Friday, January 09, 2015

ನಮ್ಮಲ್ಲಿನ ಸ್ಥಳ ಪುರಾಣಾಗಳು (Myths) -40

ಶಬರಿಮಲೆ (Sabarimalai)
ಭಾಗ - 2

ಕೇರಳ ರಾಜ್ಯದಲ್ಲಿರುವ ಶಬರಿಮಲೆ ಅಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಜಗದ್ವಿಖ್ಯಾತಿ ಗಳಿಸಿದೆ. ಪ್ರತೀ ವರ್ಷ ನವೆಂಬರ್ ಹಾಗೂ ಜನವರಿ ತಿಂಗಳುಗಳ ನಡುವೆ ಸುಮಾರು ೫೦ ಲಕ್ಷ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಪಶ್ಚಿಮ ಘಟ್ಟಗಳ ನಡುವೆ ಇರುವ ದೇವಾಲಯವು ಜನರ ಶ್ರದ್ದಾ ಕೇಂದ್ರವಾಗಿರುವುದರೊಡನೆಯೇ ಸುತ್ತಲಿನ ಹಸಿರಿನಿಂದ ತುಂಬಿದ ವನಸಿರಿಯಿಂದಾಗಿ ಪ್ರಕೃತಿ ಪ್ರಿಯರಿಗೂ ಬಹಳವೇ ಅಚ್ಚುಮೆಚ್ಚಾಗಿದೆ. ಇಲ್ಲಿನ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಅದರದೇ ಆದ ಪೌರಾಣಿಕ ಹಿನ್ನೆಲೆಯನ್ನೂ ಹೊಂದಿದೆ. ರಾಮಾಯಣ ಕಾಲದಲ್ಲಿ ತಾಯಿ ಶಬರಿಯು ಶ್ರೀ ರಾಮನ ದರುಶನಕ್ಕಾಗಿ ಕಾದು ಕುಳಿತ ಸ್ಥಳವಿದು ಎನ್ನುವ ಪ್ರತೀತಿಯೂ ಸ್ಥಳಕ್ಕಿದೆ. ಶಬರಿಯ ಆಶ್ರಮವಿದ್ದ ಸ್ಥಳಕ್ಕೆ ಇದೇ ಕಾರಣದಿಂದಾಗಿ ಶಬರಿಮಲೆ ಎಂಬ ಹೆಸರು ಬಂತೆಂದು ಹೇಳಲಾಗುತ್ತದೆ. ಇದೇ ಬರುವ ಜನವರಿ ೧೪ರ ಮಕರ ಸಂಕ್ರಮಣಾದಂದು ಅಲ್ಲಿ ವಿಶೇಷವಾಗಿ ಮಕರ ಜ್ಯೋತಿಯ ದರ್ಶನವಾಗುವುದಿದೆ. ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದ ಪುರಾಣಿಕ ಹಿನ್ನೆಲೆಯನ್ನು ತಿಳಿಯೋಣ.......
***
Lord Ayyappa Swamy

ಇ೦ದ್ರನು ಮಹಿಷಿಯ ತಪೋವನದಲ್ಲಿ ಪ್ರತ್ಯಕ್ಷನಾಗಿ, ನಕ್ಕು ತನ್ನ ವಜ್ರಾಯುಧದಿ೦ದ ಎತ್ತರದ ಕಲ್ಲು ಬ೦ಡೆಯ ಮೇಲೆ ಬಡಿಯುತ್ತಾನೆ. ಕಲ್ಲು ಚೂರು ಚೂರಾಗಿ ಮಹಿಷಿಯು ಕುಳಿತ ಕಡೆ ಉರುಳುತ್ತಾ ಸಾಗಿ ಪೂರ್ತಿಯಾಗಿ ಆಕೆಯ ಮುಚ್ಚಿ ಬಿಡುತ್ತದೆ. ಇ೦ದ್ರ ಜೋರಾಗಿ ನಕ್ಕು ವಿಜಯೋತ್ಸವ ಆಚರಿಸುತ್ತಾನೆ
ಕಲ್ಲುಗಳ ನಡುವೆ ಮಹಿಷಿಯ ಸಮಾಧಿ... ಹ್ಹಹ್ಹಹ್ಹಾ...
ಆದರೆ ಮಹಿಷಿಗೆ ಇದರಿಂದ ಕಿಂಚಿತ್ತೂ ತೊಂದರೆ ಆಗುವುದು ಇಲ್ಲ..! ಮಹಿಷಿಯ ಧ್ವನಿ ಕೇಳುತ್ತಲೇ ಇರುತ್ತದೆ. ಇದೀಗ ಆಕೆಯ ಆತ್ಮಶಕ್ತಿಯು ಕಲ್ಲುಗಲ ಮಧ್ಯದಿ೦ದ ಹೊರಬ೦ದು ಆಕಾಶದೆತ್ತರ ಸಾಗಿ ಬ್ರಹ್ಮಲೋಕ ಪ್ರವೇಶಿಸುತ್ತದೆ. ಬ್ರಹ್ಮದೇವನು ಮಹಿಷಿಯ ಹತ್ತಿರ ಪ್ರತ್ಯಕ್ಷನಾಗಿ ನಿಲ್ಲುವನು. ಮುಚ್ಚಿದ್ದ ಕಲ್ಲುಗಲು ಮಾಯವಾಗುವವು
ಬ್ರಹ್ಮದೇವನು ಮಹಿಷಿಯನ್ನು ಎಚ್ಚರಿಸುತ್ತಾನೆ - ಮಹಿಷೀ......
ಎಚ್ಚರಗೊಂಡ ಮಹಿಷಿಯು :  ತ೦ದೇ... ಬ್ರಹ್ಮದೇವಾ, ನಮೋ ನಮಃ... ಎಂದು ಬ್ರಹ್ಮನಿಗೆ ಪ್ರಣಾಮ ಮಾಡುವಳು. ಬ್ರಹ್ಮದೇವನು, ನಿನ್ನ ತಪಸ್ಸಿಗೆ ಮೆಚ್ಚಿದೆ. ಬೇಕಾದ ವರವನ್ನು ಕೇಳು. ಎಂದು ಕೇಳಲು ಮಹಿಷಿ ಬ್ರಹ್ಮದೇವಾ, ನನಗೆ ಸಾವಿಲ್ಲದ೦ತೆ ಅನುಗ್ರಹಿಸು. ಎಂದು ಕೇಳಿಕೊಳ್ಳುತ್ತಾಳೆ. ಅದಕ್ಕೆ ಉತ್ತರಿಸುತ್ತಾ ಬ್ರಹ್ಮದೇವ ಮಹಿಷಿ, ಹುಟ್ಟು-ಸಾವು ಬಾಳಿನ ಎರಡು ಕೊನೆಗಳು. ಅವು ಒ೦ದನ್ನು ಬಿಟ್ಟು ಒ೦ದು ಇರುವುದಿಲ್ಲ. ಹುಟ್ಟಿದ ಮೇಲೆ ಸಾಯಲೇಬೇಕು. ಇದನ್ನು ಬಿಟ್ಟು ಮತ್ತೇನಾದರೂ ಕೇಳು. ಎನ್ನುತ್ತಾನೆ. ಅದಕ್ಕೆ ಮಹಿಷಿಯು ಕೆಲ ಕ್ಷಣ ಯೋಚಿಸುತ್ತಾ, ಸಾವಿಲ್ಲದ ವರವನ೦ತೂ ಕೊಡಲಾರೆ. ಇ೦ತಹವರಿ೦ದಲೇ ಸಾವು ಬರಬೇಕೆ೦ದು ಕೇಳಿದರೆ, ಅದನ್ನಾದರೂ ಕೊಡುವೆ ತಾನೇ...........!? ಹಾಗಾದರೆ, ಹರಿಹರರ ಸಮಾಗಮದಿ೦ದ ಬಾಲಕನೂಬ್ಬನು ಜನಿಸಿ; ಬಾಲಕನಿ೦ದಲೇ ನನ್ನ ಸ೦ಹಾರವಾಗಬೇಕು….! ಎಂದು ಕೇಳಿದಾಗ್ ಬ್ರಹ್ಮದೇವನು ತಥಾಸ್ತು ಎಂದು ಹೇಳಿ ಅಂತರ್ಧಾನನಾಗುತ್ತಾನೆ.
ಹೀಗೆ ಬ್ರಹ್ಮನಿಂದ ವರವನ್ನು ಪಡೆದ ಮಹಿಷಿಯು ಹರಿಯೂ ಗ೦ಡು, ಹರನೂ ಗ೦ಡು. ಇವರಿಬ್ಬರ ಸಮಾಗಮದಿ೦ದ ಶಿಶುವಾಗುವುದೆ೦ದರೇನು, ಅದು ನನ್ನನ್ನು ಕೊಲ್ಲುವುದೆ೦ದರೇನು....! ಹ್ಹ..ಹ್ಹ..ಹ್ಹಾ.. ನನಗಿನ್ನು ಸಾವಿಲ್ಲ.. ನನ್ನಗಿನ್ನು ಮರಣವಿಲ್ಲ್ಲ.. ಹ್ಹ..ಹ್ಹ..ಹ್ಹಾ.....! ಎಂದು ಅಟ್ಟಹಾಸದ ನಗು ನಗುತ್ತಾ ತನ್ನ ಆಸ್ಥಾನಕ್ಕೆ ವಾಪಾಸಾಗುತ್ತಾಳೆ.
***
ಮಹಿಷಿಯು ಘೋರ ತಪಸ್ಸನ್ನಾಚರಿಸಿ ಬ್ರಹ್ಮದೇವರಿಂದ ವರವನ್ನು ಪಡೆದು ತನ್ನ ಆಸ್ಥಾನಕ್ಕೆ ತೆರಳಿದ ಕೆಲ ದಿನಗಳು ಕಳೆದಿದೆ. ಇದೀಗ ಅವಳ ಆಟಕ್ಕೆ ಮೇರೆ ಇಲ್ಲದಂತಾಗಿರುತ್ತದೆ. ತನ್ನನ್ನು ಸೋಲಿಸುವವರು ಮೂಲೋಕದಲ್ಲಿ ಯಾರಿಲ್ಲವೆಂದುಕೊಳ್ಳುತ್ತಾ ದೇವಲೋಕದ ಮೇಲೆ ಸಮರ ಸಾರುತ್ತಾಳೆ. ಅವಳ ಆಕ್ರಮಣದಿಂದ ಇಡೀ ದೇವಲೋಕವೇ ನಡುಗುವುದು. ಎಲ್ಲರೂ ಓಲಾಡುತ್ತಾರೆ
ಮೈಮರೆತವನ೦ತೆ ಇದ್ದ ಇ೦ದ್ರನು, ಸಿಡಿಲ೦ತೆ ಆರ್ಭಟಿಸುವ ಸದ್ದು ಬೆಳಕಿಗೆ ಬೆಚ್ಚಿಬೀಳುತ್ತಾನೆ ಹಾಗೆ ಬೆಚ್ಚಿದ ಇಂದ್ರನು ದೇವ ಗುರುವಾದ ಬೃಹಸ್ಪತಿಯವರ ಬಳಿ ಗುರುದೇವಾ, ಏನಿದು ಏನಿದೂ....! ಏನಾಯಿತು ದೇವಲೋಕಕ್ಕೆ..? ಎಂದು ಕೇಳುತ್ತಾನೆ. ಅದಕ್ಕೆ ಬೃಹಸ್ಪತಿಯು ಮತ್ತೆ ರಾಕ್ಷಸರ ದಾಳಿಯಿರಬೇಕು. ಎಂದು ಅಭಿಪ್ರಾಯ ವ್ಯಕ್ತಪಡಿಸಲು ಇಂದ್ರನು ಇನ್ನೆಲ್ಲಿಯಾ ದಾನವರು. ಮಹಿಷಿಯ ಸಾವಿನಲ್ಲಿ ರಕ್ಕಸರ ಪೌರುಷವೇ ಅಡಗಿ ಹೋಯಿತ್ತಲ್ಲಾ ಗುರುದೇವಾ...! ಎನ್ನುತ್ತಿರುವಷ್ಟರಲ್ಲಿಯೇ ಮಹಿಷಿಯು ಪ್ರತ್ಯಕ್ಷಗೊ೦ಡು.... ಅಡಗಿ ಹೋದ ಪೌರುಷ ಮತ್ತೆ ಕಡಲಿನ೦ತೆ ಉಕ್ಕಿ , ಸಿಡಿಲಿನ೦ತೆ ಬಡಿಯಲು ಬ೦ತೋ ಇ೦ದ್ರಾ... ಹ್ಹಹ್ಹ..ಹ್ಹಾ..., ಹ್ಹಹ್ಹ..ಹ್ಹಾ...!! ಎಂದು ಅಟ್ಟಹಾಸದಿಂದ ನಗುತ್ತಾಳೆ.
ಇ೦ದ್ರ ಬೆಚ್ಚಿ ಬಿದ್ದವನಾಗಿ ಹ್ಹಾ.. ಮಹಿಷೀ...!?
ಅಹುದೋ ಮಹಿಷಿ. ಯಾವ ಅಸುರನ ಅಟ್ಟಹಾಸ ಕ೦ಡು ದಿಟ್ಟತನವನ್ನು ಮರೆತು ಕೆಟ್ಟೆವೆ೦ದು ಕೂಗುತ್ತಾ ದಟ್ಟಡವಿಗೆ ಓಡುತ್ತಿದ್ದಿರೋ...... , ಮಹಿಷನ ಸಹೋದರಿ. ಹ್ಹಹ್ಹ..ಹ್ಹಾ......! ಎನ್ನಲು ಇಂದ್ರನು ತನ್ನ ವಜ್ರಾಯುಧವನ್ನು ಎತ್ತಿ, ಆಕ್ರೋಶದಿ೦ದ) ಏಯ್.. ಇನ್ನು ಬದುಕಿರುವೆಯಾ ನೀನು... ಎಂದು ಆಕ್ರಮಣಾಕ್ಕೆ ಮುಂದಾಗುತ್ತಾನೆ. ಆದರೆ ಇ೦ದ್ರನು ಆಕ್ರಮಿಸುತ್ತಿದ್ದ೦ತೆ ವಜ್ರಾಯುಧವು ಅದ್ರಶ್ಯವಾಗುವುದು.
ಅದಾಗ ದೇವಗುರುವು ಪ್ರಯೋಜನವಿಲ್ಲಾ ದೇವೇ೦ದ್ರ. ಮಹಿಷಿ ಬ್ರಹ್ಮನಿ೦ದ ವರ ಪಡೆದು ಬ೦ದಿದ್ದಾಳೆ. ನೀನಾಗಲಿ.., ನಿನ್ನ ವಜ್ರಾಯುಧವಾಗಲಿ, ಏನೂ ಮಾಡಲಾಗದು. ಎನ್ನುತ್ತಾರೆ. ಅದಾಗ ಮಹಿಷಿ ಹಾಗೂ ಆಕೆಯ ರಕ್ಕಸ ಪಡೆಯು ಇಂದ್ರನತ್ತ ಮುನ್ನುಗ್ಗುತ್ತದೆ. ಮಹಿಷಿಯು  ಎನ್ನುತ್ತಾ ತನ್ನ ಗಧೆಯಿ೦ದ ಇ೦ದ್ರನ ಹೊಡೆವಳು. ಕೆಳಕ್ಕೆ ಉರುಳಿ ಬಿದ್ದ ಇ೦ದ್ರ, ಸುಧಾರಿಸಿ ಎದ್ದು ನಿ೦ತು.. ಮಹಿಷಿ, ದೇವತೆಗಳ ಮೇಲೆ ನಿನಗೇಕೆ ಆಗ್ರಹ. ದೇವ-ದಾನವರು ಸಹೋದರರ೦ತೆ ಬಾಳಬೇಕು. ಎನ್ನುತ್ತಾನೆ. ಆಗ ಮಹಿಷಿಯು ಈಗ ನೆನಪಿಗೆ ಬ೦ತೇ ನಿನಗೀ ಸ೦ಭ೦ಧ. ದಾನವಕುಲ ಕ೦ಟಕನಾಗಿ ಮಹಾ ಮಹಾ ಅಸುರ ವೀರರನ್ನೆಲ್ಲಾ ಮೋಸದಿ೦ದ ಕೊಲ್ಲುವಾಗ ಎಲ್ಲಿ ಹೋಗಿತ್ತು ನಿನ್ನ ಸ೦ಭ೦ಧ...ಹ್ಹಾ...?? ಎಂದು ಕೇಳುತ್ತಾಳೆ. ಇಂದ್ರನು ನಾನೇನೂ ದಾನವರಿಗೆ ಅನ್ಯಾಯವನ್ನು ಮಾಡಿಲ್ಲ ಎಂದು ಹೇಳಲು ಅದರಿಂದ ಮತ್ತಷ್ಟು ಕ್ರುದ್ದಳಾದ ಮಹಿಷಿಯು ಎಲಾ ಸುಳ್ಳಾ...! ಅನ್ಯತವಾಡಿದರೆ ನಿನ್ನ ನಾಲಿಗೆಯನ್ನು ಸೀಳಿಬಿಟ್ಟೇನು. ಸಮುಚಿಯನ್ನು ನ೦ಬಿಸಿ ಸ್ನೇಹಿತನ೦ತೆ ನಟಿಸಿ, ವ೦ಚನೆಯಿ೦ದ ಕೊ೦ದವರು ಯಾರೋ....., ಮಾರುವೇಷದಿ೦ದ ಪ್ರಹ್ಲಾದನಲ್ಲೇ ಶಿಷ್ಯನಾಗಿ ಸೇರಿ ಅವನ ಸದ್ಗುಣಗಳನ್ನೆಲ್ಲಾ ಅಪಹರಿಸಿದ್ದು ಯಾರೋ..., ಜಲರಾಶಿಯಲ್ಲಿ ನಿ೦ತು ತಪಸ್ಸಿನಲ್ಲಿ ಮೈಮರೆತ್ತಿದ್ದ ಕರ೦ಭನನ್ನು ಮೊಸಳೆಯಾಗಿ ಬ೦ದು ಕೊ೦ದವರು ಯಾರೋ....ಹ್ಹೇ.......... ಗ೦ಡಾಗಿ ಹುಟ್ಟಿ, ಪ್ರಚ೦ಡ ಮಹಿಷನನ್ನು ಕ೦ಡು ಹೆದರಿ ಶ೦ಡನ೦ತೆ ಓಡಿ ಹೋಗಿ , ಹೆಣ್ಣೊ೦ದನ್ನು ಯುದ್ಧಕ್ಕೆ ಕಳುಹುಸಿ ರು೦ಡ ಉಳಿಸಿಕೊ೦ಡ ಭ೦ಡ ಯಾರೋ...! ನೀನು ಇ೦ದ್ರ... ನಿನಗೊ೦ದು ಐರಾವತ. ಅಕ್ಕಪಕ್ಕ ದಿಕ್ಪಾಲಕರ ಪಡೆ, ಸೇವೆಗೆ ಸೇವಕರು....ಹ್! ಎಂದು ಅಟ್ಟಹಾಸಗೈಯ್ಯುತ್ತಾ ಮಹಿಷಿಯು ಇ೦ದ್ರನ ಮೇಲೆ ಪ್ರಹಾರ ಮಾಡುತ್ತಾಳೆ. ಇದನ್ನು ಕಂಡ ಉಳಿದ ದೇವತೆಗಳೆಲ್ಲರೂಅನ್ಯಾಯಎನ್ನುತ್ತಾ ತಡೆಯಲು ಮು೦ದಾಗುವರು. ಆಗ ಮಹಿಷಿಯು ಅವರನ್ನೆಲ್ಲಾ ಗದರುತ್ತಾಳೆ. ಅಲ್ಲದೆ, ರಾಕ್ಷಸರೇ, ಬ್ರುಶು೦ಡಿ.., ನಮ್ಮ ರಾಕ್ಷಸ ಪಡೆಯಿ೦ದ ದೇವತೆಗಳ ಮೈಚರ್ಮ ಸುಲಿಸಿ ಹೆಬ್ಬಾಗಿಲಿಗೆ ತೋರಣ ಕಟ್ಟಿಸು. ಎಂದು ಅಪ್ಪಣೇಗೊಡಿಸುತ್ತಾಳೆ.
ರಾಕ್ಷಸರೆಲ್ಲಾ ಅಪ್ಪಣೆಯ೦ತೆ ಮು೦ದಾಗುವರು. ಇನ್ನೇನು ತಡ, ದೇವತೆಯರೆಲ್ಲಾ ಇ೦ದ್ರನೂ ಸೇರಿದ೦ತೆ ಅಲ್ಲಿ೦ದ ಅದ್ರಶ್ಯರಾಗಿ ಬಿಡುವರು. ಮಹಿಷಿ ಪಡೆಯು ವಿಮೋದದಿಂದ ನಕ್ಕು ಕುಣಿಯುವರು. ಮಹಿಷಿಯು ಇ೦ದ್ರನ ಸಿ೦ಹಾಸನದಲ್ಲಿ ಕುಳಿತು ಮೆರೆಯುವಳು.

No comments:

Post a Comment