ಮಲ್ಲೇಶ್ವರ
(Malleshwaram)
Sri Kadu Malleshwara Swamy |
ಬೆಂಗಳೂರಿನ
ಮಲ್ಲೇಶ್ವರ ಬಡಾವಣೆಯ 15ನೇ ಅಡ್ಡರಸ್ತೆಯಲ್ಲಿರುವ ಮಲ್ಲಿಕಾರ್ಜುನ
ದೇವಸ್ಥಾನ ಕಾಡು ಮಲ್ಲೇಶ್ವರ ಎಂದೇ
ಪ್ರಸಿದ್ಧವಾಗಿದ್ದು ಇದರ ಕಾರಣದಿಂದಲೇ ಈ
ಸ್ಥಳಕ್ಕೆ ಮಲ್ಲೇಶ್ವರ ಎನ್ನುವ ಹೆಸರಾಗಿದೆ. ಇಲ್ಲಿರುವ
ಶಿವಲಿಂಗವು ಸ್ವಯಂಭೂ ಲಿಂಗವಾಗಿದ್ದು ಜತೆಯಲ್ಲಿ
ಗಣಪತಿ, ಕಾಶಿ ವಿಶ್ವನಾಥ, ಮಹಾ
ವಿಷ್ಣು, ಸೂರ್ಯನಾರಾಯಣ, ಆಂಜನೇಯ, ಕಾಲಭೈರವ,
ಅರುಣಾಚಲೇಶ್ವರ,
ಪಾರ್ವತಿ, ದಕ್ಷಿಣಾಮೂರ್ತಿ, ನವಗ್ರಹ, ಸುಬ್ರಹ್ಮಣ್ಯೇಶ್ವರ, ದುರ್ಗಾ
ದೇವತೆಯ ಮೂರ್ತಿಗಳೂ ಇವೆ.
ಬೆಂಗಳೂರಿನ
ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಮಲ್ಲೇಶ್ವರದಲ್ಲಿರುವ ಈ ದೇವಾಲಯದಲ್ಲಿ ದಿನವಿಡೀ
ದೇವರ ದರ್ಶನಕ್ಕೆ ಅವಕಾಶವಿದೆ. ಮಹಾ ಶಿವರಾತ್ರಿ ಹಬ್ಬದಂದು
ಸಾವಿರಾರು ಜನರು ಮಲ್ಲೇಶ್ವರ ಸ್ವಾಮಿ
ದರ್ಶನಕ್ಕೆ ಬರುತ್ತಾರೆ.
***
ಪುರಾಣ
ಕಾಲದಲ್ಲಿ ಗೌತಮ ಋಷಿಗೆ ಶಿವ
ಇಲ್ಲಿ ಪ್ರತ್ಯಕ್ಷನಾಗಿ ದರ್ಶನ ನೀಡಿದ ವಿಶೇಷ ಸ್ಥಳ
ಇದು
Sri Kadu Malleshwara Swamy temple, Malleshwaram, Bengaluru |
ಹಿಂದೆ
ವೀಳ್ಯದೆಲೆ ವ್ಯಾಪಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಮಲ್ಲಪ್ಪ ಶೆಟ್ಟಿ
ಎಂಬ ವರ್ತಕರು ಒಂದು ದಿನ
ತಮ್ಮ ಊರಿಗೆ ಹಿಂದಿರುಗಲಾಗದೆ ಈಗಿನ
ಮಲ್ಲೇಶ್ವರ ದೇವಸ್ಥಾನ ಇರುವ ಸ್ಥಳದಲ್ಲಿ ತಂಗಿದ್ದರು.
ಅಲ್ಲಿ ಎರಡು ಕಲ್ಲುಗಳನ್ನು ಹೂಡಿ
ಅನ್ನ ಮಾಡುತ್ತಿದ್ದರು. ಆಗ ಅನ್ನ ರಕ್ತದ
ಬಣ್ಣಕ್ಕೆ ತಿರುಗಿತು. ಅದನ್ನು ಕಂಡು ಹೆದರಿದ
ಮಲ್ಲಪ್ಪ ಶೆಟ್ಟರು ಪ್ರಜ್ಞೆ ತಪ್ಪಿ
ಬಿದ್ದರು. ಒಲೆಗೆ ಬಳಸಿದ್ದ ಕಲ್ಲುಗಳಲ್ಲಿ
ಒಂದು ಕಲ್ಲು ಶಿವ ಲಿಂಗದ
ಆಕಾರ ಪಡೆದುಕೊಂಡಿತ್ತು. ತಮ್ಮ ತಪ್ಪಿನ ಅರಿವಾದ
ನಂತರ ಪರಿಹಾರವಾಗಿ ಶೆಟ್ಟರು ಅಲ್ಲಿಯೇ ಪರಶಿವನ
ದೇವಸ್ಥಾನ ನಿರ್ಮಿಸಿದರು ಹಿಂದೆ ಕಾಡಾಗಿದ್ದ ಈ
ಸ್ಥಳದಲ್ಲಿ ನೆಲೆಸಿದ ಮಲ್ಲಿಕಾರ್ಜುನ ಸ್ವಾಮಿಯನ್ನು
ಭಕ್ತ ಜನರು ಕಾಡು ಮಲ್ಲೇಶ್ವರ
ಎಂದು ಕರೆಯುತ್ತಿದ್ದರು. ಇಂದು ಕಾಡು ನಾಶಾವಾಗಿ
ನಗರ ಬೆಳೆದಿದ್ದರೂ ಸಹ ದೇವಾಲಯದ ಹೆಸರು
ಮಾತ್ರ ಬದಲಾಗಿಲ್ಲ.
No comments:
Post a Comment