ನೀಲಾವರ (Neelavara)
ನೀಲಾವರವು ಕರ್ನಾಟಕದ ಉಡುಪಿ ಜಿಲ್ಲೆಯ ಒಂದು ಹಳ್ಳಿ. ಬ್ರಹ್ಮಾವರದಿಂದ ೭ ಕಿಲೋಮೀಟರ್ ದೂರದಲ್ಲಿ ನೀಲಾವರವಿದೆ ಮತ್ತು ಕುಂಜಾಲುವಿನಿಂದ ೩ ಕಿಲೋಮೀಟರ್ ದೂರದಲ್ಲಿದೆ.
ಹೆಬ್ರಯಿಂದ ಬ್ರಹ್ಮಾವರಕ್ಕೆ ಬರುವ ರಸ್ತೆಯಲ್ಲಿ ನೀಲಾವರ ಸಿಗುತ್ತದೆ. ನೀಲವರ ಸರಿಸುಮಾರು ಉತ್ತರದಲ್ಲಿಅ ಸೀತಾ ನದಿ ಮತ್ತು ದಕ್ಷಿಣಕ್ಕೆ ಕುಂಜಾಲು ಗ್ರಾಮದ ನಡುವೆ ಇದೆ. ಮೂಲತಃ ಇದು ನೀರಾವರವಾಗಿತ್ತು, (ಅಂದರೆ ನೀರಿನಿಂದ ಆವೃತವಾಗಿರುವುದು ಎಂದು ಅರ್ಥ ನೀಡುತ್ತದೆ) ಆದರೆ ನಂತರದ ದಿನಗಳಲ್ಲಿ ಇದು ನೀಲಾವರವಾಗಿ ಮಾರ್ಪಟ್ಟಿತು.
ಮಹಿಷಾಮಾರ್ದಿನಿ, ಗಣಪತಿ, ಸುಬ್ರಹ್ಮಣ್ಯ, ಕಲ್ಲುಕುಟ್ಟಿಗ ಮತ್ತು ವೀರಭದ್ರ ನೀಲಾವರದ ಕೆಲವು ಪವಿತ್ರ ದೇವಾಲಯಗಳು. ನೀಲಾವರದಲ್ಲಿ ಉಡುಪಿಯ ಪೇಜಾವರ ಮಠದವರು ಗೋಶಾಲೆಯನ್ನು ನಿರ್ಮಿಸಿದ್ದಾರೆ.
***
ನಾಗಲೋಕದ ಶ್ರೀ ಶಂಕಚೂಡನೆಂಬ ನಾಗರಾಜನಿಗೆ ವರಪ್ರಸಾದದಿಂದ ಜನಿಸಿದ ದೇವರತಿ, ನಾಗರತಿ, ಚಾರುರತಿ, ಮಂದರತಿ ಮತ್ತು ನೀಲರತಿ ಎಂಬ ಐದು ಜನ ಹೆಣ್ಣುಮಕ್ಕಳು ಮಹೇಶ್ವರನ ಮಗ ಸುಬ್ರಮಣ್ಯಸ್ವಾಮಿಯನ್ನು ವಿವಾಹವಾಗುವ ಹಂಬಲದಿಂದ, ಸುಬ್ರಮಣ್ಯಸ್ವಾಮಿಯನ್ನು ಕಾಣಲು ಕೈಲಾಸಕ್ಕೆ ತೆರಳಿ ಅಲ್ಲಿಯ ದ್ವಾರಪಾಲಕ ನಂದಿಯ ಶಾಪದಿಂದಾಗಿ ಸರ್ಪರೂಪದಲ್ಲಿ ಭೂಲೋಕ ಸಹ್ಯಾದ್ರಿಪರ್ವತದ ಕಾಡ್ಗಿಚ್ಚಿನಲ್ಲಿಸಿಕ್ಕು ಪರಿತಪಿಸುತ್ತಿದ್ದರು. ಮಹರ್ಷಿಗಳು ಸಹ್ಯಾದ್ರಿಪರ್ವತದ ಬಳಿ ಸಂಚರಿಸುವಾಗ ಅವರನ್ನು ನೋಡಿದ ನಾಗಕನ್ಯೆಯರು ಅವಸರವಾಗಿ ಓಡಾಡಿದಾಗ ಉಂಟಾದ ಭರಭರ ಶಬ್ದಕ್ಕೆ ಹೌಹಾರಿದ ಮಹರ್ಷಿಗಳಿಂದ, ಗತಿ ಕುಂಟಿತವಾಗಿ ಬಿದಿರು ಮಳೆಗೆ ಶೀಮಿತವಾಗಿರುವಂತಹ ಶಾಪಕ್ಕೆ ಆ ನಾಗಕನ್ಯೆಯರು ಗುರಿಯಾಗುತ್ತಾರೆ. ರಾಜಪುರುಷನೊಬ್ಬನಿಂದ ಶಾಪ ವಿಮೋಚನೆಯಾಗುವದೆಂದು ಮಹರ್ಷಿಗಳು ಹರಸಿದಂತೆ ಆವಂತಿಯ ರಾಜ ದೇವವರ್ಮನು ರಾಜ್ಯಬ್ರಷ್ಠನಾಗಿ ವೇಷ ಮರೆಸಿಕೊಂಡು ಸಹ್ಯಾದ್ರಿ ಪರ್ವತದಲ್ಲಿ ತಿರುಗಿದಾಗ ಕಾಡ್ಗಿಚ್ಚಿನಲ್ಲಿ ಬೆಂದು ಹೋಗುತ್ತಿರುವ ಐದು ಸರ್ಪಗಳನ್ನು ಉಳಿಸಿ ಅವುಗಳನ್ನು ಒಂದು ಬಟ್ಟೆಯಲ್ಲಿ ಸುತ್ತಿಕೊಂಡು ಪಶ್ಚಿಮಾಭಿಮುಖವಾಗಿ ಹೋಗುತ್ತಿರುವಾಗ ಆ ಸರ್ಪಗಳು ಒಂದೊಂದಾಗಿ ಹುತ್ತದಲ್ಲಿ ಸೇರಿದವು. ಅವುಗಳಲ್ಲಿ ನೀಲರತಿ ನಾಗ ಸರ್ಪವು ಸೇರಿದ ಜಾಗವೇ ನೀಲಾವರ ಕಾನನವೆಂಬ ಹೆಸರಾಯಿತು.
ಕಾಲಾನಂತರದಲ್ಲಿ ಆ ನಾಗ ಕನ್ಯೆಯರು ದೇವವರ್ಮ ರಾಜನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ತಿಳಿಸಿದಂತೆ ದೇವವರ್ಮ ರಾಜನು, ಹೆಮಾದ್ರಿಯ ರಾಜಾದಿತ್ಯನ ಏಕೈಕ ಪುತ್ರಿ ಜಲಜಾಕ್ಷಿಯನ್ನ ಪ್ರಾಣಾಪಾಯದಿಂದ ಬದುಕಿಸಿದ್ದಕ್ಕೆ ಆ ರಾಜನು ರಾಜ್ಯವನ್ನು ಹಾಗೂ ಮಗಳನ್ನು ದಾರೆಯೆರೆಯುತ್ತಾನೆ.
ಹೀಗೆ ಮುಂದೆ ಪಂಚಕನ್ಯೆಯರು ಪಂಚ ಸ್ಥಳದಲ್ಲಿ ನೆಲೆಸಿದರು. ಈ ನಾಗಕನ್ಯೆಯರು ನೆಲೆಸಿದ ಸ್ಥಳಗಳು ಪಂಚ ನಾಗಸ್ಥಳಗಳಾಗಿ ಶಕ್ತಿ ಸ್ಥಳವಾಗಿ ಮಾರ್ಪಟ್ಟವು. ಕೊನೆಯವಳಾದ ನೀಲರತಿಯು ನೆಲೆಸಿನಿಂದ ನೀಲಾವರದ ಪಂಚಮಿಕಾನು ಎಂಬ ಸ್ಥಳದಲ್ಲಿ ಬೃಹತ್ ಗಾತ್ರದ ಹುತ್ತಗಳು ಬೆಳೆದು ನಿಂತಿದೆ. ಅದೇ ರೀತಿಯಲ್ಲಿ ಅಲ್ಲಿ ಸರ್ವಮಂಗಳೆಯಾದ ದುರ್ಗಾದೇವಿಯು ನೆಲೆಸಿ ನಾಗಕನ್ನಿಕೆಯರ ಶಕ್ತಿಯನ್ನು ಇಮ್ಮಡಿಗೊಳಿಸುತ್ತಾಳೆ.
No comments:
Post a Comment