ಹಿಂದೆ ಸಿಂಧುರಕ್ಷಕ್ ಜಲಾಂತರ್ಗಾಮಿ ಹೀಗಿತ್ತು |
ಭಾರತದ ಜಲಾಂತರ್ಗಾಮಿ
ಸಿಂಧುರಕ್ಷಕ್ ಇತ್ತೀಚಿಗಷ್ಟೇ ಸ್ಪೋಟಗೊಳ್ಲುವುದರೊಂದಿಗೆ ಭಾರತೀಯ ನೌಕಾಬಲಕ್ಕೆ ಭಾರೀ ಆಘಾತವನ್ನು
ನೀಡಿದೆ. ಭಾರತದಲ್ಲಿ ಸಂಭವಿಸಿದ ಮಹಾ ದುರಂತಗಳಲ್ಲಿ ಒಂದೆಂದು ಪರಿಗಣಿಸಬಹುದಾದ ಈ ದುರಂತದ ಹಿನ್ನೆಲೆಯಲ್ಲಿ
ಸಿಂಧುರಕ್ಷಕ್ ಕುರಿತಾಗಿ ಒಂದಷ್ತು ಮಾಹಿತಿಯೊಂದಿಗೆ ಈ ದುರಂತ ಹೇಗೆ ಸಂಭವಿಸಿತು ಎನ್ನುವುದನ್ನು ತಿಳಿಯೋಣವೇ?
1997 ರಲ್ಲಿ ನೌಕಾಪಡೆಗೆ ಸೇರ್ಪಡೆಗೊಂಡ ಸಿಂಧುರಕ್ಷಕ್
ಜಲಾಂತರ್ಗಾಮಿಯು ನೂರೈವತ್ತು ಮೈಲಿಯ ಆಚಿನ ವೈರಿಯತ್ತ ಕ್ಷಿಪಣಿಯನ್ನು ಚಿಮ್ಮಿಸಬಲ್ಲ ಸಾಮರ್ಥ್ಯ ಹೊಂದಿತ್ತು.
ಸುಮಾರು ನಾಲ್ಕುನೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸಿಧುರಕ್ಷಕ್ ಒಮ್ಮೆ ಗಸ್ತಿಗೆ ಹೊರಟಿತೆಂದರೆ
ನಲವತ್ತೈದು ದಿನಗಳವರೆಗೆ ನೀರಿನಲ್ಲಿರುವ ಸಾಮರ್ಥ್ಯವನ್ನು ಹೊಂದಿತ್ತು.
ಸ್ಪೋಟಿಸಿದ್ದು ಹೇಗೆ?
ಒಟ್ಟು ಹದಿನೆಂಟು ಮಂದಿ ನುರುತ ತಂಡವಿದ್ದ ಸಿಂಧುರಕ್ಷಕ್
ಸ್ಪೋಟಿಸಿದ್ದು ಹೇಗೆ? ಇದೀಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಇದೊಂದು ಆಕಸ್ಮಿಕವೆ? ವಿಧ್ವಂಸಕ
ಕೃತ್ಯವೆ? ಎಂಬ ತನಿಖೆಯೂ ಶುರುವಾಗಿದೆ. ಜಲಾಂತರ್ಗಾಮಿ ಕ್ಷಿಪಣಿ ಹಾಗೂ ಟಾರ್ಬೆಡೋ ಸಿಡಿತಲೆಗಳನ್ನು
ಸಂಗ್ರಹಿಸಿದ್ದ ಕೋಣೆಯಲ್ಲಿ ಸ್ಪೋಟ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು ಸ್ಪೋಟದ ಜ್ವಾಲೆ
ಕಿತ್ತಳೆ ಬಣ್ಣದಿಂದ ಕೂಡಿರುವುದು ಇದಕ್ಕೆ ಪುಷ್ಟಿನೀಡುವಂತಿದೆ. ಜಲಜನಕದ ಸೋರಿಕೆಯಿಂದ ಈ ಸ್ಪೋಟ ಸಂಭವಿಸಿಲ್ಲವೆನ್ನುವುದು
ಪ್ರಾಥಮಿಕ ತನಿಖೆಯಿಂದ ಧೃಢಪಟ್ಟಿದ್ದು ಜಲಾಂತರ್ಗಾಮಿಯಲ್ಲಿದ್ದವರೆಲ್ಲಾ ನಿಪುಣ ತಂತ್ರಜ್ಞರೇ ಆದ ಕಾರಣ
ಇದೊಂದು ಆಕಸ್ಮಿಕ ಘಟನೆಯೆಂದೇ ಹಲವರ ವಾದವಾಗಿದೆ. ಸ್ಪೋಟದ ವೇಳೆ ಸಿಂಧುರಕ್ಷಕ್ ನಲ್ಲಿ ಒಟ್ಟು ಹದಿನೆಂಟು
ಮಂದಿಯ ತಂಡವಿತ್ತು, ಅದರಲ್ಲಿ ಮೂವರು ಅಧಿಕಾರಿಗಳು, ಮತ್ತೆ ಮೂವರು ಜಲಶಸ್ತ್ರಾಸ್ತ್ರ ನಿಪುಣರು ಮತ್ತುಳಿದಂತೆ
ಕಿರಿಯ ಅಧಿಕಾರಿಗಳಾಗಿದ್ದರು. ಇನ್ನೊಂದು ವಾದದ ಪ್ರಕಾರ ಸಾಂದ್ರೀಕೃತ ಆಮ್ಲಜನಕವನ್ನು ಹೊಂದಿದ್ದ ಫ್ಲಾಸ್ಕ್
ಸ್ಪೋಟಗೊಂಡಿರಬಹುದು ಎನ್ನಲಾಗುತ್ತಿದ್ದು ಅದಕ್ಕೆ ತಾಗಿಕೊಂಡಂತಿದ್ದ ಆರು ಕ್ಷಿಪಣಿಗಳು, ಟಾರ್ಪೆಡೋಗಳಿಗೂ
ಬೆಂಕಿ ತಗುಲಿರುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ. ಆದರೆ ಇದು ಜಲಜನಕ ಸೋರಿಕೆಯಿಂದಾದ ಸ್ಪೋಟವಲ್ಲವೆನ್ನುವುದನ್ನು
ನುರಿತ ತಜ್ಞರ ತಂಡವಿದಾಗಲೇ ಪತ್ತೆಮಾಡಿದೆ. ಸ್ಪೋಟಗೊಂಡ ಸಿಂಧುರಕ್ಷಕ್ ನಲ್ಲಿ ತಲಾ ಎಂಟುನೂರು ಕೆಜಿ
ತೂಗುವ ಇನ್ನೂರಾ ನಲವತ್ತು ಲಿಡ್ ಆಸಿಡ್ ಬ್ಯಾಟರಿಗಳಿದ್ದವು, ಅವುಗಳನ್ನು ಚಾರ್ಜ್ ಮಾಡುವ ವೇಳೆಯಲ್ಲಿ
ಜಲಜನಕದ ಉತ್ಪಾದನೆ ಗರಿಷ್ಠ ಮಟ್ಟದಲ್ಲಿರುತ್ತದೆ. ಒಂದು ವೇಳೆ ಅದೇ ಸ್ಪೋಟಕ್ಕೆ ಕಾರಣವಾಗಿದ್ದಲ್ಲಿ
ಈ ಬ್ಯಾಟರಿಗಳನ್ನು ಚಾರ್ಜ್ ಮಾಡುವ ಪ್ರಕ್ರಿಯೆ ಸ್ಪೋಟಕ್ಕೆ ಎರಡು ದಿನಗಳ ಹಿಂದೆಯೇ ಮುಗಿದಿತ್ತು,
ಹೀಗಾಗಿ ಸ್ಪೋಟಕ್ಕೂ, ಇದಕ್ಕೂ ಸಂಬಧವನ್ನು ಕಲ್ಪಿಸಲು ಬರದಾಗಿದೆ. ಇನ್ನು ಇದಾಗಲೇ ಸಾವಿರ ಗಂಟೆಗಳನ್ನು
ಸಮುದ್ರದಲ್ಲಿ ಕಳೆದಿರುವ ಸಿಂಶುರಕ್ಷಕ್ ನ್ನು ಅನೇಕ ಬಾರಿ ಪರೀಕ್ಷೆಗೊಳಪಡಿಸಲಾಗಿದ್ದು ಯಾವುದೇ ಬಗೆಯ
ತಾಂತ್ರಿಕ ತೊಂದರೆಗಳೂ ಕಂಡುಬಂದಿರಲಿಲ್ಲ. ಇನ್ನು ವಿದ್ವಂಸಕ ಕೃತ್ಯಗಳ ಸಾಧ್ಯತೆಯನ್ನೂ ಅಲ್ಲಗೆಳೆಯಬೇಕಾಗುತ್ತದೆ
ಏಕೆಂದರೆ ಅತ್ಯಂತ ಕಟ್ಟೆಚ್ಚರ ವಹಿಸುವ ನೌಕಾಪಡೆಯ ಡಾರ್ಕ್ ಯಾರ್ಡ್ ಒಳನುಗ್ಗಿ ಸ್ಪೋಟ ನಡೆಸುವುದೇನು
ಅಷ್ಟೋಂದು ಸುಲಭದ ಕೆಲಸವಲ್ಲ. ಹೀಗೆ ಸ್ಪೋಟಕ್ಕೆ ನಾನಾ ಕಾರಣಗಳನ್ನು ನೀಡಿ ವಿಶ್ಲೇಷಿಸಲಾಗುತ್ತಿದೆಯಾದರೂ
ಜಲಾಂತರ್ಗಾಮಿಯ ಅವಶೇಷಗಳ ಪರೀಕ್ಷೆ ನಡೆಸುತ್ತಿರುವ ವಿಧಿ ವಿಜ್ಞಾನ ಪರೀಕ್ಷಾಲಯದ ವರದಿ ಬಂದ ಬಳಿಕವಷ್ಟೇ
ನಿಖರ ಕಾರಣವನ್ನು ತಿಳಿಯಬಹುದೆನ್ನುವುದು ಸತ್ಯ.
ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ಸಂಭವಿಸಿದ ಜಲಾಂತರ್ಗಾಮಿ
ದುರಂತಗಳ ಬಗೆಗಿನ ಒಂದು ಇಣುಕುನೋಟ ಇಲ್ಲಿದೆ-
- Ø ರಷ್ಯಾದ ಆಸ್ಕರ್ -2 ನೇ ಹಂತದ ಜಲಾಂತರ್ಗಾಮಿ ಕುರ್ ಸ್ಕ್ ಆ.12 2000 ದಂದು ಇಂಧನ ಸೋರಿಕೆಯಿಂದಾಗಿ ಸ್ಪೋಟಗೊಂಡು ಬರೆಂಟ್ಸ್ ಸಮುದ್ರದಲ್ಲಿ ಮುಳುಗಿತ್ತು, 118 ಮಂದಿ ಮೃತಪಟ್ಟಿದ್ದರು.
- Ø ದಿನಾಂಕ ಆ. 30 2003 ರಂದು ರಷ್ಯಾದ ಕೆ-159 ಎನ್ನುವ ಜಲಾಂತರ್ಗಾಮಿ ಪೋಲಿಯಾರ್ನಿಯಲ್ಲಿನ ಹಡಗು ಒಡೆಯುವ ಕೇಂದ್ರಕ್ಕೆ ಸಾಗಿಸುತ್ತಿದ್ದಾಗ ಮುಳುಗಡೆಗೊಂಡು ಅದರಲ್ಲಿದ್ದ 10 ಮಂದಿಯಲ್ಲಿ 9 ಜನ ಸಾವಿಗೀಡಾಗಿದ್ದರು.
- Ø ಅಮೇರಿಕಾದ ಯು.ಎಸ್.ಎಸ್. ಸ್ಯಾನ್ ಫ್ರಾನ್ಸಿಸ್ಕೋ ಎನ್ನುವ ಜಲಾಂತರ್ಗಾಮಿ ಜನವರಿ 9 2005 ರಂದು ಫೆಸಿಪಿಕ್ ಸಮುದ್ರದಲ್ಲಿ ತಲಸ್ಪರ್ಷಿಸುವುದರ ಮೂಲಕ ದುರಂತಕ್ಕೀಡಾಗಿತ್ತು. ಅದರಲ್ಲಿನ 24 ಸಿಬ್ಬಂದಿಗಳಲ್ಲಿ ಒಬ್ಬ ಮೃತಪಟ್ಟರೆ 23 ಮಂದಿ ಗಾಯಗೊಂಡಿದ್ದರು.
- Ø ಸಪ್ಟೆಂಬರ್ 6 2006 ರಂದು ರಷ್ಯಾದ ಸೇಂಟ್ ಡೇನಿಯಲ್ ಆಫ್ ಮಾಸ್ಕೋ ಎನ್ನುವ ಜಲಾಂತರ್ಗಾಮಿಯು ಅಗ್ನಿ ಆಕಸ್ಮಿಕಕ್ಕೀಡಾಗಿ ಅದರಲ್ಲಿನ ಇಬ್ಬರು ಸಿಬ್ಬಂದಿ ಮೃತರಾಗಿದ್ದರು.
- Ø ಬ್ರಿಟನ್ ನ ಎಚ್.ಎಮ್.ಎಸ್.ಟೈರ್ ಲೆಸ್ ಎನ್ನುವ ಜಲಾಂತರ್ಗಾಮಿ ಆರ್ಕಟಿಕ್ ನಲ್ಲಿನ ಸಮರಾಭ್ಯಾಸದ ವೇಳೆ ಸ್ಪೋಟಗೊಂಡು ಅದರಲ್ಲಿದ್ದ ಇಬ್ಬರು ಸೈನಿಕರು ಮೃಅತಪಟ್ಟರೆ ಒಬ್ಬರು ಗಾಯಗೊಂಡಿದ್ದರು.
- Ø ನವೆಂಬರ್ 8 2008 ರಂದು ರಷ್ತಾ ನಿರ್ಮಿತ ಕೆ-152 ನೆರ್ಪಾ ಹೆಸರಿನ ಜಲಾಂತರ್ಗಾಮಿ ಪರೀಕ್ಷಾರ್ಥ ಸಂಚಾರದ ವೇಳೆ ಅಪಘಾತಕ್ಕೀಡಾಗಿ 20 ಮಂದಿಯನ್ನು ಬಲಿಪಡೆದಿತ್ತು.
- Ø ಫೆಬ್ರವರಿ
27 2010 ರಂದು ಭಾರತೀಯ ನೌಕಾಪಡೆಗೆ ಸೇರಿದ ಐ.ಎನ್.ಎಸ್ ಸಿಂಧುರಕ್ಷಕ್ ನ ಬ್ಯಾಟರಿ ಭಾಗದಲ್ಲಿ ಬೆಂಕಿ
ಕಾಣಿಸಿಕೊಂಡು ಸ್ಪೋಟ ಸಂಭವಿಸಿತ್ತು ಆ ಸಮಯದಲಿ ಅದರಲ್ಲಿದ್ದ ನಾವಿಕನೋರ್ವನು ಸಾವನ್ನಪ್ಪಿ
ದ್ದನು. - Ø ಯೆಕಾಟರೈನ್ ಬರ್ಗ್ ಹೆಸರಿನ ಜಲಾಂತರ್ಗಾಮಿ ಡಿಸೆಂಬರ್ 30 2011 ರಂದು ಬಂದರಿನಲ್ಲಿ ನಿಲ್ಲಿಸಿದ್ದ ಸಂದರ್ಭ ಬೆಂಕಿಗಾಹುತಿಯಾಗಿತ್ತು. ಅದರಲ್ಲಿ 9 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು.
ಭಾರತ ನೌಕಾಪಡೆಗಳಲ್ಲಿ ಇದುವರೆವಿಗಿರುವ ಜಲಾಂತರ್ಗಾಮಿಗಳ
ಒಟ್ಟಾರೆ ಅಂಕಿ ಅಂಶ ಈ ರೀತಿ ಇದೆ-
- Ø ಡೀಸೆಲ್ ನಿಂದ ಚಲಿಸಬಲ್ಲ ಜಲಾಂತರ್ಗಾಮಿಗಳು- 13(ಇದರಲ್ಲಿ 11 ಜಲಾಂತರ್ಗಾಮಿಗಳು ಇಪ್ಪತ್ತು ವರ್ಷಕ್ಕೂ ಹಳೆಯವು)
- Ø ರಷ್ಯಾ ಮೂಲದ ಒಂಭತ್ತು ಕಿಲೋ ಕ್ಲಾಸ್ ಜಲಾಂತರ್ಗಾಮಿಗಳು- 04
- Ø ಜರ್ಮನಿ ಮೂಲದ ಎಚ್.ಡಿ.ಡಬ್ಲ್ಯೂ ಜಲಾಂತರ್ಗಾಮಿಗಳು- 04
- Ø ಅಣ್ವಸ್ತ್ರಗಳನ್ನು ಹೊರಬಲ್ಲ ಐ.ಎನ್.ಎಸ್. ಚಕ್ರ ಜಲಾಂತರ್ಗಾಮಿ- 01
No comments:
Post a Comment