Sunday, March 29, 2026

ಮೋಹನ ಮುರಳಿ ಲೈಫ್‌ನಲ್ಲಿ ಪ್ರಕೃತಿ ಚಿಲುಮೆ

 

- ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಯಾವ ಮೋಹನ ಮುರಳಿ ಕರೆಯಿತು 
ನಿರ್ದೇಶನ: ವಿಶ್ವಾಸ ಕೃಷ್ಣ 
ನಿರ್ಮಾಣ: ಶರಣಪ್ಪ ಗೌರಮ್ಮ 
ತಾರಾಗಣ: ಪ್ರಕೃತಿ ಶರಣ್, ಮಾಧವ್ ಹೆಚ್, ಸ್ವಪ್ನಾ ಶೆಟ್ಟಿಗಾರ, ಪಟೇಲ್ ವರುಣ್ ರಾಜ್, ಶಶಿಧರ್ ಭಟ್ ಮುಂತಾದವರು. 
ರೇಟಿಂಗ್: 3/5



ಜೀವನದ ಪಯಣದಲ್ಲಿ ಯಾರು ಹೇಗೆ ಸಿಗುತ್ತಾರೆ, ಯಾಕೆ ಸಿಗುತ್ತಾರೆ ಎಂಬುದು ಯಾರಿಗೂ ಗೊತ್ತಾಗಲ್ಲ. ಸಿಕ್ಕ ಮೇಲೆ ಏನಾಯಿತು ಎಂಬುದಷ್ಟೇ ಉಳಿಯುತ್ತದೆ. ಅದು ವ್ಯಕ್ತಿ ಆಗಿರಬಹುದು, ಪ್ರಾಣಿ ಆಗಿರಬಹುದು ಅಥವಾ ವಸ್ತು ಆಗಿರಬಹುದು. ಇಂತಹುದೇ ಒಂದು ಆಕಸ್ಮಿಕವಾಗಿ ಸಿಗುವ ವ್ಯಕ್ತಿ ಹಾಗೂ ಪ್ರಾಣಿಯನ್ನು ಇಟ್ಟುಕೊಂಡು ಅಚ್ಚುಕಟ್ಟಾದ ಕಥೆಯನ್ನು ಹೊತ್ತು ಬಂದಿರುವ ಸಿನಿಮಾ 'ಯಾವ ಮೋಹನ ಮುರಳಿ ಕರೆಯಿತು'.  

ತಾಯಿ ಇಲ್ಲದೆ ತಂದೆಯ ಪ್ರೀತಿಯಲ್ಲಿ ಅವರ ಆದರ್ಶದ ಮಾತುಗಳನ್ನು ಮೈಗೂಡಿಸಿಕೊಂಡು ಬೆಳೆದವ ಮೋಹನ (ಮಾಧವ ಹೆಚ್). ಪ್ರೀತಿ ಮಾಡು ಪ್ರೀತಿ ಹಂಚು ಎಂಬ ತಂದೆಯ ಮಾತಿಗೆ ಹೆಚ್ಚು ಬೆಲೆ ಕೊಡುವವ. ಹೆಂಡತಿ ಸಿಂಧು (ಸ್ವಪ್ನಾ ಶೆಟ್ಟಿಗಾರ) ಮಗಳು ಪ್ರಕೃತಿ (ಪ್ರಕೃತಿ ಶರಣ್) ಜೊತೆ ಹಾಯಾಗಿ ಸಂಸಾರ ನಡೆಸುವ ಮೋಹನ್‌ದು ಸುಖಿ ಸಂಸಾರ. ಗಂಡ ಹೆಂಡತಿಗೆ ಒಂದೆ ಕೊರಗು ಎಲ್ಲಾ ಮಕ್ಕಳ ತರ ನಮ್ಮ ಮಗಳು ನಡೆಯಲ್ಲ ಆಟವಾಡಲ್ಲ ಎಂಬುದು. ಹುಟ್ಟಿನಿಂದಲೇ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ಪ್ರಕೃತಿ ವೀಲ್ ಚೇರ್‌ನಲ್ಲಿಯೇ ಬಾಲ್ಯ ಕಳೆಯುತ್ತಿದ್ದಾಳೆ. ಇಂತಹ ಸುಂದರ ಸಂಸಾರಕ್ಕೆ ಹೊಸ ಅಥಿತಿ ಎನ್ನುವಂತೆ ಆಕಸ್ಮಿಕವಾಗಿ ಎಂಟ್ರಿ ಕೊಡುತ್ತಾನೆ ರಾಕಿ (ನಾಯಿ). ಯಾವ ಕುಂದು ಕೊರತೆ ಬಾರದೆ ಸುಂದರವಾಗಿ ಸಾಗುತ್ತಿರುವ ಸಂಸಾರಕ್ಕೆ ಮತ್ತೋಬ್ಬ ಅಥಿತಿಯಾಗಿ ಮುರಳಿ ಬರುತ್ತಾನೆ. 8 ವರ್ಷಗಳ ಹಿಂದೆ ಹೆಂಡತಿಯಿಂದ ದೂರ ಆಗಿದ್ದ ಮುರಳಿ (ಪಟೇಲ್ ವರುಣ್ ರಾಜ್) ಆ ಊರಿಗೆ ಬಂದದ್ದೇ ಮಗಳನ್ನು ಹುಡುಕಿಕೊಂಡು. ಮುರಳಿಯ ಹೆಂಡತಿ ಯಾರು? ಮೋಹನ್‌ಗೂ ಮುರಳಿಗೂ ಏನು ಸಂಬಂಧ. ಕಥೆಯಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ತಿಳಿಯಲು ಈ ಸಿನಿಮಾ ನೋಡಲೇ ಬೇಕು. 



ಮಲೆನಾಡಿನ ಸುಂದರ ಪರಿಸರ ಈ ಚಿತ್ರದ ಹೈಲೈಟ್ ಎನ್ನಬಹುದು. ಸಿನಿಮಾ ನೋಡುಗರಿಗೆ ಹಚ್ಚ ಹಸಿರಿನ ಪರಿಸರ ಕಣ್ಣಿಗೆ ತಂಪು, ಮನಸ್ಸಿಗೆ ಮುದ ನೀಡುತ್ತದೆ. ಅಷ್ಟು ಚನ್ನಾಗಿ ಕಟ್ಟಿ ಕೊಟ್ಟಿದ್ದಾರೆ ಛಾಯಾಗ್ರಾಹಕ ಕೀರ್ತನ್ ಪೂಜಾರಿ. ಚಿತ್ರದ ಸ್ಕ್ರೀನ್ ಪ್ಲೇ ಮೇಲೆ ನಿರ್ದೇಶಕರು ಇನ್ನಷ್ಟು ಕೆಲಸ ಮಾಡಿದ್ದರೇ ಸಿನಿಮಾಗೆ ಇನ್ನಷ್ಟು ಶಕ್ತಿ ಬರುತಿತ್ತು. ನಿರ್ಮಾಪಕರೇ ಹೇಳಿಕೊಂಡಂತೆ ಈ ಚಿತ್ರವನ್ನು ಅವರು ತಮ್ಮ ಮಗಳಿಗಾಗಿ ನಿರ್ಮಾಣ ಮಾಡಿದ್ದಾರೆ. ಅವರ ಶ್ರಮ ಸ್ಕ್ರೀನ್‌ನಲ್ಲಿ ಕಾಣಿಸುತ್ತದೆ. ಒಟ್ಟಿನಲ್ಲಿ ಇದೊಂದು ಪ್ರಾಣಿ-ಮನುಷ್ಯ ಪ್ರೀತಿಯ ಭಾವನಾತ್ಮಕ ಸಿನಿಮಾ. ಅದರಲ್ಲೂ ಪೆಟ್ (ಸ್ವಾನ) ಲವ್ವರ್‌ಗಳಿಗೆ ಈ ಸಿನಿಮಾ ಹೆಚ್ಚಾಗಿ ಇಷ್ಟವಾಗುತ್ತದೆ. 


Sunday, March 22, 2026

ನವೆಂಬರ್ ತಿಂಗಳ ಗೃಹಶೋಭಾ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ ಫುಕ್ ಮೀಲ್ಸ್ ಚಿತ್ರದ ನಾಯಕಿ ದಿಯಾ ಖ್ಯಾತಿಯ ಖುಷಿ ರವಿ ಕುರಿತ ನನ್ನ ಪರಿಚಯ ಲೇಖನ... 



 



 ಹೊಸವರ್ಷದ ಹಾಗೂ ಮಕರ ಸಂಕ್ರಾಂತಿ ಸಡಗರಕ್ಕೆ ಗೃಹ ಶೋಭಾ ಮಾಸಪತ್ರಿಕೆಯಲ್ಲಿ ಕನ್ನಡದ ಹೆಸರಾಂತ ನಟಿ @nishvika_  ಕುರಿತು ನನ್ನ ಲೇಖನ...





Saturday, March 21, 2026

ಇದು ನಿಮ್ಮ ವಾಹಿನಿ ಕಲಾ ವೇದಿಕೆಯಿಂದ ಅದ್ದೂರಿಯಾದ "ಅಪ್ಪು ಉತ್ಸವ" ಆಚರಣೆ

- ರಾಘವೇಂದ್ರ ಅಡಿಗ ಎಚ್ಚೆನ್.


ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ ಯುಗಾದಿ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಅಪ್ಪು ಉತ್ಸವ ಮತ್ತು ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಮಾರ್ಚ್ 15ರ ಭಾನುವಾರದಂದು ರಾಮಮೂರ್ತಿ ನಗರದ ನಾಟ್ಯ ಪ್ರಿಯ ಆಡಿಟೋರಿಯಂ ನಲ್ಲಿ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9:00ವರೆಗೆ ನಿರಂತರವಾಗಿ ಅದ್ದೂರಿಯಾಗಿ ನಡೆಸಲಾಯಿತು.. ಈ ಕಾರ್ಯಕ್ರಮದ ರಾಯಭಾರಿಯಾಗಿ ಚಲನಚಿತ್ರ ನಟರಾದ ನೆನಪಿರಲಿ ಪ್ರೇಮ್ ರವರು ಭಾಗಿಯಾಗಿದ್ದು ವಿಶೇಷ..


 ಈ ಕಾರ್ಯಕ್ರಮದಲ್ಲಿ ಹಲವಾರು ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಿಕೊಡಲಾಯಿತು.. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಹಿರಿಯ ಪತ್ರಕರ್ತರಾದ ಗಂಡಸಿ ಸದಾನಂದ ಸ್ವಾಮಿ ಅವರು ವಹಿಸಿಕೊಂಡಿದ್ದರು.  



ಹಿರಿಯ ವಕೀಲರಾದ ಶ್ರೀಮತಿ ಪ್ರಮೀಳಾ ನೇಸರ್ಗಿ ಅವರು ಉದ್ಘಾಟನೆ ಮಾಡಿದರು.. ಮುಖ್ಯ ಅತಿಥಿಗಳಾಗಿ ಸಂಜೀವಿನಿ ರೇಖಿ ಹಿಲಿಂಗ್ ಸೆಂಟರ್ ನ ಸಂಸ್ಥಾಪಕ ಅಧ್ಯಕ್ಷರಾದ ಡಾಕ್ಟರ್ ವಿ ಭರಣಿ ರಾಜು, ಸ್ಕ್ವಯರ್ ಫೀಟ್ ರಿಯಾಲಿಟಿ ಸಂಸ್ಥೆಯ ಸಂಸ್ಥಾಪಕರಾದ ಡಾಕ್ಟರ್ ನಾರಾಯಣ ಪ್ರಸಾದ್ ಅವರು, ಶ್ರೀ ಸಾಯಿ ಶಂಕರ ಅಕಾಡೆಮಿ ಆಫ್ ಮ್ಯೂಸಿಕ್ ಸಂಸ್ಥಾಪಕರಾದ ದೀಪಾ ಲಕ್ಷ್ಮಿಯವರು, ರಾಜ್ ಡಾನ್ಸ್ ಅಕಾಡೆಮಿ ಸಂಸ್ಥಾಪಕರಾದ ಲಿಖಿತ್ ಅವರು ವಹಿಸಿಕೊಂಡಿದ್ದರು. ಎಲ್ಲರೂ ಜೊತೆಗೂಡಿ ದೀಪ ಬೇಕಾಗುವ ಮೂಲಕ ಜೊತೆಗೆ ಕನ್ನಡಾಂಬೆಗೆ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.. ಕಾರ್ಯಕ್ರಮದಲ್ಲಿ ಹಲವು ಪ್ರತಿಭೆಗಳನ್ನ ಗುರುತಿಸಿ ಸನ್ಮಾನಿಸಲಾಯಿತು.. 


ಇನ್ನು ದ್ವಿತೀಯಾರ್ಥದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾರುತಿ ಮೆಡಿಕಲ್ಸ್ ಮಾಲೀಕರಾದ ಮಹೇಂದ್ರ ಮುನ್ನತ್ ಅವರು, ರಾಮಮೂರ್ತಿ ನಗರದ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಜಿಜೆ, ಹಾವನೂರು ಕಾನೂನು ಕಾಲೇಜು ಪ್ರಾಂಶುಪಾಲರಾದ ಡಾ ಲಲಿತಾ ಎಂ, ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ಸೆಲೆಬ್ರಿಟಿ ಡಿಸೈನರ್ ಮತ್ತು  ಸ್ಟೈಲಿಸ್ಟ್ ಶ್ರೀಮತಿ ಲಕ್ಷ್ಮಿ ಕೃಷ್ಣ, ಚಲನಚಿತ್ರ ನಟರಾದ ಅವಿನಾಶ್ , ಕನ್ನಡ ಬ್ಯಾಚುಲರ್ಸ್ ಸಂಸ್ಥಾಪಕರಾದ ಶ್ರೀಧರ ಮಹಿಪತಿ ಗೌಡ ಹಾಗೂ ಇವೆಂಟ್ ಕೋ ಆರ್ಡಿನೇಟರ್ ಶ್ರೀಮತಿ ಚಂದ್ರಿಕಾ ಭಾಗವಹಿಸಿದ್ದರು..  ಎಲ್ಲರೂ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.. 


ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎಂದರೆ 35ಕ್ಕೂ ಹೆಚ್ಚು ಮಕ್ಕಳು ಫ್ಯಾನ್ಸಿ ಡ್ರೆಸ್ ಕಾರ್ಯಕ್ರಮದಲ್ಲಿ ವಿವಿಧ ವೇಷ ಭೂಷಣಗಳೊಂದಿಗೆ ಸಾಮಾಜಿಕ ಸಂದೇಶವನ್ನ ಸಾರಿದ್ದು ಆಕರ್ಷಣೀಯವಾಗಿತ್ತು. ಮಕ್ಕಳಿಗಾಗಿ ವಿಶೇಷ ಮ್ಯಾಜಿಕ್ ಶೋ ಆಯೋಜನೆ ಮಾಡಲಾಗಿತ್ತು. 



ಇನ್ನು ನೂರಾರು ಪ್ರತಿಭಾನ್ವಿತರು ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭಾ ಪ್ರದರ್ಶನವನ್ನ ನಡೆಸಿದ್ದು ವಿಶೇಷ. ಈ ಒಂದು ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿದ್ದು, ಕನ್ನಡವನ್ನ ಉಳಿಸಿ ಬೆಳೆಸುವ ಜೊತೆಗೆ , ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರತಿಭೆಗಳನ್ನು ಗುರುತಿಸುವ ಕೆಲಸ ನಡೆಯಲಿದೆ ಎಂದು ಇದು ನಿಮ್ಮ ವಾಹಿನಿ ಕಲಾವೇದಿಕೆಯ ಸಂಸ್ಥಾಪಕರಾದ ಕಿಶೋರ್ ಕುಮಾರ್ ಅವರು ತಿಳಿಸಿದರು


Monday, March 09, 2026

ಇದು ನಿಮ್ಮ ವಾಹಿನಿ ಕಲಾ ವೇದಿಕೆಯಿಂದ ಮಾರ್ಚ್ 15,ಕ್ಕೆ ಅಪ್ಪು ಉತ್ಸವ


- ರಾಘವೇಂದ್ರ ಅಡಿಗ ಎಚ್ಚೆನ್.



ಇದು ನಿಮ್ಮ ವಾಹಿನಿ ಕಲಾ ವೇದಿಕೆ (ರಿ) ವತಿಯಿಂದ ಇದೇ ಮಾರ್ಚ್ ಮಾರ್ಚ್ 15, 2026 ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸವಿನೆನಪಿನಲ್ಲಿ  ಅಪ್ಪು ಉತ್ಸವ”  ಆಯೋಜಿಸಲಾಗುತ್ತಿದೆ. ಈ ಕುರಿತಂತೆ ಇಂದು (ಮಾರ್ಚ್ ೯) ಬೆಂಗಲೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆಸಲಾದ ಮಾಧ್ಯಮ ಗೋಷ್ಟಿಯಲ್ಲಿ ಮಾದ್ಯಮಗಳಿಗೆ ವಿವರಣೆ ನೀಡಲಾಗಿದೆ. 


ಮಾರ್ಚ್ 15, 2026 ರಂದು ಬೆಂಗಳೂರಿನ ರಾಮಮೂರ್ತಿ ನಗರದ  ನಾಟ್ಯ ಪ್ರಿಯ ಆಡಿಟೋರಿಯಂ ಆಡಿಟೋರಿಯಂ ನಲ್ಲಿ  “ಅಪ್ಪು ಉತ್ಸವ” ಹಾಗೂ “21ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ರಾಯಭಾರಿಯಾಗಿ ನಟ ನೆನಪಿರಲಿ ಪ್ರೇಮ್ ಆಯ್ಕೆ ಆಗಿದ್ದಾರೆ.  ನಟ ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಹಿರಿಯ ವಕೀಲ ಪ್ರಮೀಳಾ ನೇಸರ್ಗಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ತಿಳಿಸಲಾಯಿತು.


ಇಂದಿನ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದ ನಟ  ನೆನಪಿರಲಿ ಪ್ರೇಮ್ ಮಾತನಾಡಿ 21ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮದಲ್ಲಿ. ಭರತನಾಟ್ಯ ಕಲಾವಿದರಿಗೆ ಸಾಧಕರಿಗೆ ಸನ್ಮಾನ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದ್ದಾರೆ. 



ಪ್ರಧಾನ ಕಾರ್ಯದರ್ಶಿ ಕಿಶೋರ್  ಕುಮಾರ್ ಕೆ.ವಿ. ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

Saturday, March 07, 2026

ಅರಮನೆ ಮೈದಾನದಲ್ಲಿ ಟಿವಿ9 ಎಕ್ಸ್​​ಪೋ: ಹಯಗ್ರೀವ ಸಿನಿಮಾ ನಾಯಕ ಧನ್ವೀರ್, ನಾಯಕಿ ಸಂಜನಾ ಭಾಗಿ

  - ರಾಘವೇಂದ್ರ ಅಡಿಗ ಎಚ್ಚೆನ್.




ಟಿವಿ9 ಎಕ್ಸ್​​ಪೋ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯುತ್ತಿದೆ. ಮಾರ್ಚ್ 6, 7, 8 ಮೂರು ದಿನ ಇದು ಇರಲಿದೆ. ಆಟೋಮೊಬೈಲ್, ಲೈಫ್​ಸ್ಟೈಲ್​, ಫರ್ನಿಚರ್​ಗಳ ಮಾರಾಟ ನಡೆಯಲಿದ್ದು, ಒಂದೇ ಸೂರಿನಡಿ ನೂರಾರು ಮಳಿಗೆಗಳ ಸಂಗಮ ಆಗಿದೆ. 
ಇದಕ್ಕೆ ನಟ ಧನ್ವೀರ್ ಹಾಗೂ ಸಂಜನಾ ಆಗಮಿಸಿ ಚಾಲನೆ ನೀಡಿದರು. ಈ ವೇಳೆ ಅವರುಗಳು ಟಿವಿ9 ಎಕ್ಸ್​​ಪೋ ಬಗ್ಗೆ ಹಾಗೂ ಹಯಗ್ರೀವ ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡಿದರು. ಚಿತ್ರಕ್ಕೆ ಸಿಗುತ್ತಿರುವ ಅದ್ಭುತ ಪ್ರತಿಕ್ರಿಯೆಗೆ ಅವರು ಖುಷಿಯಾಗಿದ್ದಾರೆ.


ಈ ವೇಳೆ ಮಾತನಾಡಿದ ಧನ್ವೀರ್ ಎಲ್ಲಾ ತರದ ಮನೆಗೆ ಸಂಬಂಧಪಟ್ಟ ಆಟೋಮೊಬೈಲ್ಸ್ ಆಗಿರಬಹುದು ಫರ್ನಿಚರ್ ಆಗಿರಬಹುದು ಪ್ರತಿಯೊಂದು ಒಂದೇ ಜಾಗದಲ್ಲಿ ಸಿಗೋದ್ರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲ ಆಗುತ್ತೆ  ಎಂದರು.

ಅದಲ್ಲದೆ ಹಯಗ್ರೀವ ಸಿನಿಮಾ ಎಲ್ಲೆಡೆ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಕಾರಣ ಅದರ ಕುರಿತು ಸಂತೋಷ ಹಂಚಿಕೊಂಡರು.

ನಟಿ ಸಂಜನಾ ಮಾತನಾಡಿ ಹಯಗ್ರೀವ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ತುಂಬಾ ಖುಷಿಯಾಗಿದೆ. ಎಲ್ಲಾ ಕಡೆ ಓಡಾಡ್ತಾ ಇದೀವಿ ಪಾಸಿಟಿವ್ ಆಗಿ ರೆಸ್ಪಾನ್ಸ್ ಇದೆ  ಎಲ್ಲಾ ಕಡೆ ಆಲ್ಮೋಸ್ಟ್ ಹೌಸ್ ಫುಲ್ಸ್ ಓಡ್ತಾ ಇದೆ ಅಂಡ್ ಟಿವಿ೯ ಈ ಒಂದು ಎಕ್ಸ್ಪೋ ನಲ್ಲಿ ಒಂದೇ ರೂಫ್ ಅಡಿ ಎಲ್ಲಾ ಸಿಗುತ್ತಿರುವುದು  ಮತ್ತು ಯುಗಾದಿ ಸೇಲ್ ನಡೆಯುತ್ತಿರುವುದು ವಿಶೇಷ ಎಂದು ಖುಷಿಯಿಂದ ಹೇಳಿದ್ದಾರೆ.