6 ಅಡಿ ಉದ್ದದ ಮುಖ, 1 ಅಡಿ ಕುತ್ತಿಗೆ, 22.3 ಅಡಿಗಳ ತೋಳುಗಳು, 19.5 ಅಡಿಗಳ ಸೊಂಟದ ಸುತ್ತಳತೆ, 13 ಅಡಿಗಳ ಬೆನ್ನಿನ ಭಾಗ, 13.5 ಅಡಿಗಳ ಭುಜದ ಅಗಲ, 1.4 ಅಡಿಗಳ ದಪ್ಪ ಪಾದನೆಗಳು, 1 ಅಡಿ ಹೆಬ್ಬೆರಳು, 3.5 ಅಡಿಗಳ ಕಿವಿಗಳು, ಹಾಗೂ 1.10 ಅಡಿಗಳ ಮೂಗು, ವಿಗ್ರಹವು ಪಾದದಿಂದ ನೆತ್ತಿಯವರೆಗೆ 39 ಅಡಿಗಳು ಎತ್ತರ ಪೀಠ 13 ಅಡಿ ಪೀಠ ಸಹಿತ ವಿಗ್ರಹದ ಎತ್ತರ 52 ಅಡಿ ಬಾಹುಬಲಿ ನಿರ್ಮಾಣವಾಗಿದ್ದ. ರೆಂಜಾಳ ಗೋಪಾಲಶಣೈ ಎಂಬುವವರು ಇದನ್ನು ಕೆತ್ತಿದ್ದರು
ಕಾರ್ಕಳದಿಂದ 69 ಕಿಮೀ ದೂರದ ಧರ್ಮಸ್ಥಳಕ್ಕೆ 1973ರ ಫೆ.15ರಂದು ಪ್ರಯಾಣ ಪ್ರಾರಂಭಿಸಿದ ಬಾಹುಬಲಿ .ಮೂರು ದಿನಗಳ ಕಾಲ ಪ್ರಯಾಣ ಮಾಡಿ ಫೆ.18ಕ್ಕೆ ಧರ್ಮಸ್ಥಳ ಸೇರಿದನು. ಆದರೆ. ವಿಗ್ರಹವನ್ನು ರತ್ನಗಿರಿ ಬೆಟ್ಟದಲ್ಲಿ ನಿಲ್ಲಿಸಿ ಪ್ರತಿಷ್ಠಾಪನೆ ಮಹೋತ್ಸವ ನೆರವೇರಲು ಮತ್ತೆ ನಾಲ್ಕು ವರ್ಷ ಹಿಡಿದಿತ್ತು.1982ರಲ್ಲಿ ಈ ಕಾರ್ಯ ಯಶಸ್ವಿಯಾಗಿ ಮುಗಿದು ಮೊದಲ ಮಸ್ತಕಾಭಿಷೇಕ ನಡೆದಿತ್ತು.
ಬಾಹುಬಲಿಯ ಬೃಹತ್ ಏಕಶಿಲಾ ಮೂರ್ತಿಯನ್ನು ಸಾಗಿಸಿದ್ದು ಸಹ ರೋಚಕ ಗಾಥೆಯಾಗುತ್ತದೆ. ಕಾರ್ಕಳ-ಧರ್ಮಸ್ಥಳದ ಮಾರ್ಗದುದ್ದ್ದಕ್ಕೂ ಜನರು ಲಕ್ಷ ಸಂಖ್ಯೆಯಲ್ಲಿ ಸೇರಿ ಜಯಘೋಷಗಳನ್ನು ಹಾಕಿ ಬಾಹುಬಲಿಗೆ ಸ್ವಾಗತ ಕೋರುತ್ತಿದ್ದರು. ಮುಂಬೈ ಮೂಲದ ಮಂಗತ್ ರಾಮ್ ಸಂಸ್ಥೆ ಈ ಬಾಹುಬಲಿ ವಿಗ್ರಹ ಸಾಗಾಟದ ಜವಾಬ್ದಾರಿ ಹೊತ್ತಿತ್ತು. ಮಾಲೀಕ ದೀನನಾಥ ಜಬಾನ್ ಈ ಸಂಸ್ಥೆಯ ಮಾಲೀಕನಾಗಿದ್ದನು. ಅದಕ್ಕಾಗಿ ದೈತ್ಯ ಗಾತ್ರದ ಟ್ರ್ಯಾಲಿ ಹಾಗೂ ಅದಕ್ಕೆ ಪೂರಕವಾಗಿರುವ ಟಯರ್ ಗಳ ನಿರ್ಮಾಣ ಮಾಡಲಾಗಿತ್ತು. 64 ಗಾಲಿಗಳುಳ್ಳ 20 ಟನ್ ಭಾರದ, 40 ಅಡಿ ಉದ್ದದ ಟ್ರ್ಯಾಲಿ ಅದಾಗಿತ್ತು
ನನ್ನ ಈ ಲೇಖನ 09 ಫೆ.2019 ರಂದು ಕನ್ನಡಪ್ರಭ.ಕಾಂನಲ್ಲಿ ಪ್ರಕಟವಾಗಿತ್ತು
No comments:
Post a Comment