ಝರಣಿ (Jharani)
Lord Sri Narasimhaswamy, Jharani, Bidae |
ಕರ್ನಾಟಕದ ಉತ್ತರ
ತುದಿಯಲ್ಲಿನ ಬೀದರ್ ಜಿಲ್ಲೆ ಸಸಾಕಷ್ಟು
ಐತಿಹಾಸಿಕ ಸ್ಥಳಗಳನ್ನು ಒಳಗೊಂಡಿರುವ ಜಿಲ್ಲೆ. ಇಲ್ಲಿನ ಬಹಮನಿ ಸುಲ್ತಾನರ ಸ್ಮಾರಕಗಳು, ಬಸವಕಲ್ಯಾಣ
ಎಲ್ಲವೂ ಜಗತ್ಪ್ರಸಿದ್ದವಾಗಿವೆ. ಅಂತೆಯೇ ಬೀದರ್ ಹೊರವಲಯದಲ್ಲಿರುವ ನರಸಿಂಹ ಝರಣಿ ಗುಹಾ ದೇವಾಲಯ ಕರ್ನಾಟಕದ
ಅಪರೂಪದ ಯಾತ್ರಾಸ್ಥಳ ಜತೆಗೆ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಭಕ್ತರ ಆರಾಧ್ಯ ಕ್ಷೇತ್ರವಾಗಿದೆ.
ಮಕ್ಕಳಾಗದ ದಂಪತಿ ಸಂತಾನ ಪ್ರಾಪ್ತಿಗಾಗಿ
ನರಸಿಂಹ ದೇವರಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ. ಹೆರಿಗೆಗೆ ತವರಿಗೆ ಹೋಗುವ ಮುನ್ನ ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸಿ ಹೋಗುವ
ರೂಢಿಯಿದೆ. ಮಕ್ಕಳಾದ ಮೇಲೆ ಬಂದು ಮಗುವಿನ ಜಾವಳ ತೆಗೆಸುವ ಅಥವಾ ತೊಟ್ಟಿಲು ಬಿಡುವ ಹರಕೆ ಸಲ್ಲಿಸುತ್ತಾರೆ.
ಹೀಗೆ ಇದು ಭಕ್ತ ಪಾಲಿಗೆ ಪವಿತ್ರ ತೀರ್ಥಸ್ಥಳವೆನಿಸಿದೆ.
ಪ್ರತೀ ವರ್ಷವೂ ನರಸಿಂಹ
ಜಯಂತಿಯಂದು ಇಲ್ಲಿ ವಿಶೇಷ ಪೂಜೆ,
ಹೋಮ-ಹವನಗಳು ನಡೆಯುತ್ತವೆ.
***
Jharani Narasimhaswamy temple, Jharani, Bidar |
Jharani Narasimhaswamy temple, Jharani, Bidar |
ಮಹಾವಿಷ್ಣುವು
ತಾನು ನರಸಿಂಹನ ಅವತಾರವನ್ನು ತಾಳಿ
ರಾಕ್ಷಸನಾದ ಹಿರಣ್ಯ ಕಷಿಪುವನ್ನು ವಧಿಸಿ ಪ್ರಜಹ್ಲಾದರಾಜನಿಗೆ ಅಭಯವನ್ನು ಇತ್ತನು. ಅದೇ ಸಮಯದಲ್ಲಿ ಜಾಲಾಸುರ ಎನ್ನುವ ಇನ್ನೋರ್ವ ರಾಕ್ಷಸನು
ಇಂದಿನ ಝರಣಿ ಇರುವ ಸ್ಥಳದಲ್ಲಿ ಇದ್ದು ಮಾನವರಿಗೆ ಉಪಟಳ ನೀಡುತ್ತಿದ್ದನು. ಪರಮೇಶ್ವರ ಅದಮ್ಯ ಭಕ್ತನಾಗಿದ್ದ
ಜಾಲಾಸುರನನ್ನು ನರಸಿಂಹ ಸ್ವಾಮಿಯು ಇದೇ ಸ್ಥಳದಲ್ಲಿ ಸಂಹರಿಸಿದನು. ಹಾಗೆ ಹತನಾದ ಜಾಲಾಸುರನು ಜಲದ
ರೂಪವನ್ನು ಹೊಂದಿ ನರಸಿಂಹನ ಪಾದದಡಿಯಲ್ಲಿ ಹರಿಯಲಾರಂಭಿಸಿದನು. ಅಂದಿನಿಂದ ಇಂದಿನವರೆಗೂ ಇಲ್ಲಿ
ಯಾವ ಬರಗಾಲದಲ್ಲಿಯೂ ನೀರು ಕಡಿಮೆಯಾಗದೆ
4 ರಿಂದ 5 ಅಡಿಯಷ್ಟು ನೀರು ಹರಿಯುವುದನ್ನು ಕಾಣುತ್ತೇವೆ. ಅಲ್ಲದೆ ಜಾಲಾಸುರನು ಪೂಜಿಸುತ್ತಲಿದ್ದ ಶಿವಲಿಂಗವನ್ನೂ ನಾವಿಲ್ಲಿ ನೋಡಬಹುದಾಗಿದೆ
ಜಾಲಾಸುರನಿದ್ದ
ಈ ಸ್ಥಳಕ್ಕೆ ಅವನ
ಹೆಸರಿನ ಝರಿಯಿಂದಾಗಿಯೇ ಝರಣಿ ಎನ್ನುವ ಹೆಸರು ಬಂದಿದೆ.
No comments:
Post a Comment