Friday, March 28, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) - 21

ಮಧೂರು(Madhoor)

‘ದೇವರ ಸ್ವಂತ ನಾಡು’ ಎಂದೇ ಖ್ಯಾತವಾಗಿರುವ ಕೇರಳ ರಾಜ್ಯದ ಉತ್ತರದಲ್ಲಿನ ಸುಂದರ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಜಿಲ್ಲೆ ಕಾಸರಗೋಡು. ಇಲ್ಲಿನ ಶ್ರೀ ಕ್ಷೇತ್ರ ಮಧೂರು ಅಲ್ಲಿನ ಮದನಂತೇಶ್ವರ ವಿನಾಯಕ ದೇವಾಲಯದಿಂದಾಗಿ ದಕ್ಷಿಣ ಭಾರತದಲ್ಲೆಲ್ಲಾ ಪ್ರಸಿದ್ದಿ ಹೊಂದಿದೆ. ದೇವಾಲಯದ ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿರುವ ಕ್ಷೇತ್ರ. ಸ್ವಲ್ಪ ದೂರದಲ್ಲಿ ಕಾಣಿಸುವ ಬೆಟ್ಟಗಳು ಅದರ ತಪ್ಪಲಲ್ಲಿ ಇರುವ ತೆಂಗು-ಅಡಿಕೆ ತೋಟಗಳು ಕ್ಷೇತ್ರಕ್ಕೆ ಮೆರುಗನ್ನು ನೀಡುತ್ತದೆ. ದೇವಸ್ಥಾನದ ಮುಂಭಾಗದಲ್ಲಿ ಮಧುವಾಹಿನಿ ಹೊಳೆ ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತದೆ. ಪೂರ್ವಾಭಿಮುಖವಾಗಿ ಗಜಪೃಷ್ಠಾಕಾರದ ಮೂರು ಅಂತಸ್ತಿನಲ್ಲಿ ಇರುವುದು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ. ಮೇಲಿನ ಎರಡು ಅಂತಸ್ತುಗಳಿಗೆ ತಾಮ್ರದ ಮತ್ತು ಕೆಳಗಿನ ಅಂತಸ್ತಿಗೆ ಹಂಚಿನ ಹೊದಿಕೆ. ದೇವಾಲಯದ ಸುತ್ತಲೂ ವಿವಿಧ ಕೆತ್ತನೆ ಕೆಲಸಗಳನ್ನು ಕಾಣಬಹುದು. ’ಗಜಪೃಷ್ಠಆಕಾರವು ಪ್ರಾಚೀನ ಬೌದ್ಧರ ಕೊಡುಗೆ ಎನ್ನುವ ಪ್ರತೀತಿಯಿದೆ. ಕರಾವಳಿಯ ಭಾರಿ ಮಳೆ ಮತ್ತು ಹವಾಮಾನಗಳು ಇವುಗಳ ರಚನೆಯ ಮೇಲೆ ಪ್ರಭಾವ ಬೀರಿದೆ. ಹಾಗೆ ನೇಪಾಳಿ ಶೈಲಿಯ ಪ್ರಭಾವವೂ ಇರಬಹುದು ಎಂದು ಊಹಿಸಲಾಗಿದೆ.

Madhur Sri Mahaganapathi


ಬಹಳ ವರ್ಷಗಳ ಹಿಂದೊಮ್ಮೆ ಕ್ಷೇತ್ರದ ಬಳಿಯ ಹಳ್ಲಿಯೊಂದರ ಪಕ್ಕದಲ್ಲಿ ವಾಸವಿದ್ದ ಮದರು’ ಎನ್ನುವ ಹೆಸರಿನ ಸ್ತ್ರೀಯೋರ್ವಳು ತನ್ನ ಗೃಹಕೃತ್ಯಕ್ಕಾಗಿ ಸೊಪ್ಪು ಕಡಿಯುತ್ತಿದ್ದ ಸಮಯದಲ್ಲಿ ಆಕೆಯ ಕತ್ತಿಯು ಶಿಲೆಯೊಂದಕ್ಕೆ ತಾಗಿ ರಕ್ತ ಹರಿಯಲು ಆರಂಭವಾಯಿತು. ಅದನ್ನು ಅವಳು ಗಾಬರಿಯಿಂದ ತನ್ನ ಮನೆಯವರಿಗೆ ತಿಳಿಸಿದಾಗ, ಅವರೆಲ್ಲ ಒಂದಾಗಿ ಸೀಮೆಯ ಅರಸರ ಬಳಿ ಹೇಳಿಕೊಂಡರು. ಅರಸರೂ ಮತ್ತು ಅಲ್ಲಿರುವವರು ಒಕ್ಕೊರಲಿನಿಂದಜಲಾಶಯವಿರುವ ಪ್ರಶಸ್ತ ಜಾಗದಲ್ಲಿ ಕಾಣಿಸಿಕೊಂಡರೆ ಮಂದಿರ ನಿರ್ಮಿಸಿ ಪೂಜಿಸುವೆವುಎಂದು ಭಕ್ತಿಯಿಂದ ಪ್ರಾರ್ಥಿಸಿದಾಗ ವಿಗ್ರಹವು ಮಧುವಾಹಿನಿ ತಟದಲ್ಲಿ ಕಾಣಿಸಿಕೊಂಡಿತಂತೆ. ಪ್ರದೇಶದಲ್ಲಿ ಸ್ವಭಾವ ವೈರವನ್ನು ಮರೆತು ಹುಲಿ-ದನಗಳು ಸ್ನೇಹದಿಂದ ಇರುವುದನ್ನು ಕಂಡು ಅವರು ಇದುವೇ ಯೋಗ್ಯ ಸ್ಥಳವೆಂದು ಅಲ್ಲಿಯೇ ಮಂದಿರ ನಿರ್ಮಿಸಿ ಪೂಜಿಸತೊಡಗಿದರು. ದೇವಾಲಯದ ಹಿಂಭಾಗದಲ್ಲಿ ಈಗ ಒಂದು ಅರಳಿ ಕಟ್ಟೆಯಿದೆ. ಹುಲಿ-ದನಗಳು ವಿಶ್ರಮಿಸಿಕೊಂಡಿದ್ದನ್ನು ನೆನಪಿಸುವ ಹುಲಿ-ಕಲ್ಲನ್ನು ಅಲ್ಲಿ ಈಗಲೂ ಕಾಣಬಹುದು. ’ಮದರುಎಂಬ ಹೆಸರೇ ನಂತರ ಗ್ರಾಮೀಣ ಆಡುಭಾಷೆಯಲ್ಲಿ ಮುಂದೆಮಧೂರುಎಂದಾಯಿತು ಎಂಬ ನಂಬಿಕೆಯಿದೆ.


Madhur Sri Madanantheshwara Sri Mahaganapathi Temple
ಹೀಗಿರಲು ಅದೊಮ್ಮೆ ಜಾತ್ರೆಗೆಂದು ಬಂದ ದೇವಾಲಯದ ಅರ್ಚಕರ ಮಕ್ಕಳು ಗೋಡೆಯಲ್ಲಿ ಗಣಪತಿಯ ಚಿತ್ರ ಬರೆದು ಹೂಗಳಿಂದ ಅಲಂಕರಿಸಿ ಪೂಜಿಸುತ್ತಾ ಹಿರಿಯರು ಪೂಜಾಕಾರ್ಯಕ್ಕಾಗಿ ತಂದ ಅಕ್ಕಿಯ ಹುಡಿಯನ್ನು ನೀರಿನಲ್ಲಿ ಕಲಸಿ ಉಂಡೆಯಂತೆ ಮಾಡಿ ನೈವೇದ್ಯ ಮಾಡುತ್ತಾ ಶ್ರದ್ಧಾ ಭಕ್ತಿಗಳಿಂದ ಪೂಜೆಯಲ್ಲಿ ತನ್ಮಯರಾಗಿದ್ದರು. ಹಿರಿಯರು ಇದನ್ನು ಕಂಡು ಅಚ್ಚರಿಗೊಂಡು ವಿಧಿವತ್ತಾದ ಪೂಜೆ ನಡೆಸಿದರು. ಮಕ್ಕಳು ಮಾಡಿದ "ಹಸಿ ಅಕ್ಕಿ ಹುಡಿಯಿಂದ ಕಲಸಿದ ಉಂಡೆ" ಪ್ರತೀಕವಾಗಿ ಬೆಲ್ಲ ಸೇರಿಸಿದ, ಸಂಪೂರ್ಣ ಬೇಯದ "ಪಚ್ಚಪ್ಪ" ನೈವೇದ್ಯ ಅಂದಿನಿಂದ ಆರಂಭವಾಯಿತು. ಮುಂದೆ ಕಡುಶರ್ಕರಪಾಕದಿಂದ ಚಿತ್ರದ ಉಬ್ಬು ಶಿಲ್ಪವನ್ನು ರಚಿಸಿ, ಅಲ್ಲಿಗೆ ಚಿಕ್ಕ ಬಾಗಿಲಿನಿಂದ ಕೂಡಿದ ಗುಡಿಯನ್ನು ನಿರ್ಮಾಣ ಮಾಡಲಾಯಿತು.  ಇಲ್ಲಿರುವುದು ಬಲಮುರಿ ಗಣಪತಿಯ ಮೂರ್ತಿಯಾಗಿದ್ದು ಮೂರ್ತಿಯ ಸೊಂಡಿಲು ಬಲಭಾಗಕ್ಕೆ ತಿರುಗಿಕೊಂಡಿದೆ. 

No comments:

Post a Comment