Wednesday, February 18, 2015

ಇಡೀ ದೇಶವನ್ನೇ ಆತಂಕಕ್ಕೀಡು ಮಾಡಿದ ಮಹಾಮಾರಿ ಎಚ್1ಎನ್1

ಸರ್ಕಾರಗಳು ಎಚ್ಚರಗೊಳ್ಳುವಷ್ಟರಲ್ಲೇ ದೇಶಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚಿ ನೂರಾರು ಜೀವಗಳನ್ನು ಬಲಿ ತೆಗೆದುಕೊಂಡ ಹೆಚ್1ಎನ್1 ಮಹಾಮಾರಿ ಇಡೀ ದೇಶವನ್ನೇ ಆತಂಕಕ್ಕೀಡು ಮಾಡಿದೆಪ್ರಮುಖವಾಗಿ ದೇಶದ ಗುಜರಾತ್, ರಾಜಸ್ಥಾನ, ತೆಲಂಗಾಣ, ಕರ್ನಾಟಕ ರಾಜ್ಯಗಳಲ್ಲಿ ರೋಗದ ದಾಳಿ ತೀವ್ರವಾಗಿದ್ದು, ಸಾರ್ವಜನಿಕರು ಸಾಂಕ್ರಾಮಿಕ ರೋಗಕ್ಕೆ ಹೆದರಿ ಮೂಗು-ಬಾಯಿಗೆ ಮಾಸ್ಕ್ ಹಾಕಿಕೊಂಡು ಸಂಚರಿಸುತ್ತಿದ್ದಾರೆ ಕಳೆದ 48 ದಿನಗಳಲ್ಲಿ ದೇಶದಲ್ಲಿ ಹಂದಿ ಜ್ವರಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 624! ಸರ್ಕಾರದ ಅಂಕಿ ಅಂಶ ಪ್ರಕಾರ ಫೆ.12ರಿಂದ ಕಳೆದ ಮೂರು ದಿನಗಳಲ್ಲಿ ಎಚ್1ಎನ್1ಗೆ ಬಲಿಯಾದವರ ಸಂಖ್ಯೆ 100ಕ್ಕೂ ಹೆಚ್ಚು. ವರ್ಷದ ಆರಂಭದಿಂದ ಇದುವರೆಗೆ ಅಂದರೆ ಕೇವಲ 48 ದಿನಗಳಲ್ಲಿ ಜ್ವರಕ್ಕೆ ಆಹುತಿಯಾದವರು 624ಕ್ಕೂ ಹೆಚ್ಚು. ಇನ್ನೂ ಸರ್ಕಾರದ ಗಮನಕ್ಕೆ ಬರದ ಎಷ್ಟೋ ಪ್ರಕರಣಗಳಿರಬಹುದು. ಮಧುಮೇಹ,ಬಿಪಿ, ಹೃದಯ ಸಂಬಂಧಿ ಕಾಯಿಲೆಗಳಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಎಚ್1ಎನ್1ಗೆ ಬಲಿಯಾಗುತ್ತಿದ್ದು ಇದು ಸರ್ಕಾರಗಳ ನಿದ್ದೆಗೆಡಿಸಿದೆ.
ಹಿನ್ನೆಲೆಯಲ್ಲಿ ಹಂದಿ ಜ್ವರದ ಸಾಮಾನ್ಯ ಲಕ್ಷಣಗಳು, ಮಹಾಮಾರಿಯಿಂದ ಪಾರಾಗಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು? ಕುರಿತ ಸಂಕ್ಷಿಪ್ತ ವಿವರಣೆ ಇಲ್ಲಿದೆ.....’




ಮಹಾಮಾರಿಯ ಇತಿಹಾಸ
ಹಂದಿಜ್ವರವು ವೈರಾಣುಗಳ0 ತಗಲುವ ಒಂದು ಸೋಂಕು. ಹಂದಿಜ್ವರ ವೈರಾಣು (ಸ್ವೈನ್ ಇನ್ಫ್ಲುಯೆಂಜಾ ವೈರಸ್ - ಎಸ್ಐವಿ) ಹಂದಿಗಳಲ್ಲಿ ವಿಶಿಷ್ಟವಾದ ಇನ್ಫ್ಲುಯೆಂಜಾ ಕುಟುಂಬದ ವೈರಾಣುಗಳ ಯಾವುದೇ ತಳಿ. ೨೦೦೯ರ ವೇಳೆಗೆ, ಪರಿಚಿತವಾಗಿರುವ ಎಸ್ಐವಿ ತಳಿಗಳು, ಇನ್ಫ್ಲುಯೆಂಜಾ ಸಿ ಮತ್ತು ಎಚ್೧ಎನ್೧, ಎಚ್೧ಎನ್೨, ಎಚ್೩ಎನ್೧, ಎಚ್೩ಎನ್೨ ಹಾಗೂ ಎಚ್೨ಎನ್೩ ಎಂದು ಪರಿಚಿತವಾಗಿರುವ ಇನ್ಫ್ಲುಯೆಂಜಾ ಎಯ ಉಪಪ್ರಕಾರಗಳನ್ನು ಒಳಗೊಂಡಿವೆ.
1976ರಲ್ಲಿ ಅಮೆರಿಕದ ಫೋರ್ಟ್ಡಿಕ್್ಸ ಎಂಬಲ್ಲಿ ಎಚ್‌1ಎನ್‌1 ಮಾದರಿಯ ವೈರಾಣು ಜ್ವರ ಮೊದಲ ಬಾರಿಗೆ ಕಾಣಿಸಿಕೊಂಡಿತು. ಇದು ಮತ್ತು 2009ರಲ್ಲಿ ಜಗತ್ತಿನ ವಿವಿಧ ಭಾಗಗಳಲ್ಲಿ ಕಾಣಿಸಿಕೊಂಡ ಎಚ್‌1ಎನ್‌1 ವೈರಾಣು ಎರಡೂ ಒಂದೇ ಅಲ್ಲ­ವಾ­ದರೂ, ಎರಡರಲ್ಲೂ ಸಾಕಷ್ಟು ಸಾಮ್ಯತೆ ಇತ್ತು. 2009 ಏಪ್ರಿಲ್ನಲ್ಲಿ ಮೆಕ್ಸಿಕೊದಲ್ಲಿ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡ ಎಚ್‌1ಎನ್‌1 ಕೆಲವು ಯುವಜನರನ್ನು ಬಲಿ ತೆಗೆದುಕೊಂಡಿತು. ಅಲ್ಲಿಂದ ಅಮೆರಿಕ, ಯುರೋಪ್ ಮೂಲಕ ಜಗತ್ತಿನ ಹಲವು ರಾಷ್ಟ್ರಗಳಿಗೆ ವ್ಯಾಪಕವಾಗಿ ಹರಡಲಾರಂಭಿಸಿತು.
ಮೊದಲು ಇದೊಂದುಸಾಂಕ್ರಾಮಿಕ ರೋಗಎಂದುಘೋಷಿಸಿದ್ದ ವಿಶ್ವಸಂಸ್ಥೆಯು 2009 ಜೂನ್ನಲ್ಲಿ ‘41 ವರ್ಷಗಳ ನಂತರ ವಿಶ್ವವ್ಯಾಪಿಯಾಗಿ ಕಂಡುಬಂದಿರುವ ಜ್ವರಎಂದು ಅಭಿಪ್ರಾಯಪಟ್ಟಿತು. ಆಗ ಜ್ವರದ ನಿಯಂತ್ರಣಕ್ಕೆ ಬಳಸಿದ ಕೆಲ ಲಸಿಕೆಗಳಿಂದ ನಿರೀಕ್ಷಿತ ಪರಿಣಾಮ ಕಂಡುಬರಲಿಲ್ಲ. ಬಳಿಕ ಅಭಿವೃದ್ಧಿಪಡಿಸಿದ ಹೊಸ ಪರಿಣಾಮಕಾರಿ ಲಸಿಕೆಗಳು 2009 ಸೆಪ್ಟೆಂಬರ್ನಿಂದ ಲಭ್ಯವಾಗಲಾರಂಭಿಸಿದವು. ಅಲ್ಲಿಂದೀಚೆಗೆ ಸೋಂಕು ರೋಗದ ಪ್ರಮಾಣ ತಗ್ಗಲಾರಂಭಿಸಿತು.
ಎಚ್‌1ಎನ್‌1 ರೋಗಿಗಳಲ್ಲಿ ಹಂದಿಗಳಲ್ಲಿ ಕಂಡುಬರುವ ಜ್ವರದ ಲಕ್ಷಣ ಕಾಣಿ­ಸಿದ್ದರಿಂದ ಮೊದಲು ಇದನ್ನುಹಂದಿ ಜ್ವರಎಂದೇ ಕರೆಯಲಾಗುತ್ತಿತ್ತು. ಆದರೆ ಇದು ಹಂದಿ ಮಾಂಸ ತಿನ್ನುವುದರಿಂದ ಬರುತ್ತದೆ ಎಂಬ ಅಪಾರ್ಥಕ್ಕೆ ಎಡೆಯಾಗಿ, ಹಲವಾರು ರಾಷ್ಟ್ರಗಳಲ್ಲಿ ಲಕ್ಷಾಂ­ತರ ಹಂದಿಗಳ ಸಾಮೂಹಿಕ ಮಾರಣಹೋಮಕ್ಕೆ ಕಾರಣವಾ­ಯಿತು. ಇದರಿಂದ ಹಂದಿ ವ್ಯಾಪಾರೋದ್ಯಮ ತೀವ್ರ ನಷ್ಟ ಅನುಭವಿಸು­ವಂತಾಯಿತು. ಹೀಗಾಗಿಹಂದಿ ಜ್ವರಎನ್ನುವ ಹೆಸರನ್ನು ಬದಲಿಸಿ, ಈಗ ವಿಶ್ವದೆಲ್ಲೆಡೆ ಇದನ್ನು ಎಚ್‌1ಎನ್‌1 ಎಂದೇ ಕರೆಯಲಾಗುತ್ತಿದೆ.

ರೋಗದ ಪ್ರಕಾರಗಳು
ಹಂದಿಜ್ವರ (ಎಚ್‌1ಎನ್‌1) ವೈರಾಣುಗಳ ಮೂಲಕ ಹರಡುತ್ತದೆ. ಹೀಗಾಗಿ ರೋಗಿಗಳು ಕೆಮ್ಮಿದಾಗ, ಸೀನಿದಾಗ ಹೊರಬೀಳುವ ಕಫದ ಹನಿ­ಗಳ­ಲ್ಲಿನ ವೈರಾಣುಗಳು ಒಬ್ಬರಿಂದ ಒಬ್ಬರಿಗೆ ಬಹು ಬೇಗನೇ ಹರಡುತ್ತವೆ. ಚಿಕಿತ್ಸೆಯ ದೃಷ್ಟಿಯಿಂದ ಬಿ ಮತ್ತು ಸಿ ಎಂಬ ಮೂರು ಹಂತಗಳಲ್ಲಿ ರೋಗವನ್ನು ಪರಿಗಣಿಸಲಾಗುತ್ತದೆ.
  • ಹಂತ: ರೋಗದ ಲಕ್ಷಣಗಳು ಯಾವುದೇ ವೈರಾಣು ಜ್ವರದಂತೆ ಕಾಣಿಸಿಕೊಳ್ಳುತ್ತವೆ. ರೋಗಿ ಸೂಕ್ತ ಚಿಕಿತ್ಸೆಗೆ ಸ್ಪಂದಿಸಿ ಆರಾಮ ಆಗುತ್ತಾನೆ. ಇಲ್ಲಿ ಯಾವುದೇ ವಿಶೇಷ ಪರೀಕ್ಷೆ ಅಥವಾ ವಿಶೇಷ ಚಿಕಿತ್ಸೆಯ ಅವಶ್ಯಕತೆ ಇರುವುದಿಲ್ಲ.
  • ಬಿ ಹಂತ: ಹಂತದಲ್ಲಿ ರೋಗ ಲಕ್ಷಣಗಳು ಉಲ್ಬಣಗೊಳ್ಳುತ್ತವೆ. ವಿಶೇಷವಾಗಿ ಮಕ್ಕಳು, ಗರ್ಭಿಣಿಯರು, ವೃದ್ಧರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ತೊಂದರೆ ಹೆಚ್ಚಾಗುವ ಸಂಭವ ಇರುತ್ತದೆ. ಇವರಿಗೆ ವಿಶೇಷ ಪರೀಕ್ಷೆ, ವಿಶೇಷ ಚಿಕಿತ್ಸೆಯ  ಅವಶ್ಯಕತೆ ಇರುತ್ತದೆ.
  • ಸಿ ಹಂತ: ಮೇಲ್ಕಾಣಿಸಿದ ಲಕ್ಷಣಗಳು ಉಲ್ಬಣಗೊಂಡು ಎದೆನೋವು, ಉಸಿರಾಟದ ತೊಂದರೆ, ರಕ್ತಮಿಶ್ರಿತ ಕಫ ಕಂಡುಬರುತ್ತದೆ. ಅಂಥವರನ್ನು ಆಸ್ಪತ್ರೆಗೆ ದಾಖಲಿಸಿ, ವಿಶೇಷ ಪರೀಕ್ಷೆ, ವಿಶೇಷ ಚಿಕಿತ್ಸೆಯನ್ನು ಕೊಡಿಸಬೇಕಾಗುತ್ತದೆ.

ಪ್ರಮುಖ ಲಕ್ಷಣಗಳು
ಹಂದಿಜ್ವರದ ಮುಖ್ಯ ಲಕ್ಷಣಗಳು ಹೀಗಿವೆಭಾರೀ ಜ್ವರ, ಉಬ್ಬಸ, ಕಫ ಕಟ್ಟುವುದು ಮತ್ತು ಮೈಕೈ ನೋವು ಆದರೆ ಇವೆಲ್ಲ ಪರಿಹರಿಸಬಹುದಾದ ರೋಗ ಲಕ್ಷಣಗಳು

ಮುಂಜಾಗೃತೆ ಕ್ರಮ
ಕೈಗಳನ್ನು ಸ್ವಚ್ಚವಾಗಿ ತೊಳೆದುಕೊಳ್ಳುವುದು ಒಳ್ಳೆಯದು. ಅನಗತ್ಯವಾಗಿ ಕೈ ಕುಲುಕುವುದು ಬೇಡ, ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಥವಾ ಟಿಷ್ಯೂ ಪೇಪರ್‌ ಬಳಸಿ., ಮುಖ, ಮೂಗನ್ನು ಪದೇ ಪದೇ ಮುಟ್ಟಬಾರದು. ಮುಟ್ಟಿದಾಗಲೆಲ್ಲ ಕೈ ತೊಳೆದುಕೊಳ್ಳಬೇಕು. ರೋಗ ಲಕ್ಷಣಗಳುಳ್ಳ ವ್ಯಕ್ತಿಗೆ ಅತ್ಯಂತ ನಿಕಟವಾಗಿ ಇರದಂತೆ ನೋಡಿಕೊಳ್ಳಿ, ರೋಗಿಗಳಿಗೆ ಆರೈಕೆ ಮಾಡಬೇಕಾಗಿ ಬಂದರೆ ವೈದ್ಯರ ಸಲಹೆ ಮೇರೆಗೆ ಮುನ್ನೆಚ್ಚರಿಕೆ ವಹಿಸಿ. ಈ ರೋಗಾಣುಗಳು ಮಾನವ ದೇಹದಿಂದ ಹೊರಬಂದ ಸುಮಾರು 48 ಗಂಟೆ ಜೀವಿಸಬಲ್ಲವಾದ್ದರಿಂದ ಮನೆ, ಕಚೇರಿ ವಾತಾವರಣದಲ್ಲಿ ಶುಚಿತ್ವ ಕಾಯ್ದುಕೊಳ್ಳಿ. . ರೋಗ ಲಕ್ಷಣ ಇರುವವರು ಜನ-ದಟ್ಟಣೆ ಸ್ಥಳಗಳಿಗೆ ತೆರಳಬಾರದು. ರೋಗದ ಲಕ್ಷಣ ಕಾಣಿಸಿಕೊಳ್ಳುತ್ತಿದ್ದಂತೆಯೇ ಸಮೀಪದ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು.  ವಿಶೇಷವಾಗಿ ಮಕ್ಕಳು, ಗರ್ಭಿಣಿಯರು, ವೃದ್ಧರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರು, ಮಧುಮೇಹ, ಮೂತ್ರಪಿಂಡ ತೊಂದರೆ, ಯಕೃತ್ಕಾಯಿಲೆ, ಕ್ಯಾನ್ಸರ್, ಎಚ್ಐವಿ ಪೀಡಿತರು, ಏಡ್್ಸ ರೋಗಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಚ್‌1ಎನ್‌1 ವೈರಾಣುವಿಗೆ ಒಡ್ಡಿಕೊಳ್ಳದಿರುವುದೇ ಉತ್ತಮ ಮುಂಜಾಗ್ರತಾ ಕ್ರಮ. 

No comments:

Post a Comment