ಮೈಲಾಪುರ್, ಚೆನ್ನೈ (Mylapore,Chennai)
ಚೆನ್ನೈ - ತಮಿಳುನಾಡಿನ ರಾಜಧಾನಿ. ಸಮುದ್ರ ತಟದಲ್ಲಿರುವ ಈ ಊರನ್ನು 'ಮದರಾಸು' ಎಂದು ಕರೆಯಲಾಗುತ್ತಿತ್ತು. ಬ್ರಿಟೀಷರಿಟ್ಟ ಈ ಹೆಸರನ್ನು 1997ರಲ್ಲಿ ತಮಿಳುನಾಡು ಸರ್ಕಾರ "ಚೆನ್ನೈ" ಎಂದು ಬದಲಿಸಿದೆ. ಭಾರತದ ದೊಡ್ಡ ನಾಲ್ಕನೇ ಮೆಟ್ರೋಪಾಲಿಟನ್ ನಗರವಾಗಿರುವ ಚೆನ್ನೈಬಂಗಾಳ ಕೊಲ್ಲಿಯ ಕೋರಮಂಡಲ್ ತೀರದಲ್ಲಿ ಇದೆ. ಇ ನಗರದ ಅಂದಾಜು ಜನಸಂಋಯ 7.60 ರಂತೆ ಮಿಲಿಯನ್ (2006), ಸುಮಾರು 368 ವರ್ಷಗಳ ಇತಿಹಾಸವಿರುವ ಈ ನಗರ ಜಗತ್ತಿನ ಆತಿ ದೊಡ್ಡ್ಡ ನಗರಳ ಪಟ್ಟೀಯಲಿ 36ನೇ ಸ್ಥಾನದಲ್ಲಿದೆ.
ಚೆನ್ನೈ ವಾಣಿಜ್ಯ ಮತ್ತು ಉದ್ಯಮ ಕೇಂದ್ರವಾಗಿದ್ದು ತನ್ನ ಸಾಂಸ್ಕೃತಿಕ ಪರಂಪರೆ ಮತ್ತು ದೇಗುಲಶಿಲ್ಪಕಲೆಗಳಿಂದಾಗಿ ಸುಪ್ರಸಿದ್ಧವಾಗಿದೆ. ಚೆನ್ನೈ ಭಾರತದ ಎರಡನೇ ವಾಹನ ರಾಜಧಾನಿಯಾಗಿದ್ದು, ವಾಹನೋದ್ಯಮದ ಪ್ರಮುಖ ಕೇಂದ್ರವಾಗಿದೆಲಾಗುತ್ತದೆ.ದೇಶದ ಹೆಚ್ಚಂಶ ವಾಹನಗಳು ಅಲ್ಲಿಯೇ ತಯಾರಾಗುತ್ತವೆ. ಚೆನ್ನೈ ಅನ್ನು ದಕ್ಷಿಣ ಏಶಿಯಾದ ಡೆಟ್ರಾಯಿಟ್ ಎಂದು ಕರೆಯಲಾಗುತ್ತದೆ. 13 ಕಿಮೀ ಉದ್ದದ ರೀನಾ ಬೀಚ್ ನಗರದ ಪೂರ್ವ ತೀರವಾಗಿದ್ದು, ಜಗತ್ತಿನ ಅತ್ಯಂತ ಉದ್ದವಾದ ಸಮುದ್ರಂಡೆಗಳಲ್ಲೊಂದಾಗಿದೆ.
'ಮದ್ರಾಸುಪಟ್ನಂ' ಅಥವಾ ಮದ್ರಾಸನ್ನು ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಖಾಯಂ ನೆಲೆಗಾಗಿ 1639 ರಲ್ಲಿ ಆಯ್ಕೆ ಮಾಡಿಕೊಂಡಿತು. ಮದ್ರಾಸು ನಗರದ ದಕ್ಷಿಣ ಭಾಗದಲ್ಲಿ 'ಚೆನ್ನಪಟ್ಟಣಂ' ಎಂಬ ಚಿಕ್ಕ ಪೇಟೆಯಿದೆ. ಕಾಲಾಂತರದಲ್ಲಿ ಎರಡೂ ಪಟ್ಟಣಗಳೂ ಸೇರಿ 'ಮದರಾಸು' ಆಯಿತು. ನಾಯಕ ಜನಾಂಗದ ಚೆನ್ನಪ್ಪನಾಯಕನ್ ಎಂಬ ಮುಖಂಡನೊಬ್ಬನ ಹೆಸರಿಂದ ಈ ಪ್ರದೇಶ 'ಚೆನ್ನಪಟ್ಟಣ' ಎಂದು ಗುರುತಿಸಲ್ಪಟ್ಟಿತ್ತು. 1639ರಲ್ಲಿ ಸ್ಥಳೀಯ ನಾಯಕನಿಂದ ಭೂಮಿಯನ್ನು ಖರೀದಿಸಿದ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಅಧಿಕಾರಿ ಫ್ರಾನ್ಸಿಸ್ ಡೇ ಸೆಂಟ್ ಜಾರ್ಜ್ ಇಲ್ಲಿ ಕೋಟೆಯನ್ನು ನಿರ್ಮಿಸಿದ್ದನು. ಮತ್ತು ಈ ಪ್ರದೇಶಕ್ಕೆ 'ಮದ್ರಾಸ್' ಎಂದು ಪುನರ್ ನಾಮಕರಣ ಮಾಡಿದ್ದನು. ಈ ಕೋಟೆ ಕಟ್ಟಡದಲ್ಲಿಯೇ ಇಂದು ತಮಿಳುನಾಡು ಸರ್ಕಾರದ ಆಡಳಿತ ಕಛೇರಿ ಕಾರ್ಯನಿರ್ವಹಿಸುತ್ತಿದೆ.
ಇನ್ನ್ನು ಚೆನ್ನೈ ಸುತ್ತಲಿನ ಪ್ರದೇಶವೂ ಒಂದನೇ ಶತಮಾನದಷ್ಟು ಹಿಂದಿನ ಕಾಲದಿಂದಲೂ ಪ್ರಮುಖ ಆಡಳಿತ, ಸೈನ್ಯ ಮತ್ತು ಆರ್ಥಿಕ ಕೇಂದವಾಗಿತ್ತು. ದಕ್ಷಿಣ ಭಾರತದ ಸಾಮ್ರಾಜ್ಯಗಳು, ಪ್ರಮುಖವಾಗಿ ಪಲ್ಲವ, ಚೋಳ, ಪಾಂಡ್ಯ, ಮತ್ತು ವಿಜಯನಗರ ಸಾಮ್ರಾಜ್ಯಗಳ ಅರಸರು ಈ ಪ್ರದೇಶವನ್ನಾಳಿದ್ದಾರೆ. ಇಂದಿನ ಮಹಾನಗರದ ಭಾಗವಾಗಿರುವ ಮೈಲಾಪುರ ಪಟ್ಟಣವು ಒಂದು ಕಾಲಕ್ಕೆ, ಪಲ್ಲವ ಸಾಮ್ರಾಜ್ಯದ ಮುಖ್ಯ ಬಂದರು ಆಗಿತ್ತು. 1522 ರಲ್ಲಿ ಪೋರ್ತುಗೀಸ್ರು ಬಂದು ಕೋಟೆಯನ್ನು ಕಟ್ಟಿಸಿದರು. ಕ್ರೈಸ್ತ ಧರ್ಮ ಪ್ರಸಾರ ಕಾರ್ಯ ನಡೆಸಿದ ಅವರು ಇದನ್ನು ಸಂತ ಥಾಮಸರ ಹೆಸರಿನಲ್ಲಿ ಸಾವೋ ಟೋಮ್ ಎಂದು ಕರೆದಿದ್ದರು. ಬಳಿಕ ಡಚ್ಚರು ತಮ್ಮ ವಸಾಹತನ್ನು ಇಲ್ಲಿ ಸ್ಥಾಪಿಸಿದ್ದರು. 1612 ರಲ್ಲಿ ಚೆನ್ನೈನ ಉತ್ತರದಲ್ಲಿರುವ ಪುಲಿಕಾಟ್ ನಲ್ಲಿ ಡಚ್ಚರು ವಸಾಹತು ನಿರ್ಮಾಣ ಮಾಡಿದರು. ಆದರೆ ಬ್ರಿಟೀಷರು ಇಲ್ಲಿ ಆಗಮಿಸಿದ ಬಳಿಕ ತಮ್ಮ ಶಾಸ್ವತ ವಸಾಹತನ್ನಾಗಿ ಮಾಡಿಕೊಂಡದ್ದಲ್ಲದೆ ವಂದವಾಸಿಯ ನಾಯಕರಾಗಿದ್ದ ದಮೆರ್ಲ ವೆಂಕಟಾದ್ರಿಯವರಿಂದ 22 ನೇ ಆಗಸ್ಟ್ 1639 ರಂದು ಈ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದರು.
ಪೂರ್ವ ಸಮುದ್ರ ತೀರ - ಮರೀನಾ ಬೀಚ್, ಚೆನ್ನೈ - Marina Beach |
ಇಂತಹಾ ಅದ್ಭುತ ಐತಿಹಾಸಿಕ ನಗರವಾದ ಚೆನ್ನೈನ ಮೈಲಾಪುರದಲ್ಲಿರುವ ಪಕಪಾಲೀಶ್ವರ ದೇವಾಲಯ ಪವಿತ್ರವೂ, ಪುರಾತವೂ ಆದ ದೇವಾಲಯಗಳಲ್ಲಿಇ ಒಂದು. ರಾಮಕೃಷ್ಣ ಮಠದ ಪಕ್ಕದಲ್ಲಿಯೇ ಇರುವ ಈ ದೇವಾಲಯದ ಆರಾದ್ಯ ದೈವ ಕಪಾಲೀಶ್ವರ ಸ್ವಾಮಿ. ಹಾಗೆಯೇ ಇಲ್ಲಿ ನೆಲೆಯಾದ ಅಮ್ಮನವರ ಹೆಸರು ಕರ್ಪಗಂಬಾಳ್ ಎಮ್ದಾಗಿದೆ.
ಪೂರ್ವ ಸಮುದ್ರ ತೀರ - ಮರೀನಾ ಬೀಚ್, ಚೆನ್ನೈ - Marina Beach |
ಮರೀನಾ ಬೀಚ್ ನಲ್ಲಿ ಸೂರ್ಯೋದಯದ ಸುಂದರ ದೃಶ್ಯ |
ಪುರಾಣದ ಕಥೆ ಹೇಳುವಂತೆ ಇಲ್ಲಿ ತಾಯಿ ಉಮಾದೇವಿ ಶಿವನನ್ನು ನವಿಲಿನ ರೂಪದಲ್ಲಿದ್ದು ಪೂಜಿಸಿದ್ದಾಳೆ ತಮಿಳಿನಲ್ಲಿ ನವಿಲಿಗೆ ಮೆಯಿಲ್ ಎನ್ನಲಾಗುವುದು. ಇದೇ ಕಾರಣಕ್ಕೆ ಈ ಪ್ರದೇಶ ಮೈಲಾಪುರ ಎನಿಸಿದೆ. ಕಪಾಲೀಶ್ವರ ದೇವಾಲಯದಲ್ಲಿರುವ ಶಾಲ ವೃಕ್ಷದ ಕೆಳಗೆ ಇಂದೂ ಸಹ ಸಣ್ಣ ಕಲ್ಲೊಂದನ್ನು ಣಾವು ನೋಡುತ್ತೇವೆ. ಇದು ನವಿಲಿನ ಸ್ವರೂಪದ ಉಮೆಯು ಶಿವನನ್ನು ಪೂಜಿಸಿದ ಸ್ಥಳ ಎನ್ನಲಾಗುವುದು.
ಕಪಾಲೀಶ್ವರ ದೇವಾಲಯ - Kapaleeswarar Templ |
ಸೆಂಟ್ ಜಾರ್ಜ್ ಕೋಟೆ - Fort St. George |
.
ಸೆಂಟ್ ಜಾರ್ಜ್ ಕೋಟೆ - Fort St. George in 1858 |
No comments:
Post a Comment