ಯಾರೇ ಒಬ್ಬ ವ್ಯಕ್ತಿ ಸೈನ್ಯಕ್ಕೆ
ಸೇರುತ್ತಾನೆಂದರೆ ಆ ವ್ಯಕ್ತಿಯ ಜಾತಿ, ಧರ್ಮಗಳೇನು ಎನ್ನುವುದನ್ನು ಯಾರೊಬ್ಬರೂ ಕೇಳುವುದಿಲ್ಲ. ಬದಲಾಗಿ
ಅವನಿಗಿರುವ ದೇಶಾಭಿಮಾನಕ್ಕೆ ದೇಶವಾಸಿಗಳೆಲ್ಲಾ ತಲೆದೂಗುತ್ತಾರೆ. ಸೈನ್ಯಕ್ಕೆ ಸೇರ್ಬಹುದಾದ ವ್ಯಕ್ತಿ
ಯಾರೇ ಆದರೂ ಅವನ ಬಗ್ಗೆ ಇಡಿ ದೇಶವೇ ಹೆಮ್ಮೆ ಪಡುತ್ತದೆ ಏಕೆಂದರೆ ಭಾರತೀಯ ಸೇನೆ ನಿರ್ವಹಿಸುವ ಕಾರ್ಯ
ಅಂತಹುದು. ಮಳೆ, ಚಳಿ, ಶೀತ ಮಾರುತ, ಬಿರು ಬಿಸಿಲು ಎನ್ನುವುದನ್ನೂ ಲೆಕ್ಕಿಸದೆ ಹಗಲಿರುಳೂ ದೇಶದ ಗಡಿ
ಕಾಯುವ ಯೋಧರ ದೇಶ ನಿಷ್ಠೆಯಿಂದಾಗಿಯೇ ಇಂದು ನಾವೆಲ್ಲಾ ನೆಮ್ಮದಿಯಿಂದ ಬದುಕುತ್ತಿದ್ದೇವೆ.
ನನ್ನೆಲ್ಲಾ
ಆತ್ಮೀಯ ಸ್ನೇಹಿತರಿಗೂ ನನ್ನ ನಮಸ್ಕಾರಗಳು.
ಅದು 1999 ಮೇ
ತಿಂಗಳು, ಪಾಕಿಗಳು ಕಾರ್ಗಿಲ್‌ನ,
ಪೂರ್ವ ಬಟಾಲಿಕ್‌ನ ಮತ್ತು ದ್ರಾಸ್‌ನ ಉತ್ತರ ದಿಕ್ಕಿನ ಬೆಟ್ಟಗಳನ್ನು ಏರತೊಡಗಿದರು. ಗಟ್ಟಿ ಮುಟ್ಟಾಗಿದ್ದ ಬಂಕರುಗಳನ್ನು ತಮ್ಮೊಂದಿಗಿಟ್ಟುಕೊಂಡಿದ್ದ ಅವರು ಭಾರತೀಯದ
ಸರ್ವ ರೀತಿಯ ಧಾಳಿಗೂ ಸನ್ನದ್ದರಾಗಿದ್ದರು. ಹಳ್ಳಿಗಾಡಿನ ದನಗಾಹಿಗಳಿಂದ ಪಾಕಿಸ್ತಾನದ ಈ ಕುಟಿಲೋಪಾಯವನ್ನರಿತ
ನಮ್ಮ ಸೇನೆ ವರದಿ ತರಲೆಂದು ಸೌರಭ್ ಕಾಲಿಯಾ ನೇತೃತ್ವದಲ್ಲಿ ಐವರನ್ನು ಗುಡ್ಡ ಹತ್ತಿಸಿತು. ಶತ್ರುಪಡೆಗಳ ಸಾಮರ್ಥ್ಯದ ಅಂದಾಜಿಲ್ಲದ ನಮ್ಮವರು ಬೆಟ್ಟ ಹತ್ತಿ ಪಾಕ್ ನ
ಮತಾಂಧ ಸೈನಿಕರ ಕೈಯಲ್ಲಿ ಸಿಕ್ಕಿಹಾಕಿಕೊಂಡು ಕ್ರೂರವಾದ ಹಿಂಸೆಗೆ ತುತ್ತಾದರು. ಅಷ್ಟೆ ಅಲ್ಲ ಅವರುಗಳ
ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಭಾರತೀಯ ಸೇನಾ ಶಿಬಿರಕ್ಕೆ ಹಿಂತಿರುಗಿಸಲಾಯಿತು.
ಅಂದಿನ ವಾಜಪೇಯಿ
ನೇತೃತ್ವದ ಎನ್.ಡಿ.ಎ. ಸರ್ಕಾರವು ತಕ್ಷಣವೇ ‘ಆಪರೇಷನ್ ವಿಜಯ್’ ಹೆಸರಿನಲ್ಲಿ ಸೈನಿಕ ಕಾರ್ಯಾಚರಣೆ
ನಡೆಸಲು ಆದೇಶ ನೀಡಿತು. ಆದರೆ ಅಂತಹಾ ಸೂಕ್ಷ್ಮ ಸ್ಥಿತಿಯಲ್ಲಿ ದೇಶದ ಗಡಿ ಕಾಯುತ್ತಿದ್ದ ಸೈನಿಕರ ಬಳಿ
ಸರಿಯಾದ ಆಧುನಿಕ ಶಸ್ತ್ರಾಸ್ತ್ರಗಳೂ ಇರಲಿಲ್ಲ! ದೇಹ ರಕ್ಷಣೆಗೆ ಅವಷ್ಯವಾದ ಬಟ್ಟೆಗಳೂ ಇರಲಿಲ್ಲ!
ಆದರೆ ನಮ್ಮ
ಸೈನಿಕರು ಎದೆಗುಂದಲಿಲ್ಲ. ಇರುವಷ್ಟೇ ಮದ್ದುಗುಂಡು, ಶಸ್ತ್ರಾಸ್ತ್ರಗಳನ್ನು ಹೊಂದಿಸಿಕೊಂಡು ಯುದ್ಧ
ಪ್ರಾರಂಭಿಸಿಯೇ ಬಿಟ್ಟರು. ಕಾರ್ಗಿಲ್ ಪಟ್ಟಣಕ್ಕೆ ಸುಮಾರು 20 ಕಿ.ಮೀ. ದೂರದಲ್ಲಿರುವ
ಬೆಟ್ಟ ತೋಲೋಲಿಂಗ್ ನ್ನು ಮೊದಲು ವಶಪಡಿಸಿಕೊಳ್ಲಬೇಕಿತ್ತು. ಬೆಟ್ಟದ
ಬುಡದಲ್ಲಿ ನಮ್ಮ ವೀರ ಸೈನಿಕರು ಡೇರೆಗಳನ್ನು ನಿರ್ಮಿಸಿಕೊಂಡು ಸಿದ್ದರಾದರು. ಬೆಟ್ಟದ ಮೇಲೆ ಬೀಡು
ಬಿಟ್ಟಿದ್ದ ಪಾಕಿಗಳ ಶಲ್ ಧಾಳಿಗೂ ಅಂಜದೆಯೇ ಧೃಢವಾಗಿ ನಿಂತು ಹೋರಾಟ ನಡೆಸಿದರು.
ಈ ಮೊದಲೇ ಹೇಳಿದಂತೆ
ಪಾಕಿಸ್ತಾನದ ಸೈನಿಕರು ಎಲ್ಲಾ ಬಗೆಯಲ್ಲಿ ತಯಾರಾಗಿಯೇ ಬಂದಿದ್ದರು. ಆಧುನಿಕ ಶಸ್ತ್ರಾಸ್ತ್ರ, ಮದ್ದುಗುಂಡುಗಳ
ಸಮೇತರಾಗಿ ಎಂತಹಾ ಪ್ರತಿರೋಧವನ್ನೂ ಎದುರಿಸಲು ಸಿದ್ದರಾಗಿದ್ದರು. ಒಟ್ಟಾರೆ 160 ಕಿ.ಮೀ. ವಿಸ್ತಾರಕ್ಕೆ
ಇವರು ಚಾಚಿಕೊಂಡಿದ್ದರು ನಾವು ನಡೆಸಿದ ಮೊದಲ ಹಂತದ ಧಾಳಿಗಳೆಲ್ಲಾ
ವಿಫಲವಾದವು. ವಾಯುಸೇನಾಬಲದೊಡನೆ ಧಾಳಿಯನ್ನು ನಡೆಸಿದಾಗಲೂ ಪಾಕಿಗಳು ತಾವು ಬಂಕರುಗಳಲ್ಲಿ ಅವಿತುಕೊಂಡು
ತಮ್ಮ ಪ್ರಾಣರಕ್ಷಣೆಯನ್ನು ಮಾಡಿಕೊಳ್ಳುತ್ತಿದ್ದರು. ಆದರೆ ನಮ್ಮ ಅನೇಕ ಯುವ ಸೈನ್ಕ ಅಧಿಕಾರಿಗಳು ಪಾಕ್
ಪ್ರಣೀತ ಶೆಲ್ ಧಾಳಿಗಳಿಂದ ಹತರಾದರು. ಮಣ್ಜು ಮುಸುಕಿದ ಅತ್ಯಂತ ಕ್ಲಿಷ್ಟಕರ ಹವಾಮಾನ ಪರಿಸ್ಥಿತಿಯಲ್ಲಿ
ಬೆಟ್ಟದ ಮೇಲೆ ಭೀಕರ ಯುದ್ಧವು ಜರುಗಿತು.
ಜುಲೈ 13 ಕ್ಕೆ ತೋಲೋಲಿಂಗ್
ನಮ್ಮ ವಶವಾಯಿತು.
ಅಲ್ಲಿಂದ ಮತ್ತೆ
ನಮ್ಮ ಸೈನಿಕರು ಹಿಂಜರಿಯಲೇ ಇಲ್ಲ, ಒದೊಂದೇ ಬೆಟ್ಟವನ್ನೂ ವಶಪಡಿಸಿಕೊಳ್ಳುತ್ತಲೇ ಮುನ್ನಡೆದಂತೆ ಪಾಕಿಗಳ
ಆಕ್ರಮಣ ಶಕ್ತಿ ತಗ್ಗುತ್ತಾ ಸಾಗಿತು. ಲೆಫ್ಟಿನೆಂಟ್ ಕೀಶಿಂಗ್ ಕ್ಲಿಫೋರ್ಡ್ ನೋನ್‌ಗ್ರುಮ್‌ನ ನೇತೃತ್ವದಲ್ಲಿ
ಸೈನಿಕರ ಪಡೆಯೊಂದು ತೋಲೋಲಿಂಗ್ ನಷ್ಟೇ ಮಹತ್ವದ್ದಾಗಿದ್ದ ಪಾಯಿಂಟ್
4812 ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಜುಲೈ
5 ಕ್ಕೆ ಟೈಗರ್ ಹಿಲ್ ನಮ್ಮದಾಯ್ತು. ಪಾಯಿಂಟ್ 4875 ನಮ್ಮ ಕೈಸೇರಿತು
ಜುಲೈ 26 ಕ್ಕೆ
ಕಾರ್ಗಿಲ್ ಶಿಖರದ ಮೇಲೆ ಭಾರತದ ವಿಜಯ ಪತಾಕೆ ಹಾರಾಡಿತು.
ವಿಕ್ರಮ್ ಭಾತ್ರಾ,
ಕರ್ನಲ್ ವಿಶ್ವನಾಥನ್, ಮನೋಜ್ ಕುಮಾರ್ ಪಾಂಡೆ ಹೀಗೆ ಒಬ್ಬರಲ್ಲ, ಇಬ್ಬರಲ್ಲ, ಒಟ್ಟು 524 ಸೈನಿಕರು,
ಅಧಿಕಾರಿಗಳು ತಮ್ಮ ಪ್ರಾಣತತ್ತರು. ಜತೆಗೇ 1363 ಮಂದಿ
ಗಾಯಾಳುಗಾಳಾದರು. ಈ ಭರತ ಮಾತೆಯ ಶಿರದ ಕಿರೀಟದಂತಿರುವ ಕಾಶ್ಮೀರವನ್ನು ನಮ್ಮಲ್ಲೇ ಉಳಿಸಿಕೊಟ್ಟರು
ಈ ವಿಜಯದೊಡನೆ
ನಿಜಕ್ಕೂ ಭಾರತವು ಪ್ರಕಾಶಿಸಿತು!
***
ಇಷ್ಟಕ್ಕೂ ಇದೆಲ್ಲಾ
ಏಕೆ ನೆನಪಾಯಿತೆಂದರೆ, ಇನ್ನೇನು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ 16 ನೇ
ಲೋಕಸಭೆಗೆ ಈಗಾಗಲೇ ಮತದಾನವು ಆರಂಭವಾಗಿದೆ. ಎಲ್ಲಾ ಪಕ್ಷಗಳಲ್ಲಿನ ರಾಜಕಾರಣಿಗಳು ಅಬ್ಬರದ ಪ್ರಚಾರದಲ್ಲಿ
ತೊಡ್ಗಿದ್ದಾರೆ. ಒಬ್ಬರನ್ನೊಬ್ಬರು ಹಳಿಯುತ್ತಾ, ವೈಯುಕ್ತಿಕವಾದ ನಿಂದನೆಗಳನ್ನೂ ಮಾಡಿಕೊಳ್ಳುತ್ತಾ
ತಮ್ಮನ್ನು ತಾವು ಇನ್ನಷ್ಟಿ ಕೆಳ ಮಟ್ಟಕ್ಕೆ ತಂದುಕೊಳ್ಳುತ್ತಿದ್ದಾರೆ.
ಇಷ್ಟೆಲ್ಲದರ
ಮಧ್ಯೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಪ್ರಮುಖರೋರ್ವರು ದೇಶವೇ ಹೆಮ್ಮೆಪಡಬೇಕಾದ ಕಾರ್ಗಿಲ್ ವಿಜಯದ
ವಿಚಾರವನ್ನೂ ತಮ್ಮ ಮತಯಾಚನೆಗಾಗಿ ಬಳಸಿಕೊಂಡು ಸುದ್ದಿ ಮಾಡಿದ್ದಾರೆ. ಅದಷ್ಟೆ ಅಲ್ಲದೆ ಯುದ್ದದಲ್ಲಿ
ಹೋರಾಡಿದ ವೀರ ಸೈನಿಕರ ಮತ ಧರ್ಮದ ವಿಷಯವಾಗಿಯೂ ಮಾತನಾಡಿ ದೇಶದ ಸಮಗ್ರತೆಯನ್ನು ಕಾಯುವ ಪವಿತ್ರ ಕಾರ್ಯ
ನಿರ್ವಹಿಸುವ ಸೈನಿಕರ ಮಧ್ಯೆಯೂ ಭೇಧ ಭಾವದ ವಿಷಬೀಜವನ್ನು ಬಿತ್ತಲು ಮುಂದಾಗಿದ್ದಾರೆ. ನಮ್ಮನ್ನಾಳಲಿಕ್ಕಿರುವವರಿಂದ
ಇಂತಹಾ ಕೀಳು ಮಟ್ಟದ ಹೇಳಿಕೆಗಳನ್ನು ಮತ್ತು ಅದರಿಂದ ತಾವು ಪಡೆಯಬಯಸುವ ಬಿಟ್ಟಿ ಪ್ರಚಾರವನ್ನು ದೇಶದ
ಯುವಜನತೆ ಯೆಂದಿಗೂ ಕ್ಷಮಿಸಬಾರದು.
ಸ್ನೇಹಿತರೇ
ನಿಮಗೆ ಗೊತ್ತಿರಲಿ, ನಮ್ಮ ದೇಶದಲ್ಲಿ ಯಾರೇ ಒಬ್ಬ ವ್ಯಕ್ತಿ ಸೈನ್ಯಕ್ಕೆ ಸೇರುತ್ತಾನೆಂದರೆ ಆ ವ್ಯಕ್ತಿಯ
ಜಾತಿ, ಧರ್ಮಗಳೇನು ಎನ್ನುವುದನ್ನು ಯಾರೊಬ್ಬರೂ ಕೇಳುವುದಿಲ್ಲ. ಬದಲಾಗಿ ಅವನಿಗಿರುವ ದೇಶಾಭಿಮಾನಕ್ಕೆ
ದೇಶವಾಸಿಗಳೆಲ್ಲಾ ತಲೆದೂಗುತ್ತಾರೆ. ಸೈನ್ಯಕ್ಕೆ ಸೇರ್ಬಹುದಾದ ವ್ಯಕ್ತಿ ಯಾರೇ ಆದರೂ ಅವನ ಬಗ್ಗೆ ಇಡಿ
ದೇಶವೇ ಹೆಮ್ಮೆ ಪಡುತ್ತದೆ ಏಕೆಂದರೆ ಭಾರತೀಯ ಸೇನೆ ನಿರ್ವಹಿಸುವ ಕಾರ್ಯ ಅಂತಹುದು. ಮಳೆ, ಚಳಿ, ಶೀತ
ಮಾರುತ, ಬಿರು ಬಿಸಿಲು ಎನ್ನುವುದನ್ನೂ ಲೆಕ್ಕಿಸದೆ ಹಗಲಿರುಳೂ ದೇಶದ ಗಡಿ ಕಾಯುವ ಯೋಧರ ದೇಶ ನಿಷ್ಠೆಯಿಂದಾಗಿಯೇ
ಇಂದು ನಾವೆಲ್ಲಾ ನೆಮ್ಮದಿಯಿಂದ ಬದುಕುತ್ತಿದ್ದೇವೆ. ಒಂದು ವೇಳೆ ನಮ್ಮ ಸೈನಿಕರಲ್ಲಿ ಅಂತಹಾ ಕರ್ತವ್ಯ
ನಿಷ್ಠೆ ಇಲ್ಲವಾಗಿದ್ದಲ್ಲಿ ಇಂದು ನಮ್ಮ ನಿಮ್ಮ ಮನೆಗಳ ಮೇಲೆಯೂ ಪರದೇಶವಾಸಿಗಳು ಬಾಂಬ್ ಧಾಳಿಗಳನ್ನು
ನಡೆಸುತ್ತಿದ್ದರು!
ಅಂತಹಾ ಮಹಾನ್
ಅನಾಹುತಗಳಿಂದ ನಮ್ಮನ್ನೆಲ್ಲಾ ಕಾಪಾಡುತ್ತಾ ತಾನು ದೈಹಿಕವಾಗಿ, ಮಾನಸಿಕವಾಗಿ ತೊಂದರೆ ಅನುಭವಿಸಿದರೂ
ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ದವಿರುವ ಇಂತಹಾ ಸೈನಿಕರ ಮಧ್ಯೆ ನಮ್ಮ ರಾಜಕಾರಣಿಗಳು ಜಾತಿ,
ಧರ್ಮಗಳ ಹೆಸರಿನಲ್ಲಿ ವಿಷಬೀಜವನ್ನು ಬಿತ್ತ ಹೊರಟಿದ್ದಾರಲ್ಲ, ಇದಕ್ಕೆ ಏನೆನ್ನೋಣ?
ದೇಶ ಕಾಯುವ
ಜವಾನ್ ಗಳಲ್ಲಿ ಜಾತೀಯತೆಯನ್ನು ಕಾಣುವವರಿಗೆ ಧಿಕ್ಕಾರವಿರಲಿ!
ನಮಸ್ಕಾರ
No comments:
Post a Comment