ಪ್ರಿಯ ಸ್ನೇಹಿತರೆ, ನಾನು ಕಳೆದ ಒಂದು ಒಂದೂವರೆ ವರ್ಷದಿಂದ
ಪ್ರಾರಂಭಿಸಿದ "ನಮ್ಮಲ್ಲಿನ ಸ್ಥಳ ಪುರಾಣಗಳು' (Myths)'' ಲೇಖನ ಸರಣಿಯು ಇದೀಗ 50ನೇ ಕಂತು
ಮುಟ್ಟಿದೆ. ಉತ್ತರ, ದಕ್ಷಿಣ, ಪೂರ್ವ, ಪಶ್ಮಿಮವೆನ್ನದೆ ಭರತದ ಎಲ್ಲೆಡೆಯ ಪ್ರಾಚೀನ ತೀರ್ಥಕ್ಷೇತ್ರಗಳ
ಸ್ಥಳ ಮಹಿಮೆ/ಪುರಾಣಗಳನ್ನು ಎಲ್ಲರಿಗೂ ತಿಳಿಯಪಡಿಸುವ ಉದ್ದೇಶದಿಂದ ಪ್ರಾರಂಭಿಸಿದ ಈ ಲೇಖನ ಸರಣಿಯನ್ನು
ತಾವೆಲ್ಲರೂ ಮೆಚ್ಚಿದ್ದೀರೆಂದು ಭಾವಿಸುತ್ತೇನೆ.
ಹಿಂದೂ ತೀರ್ಥ ಕ್ಷೇತ್ರಗಳ ಮಹಿಮೆ ಅಪಾರವಾಗಿದ್ದು
ಇನ್ನೂ ನೂರಾರು ತೀರ್ಥ ಕ್ಷೇತ್ರಗಳುನಮ್ಮಲ್ಲಿದೆ. ಅದರಲ್ಲಿ ಒಂದೊಂದರ ಸ್ಥಳ ಮಹಿಮೆಯೂ ಒಂದೊಂದು ಬಗೆಯದ್ದಾಗಿದೆ.
ಸರಣಿಯುದ್ದಕ್ಕೂ ಅಂತಹಾ ವಿಶೇಷ ಸ್ಥಳಗಳ ಐತಿಹ್ಯಗಳನ್ನು ತಿಳಿಸುವುದು ನನ್ನ ಉದ್ದೇಶವಾಗಿದ್ದು ನಿಮ್ಮ
ಪ್ರೋತ್ಸಾಹವು ಹೀಗೆಯೇ ಮುಂದುವರಿಯಲೆಂದು ಆಶಿಸುತ್ತೇನೆ.
ಇಂತು - ರಾಘವೇಂದ್ರ ಅಡಿಗ ಎಚ್ಚೆನ್.
***
ಕುಂಭಕೋಣ
(Kumbhakonam)
Lord Sri Kumbheshwar, Kumbhakonam |
Chakrapani_Temple,_Kumbakonam |
ತಮಿಳು
ನಾಡಿನಲ್ಲಿರುವ ಪ್ರಾಚೀನ ದೇವಾಲಯಗಳ ನಗರಿ
ಕುಂಭಕೋಣ. ಪ್ರಸಿದ್ದ ಬೃಹದೀಶ್ವರ ದೇವಾಲಯವಿರುವ ತಂಜಾವೂರು ಪಟ್ಟಣದಿಂದ 24 ಮೈಲಿಗಳ ದೂರದಲ್ಲಿದೆ. ಇಲ್ಲಿ
ಬ್ರಹ್ಮ, ವಿಷ್ಣು ಹಾಗೂ ಶಿವ
ಹೀಗೆ ತ್ರಿಮೂರ್ತಿಗಳ ದೇವಾಲಯಗಳಿರುವುದು ವಿಶೇಷ. ಪ್ರಾಚೀನ ಕಾಲದಲ್ಲಿ
ಚೋಳರ ರಾಜಧಾನಿಯಾಗಿದ್ದ ಕುಂಭಕೋಣ ದಲ್ಲಿ ಕುಂಭೇಶ್ವರ,
ನಾಗೇಶ್ವರ, ಸಾರಂಗಪಾಣಿಯೇ ಮೊದಲಾದ ದೇವಾಲಯಗಳಿದೆ. ನಾಗೇಶ್ವರ
ದೇವಾಲಯದಲ್ಲಿ ಸೂರ್ಯ ಭಗವಾನನ ಮೂರ್ತಿಯೂ
ಇದ್ದು ವರ್ಷದ ಕೆಲವು ನಿರ್ದಿಷ್ಠ
ದಿನಗಳಂದು ಶಿವಲಿಂಗದ ಮೇಲೆ ನೇರವಾಗಿ ಸೂರ್ಯರಶ್ಮಿಯು
ಬೀಳುವುದನ್ನು ಕಾಣಬಹುದು.
ಇಲ್ಲಿ
ಮಹಾಮಾಘ ಸರೋವರವಿದ್ದು ವರ್ಷಗಳಿಗೊಮ್ಮೆ ಗುರು-ಚಂದ್ರರು ಮಖಾ
ನಕ್ಷತ್ರದಲ್ಲಿ ಸೇರಿದ ಸಮಯದಲ್ಲಿ ಮಹಾ
ಮಾಘಮೇಳವು ನಡೆಯುತ್ತದೆ. ಈ ಉತ್ಸವದ ಸಮಯದಲ್ಲಿ
ಲಕ್ಷ ಸಂಖ್ಯೆಯ ಭಕ್ತಾದಿಗಳೂ, ಸಾಧು
ಸಂತರೂ ಇಲ್ಲಿ ನೆರೆದು ಸ್ನಾನ,
ಪೂಜಾದಿಗಳನ್ನು ನೆರವೇರಿಸುತ್ತಾರೆ.
***
ಬ್ರಹ್ಮ
ದೇವರಿಗೆ ತಾನು ಸೃಷ್ಟಿಸಿದ ಸೃಷ್ಟಿಯು
ಪ್ರಳಯವಾಗಿ ನಾಶವಾಗುವ ವೇಳೆಯಲ್ಲಿ ಮೂಲ ಪದಾರ್ಥಗಳೆಲ್ಲವೂ ನಾಶವಾದರೆ,
ಮತ್ತೆ ಸೃಷ್ಟಿಸುವುದು ಹೇಹೆ ಎನ್ನುವ ಪ್ರಶ್ನೆಯುಂಟಾಯಿತು.
Gopuras in Kumbakonam |
ಸಮಸ್ಯೆಗೆ
ಪರಿಹಾರವಾಗಿ ಪರಮೇಶ್ವರನ ಬಳಿ ಸಾರಿದ ಬ್ರಹ್ಮದೇವನು
ತನ್ನ ಸಂದೇಹವನ್ನು ಪರಿಹರಿಸುವಂತೆ ಕೇಳಿದನು. ಅದಕ್ಕೆ ಪರಮೇಶ್ವರನು ಒಂದಷ್ಟು
ಮಣ್ಣನ್ನು ಅಮೃತ ಹಾಗೂ ನೀರಿನಲ್ಲಿ
ಕಲಿಸಿ ಒಂದು ಕುಂಭವನ್ನು ತಯಾರು
ಮಾಡಿದನು. ಆ ಕುಂಭವನ್ನು ಮೇರು
ಪರ್ವತದ ಮೇಲೆ ತೂಗುಬಿಟ್ಟು ಪೂಜಿಸಿದನು.
Mhamagham Sarovar, Kumbhakonam |
ಕಾಲವು
ಸರಿಯುತ್ತಲೇ ಪ್ರಳಯ ಮಹಾಪೂರವು ಪ್ರಾರಂಬವಾಯಿತು.
ಆ ಪ್ರಳಯದ ಮಹಾಪೂರದಲ್ಲಿ
ಮೇರು ಪರ್ವತದಲ್ಲಿ ತೂಗು ಬಿಟ್ಟ ಆ
ಕುಂಭವೂ ಸೆಳೆಯಲ್ಪಟಿತು. ಪ್ರಳಯವು ಅಂತ್ಯವಾದಾಗ ಅದು
ಒಂದೆಡೆ ನಿಂತಿತು. ಅದಾಗ ಪರಮೇಶ್ವರನು ಒಂದು
ಬಾಣವನ್ನು ಹೊಡೆದನು. ಅದರಿಂದ ಕುಂಭವು ಬಿರುಕು
ಬಿಟ್ಟಿತು. ಮತ್ತು ಅದರಿಂದ ಅಮೃತವು
ಸುರಿಯಿತು.
ಹಾಗೆ
ಅಮೃತವು ಸುರಿದ ಸ್ಥಳವೇ ಕುಂಭಕೋಣ
ಎಂದು ಇಂದು ಪ್ರಸಿದ್ದವಾಗಿದೆ. ಕುಂಭಕೋಣದಲ್ಲಿರುವ
ಮಹಾಮಾಘ ಸರೋವರ ದಲ್ಲಿಯೇ ಬ್ರಹ್ಮದೇವರ
ಕುಂಭದಿಂದ ಅಮೃತ ಸುರಿದದ್ದು ಎನ್ನಲಾಗಿದ್ದು
ಇಲ್ಲಿ ಪವಿತ್ರ ಗಂಗೆಯೂ ತಾನು
1200 ಮೈಲು ಹಗುಪ್ತ ಮಾರ್ಗದಿಂದ ಹರಿದು
ಬಂದು ಸೇರುವಳೆಂದೂ ಪ್ರತೀತಿ
ಇದೆ.
No comments:
Post a Comment