Saturday, November 12, 2022

ರಾಜ ಬಿಂಬಿಸಾರ ಕಂಡ ಭವಿತವ್ಯದ ಕನಸುಗಳು

 ಕ್ರಿ.ಪೂ. 1852-1814ರ ಅವಧಿಯಲ್ಲಿ 38 ವರ್ಷಗಳ ಕಾಲ ಮಗಧ ಸಾಮ್ರಾಜ್ಯವನ್ನು ಆಳಿದ ಶೈಶುಂಗ ರಾಜವಂಶದ ರಾಜ ಬಿಂಬಿಸಾರ ಗೌತಮ ಬುದ್ಧನ (ಕ್ರಿ.ಪೂ.  1887 - 1807) ಸಮಕಾಲೀನನಲ್ಲಿ ಒಬ್ಬ,  ಒಂದು ರಾತ್ರಿ ಬಿಂಬಿಸಾರನು ವಿಚಿತ್ರವಾದ ಕನಸುಗಳನ್ನು ಕಂಡನು ಮತ್ತು ಅವನು ತನ್ನ ರಾಜ್ಯದಲ್ಲಿ ಬ್ರಾಹ್ಮಣರನ್ನು ತನಗಾಗಿ ವಿವರಿಸಲು ಕೇಳಿದನು. ಆಗ ಆ ಬ್ರಾಹ್ಮಣರು ತಾವು ಮಹಾರಾಜನಿಂದ ಹಣವನ್ನು ಪಡೆದುಕೊಳ್ಳಲು ಇದೊಂದು ಅವಕಾಶ ಎಂದು ಭಾವಿಸಿ ಕೆಟ್ಟ ಕನಸುಗಳು ಅಪಾಯಕಾರಿ ಎಂದು ಅವನನ್ನು ಭಯಪಡಿಸಿದರು. ಆ ಕನಸುಗಳು ಅವನ ಹಾಗೂ  ವನ ರಾಜವಂಶ, ರಾಜ್ಯ ಮತ್ತು ಮುಂದಿನ ಭವಿಷ್ಯದಲ್ಲಿ ಜನರಿಗೆ ಹಾನಿಯನ್ನುಂಟುಮಾಡುತ್ತದೆ.


ಆ ಅಪಾಯಗಳನ್ನು ನಿವಾರಿಸಲು ರಾಜನು ಪರಿಹಾರಕ್ಕಾಗಿ ರಾಜ್ಯದೆಲ್ಲೆಡೆ ಪ್ರಮುಖ ವೃತ್ತಗಳು, ಅಡ್ಡ ರಸ್ತೆಗಳಲ್ಲಿ ಹೋಮ, ಹವನ ನಡೆಸಬೇಕು ಎಂದರು. ಅಂತಹ ಎಲ್ಲಾ ಯಜ್ಞಗಳನ್ನು ಮಾಡಿದ ನಂತರ, ನಮಗೆ ಅನ್ನ, ಚಿನ್ನ ಮತ್ತು ಹಣವನ್ನು ದಾನ ಮಾಡಿ. ಇದು ನಿಮ್ಮ ಕನಸಿನ ಎಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ಒದಗಿಸುತ್ತದೆ ಎಂದರು. ಈ ಬಗ್ಗೆ ಎರಡನೇ ಆಲೋಚನೆ ಮಾಡದ ಬಿಂಬಿಸಾರನು ತನ್ನ ಖಜಾಂಚಿಯನ್ನು ಕರೆದು ಪಂಡಿತರು ಕೇಳಿದ್ದಕ್ಕೆ ಹಣವನ್ನು ಖರ್ಚು ಮಾಡಲು ಆದೇಶಿಸಿದನು.

ಆದರೆ ಬಿಂಬಿಸಾರನ ಪತ್ನಿ, ಪಟ್ಟದ ರಾಣಿ ಕೋಸಲಾ ದೇವಿಯು ಈ ವಿಷಯ ತಿಳಿದು ತನ್ನ ಪತಿಗೆ ಹಣವನ್ನು ಖರ್ಚು ಮಾಡದಂತೆ ಎಚ್ಚರಿಸಿದಳು. ಈ ಕೋಸಲ ದೇವಿಯು ಕೋಸಲದ ರಾಜ ಮಹಾ-ಕೋಸಲನಿಗೆ ಜನಿಸಿದವಳು.  ವಳು ತನ್ನ ತಂದೆಯ ನಂತರ ಕೋಸಲದ ಆಡಳಿತಗಾರನಾದ ಪ್ರಸೇನಜಿತ್ ರಾಜನ ಸೋದರಿ.  ವಳು ರಾಜ ಬಿಂಬಿಸಾರನನ್ನು ಮದುವೆಯಾಗಿದ್ದಳು ಮತ್ತು ಮದುವೆಯಲ್ಲಿ ಕಾಶಿ ರಾಜ್ಯವನ್ನು ಕೊಡುಗೆಯಾಗಿ ತಂದಿದ್ದಳು. ಆಕೆ "ಈ ಬ್ರಾಹ್ಮಣರಿಗೆ ಸಾಕಷ್ಟು ಜ್ಞಾನವಿಲ್ಲ ಮತ್ತು ಸಂಪೂರ್ಣ ಜ್ಞಾನಿಯಾಗಿರುವ ಬುದ್ಧ, ಪ್ರಸ್ತುತ ಭಾರತದಲ್ಲಿದ್ದಾನೆ." ಎನ್ನುತ್ತಾಳೆ. ಬುದ್ಧನು ಮಗಧದ 31, 32 ಮತ್ತು 33 ನೇ ರಾಜರಾದ ಕ್ಷೇಮಜಿತ್, ಬಿಂಬಿಸಾರ ಮತ್ತು ಅಜಾತಶತ್ರುಗಳ ಸಮಕಾಲೀನನಾಗಿದ್ದನು. ಬುದ್ಧನನ್ನು ಭೇಟಿ ಮಾಡಲು ಮತ್ತು ಬಿಂಬಿಸಾರನು ತನ್ನ ಕನಸುಗಳನ್ನು ಅವನೊಂದಿಗೆ ಹಂಚಿಕೊಳ್ಳಲು ರಾಣಿ ಕೇಳುತ್ತಾಳೆ. ಬುದ್ಧನು ಈ ಯಜ್ಞಗಳನ್ನು ಶಿಫಾರಸ್ಸು ಮಾಡಿದರೆ ಮಾತ್ರ ರಾಜನು ಅವುಗಳನ್ನು ನಡೆಸಬೇಕು ಎನ್ನುತ್ತಾಳೆ. ಬಿಂಬಿಸಾರ ಇದಕ್ಕೆ ಒಪ್ಪಿ ಬುದ್ಧನನ್ನು ಬಿಕ್ಷೆಗಾಗಿ ತನ್ನ ಅರಮನೆಗೆ ಆಹ್ವಾನಿಸುತ್ತಾನೆ.

ರಾಜನು  ತನ್ನ ಕನಸುಗಳನ್ನು ವಿವರಿಸುತ್ತಾನೆ ಮತ್ತು ಬುದ್ಧ ಪ್ರತಿಯೊಂದನ್ನು ಅರ್ಥೈಸುತ್ತಾನೆ, ಅವುಗಳಲ್ಲಿ ಯಾವುದೂ ರಾಜನಿಗೆ ಅಥವಾ  ಅವನ ಇಂದಿನ ಪೀಳಿಗೆಗೆ ಸಂಬಂಧಿಸಿಲ್ಲ ಎಂದು ಹೇಳುತ್ತಾನೆ. ಈ ಎಲ್ಲಾ ಕನಸುಗಳು ಭವಿಷ್ಯದವು ಎಂದಾಗ ಬಿಂಬಿಸಾರ ನಿರಾಳನಾಗುತ್ತಾನೆ.

ಮೊದಲ ಕನಸಿನಲ್ಲಿ, ಬಿಂಬಿಸಾರನು 4 ಗೂಳಿಗಳು ನನ್ನ ಅರಮನೆಯನ್ನು ಕೋಪದಿಂದ ಪ್ರವೇಶಿಸುವುದನ್ನು ನೋಡಿದನು. ಅವು ಕೋಪದಲ್ಲಿ ಕಾಳಗ ಮಾಡುತ್ತವೆ ಎಂದು ಭಾವಿಸಿದನು. ಆದರೆ ಅವು ಇದ್ದಕ್ಕಿದ್ದಂತೆ ಶಾಂತವಾದವು. ಮತ್ತು ಮೌನವಾಗಿ ಹಿಂದಕ್ಕೆ ಹೋದವು.  ಈ ಕನಸಿಗೂ ವರ್ತಮಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬುದ್ಧ ವಿವರಿಸುತ್ತಾನೆ. ಭವಿಷ್ಯದಲ್ಲಿ, ಆಡಳಿತಗಾರರು ದುಷ್ಟರಾಗುತ್ತಾರೆ ಮತ್ತು ಪರಿಣಾಮವಾಗಿ, ಮಳೆಗಾಲದಲ್ಲಿ ಮೋಡಗಳು ಆಗಸದಲ್ಲಿ ಕಾಣಿಸಿಕೊಂಡಾಗ ಜನ ಮಳೆಯು ಸುರಿಯಲಿದೆ ಎಂದು ಭಾವಿಸುತ್ತಾರೆ ಆದರೆ ಎಲ್ಲಾ ಮೋಡಗಳು ಮಳೆ ಸುರಿಸದೆ ಹಾಗೇ ಹಾರಿ ಹೋಗುತ್ತದೆ, ಜನರು ನಿರಾಶರಾಗುತ್ತಾರೆ.

ಎರಡನೇ ಕನಸಿನಲ್ಲಿ ಬಿಂಬಿಸಾರನು ಕೆಲವು ಸಸ್ಯಗಳು ಮಣ್ಣಿನಲ್ಲಿ ಬೆಳೆಯುತ್ತಿರುವುದನ್ನು ನೋಡಿದನು ಮತ್ತು ಪೂರ್ಣವಾಗಿ ಬೆಳೆಯುವ ಮುನ್ನವೇ ಹೂವು ಅರಳಿತು,, ಹಣ್ನಾಗಿತ್ತು.  ಇದರಂತೆ  ಭವಿಷ್ಯದಲ್ಲಿ, ರಾಜರ ದುಷ್ಕೃತ್ಯಗಳಿಂದಾಗಿ, ಮಹಿಳೆಯರು ಬಾಲ್ಯದಲ್ಲಿ ಮದುವೆಯಾಗುತ್ತಾರೆ ಮತ್ತು ಅವರು ಸರಿಯಾದ ಪ್ರೌಢಾವಸ್ಥೆಯನ್ನು ತಲುಪುವ ಮೊದಲು ಮಕ್ಕಳನ್ನು ಹೊಂದುತ್ತಾರೆ ಎಂದು ಬುದ್ಧ ವಿವರಿಸಿದರು. ವಿದೇಶಿಗರ (ಮುಸ್ಲಿಮರ)  ಆಕ್ರಮಣ ನಡೆಯುವವರೆಗೂ ಬಾಲ್ಯವಿವಾಹಗಳು ಪ್ರಾಚೀನ ಭಾರತದಲ್ಲಿ ಇರಲಿಲ್ಲ ಎಂಬುದನ್ನು ಇದು ಸಾಬೀತುಪಡಿಸುತ್ತದೆ.

ಮೂರನೇ  ಕನಸಿನಲ್ಲಿ ಹಸುಗಳು ಕರುಗಳಿಂದ ಹಾಲು ಕುಡಿಯುವುದನ್ನು ಕಂಡನು. ಭವಿಷ್ಯದಲ್ಲಿ ವಯಸ್ಸಾದವರು ‘ವಾನಪ್ರಸ್ಥ’ಕ್ಕೆ ಹೋಗುವ ಬದಲು ಮನೆಯಲ್ಲಿಯೇ ಇರುತ್ತಾರೆ ಮತ್ತು ತಮ್ಮ ಆಹಾರ ಮತ್ತು ಯೋಗಕ್ಷೇಮಕ್ಕಾಗಿ ಕಿರಿಯರನ್ನು ಅವಲಂಬಿಸಿರುತ್ತಾರೆ ಎಂದು ಬುದ್ಧ ವಿವರಿಸುತ್ತಾನೆ. ತಂದೆ ತಾಯಿಗಳು ವಾನಪ್ರಸ್ಥಕ್ಕೆ ತೆರಳುವ ಸಂಪ್ರದಾಯ  ಇಕ್ಷ್ವಾಕು ವಂಶದಲ್ಲಿ ದಶರಥನು ಮನೆಯಲ್ಲಿ ಸಾಯುವವರೆಗೂ ಇತ್ತು. ಆಗಿನ ಕಾಲದಲ್ಲಿ ವೃದ್ಧರು ತೀರ್ಥಯಾತ್ರೆಗೆ ಹೋಗಿ ತಾವಾಗಿಯೇ ಬದುಕುವಷ್ಟು ಸದೃಢರಾಗಿದ್ದರು.

ನಾಲ್ಕನೇ ಕನಸಿನಲ್ಲಿ, ರೈತರು ಆರೋಗ್ಯಕರ ಮತ್ತು ಬಲವಾದ ಎತ್ತುಗಳ ಬದಲು  ಹೊಲಗಳನ್ನು ಉಳುಮೆ ಮಾಡಲು ಕರುಗಳನ್ನು ಬಳಸುತ್ತಿದ್ದರು.

ಭ್ರಷ್ಟ ರಾಜರು ದಕ್ಷ ಮಂತ್ರಿಗಳನ್ನು ತೆಗೆದುಹಾಕುತ್ತಾರೆ ಮತ್ತು ಸಾಮಾನ್ಯ ಜ್ಞಾನದ ಕೊರತೆಯಿರುವ ಯುವಕರನ್ನು ಆ ಸ್ಥಾನಗಳಲ್ಲಿ ನೇಮಿಸಿಕೊಳ್ಳುತ್ತಾರೆ ಎಂದು ಬುದ್ಧ ವಿವರಿಸುತ್ತಾನೆ.

ಐದನೇ ಕನಸಿನಲ್ಲಿ, ಮುಂಭಾಗ ಮತ್ತು ಹಿಂಭಾಗದಲ್ಲಿ 2 ತಲೆಗಳನ್ನು ಹೊಂದಿರುವ ಕುದುರೆಯು ಎರಡೂ ಕಡೆಗಳಿಂದ ಹುಲ್ಲು ತಿನ್ನುತ್ತಿತ್ತು. ಭವಿಷ್ಯದಲ್ಲಿ, ನ್ಯಾಯಾಧೀಶರು ಎರಡೂ ಪಕ್ಷಗಳಿಂದ ಲಂಚವನ್ನು ತೆಗೆದುಕೊಳ್ಳುತ್ತಾರೆ ಮತ್ತು ಯಾರಿಗೂ ನ್ಯಾಯ ಸಿಗುವುದಿಲ್ಲ ಎಂದು ಗೌತಮ ಬುದ್ಧ ವಿವರಿಸುತ್ತಾನೆ.

ಆರನೇ ಕನಸಿನಲ್ಲಿ, ಒಬ್ಬ ಮನುಷ್ಯನು ಹಗ್ಗವನ್ನು ನೇಯುತ್ತಿದ್ದಾನೆ ಮತ್ತು ನೆಲದ ಮೇಲೆ ನೇಯ್ದ ಭಾಗವನ್ನು ಹೆಣ್ಣು ನರಿ ತಿನ್ನುತ್ತಿರುತ್ತದೆ. ದುಷ್ಟ ಮಹಿಳೆಯರು ತಮ್ಮ ಗಂಡನ ದುಡಿಮೆಯ ಹಣವನ್ನು ತಕ್ಷಣವೇ ಖರ್ಚು ಮಾಡುತ್ತಾರೆ ಎಂದು ಬುದ್ಧ ವಿವರಿಸುತ್ತಾನೆ.

ಏಳನೇ ಕನಸಿನಲ್ಲಿ, ದೊಡ್ಡ ಮಡಕೆಯನ್ನು ಅರಮನೆಯ ಹೊರಗೆ ಇಡಲಾಗುತ್ತದೆ. ಅದರ ಸುತ್ತಲೂ ಅನೇಕ ಸಣ್ಣ ಖಾಲಿ ಮಡಕೆಗಳಿವೆ. ಮಹಿಳೆಯರು ನೀರು ತುಂಬಿದ ಮಡಕೆಗಳೊಂದಿಗೆ ನಡೆದು  ದೊಡ್ಡ ಮಡಕೆಗೆ ಸುರಿಯಲು ಪ್ರಾರಂಭಿಸುತ್ತಾರೆ.

ಅದು ಉಕ್ಕಿ ಹರಿಯಲು ಪ್ರಾರಂಭಿಸಿದ ನಂತರವೂ, ಮಹಿಳೆಯರು ಅದರಲ್ಲಿ ನೀರನ್ನು ಸುರಿಯುತ್ತಾರೆ ಆದರೆ ಸುತ್ತಲಿನ ಖಾಲಿ ಮಡಕೆಗಳನ್ನು ನಿರ್ಲಕ್ಷಿಸುತ್ತಾರೆ.

ಭವಿಷ್ಯದಲ್ಲಿ ಅಧರ್ಮವು ಹೆಚ್ಚಾದಾಗ ಆಡಳಿತಗಾರರು ಪ್ರಜೆಗಳ ಮೇಲೆ ಭಾರಿ ತೆರಿಗೆ ವಿಧಿಸುತ್ತಾರೆ ಎಂದು ಬುದ್ಧ ಹೇಳುತ್ತಾನೆ. ಜನರು ಖಜಾನೆಯನ್ನು ತುಂಬುತ್ತಾರೆ ಮತ್ತು ತಮ್ಮ ಬಳಿ ಹಣವಿಲ್ಲದೆ ಕಷ್ಟಪಡುತ್ತಾರೆ ಎನ್ನುತ್ತಾನೆ ಬುದ್ದ.

ಎಂಟನೇ ಕನಸಿನಲ್ಲಿ, ರಾಜನು ಅಕ್ಕಿ ಬೇಯಿಸುವ ಪಾತ್ರೆಯನ್ನು ನೋಡಿದನು. ಅಕ್ಕಿಯ ಒಂದು ಭಾಗವು ಬೆಂದಿದ್ದರೆ ಇನ್ನೊಂದು ಭಾಗ ಸರಿಯಾಗಿ ಬೆಂದಿರುವುದಿಲ್ಲ.  ಭ್ರಷ್ಟ ಮತ್ತು ಅಸಮರ್ಥ ರಾಜರು ಪ್ರವಾಹ ಮತ್ತು ಕ್ಷಾಮಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಬುದ್ಧ ಹೇಳುತ್ತಾನೆ. ಪಾತ್ರೆಯಲ್ಲಿರುವ ಅಕ್ಕಿ ಕೃಷಿಯನ್ನು ಸೂಚಿಸುತ್ತದೆ. ಕೆಲವು ಸ್ಥಳಗಳಲ್ಲಿ ಅತಿವೃಷ್ಟಿಯು ಬೆಳೆಗಳನ್ನು ನಾಶಪಡಿಸುತ್ತದೆ, ಆದರೆ ಕೆಲವು ಪ್ರದೇಶಗಳಲ್ಲಿ ಮಳೆಯಿಲ್ಲದೆ ಬರಗಾಲಕ್ಕೆ ಕಾರಣವಾಗುತ್ತದೆ. ಸರಿಯಾದ ಆಹಾರ ಉತ್ಪಾದನೆಯನ್ನು ಕೆಲವು ಪ್ರದೇಶಗಳಲ್ಲಿ ಮಾತ್ರ ಕಾಣಬಹುದು.

ಒಂಬತ್ತನೇ ಕನಸಿನಲ್ಲಿ, ರಾಜನು  ಬೀದಿಗಳಲ್ಲಿ ಶ್ರೀಗಂಧವನ್ನು ಮಾರುವ ಜನರನ್ನು ಕಂಡರು. ಭವಿಷ್ಯದಲ್ಲಿ ಕೆಲವು ಜನರು ಹಣ ಮತ್ತು ಸೌಕರ್ಯಗಳ ವಿನಿಮಯಕ್ಕಾಗಿ ಪವಿತ್ರ ಜ್ಞಾನ ಮತ್ತು ಉಪದೇಶಗಳನ್ನು ಮಾರಾಟ ಮಾಡುತ್ತಾರೆ ಎಂದು ಬುದ್ಧ ಹೇಳುತ್ತಾನೆ.

ಹತ್ತನೇ ಕನಸಿನಲ್ಲಿ, ನೀರಿನ ಮೇಲೆ ಭಾರವಾದ ಕಲ್ಲುಗಳು ತೇಲುತ್ತಿರುವುದನ್ನು ಕಂಡನು. ಹನ್ನೊಂದನೇ ಕನಸಿನಲ್ಲಿ, ಹಂಸಗಳ ಗುಂಪು ಕಾಗೆಯನ್ನು ಹಿಂಬಾಲಿಸಿತು. ಹನ್ನೆರಡನೇ ಕನಸಿನಲ್ಲಿ, ಆಡುಗಳು ಹುಲಿಗಳನ್ನು ಬೇಟೆಯಾಡಿದವು ಮತ್ತು ಇದನ್ನು ನೋಡಿ ತೋಳಗಳು ಭಯದಿಂದ ನಡುಗಿದವು.

ಇವೆಲ್ಲವೂ ಭವಿಷ್ಯವನ್ನು ಸೂಚಿಸುವ ನಸುಗಳು ಎಂದು ಬುದ್ಧ ಹೇಳುತ್ತಾನೆ. ಭ್ರಷ್ಟ ಆಡಳಿತಗಾರರಿಂದ ಮನ್ನಣೆಯ ಕೊರತೆಯಿಂದ ಹೆಚ್ಚಿನ ಪ್ರತಿಭಾವಂತ ಮತ್ತು ಬುದ್ಧಿವಂತ ಪುರುಷರು ಸಮಯದೊಂದಿಗೆ ಸರಿದು ಹೋಗುತ್ತಾರೆ.  ದುಷ್ಟ ಜನರು ಅಧಿಕಾರವನ್ನು ಪಡೆಯುತ್ತಾರೆ, ಇದು ಅರ್ಹ ವ್ಯಕ್ತಿಗಳು ಅವರ ಆದೇಶಗಳನ್ನು ಅನುಸರಿಸುವಂತೆ ಮಾಡುತ್ತದೆ. ಹೆಚ್ಚಿನ ಅನರ್ಹರು ಅಧಿಕಾರವನ್ನು ಪಡೆದಾಗ, ಅತ್ಯಂತ ಶಕ್ತಿಶಾಲಿ ಮತ್ತು ಒಳ್ಳೆಯ ಪುರುಷರು ಸಹ ಅವರಿಗೆ ಭಯಪಡಬೇಕಾಗುತ್ತದೆ. ಅವರೂ ಹೊರನಡೆಯಬೇಕಾಗುವುದು.

ಈ ಕನಸಿನ ವ್ಯಾಖ್ಯಾನಗಳನ್ನು ಆಲಿಸಿದ ರಾಜ ಬಿಂಬಿಸಾರನು ತನ್ನ ಹವನ ಯೋಜನೆಗಳನ್ನು ಕೈಬಿಡುತ್ತಾನೆ.  ಗೌತಮ ಬುದ್ಧನಿಗೆ ಬಿಕ್ಷೆಯನ್ನು ಅರ್ಪಿಸುತ್ತಾನೆ.

ಈ ಪ್ರಸಂಗವು ಗೌತಮ ಬುದ್ಧನ 'ಜಾತಕ ಕಥೆಗಳು' ಭಾಗಗಳಲ್ಲಿ ದಾಖಲಾಗಿದೆ.