Thursday, January 29, 2015

ನಮ್ಮಲ್ಲಿನ ಸ್ಥಳ ಪುರಾಣಾಗಳು (Myths) -42

ಶಬರಿಮಲೆ (Sabarimalai)
ಭಾಗ - 4

ಕೇರಳ ರಾಜ್ಯದಲ್ಲಿರುವ ಶಬರಿಮಲೆ ಅಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಜಗದ್ವಿಖ್ಯಾತಿ ಗಳಿಸಿದೆ. ಪ್ರತೀ ವರ್ಷ ನವೆಂಬರ್ ಹಾಗೂ ಜನವರಿ ತಿಂಗಳುಗಳ ನಡುವೆ ಸುಮಾರು ೫೦ ಲಕ್ಷ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಪಶ್ಚಿಮ ಘಟ್ಟಗಳ ನಡುವೆ ಇರುವ ದೇವಾಲಯವು ಜನರ ಶ್ರದ್ದಾ ಕೇಂದ್ರವಾಗಿರುವುದರೊಡನೆಯೇ ಸುತ್ತಲಿನ ಹಸಿರಿನಿಂದ ತುಂಬಿದ ವನಸಿರಿಯಿಂದಾಗಿ ಪ್ರಕೃತಿ ಪ್ರಿಯರಿಗೂ ಬಹಳವೇ ಅಚ್ಚುಮೆಚ್ಚಾಗಿದೆ. ಇಲ್ಲಿನ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಅದರದೇ ಆದ ಪೌರಾಣಿಕ ಹಿನ್ನೆಲೆಯನ್ನೂ ಹೊಂದಿದೆ. ರಾಮಾಯಣ ಕಾಲದಲ್ಲಿ ತಾಯಿ ಶಬರಿಯು ಶ್ರೀ ರಾಮನ ದರುಶನಕ್ಕಾಗಿ ಕಾದು ಕುಳಿತ ಸ್ಥಳವಿದು ಎನ್ನುವ ಪ್ರತೀತಿಯೂ ಸ್ಥಳಕ್ಕಿದೆ. ಶಬರಿಯ ಆಶ್ರಮವಿದ್ದ ಸ್ಥಳಕ್ಕೆ ಇದೇ ಕಾರಣದಿಂದಾಗಿ ಶಬರಿಮಲೆ ಎಂಬ ಹೆಸರು ಬಂತೆಂದು ಹೇಳಲಾಗುತ್ತದೆ.
***


 ತಾನಾಡಿದ ಮಾತಿನಂತೆಯೇ ಮಹಿಷಿಯು ಭೂಲೋಕಕ್ಕೆ ಬಂದು ಅಲ್ಲಿನ ತಪೋವನದಲ್ಲಿ ಯಜ್ಞ ಯಾಗಗಳಲ್ಲಿ ತೊಡಗಿದ್ದ ಋಷಿಗಳಿಗೆಲ್ಲಾ ಉಪಟಳ ನೀಡುತ್ತಾಳೆ, ಅವರ ಆಶ್ರಮ, ಯಾಗದ ಸ್ಥಳಗಳನ್ನು ಅಪವಿತ್ರಗೊಳಿಸುತ್ತಾಳೆ. ಇದರಿಂದ ದೇವತೆಗಳಿಗೆ ಸಲ್ಲಬೇಕಾದ ಯಥಾವತ್ ಪೂಜಾದಿಗಳು ನಿಂತುಹೋಗುತ್ತದೆ.
ಇತ್ತ ದೇವೇಂದ್ರ ಸಮೇತರಾದ ನಾರದರು ವೈಕುಂಠಕ್ಕೆ ತೆರಳಿ ಶ್ರೀ ಮಹಾವಿಷ್ಣುವಿನಲಿ ದೇವತೆಗಳಿಗೊದಗಿದ ಕಷ್ಟಗಳನ್ನು ಹೇಳಿಕೊಳ್ಳಲಾಗಿ ಶ್ರೀ ವಿಷ್ಣುವು ಅವರಿಗೆಕಾಲ ಸಮೀಪಿದೊಡನೆಯೇ ಮಹಿಷಿಯ ಸಂಹಾರವಾಗುವುದು. ಧೈರ್ಯವಾಗಿರಿ.’ ಎನ್ನುವ ಭರವಸೆ ನೀಡುತ್ತಾನೆ.
***
ಪಾ೦ಡ್ಯ ರಾಜ್ಯದ ಅರಸ ರಾಜಶೇಖರನ ಅರಮನೆಯಲ್ಲಿ........ರಾಜ, ರಾಣಿಯರು ಹರಿಹರರ ವಿಗ್ರಹಗಳ ಮು೦ದೆ ಪೂಜಾಕಾರ್ಯದಲ್ಲಿ ತೊಡಗಿದ್ದಾರೆ. ಹರಿಹರರ ಪೂಜಿಸುತ್ತಾ ನಾಮಾರ್ಚನೆಯನ್ನು ಮಾಡುತ್ತಾರೆ, ಆರತಿ ಬೆಳಗುತ್ತಾರೆ. ಅದೇ ವೇಳೆ ಹರನ ಹಣೆಯಿ೦ದ ಹೂವೊ೦ದು ಬೀಳುತ್ತಲೇ, ಪ್ರಸನ್ನನಾಗಿ ಅದನ್ನೆತ್ತಿಕೊ೦ಡು ಕಣ್ಣಿಗೊತ್ತಿ ರಾಜನು, ತನ್ನ ರಾಣಿಯ ಬಳಿ ಹೇಳುತಾನೆ.`` ನೋಡಿದೆಯಾ ದೇವೀ, ಶಿವನ ಪ್ರಸಾದ. ಬಲಗಡೆಯಿ೦ದ ಹೂವು ಬಿತ್ತು. ನಮಗೆ ಮಕ್ಕಳಿಲ್ಲವೆ೦ಬ ಚಿ೦ತೆ ಇ೦ದಿಗೆ ದೂರವಾಯಿತು. ನಮ್ಮಾಸೆ ಖ್ಂಡಿತಾ ನೆರವೇರುತ್ತದೆ.”
ಅದಾಗ ರಾಣಿಯು ನಿರಾಸೆಯಿಂದ ದೇವರಿಗೆ ನಮ್ಮ ಮೇಲೆ ಕರುಣೆಯಿದ್ದಿದ್ದರೆ,ಇಷ್ಟು ವರ್ಷಗಳು ನಾವು ಮಗುವಿಗಾಗಿ ಹ೦ಬಲಿಸಿ ಕಣ್ಣೀರಿಡಬೇಕಾಗಿತ್ತೇನು...!?” ಎಂದಾಗ ದೇವೀ, ಭವಿಷ್ಯವನ್ನು ಬಲ್ಲವರು ಯಾರೂ ಇಲ್ಲ. ಪರಮಾತ್ಮ ಒಲಿದರೆ  ಮಣ್ಣೂ ಹೊನ್ನಾಗುವುದು. ಯಾವುದೋ ಜನ್ಮದ ಪಾಪ ನಮ್ಮನ್ನು ಕಾಡಿಸಿತ್ತಿದೆಯಷ್ಟೇ. ದೇವರ ಕರುಣೆ ಕಿ೦ಚಿತ್ತೂ ದೊರಕಿದರೆ ಸಾಕು, ನಮ್ಮ ನೋವು ನಿರಾಶೆಗಳೆಲ್ಲಾ ಕರ್ಪೂರದ೦ತೆ ಸುಟ್ಟು ಹೋಗುತ್ತವೆ. ಎದೆಗು೦ಧದೆ ಶುಭ ದಿನಗಳನ್ನು ಎದುರು ನೋಡೋಣಾ.....” ಎಂದು ಸಮಾಧಾನಿಸುತ್ತಾನೆ.
ಅಷ್ಟರಲ್ಲಿ ಪ೦ದಳ ರಾಜ್ಯದ ಸುತ್ತ ಮುತ್ತಾ ಕಾಡುಪ್ರಾಣಿಗಳ ಹಾವಳಿ ಹೆಚ್ಚಿರುವ ವಾರ್ತೆ ರಾಜನನ್ನು ತಲುತ್ತದೆ. ರಾಜನು, ಸೈನಿಕ ಪಡೆಯೊ೦ದಿಗೆ ಕಾಡಿಗೆ ಬೇಟೆಯಾಡಲು ಆನೆ ಮೇಲೆ ಹೊರಡುತ್ತಾನೆ
ಅದೇ ಸಮಯದಲ್ಲಿ ದೇವಲೋಕದಲ್ಲಿ ಹರಿಹರರ ಸಂಗಮಕಾಲವು ಕೂಡಿ ಬರುತ್ತದೆ. ಹರಿಹರರ ಸಮಾಗಮದ ಫಲವಾಗಿ ಅತೀವ, ಅನನ್ಯ, ದಿವ್ಯ ಕಾ೦ತಿಯೊ೦ದು ಜನಿಸಿ ಪ್ರಜ್ವಲಿಸಲು ಆರ೦ಭಿಸುತ್ತದೆ. ಪೂರ್ಣಾಕಾರವಾಗಿ ದಿವ್ಯಪ್ರಭೆಯಿ೦ದ ಬೆಳಗುವ ಜ್ಯೋತಿಯ ಕ೦ಡು ಧನ್ಯರಾಗಿ ಋಷಿಗಳು, ದೇವತೆಯರು ಮ೦ತ್ರ ಮಾಲೆಯಿ೦ದ ನಮಿಸುತ್ತಾರೆ. ಹರಿಹರರು ಮುಗುಳ್ನಗುತ್ತಾ ಲೀಲೆಯನ್ನು ಮೆರೆಯುತ್ತಾರೆ. ದಿವ್ಯಜ್ಯೋತಿಯು ಭೂಮುಖವಾಗಿ ಚಲಿಸಲು ಆರ೦ಭಿಸಿ, ದಟ್ಟಾರಣ್ಯವೊ೦ದರಲ್ಲಿ ಶಿವಲಿ೦ಗದ ಎದುರಲ್ಲಿ ತಲುಪಿ, ನವಜಾತ ಶಿಶುವಿನ ರೂಪವಾಗಿ ಪ್ರತ್ಯಕ್ಷವಾಗುತ್ತದೆ. ಬ್ರಹ್ಮ, ವಿಷ್ಣು, ಮಹೇಶ್ವರರು ಪುಷ್ಪಧಾರೆಯೆರೆದು ಆಶೀರ್ವದಿಸುತ್ತಾರೆ.  ನಾಗದೇವನು ಪ್ರತ್ಯಕ್ಷನಾಗಿ ಹರಿಹರ ಶಕ್ತಿಯ ಸಾಕಾರ ರೂಪನಾಗಿ ಜನ್ಮ ತಳೆದ ಪುಟ್ಟ ಬಾಲಕನ ಪಕ್ಕದಲ್ಲೇ ನಾಗರೂಪನಾಗಿ ಕಾವಲಾಗಿ ಕೂರುತ್ತಾರೆ.
ಇತ್ತ ಬೇಟೆಗೆ ಹೊರಟ ರಾಜಶೇಖರನು ತನ್ನ ಗು೦ಪಿನೊ೦ದಿಗೆ ಸಕಲ ತಯಾರಿಗಳೊ೦ದಿಗೆ ಮ೦ತ್ರಿಯೊಡನೆ ಕಾಡಿನಲ್ಲಿ ಮುನ್ನುಗ್ಗುತ್ತಾನೆ. ಪ್ರಾಣಿಗಳನ್ನು ಬೆದರಿಸುತ್ತಾ ಬಿಲ್ಲು ಬಾಣ ಹಿಡಿದು ರಾಜನು ಮುನ್ನಡೆಸುತ್ತಾನೆ. ಹುಲಿಯೊಂದು ರಾಜನ ಕಣ್ಣಿಗೆ ಕಾಣಿಸಿಕೊಂಡಾಗ ಅದರತ್ತ ಬಾಣ ಹೂಡಲು ಮುಂದಾಗುತ್ತಾನೆ. ಅಷ್ಟರಲ್ಲಿ ಮಗುವೊ೦ದು ಅಳುವ ಧ್ವನಿಯನ್ನು ಕೇಳಿ ನಿ೦ತುಬಿಡುತ್ತಾನೆ. ಮತ್ತೆ ಮಂತ್ರಿಗಳನ್ನು ಕರೆದ ರಾಜನು ಗು೦ಡಾರಣ್ಯದಲ್ಲಿ ಮಗುವಿನ ಆಕ್ರ೦ದನ ಕೇಳಿ ಬರುತ್ತಿದೆಯಲ್ಲಾ... ಬನ್ನಿ ನೋಡೋಣಾ...... ಎಂದು ಧ್ವನಿ ಕೇಳಿ ಬರುತ್ತಿದ್ದ ಕಡೆಗೆ ಸಾಗಿದ ರಾಜ, ಮ೦ತ್ರಿಗಳು ಹರಿಹರ ಶಕ್ತಿರೂಪ ಬಾಲಕನ ಹತ್ತಿರ ಬರುವರು. ನಾಗದೇವನು ಸರಿಯಾದ ಸಮಯಕ್ಕೆ ಅದ್ರಶ್ಯನಾಗುವನು. ರಾಜನು ಆಶ್ಚರ್ಯದಿ೦ದ ನೋಡುತ್ತಾನೆ ಮತ್ತು ಅಷ್ಟೇ ಆನ೦ದಗೊಳ್ಳುತ್ತಾನೆ.
ರಾಜನು ಮಗುವನ್ನು ಎತ್ತಿಕೊಳ್ಳಲು ಮುಂದಾಗುತ್ತಾನೆ. ಆಗ ಜತೆಯಲ್ಲಿದ್ದ ಮಂತ್ರಿಯು ಬೇಡಿ ಪ್ರಭು, ಮುಟ್ಟಬೇಡಿ. ಯಾರ ಶಿಶುವೋ ಏನೋ....! ಏಕೆ ಮುಟ್ಟುತ್ತೀರಿ....? ಮುಟ್ಟಬೇಡಿ ಪ್ರಭು, ಸದಾ ಮಕ್ಕಳ್ಳಿಲ್ಲದೆ ಕೊರಗುತ್ತಿರುವ ತಮಗೆ, ಇಲ್ಲಿ ಮಗುವನ್ನು ಕ೦ಡ ತಕ್ಷಣ ಹಾಗೆನಿಸುತ್ತಿದೆ ಅಷ್ಟೇ.! ಯಾರೋ ತ೦ದು ಶಿವಲಿ೦ಗದ ಮಲಗಿಸಿದ್ದಾರೆ. ಯಾರು, ಯಾರಿದ್ದೀರಿ... ಯಾರದೀ ಮಗು....!?” ಎಂದು ಅನುಮಾನ ವ್ಯಕ್ತಪಡಿಸುತ್ತಾನೆ.
 ಅಲ್ಲೇ ಕ್ಷಣಕ್ಕೆ ಪ್ರತ್ಯಕ್ಷರಾದ ಋಷಿಯೋರ್ವರು ಮು೦ದೆ ಬ೦ದರುಮಹಾರಾಜ, ಮಗುವಿಗಾಗಿ ಏಕೆ ಇಷ್ಟು ಚಿ೦ತಿಸುತ್ತಿರುವೇ...!?’ ಎನ್ನಲು ಮಂತ್ರಿಯು :’’ಋಷಿವರ್ಯ, ಮಗು ತಮ್ಮದೇ....?’ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಋಷಿಯು ಅಲ್ಲ; ಮಹಾರಾಜ, ನಿನ್ನ ಪೂಜೆಗೆ ಮೆಚ್ಚಿ ದೇವರು ಕರುಣಿಸಿರುವ ದಿವ್ಯ ಫಲವೇ ಮಗು. ಇದನ್ನು ಅರಮನೆಗೆ ತೆಗೆದುಕೊ೦ಡು ಹೋಗು. ಕತ್ತಲಾಗಿರುವ ನಿನ್ನರಮನೆಯು, ಮನಸ್ಸು  ಬೆಳಕಾಗುವುದು. ನಿನಗೆ ಶುಭವಾಗುವುದು. ಇವನಿಗೆ ಹನ್ನೆರಡು ವರುಷಗಳಾದ ನ೦ತರ ಜಗತ್ತಿಗೇ ಇವನ ಮಹಿಮೆ ತಿಳಿಯುವುದು”. ಎಂದು ನುಡಿಯುತ್ತಲೇ ಋಷಿಗಳು ಅದ್ರಶ್ಯರಾಗುತ್ತಾರೆ
ಮಹಾರಾಜನು ಆನಂದದಿಂದ ತುಂಬಿದವನಾಗಿ ಬಳಿಯಲ್ಲಿದ್ದ ಶಿವಲಿಂಗಕ್ಕೆ ವಂದಿಸುತ್ತಾ.. ಮಹಾಪ್ರಸಾದ... ಪ್ರಭೂ.... ಇ೦ದು ನಮ್ಮ ಭಾಗ್ಯವೇ ಭಾಗ್ಯ, ಭಾಗ್ಯವೇ ಭಾಗ್ಯ. ( .....ಎನ್ನುತ್ತಾ ಮುನ್ನಡೆಯುತ್ತಾನೆ ಶಿಶುವನ್ನು ಅರಮನೆಗೆ ತೆಗೆದುಜೊಂಡು ಬರುತ್ತಾನೆ.  

No comments:

Post a Comment