Thursday, August 07, 2014

ಜನಮಾನಸದ “ಚಾಚಾ ಚೌಧರಿ” - ಪ್ರಾಣ್ ಕುಮಾರ್ ಶರ್ಮಾ

ಖ್ಯಾತ ವ್ಯಂಗ್ಯಚಿತ್ರಕಾರ, ‘ಚಾಚಾ ಚೌಧರಿ’, ‘ರಾಮನ್’, ‘ಶ್ರೀಮತಿ’, ‘ಪಿಂಕಿ’ ಇವೇ ಮೊದಲಾದ  ಸದಾ ಕಾಲ ನೆನಪಿನಲ್ಲಿ ಉಳಿಯುವಂತಹಾ ಪಾತ್ರಗಳ ಸೃಷ್ಟಿಕರ್ತರಾಗಿದ್ದ ಪ್ರಾಣ್ ಕುಮಾರ್ ಶರ್ಮ ಇದೇ ಆಗಸ್ಟ್ ೦5 ರಂದು ದೆಹಲಿಯ ಗುರ್ಗಾಂವ್ ನಲ್ಲಿ ನಿಧನರಾಗಿದ್ದಾರೆ. ಈ ಸಮಯದಲ್ಲಿ ಪ್ರಾಣ್ ಎಂಬ ವ್ಯಂಗ್ಯಚಿತ್ರಕಾರನ ಬದುಕಿನ ಚಿತ್ರಣವನ್ನೊಮ್ಮೆ ಅವಲೋಕಿಸೋಣ......

ಬಾಲ್ಯ - ವೃತ್ತಿ ಬದುಕು
ಇಂದಿನ ಪಾಕಿಸ್ತಾನದಲ್ಲಿನ ಲಾಹೋರ್ ಬಳಿಯ ಕಸೂರ್ ಎಂಬ ಚಿಕ್ಕ ಗ್ರಾಮದಲ್ಲಿ 1938, ಆಗಸ್ಟ್ 15 ರಂದು ಪ್ರಾಣ್ ಕುಮಾರ್ ಶರ್ಮಾರವರ ಜನನವಾಯಿತು. 1947 ಬಳಿಕ ಪ್ರಾಣ್ ರವರ ಕುಟುಂಬ ಗ್ವಾಲಿಯರ್ ನಗರಕ್ಕೆ ತನ್ನ ವಾಸವನ್ನು ಬದಲಾಯಿಸಿತು. ಪ್ರಾಣ್ ರವರು ಗ್ವಾಲಿಯರ್ ಇವ್ನಿಂಗ್ ಕ್ಯಾಂಪ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ ಬಳಿಕ ಮುಂಬೈನ ಜೆಜೆ ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ನಾಲ್ಕು ವರ್ಷಗಳ ಫೈನ್ ಆರ್ಟ್ಸ್(ಚಿತ್ರಕಲಾ ತರಬೇತಿ) ಪದವಿ ಶಿಕ್ಷಣವನ್ನು ಪಡೆದುಕೊಂಡರು.
ತಮ್ಮ ವೃತ್ತಿ ಬದುಕಿನ ಪ್ರಾರಂಭದಲ್ಲಿ ಕೆಲಕಾಲ ಚಿತ್ರಕಲಾ ಶಿಕ್ಷಕರಾಗಿ ಕೆಲಸ ಮಾಡಿದ್ದ ಪ್ರಾಣ್ 1960 ರಲ್ಲಿ ದೆಹಲಿ ಮೂಲದಮಿಲಾಪ್ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಅಲ್ಲಿ ವರುಬಾಬುಎನ್ನುವ ಪಾತ್ರವನ್ನು ಸೃಷ್ಟಿಸಿ ವ್ಯಂಗ್ಯಚಿತ್ರಗಳನ್ನು ರಚಿಸಿದ್ದರು. 1969 ರಲ್ಲಿ ಹಿಂದಿ ನಿಯತಕಾಲಿಕೆಲಾಟ್ ಪಾಟ್ಗಾಗಿ ಅವರು ರಚಿಸಿದಚಾಚಾ ಚೌಧರಿವ್ಯಂಗ್ಯಚಿತ್ರ ಪಾತ್ರವು ಅವರಿಗೆ ದೇಶ ವಿದೇಶಗಳಲ್ಲಿ ಖ್ಯಾತಿಯನ್ನು ತಂದುಕೊಟ್ಟಿತು. ಪ್ರಾಣ್ ಚಾಚಾ ಚೌಧರಿಯ ಪಾತ್ರವನ್ನು ಸೃಷ್ಟಿಸಿದ ವೇಳೆಯಲ್ಲಿ ದೇಶಾದ್ಯಂತ ಜನರು ಸೂಪರ್ ಮ್ಯಾನ್, ಪ್ಯಾಂಟಮ್ ನಂತಹಾ ವ್ಯಂಗ್ಯಚಿತ್ರ ಸರಣಿಯನ್ನು ಮೆಚ್ಚಿಕೊಂಡಿದ್ದರು. ಅವೆಲ್ಲವೂ ವಿದೇಶೀ ಮೂಲದ ವ್ಯಂಗ್ಯಚಿತ್ರಗಳಾಗಿದ್ದವು. ಆದರೆ ಪ್ರಾಣ್ ರವರಚಾಚಾ ಚೌಧರಿಪ್ರಾರಂಭವಾದ ಅತ್ಯಂತ ಶೀಘ್ರದಲ್ಲಿ ದೇಸ ವಿದೇಶಗಳ ಜನರು ಮೆಚ್ಚುವಂತಾಯಿತು. ಪ್ರಾಣ್ ರವರೇ ತಮ್ಮ ಒಂದು ಸಂದರ್ಶನದಲ್ಲಿ ಚಾಚಾ ಚೌಧರಿ ಪಾತ್ರದ ಕುರಿತು ರೀತಿಯಾಗಿ ಅಭಿಪ್ರಾಯ ಪಟ್ಟಿದ್ದಾರೆ - “Each family has its own wise old man. He solved his problems with common sense, but with a touch of humor. Humor is the basis of my cartoon.”ರಾಮನ್’, ‘ಪಿಂಕಿ’, ‘ಬಿಲ್ಲೂ’, ‘ಶ್ರೀಮತಿಇವೇ ಮೊದಲಾದವು ಪ್ರಾಣ್ ಕುಮಾರ್ ಶರ್ಮಾರವರ ಇತರೆ ವ್ಯಂಗ್ಯಚಿತ್ರ ಪಾತ್ರಗಳಾಗಿದ್ದವು.
ಪ್ರಾಣ್ ರವರ ವ್ಯಂಗ್ಯಚಿತ್ರಗಳಾವುವೂ ವಿದೇಶೀ ಪಾತ್ರಗಳಿಂದ, ಕಥೆಗಳಿಂದ ಸ್ಪೂರ್ತಿಗೊಂಡವುಗಳಾಗಿರಲಿಲ್ಲ. ಅವೆಲ್ಲವೂ ನಮ್ಮಂತೆಯೇ ಸಾಮಾನ್ಯ ಜನರ ನಡುವೆ ಇದ್ದವುಗಳಾಗಿದ್ದು ಅವರು ರಚಿಸಿದ್ದ ಶ್ರೀಮತಿ ಪಾತ್ರವು ಇದಕ್ಕೊಂದು ನಿದರ್ಶನವಾಗಬಲ್ಲದು. ನಗರವಾಸಿ ಮದ್ಯಮ ವರ್ಗದ ಸಂಸಾರಸ್ಥ ಗೃಹಿಣಿಯ ಪಾತ್ರ - ಶ್ರೀಮತಿ ಪಾತ್ರದ ಮುಖೇನ ಪ್ರಾಣ್ ರವರು ಮದ್ಯಮ ವರ್ಗದ ಸಂಸಾರದ ಸವಾಲುಗಳ ಕುರಿತು ಬೆಳಕು ಬೀರುತ್ತಿದ್ದರು. ಅವರ ಬಿಲ್ಲೂ, ರಾಮನ್ ರಂತಹವರು ಇಂದಿಗೂ ನಮ್ಮ ನಡುವೆ ಇರುವುದೇ ಅವರ ವ್ಯಂಗ್ಯಚಿತ್ರಗಳ ಶ್ರೇಷ್ಟತೆಗೂ, ಪ್ರಸ್ತುತತೆಗೂ ಸಾಕ್ಷಿಯಾಗಿದೆ.

Pran Kumar Sharma ( 15 August 1938 - 5 August 2014),

ಪ್ರಾಣ್ ಬಗೆಗಿನ ಕೆಲ ವಿಶೇಷ ಮಾಹಿತಿಗಳು -
ಪ್ರಾಣ್ ತಮ್ಮ ವೃತ್ತಿ ಬದುಕಿನುದ್ದಕ್ಕೂ ವ್ಯಂಗ್ಯಚಿತ್ರಗಳ ಸರಣಿಯನ್ನೇ ರಚಿಸಿದ್ದಾರೆ. ಇದುವರೆವಿಗೂ ಅವರ 400 ಸಂಖ್ಯೆಯ ವ್ಯಂಗ್ಯಚಿತ್ರಗಳ ಪುಸ್ತಕಗಳು ಬಂದಿದ್ದರೆ ಎರಡು ಲಕ್ಷಕ್ಕೂ ಹೆಚ್ಚಿನ ಚಿತ್ರಗಳನ್ನು ರಚಿಸಿದ್ದಾರೆ. ದೇಶದಲ್ಲಿನ ನಾನಾ ಭಾಷೆಗಳ ೩೦ ಕ್ಕೂ ಹೆಚ್ಚಿನ ವೃತ್ತಪತ್ರಿಕೆಗಳು, ನಿಯತಕಾಲಿಕೆಗಳೂ ಇವರ ವ್ಯಂಗ್ಯಚಿತ್ರಗಳನ್ನು ತಮ್ಮ ಪತ್ರಿಕೆ/ನಿಯತಕಾಲಿಕಗಳಲ್ಲಿ ಪ್ರಕಟಿಸಿವೆ. (ಕನ್ನಡದಲ್ಲಿಪ್ರಜಾವಾಣಿ’, ‘ಮಯೂರ’, ಸುಧಾಸೇರಿದಂತೆ ನಾನಾ ವೃತ್ತಪತ್ರಿಕೆಗಳಲ್ಲಿ ಇವರ ವ್ಯಂಗ್ಯಚಿತ್ರ ಸರಣಿಯು ಪ್ರಕಟಗೊಂಡಿದೆ. )
ಅಮೇರಿಕಾದಲ್ಲಿರುವ ಅಂತರಾಷ್ಟ್ರೀಯ ವ್ಯಂಗ್ಯಚಿತ್ರಗಳ ಸಂಗ್ರಹಾಗಾರದಲ್ಲಿ ಪ್ರಾಣ್ ರವರಚಾಚಾ ಚೌಧರಿಸರಣಿಯ ಎರಡು ಕಂತುಗಳನ್ನು ಪ್ರದರ್ಶನಕ್ಕಾಗಿ ಇಡಲಾಗಿದೆ. ‘ಚಾಚಾ ಚೌಧರಿಪ್ರಾರಂಭಾವಾದ ಹಿಂದಿಯಲಾಟ್ ಪಾಟ್ನಿಯತಕಾಲಿಕವು ಅಂದಿನಿಂದ ಇಂದಿನವರೆಗೂ ತನ್ನ ಪ್ರಕಟಣೆಯನ್ನು ಕಾಣುತ್ತಿದ್ದು ಇಂದು ಅದರ ಹಿಂದಿ ಆವೃತ್ತಿ 175000 ಪ್ರತಿಗಳ ಪ್ರಸಾರ ಕಾಣುತ್ತಿದ್ದರೆ ಆಂಗ್ಲ ಭಾಷಾ ಆವೃತ್ತಿಯು 225000 ಕ್ಕೂ ಹೆಚ್ಚಿನ ಮುದ್ರಣದೊಡನೆ ಪ್ರಸರಣಗೊಳ್ಳುತ್ತಿದೆ.
ಶ್ರೀಮತಿ ಪಾತ್ರವು ಪ್ರಾಣ್ ರವರ ಪಾತ್ರಗಳಾ ಸೃಷ್ಟಿಯಲ್ಲಿ ಅತ್ಯಂತ ಹಳೆಯ ಪಾರ್ತವಾಗಿದ್ದು ೧೯೬೮ ರಲ್ಲಿ ಪಾತ್ರವನ್ನು ಅವರು ಪ್ರಥಮ ಬಾರಿಗೆ ರಚಿಸಿದ್ದರು. ಪ್ರಾಣ್ ರವರ ಎಲ್ಲಾ ಪಾತ್ರಗಳೂ ಜನಸಾಮಾನ್ಯರ ಜೀವನದ ನಡುವಿನವುಗಳೇ ಆಗಿದ್ದು ಚಾಚಾ ಚೌಧರಿ ಕುಟುಂಬದ ಹಿರಿಯ ಸದಸ್ಯನಾದರೆ ಪಿಂಕಿ ಯುವ ತರುಣಿಯಾಗಿದ್ದಾಳೆ. ರಾಮನ್ ವೃತ್ತಿ ನಿರತರ, ನೌಕರ ವರ್ಗದ ಪ್ರತಿನಿದ್ದರೆ, ಶ್ರೀಮತಿ ಸಾಮಾನ್ಯ ವರ್ಗದ ಗೃಹಿಣಿಯಾಗಿರುವಳು.
ಪ್ರಾಣ್ ರವರ ಪಾತ್ರವಾದ ಬಿಲ್ಲೂವಿನ ಕಣ್ಣುಗಳನ್ನು ಇದುವರೆವಿಗೂ ಯಾರೂ ನೋಡಿಲ್ಲ! ಬಿಲ್ಲೂ ತನ್ನ ಕಣ್ಣುಗಳನ್ನು ಯಾವಾಗಲೂ ತನ್ನ ಕೂದಲುಗಳಿಂದ ಮುಚ್ಚಿಕೊಂಡಿರುತ್ತಾನೆ. ಪ್ರಾಣ್ ರವರ ಸಾಬೂ ತಾನು ಮಾಡುವ ಪ್ರತಿಯೊಂದು ಊಟದ ವೇಳೆಯಲ್ಲಿ ಒಟ್ಟು 108 ಚಪಾತಿ, 20 ಲೀಟರ್ ಲಸ್ಸಿ, 12 ಕೆಜಿ ಹಲ್ವಾವನ್ನು ಸೇವಿಸುತ್ತಾನೆ! ಚಾಚಾ ಚೌಧರಿಯ ಪ್ರೀತಿಯ ನಾಯಿ ರಾಕೆಟ್ - ಪ್ರಪಂಚದಲ್ಲಿನ ಏಕೈಕ ಸಸ್ಯಾಹಾರಿ ನಾಯಿ ಇದಾಗಿದೆ!

ಗೌರವ - ಪುರಸ್ಕಾರಗಳು
ಪ್ರಾಣ್ ರವರು ಗಳಿಸಿದ್ದ ಅಪಾರ ಜನಮೆಚ್ಚುಗೆ, ಅವರವೃತ್ತಿ ಬದುಕಿನಲ್ಲಿ ಅವರೇರಿದ್ದ ಸಾಧನೆಯ ಶಿಖರ ಇವು ಅವರಿಗೆ ಅನೇಕ ಬಗೆಯ ಗೌರವ ಪ್ರಶಸ್ತಿಗಳು ಲಭಿಸುವಂತೆ ಮಾಡಿದವು. 1983 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ರಾಮನ್ - ಹಮ್ ಏಕ್ ಹೈ ಎನ್ನುವ ಪ್ರಾಣ್ ರವರ ವ್ಯಂಗ್ಯಚಿತ್ರ ಪುಸ್ತಿಕೆಯೊಂದನ್ನು ಬಿಡುಗಡೆಗೊಳಿಸಿದರು. ಇದರಿಂದಾಗಿ ಪ್ರಾಣ್ ರವರ ವ್ಯಕ್ತಿತ್ವಕ್ಕೆ ಇನ್ನೊಂದು ಗರಿ ಮೂಡಿದಂತಾಯಿತು. ಪ್ರಾಣ್ ವ್ಯಂಗ್ಯಚಿತ್ರಗಳ ಪ್ರಖ್ಯಾತಿಯಿಂದಾಗಿ ಅವರ ಹೆಸರು 1995 ಲಿಮ್ಕಾ ದಾಖಲೆ ಪುಸ್ತಕದಲ್ಲಿ ದಾಖಲಾಯಿತು. ಇದಲ್ಲದೆ ಪ್ರಾಣ್ ಕುಮಾರ್ ಶರ್ಮಾರವರು 2001 ರಲ್ಲಿ ಬಾರತೀಯ ವ್ಯಂಗ್ಯಚಿತ್ರಕಾರರ ಶಿಕ್ಷಣ ಸಂಸ್ಥೆಯವರು ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದರು.

ಇಲ್ಲಿ ನಿಮಗಾಗಿ ಪ್ರಾಣ್ ರವರ ಸೃಷ್ಟಿಯಾದ ರಾಮನ್ ನ ಒಂದು ಚಿತ್ರಕಥೆ ಇದೆ, ನೋಡಿ..... 
Raman

No comments:

Post a Comment