Friday, September 04, 2020

ವಿಶ್ವಾಮಿತ್ರ ಒಬ್ಬನೋ? ಇಬ್ಬರೋ? ನಾಲ್ವರೋ??

 ಕೌಶಿಕನಾಗಿ ಭೂಮಿಯನ್ನಾಳಿದ ರಾಜನೊಬ್ಬ ವಸಿಷ್ಟರ ಜತೆ ಜಿದ್ದಿಗೆ ಬಿದ್ದವನಂತೆ ತಾನೂ ಆದ್ಯಾತ್ಮದ ಮೇರು ಶಿಖರವನ್ನೇರಿ ಬ್ರಹ್ಮರ್ಷಿ ಎನಿಸಿಕೊಂಡ ವಿಶ್ವಾಮಿತ್ರನ ಜೀವನದಲ್ಲಿ ನಡೆಯುವ ನಾನಾ ಘಟನೆಗಳು ನಮಗೆ ಪುರಾಣ ಕಥೆಯ ರೂಪದಲ್ಲಿ ಸಿಕ್ಕುತ್ತದೆ. ಅವನು ಮೇನಕೆಯೊಂದಿಗೆ ಸಂಸಾರ  ನಡೆಸಿ ಶಕುಂತಲೆಯ ಜನ್ಮಕ್ಕೆ ಕಾರಣನಾದ, ತ್ರಿಶಂಕುವಿಗೆ ಬೇರೆಯದೇ "ಸ್ವರ್ಗ" ಸೃಷ್ಟಿಸಿದ, ಹರಿಶ್ಚಂದ್ರನ ಸತ್ಯ ಪರಿಪಾಲನೆಗೆ ಸಾಕಷ್ಟು ಸವಾಲುಗಳನ್ನು ಒಡ್ಡಿ ಒರೆಹಚ್ಚಿದ. ಇದೆಲ್ಲದರ ನಂತರ ದಶರಥನ ಆಸ್ಥಾನಕ್ಕೆ ಬಂದ ವಿಶ್ವಾಮಿತ್ರ ಇಕ್ಷಾಕು ಕುಲದ ಶಿರೋಮಣಿ ಶ್ರೀರಾಮನಿಗೆ, ಗುರುವಾಗಿಯೂ ಕಾಣಿಸಿಕೊಂಡ!!! ಮುಂದೆ ತಾಟಕಿ ಎಂಬ ರಾಕ್ಷಸ ಗಣದ ಕನ್ಯೆಯನ್ನು ರಾಮನಿಂದ ಕೊಲ್ಲಿಸಿದ್ದಲ್ಲದೆ ಮಾರೀಚ, ಸುಬಾಹುವನ್ನು ತಮ್ಮ ಆಶ್ರಮದ ಪ್ರದೇಶದಿಂಡ ದೂರಕ್ಕೆ ಅಟ್ಟಿದ!! ಮುಂದೆ ಜನಕಪುರಿಗೆ ರಾಮನನ್ನು ಕರೆದೊಯ್ದು ಅಲ್ಲಿ ಸೀತೆಗಾಗಿನ ಸ್ವಯಂವರದಲ್ಲಿ ರಾಮನು ಭಾಗವಹಿಸುವಂತೆ ಮಾಡಿದ್ದೂ ವಿಶ್ವಾಮಿತ್ರನೇ ಆಗಿದ್ದಾನೆ. ಮಾತ್ರವಲ್ಲ ಗೌತಮ ಮಹರ್ಷಿಯ ಪತ್ನಿ ಅಹಲ್ಯೆಯ ಶಾಪ ವಿಮೋಚನೆಗೆ ಕಾರಣವಾಗಿದ್ದು ಸಹ ಇದೇ ವಿಶ್ವಾಮಿತ್ರಅಷ್ಟು ಮಾತ್ರವಲ್ಲ ಋಗ್ವೇದದಲ್ಲಿ ಬರುವ ಗಾಯತ್ರಿ ಮಂತ್ರವನ್ನು ಕಂಡುಕೊಂಡದ್ದು ಸಹ ವಿಶ್ವಾಮಿತ್ರ. ಹಾಗಾದರೆ ಮೇಲಿನ ಎಲ್ಲಾ ಘಟನೆಗಳಿಗೆ ಸಾಕ್ಷಿಯಾಗಿದ್ದು ಅಥವಾ ಇದೆಲ್ಲವೂ ನಡೆದದ್ದು ಒಬ್ಬನೇ ವಿಶ್ವಾಮಿತ್ರನಿಂದಲೆ??

ಹಾಗಲ್ಲ ಎನ್ನುವುದು ನನ್ನ ಅಭಿಪ್ರಾಯ. ಏಕೆಂದರೆ ಕೌಶಿಕನಾಗಿ  ವಸಿಷ್ಟರ ಬಳಿ ಬಂದ ವಿಶ್ವಾಮಿತ್ರನು ಮತ್ತು ಋಗೇದದಲ್ಲಿನ ಗಾಯತ್ರಿ ಮಂತ್ರವನ್ನು ಕಂಡುಕೊಂಡ ವಿಶ್ವಾಮಿತ್ರನಿಗೂ ಕಾಲಮಾನದಲ್ಲಿ ದೊಡ್ಡ ವ್ಯತ್ಯಾಸವಿದೆ!!!

ರಾಮ ಇದ್ದದ್ದು ಕ್ರಿ.ಪೂ. 5ನೇ ಶತಮಾನದ ಸುಮಾರಿನಲ್ಲಿ ಎನ್ನುವುದು ಇತಿಹಾಸಆದರೆ ಕ್ರಿ.ಪೂ. 1200 ನ್ನು ಋಗ್ವೇದ ಕಾಲಮಾನ ಎಂದು ಗುರುತಿಸಲಾಗಿದೆ. ಎಂದರೆ ಎರಡೂ ಅವಧಿಗಳ ನಡುವೆ ಸುಮಾರು ಮೂರು ಸಾವಿರ ವರ್ಷ ವ್ಯತ್ಯಾಸವಿದೆ!

ಇನ್ನು ಹರಿಶ್ವಂದ್ರ, ತ್ರಿಶಂಕುವಿನ ಕಾಲ ರಾಮ ಹಾಗೂ ದಶರಥನಿಗಿಂತ ಪೂರ್ವದಲ್ಲಿ ಬರುತ್ತದೆ!!! ಇಕ್ಷಾಕು ವಂಶದಲ್ಲಿ 26ನೇ ತಲೆಮಾರು ತ್ರಿಶಂಕುವಿನದ್ದಾದರೆ 27ನೇ ರಾಜ ಹರಿಶ್ಚಂದ್ರನಾಗಿದ್ದಾನೆ. ಆದರೆ ರಾಮಾಯಣದಲ್ಲಿ ಬರುವ ದಶರಥ ಇಕ್ಷಾಕು ವಂಶದ 50ನೇ ರಾಜನಾಗಿದ್ದು ಶ್ರೀರಾಮ 51ನೇ ರಾಜನಾಗಿ ಕಾಣಿಸಿಕೊಳ್ಳುತ್ತಾನೆ. ಎಂದರೆ ಒಬ್ಬ ರಾಜನ ಆಡಲಿತಾವಧಿ ಕನಿಷ್ಟ 15 ವರ್ಷ ಎಂದು ಗುಣಿಸಿದರೂ ಸರಿಸುಮಾರು 360ರಿಂದ 400 ವರ್ಷಗಳ ವ್ಯತ್ಯಾಸವಿರಲಿದೆ!!!

ಹಾಗೆಯೇ ಇಲ್ಲಿ ಇನ್ನೊಂದು ವಿಷಯ ಸಹ ಹೇಳಬೇಕಿದೆ. ವಿಶ್ವಾಮಿತ್ರನಿಗೆ ಆತ ಸಾಧನೆ ಮಾಡುವುದನ್ನು ತಡೆಯುವ ಸಲುವಾಗಿ ಅನೇಕ ಬಗೆಯ ಡ್ಡಿ ಆತಂಕಗಳನ್ನು ಇಂದ್ರ, ವಸಿಷ್ಟರು ಒಡ್ಡುದ್ದರೆನ್ನುವುದು ಎಲ್ಲರೂ ಒಪ್ಪಬೇಕಾಗಿರುವ ವಿಚಾರ. ಹಿನ್ನೆಲೆಯಲ್ಲಿ ವಿಶ್ವಾಮಿತ್ರ ಉತ್ತರದಿಂದ ದಕ್ಷಿಣದತ್ತ ಬರುತ್ತಾನೆ. ಇದು ತ್ರಿಶಂಕುವಿನ ಕಥೆಯಲ್ಲಿ ಸಹ ಉಲ್ಲೇಖವಾಗಿದೆ. ಎಂದರೆ ಸ್ವರ್ಗವಿರುವ, ವಸಿಷ್ಟ, ಇಂದ್ರಾದಿಗಳಿರುವ ಉತ್ತರ ಭಾಗದಲ್ಲಿ ವಿಶ್ವಾಮಿತ್ರನಿಗೆ ಸಾಧನೆಯ ಹಾದಿಯಲ್ಲಿ ಸಾಗುವುದಕ್ಕೆ ಅವರು ಬಿಡುತ್ತಿರಲಿಲ್ಲ. ಹಾಗಾಗಿ ವಿಶ್ವಾಮಿತ್ರ ಅವ್ರೆಲ್ಲರಿಂದ ದೂರವಾಗಿ ದಕ್ಷಿಣಕ್ಕೆ ಪ್ರಯಾಣಿಸಿ ಅಲ್ಲಿ ಸಾಧನೆ ಮಾಡಿದ್ದ. ದಕ್ಷಿಣದಲ್ಲಿ ಆತ ಕಂಡುಕೊಂಡ ವಿಶ್ವದ ಕಡೆಯ ಬಿಂದು ಹಾಗೂ ಅಲ್ಲಿ ಆತ ಕಂಡಿದ್ದ ದಕ್ಷಿಣದ ಸಪ್ತರ್ಷಿ ಮಂಡಲದ ಉಲ್ಲೇಖ ಇದಕ್ಕೆ ಸಾಕ್ಷಿ.

ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಆಲ್ಫಾ ಸೆಂಟೌರಿಯನ್ನು ಕಂಡುಕೊಂಡ ವಿಶ್ವಾಮಿತ್ರ ಭೂಮಿಯ ದಕ್ಷಿಣ ಬಾಗದಲ್ಲಿ (ಬಹುಶಃ ಇದು ಭಾರತದ ಆಚೆ ಈಗಿನ ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್ ಸಹ ಆಗಿರಬಹುದು) ಇದ್ದ. ಏಕೆಂದರೆ ಭೂಮಿಯ ತುದಿಯಿಂದ ಆಲ್ಫಾ ಸೆಂಟೌರಿ ಹಾಗೂ ಅದರ ಆಚಿನ ಆಕಾಶ ತುಸು ಸ್ಪಷ್ಟವಾಗಿ ಕಾಣಿಸುತ್ತದೆ!

ಒಂದೊಮ್ಮೆ ಆತ ದಕ್ಷಿಣಕ್ಕೆ ಹೋದವನು ಮತ್ತೆ ಉತ್ತರ ದಿಕ್ಕಿನೆಡೆ ಬಂದಿದ್ದರೂ ನಾಲ್ಕು ನೂರು ವರ್ಷಗಳ ಅಂತರದಲ್ಲಿ ಸಂಭವಿಸುವುದು ಅಸಾಧ್ಯ!!!

ಇನ್ನು ಕೌಶಿಕ ಹಾಗೂ ಅಪ್ಸರೆ ಮೇನಕೆಯ ಕಥೆಯಲ್ಲಿ ಬರುವ ವಿಶ್ವಾಮಿತ್ರನ ಕಾಲಮಾನ?? ಅದೂ ಸಹ ಬೇರೆಯಾಗಿದೆ ಎಂದು ನನ್ನ ಭಾವನೆ.

ಹೀಗೆ ಒಟ್ತಾರೆ ಹೇಳಬೇಕೆಂದರೆ ಭಾರತ ಇತಿಹಾಸ, ಪುರಾಣ ಕಥಾನಕಗಳಲ್ಲಿ ಬರುವ ಬ್ರಹ್ಮರ್ಷಿ ವಿಶ್ವಾಮಿತ್ರ ಒಬ್ಬನೇ ವ್ಯಕ್ತಿಯಲ್ಲ ಬದಲಿಗೆ ನಾಲ್ವರು ಇದ್ದಾರೆ!!

ಹಾಗಾದರೆ ನಾಲ್ವರು ವಿಶ್ವಾಮಿತ್ರರು ಯಾರು?

  • ಕೌಶಿಕನಾಗಿ ಅವೈಷ್ಟರ ಆಶ್ರಮಕ್ಕೆ ಬಂದು ಆಮಾನಿತನಾಗಿ ಸಾಧನೆಗೆ ಹೊರಟ ಹಾಗೂ ಮೇನಕೆಯ ಪಾಶಕ್ಕೆ ಸಿಕ್ಕು ಶಕುಂತಲೆಗೆ ಅಪ್ಪನಾದ ವಿಶ್ವಾಮಿತ್ರ
  • ತ್ರಿಶಂಕುವಿನ ಕಥೆ ಅಥವಾ ವಿಶ್ವದ ದಕ್ಷಿಣ ಬಿಂದುವನ್ನು (ದಕ್ಷಿಣದ ಸಪ್ತರ್ಷಿ ಮಂಡಲ ಹಾಗೂ ಆಲ್ಫಾ ಸೆಂಟೌರಿಯ ) ಕಂಡುಕೊಂಡ, ಹರಿಶ್ಚಂದ್ರನಿಗೆ ಸತ್ವಪರೀಕ್ಷೆಯನ್ನೊಡ್ಡಿದ ವಿಶ್ವಾಮಿತ್ರ
  • ರಾಮನಿಗೆ ಗುರುವಾಗಿ ಬಂದು ತಾಟಕಿಯ ಸಂಹಾರಕ್ಕೆ ಕಾರಣವಾದ, ಜನಕರಾಜನ ಆಸ್ಥಾನಕ್ಕೆ ಕರೆದೊಯ್ದ, ಅಹಲ್ಯೆಯ ಶಾಪ ವಿಮೋಚನೆ ಮಾಡಿಸಿದ ವಿಶ್ವಾಮಿತ್ರ
  • ಋಗ್ವೇದದ ಮೂರನೇ ಮಂಡಲ ರಚನೆಗಾರ, ಗಾಯತ್ರಿ ಮಂತ್ರ ಕಂಡುಕೊಂಡ ವಿಶ್ವಾಮಿತ್ರ

ಆದರೆ ನಾನು ಹಿಂದಿನ ಬಲಿ-ವಾಮನನ ಲೇಖನದಲ್ಲಿ ಬರೆದಂತೆಯೇ  ಪುರಾತನ ಕಾಲದ ಭಾರತೀಯರು ಅನೇಕರನ್ನು -ಸ್ಪಷ್ತವಾಗಿ ಹೇಳುವುದಾದರೆ ಒಂದು ಸಮುದಾಯದವರನ್ನು ಒಬ್ಬನೇ ವ್ಯಕ್ತಿ ಎಂದು ಹೆಸರಿಸಿಬಿಡುತ್ತಾರೆ. ಬಲಿ ಎನ್ನುವ ಹೆಸರಿನ ಅನೇಕರು ಭಾರತದಲ್ಲಿದ್ದರಾದರೂ ವಾಮನನ ಕಥೆಯಲ್ಲಿ ಮಹಾಬಲಿಯನ್ನು ಒಬ್ಬನೆಂದು ಹೇಗೆ ತೋರಿಸಿದ್ದರೋ ವಿಶ್ವಾಮಿತ್ರನ ವಿಚಾರದಲ್ಲಿಯೂ ಹಾಗೆಯೇ ಆಗಿದೆಬೇರೆ ಬೇರೆ ಕಾಲಘಟ್ಟದಲ್ಲಿ ಬದುಕಿದ್ದ ವಿಶ್ವಾಮಿತ್ರರ ಕಥೆಯನ್ನೆಲ್ಲಾ ಒಟ್ಟಾಗಿ ಕೂಡಿಸಿ ಒಬ್ಬ ವಿಶ್ವಾಮಿತ್ರನನ್ನಾಗಿ ಮಾಡಿಕೊಂಡಿದ್ದಾರೆ ಎನ್ನುವುದು ನನ್ನ ಮತ.

ಅದೇನಾಗಿದ್ದರೂ ಸರಿ ವಿಶ್ವಾಮಿತ್ರನ ಜೀವನ ಮಾತ್ರ ನಮಗೆ ಮಾದೈಯಾಗುವುದು ಖಚಿತ. ಮಾನವನು ತನ್ನ ಇಚ್ಚಾಶಕ್ತಿಯಿಂದ ಏನನ್ನಾದರೂ ಸಾಧಿಸಬಹುದು ಎನ್ನಲು ಮಹರ್ಷಿಯ ಜೀವನ ಉತ್ತಮ ಉದಾಹರಣೆಯಾಗಿ ನಿಲ್ಲುತ್ತದೆ

ಶುಭಂ

No comments:

Post a Comment