Tuesday, July 23, 2013

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕತರು(Dada Saheb Phalke prize winners)

ಪ್ರಥ್ವಿರಾಜ್ ಕಪೂರ್(Prathviraj Kapur)
    ಪ್ರಥ್ವಿರಾಜ್ ಕಪೂರ್ ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟರುಗಳಲ್ಲಿ ಒಬ್ಬರು. ಹಿಂದಿ ಚಿತ್ರರಂಗದ ಮೇರು ನಟರುಗಳಲ್ಲಿ ಒಬ್ಬರಾದ ಪ್ರಥ್ವಿರಾಜ್ ಮೂಲತಃ ರಂಗಭೂಮಿಯಿಂದ ಬಂದವರು. ಭಾರತೀಯ ಚಲನಚಿತ್ರ ರಂಗಕ್ಕೆ ಇವರ ಅಪಾರವಾದ ಸೇವೆಯನ್ನು ಗುರುತಿಸಿದ ಭಾರತ ಸರ್ಕಾರ ೧೯೭೧ ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿತು.
    ೧೯೦೬ ನವೆಂಬರ್ ರಂದು ಈಗಿನ ಪಾಕಿಸ್ತಾನದಲ್ಲಿನ ಫೈನಲಾಬಾದ್ ನಲ್ಲಿ ಜನಿಸಿದ ಪ್ರಥ್ವಿರಾಜ್ ತಂದೆ ದಿವಾನ್ ಬಶೇಶ್ವರನಾಥ್ ಕಪೂರ್ ಪೋಲೀಸ್ ಉಪ ನಿರ್ದೇಶಕರಾಗಿದ್ದರು. ಲಾಹೋರ್ ನಲ್ಲಿ ತಮ್ಮ ಆರಂಭಿಕ ಶಿಕ್ಷಣಾವನ್ನು ಪೂರೈಸಿದ ಪ್ರಥ್ವಿರಾಜ್ ಪೇಷಾವರದಲ್ಲಿ ಉನ್ನತ ಶಿಕ್ಷಣವನ್ನು ಹೊಂದಿದರು. ಬಳಿಕ ಒಂದು ವರ್ಷದ ಕಾನೂನು ಶಿಕ್ಷಣಕೆ ಸೇರ್ಪಡೆಗೊಂಡ ಪ್ರಥ್ವಿರಾಜ್ ಅಲ್ಲಿನ ಪ್ರೊಫೆಸರರ ಸಹಕಾರದೊಂದಿಗೆ ರಂಗಭೂಮಿಗೆ ಪ್ರವೇಶ ಮಾಡಿದರು. ಅವರ ಶಿಕ್ಷಕರಾದ ಜಯ ದಯಾಲ್ ರವರು ಪ್ರಥ್ವಿರಾಜ್ ಪ್ರತಿಭೆ ನೀರೆರೆದು ಪೋಷಿಸಿದರು. ಪೇಷಾವರದ ಕಾಲೇಜಿನಲ್ಲಿ ಬಿ.. ವ್ಯಾಸಂಗ ಮುಗಿಸಿದ ಬಳಿಕ ಒಂದು ವರ್ಷದ ಕಾನೂನು ವ್ಯಾಸಂಗವನ್ನೂ ಪೂರೈಸಿದರೂ ರಂಗಭೂಮಿಯ ಗೀಳು ಅವರನ್ನು ಬಿಡದೆ ಮುಂಬೈ ಗೆ ಎಳೆತಂದಿತು. ೧೯೨೮ ರಲ್ಲಿ ತಮ್ಮ ಸೋದರ ಸಂಬಂಧಿಯಿಂದ ಸಾಲ ಪಡೆದು ತಾವು ಮುಂಬೈಗೆ ಬಂದರು.

    ೧೯೨೯ ರಿಂದ ೧೯೩೧ ರವರೆಗೆ ಒಂಭತ್ತು ಮೂಕಿ ಚಿತ್ರಗಳಲ್ಲಿ ಅಭಿನಯಿಸಿದ ಬಳಿಕ ೧೯೩೧ ರಲ್ಲಿ ತೆರೆಕಂಡ ಭಾರತದ ಮೊದಲ ವಾಕ್ ಚಿತ್ರಅಲಂ ಅರಾದಲ್ಲಿ ಪೋಷಕ ನಟರಾಗಿ ಅಭಿನಯಿಸಿದರು. ಮುಂದೆ ೧೯೩೭ ರಲ್ಲಿ ತೆರೆಕಂಡವಿದ್ಯಾವತಿಯಲ್ಲಿನ ಅವರ ಅಭಿನಯ ಅಪಾರ ಜನ ಮೆಚ್ಚುಗೆಗೆ ಪಾತ್ರವಾಯಿತು. ೧೯೪೧ ರಲ್ಲಿ ಬಿಡುಗಡೆಯಾದಸಿಕಂದರ್ನಲ್ಲಿನ ಚಕ್ರವರ್ತಿ ಅಲೆಕ್ಸಾಂಡರ್ ಪಾತ್ರ ಪ್ರಥ್ವಿರಾಜ್ ನಿರ್ವಹಿಸಿದ ಅತ್ಯುತ್ತಮ ಪಾತ್ರಗಳಲ್ಲಿ ಒಂದಾಗಿದೆ. ಅದೆಲ್ಲ ಆದ ಬಳಿಕದಿ ಗ್ರೇಟ್ ಆಂಡರ್ ಸನ್ನಾಟಕ ತಂಡವನ್ನು ಸೇರಿದ ಪ್ರಥ್ವಿರಾಜ್ ತಮ್ಮ ಅಮೋಘ ನಟನೆಯಿಂದ ರಂಅಗಭೂಮಿ ಹಾಗೂ ಚಲನಚಿತ್ರಗಳಾಲ್ಲಿ ಉತ್ತಮ ನಟನೆನ್ನುವ ಹೆಸರು ಸಂಪಾದಿಸಿದರು.
    ೧೯೪೪ ರಲ್ಲಿ ತಮ್ಮದೇ ನಾಟಕ ತಂಡವನ್ನು ರಚಿಸಿಕೊಂಡ ಪ್ರಥ್ವಿರಾಜ್ ಸುಮಾರು ೧೬ ವರ್ಷಗಳ ಕಾಲ ಭಾರತದೆಲ್ಲೆಡೆ ಸುಮಾರು ೨೦೦೦ಕ್ಕೂಹೆಚ್ಚಿನ ನಾಟಕ ಪ್ರದರ್ಶನ ನೀಡಿ ಅಪಾರ ಖ್ಯಾತಿ ಗಳಿಸಿತು. ಅಂದು ಪ್ರದರ್ಶನಗೊಳ್ಳುತ್ತಿದ್ದ ಬಹುತೇಕ ಪ್ರಮುಖ ನಾಟಕಗಳಲ್ಲಿ ಪ್ರಥ್ವಿರಾಜ್ ಪ್ರಮುಖ ಪಾತ್ರ ವಹಿಸುತ್ತಿದ್ದರೆನ್ನುವುದು ಇನ್ನೊಂದು ವಿಶೆಷ. ಮುಂದೆ ಪ್ರಥ್ವಿರಾಜ್ ಪುತ್ರ ಶಮ್ಮಿ ಕಪೂರ್ ಹಾಗೂ ಅವರ ಪತ್ನಿ ಹುಟ್ಟು ಹಾಕಿದ ಇಂಡಿಯನ್ ಷೇಕ್ಸ್ ಪಿಯರ್ ನಾಟಕ ತಂಡಒಂದಿಗೆ ಪ್ರಥ್ವಿ ಥಿಯೇಟರ್ಸ್ ವಿಲೀನಹೊಂದಿತು.
    ಮುಂದೆ ಪುನಹ ಚಲನಚಿತ್ರ ರಂಗಕ್ಕೆ ಮರಳಿದ ಪ್ರಥ್ವಿರಾಜ್ಮೊಘಲ್--ಅಜ಼ಮ್”, ”ಹರಿಶ್ಚಂದ್ರ ತಾರಾಮತಿ”, ” ,”ಸಿಕಂದರ್--ಅಜ಼ಮ್”, ”ಕಲ್ ಆಜ್ ಔರ್ ಕಲ್ಇವೇ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದರು. ೧೯೬೯-೭೦ ರಲ್ಲಿ ಬಿಡುಗಡೆಯಾದ ಪಂಜಾಬಿ ಚಿತ್ರನಾನಕ್ ನಾಮ್ ಜಿಹಾಜ಼್ ಹೈಎನ್ನುವ ಧಾರ್ಮಿಕ ಚಿತ್ರದಲ್ಲಿಯೂ ಪ್ರಥ್ವಿರಾಜ್ ನಟಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದರು ಅದೇ ಮುಂದೆನಾನಕ್ ದುಃಖಿಯಾ ಸಬ್ ಸನ್ಸಾರ್”  ಹಾಗೂಮೇರೇ ಮಿತ್ರನ್ಚಿತ್ರಗಳಲ್ಲಿಯೂ ಅವರು ಅಭಿನಯಿಸುವಂತಾಯಿತು.
    ಪ್ರಥ್ವಿರಾಜ್ ರವರ ಎಲ್ಲ ಅಮೋಘ ಸಾಧನೆ, ಕೊಡುಗೆಗಳನ್ನು ಪರಿಗಣಿಸಿ ಅವರಿಗೆ ಅನೇಕ ಗೌರವ-ಪ್ರಶಸ್ತಿಗಳು ಸಂದವು. ಅವುಗಳಲ್ಲಿ ೧೯೫೪ ರಲ್ಲಿ ನೀಡಲಾದ ಅಂಗೀತ ನಾಟಕ ಅಕಾಡಮಿ ಫೆಲೋಷಿಪ್, ೧೯೬೯ ರಲ್ಲಿ ಭರತ ಸರ್ಕಾರದಿಂದ ಕೊಡಮಾಡಿದ ಪದ್ಮಭೂಷಣ ಪ್ರಶಸ್ತಿಗಳು ಮತ್ತು ೧೯೭೧ರಲ್ಲಿ ಭಾರತೀಯ ಚಲನಚಿತ್ರ ರಂಗದ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಪಾತ್ರರಾಗಿದ್ದ ಪ್ರಥ್ವಿರಾಜ್ ಕಪೂರ್ ೧೯೭೨ ಮೇ ೨೯ ರಂದು ತಮ್ಮ ೬೭ನೇ ವರ್ಷದಲ್ಲಿ ಇಹಲೋಕವನ್ನು ತ್ಯಜಿಸಿದರು

No comments:

Post a Comment