Sunday, January 12, 2025

ಯಾವುದೇ ಕಾರ್ಯ ಯಾಂತ್ರಿಕವಾದರೆ ಅಲ್ಲಿ ಹೊಸ ವಿಚಾರಗಳು ಮೂಡಲು ಆಸ್ಪದವಿಲ್ಲ: ಎಸ್.ಎಲ್. ಭೈರಪ್ಪ

ಯಾವುದೇ ಕಾರ್ಯ ಯಾಂತ್ರಿಕವಾದರೆ ಅಲ್ಲಿ ಹೊಸ ವಿಚಾರಗಳು ಮೂಡಲು ಆಸ್ಪದವಿರುವುದಿಲ್ಲ ಅಂತಹ ಕ್ರಿಯೆಗಳಿಂದ ಸಮಾಜಕ್ಕೆ ಹೊಸ ತೇನನ್ನು ನೀಡಲಾಗುವುದಿಲ್ಲ ಸಾಹಿತ್ಯೋತ್ಸವವನ್ನು ವರ್ಷ ವರ್ಷ ನಡೆಸಿಯೂ ಹೊಸತನವನ್ನು ಕಾಪಾಡಿಕೊಂಡು ಗುರಿಯನ್ನು ತಲುಪುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪ ಹೇಳಿದ್ದಾರೆ. ಏಳನೇ ವರ್ಷದ ಮಂಗಳುರು ಸಾಹಿತ್ಯೋತ್ಸವ (ಲಿಟ್ ಫೆಸ್ಟ್) ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.=


ಮಂಗಳೂರು ಲಿಟ್ ಫೆಸ್ಟ್ ತನ್ನ ಏಳನೆಯ ಆವೃತ್ತಿಯನ್ನು ಆಚರಿಸುತ್ತಿರುವುದು ನನಗೆ ಬಹಳ ಸಂತೋಷ ನೀಡಿದೆ ವರ್ಷ 2017 ರಲ್ಲಿ ಮೊದಲ ಬಾರಿ ನಾನು ಭಾಗವಹಿಸಿದ್ದೆ ಮಂಗಳೂರಿನವರು ಏನನ್ನು ಮಾಡಿದರು ಅದರಲ್ಲಿ ಒಂದು ಅಚ್ಚುಕಟ್ಟು ದೂರದೃಷ್ಟಿ ಇದ್ದೆ ಇರುತ್ತೆ ಈ ಕಾರಣಕ್ಕೆ ಹೋಟೆಲ್ ಉದ್ಯಮದಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದರಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ದೇಶಕ್ಕೆ ಮಾದರಿಯಾಗಿದೆ ಎಂದರು.


ಈ ಭೂಮಿ ಕನ್ನಡ ನಾಡಿಗೆ ಅನೇಕ ವೈದ್ಯರು ಶಿಕ್ಷಕರನ್ನು ಮಾತ್ರವಲ್ಲ ಪ್ರಾಜ್ಞ ಸಾಹಿತ್ಯಗಳನ್ನು ನೀಡಿ ನೀಡಿದೆ ಶಿವರಾಮ ಕಾರಂತರು ರಾಷ್ಟ್ರಕವಿ ಗೋವಿಂದ ಪೈ ಪಂಜೆ ಮಂಗೇಶ್ ರಾಯರು ಸೇಡಿಯಾಪು ಕೃಷ್ಣ ಭಟ್ಟರು, ವ್ಯಾಸರಾಯ ಬಲ್ಲಾಳರು ಯಶವಂತ ಚಿತ್ತಾಲರು ಹೀಗೆ ಹೆಸರುತ್ತಾ ಹೋದರೆ ದೊಡ್ಡ ಪಟ್ಟಿಯೇ ಆಗುತ್ತದೆ ಶಿವರಾಮ ಕಾರಂತರಂತೂ ತುರ್ತು ಪರಿಸ್ಥಿತಿಯಲ್ಲಿ ತಮ್ಮ ರಾಷ್ಟ್ರ ಪ್ರಶಸ್ತಿ ಪದ್ಮಭೂಷಣವನ್ನು ಹಿಂತಿರುಗಿಸುವುದನ್ನು ಮರೆಯಲಾದೀತೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾಗಲೂ ರಾಷ್ಟ್ರದ ಹಿತ ಐಕ್ಯಗಳಿಗೆ ಪ್ರಾಧಾನ್ಯ ನೀಡಿದವರು ಕಾರಂತರು  ಅಂತಹ ಹಿನ್ನೆಲೆಯಲ್ಲಿ ಬಂದ ನೀವು ಸಾಹಿತ್ಯೋತ್ಸವಕ್ಕೆ ಒಂದು ಗುರಿಯನ್ನು ಇರಿಸಿಕೊಂಡು ಸಾಗುತ್ತಿದ್ದೀರಿ ಎಂಬುದು ನನ್ನ ಭಾವನೆ ಎಂದು ಭೈರಪ್ಪ ಹೇಳಿದ್ದಾರೆ. 


ಇದನ್ನು ನಾನು ಕಳೆದ ಬಾರಿಯೇ ವ್ಯಕ್ತಪಡಿಸಿದ್ದೆ ಈಗ ಪ್ರತಿ ವರ್ಷವೂ ಸ್ವಲ್ಪ ಸ್ವಲ್ಪವಾಗಿ ಗುರಿಯನ್ನು ತಲುಪುತ್ತಿದ್ದೀರಿ ಎಂದು ಭಾವಿಸಿದ್ದೇನೆ ವರ್ಷಕ್ಕೊಮ್ಮೆ ದೇಶದ ಮೂಲೆ ಮೂಲೆಗಳಿಂದ ಪ್ರತಿಷ್ಠಿತರನ್ನು ಸಾಧಕರನ್ನು ಕರೆಸಿ ಅವರಿಗೆ ಹಲವು ವೇದಿಕೆಗಳನ್ನು ಒದಗಿಸಿ ವಿಚಾರ ಸಂಕೀರ್ಣಗಳನ್ನು ಏರ್ಪಡಿಸುತ್ತಿದ್ದೀರಿ ಇದು ಸಾಹಸ ನಿಜ ಆದರೆ ಇಲ್ಲಿ ಚರ್ಚಿಸಲ್ಪಡುತ್ತಿರುವ ವಿಚಾರಗಳು ತಲುಪಬೇಕಾಗದವರನ್ನು ತಲುಪುತ್ತಿವೆಯೇ ನೀವು ನಿರೀಕ್ಷಿಸಿದ ಪರಿಣಾಮ ಆಗುತ್ತಿದೆಯೇ ಎಂಬ ಆತ್ಮವಿಶ್ವಾಸವು ಬಹಳ ಮುಖ್ಯ ಅದಿಲ್ಲವಾದರೆ ವರ್ಷಕ್ಕೊಂದಾವರ್ತಿ ನಡೆಸಲೇಬೇಕಾದ ಕಾರ್ಯಕ್ರಮವಾಗಿ ಇದು ಯಾಂತ್ರಿಕತೆಗೆ ತಿರುಗುತ್ತದೆ ಯಾವುದೇ ಕಾರ್ಯ ಯಾಂತ್ರಿಕವಾದರೆ ಅಲ್ಲಿ ಹೊಸ ವಿಚಾರಗಳು ಮೂಡಲು ಆಸ್ಪದವಿರುವುದಿಲ್ಲ ಅಂತಹ ಕ್ರಿಯೆಗಳಿಂದ ಸಮಾಜಕ್ಕೆ ಹೊಸ ತೇನನ್ನು ನೀಡಲಾಗುವುದಿಲ್ಲ ಸಾಹಿತ್ಯೋತ್ಸವವನ್ನು ವರ್ಷ ವರ್ಷ ನಡೆಸಿಯೂ ಹೊಸತನವನ್ನು ಕಾಪಾಡಿಕೊಂಡು ಗುರಿಯನ್ನು ತಲುಪುವ ಹೊಣೆಗಾರಿಕೆ ನಿಮ್ಮ ಮೇಲಿದೆ ಅದನ್ನು ತಲುಪುತ್ತಿರುವುದೇ ತಲುಪುತ್ತಿರೆ ಎಂಬ ಭರವಸೆ ನನಗಿದೆ ಆದ್ದರಿಂದಲೇ ಈ ಒಳಸಿನಲ್ಲಿ ಪುನಃ ನಿಮ್ಮನ್ನೆಲ್ಲ ನೋಡಲು ಬಂದಿದ್ದೇನೆ ಈ ಉತ್ಸವ ಈ ಉತ್ಸವ ಹೊಸ ತಿಳಿವು ಪ್ರೇರಣೆಯಾಗಲಿ ಮುಖ್ಯವಾಗಿ ಯುವ ಮನಸ್ಸುಗಳನ್ನು ರಾಷ್ಟ್ರ ಹಿತದ ಚಿಂತನೆಗೆ ಹೆಚ್ಚಲಿ ನಿಮ್ಮೆಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು. 

ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ಡಾ. ರವಿ ಮುಖ್ಯ ಅತಿಥಿಯಾಗಿದ್ದರು. ಭಾರತ್ ಫೌಂಡೇಷನ್ ಟ್ರಸ್ಟ್ ಪ್ರತಿನಿಧಿ ಸುನೀಲ್ ಕುಲಕರ್ಣಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. 

No comments:

Post a Comment