ಉದಯ ಟಿವಿಯ ಧಾರಾವಾಹಿಗಳು ತನ್ನ ಉತ್ತಮ ಕಥೆಗಳಿಂದ ಕನ್ನಡಿಗರ ಮನೆ ಮಾತಾಗಿದೆ. 30 ರ್ಷಗಳಿಂದ ಉದಯ ಟಿವಿ ಕನ್ನಡದ ವೀಕ್ಷಕರ ಮನರಂಜಿಸುತ್ತಿರುವ ವಾಹಿನಿ. ಉದಯ ಟಿವಿಯಲ್ಲಿ ಸಂಜೆ 6.30ಕ್ಕೆ ಪ್ರಸಾರವಾಗುತ್ತಿರುವ ಗಂಗೆ ಗೌರಿ ಧಾರಾವಾಹಿ ನೂರಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿ ಕನ್ನಡಿಗರ ಮನ ಗೆದ್ದಿದೆ. ಅತ್ಯಂತ ಕಡಿಮೆ ಸಮಯದಲ್ಲೇ ಜನಪ್ರಿಯವಾಗಿರುವ ಈ ಧಾರಾವಾಹಿಯ ಕಥೆ ಮುಖ್ಯ ತಿರುವನ್ನು ಪಡೆಯುತ್ತಿದೆ.
ಸಿಟಿಯಲ್ಲಿ ಬೆಳೆದ ಹೀರೋ ಅಭಯ್ ಗೆ ಹಳ್ಳಿ ಹುಡುಗಿ ಗೌರಿ ಮೇಲೆ ಪ್ರೀತಿ ಹುಟ್ಟುತ್ತದೆ. ಗೌರಿಯ ತಂಗಿ ಗಂಗೆಗೂ ಅಭಯ್ ಅಂದರೆ ಇಷ್ಟ. ಈ ವಿಷಯ ಗೊತ್ತಾಗಿ ಅಕ್ಕ ಗೌರಿ ತನ್ನ ಪ್ರೀತಿಯನ್ನು ಗಂಗೆಗೋಸ್ಕರ ತ್ಯಾಗ ಮಾಡಲು ಸಿದ್ಧಳಾಗುತ್ತಾಳೆ ಮತ್ತು ಅಭಯ್ ಕೂಡ ಗಂಗೆಯನ್ನು ಮದುವೆಯಾಗಲು ಒಪ್ಪಿಸುತ್ತಾಳೆ.
ಈ ಮದುವೆ ಡ್ರಾಮಾ ಕಥೆಯನ್ನು ಕೇಳುವಾಗಲೇ ತುಂಬಾ ಎಕ್ಸೈಟ್ಮೆಂಟ್ ಆಗಿತ್ತು. ಅದನ್ನ ತೆರೆಯ ಮೇಲೆ ಇನ್ನೂ ಚೆನ್ನಾಗಿ ತಂದಿದೀವಿ. ಪ್ರೇಕ್ಷಕರನ್ನು ಹಿಡಿದು ನಿಲ್ಲಿಸುವಂತಹ ಭರ್ಜರಿ ಡ್ರಾಮಾ ಇದರಲ್ಲಿದೆ. ಗಂಗೆ ಗೌರಿ ಧಾರಾವಾಹಿ ಪ್ರೇಕ್ಷಕರಿಗೆ ಇನ್ನೂ ಹೆಚ್ಚು ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ. – ವರ್ಧನ್ ಹರಿ (ನಿರ್ಮಾಪಕ)j
ಇತ್ತ ಗೌರಿಗೂ ಅಜಯ್ ಎನ್ನುವ ಹುಡುಗನ ಜೊತೆ ಮದುವೆ ನಿಶ್ಚಯವಾಗಿರುತ್ತೆ. ಮನಸ್ಸಿಲ್ಲದಿದ್ದರೂ ಅನಿವರ್ಯವಾಗಿ ಗೌರಿ ಅಜಯ್ ಜೊತೆ ಮದುವೆಗೆ ಒಪ್ಪಿರುತ್ತಾಳೆ. ಒಂದೇ ಮಂಟಪದಲ್ಲಿ ಅಕ್ಕ ತಂಗಿಯರ ವಿವಾಹ ಮಾಡಲು ಎಲ್ಲ ಸಿದ್ಧತೆ ಆಗಿರುತ್ತದೆ.
ಧೈರ್ಯವಂತೆ ಗಂಗೆ ಮನೆಯ ಸೊಸೆಯಾಗಿ ಬಂದರೆ ತನ್ನ ಎಲ್ಲ ದುಷ್ಟ ಉಪಾಯಗಳು ತಲೆಕೆಳಗಾಗುತ್ತೆ ಎನ್ನುವುದು ಅಭಯ್ ಅಕ್ಕ ಅಖಿಲಾಗೆ ಭಯ. ಅದಕ್ಕೆ ಈ ಮದುವೆಯನ್ನು ನಿಲ್ಲಿಸಲು ಅಖಿಲಾ ಎಲ್ಲ ತಯಾರಿ ಮಾಡಿಕೊಂಡಿರುತ್ತಾಳೆ.
ಆದರೆ ಗೌರಿ ಅಂದುಕೊಂಡಂತೆ ಎಲ್ಲ ನಡೆಯುತ್ತಾ? ಗಂಗೆ ಆಸೆಪಟ್ಟಂತೆ ಅಭಯ್ ಅವಳ ಕತ್ತಿಗೆ ತಾಳಿ ಕಟ್ಟುತ್ತಾನಾ? ಅಭಯ್ ಪತ್ನಿಯ ಜಾಗವನ್ನು ಗಂಗೆ ತುಂಬುತ್ತಾಳಾ ಅಥವಾ ಗೌರಿನಾ? ಅಖಿಲ ಸಂಚು ಏನು? ಎನ್ನುವ ರೋಚಕ ಘಟ್ಟಕ್ಕೆ ಈಗ ಕಥೆ ತಲುಪಿದೆ.
ಮೇ 6 ರಿಂದ ಗಂಗೆ ಗೌರಿ ಕಲ್ಯಾಣದ ವಿಶೇಷ ಸಂಚಿಕೆಗಳು ಉದಯ ಟಿವಿಯಲ್ಲಿ ಸೋಮವಾರದಿಂದ ಶನಿವಾರದವರೆಗೆ ಸಂಜೆ ೬:೩೦ಕ್ಕೆ ಪ್ರಸಾರವಾಗಲಿದೆ.
ದರ್ಶ್ ಚಂದ್ರಪ್ಪ, ವಿದ್ಯಶ್ರೀ, ರ್ಶಿನಿ, ಅಭಿಜಿತ್, ರೇಣುಕಾ ಬಾಲಿ, ಅಪರ್ವ ಭರಧ್ವಾಜ್, ಹೇಮಾ ಬೆಳ್ಳೂರು, ಲಕ್ಷ್ಮೀ ಸಿದ್ದಯ್ಯ, ದೀಪಕ್ ಮಹದೇವ್ ಮುಂತಾದ ಅದ್ಭುತ ಕಲಾವಿದರಿರುವ ಈ ಧಾರಾವಾಹಿಯನ್ನು ವಿನೋದ್ ದೋಂಡಾಳೆ ನಿರ್ದೇಶಿಸುತ್ತಿದ್ದಾರೆ. ಕನ್ನಡಕ್ಕೆ ಅನೇಕ ಹಿಟ್ ಸೀರಿಯಲ್ ಗಳನ್ನು ಕೊಟ್ಟ ವೃದ್ಧಿ ಕ್ರಿಯೇಷನ್ ಗಂಗೆ ಗೌರಿ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿ ಹೊತ್ತಿದೆ.
No comments:
Post a Comment