Sunday, April 12, 2015

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 49

ಬಾದಾಮಿ (Badami)


ಬಾದಾಮಿ ಬನಶಂಕರಿ


ಬಾದಾಮಿ ಎಂದರೆ ನೆನಪಾಗುವುದು ಬಾದಾಮಿ ಬನಶಂಕರಿ ಚಾಲುಕ್ಯರ ಕಾಲದ ಮತ್ತು ಶಿಲ್ಪಕಲಾ ವೈಭವ. ಪುರಾಣ ಕಾಲದಲ್ಲಿ "ವಾತಾಪಿ'' ಎಂದು ಕರೆಯಲ್ಪಡುತ್ತಿದ್ದ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಬನಶಂಕರಿ ದೇವಾಲಯವನ್ನು 7ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರು ನಿರ್ಮಿಸಿದರು. ದೇವಾಲಯ 7ನೇ ಶತಮಾನದಲ್ಲೇ ನಿರ್ಮಿತವಾಗಿದ್ದರೂ ಅದನ್ನು 17ನೇ ಶತಮಾನದಲ್ಲಿ ಮರಾಠರಲ್ಲಿ ಪ್ರಮುಖನಾಗಿದ್ದ ಪರಸುರಾಮ್ ಅಗಲೆ ಎಂಬವನು ದುರಸ್ತಿಗೊಳಿಸಿದನು ಪುರಾತನ ದೇವಾಲಯವು ದ್ರಾವಿಡ ಶೈಲಿಯ ವಾಸ್ತು ಶೈಲಿಯನ್ನು ಪ್ರದರ್ಶಿಸುತ್ತದೆ ತಿಲಕಾರಣ್ಯದಲ್ಲಿ ನೆಲೆಸಿಹ ದೇವಾಲಯವು ಬನ ಮತ್ತು ಶಂಕರಿ ಎಂಬ ಎರಡು ಪದಗಳ ಸಂಯೋಜನೆಯಿಂದ ಹೆಸರನ್ನು ಪಡೆದುಕೊಂಡಿದೆ. ಬನ ಎಂದರೆ ಕಾಡು ಮತ್ತು ಶಂಕರಿ ಎಂದರೆ ಶಿವ ಪ್ರಿಯೆ ಅಥವಾ ಪಾರ್ವತಿಯನ್ನು ಬಣ್ಣಿಸುವ ರೀತಿ. ದೇಶದ ಶಕ್ತಿಪೀಠಗಳಲ್ಲಿ  ಒಂದು ಎನಿಸಿರುವ ಇಲ್ಲಿ ಪುಷ್ಯ ಮಾಸ ಕಾಲಿಡುತ್ತಿದ್ದಂತೆ ಜಾತ್ರೆಯ ಸಡಗರ. ಪ್ರಾರಂಭವಾಗುತ್ತದೆ. ಒಂದು ತಿಂಗಳು ನಡೆಯುವ ಜಾತ್ರೆಗೆ ರಾಜ್ಯದ ಅತಿ ದೊಡ್ಡ ಜಾತ್ರೆ ಎನ್ನುವ ಹಿರಿಮೆ ಇದೆ.

***


ಬಾದಾಮಿ ಬನಶಂಕರಿ ದೇವಾಲಯ
ಸ್ಥಳದಲ್ಲಿ ರಾಮಾಯಣದಲ್ಲಿ ಬರುವ ವಾತಾಪಿ ಎನ್ನುವ ಹೆಸರಿನ ರಕ್ಕಸನು ನೆಲೆಸಿದ್ದನು. ಪೂರ್ವಕಾಲದಲ್ಲಿ ನೂರಾರು ವರ್ಷಗಳ ವರೆಗೆ ಮಳೆಯಾಗದೇ ಘೋರ ದುರ್ಭೀಕ್ಷ ಉಂಟಾಗಲು ಭೂಮಿಯಲ್ಲಿ ಎಲ್ಲ ಕರ್ಮಗಳು ಲೋಪವಾದಾಗ ಜೀವ ರಾಶಿಗಳು ತತ್ತರಿಸಿ ಹೋದವು. ಆಗ ಎಲ್ಲ ದೇವತೆಗಳು ಶಿವನನ್ನು ಪ್ರಾರ್ಥಿಸಿದರು. ಶಿವ ಬ್ರಹ್ಮಾದಿ ದೇವತೆಗಳೆಲ್ಲ ಸೇರಿ ತ್ರಿಗುಣಾತ್ಮಿಕಾ ಸ್ವರೂಪಳಾದ ಬನಶಂಕರಿ ದೇವಿಯನ್ನು ಪ್ರಾರ್ಥಿಸಿದರು. ಪ್ರಾರ್ಥನೆಗೆ ಒಲಿದ ಶ್ರೀದೇವಿ ತನ್ನ ಶರೀರದಿಂದ ಉತ್ಪನ್ನವಾದ ಶಾಕಾಹಾರದಿಂದ ಸಕಲ ಜಗತ್ತನ್ನು ಕಾಪಾಡಿ ದಳು. ಅವಳ ಕೃಪೆಯಿಂದ ಬರ ನೀಗಿತು, ದಾಹ ತೀರಿತು, ಹಸಿವು ಇಂಗಿತು, ಜಲ ಸಂಪತ್ತಿನಿಂದ ಭೂದೇವಿ ಹಸಿರು ವರ್ಣ ತಾಳಿದಳು. ಎಲ್ಲ ಬನಗಳು ಹಸಿರು ವರ್ಣ ದಿಂದ ನಲಿದವು ಶ್ರೀ ದೇವಿ ಶಾಕಾಂಭರಿ ಎಂದು ಪ್ರಸಿದ್ಧಳಾದಳು.

No comments:

Post a Comment