Thursday, January 08, 2015

ನಮ್ಮಲ್ಲಿನ ಸ್ಥಳ ಪುರಾಣಾಗಳು (Myths) -39

ಶಬರಿಮಲೆ (Sabarimalai)
ಭಾಗ - 1

ಕೇರಳ ರಾಜ್ಯದಲ್ಲಿರುವ ಶಬರಿಮಲೆ ಅಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಜಗದ್ವಿಖ್ಯಾತಿ ಗಳಿಸಿದೆ. ಪ್ರತೀ ವರ್ಷ ನವೆಂಬರ್ ಹಾಗೂ ಜನವರಿ ತಿಂಗಳುಗಳ ನಡುವೆ ಸುಮಾರು ೫೦ ಲಕ್ಷ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಪಶ್ಚಿಮ ಘಟ್ಟಗಳ ನಡುವೆ ಇರುವ ದೇವಾಲಯವು ಜನರ ಶ್ರದ್ದಾ ಕೇಂದ್ರವಾಗಿರುವುದರೊಡನೆಯೇ ಸುತ್ತಲಿನ ಹಸಿರಿನಿಂದ ತುಂಬಿದ ವನಸಿರಿಯಿಂದಾಗಿ ಪ್ರಕೃತಿ ಪ್ರಿಯರಿಗೂ ಬಹಳವೇ ಅಚ್ಚುಮೆಚ್ಚಾಗಿದೆ. ಇಲ್ಲಿನ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಅದರದೇ ಆದ ಪೌರಾಣಿಕ ಹಿನ್ನೆಲೆಯನ್ನೂ ಹೊಂದಿದೆ. ಇದೇ ಬರುವ ಜನವರಿ ೧೪ರ ಮಕರ ಸಂಕ್ರಮಣಾದಂದು ಅಲ್ಲಿ ವಿಶೇಷವಾಗಿ ಮಕರ ಜ್ಯೋತಿಯ ದರ್ಶನವಾಗುವುದಿದೆ. ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದ ಪುರಾಣಿಕ ಹಿನ್ನೆಲೆಯನ್ನು ತಿಳಿಯೋಣ.......
***

Lord Ayyappa Swami

ಅದು ಕಲಿಯುಗದ ಆದಿಯ ಸಮಯ. ಭೂಮಂಡಲದಲ್ಲಿ ಮಹಿಷಾಸುರನೆಂಬ ರಕ್ಕಸನ ಅಟ್ತಹಾಸ ಮೇರೆ ಮೀರಿರುತ್ತದೆ. ಋಷಿ ಮುನಿಗಳೂ, ದೇವತೆಗಳೂ ಎಲ್ಲರೂ ಇವನ ಅಟ್ಟಹಾಸದಿಂದ ಬಳಲಿ ಬೆಂಡಾಗಿರುತ್ತಾರೆ. ಅಂತಹಾ ಸಮಯದಲ್ಲಿ ಶ್ರೀ ಮಾತೆ ಪಾರ್ವತಿಯು ತಾನು ದುರ್ಗೆಯ ರೂಪ ತಾಳಿ ಬಂದು ಅವನನ್ನು ಸಂಹರಿಸುತ್ತಾಳೆ, ಮತ್ತು ಮಹಿಷಾಸುರ ಮರ್ಧಿನಿ ಎಂಬ ಅಂಕಿತಕ್ಕೆ ಪಾತ್ರಳಾಗಿ ಭಕ್ತಕೋಟಿಯಿಂದ ಪೂಜಿಸಲ್ಪಡುತ್ತಾಳೆ.
Ayyappa Swami temple, Sabarimalai
ಅದಾಗ ಮಹಿಷಾಸುರನ ಸಾವಿನ ಘೋರ ವಾರ್ತೆಯನ್ನು ಕೇಳಿದ ಆತನ ತಂಗಿಯಾದ ಮಹಿಷಿಯು ಬೆಚ್ಚಿ ಬೀಳುತ್ತಾಳೆ. ಇದು ಸುಳ್ಳು, ಮಹಿಷಾಸುರನೆ೦ದರೇನು, ಅವನ ಸಾವು ಎ೦ದರೇನು....! ಯಾರ ಉರಿಗಣ್ಣು ಓಡಿದರೆ ಬ್ರಹ್ಮ-ವಿಷ್ಣು-ಮಹೇಷ್ವರರೇ ಹೆದರಿ ಅದ್ರಶ್ಯರಾಗುತ್ತಿದ್ದರೋ.., ಯಾರ ಧ್ವನಿಯನ್ನು ಕೇಳಿದರೆ ಅಷ್ಟದಿಕ್ಪಾಲಕರೇ ದಿಕ್ಕಾಪಾಲಾಗಿ ಓಡುತ್ತಿದ್ದರೋ.., ಯಾರ ಆಕ್ರೋಶವನ್ನು ಕ೦ಡರೆ ಇ೦ದ್ರನ ವಜ್ರಾಯುಧವೇ ಕೈಜಾರಿ ಬೀಳುತ್ತಿತ್ತೋ.. ಅ೦ತಹ ಮೂರು ಲೋಕದ ವೀರನನ್ನು ಯಾರು ಕೊ೦ದವರು...? ಎಂದು ಕೋಪದಿಂದಲೂ, ದಿಗ್ಬ್ರಾಂತಿಯಿಂದಲೂ ಕೇಳಲಾಗಿ ಅವಳ ಆಸ್ಥಾನದಲ್ಲಿ ಹಾಜರಿದ್ದ ಅವಳ ಅನುಚರ ಮಂತ್ರಿಗಳಾದಮುದ್ಗರಕೇವಲ ಒ೦ದು ಹೆಣ್ಣು! ನಿಮ್ಮ ಅಣ್ಣನನ್ನು ಸ೦ಹರಿಸಲೆ೦ದೇ ದೇವತೆಗಳೆಲ್ಲಾ ಸೇರಿ ಅಪೂರ್ವ ಹೆಣ್ಣೊ೦ದನ್ನು ಸ್ರಷ್ಟಿಸಿ, ಅವರಿಗೆ ತಮ್ಮ ಶಕ್ತಿಗಳನ್ನೆಲ್ಲಾ ಧಾರೆಯೆರೆದು ಯುದ್ಧಕ್ಕೆ ಕಳುಹಿಸಿದರು. ಆಕೆಯೇ ನಿಮ್ಮ ಮಹಿಷಾಸುರನನ್ನು ಸ೦ಹರಿಸಿದ್ದು.
ಎನ್ನುತ್ತಲೂ ಉತ್ತರದಿಂದ ಇನ್ನಷ್ಟು ಅಚ್ಚರಿಗೊಂಡ ಮಹಿಷಿಯು ವೇದನೆಯಿ೦ದ ಅಣ್ಣಾ...., ಕಡೆಗೂ ನಿನ್ನ ಸಹೋದರಿಯನ್ನು ಏಕಾ೦ಗಿಯಾಗಿ ಬಿಟ್ಟು ಹೊರಟು ಹೋದೆಯಾ. ಕಾಲಿಗೆ ಸಿಕ್ಕಿದ ಪರ್ವತಗಳನ್ನೇ ಕಾಲ್ಚೆ೦ಡಿನ೦ತೆ ಒದ್ದು ಉರುಳಿಸುತ್ತಿದ್ದ ನೀನು ಕೇವಲ ಒ೦ದು ಹೆಣ್ಣಿನಿ೦ದ ಹತನಾದೆಯಾ. ಅಯ್ಯೋ... ಏನಾಯಿತು ನಿನ್ನ ಪೌರುಷ. ಎಲ್ಲಿ ಹೋಯಿತು ನಿನ್ನ ಅದ್ಬುತ ಶಕ್ತಿ. ಎಲ್ಲಿ ಅಡಗಿದವು ನಿನ್ನ ದಿವ್ಯಾಸ್ತ್ರಗಳು. ಎನ್ನುತ್ತಾ ಹಲುಬುತ್ತಾಳೆ
ಅದಾಗ ಪುನಃ ಮಂತ್ರಿಯಾದ ಮುದ್ಗರ ಸಾವು ಸಮೀಪಿಸಿದಾಗ ಅವ್ಯಾವುದೂ ರಕ್ಷಣೆಗೆ ಬರುವುದಿಲ್ಲ ಮಹಿಷಿ. ಎನ್ನುತ್ತಾನೆ.
ಉತ್ತರದಿಂದ ಕ್ರೋಧೋನ್ಮತ್ತಳಾದ ಮಹಿಷಿಯು  ಹಲ್ಲು ಕಡಿಯುತ್ತಾ ನನ್ನ ಅಣ್ಣನಿಗೆ ಸಾವು ತ೦ದ ದೇವತೆಗಳನೆಲ್ಲಾ ನಾಶ ಮಾಡದಿದ್ದರೆ ನನ್ನ ಹೆಸರು ಮಹಿಷಿಯೇ ಅಲ್ಲಾ. ಬ್ರುಶು೦ಡಿ.. ಮೊಳಗಲಿ ರಣಕಹಳೆ. ಸ್ವರ್ಗವನ್ನು ಮುತ್ತಲಿ ರಾಕ್ಷಸ ಪಡೆ. ದಶದಿಕ್ಕುಗಳಲ್ಲೂ ಹಾರಾಡಲಿ ನಮ್ಮ ವಿಜಯ ಪತಾಕೆ. ಎಂದು ತನ್ನ ಇನ್ನೋರ್ವ ಮಂತ್ರಿಗಳಿಗೆ ಆಜ್ಞಾಪಿಸುತ್ತಾಳೆ. ದಾಗ ಮುದ್ಗರನು ದುಡುಕಬೇಡ ಮಹಿಷೀ.. ಸುರರು ಮಹಾ ಶಕ್ತಿಸ೦ಪನ್ನರು. ದೈವಬಲ ಉಳ್ಳವರು. ಅವರನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಎಂದು ತಿಳುವಳಿಕೆಯ ಮಾತುಗಳನ್ನಾಡಲು ಅದನ್ನು ಆಲಿಸಿದ ಬ್ರಹ್ಮಂಡಿಗೆ ಸಿಟ್ಟು ಬಂದು ಎಲಾ ಮುದಿಮ೦ತ್ರಿ. ಅವರನ್ನು ಎದುರಿಸಲು ನಿನ್ನ ಕೈಲಾಗದಿದ್ದರೆ ಇಲ್ಲೇ ಬಿದ್ದಿರು. ನಮಗೇಕೆ ಅಡ್ಡಿ ಮಾಡುತ್ತೀಯಾ... ಎಂದು ತೆಗಳುತ್ತಾನೆ.
ಅದಕ್ಕೆ ಮುದ್ಗರನು ಯುದ್ಧ ಬೇಡವೆ೦ದು ಹೇಳುತ್ತಿಲ್ಲಾ ಬ್ರುಶು೦ಡೀ... ತಕ್ಕ ಸಿದ್ಧತೆಗಳಿಲ್ಲದೇ ವೈರಿಗಳನ್ನು ಎದುರಿಸುವುದು ಬೇಡಾ ಎ೦ದು ಹೇಳುತ್ತಿದ್ದೇನೆಎನ್ನಲು ಮಹಿಷಿಯು ತಾನು ಮದ್ಯೆಯೇ ಅವರೀರ್ವರ ಮಾತುಗಳನ್ನು ತಡೆದು ಏನದು ತಕ್ಕ ಸಿದ್ಧತೆ...!? ಎಂದು ಪ್ರಶ್ನಿಸುತ್ತಾಳೆ.. ಅದಕ್ಕೆ ಉತ್ತರಿಸುತ್ತಾ ಮುದ್ಗರನು ಹೀಗೆನ್ನುತ್ತಾನೆ, ದೇವತೆಗಳು ಸಾವನ್ನು ಗೆದ್ದವರು. ಅವರನ್ನು ಎದುರಿಸಬೇಕಾದರೆ ನೀನು ಸಾವನ್ನು ಗೆಲ್ಲಬೇಕು. ಮೊದಲು ಸ್ರಷ್ಟಿಕರ್ತನನ್ನು ಕುರಿತು ತಪಸ್ಸನ್ನು ಮಾಡಿ ಸಾವಿಲ್ಲದ೦ತೆ ವರವನ್ನು ಪಡೆದುಕೋ....... ಆಗ ಸುರರು ಸುಲಭವಾಗಿ ನಿನ್ನ ಕೈವಶವಾಗುವರು.
ತೀರ್ಮಾನವನ್ನೊಪ್ಪಿದ ಮಹಿಷಿಯು ತಪಸ್ಸಿಗಾಗಿ ಘೋರ ಕಾಡನ್ನು ತಲುಪಿ, ಬ೦ಡೆಗಳ ನಡುವೆ ಕುಳಿತು ಬ್ರಹ್ಮದೇವರ ಕುರಿತು ಜಪಿಸುವಳು.
***
 ಇತ್ತ ದೇವಲೋಕದಲ್ಲಿ ಇಂದ್ರನು ತಾನು ಸಂತೋಷ ಆನಂದಗಳಿಂದ ಸಂಗೀತ ನೃತ್ಯ್ಗಳನ್ನು ನೋಡುತ್ತಾ ಮಯ್ ಮರೆತಿರಲು ಅಲ್ಲಿಗೆ ನಾರದರ ಆಗಮನವಾಗುತ್ತದೆ.
ಹಾಗೆ ಬಂದ ನಾರದರು ಇಂದ್ರನ ಸಭೆಯನ್ನು ನೋಡಿ ಅವನ ಮಯ್ ಮರೆವೆಯನ್ನು ಕಂಡು ಆತಂಕದಿಂದ ದೇವಲೋಕಕ್ಕೆ ಯಾವಾಗ ಯಾರು ಬರುವರೋ..., ನಿನ್ನ ಪದವಿಯನ್ನು ಕಸಿದುಕೊಳ್ಳುವರೋ ಎ೦ದು ನನಗೆ ಚಿ೦ತೆಯಾಗಿಬಿಟ್ಟಿದೆ. ಎನ್ನುತ್ತಾರೆ. ಅದನ್ನು ಕೇಳಿದ ಇಂದ್ರನು ಗಹಗಹಿಸಿ ನಕ್ಕು ) ಅತಳ, ವಿತಳ, ಸುತಳ, ಪಾತಳದಲ್ಲಿ ನನ್ನ ವಜ್ರಾಯುಧವನ್ನು ಎದುರಿಸುವ ಧೈರ್ಯ ಯಾರಿಗಿದೆ? ಎಂದು ಅಹಂಕಾರದ ಮಾತುಗಳನ್ನಾಡುತ್ತಾನೆ. ಅದಕ್ಕೆ ನಾರದರು ತಾಳ್ಮೆಯಿಂದಲೇ : ಆಗ ಮಹಿಷಾಸುರನಿಗಿತ್ತು. ಈಗಾ. ಅವನ ಸಹೋದರಿ ಮಹಿಷಿಗಿದೆ. ಅಣ್ಣನ ಮರಣದಿ೦ದ ರೋಷಾವೇಶಗೊ೦ಡು ನಿನ್ನ ಮೇಲೆ ಪ್ರತೀಕಾರ ತೀರಿಸಲು ಹೊರಟಿದ್ದಾಳೆ. ಎಂದು ಉತ್ತರಿಸುತ್ತಾರೆ. ಅದಕ್ಕೆ ಮತ್ತೆ ಆಕ್ರೋಶಗೊಂಡ ಇಂದ್ರನು .......! ಕೇವಲ ಒ೦ದು ಹೆಣ್ಣಿಗೆ ಭಯ ಪಡುವಷ್ಟು ಹೇಡಿಯಲ್ಲ ಸಹಸ್ರಾಕ್ಷ....!’ಎನ್ನುತ್ತಾನೆ. ನಾರದರು: ಇ೦ದು ಕೇವಲ ಹೆಣ್ಣಾಗಿ ಕಾಣುವ ರಾಕ್ಷಸಿ, ನಾಳೆ ತ್ರಿಮೂರ್ತಿಯರಿ೦ದ ವರ ಪಡೆದು ದಂಡೆತ್ತಿ ಬಂದರೆ... ಕ೦ಗೆಟ್ಟು ಓಡುತ್ತೀಯಾ.... ನಾರಾಯಣ... ನಾರಾಯಣ.... ಎನ್ನುತ್ತಾರೆ. ಅದಕ್ಕೆ ಇಂದ್ರನು ನಾರದರಿಗೆ ಸಮಯಾ, ಸ೦ಧರ್ಭಗಳ ಅರಿವೂ ಇಲ್ಲ; ಮಾಡಲು ಬೇರೆ ಕೆಲಸವೂ ಇಲ್ಲಾ.. ಸುಮ್ಮನೆ ಅವರಿವರನ್ನು ಎತ್ತಿ ಕಟ್ಟುವುದು; ವಿನಾಃ ಕಾರಣ ಹೆದರಿಸುವುದು. ಇವರ ಜೀವನವೆಲ್ಲ ಇದರಲ್ಲಿಯೇ ಆಯಿತು. ಎಂದು ಅಪಹಾಸ್ಯ ಮಾಡುತ್ತಾನೆ.
ಮತ್ತೆ ಇ೦ದ್ರನು ತನ್ನ ಭಟರಾದ ಅಗ್ನಿ,ವಾಯು ಮತ್ತು ವರುಣ ದೇವರನ್ನು ಮಹಿಷಿಯ ತಪಸ್ಸು ಕೆಡಿಸಲು ಕೂಗಿ ಕರೆಯುತ್ತಾನೆ, ಮಹಿಷಿಯ ತಪೋಸ್ತಳದಲ್ಲಿ, ಮೊದಲಿಗೆ ಅಗ್ನಿ ದೇವನು ಪ್ರಕಟಗೊ೦ಡು ತನ್ನ ಪ್ರತಾಪವನ್ನು ತೋರಿಸುತ್ತಾನೆ....
ಜೋರಾಗಿ ನಕ್ಕು, ಮಹಿಷಿಯ ಮೇಲೆ ಬೆ೦ಕಿಯ ಜ್ವಾಲೆ ಉಗುಳುತ್ತಾನೆ. ಆಶ್ಚರ್ಯ...! ಮಹಿಷಿಯ ತಪೋಶಕ್ತಿಯ ಎದುರು ಅಗ್ನಿಯು ಸೋತು ಹೋಗುತ್ತಾನೆ. ನಂತ ವಾಯು, ವರುಣ ದೇವರುಗಳೂ ಅವಳ ತಪೋಬಲದೆದುರು ಸೋಲುತ್ತಾರೆ. ಹಾಗೆ ಸೋತು ಹಿಂತಿರುಗಿದ ಮೂವರನ್ನೂ ಕುರಿತು ಇಂದ್ರನು ಛೇ..! ಮಾತು ಹೇಳಲು ನಾಚಿಕೆಯಾಗುವುದಿಲ್ಲವೇ. ಮಹಾಶಕ್ತಿವ೦ತರಾದ ನೀವು ಕೇವಲ ಒಂದು ಹೆಣ್ಣಿನ ತಪೋಭಂಗ ಮಾದಲಾರದೆ ಸೋತು ಬಂದಿರಲ್ಲಾ...! ಈಗ ನನ್ನ ಪೌರುಷ ಏನೆ೦ದು ತೋರಿಸುತ್ತೇನೆ. ನೋಡುತ್ತಿರೀ...... ಎಂದು ಇಂದ್ರನು ತಾನು ಮಹಿಷಿಯ ತಪವನ್ನು ಕೆಡಿಸಲಿಕ್ಕಾಗಿ ಧಾವಿಸುತ್ತಾನೆ........

No comments:

Post a Comment