ಖಾಸಾ ಚಾಮರಾಜರು ಕೇವಲ ಹೆಸರಿಗೆ ಮಾತ್ರ ರಾಜರಾಗಿದ್ದರು)
೨೧) ಮುಮ್ಮಡಿ ಕೃಷ್ಣರಾಜ ಒಡೆಯರು (೧೭೯೯ರಲ್ಲಿ ಪಟ್ಟಕ್ಕೆ ಬಂದಾಗ ಕೇವಲ ೫ ವರ್ಷದವರು ) ಆವರು ಸ್ವತಂತ್ರವಾಗಿ ಆಡಳಿತ ನಿರ್ವಹಿಸಿದ್ದು ೧೮೧೦ರಿಂದ ಬ್ರಿಟಿಷರ ತಂತ್ರದಿಂದ ಮುಮ್ಮಡಿ ಕೃಷ್ಣರಾಜ ಒಡೆಯರು ಆಡಳಿತವನ್ನು ಬ್ರಿಟಿಷ್ ಕಮಿಷನರಿಗೆಬಿಟ್ಟುಕೊಡಬೇಕಾಯಿತು.
೨೨) ಚಾಮರಾಜ ಒಡೆಯರು (೧೮೮೧-೧೯೦೨)
೨೩) ನಾಲ್ವಡಿ ಕೃಷ್ಣರಾಜ ಒಡೆಯರು (೧೯೦೨-೧೯೪೦)
೨೪) ಜಯಚಾಮರಾಜ ಒಡೆಯರು (೧೯೪೦ರಿಂದ ಪ್ರಜಾತಂತ್ರ ಸ್ಥಾಪನೆಯಾಗುವವರೆಗೆ,ನಂತರವೂ ರಾಜ ಪ್ರಮುಖರಾಗಿ, ರಾಜ್ಯಪಾಲರಾಗಿ ನಾಡಿಗೆ ಸೇವೆ ಸಲ್ಲಿಸಿದರು. ಮದ್ರಾಸು ರಾಜ್ಯದ ರಾಜ್ಯಪಾಲರಾಗಿ ನಿವೃತ್ತರಾದರು.)
೨೫) ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಹದ್ದೂರ್ (೨೦ ಫೆಬ್ರುವರಿ ೧೯೫೩ - ೧೦ ಡಿಸೆಂಬರ್ ೨೦೧೩) 

No comments:

Post a Comment