Monday, July 01, 2013

ಮರೆತರೂ ಮರೆಯದೆ ಓದಬೇಕಾದ BOOKS

ಅಮ್ಮ ಹೇಳಿದ ಎಂಟು ಸುಳ್ಳುಗಳು

      ಕನ್ನಡ ಪ್ರಭ ಪತ್ರಿಕೆಯಲ್ಲು ಮುಖ್ಯ ಉಪ ಸಂಪಾದಕರಾಗಿರುವ . ಆರ್. ಮಣಿಕಾಂತ್ ರವರು ಬರೆದು ನೀಲಿಮಾ ಪ್ರಕಾಶನದವರು ಪ್ರಕಟಿಸಿರುವಅಮ್ಮ ಹೇಳಿದ ಎಂಟು ಸುಳ್ಳುಗಳುಇತ್ತೀಚೆಗೆ ನಾನು ಓದುತ್ತಿರುವ ಪುಸ್ತಕಗಳಲ್ಲಿ ನನ್ನನ್ನು ಬಹಳವೇ ಕಾಡಿದ ಪುಸ್ತಕ. ೨೦೦೯ ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡಮಿ ಪುರಸ್ಕಾರ ಲಭಿಸಿರುವ ಪುಸ್ತಕದಲ್ಲಿ  ಮಣಿಕಾಂತ್ ರವರು ಪುಸ್ತಕದಲ್ಲಿ ಸಾಮಾನ್ಯ ಹೃದಯಗಳಿಗೆ ತಟ್ಟುವಂತ್ಕತಹಾ ಅನೇಕ ಕಥೆಗಳನ್ನು ಹೇಳಿದ್ದಾರೆ. ಇವೆಲ್ಲವೂ ನಮ್ಮ ಸುತ್ತಮುತ್ತಲೂ ಬದುಕಿರುವ ನಮ್ಮವರದೇ ಕಥೆಗಳು, ಅದರಲ್ಲಿಯೂ ಕೆಲವು ಕಥೆಗಳು ಓದಿದಾಗ ಇದು ನಮ್ಮದೇ ಕಥೆಯೇನೋ ಎನ್ನಿಸದಿರದು.
     ಸಾಧಿಸಬೇಕೆಂಬ ಛಲವಿದ್ದು, ಎದುರಿನಲ್ಲೊಂದು ಗುರಿ, ಸಾಕಷ್ಟು ಪರಿಶ್ರಮವಿದ್ದರೆ ಯಾರು ಏನು ಬೇಕಾದರೂ ಸಾಧಿಸಬಹುದು. ಅಂತಹಾ ಕೆಲ ಸಾಧಕರು ನಮ್ಮ ನಡುವೆಯೇ ಇದ್ದಾರೂ ಅವರ ಕುರಿತ ಪರಿಚಯ ನಮಗಿರುವುದಿಲ್ಲ. ಇಲ್ಲಿ ಮಣಿಕಾಂತ್ ರವರು ಅಂತಹವರ ಬದುಕಿನ ಪರಿಚಯವನ್ನು ನಮಗೆ ನೀಡುತ್ತಾ ಮೂಲಕ ನಮ್ಮಲ್ಲಿಯೂ ಜೀವನೋತ್ಸಾಹ ಚಿಮ್ಮಿಸಬಲ್ಲ ಬರಹಗಳನ್ನು ಸಂಕಲನ ರೂಪದಲ್ಲಿ ನೀಡಿದ್ದಾರೆ.
     ಇಲ್ಲಿ ಬರುವ ವೀಣಕ್ಕ, ನಿಕ್, ನಾಗ್ ನರೇಶ್, ಗೋವಿಂದ ಮೊದಲಾದವರೆಲ್ಲರೂ ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದುಕೊಂಡು ತಮ್ಮ ಸ್ವಪ್ರಯತ್ನ, ಪರಿಶ್ರಮಗಳಿಂದ ಉನ್ನತ ಸಾಧನೆ ಮಡಿದವರು, ಇವರ ಕಥೆಗಳನ್ನೆಲ್ಲ ಓದಿದಾಗ ಯಾರಿಗಾದರೂ ಬದುಕುವ ಛಲ, ಚೈತನ್ಯ ಶಕ್ತಿ ಸ್ಪುರಿಸದಿರದು. ಇನ್ನು ಅರುಣ್ ಪ್ರಕಾಶ್ ಕಥೆ ಓದಿದಾಗ ರಾಷ್ತ್ರಪತಿಯಂತಹಾ ಉನ್ನತ ಪದವಿಯಲ್ಲಿದ್ದೂ ಸಣ್ಣ ಹಳ್ಳಿಯೊಂದರ ಪುಟ್ಟ ಬಾಲಕನ ಹೃದಯದಾಸೆಯನ್ನು ಮನ್ನಿಸಿದ ಕಲಾಂರವರ ವ್ಯಕ್ಥಿತ್ವಕ್ಕೆ ನಾವು ಹ್ಯಾಟ್ಸ್ ಆಫ಼್ ಹೇಳದಿರಲು ಸಾದ್ಯವೆ?
     ಜಾಕ್ವೆಲಿನ್ ಕಥೆಯನ್ನೋದಿದವರಿಗೆ ನಾವೆಲ್ಲಾ ಕಾಲಿಗೊಂದು ಸಣ್ಣ ಮುಳ್ಳು ಚುಚ್ಚಿದರೆ ಪಡುವ ಯಾತನೆ ಮಾಡುವ ಬಗೆ ಬಗೆಯ ಆರೈಕೆಗಳನ್ನು ನೆನೆದು ನಾಚಿಕೆಯಾಗುತ್ತದೆ, ಅಷ್ಟೇ ಅಲ್ಲ ಜೀವನದಲ್ಲಿ ಒಂದು ಚಿಕ್ಕ ಕಷ್ಟ ಬಂದರೂ ಆತ್ಮಹತ್ಯೆಯ ಯೋಚನೆ ಮಾಡುವ ಕಾಲದ ಯುವ ಜೀವಗಳಿಗೆ ಅವಳ ಜೀವನ ಸ್ಪೂರ್ತಿ ಒಂದು ಪಾಠವೆಂದರೆ ತಪ್ಪಾಗಲಾರದು.
     ಇಷ್ಟೆಲ್ಲ ಹೇಳಿದ ಮೇಲೆ ಪುಸ್ತಕದ ಶೀರ್ಷಿಕೆಯೇ ಆದಅಮ್ಮ ಹೇಳಿದ ಎಂಟು ಸುಳ್ಳುಗಳುಲೇಖನದ ಬಗ್ಗೆ ಹೇಳದಿದ್ದರೆ ತಪ್ಪಾಗುತ್ತದೆ. ತಾಯಿಯಾದವಳು ಮಕ್ಕಳ ಸುಖಕ್ಕಾಗಿ ಏನೆಲ್ಲ ತ್ಯಾಗ ಮಾಡುತ್ತಾಳೆನ್ನುವುದಕ್ಕೆ ಲೇಖನವೊಂದು ಅದ್ಭುತ ನಿದರ್ಶನ. ಇಲ್ಲಿನ ಅಮ್ಮ ಮಗನ ಸಂತೋಷಕ್ಕಾಗಿ ಸಮಾಧಾನಕ್ಕಾಗಿ ಹೇಳಿದ ಎಲ್ಲ ಮಾತುಗಳನ್ನು ಓದಿದ ಯಾರಿಗಾದರೂ ತಾಯಿಯ ಮೇಲೆ ಅಕ್ಕರೆ, ಮಮತೆ ಮೂಡುವಂತೆ ಮಾಡುತ್ತವೆ.
     ಎಲ್ಲಾ ಕಾರಣಗಬಹುದಳಿಂದಾಗಿಯೆ ಪುಸ್ತಕ ಸಾಕಷ್ಟು ಜನರ ಮೇಲೆ ತನ್ನ ಪ್ರಭಾವವನ್ನು ಬೀರಿದ್ದು ಮತ್ತು ಅವರ ಜೀವನದಲ್ಲಿ ಸಹ ಸ್ಪೂರ್ತಿ ತುಂಬಿದ್ದು ನಾವು ಕಾಣುತ್ತೇವೆ, ಇದನ್ನೇ ಪುಸ್ತಕದ ಹಿಂದಿನ ರಕ್ಷಾಪುಟದಲ್ಲಿ ಲೇಖಕರು ವಿವರಿಸಿರುವುದು.
     ಇಷ್ಟೆಲ್ಲ ಹೇಳಿದ ಮಾತ್ರಕ್ಕೆ ಇಲ್ಲಿರುವ ಎಲ್ಲಾ ಲೇಖನಗಳೂ ಅತ್ಯಂತ ಒಳ್ಳೆಯವು, ಇವುಗಳಲ್ಲಿ ಯಾವೊಂದು ಕೊರತೆಗಳೂ ಇಲ್ಲವೆಂದಲ್ಲ. ”ಅವಳು ಸತ್ತ ನಂತರವೂ ಮಾತನಾಡಿದಳುಲೇಖನವಿರಬಹುದು,”ಜನಪ್ರತಿನಿಧಿಗಳಿಗೊಂದು ಬಹಿರಂಗ ಪತ್ರಲೇಖನವಾಗಿರಬಹುದು ಅಷ್ಟೊಂದು ನೈಜ ಹಾಗೂ ಪರಿಣಾಮಕಾರಿಯ್ಗಿ ಬಂದಿಲ್ಲವೆನ್ನದೆ ಬೇರೆ ಮಾರ್ಗವಿಲ್ಲ. ಅಲ್ಲದೆ ಪುಸ್ತಕದ ಮುನ್ನುಡಿಯಲ್ಲಿ ಶ್ರೀ ಅನಂತ ಚಿನಿವಾರರು ತಿಳಿಸಿರುವಂತೆ ಪ್ರತೀ ಲೇಖನದ ಕೊನೆಯಲ್ಲಿಡಿಯರ್ ರೀಡರ್.....’ ಎಂದು ಕಥೆಯ ನೀತಿ ಬೋಧನೆ ಮಾಡುವುದು ಸಹ ಅಷ್ಟಾಗಿ ಸರಿಕಾಣಲಾರದು, ಕಾರಣವಿಷ್ಟೆ, ಓದುಗ ಸಹೃದಯನಾಗಿರುವುದರೊಡನೆ ಬುದ್ದಿವಂತನೂ ಆಗಿರುತ್ತಾನೆ. ಅವನು ಲೇಖನವನ್ನು ಓದಿದವನೇ ಅದರಲ್ಲಿನ ನೀತಿಯನ್ನು ತಾನಾಗಿ ಅರಿಯಬಲ್ಲ.
     ಆದರೂ ಸಹ ಪುಸ್ತಕ ಓದುಗರಿಗೆ ಬದುಕಿನ ವೈವಿದ್ಯತೆಯನ್ನು, ಜೀವನದಲ್ಲಿ ನಾವು ಎಡವಿದರೂ ಸಹ ಎಂದಿಗೂ ಕೈಕಟ್ಟಿ ಸುಮ್ಮನೆ ಕೂರದೆ ಗುರಿಯತ್ತ ಮುನ್ನಡೆಯಬೇಕೆನ್ನುವ ಛಲವನ್ನು ಮೂಡಿಸುವಲ್ಲಿ ಸಫಲವಾಗುತ್ತದೆ. ಮಣಿಕಾಂತ್ ರವರು ಚಿತ್ರಿಸಿದ ಗೋಪಾಲರಾಯರಾಗಲಿ, ಟ್ರಫಿಕ್ ಪೋಲೀಸಿನವನಾಗಲಿ, ಯೋಧನಾಗಲಿ ಇಲ್ಲವೆಹೊಸ ಬೆಳಕಿನ ಯುವಕನಾಗಲಿ ನಮ್ಮ-ನಿಮ್ಮ ನಡುವೆ ಬದುಕಿದ, ಬದುಕುತ್ತಿರುವ ಸಾಮಾನ್ಯ ಜನರಾದ ಕಾರಣದಿಂದ ಅವರ ಕಥೆಗಳಿವ ಪುಸ್ತಕ ಹೃಅದಯಕ್ಕೆ ಸಾಕಷ್ಟು ಹತ್ತಿರವಾಗುತ್ತದೆ.
    ವ್ಯಕ್ತಿತ್ವ ವಿಕಾಸ ಹೆಸರಿನಲ್ಲಿ ಕನ್ನಡದಲ್ಲಿ ಪ್ರಕಟವಾಗಿರುವ ಸಾಕಷ್ಟು ಬೂಸಾ ಕೃತಿಗಳ ಮದ್ಯೆ ಮಣಿಕಾಂತ್ ರವರಅಮ್ಮ ಹೇಳಿದ ಎಂಟು ಸುಳ್ಳುಗಳುಕೃತಿ ನಿಜವಾದ ಸಾಧಕರೆಂದರೆ ಯಾರು? ನಿಜವಾದ ವ್ಯಕ್ತಿತ್ವ ಹೇಗಿರುತ್ತದೆ ಎನ್ನುವುದನ್ನು ಬಹು ಚೆನ್ನಾಗಿ ತೋರಿಸಿಕೊಡುತ್ತದೆ.
    ಕಾರಣದಿಂದ ನಾವು ಮಣಿಕಾಂತ್ ರವರಿಗೆ ಥ್ಯಾಂಕ್ಸ್ ಹೇಳಲೇಬೇಕು.
    ಒಮ್ಮೆ ಓದಿ ಮರೆಯಲಾಗದ ಎಲ್ಲರೂ ಓದಲೇಬೇಕಿರುವ ಪುಸ್ತಕವೆನಿಸುತ್ತದೆ

No comments:

Post a Comment