ದೇವರಾಯನ ದುರ್ಗ (Devarayana Durga)
ಮನಮೋಹಕ
ಪರಿಸರ, ಕಾನನ, ಹಸಿರಿನ ಸೊಬಗಿನ
ಸಿರಿಯ ನಡುವೆ ಇರುವ ತಾಣ
ತುಮಕೂರು ಜಿಲ್ಲೆಯ ದೇವರಾಯನ ದುರ್ಗ. ರಾಜ್ಯದ
ಪ್ರಮುಖ ಪ್ರವಾಸೀ ತಾಣವಾಗಿರುವ ಇದು ದೇವಾಲಯಗಳು, ಜಯತೆಗೆ ಗಿರಿಸೌಂದರ್ಯವನ್ನೂ ಹೊಂದಿದೆ.
ಇಲ್ಲಿನ ನರಸಿಂಹ ದೇವರ ಜಾತ್ರೆ ಸಹ ಬಹು
ಪ್ರಸಿದ್ದವಾದದ್ದು.
ದೇವರಾಯನ ದುರ್ಗ |
ದೇವಲೋಕದಲ್ಲಿ ದೇವದತ್ತ
ಹಾಗೂ ಧನಂಜಯ ಎನ್ನುವ ಗಂಧರ್ವ ಸಹೋದರರು ಭೃಗು ಮಹರ್ಷಿಗಳ ಶಾಪಕ್ಕೆ ತುತ್ತಾಗಿಒಬ್ಬನು ಆನೆಯ ರೂಪದಲ್ಲಿ,
ಇನ್ನೊಬ್ಬನು ಗಿರಿಯ ರೂಪದಲ್ಲಿ ಜನ್ಮಿಸಿದರು. ಅವರು ಈಗಿನ ದೇವರಾಯನ ದುರ್ಗದಲ್ಲಿ ಬಹುಕಾಲ ತಪವನ್ನಾಚರಿಸಿದ
ಕಾರಣ ಈ ಕ್ಷೇತ್ರ "ಕರಿಗಿರಿ" ಎಂದು ಪ್ರಸಿದ್ದವಾಗಿತ್ತು.
ಇಲ್ಲಿ ಬ್ರಹ್ಮದೇವರು ಸ್ವತಃ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯನ್ನು ಪ್ರತಿಷ್ಟಾಪಿಸಿ
ಪೂಜಿಸಿದ್ದರು. ಅದೇ ನರಸಿಂಹ ಸ್ವಾಮಿ
ದೇವಾಲಯವು ಇಂದಿಗೂ ಸಾವಿರಾರು ಭಕ್ತಾದಿಗಳ ಆಕರ್ಷಣೆಯ ಕೇಂದ್ರವೆನಿಸಿದೆ.
No comments:
Post a Comment