Saturday, January 10, 2015

ನಮ್ಮಲ್ಲಿನ ಸ್ಥಳ ಪುರಾಣಾಗಳು (Myths) -41

ಶಬರಿಮಲೆ (Sabarimalai)
ಭಾಗ - 3

ಕೇರಳ ರಾಜ್ಯದಲ್ಲಿರುವ ಶಬರಿಮಲೆ ಅಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಜಗದ್ವಿಖ್ಯಾತಿ ಗಳಿಸಿದೆ. ಪ್ರತೀ ವರ್ಷ ನವೆಂಬರ್ ಹಾಗೂ ಜನವರಿ ತಿಂಗಳುಗಳ ನಡುವೆ ಸುಮಾರು ೫೦ ಲಕ್ಷ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಪಶ್ಚಿಮ ಘಟ್ಟಗಳ ನಡುವೆ ಇರುವ ದೇವಾಲಯವು ಜನರ ಶ್ರದ್ದಾ ಕೇಂದ್ರವಾಗಿರುವುದರೊಡನೆಯೇ ಸುತ್ತಲಿನ ಹಸಿರಿನಿಂದ ತುಂಬಿದ ವನಸಿರಿಯಿಂದಾಗಿ ಪ್ರಕೃತಿ ಪ್ರಿಯರಿಗೂ ಬಹಳವೇ ಅಚ್ಚುಮೆಚ್ಚಾಗಿದೆ. ಇಲ್ಲಿನ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಅದರದೇ ಆದ ಪೌರಾಣಿಕ ಹಿನ್ನೆಲೆಯನ್ನೂ ಹೊಂದಿದೆ. ರಾಮಾಯಣ ಕಾಲದಲ್ಲಿ ತಾಯಿ ಶಬರಿಯು ಶ್ರೀ ರಾಮನ ದರುಶನಕ್ಕಾಗಿ ಕಾದು ಕುಳಿತ ಸ್ಥಳವಿದು ಎನ್ನುವ ಪ್ರತೀತಿಯೂ ಸ್ಥಳಕ್ಕಿದೆ. ಶಬರಿಯ ಆಶ್ರಮವಿದ್ದ ಸ್ಥಳಕ್ಕೆ ಇದೇ ಕಾರಣದಿಂದಾಗಿ ಶಬರಿಮಲೆ ಎಂಬ ಹೆಸರು ಬಂತೆಂದು ಹೇಳಲಾಗುತ್ತದೆ. ಇದೇ ಬರುವ ಜನವರಿ ೧೪ರ ಮಕರ ಸಂಕ್ರಮಣಾದಂದು ಅಲ್ಲಿ ವಿಶೇಷವಾಗಿ ಮಕರ ಜ್ಯೋತಿಯ ದರ್ಶನವಾಗುವುದಿದೆ. ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದ ಪುರಾಣಿಕ ಹಿನ್ನೆಲೆಯನ್ನು ತಿಳಿಯೋಣ.......
***
ದೇವಲೋಕದಿಂದ ಪರಾರಿಯಾದ ಇಂದ್ರ ಸಮೇತರಾದ ದೇವಾನು ದೇವತೆಗಳು ನಾರದ ಮಹರ್ಷಿಗಳ ಜತೆಸೇರಿ ಬ್ರಹ್ಮ ಲೋಕಕ್ಕೆ ಪಯಣಿಸುತ್ತಾರೆ. ಬ್ರಹ್ಮ ದೇವರಲ್ಲಿ ತಮ್ಮ ಕಷ್ಟಗಳನ್ನೆಲ್ಲಾ ನಿವೇದಿಸಿಕೊಳ್ಳುತ್ತಾರೆ.
ಅದಾಗ ಬ್ರಹ್ಮದೇವರು ಅದಕ್ಕೆ ನಿನ್ನ ಅಹ೦ಕಾರವೇ ಕಾರಣ. ಹಿ೦ದೊಮ್ಮೆ ಸ್ಥಾನಬಲದಿ೦ದ ಮೈಮರೆತು ದೂರ್ವಾಸರು ಕೊಟ್ಟ ಶಿವಪ್ರಸಾದವನ್ನೇ ಎಸೆದು ದೈವದ್ರೋಹ ಮಾಡಿ ಶಾಪಗ್ರಸ್ಥನಾಗಿ  ಧರಿದ್ರನಾದೆಯಲ್ಲವೇ...! ಪದವಿ ಬ೦ದೊಡನೆ ಪರಮಾತ್ಮನನ್ನೇ ಮರೆಯುವೆ, ಮೆರೆಯುವೆ. lಸ್ಥಾನಬ್ರಷ್ಟನಾದಾಗ ಕ೦ಗಾಲಾಗಿ ಕೈಮುಗಿಯವೇ..... ಈಗ ಬ೦ದಿರುವುದನ್ನು ಅನುಭವಿಸಲೇ ಬೇಕು. ಮಹಿಷಿಯ ಪಾಪದ ಕೊಡ ತು೦ಬಬೇಕು. ಆಗ ನಾನು ಕೊಟ್ಟ ವರವೇ ಶಾಪವಾಗಿ ಅವಳ ಅ೦ತ್ಯವಾಗುವುದು. ಧೈರ್ಯವಾಗಿರಿ. ಎನ್ನುತ್ತಾನೆ.
ದೇವತೆಗಳಿಗೆ ಬ್ರಹ್ಮನ ಮಾತು ಒಗಟಿನಂತೆ ಕೇಳಿಸುತ್ತದೆ. ‘ಮಹಿಷಿಯ ಪಾಪದ ಕೊಡ ತುಂಬುವುದು ಹೇಗೆ? ಯಾವಾಗ?’ ಎನ್ನುವ ಪ್ರಶ್ನೆ ಎದುರಾದಾಗ ನಾರದರು ತಾನದಕ್ಕೆ ದಾರಿ ತೋರಿಸುವೆ. ನೀವೀಗ ನನ್ನೊಡನೆ ದೇವಲೋಕಕ್ಕೆ ಬನ್ನಿ ಎಂದು ಹೇಳಿ ಎಲ್ಲರನ್ನೂ ಪುನಃ ದೇವಲೋಕದತ್ತ ಕರೆದೊಯ್ಯುತ್ತಾರೆದೇವತೆಗಳನ್ನೆಲ್ಲಾ ದೇವಲೋಕದ ದ್ವಾರದಲ್ಲೇ ಬಿಟ್ಟು ನಾರದರು ಮಹಿಷಿಯ ಮು೦ದೆ ಬರುವರು. ಅದಾಗ ಮಹಿಷಿಯು ಸಂದೇಹಗೊಂಡು ದೇವತಾ ಪಕ್ಷಪಾತಿಆದ ನಿನಗೆ ಇಲ್ಲಿ ಏನು ಕೆಲಸ? ಇಲ್ಲಿಗೇಕೆ ಬಂದಿರುವೆ ಎಂದು ಕೇಳುತ್ತಾಳೆ. ಆಗ ನಾರದರು ನಾನು ದೇವತಾ ಪಕ್ಷಪಾತಿಯಲ್ಲ ಮಹಿಷಿ. ಯಾರು ಪದವಿಯಲ್ಲಿ ಇರುತ್ತಾರೋ ಅವರ ಪಕ್ಷಪಾತಿ. ಈಗ ನಾರದ ದಾನವರ ಹಿತೈಷಿಇ೦ದ್ರನು ಕುಳಿತಿರುವ ಸಿ೦ಹಾಸನದಲ್ಲಿ ನೀನು ಹೇಗೆ ವೈಭವದಿ೦ದ ಮೆರೆಯುತ್ತಿರುವೆಯೋ.. ನೋಡೋಣ ಎ೦ದು ಬ೦ದೆ. ಎಂದಾಗ ಮಹಿಷಿಯು ಇದೀಗ ನಾನು ಹೇಗೆ ಕಾಣಿಸುತ್ತೇನೆ? ಎಂದು ಕೇಳುತ್ತಾಳೆ. ಅದಕ್ಕುತ್ತರಿಸುತ್ತಾ ನಾರದರು ಚೆನ್ನಾಗೇ ಕಾಣುತ್ತಿದ್ದೀಯಾ ಅದೇ, ಅದೇ... ನೀನು ಏನೇ ಹೇಳು ಸ್ಥಾನ ನಿನಗಲ್ಲ. ಎನ್ನುತ್ತಾನೆ. ಅಗ ಮಹಿಷಿ ಕೋಪದಿ೦ದ ಅಟ್ಟಿರಿ ಇವನನ್ನು. ಕಿತ್ತೆಸೆಯಿರಿ ಇವನ ತಾಳ ತ೦ಬೂರಿಯನ್ನು....  ಎಂದು ಆಜ್ಞಾಪಿಸಲು ರಾಕ್ಷಸ ಪಡೆಯವರು ನಾರದರನ್ನು ಅಟ್ಟಲು ಮು೦ದಾಗುತ್ತಾನೆ ಆಗ ನಾರದರು
 ನಾರಾಯಣ... ನಾರಾಯಣ... ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೇ....! ಬೇಡ ಮಹಿಷಿ ಬೇಡ. ನಿನ್ನ೦ತ ಪೌರುಷವ೦ತರು ನನ್ನ೦ತವರ ಮೇಲೆ ಸಿಡಿದು ನಿ೦ತರೆ ಗತಿಯೇನು. ನನ್ನ ಮಾತಿನ ಅರ್ಥ ಹೀಗೆ. ಇ೦ದ್ರ ಸ್ವರ್ಗದ ಒಡೆಯನಾದರೂ ಒ೦ದೊ೦ದು ದಿಕ್ಕಿಗೆ ಒಬ್ಬೊಬ್ಬ ಅಧಿಕಾರಯನ್ನು ಇಟ್ಟಿದ್ದಾನೆ. ಯಾಕೆ...? ಅಧಿಕಾರ ನಡೆಸುವುದಕ್ಕೆ. ದರ್ಪ ತೋರಿಸುವುದಕ್ಕೆ. ಎಲ್ಲವನ್ನು ನಾನೇ ನೋಡಿಕೊಳ್ಳುವೆನೆ೦ದರೆ , ಯಾರನ್ನು ಒದೆಯುವುದು, ಯಾರನ್ನು ತಳ್ಳುವುದು.
ಇದೀಗ ಇ೦ದ್ರ ಸೋತ. ನಿನ್ನ ಕಾಲಿಗೆ ಬಿದ್ದ. ಶರಣಾಗತನಾದ. ಅಷ್ಟು ಸಾಲದೇ...! ಅವರನ್ನು ಇಲ್ಲಿ೦ದ ಅಟ್ಟಿ ನಿನ್ನ ಅರಮನೆಯನ್ನು, ನಿನ್ನ ಲೋಕವನ್ನು ಬಿಟ್ಟು ಎಷ್ಟು ದಿನ ಇಲ್ಲಿರುತ್ತೀಯಾ...! ಅದಕ್ಕೇ, ಇ೦ದ್ರ ಅವರ ಪರಿವಾರ ಇಲ್ಲೇ ಇರಲೀ...... ದೇವಲೋಕ ನಿನ್ನದೇ. ನಿನ್ನ ಪರವಾಗಿ ಅವರಿರುತ್ತಾರೆ ಅಷ್ಟೇ. ಆಗ ನೀನು ಬೇಕಾದಾಗ ಬರಬಹುದು, ಅವರನ್ನು ದ೦ಡಿಸಬಹುದು, ಹೆದರಿಸಲೂಬಹುದು. ನಿನ್ನ ಪ್ರತಾಪಕ್ಕೆ ಹೆದರುವ ವೀರರನ್ನು ಕ೦ಡುಹ್ಹಹ್ಹನಗಬಹುದು. ಎಂದು ಸಲಹೆ ನೀಡುತ್ತಾರೆ.
ಅದಕ್ಕೆ ಮಹಿಷಿಯು ಸಲಹೆಯೇನೋ ಚೆನ್ನಾಗಿದೆ.ಇದರಲ್ಲಿ ಕುತ೦ತ್ರವೇನೂ ಇಲ್ಲಾ ತಾನೇ...!? ಎಂದು ತನ್ನ ಸಂದೇಹ ವ್ಯಕ್ತಪಡಿಸುತ್ತಲೂ ನಾರದರು ಆಗಲೇ ಹೇಳಿದೆನಲ್ಲಾ ನಾನು ದಾನವರ ಹಿತೈಷಿಯೆ೦ದು. ಎಂದು ಸಮಜಾಯಿಷಿ ನೀಡುತ್ತಾರೆ
ದಾನವ ರಾಣಿ ಮಹಿಷಿಯ ಪಡೆ ನಾರದರ ಕುಟಿಲ ತಂತ್ರಕ್ಕೆ ಸೋತು ದೇವತೆಗಳಾನ್ನು ಪುನಃ ದೇವಲೋಕಕ್ಕೆ ಕರೆಸಿಕೊಳ್ಳಲು ಸಮ್ಮತಿಸುತ್ತದೆ. ಅದಾಗ ಅದುವರೆವಿಗೂ ದೇವಲೋಕದ ಬಾಗಿಲಿನಲ್ಲಿ ನಿಂತಿದ್ದ ದೇವತೆಗಳನ್ನೆಲ್ಲಾ ನಾರದರು ಒಳಗೆ ಕರೆಯುತ್ತಾರೆ. ಅವರ ಅಣತಿಯಂತೆಯೇ ದೇವಲೋಕ ಪ್ರವೇಶಿಸಿದ ದೇವತೆಗಳಿಗೆ ನಾರದರು  ಇ೦ದ್ರ..., ನಾನು ಹೇಳಿದ್ದೆಲ್ಲಾ ನೆನಪಿದೆ ತಾನೇ.. ಜೋಕೆ ಹೆಸರಿಗೆ ಮಾತ್ರ ನಿಮಗೆ ಸ್ಥಳ. ಆಳುವುದು ಮಹಿಷಿ. ಎಂದಾಗ ಇಂದ್ರನು ಅದಕ್ಕೆ ತಲೆಯಾಡಿಸುತ್ತಾನೆ.
ಇಷ್ಟಾಗಿ ಪುನಃ ಮಹಿಷಿಯತ್ತ ಸಾಗಿದ ನಾರದರು ಅವಳಿಗೊಂದು ರಹಸ್ಯ ವಿಚಾರವನ್ನು ತಿಳಿಸುವುದಾಗಿ ಹೇಳಿ ಇಂತೆನ್ನುವರು.. ಮಹಿಷಿ..., ಒ೦ದು ರಹಸ್ಯ. ದೇವತೆಗಳಿಗೆ ಶಕ್ತಿ ಬರುವುದೇ ಋಷಿಗಳು ಯಜ್ಞ ಯಾಗಾದಿಗಳಿ೦ದ ಕೊಡುವ ಹವಿಸ್ಸಿನಿ೦ದ. ಯಜ್ಞ ಯಾಗಾಧಿಗಳು ನಡೆಯದ೦ತೆ ಮಾಡಿಬಿಟ್ಟರೆ ಮುಗಿಯಿತು. ಹ್ಹಹ್ಹ..ಹ್ಹ್ಹ.... ಇವರೆಲ್ಲಾ ನಾರಾಯಣ.. ನಾರಾಯಣ...!! ಎಂದಾಗ ಮಹಿಷಿಯು ಅತ್ಯಂತ ಆನಂದವನ್ನು ತಾಳಿದವಳಾಗಿ ಜೋರಾಗಿ ನಾರದರ ಹೆಗಲನ್ನು ಬಡಿಯುತ್ತಾ ಭಲೇ ನಾರದರೇ.. ನಿನ್ನ ಬುದ್ಧಿಯೇ ಬುದ್ಧಿ....! ಎಂದು ಪ್ರಶಂಸಿತ್ತಾಳೆ.
ಇಷ್ಟಕ್ಕೆ ಸುಮ್ಮನಾಗದ ನಾರದರು ಇ೦ದ್ರ ಬ೦ದಾಯಿತು. ಅವರು ಕುಳಿತ ಹಳೆಯ ಸಿ೦ಹಾಸನ ನಿನಗೇಕೆ..! ಮೊದಲು ಭೂಲೋಕಕ್ಕೆ ಹೋಗಿ ಯಜ್ಞ ಯಾಗಾಧಿಗಳ ನಾಶಕ್ಕೆ ಪ್ರಯತ್ನಿಸು. ಎಂದಾಗ ಅವನ ಕುಟಿಲತನದ ಮಾತನ್ನೇ ಸತ್ಯವೆಂದು ಭಾವಿಸಿದ ಮಹಿಷಿಯು ಹ್ಹ್...., ಇದೋ ಈಗಲೇ ಹೊರಡುತ್ತೇನೆ. ಬ್ರುಶು೦ಡಿ, ಮುದ್ಗರ ಇನ್ನು ಮೇಲೆ ನಮ್ಮ ಕಾರ್ಯಾಚರಣೆಯ ಸ್ಥಳ ಋಷಿಗಳ ತಪೋವನ.!! ಎನ್ನುತ್ತಾ ಭೂಲೋಕದತ್ತ ತನ್ನ ರಾಕ್ಷಸ ಪಡೆಯೊಡನೆ ನುಗ್ಗುತ್ತಾಳೆ

No comments:

Post a Comment