-ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡನಾಡು ಕಂಡ ಅತ್ಯಂತ ಅಪರೊಪದ ಸಾಹಿತಿಗಳಲ್ಲಿ ಒಬ್ಬರೆಂದರೆ ಪ್ರೊ. ಕೆ.ವಿ. ಅಯ್ಯರ್. ವೃತ್ತಿಯಿಂದ ದೈಹಿಕ ಶಿಕ್ಷಣ ತಜ್ಞರಾದರೂ ಪ್ರವೃತ್ತಿಯಿಂದ ಸಾಹಿತಿಗಳಾಗಿದ್ದವರು. ಬಡತನದಿಂದಾಗಿ ಬೆಂಗಳೂರಿನ ಹೋಟೆಲಿನಲ್ಲಿ ಇಡ್ಲಿ, ದೋಸೆ ಹಿಟ್ಟು ರುಬ್ಬುತ್ತಿದ್ದ ಕೈಗಳು, ಲೇಖನಿ ಹಿಡಿದು ಶಾಂತಲಾ, ರೂಪದರ್ಶಿ, ಲೀನಾದಂತಹ ಉತ್ಕೃಷ್ಟ ಕಾದಂಬರಿಗಳನ್ನು ಸಮುದ್ಯತಾ"ದಂತಹ ಅನನ್ಯ ಕಥಾಸಂಕಲನಗಳನ್ನು ರಚಿಸಿ ಕನ್ನಡದ ಓದುಗರ ಮನೆ ಮನಗಳನ್ನು ಸೂರೆಗೈದ ಪ್ರಸಂಗವೇ ಅದ್ಭುತ. ರೋಚಕ. ಕೆ.ವಿ. ಅಯ್ಯರ್ ಉಪನ್ಯಾಸಕರು ಅಂಗ ಸಾಧನೆ ಇವರ ಪ್ರಮುಖ ಹವ್ಯಾಸಗಳಲ್ಲೊಂದು . ಮತ್ತು ರಂಗ ಚಟುವಟಿಕೆಗಳಲ್ಲಿ ಸಹ ಇವರು ಸಕ್ರಿಯರಾಗಿರುತ್ತಿದ್ದರು. ಅಂಗಸಾಧನೆಯಿಂದ ಹೆಚ್ಚು ಜನಪ್ರಿಯರಾಗಿ ಹಲವಾರು ಶಿಷ್ಯರನ್ನು ಸಂಪಾದಿಸಿದರು.. ಅವರು ಕಾದಂಬರಿ ಕ್ಷೇತ್ರಕ್ಕೆ ಬಂದಿದ್ದೇ ಒಂದು ಆಕಸ್ಮಿಕ. ಕಾದಂಬರಿ ಬರೆಯಬಲ್ಲಿರಾ ಎಂಬ ಸವಾಲು ಸ್ವೀಕರಿಸಿ ಅವರು ಬರೆದ ಎರಡು ಕಾದಂಬರಿಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಜರಾಮರವಾಗಿ ಉಳಿಯುವಂತಹವು. ಅವೇ ಶಾಂತಲಾ ಮತ್ತು ರೂಪದರ್ಶಿ.
"ರೂಪದರ್ಶಿ"ಇಟಲಿಯ ಫ್ಲಾರೆನ್ಸ್ ನಗರದ ಕ್ರೈಸ್ತ ದೇವಾಲಯವೊಂದರಲ್ಲಿ ಏಸುಕ್ರಿಸ್ತನ ಜೀವನ ವೃತ್ತಾಂತವನ್ನು ಸಮಗ್ರವಾಗಿ ವಿವರಿಸುವ ಚಿತ್ರಗಳನ್ನು ಚಿತ್ರಿಸಲು ಕಲಾವಿದ ಮೈಕಲ್ ಏಂಜಿಲೋ ಅವರನ್ನು ಕೇಳಿಕೊಂಡಿದ್ದು, ಅದನ್ನು ಆತ ಪೂರ್ಣಗೊಳಿಸಲು ಒಪ್ಪಿ, ಪಡಬಾರದ ಕಷ್ಟ ಪಡುವುದು, ಗುರಿ ಸಾಧನೆಯನ್ನು ಅರ್ಧಕ್ಕೆ ಕೈ ಬಿಡುವ ಬೇಸರ ಹಾಗೂ ಹೇಗಾದರೂ ಮಾಡಿ ಪೂರ್ಣಗೊಳಿಸುವ ಅನಿವಾರ್ಯತೆ ಇಂತಹ ದ್ವಂದ್ವಗಳ ಮಧ್ಯೆ ಬದುಕು ಸವೆಸುವುದು, ಪಾತ್ರಗಳ ಹುಡುಕಾಟದಲ್ಲಿ ಬಸವಳಿದು ಹೋಗುವುದು ಒಬ್ಬ ನೈಜ ಕಲಾವಿದನ ಮಾನಸಿಕ ತೊಳಲಾಟ ಎಲ್ಲವನ್ನೂ ಕೃತಿ ಕಲಾತ್ಮಕವಾಗಿ ಹೆಣೆದುಕೊಳ್ಳುತ್ತಾ ಹೋಗುತ್ತದೆ. ಮನುಷ್ಯ ಸಂಬಂಧಗಳ ಹುಡುಕಾಟದ ಸಂವೇದನಾಶೀಲತೆಯು ಇಡೀ ಕಾದಂಬರಿಯನ್ನು ಆವರಿಸಿದೆ. 'ರೂಪದರ್ಶಿ ' ಅವರೇ ತಿಳಿಸಿರುವಂತೆ 'ರೀಡರ್ಸಡೈಜಸ್ಟ್' ಪುಸ್ತಕ ದಲ್ಲಿ ಬಂದಿದ್ದ ಒಂದೂವರೆ ಪುಟದ ಕಥೆಯಾಧಾರಿತ. ಅದು ಕಾದಂಬರಿ ಬರೆಯಲು ಪ್ರೇರಣೆಯಂತೆ. ಒಬ್ಬ ಶಿಲ್ಪಿ ಅಥವಾ ಚಿತ್ರಕಾರ ಹಾಗೂ ಆತನ ರೂಪದರ್ಶಿ ನಡುವಿನ ಕಥೆ ಇದಾಗಿದ್ದು, ಮನುಷ್ಯ ಸಂಬಂಧಗಳ ಹುಡುಕಾಟವನ್ನು ಕೆ.ವಿ ಅಯ್ಯರ್ ಅವರು ಮನ ಮುಟ್ಟುವಂತೆ ರೂಪಿಸಿದ್ದಾರೆ
ಇದು ಕಾಲ್ಪನಿಕ ಕಥೆ. ಪ್ರಮುಖ ಪಾತ್ರಗಳಾಗಿ
ಇಲ್ಲಿ ವಿಶ್ವ ವಿಖ್ಯಾತ ಮೈಕೆಲೆಂಜಲೋ ಮತ್ತು ಅರ್ನೆಸ್ಟೋ ಇದ್ದಾರೆ. ಇಲ್ಲಿ ಚಿತ್ರಕಾರನುೊಬ್ಬ ಜೀಸಸ್ ನ ಜೀವನದ ವಿವಿಧ
ಹಂತಗಳನ್ನು ಚಿತ್ರಿಸಲು ನಿರ್ಧರಿಸುತ್ತಾನೆ. ಬಾಲ ಯೇಸುವಿನ ಚಿತ್ರಕ್ಕೆ ರೂಪದರ್ಶಿಯಾದ ವ್ಯಕ್ತಿ
ಮುಂದೆ ಕ್ರೂರಿ ಜುದಾಸನ ಚಿತ್ರಕ್ಕೂ ರೂಪದರ್ಶಿಯಾಗುವ ಚಿತ್ರವಿದೆ. ಇದು ವ್ಯಕ್ತಿಯ ಸಹವಾಸಗಳು
ಅವನ ಒಳ್ಳೆಯತನವನ್ನು ಹೇಗೆ ನಾಶಗೊಳಿಸುತ್ತದೆ ಎಂಬುದನ್ನು ವಿವರಿಸುತ್ತದೆ. ಕನ್ನಡಕ್ಕೆ ಇದೊಂದು
ಶ್ರೇಷ್ಠ ಕಾದಂಬರಿ ಕೆ.ವಿ.ಅಯ್ಯರ್ ಅವರ ಭಾಷೆ
ಸಂಪತ್ಭರಿತವಾದದ್ದು. ನೇರ ಸುಲಲಿತ ಭಾಷೆಯಲ್ಲಿ ಅವರು ಪ್ರಸಂಗಗಳ ನಿರೂಪಿಸುವಾಗ ಕಣ್ಣೀರು
ಬರುವಷ್ಟು ಹೃದಯಸ್ಪರ್ಶಿಯಾಗಿ ಬರೆಯುತ್ತಾರೆ. ಈ ಕಾದಂಬರಿಯಲ್ಲಿ ದೇವರು, ನಂಬಿಕೆ, ಮನುಷ್ಯ ಸಂಬಂಧ, ಕ್ರೌರ್ಯ, ವಂಚನೆ ಹೀಗೆ ಹಲವು
ರಸಗಳನ್ನು ಕಾಣಬಹುದು. ಈ ಕಾದಂಬರಿಯನ್ನು ಮುಂದುವರೆಸಿ ಲೀನಾ ಎಂಬ ಮತ್ತೊಂದು ಭಾಗವನ್ನು ಕೆ. ವಿ
ಅಯ್ಯರ್ ನೀಡಿದ್ದಾರೆ. ರೂಪದರ್ಶಿಯ ಮುಂದಿನ
ಭಾಗವಾಗಿ ಅವರು ಲೀನಾ ಎಂಬ ಪುಟ್ಟ ಕೃತಿಯನ್ನೂ ಬರೆದಿದ್ದಾರೆ.
ಕೆ.ವಿ. ಅಯ್ಯರ್ ಅವರ ಮತ್ತೊಂದು ಮಹತ್ವದ ಕೃತಿ "ಶಾಂತಲಾ" ಶಾಂತಲಾ-ಕೆ.ವಿ. ಅಯ್ಯರ್ ಅವರ ಐತಿಹಾಸಿಕ ಕಾದಂಬರಿ. ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನನ ರಾಣಿ ಶಾಂತಲಾ. ಗೆಳತಿ ಲಕ್ಷ್ಮೀಯಿಂದ ದೂರ ಇರಲಾಗದೇ ಲಕ್ಷ್ಮೀಯೂ ವಿಷ್ಣುವರ್ಧನನ್ನು ಮದುವೆಯಾಗುವುದು. ಶಾಂತಲಾ ದೇವಿಯ ದೈವಿಕ ವ್ಯಕ್ತಿತ್ವ, ಶಾಂತಲಾ ಲಕ್ಷ್ಮಿಯರ ನಡುವಿನ ಸ್ನೇಹ, ಶಾಂತಲಾ ಪುತ್ರ ವಿಷ್ಣುವಿನ ಶೌರ್ಯ ಹಾಗೂ ಸಾವು ಮಂತ್ರಿ ಗಂಗರಾಜನ ರಾಜನಿಷ್ಠೆ ಪ್ರತಿ ಪಾತ್ರ ಹಾಗೂ ಸನ್ನಿವೇಶಗಳು ಸಂವೇದನಶೀಲವಾಗಿವೆ. ವಿಷ್ಣುವರ್ಧನ, ಶಾಂತಲಾ ಹಾಗೂ ಲಕ್ಷ್ಮೀ ಐತಿಹಾಸಿಕ ಸಾಮ್ರಾಜ್ಯವೊಂದರ ಆಡಳಿತದ ವಿದ್ಯಮಾನಗಳು ವರ್ತಮಾನದಲ್ಲೂ ಕಾಣುತ್ತಿದ್ದೇವೆ ಎಂಬಷ್ಟು ಇಲ್ಲಿಯ ಪಾತ್ರ-ಸನ್ನಿವೇಶಗಳು ಜೀವಂತಿಕೆ ಮರೆಯುತ್ತವೆ. ಶಾಂತಲೆಯೂ ಸಹ ಶಿವಗಂಗೆ ಬೆಟ್ಟಕ್ಕೆ ಹೋಗಿ ಮೇಲಿಂದ ಬಿದ್ದು ಅಸು ನೀಗುತ್ತಾಳೆ ಎಂಬ ದೃಶ್ಯ ವರ್ಣಿಸುವಾಗ ಈ ಪುಸ್ತಕವು ಕೇವಲ ಒಂದು ಕೃತಿಯಾಗಿ ಉಳಿಯದೇ ಓದುಗನ ಇಡೀ ಭಾವದ ಮೊತ್ತವೇ ಆಗಿರುತ್ತದೆ. ಈ ಕಾದಂಬರಿಯು ಮೊದಲು 1954ರಲ್ಲಿ ಬೆಂಗಳೂರಿನ ವ್ಯಾಯಾಮಶಾಲೆ ಪ್ರಕಟಿಸಿತ್ತು.
ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳು
ಬಹಳಷ್ಟು ಸಕಾರಾತ್ಮಕ ಪಾತ್ರಗಳಾಗಿ ಬಂದಿರುವುದು
ವಿಶೇಷವಾಗಿದೆ. ರಾಣಿಯರಲ್ಲಿ ಶಾಂತಲೆಯ
ಪಟ್ಟದರಸಿಯಾದರು ಇತರರಾಣಿಗಳಲ್ಲಿ ಈ ಕಚ್ಚಾಟವಿದ್ದರೂ ಅದು ಅದು ಹೆಚ್ಚಾಗಿ ಕಾದಂಬರಿಯಲ್ಲಿ
ವ್ಯಕ್ತವಾಗದೆ, ಶಾಂತಲೆಯ ಗುಣ ,ರೂಪ ಅವಳ ನಾಟ್ಯ ಸಾಧನೆಗಳನ್ನು ಅಯ್ಯರ್
ಬಹಳಷ್ಟು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ . ನಾಟ್ಯರಾಣಿಯ ಮನ ಹೀಗೂ ಇರಬಹುದೇ ಎಂಬಷ್ಟು
ಅಚ್ಚರಿಯನ್ನು ಉಂಟುಮಾಡುವಂತೆ ಶಾಂತಲೆ ಓದುಗರ ಮನದಲ್ಲಿ ಗಾಢವಾಗುತ್ತಾ ಹೋಗುತ್ತಾಳೆ. ಇಲ್ಲಿ
ಶಾಂತಲೆ ಮತ್ತು ವಿಷ್ಣುವರ್ಧನ ಬದುಕಿನಷ್ಟೇ ವರ್ಣಮಯವಾಗಿ ಮೂಡಿ ಬಂದಿರುವುದರಿಂದ "
ಸಾವು"..!? ಹೌದು ಸಾವು ಎನ್ನುವುದು ಇಲ್ಲಿ ಭೈರ , ಗರುಡ, ಸತಿ ಪದ್ಧತಿ
ಕೊನೆಯ ಅರ್ಥ ಕಾದಂಬರಿಯಲ್ಲಿ ವಿಜೃಂಭಿಸುತ್ತವೆ . ಕಾದಂಬರಿಯ ಬರೆಯುವ ಕಾಲಕ್ಕೆ ಸತಿ ಪದ್ಧತಿ ಅಂತ
ಆತ್ಮಾರ್ಪಣೆ ಸಮಾಜದಲ್ಲಿ
ಸಾಮಾನ್ಯವಾಗಿತ್ತು ಎಂಬುದನ್ನು ಲೇಖಕರು
ಹೇಳುತ್ತಾರೆ.! ಕಾಲದ ಪರಿಣಾಮದಿಂದ ಯಾರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಆಗ ನೆನಪಾಗುವುದು ಓದಿನ ಮಧ್ಯದಲ್ಲಿ ರಾಜಾರಾಮ್ ಮೋಹನ್
ರಾಯ್ ಅವರು .....
ಇನ್ನು ವಿವಾಹದ ಸಮಯದಲ್ಲಿ ಅನಿವಾರ್ಯವಾಗಿ
ಹಲವು ಯುವತಿಯರನ್ನು ವಿವರಿಸಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ ವಿಷ್ಣುವರ್ಧನ ಅ ಯುವತಿಯರ
ಪಟ್ಟಿಯನ್ನು ಪಟ್ಟಿಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವುದು ಅಸಮಾನ್ಯವಾದ ಸಂಗತಿಯಾಗಿ ಇಂದಿಗೂ
ಮುಂದೆಯೂ ಓದುಗರಿಗೆ ಕಾಣ ಸಿಗುತ್ತದೆ.... ಶಾಂತಲೆಯ
ನಿರ್ಧಾರ , ಕುವರ ವಿಷ್ಣುವಿನ ತ್ಯಾಗ,ಒಂದು ರೋಚಕತಿರುವನು ನೀಡಿ ಕಾದಂಬರಿಯ ಅಂತಿಮ ಘಟ್ಟಕ್ಕೆ ತಂದು
ನಿಲ್ಲಿಸುತ್ತದೆ. ಬೇಲೂರು ಹಳೇಬೀಡು, ದೇವಾಲಯಗಳ
ವೀಕ್ಷಣೆ. ಅಲ್ಲಿ ಕಳೆದ ಸಮಯಗಳೇ ತಮಗೆ ಪ್ರೇರಣೆ ಈ
ಕಾದಂಬರಿಯನ್ನು ರಚಿಸಲು ಎಂದು ಹೇಳಿದ ಲೇಖಕರ ಮಾತುಗಳು ಕಾದಂಬರಿಯ ಉದ್ದಕ್ಕೂ
ಶಾಂತಲೆಯನ್ನು ಅವರು ತಮ್ಮ ಮಗಳಂತೆ ಚಿತ್ರಿಸಿರುವುದು ಕಂಡುಬರುತ್ತದೆ ಜಪ, ತಪ ,ಪ್ರಾರ್ಥನೆ, ವ್ರತ
ಆಧ್ಯಾತ್ಮಿಕವಾಗಿ ಪ್ರಕಟವಾದರೆ ಸಾಹಸ , ಧೈರ್ಯ , ಚಾಣಾಕ್ಷತನ ರಾಜ ವರ್ಚಸ್ಸಿನಂತೆ ಕಾದಂಬರಿಯಲ್ಲಿ ಅನುರಣಿಸುತ್ತದೆ
. ಈ ಕಾದಂಬರಿಯಲ್ಲಿ ವಿಷ್ಣುವರ್ಧನ ಆಳ್ವಿಕೆಯ
ವೀರಜೀವನ, ರಾಜಮಾತೆ ರಾಜಪತ್ನಿಯರ ಜೀವನದ ಸಂಕಟ,ಸುಖ ದುಃಖ, ತಾಯಿ ಮಕ್ಕಳ, ರಾಜ ಮಂತ್ರಿ, ಇತ್ಯಾದಿ ಸಂಬಂಧಗಳ ಸೊಗಸು ಅಮೋಘವಾಗಿ ಚಿತ್ರಿತವಾಗಿದೆ.
ಶಾಂತಲೆ ವಿಷ್ಣುವರ್ಧನ್ ದಾಂಪತ್ಯ, ಶಾಂತಲೆಯ ರಾಜ
ನೀತಿ , ಆಧ್ಯಾತ್ಮ ಸಾಧನೆ, ಗಂಗರಾಜರ ಸೇವೆ, ರಾಜಮಾತೆಯ ವಿಶಾಲ ಹೃದಯ , ಕುವರ ವಿಷ್ಣುವಿನ
ರಾಜನಿಷ್ಠೆ. ಕಾದಂಬರಿಯನ್ನು ಅದ್ವಿತೀಯವಾಗಿಸಿವೆ. ಕಾದಂಬರಿಯ ಅಂತ್ಯದಲ್ಲಿ ಶಾಂತಲೆ ಮತ್ತೆ
ಉದ್ಭವಿಸಿ ಬರುವುದು ಫ್ಯಾಂಟಸಿ ಎನಿಸುತ್ತದೆ .
ಆದರೆ ಇದು ಕಥೆಯನ್ನು ಧನಾತ್ಮಕವಾಗಿ ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗುತ್ತದೆ.
ಈ ಪುಸ್ತಕ ಅದೆಷ್ಟು ಮನಕಲಕುತ್ತದೆ
ಎಂದರೆ ಕಥೆ ಓದಿ ಮುಗಿದರೂ ಕಥೆಗಾರರು
ಹೇಳುವ"ಹೊಯ್ಸಳ ರಾಜ್ಯದ ಮಹಾಸಂಪತ್ತನ್ನು ಮಲ್ಲಿಕಾಫರನೂ,ಗಃಗೂಸಲಾರನೂ ಆ
ಕಾಲದಲ್ಲಿ ದೋಚಿದ್ದು ಇರಲಿ,ಸುಂದರವಾದ ಮೂರ್ತಿಗಳ ಕಣ್ಣು ಕಿತ್ತು, ಮುಖತಲೆಗಳನ್ನು ಜಜ್ಜಿರುವವರು ನಾವು.ಮಂಗನ
ಕೈಯ್ಯ ಮಾಣಿಕ್ಯವಾಗಿದೆ ಈ ಬೃಹತ್ ಕಲಾಸೃಷ್ಟಿ.ಈ ರೂಕ್ಷಕೃತ್ಯಗಳಿಗೆ ವಿಷ್ಣವರ್ಧನ,ಶಾಂತಲೆಯರ
ಆತ್ಮಗಳು ಅದೆಷ್ಟು ನೋಯುವುವೇ!ಈ ಕಥೆ ಅದಕ್ಕಾಗಿ ನನ್ನ ಹೃದಯ ಮಿಡಿದ ಕಂಬನಿ" ಎಂಬ ಮಾತು
ಮರೆಯಲಸಾಧ್ಯ."...ಮಾತಿಗೆ ಪ್ರತ್ಯಕ್ಷದರ್ಶಿಯಾಗಿದೆ.
ಇಂದಿನ ದಿನಮಾನಕ್ಕೆ ಈ ಕಾದಂಬರಿಯ
ಪ್ರಸ್ತುತತೆ
ಕಾದಂಬರಿಯಲ್ಲಿ ಅರಸ , ಅರಸೋತ್ತಿಗೆ , ವಂಶೋದ್ಧಾರ , ರಾಜ್ಯ ವಿಸ್ತಾರ ಇವುಗಳೆಲ್ಲವೂ ಇವೆ .ಈಗ ಅರಸನೂ ಇಲ್ಲಾ ..ಅರಸೋತ್ತಿಗೆಯೂ ಇಲ್ಲ . ಎಲ್ಲಾ ಪ್ರಜಾ ಸರ್ಕಾರ . ವಂಶೋದ್ಧಾರಕನ ಪ್ರಶ್ನೆಯೇ ಬರುವುದಿಲ್ಲಾ . ಏನಿದ್ದರೂ ಪತಿ ಪತ್ನಿ ಸಂಬಂಧ ಮಾತ್ರ . ಅದೂ ಒಬ್ಬ ಳೇ ಪತ್ನಿ . ದಾಂಪತ್ಯದಲ್ಲಿ ಮೊದಮೊದಲ ವರ್ಷಗಳಲ್ಲಿ ಮಕ್ಕಳು ಬೇಡವೆಂದು ಕೆಲವು ದಂಪತಿಗಳು ನಿರ್ಧರಿಸುತ್ತಾರೆ . ನಂತರ ಕೆಲವರಿಗೆ ಕಾರಾಣಾಂತರಗಳಿಂದ ಮಕ್ಕಳ ಸೌಭಾಗ್ಯ ಸಿಗುವುದಿಲ್ಲ. ಹಿಂದೆ ಒಂದು ವಾಡಿಕೆ ಮಾತಿತ್ತು . ಬಹಳ ವರ್ಷ ಮಕ್ಕಳಾಗದಿದ್ದಾಗ ‘ ನಮ್ಮದೇನು ರಾಜ ವಂಶವೇ ‘ . ಏನೇ ಹೇಳಿದರೂ ಎಷ್ಟೇ ಪತಿಪತ್ನಿಯರಲ್ಲಿ ಪ್ರೀತಿ ಅನ್ಯೋನ್ಯತೆ ಇದ್ದರೂ ಮಕ್ಕಳಿಲ್ಲದೇ ಇದ್ದರೆ ಏನೋ ಕೊರತೆ , ಏಕತಾನತೆ , ಉದಾಸೀನತೆ ಕಾಡುತ್ತದೆ …..ಈಗ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಯಾಗಿದೆ .ತಂತ್ರಜ್ಞಾನಗಳು ಬಂದಿವೆ . ಈಗಿನ ವಿದ್ಯಾವಂತ ದಂಪತಿಗಳಿಗೆ ತಿಳಿದಿದೆ . ಮಾರ್ಗದರ್ಶನ ಮಾಡುವವರಿದ್ದಾರೆ . ಯಾರೂ ಯಾರಿಗಾಗಿಯೂ ಪ್ರಾಣ ತ್ಯಾಗ ಮಾಡುವುದಿಲ್ಲ. .
ಶಾಂತಲಾ ಮತ್ತು ರೂಪದರ್ಶಿ ಕನ್ನಡ ಸಾಹಿತ್ಯ
ಪ್ರೇಮಿಗಳೆಲ್ಲರೂ ಓದಬೇಕಾದ ಪುಸ್ತಕಗಳೆಂದರೆ ಸುಳ್ಳಲ್ಲ.
No comments:
Post a Comment