Friday, July 15, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 73

ಭೀಮಾಶಂಕರ (Bhimashankara)

ಭೀಮಾಶಂಕರ ದೇವಾಲಯ ವು, ಮಹಾರಾಷ್ಟ್ರದ ಪೂನಾ ಸಮೀಪದ ಖೇಡ್ ನ ವಾಯವ್ಯ ದಿಕ್ಕಿನಲ್ಲಿ 50 ಕಿಲೋಮೀಟರ್ ದೂರದಲ್ಲಿರುವ ಭೋರ್ ಗಿರಿ ಎಂಬ ಹಳ್ಳಿಯಲ್ಲಿ ಸ್ಥಾಪಿತವಾಗಿದೆ. ಈ ದೇವಾಲಯವು ಸಹ್ಯಾದ್ರಿ ಪರ್ವತಗಳ ಘಟ್ಟ ಪ್ರದೇಶದಲ್ಲಿ ಪೂನಾದಿಂದ 110 ಕಿಲೋಮೀಟರ್ ಗಳ ದೂರಕ್ಕೆ ನೆಲೆಗೊಂಡಿದೆ. ಭೀಮಾಶಂಕರ ದೇವಾಲಯದ ತಟದಲ್ಲಿ ಭೀಮಾನದಿಯ ಉಗಮವಾಗುತ್ತದೆ. ಇದು ಬ್ರಹ್ಮಪುರ ಪರ್ವತ ಶಿಖರದಲ್ಲಿದ್ದು ಭೀಮಾ ನದಿ ಇಲ್ಲಿ ಉಗಮವಾಗುವುದು. ಸುಂದರ ದೇಗುಲ, ಪ್ರಾಕಾರ ಭವ್ಯ ಗೋಪುರಗಳು ಹಸಿರಿನ ಮಧ್ಯೆ ಕಂಗೊಳಿಸುತ್ತವೆ. ಲಿಂಗದ ಮಧ್ಯದಲ್ಲಿ ಗೆರೆ ಇದ್ದು, ಇದು ಶಿವ ಶಕ್ತಿ ಸ್ವರೂಪವಾಗಿದೆ. ಇದನ್ನು ಅರ್ಧನಾರೀಶ್ವರ ರೂಪ ಎಂದೂ ಶಿವಲೀಲಾಮೃತ ವರ್ಣಿಸುತ್ತದೆ. ಸಂತ ರಾಮದಾಸರು, ಗಂಗಾಧರ ಪಂಡಿತರು, ಸಂತ ಜ್ಞಾನೇಶ್ವರರು, ವರದಹಳ್ಳಿ ಶ್ರೀಧರ ಸ್ವಾಮಿಗಳು ಮೊದಲಾದ ಮಹಿಮರು ತಪಸ್ಸು ಮಾಡಿ ಅನುಗ್ರಹ ಪಡೆದ ಸ್ಥಳವಿದು. ಪೋರ್ಚುಗೀಸರು ನೀಡಿದರು ಎನ್ನಲಾದ  ಬೃಹದಾಕಾರದ ತೂಗಾಡುವ ಘಂಟೆ ಇಲ್ಲಿನ ಇನ್ನೊಂದು ವಿಶೇಷ.


ಮಹಾಶಿವರಾತ್ರಿಯಂದು ಇಲ್ಲಿ ದೊಡ್ಡ ರಥೋತ್ಸವ ಜರುಗುತ್ತದೆ. ಪ್ರತಿ ಸೋಮವಾರ ವಿಶೇಷ ಪೂಜೆಗಳಿದ್ದು, ಪ್ರತಿನಿತ್ಯವೂ ಮೂರು ಬಾರಿ ರುದ್ರಾಭಿಷೇಕ, ಪಂಚಾಮೃತ ಸ್ನಾನ ನಡೆಯುವುದು ಇಲ್ಲಿನ ವಿಶೇಷ.

***

ವೃತ್ರಾಸುರನನ್ನು ಸಂಹರಿಸಿ ಕೆಲಕಾಲ ಇಲ್ಲಿ ವಿಶ್ರಮಿಸಿದ ಶಿವನ ಮೈಯಿಂದ ಇಳಿದ ಬೆವರೇ ಭೀಮಾನದಿ ಆಯಿತು. ಶಿವ ಅಲ್ಲಿ ನೆಲೆಸಿ ಭೀಮಶಂಕರನಾದ.  ಭೀಮಾಸುರನೆಂಬ ಅಸುರ ಸುದೇಷ್ಣೆ ಎಂಬ ಮಹಾರಾಣಿಯ ಸೌಂದರ್ಯಕ್ಕೆ ಮಾರುಹೋಗಿ ಅವಳ ಪತಿ ಸುಲಕ್ಷಣನ ಜೊತೆ ಬಂಧಿಸಿ ಕಾರಾಗೃಹದಲ್ಲಿಟ್ಟಾಗ ಅವರು ಮೃತ್ತಿಕಾಲಿಂಗವನ್ನು ಪೂಜಿಸುತ್ತಿದ್ದಾರೆ ಎಂದು ತಿಳಿದು ನಾಶ ಮಾಡಲು ಹೋದಾಗ, ಶಿವನು ಅವತರಿಸಿ ಭೀಮಾಸುರನನ್ನು ಸಂಹರಿಸಿ, ಭಕ್ತರ ಕೋರಿಹೆಯ ಮೇರೆಗೆ ಇಲ್ಲೇ ನಿಂತು ಭೀಮಶಂಕರನಾದ. 

No comments:

Post a Comment