Thursday, April 09, 2015

ಸತ್ಯಂ ಹಗರಣ: ಏನಿದರ ಸತ್ಯಾಸತ್ಯತೆ?

ಬಹುಕೋಟಿ ಸತ್ಯಂ ಕಂಪ್ಯೂಟರ್ ಸರ್ವೀಸಸ್ ಲಿಮಿಟೆಡ್(ಎಸ್ ಸಿಎಸ್ಎಲ್ಹಗರಣದ ಪ್ರಮುಖ ಅಪರಾಧಿ ಸತ್ಯಂ ಕಂಪ್ಯೂಟರ್ ಸಂಸ್ಥಾಪಕ ರಾಮಲಿಂಗರಾಜು ಸೇರಿ ಹತ್ತು ಮಂದಿ ತಪ್ಪಿತಸ್ಥರಿಗೆ ಸಿಬಿಐ ವಿಶೇಷ ಕೋರ್ಟ್ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.ದೇಶದ ಅತಿದೊಡ್ಡ ಕಾರ್ಪೊರೇಟ್ ವಂಚನೆ ಪ್ರಕರಣ ಎನಿಸಿರುವ ಸತ್ಯಂ ಕಂಪ್ಯೂಟರ್ಸ್ ಹಗರಣದ ತೀರ್ಪಿನಿಂದ ಕಾರ್ಪೋರೇಟ್ ವಲಯದ ಮೋಸಗಾರರಿಗೆ ನಡುಕ ಪ್ರಾರಂಭವಾಗಿದೆ.2009,ರಲ್ಲಿ ಸದೇಶವನ್ನು ಬೆಚ್ಚಿಬೀಳುವಂತೆ ಮಾಡಿದ್ದ ಬಹುಕೋಟಿ ಹಗರಣದ ಕುರಿತ ಸಂಕ್ಷಿಪ್ತ ನೋಟ ಇಲ್ಲಿದೆ.



ಏನಿದು ಹಗರಣ್?

ಸತ್ಯಂ ಕಂಪ್ಯೂಟರ್ಸ್ ಸಂಸ್ಥೆ ಸಂಸ್ಥಾಪಕ ರಾಮಲಿಂಗರಾಜು 2009, ಜನವರಿ 7ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅದೇ ವೇಳೆ ತಾವೇಎಸಗಿದ ತಪ್ಪುಗಳಿಂದ ಪರಿತಾಪಗೊಂಡು ಒಂದು ಪತ್ರವನ್ನು ಬರೆದಿದ್ದರು. ಅದರಲ್ಲಿ ದೇಶದ ಉದ್ಯಮ ವಲಯವು ಬೆಚ್ಚಿ ಬೀಳುವಂತಹಾ ಸತ್ಯ ಸಂಗತಿಗಳಿದ್ದವು.ವೆಚ್ಚಗಳನ್ನು ಮರೆಮಾಚಿ ಕಂಪನಿ ಸಾಕಷ್ಟು ಲಾಭದಾಯಕವಾಗಿದೆ ಎಂದು ತೋರಿಸಲು ಕಂಪನಿಯ ಅಕೌಂಟ್'ನಲ್ಲೇ ಗೋಲ್ಮಾಲ್ ಮಾಡಿಬಿಟ್ಟಿದ್ದೇವೆ ಷೇರುಪೇಟೆಯಲ್ಲಿ ಕಂಪನಿಯ ಷೇರುಗಳು ಕುಸಿಯದರಲೆಂದು ರೀತಿ ಮಾಡಲಾಗಿತ್ತು. ಏರುತ್ತಿರುವ ವೆಚ್ಚವನ್ನ ಸರಿದೂಗಿಸಲು ತಮ್ಮಿಂದ ಆಗದು; ಇಂಥ ಸ್ಥಿತಿಯಲ್ಲಿ ಮುಂದುವರಿಯಲಾರೆ. ತಮ್ಮಿಂದಾದ ಅವ್ಯವಹಾರಗಳಿಗೆ ದೇಶದ ಕಾನೂನು ಏನು ಶಿಕ್ಷೆ ಕೊಡುತ್ತದೋ, ಅದನ್ನು ಅನುಭವಿಸಲು ಸಿದ್ಧ ಎಂದು ಬಿ.ರಾಮಲಿಂಗ ರಾಜು ತಿಳಿಸಿದ್ದರು.
ಕಾರ್ಪೊರೇಟ್ ಕಂಪನಿಗಳು ತಮ್ಮ ಷೇರುದಾರರಿಗೆ ಹೇಗೆ ವಂಚನೆ ಮಾಡುತ್ತವೆ ಎಂಬ ವಿಷಯ ಇದರಿಂದ ಬಹಿರಂಗವಾಗಿತ್ತು. ಹಗರಣ ಬಹಿರಂಗವಾಗುತ್ತಿದ್ದಂತೆಯೇ ಸತ್ಯಂ ಕಂಪ್ಯೂಟರ್ಸ್' ಷೇರುಗಳ ಬೆಲೆ 544 ರೂಪಾಯಿಯಿಂದ  11.50 ರೂಗೆ ಕುಸಿದುಹೋಗಿತ್ತು.. ಕೇಂದ್ರ ಸರ್ಕಾರದ ಕಂಪನಿ ಕಾನೂನು ಮಂಡಳಿಯು ಸತ್ಯಂ ಕಂಪ್ಯೂಟರ್ಸ್' ಆಡಳಿತ ಮಂಡಳಿಯನ್ನೇ ಅನೂರ್ಜಿತಗೊಳಿಸಿ 10 ನಾಮಾಂಕಿತ ನಿರ್ದೇಶಕರನ್ನ ನೇಮಿಸಿತ್ತು.

ರಾಮಲಿಂಗರಾಜು ಯಾರು?

ಸತ್ಯಂ ಕಂಪ್ಯೂಟರ್ಸ್ ಸಂಸ್ಥೆ ಸಂಸ್ಥಾಪಕ ರಾಮಲಿಂಗರಾಜು
ಸತ್ಯಂ ಬಹುಕೋಟಿ ಹಗರಣದ ಆರೋಪಿಯಾದ ರಾಮಲಿಂಗರಾಜು ಹಾರ್ವರ್ಡ್ನಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಪವೆದು ಬಂದವರು.ಇಪ್ಪತ್ತನೇ ಶತಮಾನದ ಅಂತ್ಯದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತಲೆದೋರಿದ್ದ 'ವೈ2ಕೆ' ಬಿಕ್ಕಟ್ಟಿಗೆ ಸಾಫ್ಟ್ವೇರ್ ಮೂಲಕ ಪರಿಹಾರ ಒದಗಿಸಿ ಸುದ್ದಿಯಾಗಿದ್ದರು.
ರಾಮಲಿಂಗರಾಜು ಶ್ರೀ ಸತ್ಯಂ ಹೆಸರಿನಲ್ಲಿ ಸಣ್ಣ ನೂಲಿನ ಮತ್ತು ನೇಯ್ಗೆ ಗಿರಣಿ ಮೂಲಕ ಉದ್ಯಮ ಜೀವನ ಆರಂಭಿಸಿದ್ದರು..1987ರಲ್ಲಿ ಸ್ಥಾಪಿಸಿದ ಸತ್ಯಂ ಅನ್ನು ದೇಶದ ನಾಲ್ಕನೇ ಅತಿದೊಡ್ಡ ಸಾಫ್ಟ್ವೇರ್ ಸೇವಾ ರಫ್ತು ಕಂಪನಿಯಾಗಿ ರೂಪಿಸಿದ್ದರು.
ವೈ2ಕೆ ವೈರಸ್ ವಿಶ್ವ ಮಟ್ಟದಲ್ಲಿ ಕಂಪ್ಯೂಟರ್ ವ್ಯವಸ್ಥೆಯನ್ನೇ ನಾಶ ಮಾಡುತ್ತದೆ ಎಂಬ ವ್ಯಾಪಕ ಆತಂಕ ಮತ್ತು ಭೀತಿ ಸೃಷ್ಟಿಯಾಗಿದ್ದ ಸಮಯದಲ್ಲಿ ಕಂಪ್ಯೂಟರ್ ಸಿಸ್ಟಂ 1900ನೇ ಇಸವಿಯಿಂದ 2000ನೇ ಇಸವಿಯ ವರ್ಷವನ್ನು ಗುರುತಿಸುತ್ತಿರಲಿಲ್ಲ.ಇದಕ್ಕೆ ಸಾಫ್ಟ್ವೇರ್ ಒದಗಿಸಿಕೊಟ್ಟದ್ದು ರಾಜು ಅವರ ಆಗ್ಗಳಿಕೆ.

ಹಗರಣ ಅಂಕಿ ಸಂಕಿಗಳಲ್ಲಿ

ಸತ್ಯಂ ಬಹುಕೋಟಿ ಹಗರಣದ ಒಟ್ಟೂ  ಮೊತ್ತ - 7000 ಕೋಟಿ ರೂ.
ಹಗರಣಾದಿಂದ ಹೂಡಿಕೆದಾರರು ಅನುಭವಿಸಿದ ನಷ್ಟ  - 14000 ಕೋಟಿ ರೂ.
ರಾಮಲಿಂಗರಾಜು ಮತ್ತು ಅವರ ಕುಟುಂಬದವರು ಗಳಿಸಿದ ಲಾಭ 1900 ಕೋಟಿ ರೂ

ಸತ್ಯಂ ಹಗರಣ ನಡೆದು ಬಂದ ದಾರಿ

ಸತ್ಯಂ ಕಂಪ್ಯೂಟರ್ಸ್ ಹಗರಣದ ಪ್ರಮುಖ ಘಟನಾವಳಿಗಳು ಇಲ್ಲಿದೆ-

  • ಜನವರಿ 7, 2009 - ಸಂಸ್ಥೆಯ ಆಡಳಿತ ಮಂದಳಿಗೆ ಪತ್ರ ಬರೆದು ಬಹುಕೋಟಿ ಅವ್ವ ವಹಾರದ ಕುರಿತು ರಾಮಲಿಂಗರಾಜು ತಪೊಪ್ಪಿಗೆ.
  • ಜನವರಿ 9, 2009 - ಸತ್ಯಂ ಸ್ಥಾಪಕ ರಾಮಲಿಂಗರಾಜು ಬಂಧನ
  • ಫೆಬ್ರವರಿ 17 2009 - ಹಗರಣದ ಸಂಪೂರ್ಣ ತನಿಖೆ ಜವಾಬ್ದಾರಿಯನ್ನು  ಸಿಬಿಐ ಗೆ ವರ್ಗಾವಣೆ ಮಾದಲಾಯಿತು.
  • ಏಪ್ರಿಲ್ 4, 2009 - ಸಿಬಿಐ ನಿಂದ ಮೊದಲ ಚಾರ್ಜ್ ಷೀಟ್ ಸಲ್ಲಿಕೆ
  • ಏಪ್ರಿಲ್ 13, 2009 - ಟೆಕ್ ಮಂಹೀಂದ್ರಾದಿಂದ ಸತ್ಯಂ ಸಂಸ್ಥೆ ಖರೀದಿ.
  • ಅಕ್ಟೋಬರ್ 25, 2012 - ನ್ಯಾಯಾಲಯವು ರಾಮಲಿಂಗರಾಜು ತಪ್ಪಿತಸ್ಥನೆಂದು ತೀರ್ಪು ನೀಡಿತು.
  • ಜನವರಿ 9, 2014 - ರಾಮಲಿಂಗರಾಜು ಹಾಗೂ ಕುಟುಂಬದವರು ತಪ್ಪಿತಸ್ಥರೆಂದು ಆರ್ಥಿಕ ಅವ್ಯವಹಾರಗಳ ನ್ಯಾಯಾಲಯದಿಂದ ತೀರ್ಪು.
  • ಏಪ್ರಿಲ್ 9, 2015 - ಸಿಬಿಐ ತನಿಖೆ ಪೂರ್ಣಗೊಂಡ ಹಿನ್ನೆಲೆ, ರಾಮಲಿಂಗರಾಜು ಸೇರಿ 10 ಮಂದಿಗೆ 7 ವರ್ಷಗಳ ಜೈಲು ಶಿಕ್ಷೆ ಪ್ರಕಟ

1 comment: