Tuesday, April 14, 2015

ಅಂತರ್ಜಾಲ ತಾಟಸ್ತ್ಯ ಅಭಿಯಾನದ ಒಳ ಹೊರಗು

ಎಲ್ಲರಿಗೂ ಸಮಾನ ಇಂಟರ್ ನೆಟ್ ಬಳಕೆಯ ಚರ್ಚೆಯ ನಡುವೆ ಅಂತರ್ಜಾಲ ಮಾರಾಟ ಸಂಸ್ಥೆ ಫ್ಲಿಪ್ಕಾರ್ಟ್, ಟೆಲಿಕಾಮ್ ಸೇವೆಗಳ ಏರ್ಟೆಲ್ ಸಂಸ್ಥೆಯ ಜೊತೆ ಮಾತುಕತೆ ನಡೆಸಿದ್ದ ಏರ್ಟೆಲ್-ಜೀರೋ ಯೋಜನೆಯಿಂದ ಇಂದ ಹೊರನಡೆದಿದೆ. "ಏರ್ಟೆಲ್ ಸಂಸ್ಥೆಯ ಏರ್ಟೆಲ್-ಜೀರೋ ವೇದಿಕೆಯಿಂದ ನಾನು ಹೊರನಡೆಯುತ್ತಿದ್ದೇವೆ. ನಾವು ಭಾರತದಲ್ಲಿ ಇಂಟರ್ ನೆಟ್ ತಾಟಸ್ಥ್ಯದ ಕೂಗಿಗೆ ಬೆಂಬಲ ನೀಡಲಿದ್ದೇವೆ" ಎಂದು ಸಂಸ್ಥೆಯ ವಕ್ತಾರ ತಿಳಿಸಿದ್ದಾರೆ. "ಇಂಟರ್ ನೆಟ್ ತಾಟಸ್ಥ್ಯದ ಸಮುದಾಯದ ಉತ್ಸಾಹದ ಜೊತೆ ನಾವು ಕೈಜೋಡಿಸಲಿದ್ದೇವೆ. ಯಾವುದೇ ಸೇವೆ ಕೊಡುವ, ಸೇವೆ ನಿಡುವ ಸಂಸ್ಥೆ ಎಷ್ಟೇ ದೊಡದಾಗಿದ್ದರೂ ತಾರತಮ್ಯ ಇರಬಾರದು ಎಂಬುದು ನಮ್ಮ ನಂಬಿಕೆ" ಎನ್ನುವುದು ಫ್ಲಿಪ್ಕಾರ್ಟ್,ನುಡಿ. ಹಾಗಾದರೆ ಇಂಟರ್ ನೆಟ್ ತಾಟಸ್ಥ್ಯ ಎಂದರೇನು? ಇದರ ಮಹತ್ವವಏನು? ಇಲ್ಲಿದೆ ಮಾಹಿತಿ...




ಇಂಟರ್ ನೆಟ್ ತಾಟಸ್ಥ್ಯ ಎಂದರೇನು?
ಇದೊಂದು ಆಂದೋಲನವಾಗಿದ್ದು ಆಂದೋಲನ ಅಂತರ್ಜಾಲ ಮುಕ್ತ ಬಳಕೆಗೆ ಬೆಂಬಲವಾಗಿರುತ್ತದೆ. ಇದು ಟೆಲಿಕಾಂ ಕಂಪನಿಗಳಿಗೆ ಗ್ರಾಹಕನ ಅಂತರ್ಜಾಲ ಬಳಕೆಯನ್ನು ನಿಯಂತ್ರಿಸುವುದನ್ನು ವಿರೋಧಿ ಸುತ್ತದೆಅಂತರ್ಜಾಲದ ಮುಕ್ತ ಬಳಕೆ ಇದರ ಮೂಲ ಉದ್ದೇಶವಾಗಿರುತ್ತದೆ. ಅದರಂತೆ ಎಲ್ಲಾ ಜಾಲತಾಣಗಳೂ, ಮಾಹೀತಿ ವಿನಿಮಯಗಳೂ ಒಂದೇ ವೇಗದಲ್ಲಿ ಗ್ರಾಹಕರಿಗೆ ದೊರೆಯಬೇಕು. ಸೇವಾ ಪೂರೈಕೆದಾರರಿಂದ ಡೇಟಾ ಪ್ಯಾಕ್ ಪಡೆದ ಬಳಕೆದಾರರು ತಾವು ನಿರ್ಧರಿಸಿದ ಜಾಲತಾಣ ಹಾಗು ಆಪ್ನ್ನು ಮುಕ್ತವಾಗಿ ಬಳಸುತಾಗಬೇಕೆನ್ನುವುದೇ ಇದರ ಮುಖ್ಯ ಗುರಿ.

ಅಂತರ್ಜಾಲದಲ್ಲಿ ಅಸಮಾನತೆ
ವಿಶ್ವಾದ್ಯಂತ ಮುಕ್ತ ಮಾಹಿತಿ ಹಂಚುವ ಅಂತರ್ಜಾಲವನ್ನು ಸುಮಾರು 292 ಕೋಟಿ ಮಂದಿ ಬಳಸುತ್ತಿದ್ದಾರೆ ಎಂದು ಅಂದಾಜಿಸಲಾಗಿದ್ದು ಭಾರತವೂ ಸೇರಿದಂತೆ ವಿಶ್ವಾದ್ಯಂತ ಅಂತರ್ಜಾಲ ಬಳಕೆದಾರರಲ್ಲಿ ಕ್ಷಿಪ್ರ ಏರಿಕೆ ಆಗುತ್ತಿದೆ. ಆದರೆ ಸೇವಾ ಕಂಪೆನಿಗಳು ತಮಗೆ ಹಣ ನೀಡುವ ಕಂಪೆನಿಗಳ ಜಾಲತಾಣ ಉಚಿತವಾಗಿ ನೋಡಲು ಅವಕಾಶ ನೀಡುತ್ತದೆ ಅಥವಾ ವೇಗವಾಗಿ ಓಪನ್ ಆಗುವಂತೆ ಮಾಡುತ್ತದೆ. ಯಾರು ಸೇವಾ ಕಂಪೆನಿಗಳಿಗೆ ಹಣ ನೀಡುವುದಿಲ್ಲವೋ ಕಂಪೆನಿಗಳ ಜಾಲತಾಣ  ಬ್ಲಾಕ್ ಮಾಡುತ್ತಾರೆ ಅಥವಾ ತಡವಾಗಿ ಓಪನ್ ಆಗುವಂತೆ ವ್ಯವಸ್ಥೆ ರೂಪಿಸುತ್ತದೆ. ಹೀಗೆ ಜಾಲತಾಣಗಳು ಹಾಗೂ ಗ್ರಾಹಕರಿಂದ ಹಣ ಪೀಕುವ ಲಾಬಿಯು ನಮಗೇ ಗೊತ್ತಿಲ್ಲದೆ ನಡೆಯುವ ಪ್ರಕ್ರಿಯೆ
ಗೂಗಲ್‌, ಯಾಹೂ ಇತ್ಯಾದಿ ದೈತ್ಯ ಕಂಪನಿಗಳು ಟೆಲಿಕಾಂ ಸಂಸ್ಥೆಗಳಿಗೆ ಅಪಾರ ಪ್ರಮಾಣದ ಹಣ ನೀಡಿ ತಮ್ಮ ತಾಣಗಳು ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳುತ್ತವೆ. ಆದರೆ ಉತ್ತಮ ಉದ್ದೇಶದೊಡನೆ ಪ್ರಾರಂಭವಾದ ಚಿಕ್ಕ ಸಂಸ್ಥೆಗಳಿಗೆ ಟೆಲಿಕಾಂ ಸಂಸ್ಥೆಗಳು ಕೇಳಿದಷ್ಟು ಹಣ ಸಂದಾಯಿಸಲು ಸಾಧ್ಯವಾಗುವುದಿಲ್ಲ. ಇದರಿಂದ  ಅಂತರ್ಜಾಲದಲ್ಲಿನ ಸಹಜ ಪೈಪೋಟಿಗೆ ಅಡ್ಡಿಯಾಗುತ್ತದೆ. ಇದೇ ಕಾರಣದಿಂದ ಜಗತ್ತಿನ ನಾನಾ ದೇಶಗಳು ಅಂತರ್ಕಜಾಲ ತಾಟಸ್ತ್ಯ ನೀತಿಯನ್ನು ಅನುಸರಿಸುತ್ತಿವೆ.

ವಿದೇಶಗಳ ಲ್ಲಿ ಅಂತರ್ಕಜಾಲ ತಾಟಸ್ತ್ಯ
ಸೇವಾಪೂರೈಕೆದಾರರ ಲಾಬಿಯ ವಿರುದ್ಧ ಮೊದಲಿಗೆ ಅಮೆರಿಕದಲ್ಲಿ ಬೃಹತ್ ಮಟ್ಟದ ಅಭಿಯಾನವೇ ನಡೆಯಿತು. ಜನರ ಅಭಿಪ್ರಾಯಕ್ಕೆ ಮಣಿದ ಅಧ್ಯಕ್ಷ ಒಬಾಮಾ ಸರಕಾರ ನೆಟ್ ಸಮಾನತೆಗಾಗಿ ಒಂದು ವಿಧೇಯಕವನ್ನು ಮಂಡಿಸಿ ಸೆನೆಟ್ನಲ್ಲಿ ಅಂಗೀಕರಿಸಿತು

ಭಾರತದಲ್ಲಿ ಅಂತರ್ಕಜಾಲ ತಾಟಸ್ತ್ಯ
ಅಂತರ್ಜಾಲ ಸಮಾನತೆ ಕಾನೂನು ಅಮೆರಿಕದಲ್ಲಿ ಜಾರಿಯಾದ ಬೆನ್ನಿಗೇ ಭಾರತದಲ್ಲೂ ಕುರಿತ ಕೂಗು ಪ್ರಬಲಗೊಂಡಿದೆಇದರ ಕುರಿತಂತೆ ಕಾಲಾನುಕ್ರಮಣಿಕೆ ಇಂತಿದೆ-
2006: ನೆಟ್ ಸಮಾನತೆಯ ಕುರಿತು ಅಭಿಪ್ರಾಯಗಳನ್ನು ನೀಡುವಂತೆ ಸೇವಾ ಪೂರೈಕೆದಾರರಿಗೆ ಟ್ರಾಯ್ ಸೂಚನೆ.

2012 ಫೆಬ್ರವರಿ: ಯೂಟ್ಯೂಬ್ನಂತಹ ಕಂಪನಿಗಳು ತಮ್ಮ ಆದಾಯದ ಭಾಗವನ್ನು ಸೇವಾ ಪೂರೈಕೆದಾರರೊಂದಿಗೆ ಹಂಚಿಕೊಳ್ಳಬೇಕು ಎಂದು ಏರ್ಟೆಲ್ ಮುಖ್ಯಸ್ಥ ಸುನಿಲ್ ಭಾರತಿ ಮಿತ್ತಲ್ ಅವರು ಸಲಹೆ ನೀಡಿದ್ದರು. ಗೂಗಲ್, ಫೇಸ್ಬುಕ್ಅನ್ನು ಗ್ರಾಹಕರು ಉಚಿತವಾಗಿ ಬಳಸಬೇಕಾದರೆ ಕಂಪನಿಗಳು ಆದಾಯದ ಭಾಗವನ್ನು ನೀಡಬೇಕು ಎಂದು ಅದೇ ವರ್ಷ ಜುಲೈನಲ್ಲಿ ಕಂಪನಿಯು ಹೇಳಿತ್ತು

2014 ಫೆಬ್ರವರಿ: ವಾಟ್ಸ್ಆ್ಯಪ್, ಸ್ಕೈಪ್ ಮತ್ತು ಲೈನ್ನಂತಹಾ ಅಪ್ಲಿಕೇಷನ್ಗಳು ಸೇವಾ ಪೂರೈಕೆದಾರರಿಗೆ ಹಣ ನೀಡಬೇಕು ಎಂದು ಏರ್ಟೆಲ್, ಟ್ರಾಯ್ಗೆ ಪ್ರಸ್ತಾವನೆ ಸಲ್ಲಿಸಿತ್ತು

27 ಮಾರ್ಚ್ 2015: ಭಾರತದಲ್ಲಿ ನೆಟ್ ಸಮಾನತೆಯ ಕಾನೂನುಗಳನ್ನು ಜಾರಿಗೆ ತರುವುದರಿಂದ ಆಗುವ ಪ್ರಯೋಜನವೇನು ಎಂಬ ಕುರಿತು ಟ್ರಾಯ್ 117 ಪುಟಗಳ ಸಮಾಲೋಚನಾ ವರದಿಯನ್ನು ಬಿಡುಗಡೆ ಮಾಡಿತ್ತು

2015 ಏಪ್ರಿಲ್ 6: ಏರ್ಟೆಲ್ ಕಂಪನಿಯು 'ಏರ್ಟೆಲ್ ಜೀರೊ' ಎಂಬ ಯೋಜನೆಯೊಂದನ್ನು ಜಾರಿಗೆ ತಂದಿತು. ಬಳಕೆದಾರರು ನಿರ್ದಿಷ್ಟ ಅಪ್ಲಿಕೇಷನ್ಗಳನ್ನಷ್ಟೇ ಉಚಿತವಾಗಿ ಬಳಸುವುದು ಹಾಗೂ ಗ್ರಾಹಕರು ಉಚಿತವಾಗಿ ಬಳಸುವ ಆ್ಯಪ್ ಕಂಪನಿಗಳು ಏರ್ಟೆಲ್ಗೆ ಶುಲ್ಕ ಕಟ್ಟಬೇಕೆಂಬುದು ಇದರ ಉದ್ದೇಶ. ಟೋಲ್ ಫ್ರೀ ಸಂಖ್ಯೆಗಳಿಗೆ ಜನರು ಉಚಿತವಾಗಿ ಕರೆ ಮಾಡುವುದರಿಂದ ಕಂಪನಿಗೆ ನಷ್ಟವಾಗುತ್ತದೆ. ಇದನ್ನು ತುಂಬಿಕೊಳ್ಳಲು ನೀತಿ ಅನುಸರಿಸುತ್ತಿದ್ದೇವೆ ಎಂದು ಏರ್ಟೆಲ್ ಸಬೂಬು ನೀಡಿತ್ತು.

2015 ಏಪ್ರಿಲ್ 11: ಭಾರತದಲ್ಲಿ ನೆಟ್ ಸಮಾನತೆ ಕಾನೂನು ಜಾರಿಗೆ ತರಬೇಕೆಂದು ಪ್ರಾರಂಭವಾಗಿರುವ ಅಭಿಯಾನದ ಭಾಗವಾಗಿ ಎಐಬಿ ಎಂಬ ಕಾಮಿಡಿ ಗುಂಪು ಕುರಿತ ವಿಡಿಯೊವನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿತು. ಇದನ್ನು ವೀಕ್ಷಿಸಿದ ಲಕ್ಷಾಂತರ ಜನರು ಅಭಿಯಾನದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು. ಯೂಟ್ಯೂಬ್ನಲ್ಲಿ ವಿಡಿಯೊ ಲಿಂಕ್ಅನ್ನು ಫೇಸ್ಬುಕ್ ಕಂಪನಿಯು ಡಿಲಿಟ್ ಮಾಡಿತು.

ನೀವೇನು ಮಾಡಬೇಕು?
ಅಂತರ್ಜಾಲ ತಟಸ್ಥನೀತಿ ಬಗ್ಗೆ ಟ್ರಾಯ್ಗ್ರಾಹಕರ ಪ್ರತಿಕ್ರಿಯೆ ಕೇಳಿದ್ದು, ಅದನ್ನು ಸಲ್ಲಿಸಲು .27 ಕೊನೆಯ ದಿನವಾಗಿದೆ. ಅಂತರ್ಕಜಾಲ ತಾಟಸ್ತ್ಯಕ್ಕಾಗಿ ನೀವು ಟ್ರಾಯ್ಗೆ ಮನವಿ ಮಾಡಬಹುದು ಅಥವಾ ಸೇವ್ ಇಂಟರ್ನೆಟ್ ಮೂಲಕ ಟ್ರಾಯ್ಗೆ ಸುಲಭವಾಗಿ ಮನವಿ ಸಲ್ಲಿಸಬಹುದು. ಈಗಾಗಲೇ 1 ಲಕ್ಷಕ್ಕೂ ಅಧಿಕ ಜನ ಮನವಿ ಸಲ್ಲಿಸಿದ್ದಾರೆ. ಗ್ರಾಹಕ ಸ್ನೇಹಿ ಮುಕ್ತ ಮಾಹಿತಿ ವಿಮಯಕ್ಕೆ ಪೂರಕವಾಗುವಂತೆ ಅಂತರ್ಜಾಲ ತಟಸ್ಥನೀತಿಯನ್ನು ನೀವು ಬೆಂಬಲಿಸುವುದಾದರೆ ನೀವು ಕೆಳಗಿನ ಜಾಲತಾಣಗಳಲ್ಲಿ ಮನವಿ/ಹಕ್ಕೊತ್ತಾಯ ಮಾದಬಹುದು.
ಮನವಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿhttp://www.savetheinternet.in/
ಟ್ರಾಯ್ಗೆ ಹಕ್ಕೊತ್ತಾಯ ಮಾಡಲು ಇಲ್ಲಿ ಕ್ಲಿಕ್ ಮಾಡಿ  http://www.netneutrality.in/ 


No comments:

Post a Comment