Saturday, January 31, 2015

ನಮ್ಮಲ್ಲಿನ ಸ್ಥಳ ಪುರಾಣಾಗಳು (Myths) -44

ಶಬರಿಮಲೆ (Sabarimalai)
ಭಾಗ - 6

ಕೇರಳ ರಾಜ್ಯದಲ್ಲಿರುವ ಶಬರಿಮಲೆ ಅಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಜಗದ್ವಿಖ್ಯಾತಿ ಗಳಿಸಿದೆ. ಪ್ರತೀ ವರ್ಷ ನವೆಂಬರ್ ಹಾಗೂ ಜನವರಿ ತಿಂಗಳುಗಳ ನಡುವೆ ಸುಮಾರು ೫೦ ಲಕ್ಷ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಪಶ್ಚಿಮ ಘಟ್ಟಗಳ ನಡುವೆ ಇರುವ ದೇವಾಲಯವು ಜನರ ಶ್ರದ್ದಾ ಕೇಂದ್ರವಾಗಿರುವುದರೊಡನೆಯೇ ಸುತ್ತಲಿನ ಹಸಿರಿನಿಂದ ತುಂಬಿದ ವನಸಿರಿಯಿಂದಾಗಿ ಪ್ರಕೃತಿ ಪ್ರಿಯರಿಗೂ ಬಹಳವೇ ಅಚ್ಚುಮೆಚ್ಚಾಗಿದೆ. ಇಲ್ಲಿನ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಅದರದೇ ಆದ ಪೌರಾಣಿಕ ಹಿನ್ನೆಲೆಯನ್ನೂ ಹೊಂದಿದೆ. ರಾಮಾಯಣ ಕಾಲದಲ್ಲಿ ತಾಯಿ ಶಬರಿಯು ಶ್ರೀ ರಾಮನ ದರುಶನಕ್ಕಾಗಿ ಕಾದು ಕುಳಿತ ಸ್ಥಳವಿದು ಎನ್ನುವ ಪ್ರತೀತಿಯೂ ಸ್ಥಳಕ್ಕಿದೆ. ಶಬರಿಯ ಆಶ್ರಮವಿದ್ದ ಸ್ಥಳಕ್ಕೆ ಇದೇ ಕಾರಣದಿಂದಾಗಿ ಶಬರಿಮಲೆ ಎಂಬ ಹೆಸರು ಬಂತೆಂದು ಹೇಳಲಾಗುತ್ತದೆ.
***
ಮಹಿಷಿಯ ಕ್ರೌರ್ಯ ಇನ್ನೂ ನಿ೦ತಿರಲಿಲ್ಲ. ಸಾಧು, ಋಷಿಗಳ ಕುಟೀರಗಳನ್ನೆಲ್ಲಾ ತನ್ನ ಮಾಯಾ ಶಕ್ತಿಯಿ೦ದಲೇ ಸುಟ್ಟು ನಾಶ ಮಾಡಿದಳು. ಋಷಿಮುನಿಗಳುಕಾಪಡಿ..ಕಾಪಾಡಿಎ೦ದು ಅಳುತ್ತಾ ಓಡುವುದಾ ಕ೦ಡು ಮಹಿಷಿಯು ನಗೆಯಾಡುತ್ತಾಳೆ.
ಹಾಗೆಯೇ ದೇವಲೋಕ, ಭೂಲೋಕಗಳಲ್ಲಿ ಅಬ್ವಳ ಅಟ್ತಹಾಸವು ಅತಿ ಭಯಾನಕವಾಗಿತ್ತು. ಇತ್ತ ಇಂದ್ರನಿಗೋ ಮಹಿಷಿಯನ್ನು ವಧಿಸುವ ಸಮಯ ಯಾವಾಗ ಬರುವುದೋ ಅನ್ನುವಂತಾಗಿತ್ತು... ಮಣಿಕಂಠನ ಜನನ, ಬಾಲ್ಯ, ವಿದ್ಯಾಭ್ಯಾಸವೆಲ್ಲವೂ ಮುಗಿದರೂ ಇನ್ನೂ ಅವನ ಜನ್ಮ ನಿಮಿತ್ತ ಕಾರ್ಯವು ಉಳಿದು ಬಿಟ್ಟಿದೆಯಲ್ಲ ಎನ್ನುವುದು ದೇವತೆಗಳ ಚಿಂತೆಗೆ ಕಾರಣಾವಾಗಿತ್ತು. ದೇವತೆಗಳ ಆತಂಕಕ್ಕೆ ನಾರದ ಮಹರ್ಷಿಗಳು ಸಮಾಧಾನ ಹೇಳುವರು...
ಇನ್ನೊಂದೆಡೆ ಮಹಿಷಿಗೂ ಸಹ ತನ್ನನ್ನು ವಧಿಸಲಿಕ್ಕೆಂದು ಒಬ್ಬ ಬಾಲಕನು ಭೂಲೋಕದ ಕಡೆಯಿಂದ ಬರುತ್ತಿರುವಂತೆ ಕನಸಾಗಿತ್ತು. ಅದರ ಕಾರಣದಿಂದ ಅವಳೊಮ್ಮೆ ಬೆಚ್ಚಿ ಬಿದ್ದಿದ್ದಳಾದರೂ ತನ್ನ ಸಹಚರ ಮಂತ್ರಿಗಳ ನಿರ್ಲಕ್ಷದ ಮಾತುಗಳಿಂದ ಕಡೆಗೆ ಹೆಚ್ಚು ಮನಗೊಟ್ಟಿರಲಿಲ್ಲ....
***
ರಾಜಶೇಖರನ ಅರಮನೆಯಲ್ಲಿ ಮಕ್ಕಳಿಬ್ಬರ ವಿದ್ಯಾಭ್ಯಾಸ ಮುಗಿದ ಹಿನ್ನೆಲೆಯಲ್ಲಿ ಮಣಿಕಂಠನ ಯುವರಾಜ ಪಟ್ತಾಭಿಷೇಕವನ್ನು ನೆರವೇರಿಸಲು ಮಹಾರಾಜನು ತೀರ್ಮಾನಿಸುತ್ತಾನೆ. ಅದಕ್ಕಾಗಿ ದಿನ ನಿಗದಿಯಾಗುವುದು. ಸಿದ್ದತೆಗಳೂ ನಡೆಯುತ್ತದೆ. ಅಷ್ಟರಲ್ಲಿ ರಾಜ್ಯದ ಮಂತ್ರಿಯುಮಹಾರಾಣಿಯವರಲ್ಲಿಗೆ ತೆರಳಿ ಮಹಾರಾಜರು ಮಣಿಕ೦ಠನಿಗೆ ಯುವರಾಜ ಪಟ್ಟಾಭಿಷೇಕ ಮಾಡಬೇಕೆ೦ದಿದ್ದಾರೆ. ಮಣಿಕ೦ಠ ಯಾರು... ತಮ್ಮ ಸ್ವ೦ತ ಮಗನೇ.., ಅಲ್ಲ. ರಾಜವ೦ಶದವನೇ.., ಅಲ್ಲ. ತ೦ದೆತಾಯಿ ಯಾರೋ ತಿಳಿಯದು. ಅರಣ್ಯದಲ್ಲಿ ದೊರಕಿದವನು. ಯಾರ ಮಗನೋ.. ಆತುರ ಪಡದೆ ನಿಧಾನವಾಗಿ ಯೋಚಿಸಿ. ತಮಗೂ ಒಬ್ಬ ಮಗನಿದ್ದಾನೆ. ತಮ್ಮ ಸ್ವ೦ತ ಕರುಳಿನ ಕುಡಿ. ಸದಾ ತಮ್ಮ ನೆರಳಲ್ಲೇ ಇರುವವನು. ತಮ್ಮನ್ನೇ ನ೦ಬಿರುವವನು... ಎಂದಿತ್ಯಾದಿಯಾಗಿ ಅವಳ ಮನಸ್ಸಿನಲ್ಲಿ ಮಣಿಕಂಠನ ಮೇಲೆ ಅಸೂಯೆ ಮೂಡುವಂತೆ ಮಾಡುತ್ತಾನೆ... ರಾಣಿಯೂ ಮೊದಲು ಅದನ್ನು ನಿರಾಕರಿಸಿದರೂ ಕೊನೆಯಲ್ಲಿ ಮಂತ್ರಿಗಳ ಸಲಹೆಗೆ ಕಿವಿಗೊಟ್ಟು ಮಣಿಕಂಠನ ಯುವರಾಜ ಪಟ್ಟಾಭಿಷೇಕವನ್ನು ನಿಲ್ಲಿಸಲು ತೀರ್ಮಾನಿಸುತ್ತಾಳೆ...
ಇತ್ತ ರಾಜನು ಇದಾವುದರ ಚಿಂತೆಯಿಲ್ಲದೆ ಪಟ್ತಾಭಿಷೇಕದ ಸಿದ್ದತೆಯ ಸಭೆಯಲ್ಲಿದ್ದಾಗ ಅರಮನೆಯ ಸೇವಕರಿ೦ದ, ಮಹಾರಾಣಿಯವರು ಉದರಶೂಲದಿ೦ದ ನರಳುತ್ತಿರುವ ಸಮಾಚಾರ ಬರುತ್ತದೆ. ರಾಜನು ನೆರೆದವರ ಕ್ಷಮೆಯನ್ನು ಕೋರಿ ತೆರಳುತ್ತಾನೆ.   ಅತೀವ ನೋವಿನಿ೦ದ ಬಳಲುತ್ತಿರುವ೦ತೆ ನಟಿಸುವ ಮಹಾರಾಣಿ, ರಾಜನ ಬಳಿ ಸಾಯುವ ಮಾತನ್ನಾಡುತ್ತಾಳೆ. ರಾಜನು ಇವೆಲ್ಲವನ್ನು ಕ೦ಡು ಬೆಚ್ಚಿಬೀಳುತ್ತಾನೆ ಮತ್ತು ರಾಣಿಯ ಆರೋಗ್ಯ ಸುಧಾರಿಸುವವರೆಗೂ ಪಟ್ಟಾಭಿಷೇಕ ಮಾಡುವುದಿಲ್ಲವೆ೦ದು ಬಿಡುತ್ತಾನೆ….!
ರಾಣಿಯ ಉದರಶೂಲೆಯ ಪರಿಶೀಲನೆಗೆ ರಾಜ ವೈದ್ಯರು ಆಗಮಿಸುತ್ತಾರೆ... ಅವರು ತಕ್ಕಷ್ಟು ಗಿಡಮೂಲಿಕೆಗಳಿಂದ ಉಪಚರಿಸುತ್ತಾರೆ...ಮತ್ತೆ ಅದಾಗ ಮಂತ್ರಿಯು ತಾನೊಬ್ಬ ನಕಲಿ ವೈದ್ಯನನ್ನು ಗೊತ್ತುಮಾಡಿಕೊಂಡು ಬಂದು ರಾಣಿಯ ಉದರಶೂಲೆಯ ಪರೀಕ್ಷೆಗೆ ಮುಂದಾಗುತ್ತಾನೆ... ಅದಾಗ ನಕಲಿ ವೈದ್ಯನು... ಇದಕ್ಕೆ ಉದರ ಶೂಲೆ ಎ೦ದು. ನರಮಾ೦ಸ ಭಕ್ಷಕರಾದ ರಾಕ್ಷಸರಿಗೆ ಬರುವ೦ತಹ ಹೊಟ್ಟೆನೋವು. ಇದಕ್ಕೆ ಔಷಧಿ. ನನ್ನ ಬಳಿ ಇದೆ. ಹಿಮಾಲಯದಿ೦ದ ತ೦ದಿರುವ ಅಶ್ವಿನೀ ಮೂಲಿಕೆ. ಅದನ್ನು ಸೇವಿಸಿದರೆ ಸಾಕು. ಎ೦ಥಾ ಉದರ ಶೂಲೆಯಾದರೂ ಸರಿ, ಕ್ಷಣಮಾತ್ರದಲ್ಲಿ ಗುಣವಾಗುವುದು.
ಮೂಲಿಕೆಯನ್ನು ಅರೆದು, ಹುಲಿಯ ಹಾಲಿನಲ್ಲಿ ಬೆರೆಸಿ ಕುಡಿಸಬೇಕು ಎನ್ನುತ್ತಾನೆ... ಅದರಿಂದ ಮಹಾರಾಜನ ಚಿಂತೆ ಇನ್ನಷ್ಟು ಗಾಢವಾಗುತ್ತದೆ... ಕಾಡಿಗೆ ಹೋಗುವವರು ಯಾರು. ಮರಿ ಹಾಕಿರುವ ಹೆಣ್ಣು ಹುಲಿಯನ್ನು ಹುಡುಕುವವರು ಯಾರು. ಅದನ್ನು ಹಿಡಿದ ಹಾಲು ಕರೆಯುವವರು ಯಾರು...! ಅಯ್ಯೋ ದೇವರೇ... ಈಗ ನಾನು ಏನು ಮಾಡಲೀ... ನಾನೇನು ಮಾಡಲೀ... ಎನ್ನುತ್ತಾ,,, ಅರಮನೆ ಸಭಾ೦ಗಣದಲ್ಲಿ ರಾಜನು ಚಿ೦ತಿತನಾಗಿ ಕುಳಿತು ರೋದಿಸುವ ವೇಳೆ ಮಣಿಕ೦ಠನು ಬರುತ್ತಾನೆ ಮತ್ತು.. ದುಃಖಿಸಬೇಡಿ ಅಪ್ಪಾಜಿ. ಹುಲಿಯ ಹಾಲನ್ನು ನಾನು ತರುತ್ತೇನೆ. ಎನ್ನುತ್ತಾನೆ... ರಾಜನು ತಾನೆಷ್ಟೇ ಬೇಡವೆಂದರೂ ಆಲಿಸದೇ.. ಅಪ್ಪಾಜಿ, ದೈವಸ೦ಕಲ್ಪವಿಲ್ಲದೆ ಒ೦ದು ಹುಲ್ಲು ಗರಿಕೆಯು ಆಡದು. ಯಾವ ಮಹತ್ಕಾರ್ಯಕ್ಕಾಗಿ ಅಮ್ಮನಿಗೆ ನೋವು ಕಾಣಿಸಿಕೊ೦ಡಿದೆಯೋ ಯಾರಿಗೆ ಗೊತ್ತು...! ಮಾತೃ ದೇವರ ಸೇವೆಗೆ ನನಗೆ ಇದೊ೦ದು ಅವಕಾಶ ಸಿಕ್ಕಿದೆ. ದಯವಿಟ್ಟು ನನ್ನನ್ನು ತಡೆಯಬೇಡಿ. ಆಶೀರ್ವಾದ ಮಾಡಿ. ಎಂದು ತನ್ನ ಅಪ್ಪಾಜಿಯೊಡನೆ ಎರಡೂ ಕೈಮುಗಿದು ಮನವಿಯನ್ನು ಮಾಡುತ್ತಾನೆ. ಇದರಿಂದ ಹರ್ಷಗೊಂಡ ಮಹಾರಾಜನು ಮಣಿಕ೦ಠನನ್ನು ಅಪ್ಪಿಕೊಳ್ಳುತ್ತಾನೆ.
ಮಣಿಕಂಠ ಹುಲಿಯ ಹಾಲನ್ನು ತರಲು ಕಾಡಿಗೆ ತೆರಳುತ್ತಾನೆ....
ನಿಗದಿಯಾಗಿದ್ದ ಯುವರಾಜ ಪಟ್ಟಾಭಿಷೇಕ ನಿಂತು ಹೋಗುತ್ತದೆ.....
ಮಂತ್ರಿಯ ತಂತ್ರವು ಫಲಿಸುತ್ತದೆ.....
ಮಹಾವಿಷ್ಣುವಿನ ಲೀಲೆಯಂತೆ ಮಹಿಷಿಗೆ ಮರಣಾ ಕಾಲವು ಸಮೀಪವಾಇರುತ್ತದೆ....!!

No comments:

Post a Comment