ಕಮಲಶಿಲೆ(Kamalashile)
ದಕ್ಷಿಣ ಭಾರತದ ಪಶ್ಚಿಮ ಕರಾವಳಿಯಲ್ಲಿನ ಕುಂದಾಪುರ ತಾಲೂಕಿನ ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ
ಬ್ರಾಹ್ಮೀ ದುರ್ಗಾಪರಮೇಶ್ವರಿಯು ಲಿಂಗ ಸ್ವರೂಪಿಯಾಗಿ ನೆಲೆಸಿ ನಂಬಿದ ಭಕ್ತರನ್ನು ಬೆಂಬಿಡದೆ ಸಲಹುತ್ತಿದ್ದಾಳೆ.
ಕರಾವಳಿ ಸೀಮೆಯ ಊರಾಗಿದ್ದರೂ ಮಲೆನಾಡಿನ ಮೂಲೆಯಲ್ಲಿರುವ ಶ್ರೀ ಕ್ಷೇತ್ರ ತನ್ನ ವಿಶಿಷ್ಟ ಪರಿಸರದಿಂದಾಗಿ
ನಿಸರ್ಗ ಪ್ರಿಯರಿಗೂ ಮನಸ್ಸಿಗೆ ಮುದ ನೀಡಲಿದೆ.
ಸ್ಕಂದ ಪುರಾಣದಲ್ಲಿರುವಂತೆ ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಶಕ್ತಿ ಸ್ವರೂಪಿಣಿ ಮಾತೆಯು
ಪರಮೇಶ್ವರನ ಆಜ್ಞೆಯಂತೆ ತಾನು ಬ್ರಾಹ್ಮೀ ದುರ್ಗಾಪರಮೇಶ್ವರಿಯಾಗಿ ನೆಲೆಸಿದ್ದಾಳೆ.
Sri Brahmi Durgaparameshvari, Kamalashile |
ಬಹಳ ವರುಷಗಳ ಹಿಂದೊಮ್ಮೆ ಸಹ್ಯಾದ್ರಿ ಖಂಡದಲ್ಲಿನ ಕುಬ್ಜಾ ನದಿಯ ತೀರದಲ್ಲಿ ಮಹಾನ್
ತಪಸ್ವಿಗಾಳಾಗಿದ್ದ ರೈಕ್ವ ಮುನಿಗಳು ಆಶ್ರಮವನ್ನು ರಚಿಸಿಕೊಂಡು ತಪಸ್ಸಿನಲ್ಲಿ ನಿರತರಾಗಿದ್ದರು. ಅದೇ
ಸಮಯದಲ್ಲಿ ಅಲ್ಲಿ ಖರಾಸುರ ಹಾಗೂ ರಟ್ಟಾಸುರರಎನ್ನುವ ರಕ್ಕಸ ಸಹೋದರರು ತಪೋನಿರತರಾಗಿದ್ದ ರೈತ್ವ ಮಹರ್ಷಿಗಳು
ಸೇರಿದಂತೆ ಸಾತ್ವಿಕರಿಗೆ ಉಪಟಳಗಳನ್ನು ನೀಡುತ್ತಿದ್ದರು. ಅವರುಗಳ ಈ ಉಪಟಳಾವನ್ನು ಸಹಿಸಲಾಗದೆ ಋಇ
ಮುನಿಗಳ್ ತಾವು ಶ್ರೀ ಆದಿ ಪರಾಶಕ್ತಿಯನ್ನು ಬೇಡಿಕೊಳ್ಳಲಾಗಿ ಮಾತೆಯು ತಾನು ಬ್ರಾಹ್ಮೀ ದುರ್ಗಾಪರಮೇಶ್ವರಿಯ
ಸ್ವರೂಪದಲ್ಲಿ ಅವತರಿಸಿ ಆ ರಕ್ಕಸರೀರ್ವರನ್ನು ಸಂಹರಿಸಿದಳು. ಬಳಿಕ ರೈತ್ವ ಮಹರ್ಷಿಗಳ ಆಶ್ರಮಕ್ಕೆ
ಬಂದು ಅವರಿಗೆ ವರ ಪ್ರಸಾದವನ್ನು ಕರುಣಿಸಿದ ಶ್ರೀ ಮಾತೆಯು ಅಲ್ಲಿಯೇ ಲಿಂಗಸ್ವರೂಪದಲ್ಲಿ ನೆಲೆಸುತ್ತಾಳೆ.
***
ಬಹಳ ಹಿಂದೆ ಕೈಲಾಸದಲ್ಲಿನ ಪರಮೇಶ್ವರನ ಸಾನ್ನಿದ್ಯದಲ್ಲಿ ಪಿಂಗಳೆ ಎನ್ನುವ ಹೆಸರಿನ
ನರ್ತಕಿಯು ತಾನಿ ದಿನನಿತ್ಯವೂ ನರ್ತನ ಸೇವೆಯನ್ನು ಮಾಡಿಕೊಂಡಿದ್ದಳು.
ಇಂತಿರಲು ಅದೊಂದು ದಿನ ತಾನು ಅತ್ಯಂತ ರೂಪವತಿಯಾಗಿರುವೆನೆಂಬ ಅಹಂಕಾರವು ಅವಳ ತಲೆಯನ್ನು
ಹೊಕ್ಕುತ್ತದೆ. ಆ ಅಹಂಕಾರದ ನೆವದಿಂದ ಪಿಂಗಳೆಯು ತಾನು ನರ್ತಿಸುವುದಿಲ್ಲ ಎಂದು ನಿರ್ಧರಿಸುತ್ತಾಳೆ.
ಇದರಿಂದ ಕೋಪಗೊಂಡ ಪಾರ್ವತಿ ದೇವ್ಯು ಪಿಂಗಳೆಗೆ “ನೀನು ಅಂಕುಡೊಂಕಿನ ಗೂನು ಬೆನ್ನಿನ ಕುರೂಪಿಯಾಗು”
ಎನ್ನುವುದಾಗಿ ಶಾಪವನ್ನು ನೀಡುತ್ತಾಳೆ. ಪಿಂಗ್ಳೆಯು ತಕ್ಷಣವೇ ಅಹಂಕಾರಶೂನ್ಯಳಾಗಿ ತಾನೆಸಗಿದ ತಪ್ಪಿಗೆ
ಶ್ರೀ ದೇವಿಯಲ್ಲಿ ಕ್ಷಮೆ ಕೋರಿದ್ದಲ್ಲದೆ ತನಗೊದಗಿದ ಶಾಪದ ವಿಮೋಚನೆಗಾಗಿ ಪರಿಪರಿಯಾಗಿ ಅಂಗಲಾಚುತ್ತಳೆ.
ಅದರಿಂದ ಸಂಪ್ರೀತಗೊಂಡ ಶ್ರೀ ಪಾರ್ವತಿ ದೇವಿಯು “ನಾನು ಖರ ರಟ್ಟಾಸುರರ ವಧೆಗಾಗಿ ಶ್ರಾವಣ ಕೃಷ್ಣ ನವಮಿ
ಶುಕ್ರವಾರದಂದು ರೈತ್ವಾಶ್ರಮದಲ್ಲಿ ಪತಾಳದಿಂದ ಲಿಂಗ ಸ್ವರೂಪಿಯಾಗಿ ಮೂಡಿ ಬರುತ್ತೇನೆ. ಅದೇ ಮುಂದೆ
‘ಕಮಲಶಿಲೆ’ ಎಂಬುದಾಗಿ ಪ್ರಸಿದ್ದ ಕ್ಷೇತ್ರವಾಗಲಿದೆ. ನೀನು ಅಲ್ಲಿಗೆ ಹೋಗಿ ಸುಪಾರ್ಶ್ವ ಗುಹಾಮುಖದಿಂದ
(ಕೃತಯುಗದಲ್ಲಿ ಸುಪಾರ್ಶ್ವ ಎನ್ನುವ ರಾಜನು ತಾನು
ರಾಜಕೀಯದಿಂದ ಜಿಗುಪ್ಸೆಗೊಂಡು ತಪಸ್ಸು ಕೈಗೊಳ್ಳಬೇಕೆಂದಾಗ ಆತನಿಗೆ ಶಿವಪ್ರೇರಣೆಯಾಗಿ ತಾನು ಈ ಸ್ಥಳಕ್ಕೆ
ಬಂದು ತಪಸ್ಸಿಗೆ ನಿಂತು ಮೋಕ್ಷ ಹೊಂದಿದ್ದನು. ) ಹೊರಡುವ ನಾಗತೀರ್ಥದ
ಸಮೀಪದಲ್ಲಿ ಆಶ್ರಮವನ್ನು ನಿರ್ಮಿಸಿಕೊಂಡು ನನ್ನ ಅನುಗ್ರಹಕ್ಕಾಗಿ ತಪಸ್ಸನ್ನು ಮಡು” ಎನ್ನುತ್ತಾಳೆ.
ಆ ನಂತರ ದೇವಿಯ ಅನುಜ್ಞೆಯಂತೆ ನಡೆದ ಕುಬ್ಜೆಗೆ ಮುಂದೆ ಶ್ರೀ ದೇವಿಯ ಅನುಗ್ರಹವಾಗುತ್ತದೆ.
ಕುಬ್ಜೆಯು ತನ್ನ ತಪಸ್ಸಿನ ಕಾರಣದಿಂದ ನದಿಯಾಗಿ ರೂಪುಗೊಂಡು ಶ್ರೀ ದೇವಿಗೆ ಅಭಿಮುಖವಾಗಿ ಹರಿದು ಪಶ್ಚಿಮ
ಸಮುದ್ರವನ್ನು ಸೇರುವ ಈ ಅನ್ದಿಯು ಇಂದು ‘ಕುಬ್ಜ ನದಿ’ ಎಂದು ಪ್ರಸಿದ್ದವಾಗಿದೆ.
No comments:
Post a Comment